Connect with us
Loading...
Loading...

ಅಂಕಣ

ಕ್ರಾಂತಿಕಾರಿಗಳಿಗೆ ಗುರುವಾಗಿದ್ದ ಇವರೇ ಬ್ರಿಟಿಷ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದವರು!! ಇಂದು ಆ ಮಹಾನ್ ಕ್ರಾಂತಿಕಾರಿಯ ಜನ್ಮದಿನ!!!

Published

on

 • 1
 •  
 •  
 •  
 •  
 •  
 •  
 •  
  1
  Share

ಓ!! ಭಾರತೀಯರೇ ನಿಮಗೆ ನಾನು ನೆನಪಿಲ್ವಾ? ಅಂದು ನಾನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಕಟ್ಟಕಡೆಯ ಮೊಳೆಗಳನ್ನು ಹೊಡೆದಿದ್ದೆ!!!.

ಹೇಯ್ ಕೆಂಪು ಕುನ್ನಿಗಳೇ ಇಂದು ನನ್ನ ಮೇಲೆ ಬಿದ್ದ ಹೊಡೆತಗಳು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳು” ಎಂದು ಘರ್ಜಿಸಿ ತಾಯಿ ಭಾರತಾಂಬೆಯ ಚರಣಕ್ಕೆ ತನ್ನ ಪ್ರಾಣವನ್ನು ಅರ್ಪಿಸಿದ್ದ ಮಹಾನ್ ಕ್ರಾಂತಿಕಾರಿ ಬೇರಾರೂ ಅಲ್ಲ ಲಾಲಾ ಲಜಪತರಾಯರು. ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಸಿಂಗ್, ಚಂದ್ರಶೇಖರಂತಹ ಅಗ್ನಿಶಿಶುಗಳಿಗೆ ಲಾಲಾ ಲಜಪತರಾಯರು ಮಾರ್ಗದರ್ಶಕರಾಗಿದ್ದರು.

ಅಂದು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಲಾಲಾ ಲಜಪತರಾಯರು ಹುಟ್ಟಿದ್ದು 1864ರ ಜನೆವರಿ 28 ರಂದು ಪಂಜಾಬ್ ಪ್ರಾಂತ್ಯದ ಫಿರೋಜಪುರ ಜಿಲ್ಲೆಯ ದುಡಿಕೆ ಎಂಬ ಹಳ್ಳಿಯಲ್ಲಿ.

ಬ್ರಿಟಿಷರು ಸ್ಥಾಪಿಸಿದ್ದ ಇಂಪಿರಿಯಲ್ ಬ್ಯಾಂಕ್ ಗೆ ಸವಾಲೆಸೆದ ಮಹಾನ್ ಕ್ರಾಂತಿಕಾರಿ ಲಾಲಾ ಲಜಪತರಾಯ್ :

ಹೌದು!! ಆ ಕಾಲಘಟ್ಟದಲ್ಲಿ ಬ್ರಿಟಿಷರನ್ನು ಎದರು ಹಾಕಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಭಾರತದೆಲ್ಲೆಡೆ ಬ್ರಿಟಿಷರ ದೌಜ೯ನ್ಯ, ದಬ್ಬಾಳಿಕೆ ತೀವ್ರಗೊಂಡಿದ್ದ ಕಾಲಘಟ್ಟವದು.
ಬರೀ ಧಾಮಿ೯ಕ, ಸಾಮಾಜಿಕ ಕ್ಷೇತ್ರಗಳಲ್ಲದೇ ಆಥಿ೯ಕವಾಗಿಯೂ ಕೆಂಪು ಕುನ್ನಿ ಬ್ರಿಟಿಷರು ಹೊಸ ಹೊಸ ಕಾನೂನುಗಳನ್ನು ಭಾರತೀಯರ ಮೇಲೆ ಹೇರಿದ್ದರು.

ಇಲ್ಲಿನ ವ್ಯಾಪಾರ-ವಹಿವಾಟುಗಳಲ್ಲೂ ಭಾರತೀಯರು ಹಣ ಹೂಡಲು ವಿದೇಶಿ ಬ್ಯಾಂಕುಗಳನ್ನೇ ಅವಲಂಭಿಸುವ ಪರಿಸ್ಥಿತಿ ಬರುವಂತೆ ಮಾಡಿದ್ದರು. ಆ ವಿದೇಶಿ ಬ್ರಿಟಿಷ್ ಬ್ಯಾಂಕಿನ ಹೆಸರು ಇಂಪೀರಿಯಲ್ ಬ್ಯಾಂಕ್.

ಅಗಲೇ ನೋಡಿ ಲಾಲಾ ಲಜಪತರಾಯರು ವಿಶಿಷ್ಟ ರೀತಿಯಲ್ಲಿ ಬ್ರಿಟಿಷರಿಗೆ ಸವಾಲೆಸೆದಿದ್ದು. ಹೇಗೆ ಗೊತ್ತಾ? ಪಂಜಾಬ್ ನ್ಯಾಶನಲ್ ಬ್ಯಾಂಕ್ ಕೇಳಿದ್ದೀರಲ್ವಾ? ಅದು ಲಾಲಾ ಲಜಪತರಾಯರು ಸ್ಥಾಪಿಸಿದ ಬ್ಯಾಂಕ್. ಪಂಜಾಬ್ ನ್ಯಾಶನಲ್ ಬ್ಯಾಂಕ್ ಸ್ಥಾಪಿಸಿದ್ದೇ ಬ್ರಿಟಿಷರ ಇಂಪೀರಿಯಲ್ ಬ್ಯಾಂಕ್ ಗೆ ಸವಾಲೆಸೆಯಲು.


ಭಾರತೀಯರು ಬೆವರು ಸುರಿಸಿ ಗಳಿಸಿದ ಹಣ ಇಂಪೀರಿಯಲ್ ಬ್ಯಾಂಕಿನಲ್ಲಿ ಜಮಾ ಆಗುತ್ತಿದ್ದ ಸಂದಭ೯ದಲ್ಲಿ ಸ್ವದೇಶಿ ಬ್ಯಾಂಕ್‍ನ್ನು ಆರಂಭೀಸಿದ ಕೀತಿ೯ ಲಾಲಾ ಅವರಿಗೆ ಸಲ್ಲುತ್ತದೆ. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‍ನ ಕ್ರಾಂತಿಕಾರಿಗಳ ಹಣವೂ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ಜಮಾ ಆಗುತ್ತಿತ್ತು.

ಇಲ್ಲಿನ ಹಣ ಭಾರತೀಯರ ಸ್ವಾತಂತ್ರ್ಯ ಸಂಗ್ರಾಮದ ಖಚು೯ ವೆಚ್ಚಕ್ಕಾಗಿಯೇ ಉಪಯೋಗಿಸಲಾಗುತ್ತಿತ್ತು. ಇದೆಲ್ಲವೂ ಬ್ರಿಟಿಷರ ಪಾಲಿಗೆ ನುಂಗಲಾಗದ ತುತ್ತಾಗಿತ್ತು. ವೀರ ಯೋಧರ ಬೀಡೆನಿಸಿದ್ದ ಪಂಜಾಬಿನಲ್ಲಿ ಇದೇ ಹೊತ್ತಲ್ಲಿ ಲಾಲಾ ಅವರು ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿದರು. ಯುವಕರನ್ನು, ಜನಸಾಮಾನ್ಯರನ್ನು ಸಂಘಟಿಸಿದರು.

ಗಾಂಧಿಜಿಯವರು ಅಸಹಕಾರ ಚಳುವಳಿಯನ್ನು ಆರಂಭಿಸಿದ್ದು ಎಲ್ಲರಿಗೂ ಗೊತ್ತಿದೆ. ಆಮೇಲೆ ಗಾಂಧಿಜಿಯವರು ಅಸಹಕಾರ ಚಳುವಳಿಯನ್ನು ವಾಪಸ್ಸು ತೆಗೆದು ಕೊಂಡರು.

ಯಾಕೆ ಗೊತ್ತಾ?

1922 ಫೆಬ್ರುವರಿ ಯಲ್ಲಿ ಗಾಂಧಿಜಿ ಅಸಹಕಾರ ಚಳುವಳಿ ರೂಪಿಸಿದ್ದರು. ಆ ಅಸಹಕಾರ ಚಳುವಳಿಯನ್ನು ಸಂಘಟಿಸಲು ಕ್ರಾಂತಿಕಾರಿಗಳು ಉತ್ತರ ಪ್ರದೇಶದ ಚೌರಿ ಚೌರ ಹಳ್ಳಿಗೆ ತೆರಳಿದ್ದರು.
ಅದು ಶಾಂತಿಯುತವಾದ ಚಳುವಳಿಯಾಗಿತ್ತು. ಅದನ್ನುಬಲ ಹತ್ತಿಕ್ಕಲು ಬ್ರಿಟಿಷರು ಚಳುವಳಿಕಾರರ ಮೇಲೆ ದಾಳಿ ಮಾಡಿದರು.

ಆ ದಾಳಿಯಲ್ಲಿ ಅನೇಕ ಭಾರತೀಯರು ಮೃತಪಟ್ಟರು. ಇದಕ್ಕೆ ಪ್ರತೀಕಾರವಾಗಿ ಕ್ರಾಂತಿಕಾರಿಗಳ ತಂಡ ಬ್ರಿಟಷರಿದ್ದ ಪೋಲಿಸ್ ಸ್ಟೇಷನ್ ಗೆ ಬೆಂಕಿ ಇಟ್ಟರು. ಅದರಲ್ಲೊಂದಷ್ಟು ಜನ ಬ್ರಿಟಿಷರ ಸಂಹಾರವಾಗಿತ್ತು. ಈ ಘಟನೆಯ ಹಿಂದಿನ ಮರ್ಮವನ್ನರಿಯದೆ ಗಾಂಧೀಜಿ ಘಟನೆಯನ್ನು ಖಂಡಿಸಿದರಲ್ಲದೆ ಅಸಹಕಾರ ಚಳುವಳಿ ಹಿಂಪಡೆದರು. ಗಾಂಧೀಜಿಯವರು ಆಲೋಚನೆ ಮಾಡಬೇಕಾಗಿತ್ತು.

ಅಲ್ಲಿಗೆ ಅಸಹಕಾರ ಚಳುವಳಿ ಅಂತ ಶಾಲಾ, ಕಾಲೇಜ್ ಬಿಟ್ಟ ಮಕ್ಕಳಿಗೆ ಆಘಾತವಾಯಿತು. ಆಗ ಲಾಲಾ ಲಜಪತರಾಯರು ಆ ಎಲ್ಲಾ ಮಕ್ಕಳನ್ನು ತಮ್ಮ ನ್ಯಾಶನಲ್ ಕಾಲೇಜಿಗೆ ಸೇರಿಸಿಕೊಂಡರು. ಅಲ್ಲಿಗೆ ಕ್ರಾಂತಿಕಾರಿಗಳಿಗೆ ಕ್ರಾಂತಿಕಾರಿ ಶಾಲೆ ಸಿಕ್ಕಂತಾಯ್ತು.

ಅದೇ ಸಂದರ್ಭದಲ್ಲಿ, ಭಾರತೀಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡುವ ಸಲುವಾಗಿ ಇಂಗ್ಲೆಂಡ್‍ನಿಂದ ಭಾರತಕ್ಕೆ ಆಗಮಿಸಿದ್ದ ಸೈಮನ್ ಕಮಿಷನ್ ಭಾರತೀಯ ಸದಸ್ಯತ್ವವಿಲ್ಲದೆ ಏಕಮುಖವಾಗಿತ್ತು.

ಜೊತೆಗೆ ತಮ್ಮದೇ ಕಾನೂನುಗಳನ್ನು ಭಾರತೀಯರ ಮೇಲೆ ಹೇರಲು ಇಂಡಿಯನ್ ಪೊಲೀಸ್ ಆ್ಯಕ್ಟನ್ನು ಜಾರಿಗೊಳಿಸಲಾಯಿತು. ಇದರಿಂದ ಭಾರತೀಯರಲ್ಲಿ ಬ್ರಿಟಿಷರ ವಿರುದ್ಧದ ಆಕ್ರೋಶ ಮತ್ತಷ್ಟು ಹೆಚ್ಚಿತು. 1928ರ ನವೆಂಬರ್‍ನಲ್ಲಿ ಸೈಮನ್ ಕಮಿಷನ್ ಲಾಹೋರ್‍ಗೆ ಆಗಮಿಸುತ್ತಿದ್ದಂತೆಯೇ ಬೃಹತ್ ಪ್ರತಿಭಟನೆಯನ್ನೆದುರಿಸಬೇಕಾಯಿತು.

ಲಾಲಾ ಲಜಪತರಾಯರು ಪ್ರತಿಭಟನಾ ಮೆರವಣಿಗೆಯ ಮುಂಚೂಣಿಯಲ್ಲಿದ್ದು, ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು. ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷ್ ಪೊಲೀಸ್ ಮುಖ್ಯಸ್ಥ ಜೇಮ್ಸ್ ಸ್ಕಾಟ್‍ನ ಆಜ್ಞೆಯಂತೆ ಲಾಠಿ ಪ್ರಹಾರವಾಗತೊಡಗಿತು.

ಲಾಲಾರನ್ನು ರಕ್ಷಿಸಲು ಭಗತ್ ಸಿಂಗ್, ರಾಜ ಗುರು, ಸುಖದೇವ್, ಭಗವತೀ ಚರಣ್ ಮತ್ತು ಯಶುಪಾಲರು ಸುತ್ತುವರೆದರು. ಅಟ್ಟಹಾದಿಂದ ಈ ಗುಂಪಿನ ಮೇಲೆ ದಾಳಿ ಮಾಡಿದ ಸ್ಯಾಂಡರ್ಸ್ ಲಾಲಾ ಲಜಪತರಾಯರ ಎದೆ ಮತ್ತು ತಲೆಯ ಮೇಲೆ ಬಲವಾಗಿ ಲಾಠಿಯಿಂದ ಹೊಡೆದನು. ಆದರೂ, ಧೃತಿಗೆಡದೆ ಜನರನ್ನು ಹುರಿದುಂಬಿಸುತ್ತ ಪ್ರತಿಭಟನೆಯನ್ನು ಮುಂದುವರಿಸಿದರು.

ಲಾಲಾ ಲಜಪತರಾಯರು ದೊಡ್ಡ ಘೋಷಣೆ ಹಾಕುತ್ತಾ, ನಿಮ್ಮ ದಬ್ಬಾಳಿಕೆಯ ದೌರ್ಜನ್ಯಕ್ಕೆ ನಾವು ತಲೆಬಾಗುವುದಿಲ್ಲ. ಸಾವಿಗೆ ಅಂಜುವುದಿಲ್ಲ ಸೈಮನ್ ಕಮಿಷನ್ ಗೆ ಹೇಳು. ಭಾರತದಿಂದ ಆಚೆ ಹೋಗುವುದಕ್ಕೆ. ಸೈಮನ್ ಕಮಿಷನ್ ಗೋ ಬ್ಯಾಕ್ ವಂದೇ ಮಾತರಂ ಭಾರತ ಮಾತಾಕೀ ಜೈ ಘೋಷಣೆ ಕೂಗುತ್ತಾ ಹೋರಾಟಗಾರರು ಮುಂದೆ ಸಾಗಿದರು.

ಪೋಲೀಸರು ಲಾಠಿ ಪ್ರಹಾರ ಮಾಡೋದನ್ನು ನಿಲ್ಲಿಸೋದಿಲ್ಲ. ಹೋರಾಟಗಾರರು ಭಾರತ್ ಮಾತಾಕೀ ಜೈ ವಂದೇ ಮಾತರಂ ಘೋಷಣೆ ಕೂಗುತ್ತಾ ಏಟು ತಿನ್ನುತ್ತಾರೆ. ಸ್ಕಾಟ್ ಸ್ವತಃ ಲಜಪತ್ ರಾಯ್ ಗೆ ಲಾಠಿಯಿಂದ ಹೊಡೆಯುತ್ತಲೇ ಇದ್ದ.

ಲಾಲಾಜಿಯವರ ತಲೆ, ಮೈಮೇಲೆಲ್ಲ ಕೈ ದೊಣ್ಣೆಯ ಪೆಟ್ಟುಗಳು ಬಿದ್ದವು. ಆ ಏಟುಗಳಿಂದ ಲಾಲಾ ನೆಲಕ್ಕುರುಳಿದರು. ಆಗ ಬ್ರಿಟಿಷರಿಗೆ ಅರ್ಥವಾಗಲೆಂದೇ ಲಾಲಾ ಲಜಪತರಾಯರು

ಇಂಗ್ಲೀಷನಲ್ಲಿ ಹೀಗೆ ಹೇಳಿದರು: “ನನ್ನ ಮೇಲೆ ಇಂದು ಬಿದ್ಧ ಹೊಡೆತಗಳು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳು”.

ಲಜಪತ್ ರಾಯ್ ಲಾಠಿ ಏಟಿನಿಂದ ಕುಸಿದು ನೆಲಕೆ ಬೀಳುತ್ತಾರೆ.
ತದನಂತರ ಅವರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಬ್ರಿಟಿಷರ ತೀವ್ರ ಏಟಿನಿಂದ ಬದುಕುಳಿಯುವುದಿಲ್ಲ. 1928ರ ನವೆಂಬರ‍್ 17ರಂದು ಬ್ರಿಟಿಷರ ಏಟಿನಿಂದ ಲಾಲಾ ಲಜಪತರಾಯರು ಹುತಾತ್ಮರಾದರು.

ಅದರಿಂದ ಕ್ರಾಂತಿಕಾರಿಗಳ ತಂಡಕ್ಕೆ ತುಂಬಾ ನೋವಾಗುತ್ತದೆ. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಕ್ರಾಂತಿಕಾರಿಗಳ ತಂಡ ಪ್ರತಿಜ್ಞೆ ಮಾಡುತ್ತದೆ. ಆ ಕ್ರಾಂತಿಕಾರಗಳ ತಂಡದಲ್ಲಿ ಭಗತ್ ಸಿಂಗ್ ಕೂಡಾ ಇದ್ದ.

“ಸ್ವಾತಂತ್ಯ್ರವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ”. ಜೀವನಪೂರ್ತಿ ಸಾಹಸದ ಹೋರಾಟ ನಡೆಸಿದುದರ ಕಾರಣಕ್ಕಾಗಿಯೇ ಅವರನ್ನು “ಪಂಜಾಬ್ ಕೇಸರಿ” ಎಂದು ಕರೆದದ್ದು. ಅವರ ಬಲಿದಾನ ರಣಭೂಮಿಯ ವೀರನ ಮರಣದಂತೆ.

ಇಂದು ಪಂಬಾಬಿನ ಕೇಸರಿ ಲಾಲಾ ಲಜಪತರಾಯರ ಹುಟ್ಟಿದ ದಿನ. ಅವರಿಗೊಂದು ಬಿಗ್ ಸೆಲ್ಯೂಟ್

– Nationalist Mahi

 •  
  1
  Share
 • 1
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com