Connect with us
Loading...
Loading...

ಪ್ರಚಲಿತ

ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕಣ್ಣೀರಿಟ್ಟಿದ್ಯಾಕೆ? ಅದನ್ನ ಕೇಳಿದರೆ ಈ ನಟನ ಮೇಲೆ ಗೌರವ ದುಪ್ಪಟ್ಟಾಗುತ್ತೆ!! ಹ್ಯಾಟ್ಸಾಫ್ ಅಕ್ಷಯ್!!!

Published

on

 • 2
 •  
 •  
 •  
 •  
 •  
 •  
 •  
  2
  Shares

ಅಕ್ಷಯ ಕುಮಾರ್, ಆತನೊಬ್ಬ ದೇಶಭಕ್ತ ಬಾಲಿವುಡ್ ಚಿತ್ರ ನಟ, ಪ್ರತಿ ಬಾರಿಯೂ ತನ್ನ ದೇಶಭಕ್ತಿಯನ್ನ ವಿಶಿಷ್ಟ ರೀತಿಯಲ್ಲಿ ತೋರ್ಪಡಿಸುವ ಕೆಲವೇ ಕೆಲವು ಬಾಲಿವುಡ್ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರೆಂದರೆ ತಪ್ಪಾಗಲಾರದೇನೋ!

ಇಂತಹ ಅಕ್ಷಯ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟಿದ್ದರು. ಅಷ್ಟಕ್ಕೂ ಅಂತಹ ಸೂಪರ್ ಸ್ಟಾರ್ ಒಬ್ಬ ಕಣ್ಣೀರಿಟ್ಟಿದ್ದಾರೂ ಯಾಕೆ?

ಇಲ್ಲಿದೆ ಅದರ ಸಂಪೂರ್ಣ ಮಾಹಿತಿ!!

ಅಕ್ಷಯ್ ಕುಮಾರ್ ಭಾರತೀಯ ಸೇನೆ ಹಾಗು ಸೈನಿಕರಿಗಾಗಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ರವರಿಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಫಿಲಂ ಅವಾರ್ಡ್ ಒಂದನ್ನ ಕೊಡಲಾಗಿತ್ತು.

ಈ ಪ್ರಶಸ್ತಿ ಸ್ವೀಕರಿಸುವ ಘಳಿಗೆಯಲ್ಲೇ ಅಕ್ಷಯ್ ಕುಮಾರ್ ಭಾರತೀಯ ಯೋಧರ ಕ್ಷೇಮಾಭಿವೃದ್ಧಿಗಾಗಿ ಒಂದು ಆ್ಯಪ್ ತಯಾರು ಮಾಡಿದ್ದನ್ನೂ ಲೋಕಾರ್ಪಣೆಗೊಳಿಸಿದ್ದರು.

ಭಾರತೀಯ ಯೋಧರಿಗಾಗಿ ಅಕ್ಷಯ್ ಕುಮಾರ್ ವೆಬಸೈಟ್ ಒಂದನ್ನ ಶುರು ಮಾಡಿದ್ದರು. ಅದರ ಹೆಸರೇ ‘ಭಾರತ್ ಕೇ ವೀರ್’ ಎಂಬುದಾಗಿದ್ದು ಆ ವೆಬಸೈಟ್ ಮೂಲಕ ದೇಶದ ಜನ ಸೈನಿಕರಿಗಾಗಿ ದೇಣಿಗೆ ನೀಡಬಹುದಾಗಿದೆ.

ಇದನ್ನ ಅಕ್ಷಯ್ ಕುಮಾರ್ ಸೈನಿಕರ, ಸಿ.ಆರ್.ಪಿ.ಎಫ್, ಪೋಲಿಸರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ದೇಶದ ಜನತೆಗೆ ಕೆಲ ದಿನಗಳ ಹಿಂದೆ ಲೋಕಾರ್ಪಣೆಗೊಳಿಸಿದ್ದರು.

ಆ ಆ್ಯಪ್ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಶುರುವಾಗಿದೆ. ಈ ವೆಬ್ ಸೈಟ್ ಶುರುವಾಗುವ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು. ಈ ವೆಬ್ ಸೈಟ್ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮಾಡಿದ್ದಾರೆ.

ಹೀಗಾಗಿ ನಾವು ಈಗಿನಿಂದಲೇ ಈ ‘ಭಾರತ್ ಕೆ ವೀರ್’ ವೆಬ್ ಸೈಟ್” ಗೆ ಒಂದಷ್ಟು ಹಣವನ್ನು ನೀಡೋಣ. ಅದು ಹುತಾತ್ಮ ಯೋಧರ ಕುಟುಂಬಕ್ಕೆ ತಲುಪುತ್ತದೆ ಎಂದರು. ಅಕ್ಷಯ್ ಕುಮಾರ್ ಅವರ ಈ ಸ್ಪೂರ್ತಿಯ ಮಾತುಗಳಿಗೆ ಓಗೊಟ್ಟ ಅಲ್ಲಿದ್ದ ಜನ ಕ್ಷಣಾರ್ಧದಲ್ಲಿ ಸುಮಾರು 12.93 ಕೋಟಿ ರೂ. ಸಂಗ್ರಹ ಮಾಡಿ, ಆ ‘ಭಾರತ್ ಕೆ ವೀರ್’ ವೆಬ್ ಸೈಟ್” ಕೊಟ್ಟರು.

ಅಷ್ಟಕ್ಕೂ ಅಕ್ಷಯ್ ಕುಮಾರರಿಗಿರುವ ದೇಶಪ್ರೇಮ ಈ ಖಾನ್ ಗಳಿಗ್ಯಾಕಿಲ್ಲ?
ಪಾಕಿಸ್ತಾನ ಭೂಕಂಪಕ್ಕೆ ಸಿಕ್ಕು ನೊಂದೊಡನರ ಪರಿಹಾರ ಕೊಡುತ್ತೇವೆಂದು ದಾವಿಸುವ ಈ ಖಾನ್ ಗಳಿಗೆ, ಭಾರತದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಕಾಣಿಸಲಿಲ್ಲ?

ಪಾಕಿಸ್ತಾನದಲ್ಲಿ ಯಾವುದಾದರೂ ದಾಳಿ ನಡೆದರೆ ಕಣ್ಣೀರು ಸುರಿಸುವ ಈ ಖಾನ್ ಗಳು, ಭಾರತೀಯ ಸೈನಿಕ ಹುತಾತ್ಮನಾದಾಗ ಯಾಕೆ ಕಣ್ಣೀರಿಡಲಿಲ್ಲ? ಅಷ್ಟಕ್ಕೂ ಈ ಖಾನ್ ಗಳು ಪಾಕಿಸ್ತಾನದವರಾ? ಭಾರತದಲ್ಲಿದ್ದು ಭಾರತಕ್ಕೆ ನಿಷ್ಠರಾಗಬೇಕಲ್ಲವೇ?

ಅಕ್ಷಯ್ ಕುಮಾರ್ ಮತ್ತು ನಾನಾ ಪಾಟೇಕರ್ ಅವರು ರೈತರ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ಕೋಟ್ಯಾಂತರ ದುಡ್ಡನ್ನು ಕೊಟ್ಟು ತಮ್ಮ ದೇಶಪ್ರೇಮವನ್ನು ಮೆರೆದಿದ್ದಾರೆ.

ಖಾನ್ ಗಳೇ ನೀವು ನಾನಾ ಪಾಟೇಕರ್ ಮತ್ತು ಅಕ್ಷಯ್ ಕುಮಾರ್ ರಂತೆ ರೈತರಿಗಾಗಿ, ಹುತಾತ್ಮ ಯೋಧರಿಗಾಗಿ ಒಂದೇ ಒಂದು ಹನಿ ಕಣ್ಣೀರು ಸುರಿಸಿದ್ದರೂ ಮಾಧ್ಯಮಗಳು ನಿಮ್ಮನ್ನು ಅಬ್ದುಲ್ ಕಲಾಂರಿಗಿಂತಲೂ ಎತ್ತರದಲ್ಲಿ ನಿಲ್ಲಿಸಿ ಬಿಡುತ್ತಿದ್ದರು. ಪಾಪ!! ನಾನಾ ಪಾಟೇಕರ್ ಹಾಗೂ ಅಕ್ಷಯ್ ಕುಮಾರರಿಗೆ ಆ ಭಾಗ್ಯವಿಲ್ಲ. ಯಾಕೆಂದರೆ ಅವರು ಹಿಂದುಗಳು.

ಹಿಂದೊಮ್ಮೆ ಅಕ್ಷಯ್ ಕುಮಾರ್ ಗೆ ಭಾರತ ಸರ್ಕಾರದ ವತಿಯಿಂದ ಅವರು ನಟಿಸಿದ್ದ ರುಸ್ತುಂ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿತ್ತು.

ದೆಹಲಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸುವ ವೇಳೆ ಭಾವುಕರಾದ ಅಕ್ಷಯ್ ಕುಮಾರ್ “ನನ್ನ ಭಾರತೀಯ ಸೈನಿಕರಿಗಾಗಿ ಈ ವೆಬಸೈಟ್ ಲೋಕಾರ್ಪಣೆ ಮಾಡುತ್ತಿದ್ದೇನೆ, ದೇಶ ಕಾಯುವ ಯೋಧರ ಕುಟುಂಬಕ್ಕಾಗಿ ನಿಮ್ಮ ಕೈಲಾದ ಸಹಾಯ ಮಾಡಿ, ಜೈ ಹಿಂದ್” ಎಂದು ಸೈನಿಕರ ಬಲಿದಾನ ನೆನೆದು ಅಕ್ಷಯ್ ಕುಮಾರ್ ಕಣ್ಣೀರಿಟ್ಟಿದ್ದರು.

ಭಾರತೀಯ ಯೋಧರಿಗಾಗಿ ಈ ಕಾರ್ಯ ಮಾಡಬೇಕೆಂದು ಅಕ್ಷಯ್ ಕುಮಾರ್ ಗೆ ಅನಿಸಿದ್ದು ಹೇಗೆ ಗೊತ್ತಾ?

ಅಕ್ಷಯ್ ಕುಮಾರ್ ತಾವು ನಟಿಸುವ ಚಿತ್ರವೊಂದಕ್ಕಾಗಿ ಭಯೋತ್ಪಾದನೆಯ ವಿಷಯದ ಕುರಿತಾಗಿ ಡಾಕ್ಯುಮೆಂಟರಿಯೊಂದನ್ನ ನೋಡುತ್ತ ಕೂತಿದ್ದಾಗ ಹೇಗೆಲ್ಲಾ ಭಯೋತ್ಪಾದಕರು ನಮ್ಮ ಸೈನಿಕರನ್ನ ಟಾರ್ಗೇಟ್ ಮಾಡ್ತಿದ್ದಾರೆ ಅನ್ನೋದನ್ನ ನೋಡಿ ಅಕ್ಷಯ್ ಗೆ ಸೈನಿಕರಿಗಾಗಿ ಏನಾದರೂ ಮಾಡಬೇಕಲ್ಲ ಅಂತನ್ನಿಸಿ ‘ಭಾರತ್ ಕೇ ವೀರ್’ ವೆಬಸೈಟ್ ಮಾಡುವ ಆಲೋಚನೆ ಬಂತಂತೆ.

ಈ ವೆಬಸೈಟ್ ರೆಡಿ ಮಾಡೋಕೆ ಅಕ್ಷಯ್ ಕುಮಾರ್ ಗೆ ಬರೋಬ್ಬರಿ ಎರಡೂವರೆ ತಿಂಗಳುಗಳೇ ತೆಗೆದುಕೊಂಡಿತಂತೆ.

ಇದರ ಬಗ್ಗೆ ಮಾತನಾಡುತ್ತ ಅಕ್ಷಯ್ ಹೇಳ್ತಾರೆ “ನನ್ನ ತಂದೆಯೂ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ಸೈನಿಕರು ಗಡಿಯಲ್ಲಿ ಅದೆಷ್ಟು ಕಷ್ಟಪಡ್ತಾರೆ ಅನ್ನೋದು ನನಗೆ ಗೊತ್ತು, ನನ್ನ ಈ ವೆಬಸೈಟ್ ಕನಸಿಗೆ ಭಾರತ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಹಾಯ ಸಹಕಾರ ನೀಡಿದೆ” ಎಂದು ದೇಶದ ಗೃಹಮಂತ್ರಿಯಾಗಿರುವ ರಾಜನಾಥ ಸಿಂಗರಿಗೂ ಧನ್ಯವಾದಗಳನ್ನ ಅರ್ಪಿಸಿದ್ದರು.

ಈ ವೆಬಸೈಟ್ ಒಂದನ್ನೇ ಮಾಡಿಲ್ಲ ಅಕ್ಷಯ್!!

ಅಕ್ಷಯ್ ಕುಮಾರ್ ಭಾರತೀಯ ಯೋಧರಿಗಾಗಿ ಹಾಗು ಯುದ್ಧದಲ್ಲಿ ಹಾಗು ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೂ ತಮ್ಮ ಸಹಾಯಹಸ್ತ ಚಾಚುತ್ತಲೇ ಬಂದಿದ್ದಾರೆ.

ಅವರ ಕೊಡುಗೆಗಳು:

ಕಳೆದ ವರ್ಷ ಮಾರ್ಚ್ 11 ಕ್ಕೆ ಛತ್ತಿಸಗಢ್ ರಾಜ್ಯದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 12 ಜನ ಸಿ.ಆರ್.ಪಿ.ಎಫ್ ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ ತಲಾ 9 ಲಕ್ಷ ದೇಣಿಗೆ ನೀಡಿದ್ದರು.

‘ಭಾರತ್ ಕೆ ವೀರ್’ ವೆಬ್ ಸೈಟ್” ಗೆ ಒಂದಷ್ಟು ಹಣವನ್ನು ನೀಡೋಣ ಅದು ಹುತಾತ್ಮ ಯೋಧರ ಕುಟುಂಬಕ್ಕೆ ತಲುಪುತ್ತದೆ ಎಂದಿದ್ದ ಅಕ್ಷಯ್ ಕುಮಾರ್ ಅವರ ಈ ಸ್ಪೂರ್ತಿಯ ಮಾತುಗಳಿಗೆ ಓಗೊಟ್ಟ ಜನ ಕ್ಷಣಾರ್ಧದಲ್ಲಿ ಸುಮಾರು 12.93 ಕೋಟಿ ರೂ. ಸಂಗ್ರಹ ಮಾಡಿ, ಆ ‘ಭಾರತ್ ಕೆ ವೀರ್’ ವೆಬ್ ಸೈಟ್” ಕೊಟ್ಟರು.

ಅಕ್ಷಯ್ ಕುಮಾರ್ ಮತ್ತು ನಾನಾ ಪಾಟೇಕರ್ ಅವರು ರೈತರ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ಕೋಟ್ಯಾಂತರ ದುಡ್ಡನ್ನು ತಮ್ಮ ದೇಶಪ್ರೇಮವನ್ನು ಮೆರೆದಿದ್ದಾರೆ.

ಆದರೆ ಪಾಕಿಸ್ತಾನದಲ್ಲಿ ಭೂಕಂಪವಾದರೇ ಮರುಗುವ ಖಾನ್ ಗಳಿಗೆ ಮಾತ್ರ ಇಂಥ ಬುದ್ದಿ ಈ ಜನ್ಮದಲ್ಲಿ ಬರಲು ಸಾಧ್ಯವಿಲ್ಲ.

ಭಾರತೀಯ ಸೇನೆಗಾಗಿ ಅಕ್ಷಯ್ ಕುಮಾರ್ ನಡೆಸುತ್ತಿರುವ ಅಭಿಯಾನಕ್ಕೆ ನಾವೆಲ್ಲಾ ಕೈ ಜೋಡಿಸಿ ನಮ್ಮ ಸೈನಿಕರ ಜೊತೆಗೆ ನಿಲ್ಲೋಣ

ಜೈ ಹಿಂದ್!!

 •  
  2
  Shares
 • 2
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com