Connect with us
Loading...
Loading...

ಪ್ರಚಲಿತ

ಹಿಂದವಿ ಸ್ವರಾಜ್ಯದ ಕನಸುಗಾರ ಯೋಗಿ ಆದಿತ್ಯನಾಥರ 20 ವರ್ಷದ ಟ್ರ್ಯಾಕ್ ರೆಕಾರ್ಡ್ ಬಗ್ಗೆ ನಿಮಗೆ ಗೊತ್ತಾ?

Published

on

 • 1.7K
 •  
 •  
 •  
 •  
 •  
 •  
 •  
  1.7K
  Shares

ಅದೊಂದು ಕಾಲಘಟ್ಟದಲ್ಲಿ ಆ ಪ್ರದೇಶ ತುಂಬಾ ಶೋಚನೀಯ ಸ್ಥಿತಿಯಲ್ಲಿತ್ತು. ಹಗರಣಗಳು ಪಟ್ಟಿ ಮಾಡಲು ಕುಳಿತರೆ ಮುಗಿಯದಷ್ಟು, ರಕ್ಷಕರು ಭಕ್ಷಕರಂತೆ ವರ್ತಿಸುವ ಕಾಲವದು, ಹಾಡು ಹಗಲೇ ಸ್ತ್ರೀಯರ ಮಾನ ಭಂಗ ಕಾಲವದು, ದಿನ ನಿತ್ಯ ರೈತನ ಸಾವಿನ ರೋಧನ ಕೇಳುವ ಕಾಲವದು, ಹಸಿವಿನಿಂದ ಬಳಲಿ ಸಾಯುತ್ತಿದ್ದ ಬಡವನ ಸ್ಥತಿಯ ಬಗ್ಗೆ ಯಾರೂ ಕೇಳದ ಕಾಲವದು.‌ ಆಗಲೇ ಅಲ್ಲೊಬ್ಬ ಯೋಗಿ ಎದ್ದು ಬಂದು ನಿಂತ.

ಆತ ಸಹೃದಯಿ ಸಂತ. ಅವರು ಬೇರಾರು ಅಲ್ಲ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು. ಹೌದು ನಾನು ಹೇಳುತ್ತಿರುವುದು ಉತ್ತರ ಪ್ರದೇಶದ 20 ವರ್ಷಗಳ ಹಿಂದಿನ ಪರಿಸ್ಥಿತಿಯ ಬಗ್ಗೆ.

ರಕ್ಷಕರು ಭಕ್ಷಕರಂತೆ ವರ್ತಿಸುವಾಗ ಯೋಗಿಯೊಬ್ಬ ಬಂದು ನಿಂತು ರಕ್ಷಕರಿಗೆ ಪೆಟ್ಟು ಕೊಟ್ಟ. ಹಗರಣಗಳ ಅಲೆಗಳಲ್ಲಿ ತೇಲುತ್ತಿದ್ದವರೆಗೆ ಚಾಟಿ ಬೀಸಲು ಶುರು ಮಾಡಿದ ಯೋಗಿ.

ಎಲ್ಲಿ ಮಹಿಳೆ ಪೂಜಿಸಲ್ಪಡುತ್ತಾಳೊ ಅಲ್ಲಿ ದೇವತೆಗಳೇ ನೆಲೆಸಿರುತ್ತಾರೆ ಎನ್ನುವ ಧ್ಯೇಯವನ್ನಿಟ್ಟುಕೊಂಡ ಯೋಗಿ ಮಹಿಳೆಯರ ರಕ್ಷಣೆಗೆ ನಿಂತ. ಹಸಿದವರ ಹಸಿವು ನೀಗಿಸಿದ.

20 ವರ್ಷಗಳ ಹಿಂದೆ ಉತ್ತರ ಪ್ರದೇಶದ ಕಾಲವೇ ಬೇರೆ ಇತ್ತು. ಆದರೆ ಯೋಗಿ 20 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ರಾಜಕೀಯದಲ್ಲಿ ಧುಮುಕಿದರೋ ಆಗ ಬದಲಾಯಿತು ಉತ್ತರಪ್ರದೇಶದ ನಕಾಶೆ.

ಉತ್ತರ ಪ್ರದೇಶದ ಜನ ಕಂಗಾಲಾಗಿದ್ದರು. ಅವರಿಗೆ ಒಬ್ಬ ಸಹೃದಯಿ, ರಾಜಕೀಯ ಬದ್ಧತೆ ಇರುವ ಮನಷ್ಯನ ಅವಶ್ಯಕತೆ ಇತ್ತು. ಹೀಗಾಗಿ ಸಹೃದಯಿ ಸಂತನನ್ನು ರಾಜಕೀಯಕ್ಕೆ ತಂದು ಗೆಲ್ಲಿಸಿಬಿಟ್ಟರು.

ಉತ್ತರ ಪ್ರದೇಶದ ಜನ ಅತೀ ಹೆಚ್ಚು ಸಂಭ್ರಮಿಸಿದ್ದು, ಯೋಗಿ ಆದಿತ್ಯಾನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದು ಘೋಷಣೆ ಆದಾಗ. ಹೌದು ಸಹೃದಯಿ ಸಂತನ ಆಗಮನಕ್ಕಾಗಿ ಇಡೀ ಉತ್ತರ ಪ್ರದೇಶ ಹಪಹಪಿಸಿತ್ತು.

ಕರ್ನಾಟಕದಲ್ಲಿ ಒಬ್ಬ ರಾಜಕೀಯ ವ್ಯಕ್ತಿ ಗೆದ್ದಾಗ ನಾವಾವ್ಯಾವತ್ತು ಈ ಮಟ್ಟದ ಮನಸಾಪೂರ್ವಕ ಸಂಭ್ರಮಾಚರಣೆ ಮಾಡಿದ್ದನ್ನು ನೋಡಲೇ ಇಲ್ಲ. ಬಹುಶಃ ನೋಡೋದು ಇಲ್ಲ ಅನಿಸುತ್ತೆ.

ಅಂತಹ ಸಹೃದಯಿ ಸಂತ ಕರ್ನಾಟಕಕ್ಕೆ ಕನಸು ಮಾತ್ರ ಎಂಬಂತಾಗಿದೆ. ಯಾಕಂದ್ರೆ ಕರ್ನಾಟಕದ ಯಾವುದೇ ರಾಜಕೀಯ ಪಕ್ಷವನ್ನಾದರೂ ಉದಾಹರಣೆ ತೆಗೆದುಕೊಳ್ಳಿ, ಯಾವ ಪಕ್ಷದವರು ನಿಸ್ವಾರ್ಥ ಸೇವೆ ಮಾಡುತ್ತಿಲ್ಲ.

ಕರ್ನಾಟಕದ ರಾಜಕೀಯ ಪಕ್ಷಗಳು ಬರೀ ಓಲೈಕೆ ರಾಜಕಾರಣ ಮಾಡುತ್ತಲೆ ಬಂದಿವೆ. ಒಂದು ಕೋಮಿನ ಕಡೆ ಒಂದು ಪಕ್ಷ, ಇನ್ನೊಂದು ಕೋಮಿನ ಕಡೆ ಇನ್ನೊಂದು ಪಕ್ಷ ಇದರಲ್ಲೇ ತಮ್ಮ ಬೇಳೆ ಬೇಯಿಸಿಕೊಂಡು ಓಟು ಗಿಟ್ಟಿಸಿಕೊಳ್ಳುವುದು.

ಇದೇ ಕರ್ನಾಟಕದ ಹೊಲಸು ರಾಜಕಾರಣ. ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡ್ತಾರೆ. ಅದಕ್ಕಾಗಿಯೇ ಸಹೃದಯಿ ಸಂತರಂತವರು ಕರ್ನಾಟಕಕ್ಕೆ ಸಿಗೋದು ಕನಸಿನ ಮಾತು.

ಸಹೃದಯಿ ಸಂತ ಯೋಗಿ ಅಧಿತ್ಯಾನಾಥ್ ನ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ಮಾಹಿತಿಗಳು.

* ಸಹೃದಯಿ ಸಂತ ಯೋಗಿ ಆದಿತ್ಯಾನಾಥರು ಪ್ರಚಾರ ಪ್ರಿಯರಲ್ಲ . ಹೇಳಿ ಕೇಳಿ ಅವರೊಬ್ಬ ಸಂತ. ಅವರಿಗೆ ಪ್ರಚಾರದ ಹುಚ್ಚಿಲ್ಲ. ಸಹೃದಯಿ ಹಿಂದುತ್ವವಾದಿ ಸಹಜವಾಗಿಯೇ ದೇಶವನ್ನು ಪ್ರೀತಿಸುತ್ತಾರೆ.

ಅವರು ರಾಜಕೀಯ ಮಾಡುತ್ತಿರೋದರಲ್ಲಿ ಅವರ ಸ್ವಾರ್ಥವೇ ಇಲ್ಲ ಯಾಕಂದ್ರೆ ಅವರೊಬ್ಬ ಸಂತ. ಕಳೆದ 20 ವರ್ಷಗಳಿಂದ ಲೋಕ ಸಭೆಯಲ್ಲಿ ಅವರ ಹಾಜರಾತಿ ಎಷ್ಟಿದೆ ಗೊತ್ತಾ? ಉಳಿದೆಲ್ಲ ಲೋಕ ಸಭೆಯ ಸದಸ್ಯರ ಹಾಜರಾತಿ ಸರಾಸರಿಗಿಂತ ಹೆಚ್ಚು ಹಾಜರಾತಿ ಯೋಗಿ ಆದಿತ್ಯಾನಾಥರದಿದೆ.

* ಸಹೃದಯಿ ಸಂತ ಯೋಗಿ ಆದಿತ್ಯಾನಾಥರ ದೂರದೃಷ್ಟಿಯ ಬಗ್ಗೆ ಹೇಳುವುದಾದರೆ, ಲೋಕಸಭೆಯ ದಾಖಲೆಗಳನ್ನವಲೋಕಿಸಿದರೆ ಯೋಗಿಯವರು ಸರಕಾರಕ್ಕೆ ನೀಡಿದಂತಹ ಸಲಹೆ, ಪ್ರಶ್ನೆಗಳು ಎಂತಹವರಿಗೂ ಅವರ ದೂರದೃಷ್ಟಿಯನ್ನು ಪರಿಚಯ ಮಾಡಿಸುತ್ತದೆ!

* ಸಹೃದಯಿ ಸಂತ ಯೋಗಿ ಆದಿತ್ಯಾನಾಥರು ತಮ್ಮ 26ನೇ ವಯಸ್ಸಿನಲ್ಲೇ ಸಂಸದರಾಗಿ ಆಯ್ಕೆಯಾದವರು. ಸತತ 5 ಬಾರಿ ಗೆಲುವು ಸಾಧಿಸಿದ್ದಾರೆ.

* ಸಹೃದಯಿ ಸಂತ ಯೋಗಿ ಆದಿತ್ಯಾನಾಥರದು ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರ. ಗೋರಖ್ ಪುರದ ಲೋಕ ಸಭಾದ 1998, 1999, 2004, 2009 ಹಾಗೂ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸತತ 5 ಬಾರಿ.

* ಇಲ್ಲಿಯವರೆಗೂ ಲೋಕ ಸಭೆಯಲ್ಲಿ ಜಪಾನೀಸ್ ಇನ್ಸೆಫಿಲಿಟಿಸ್ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಸಹೃದಯಿ ಸಂತ ಯೋಗಿ ಆದಿತ್ಯಾನಾಥರು ಜಪಾನೀಸ್ ಇನ್ಸೆಫಿಲಿಟಿಸ್ ಬಗೆಗೆ ಲೋಕಸಭಾದಲ್ಲಿ ಪ್ರಶ್ನಿಸಿದ್ದರು.

* ಯಾವುದೇ ರಾಜಕೀಯ ಹಿನ್ನಲೆಯಿಲ್ಲದೆ ಸತತವಾಗಿ 5 ಬಾರಿ ಗೆದ್ದ ಸಹೃದಯಿ ಸಂತ 12ನೇ ಲೋಕಸಭಾದ ಅತಿ ಕಿರಿಯ ಸಂಸದ ಎನಿಸಿಕೊಂಡವರು.

* 50 ಕ್ಕೂ ಹೆಚ್ಚು ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯ ಸಹೃದಯಿ ಯೋಗಿ ಆದಿತ್ಯಾನಾಥರು.

* ಯೋಗಿ ಆದಿತ್ಯಾನಾಥರು ಕೋಮುವಾದಿ ಅಂತ ಜರಿಯುವರಿಗೆ ಒಂದು ವಿಷಯ ಹೇಳಲು ಬಯುಸತ್ತೇನೆ. ಅಲ್ಲೆಲ್ಲೋ ಕೂತು ಯೋಗಿ ಆದಿತ್ಯಾನಾಥರನ್ನು ಕೋಮುವಾದಿ ಅಂತ ಹೇಳೋದಲ್ಲ. ಬದಲಿಗೆ ಅವರ ರಾಜ್ಯಕ್ಕೆ ಹೋಗಿ ನೋಡಿ. ಅಲ್ಲಿಯ ಮುಸಲ್ಮಾನರು ಯೋಗಿಜಿಯನ್ನು ತುಂಬಾ ಪೂಜನೀಯ ಭಾವನರಯಿಂದ ನೋಡುತ್ತಾರೆ.

• ಪೂರ್ವ ಉತ್ತರ ಪ್ರದೇಶದಲ್ಲಿ ಯೋಗಿಯ ಸಾರಥ್ಯದ 10 ಕ್ಕೂ ಹೆಚ್ಚು ಕಾಲೇಜುಗಳು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿವೆ. ಕೋಮುವಾದಿಯಾಗಿದ್ದರೆ ಆ ಶಾಲೆಗಳಲ್ಲಿ ಬೇರೆ ಧರ್ಮದ ಮಕ್ಕಳಿಗೆ ಅವಖಾಶವೇ ಇರುತ್ತಿರಲಿಲ್ಲ.‌ ಸುಖಾ ಸುಮ್ಮನೆ ವಿರೋಧಿಸೋಕೆ ಹೋಗಿ ಅಂಡು ಸುಟ್ಕೊಳ್ಬೇಡಿ.

ಇಂತಹ ಸುದ್ದಿಗಳನ್ನು ಮಾಧ್ಯಮದವರು ಹೇಳುವುದೇ ಇಲ್ಲ ಅನ್ನೋದೆ ವಿಪರ್ಯಾಸ.

ರಾಜಕೀಯ ಅಂದ್ರೆ ಹಾಗೆ ಹೀಗೆ ಹೊಲಸು, ಕೊಳಕು, ಕೆಸರು ಅಂತ ಬೈಯೋರು ಇದ್ದಾರೆ. ಕಾರಣವಿಷ್ಟೆ ನೋಡಿದ್ದು ಹೊಲಸು ರಾಜಕೀಯವನ್ನೇ. ಆದರೆ ಈಗ ಮೊದಲಿನ ಹಾಗಿಲ್ಲ. ಕೇಂದ್ರದಲ್ಲಿ ನರೇಂದ್ರ, ಉತ್ತರ ಪ್ರದೇಶದಲ್ಲಿ ಯೋಗೆಂದ್ರ. ಅದೇ ರಾಜಕೀಯ ಎಂಬ ಕೆಸರಿನಲ್ಲಿ ಕಮಲದಂತೆ ಅರಳಿದ್ದಾರೆ.

ಅತ್ತ ಅಲ್ಲಿ ನರೇಂದ್ರ ದೇಶದ ಚುಕ್ಕಾಣಿಯನ್ನು ಹಿಡಿದು ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದರೆ, ಇತ್ತ ಯೋಗೇಂದ್ರ ಉತ್ತರ ಪ್ರದೇಶವನ್ನು ರಾಮರಾಜ್ಯವಾಗಿಸಲು ತಯಾರಿ ನಡೆಸಿದ್ದಾರೆ. ಇವರ ನಡುವೆ ಕರ್ನಾಟಕದ ರಾಜಕೀಯ ಏನು ನಡೆಸಿದೆ? ನಿಮಗೇನಾದರೂ ಗೊತ್ತಾ?

 •  
  1.7K
  Shares
 • 1.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com