Connect with us
Loading...
Loading...

ಅಂಕಣ

ಕರ್ನಾಟಕದ ಈ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಲು ಕಾಂಗ್ರೆಸ್ಸಿಗರು ಯಾಕೆ ಹೆದರುತ್ತಾರೆ? ಅಷ್ಟಕ್ಕೂ ಆ ದೇವಸ್ಥಾನ ಯಾವುದು ಗೊತ್ತಾ?

Published

on

 • 1.6K
 •  
 •  
 •  
 •  
 •  
 •  
 •  
  1.6K
  Shares

ಹಿಂದುಗಳು ಮೂಢರು ಎನ್ನುವ ಕಾಲವೊಂದಿತ್ತು. ಹಿಂದುಗಳನ್ನು ಮೂಢರು ಎಂದು ಗೇಲಿ ಮಾಡುವ ಒಂದು ದೊಡ್ಡ ಪಟಾಲಂ ಇತ್ತು. ತನ್ನನ್ನು ತಾನು ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದ ಜನರು ಇದ್ದರು. ಆದರೆ ಇದೀಗ ಗೇಲಿ ಮಾಡುತ್ತಿದ್ದವರು, ನಾಚಿಕೆ ಪಡುತ್ತಿದ್ದವರೆಲ್ಲ ದೇವಸ್ಥಾನಗಳ ಭೇಟಿಗಾಗಿ ಓಡಾಡುತ್ತಿದ್ದಾರೆ. ಈಗ ನಾವು ಅವರನ್ನು ನೋಡಿ ಗೇಲಿ ಮಾಡುವ ಕಾಲ ಬಂದಿದೆ. ಬೇರೆ ಯಾರ ಬಗ್ಗೇನೋ ಹೇಳ್ತಿಲ್ಲ. ಇದು ನಮ್ಮ ರಾಹುಲ್ ಗಾಂಧಿಯವರನ್ನ ಕುರಿತು ಹೇಳ್ತಿದೀನಿ.

ರಾಹುಲ್ ಗಾಂಧಿಯವರ ಅಜ್ಜ, ಮುತ್ತಜ್ಜನಿಂದಲೂ ಹಿಂದೂ ಧರ್ಮವನ್ನು ಅಸಡ್ಡೆ ಮಾಡಿಕೊಂಡು ಬಂದಿದ್ದರು. ರಾಹುಲ್ ಗಾಂಧಿ ಕೂಡಾ ಇವರ ಹೊರತೇನಲ್ಲ. ಆದರೆ ಇದೀಗ ಕಾಲ ಹೇಗಾಗಿದೆ ಅಂದ್ರೆ ಈಗಿನ ಟ್ರೆಂಡ್ ಹೇಗಿದೆ ಅಂದ್ರೆ ಬರೀ ಎಲ್ಲರ ಬಾಯಲ್ಲೂ ಹಿಂದುತ್ವದ ಜಪ ಶುರುವಾಗಿದೆ. ಅದೆಷ್ಟು ಹಿಂದುತ್ವದ ಜಪ ಶುರುವಾಗಿದೆ ಅಂದ್ರೆ ಹಿಂದುತ್ವದ ಅಲೆಯಿಂದಲೇ ನರೇಂದ್ರ ಮೋದಿಯವರು ಪ್ರಧಾನಿ ಗದ್ದುಗೆ ಮೇಲೆ ಕೂತಿದ್ದಾರೆ. ಹಿಂದೂ ಧರ್ಮವನ್ನು ಅಸಡ್ಡೆ ಮಾಡಿದರೆ, ಹಿಂದೂ ಧರ್ಮವನ್ನು ನಿಂದಿಸಿದರೆ, ಹಿಂದೂ ಧರ್ಮದವರನ್ನು ಕುರಿತು ನಿಂದಿಸಿದರೆ ನಮ್ಮ ಅಸ್ತಿತ್ವವೇ ಉಳಿಯುವುದಿಲ್ಲವೆಂದು ಕಾಂಗ್ರೆಸ್ಸಿನವರಿಗೆ ಖಾತ್ರಿಯಾಗಿದೆ.

ಹಾಗಾಗಿಯೇ ಹಿಂದೆ ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ ಕಾಂಗ್ರೆಸ್ಸಿಗರು ಟೆಂಪಲ್ ಶುರು ಮಾಡಿದ್ದಾರೆ. ರಾಹುಲ್ ಅಂತೂ ದೇವಸ್ಥಾನಗಳ ಮೇಲೆ ದೇವಸ್ಥಾನ ತಿರುಗಿ ದೊಡ್ಡ ದೊಂಬರಾಟ ನಡೆಸಿಬಿಟ್ಟಿದ್ದಾನೆ. ಸಿದ್ದರಾಮಯ್ಯನವರು ಇದರ ಹೊರತಾಗೇನಿಲ್ಲ. ತಮ್ಮ ಆಢಳಿತಾವಧಿಯ ಇಷ್ಟು ವರ್ಷಗಳು ಹಿಂದು ಧರ್ಮವನ್ನು ಅದೆಷ್ಟು ತುಳಿದರೆಂಬುದು ಎಲ್ಲರಿಗೂ ಗೊತ್ತಿದೆ.

ಸಿದ್ದರಾಮಯ್ಯನವರು ತಮ್ಮನ್ನು ತಾವು ಸರ್ವಾಧಿಕಾರಿ ಎಂದುಕೊಂಡು ಕೆಟ್ಟ ರೀತಿಯಲ್ಲಿ ವರ್ತಿಸಿದ್ದರು. ತಮ್ಮಿಂದ ಎಷ್ಟು ಆಗುತ್ತೋ ಅಷ್ಟು ಹಿಂದುಗಳ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದರು. ದೇವಸ್ಥಾನಗಳ ಮೇಲೂ ಕಣ್ಣು ಹಾಕಿದ್ದರು. ಸರಣಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ ಮತಾಂಧರಿಗೆ ಬೆಂಬಲವೂ ಕೊಟ್ಟಿದ್ದರು. ಮೀನು ತಿಂದು ದೇವಸ್ಥಾನಕ್ಕೆ ಹೋಗಿ ಬಂದು ತುಂಬಾ ಗರ್ವದಿಂದ ಮಾತಾಡಿದ್ದರು.

ಸಿದ್ದರಾಮಯ್ಯನವರು ಮೂಢನಂಬಿಕೆ ಪ್ರತಿಬಂಧ ವಿಧೇಯಕವನ್ನೇನೋ ಮಂಡಿಸುವ ಮಾತನ್ನಾಡಿದ್ದರು. ಆದರೆ ಅವರ ಕಾರಿನ ಮೇಲೆ ಕಾಗೆ ಕುಳಿತುಬಿಟ್ಟಿತು ಎನ್ನುವ ಕಾರಣಕ್ಕಾಗಿ ಅವರು ತಮ್ಮಕಾರನ್ನೇ ಬದಲಾಯಿಸಿ ಬಿಟ್ಟಿದ್ದರು. ಅದು ಮೂಢನಂಬಿಕೆ ಅಲ್ವಾ..? ಕೇವಲ ಕಾಗೆ ಕೂತ ಕಾರಣಕ್ಕಾಗಿ ಅಷ್ಟೊಂದು ಸುಂದರವಾಗಿರುವ ಕಾರನ್ನು ಯಾರಾದ್ರು ಬದಲಾಯಿಸುತ್ತಾರೆಯೇ?

ಯಾವುದಾವುದೋ ಊರಿಗೆ ಹೋದಾಗ ದರ್ಗಾಕೆ ಹೋಗಲು ಸಿದ್ದರಾಮಯ್ಯನವರಿಗೆ ಸಮಯ ಸಿಕ್ಕಿತು. ಆದರೆ ದೇವಸ್ಥಾನಕ್ಕೆ ಹೋಗಲು ಸಮಯ ಸಿಕ್ಕಿರಲಿಲ್ಲ. ಆದರೆ ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ತಮ್ಮನ್ನು ತಾವು ಹಿಂದು, ನನ್ನ ಹೆಸರಲ್ಲೇ ರಾಮನಿದ್ದಾನೆ ಎಂದು ಹೇಳಿಕೊಂಡು ಓಡಾಡಲು ಶುರು ಮಾಡಿದ್ದಾರೆ.

ರಾಮಾಯಣವೇ ನಡೆದಿಲ್ಲ ಸುಳ್ಳು ಅಂದವರು ಇವರೇ. ಈಗ ತಮ್ಮ ಹೆಸರಲ್ಲೇ ರಾಮನಿದ್ದಾನೆ ಅಂತ ಹೇಳುತ್ತಿದ್ದಾರೆ. ಇವರನ್ನ ನೋಡಿದರೆ ಪಾಪ ಅನಿಸುತ್ತೆ. ಯಾಕಂದ್ರೆ ಚುನಾವಣೆ ಸಲುವಾಗಿ ಏನೆಲ್ಲ ಮಾಡ್ತಾರಲ್ಲ ಅಂತ. ನನ್ನನ್ನು ಏನು ಬೇಕಾದರೂ ಕರೆಯಿರಿ ಆದರೆ ಹಿಂದೂ ಎಂದು ಕರೆಯಬೇಡಿ ಎಂದು ಹೇಳುತ್ತಿದ್ದ ನೆಹರು ಅವರ ಮರಿಮೊಮ್ಮಗ ರಾಹುಲ್ ಅವರು ತಮ್ಮನ್ನು ತಾವು ಶಿವನ ಭಕ್ತ ಎಂದು ಹೇಳಿಕೊಳ್ಳಲು ಶುರು ಮಾಡಿದ್ದಾರೆ. ಉತ್ತರ ಪ್ರದೇಶದ ಒಂದೇ ಒಂದು ದೇವಸ್ಥಾನವನ್ನು ಬಿಡದೇ ಟೆಂಪಲ್ ರನ್ ಮಾಡಿಬಿಟ್ಟರು. ಈಗ ಅದೇ ರಾಹುಲ್ ಗಾಂಧಿ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದಾರೆ. ಕರ್ನಾಟಕದಲ್ಲೂ ಟೆಂಪಲ್ ರನ್ ಶುರು ಮಾಡಿದ್ದಾರೆ.

ಆದರೆ ಈ ಸಲ ರಾಹುಲ್ ಗಾಂಧಿಯವರಿಂದ ಹಿಡಿದು ಸಿದ್ದರಾಮಯ್ಯರವರೆಗೆ ಎಲ್ಲರೂ ತಮ್ಮನ್ನೂ ತಾವು ಹಿಂದೂ ಎಂದು ಬಿಂಬಿಸಲು ಹೆಣಗಾಡುತ್ತಿದ್ದಾರೆ. ಇಷ್ಟು ದಿನ ಧರ್ಮವನ್ನ ಒಡೆಯುವ ಪ್ರಯತ್ನ ಮಾಡಿದವರೆಲ್ಲಾ, ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿರುವವರೆಲ್ಲಾ ಇಂದೂ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ.

ರಾಹುಲ್ ಗಾಂಧಿಯವರ ಕರ್ನಾಟಕದಲ್ಲಿ ಟೆಂಪಲ್ ರನ್ ಶುರು ಮಾಡಿದರೂ ಕೂಡಾ ಆ ಒಂದು ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ್ದಾರೆ. ಅದು ಯಾವ ದೇವಸ್ಥಾನ? ಯಾಕೆ ಆ ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದರು? ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರಲ್ಲಿ ಕಾಡುತ್ತಲಿವೆ. ಆ ಸುಪ್ರಸಿದ್ಧ ದೇವಸ್ಥಾನ ಇರುವ ಊರಿಗೆ ಹೋದರೂ ಕೂಡಾ ಆ ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ್ದಾರೆ.

ಅದುವೇ ವಿಶ್ವ ಪ್ರಸಿದ್ಧಿಯನ್ನು ಹೊಂದಿರುವ ಹಂಪಿಯ ವಿರೂಪಾಕ್ಷ ದೇವಾಲಯ!!

ಹಂಪಿಯು ಕೇವಲ ಪ್ರವಾಸಿತಾಣವಲ್ಲ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಮನೋಕಾಮನೆಗಳನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿದೆ. ನೂರಾರು ದೇವಾಲಯ, ಸಾವಿರಾರು ಸ್ಮಾರಕಗಳನ್ನು ಹೊಂದಿರುವ ಹಂಪಿಯ ವಿಶೇಷ ಆಕರ್ಷಣಿಯ ಅಂದ್ರೆ ಅದು ವಿರುಪಾಕ್ಷ ದೇವಾಲಯ. ಇದಕ್ಕೆ ಪಂಪ ದೇವಾಲಯ ಎಂತಲೂ ಕರೆಯುತ್ತಾರೆ. ನೂರಾರು ವರ್ಷಗಳ ಕಾಲ ಇತಿಹಾಸವಿರುವ ವಿರುಪಾಕ್ಷದೇವಾಲಯಕ್ಕೆ ಇಂದಿಗೂ ಸಹಸ್ರಾರು ಭಕ್ತರು ಆಗಮಿಸಿ ದಿನವು ವಿಶೇಷ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ.

ಅಂತಹ ವಿಶ್ವ ಪ್ರಸಿದ್ಧಿಯನ್ನು ಪಡೆದ ಹಂಪಿಗೆ ರಾಹುಲ್ ಹೋಗಿದ್ದರು. ಆದರೆ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಹೋಗಲು ನಿರಾಕರಿಸಿದ್ದಾರೆ. ಎಲ್ಲಾ ಜನ ಹಂಪಿಗೆ ಹೋಗೋದೇ ವಿರೂಪಾಕ್ಷ ದೇವಾಲಯವನ್ನು ನೋಡಲು. ಅಂತಹುದರಲ್ಲಿ ಅಲ್ಲಿಗೆ ವಿರುಪಾಕ್ಷ ದೇವಾಲಯಕ್ಕೆ ಹೋಗೋದಕ್ಕೆ ನಿರಾಕರಿಸಿದ್ದಾರೆಂದರೆ ಅದಕ್ಕೆ ದೊಡ್ಡ ಕಾರಣವಿದೆ. ಆ ಕಾರಣವೇನು ಗೊತ್ತಾ? ಹಿಂದೆ ಒಂದು ಬಾರಿ ರಾಹುಲ್ ಗಾಂಧಿಯವರ ಅಪ್ಪ ರಾಜೀವ್ ಗಾಂಧಿ ಕೂಡಾ ವಿರೂಪಾಕ್ಷ ದೇವಾಲಯಕ್ಕೆ ಒಮ್ಮೆ ಭೇಟಿ ಮಾಡಿದ ನಂತರ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಯಿತು ಎಂದು ನಂಬಲಾಗಿದೆ.

ಮತ್ತೊಂದು ಕಾರಣವೂ ಇದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು 1992 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತದ ನಂತರದ ಎಸ್. ಬಂಗಾರಪ್ಪನವರು ತನ್ನ ಅಧಿಕಾರವನ್ನೇ ಕಳೆದುಕೊಂಡರು ಎನ್ನಲಾಗಿದೆ.

ಈ ಭಯದಿಂದಲೇ ರಾಹುಲ್ ಗಾಂಧಿ ವಿರೂಪಾಕ್ಷ ದೇವಾಲಯಕ್ಕೆ ಹೋಗಲು ನಿರಾಕರಿಸಿದ್ದರು. ಈ ವಿಷಯವನ್ನೆಲ್ಲಾ ಅರಿತ ರಾಹುಲ್ ಗಾಂಧಿ ತನ್ನ ಅಧಿಕಾರಕ್ಕೆ ಎಲ್ಲಿ ಕುತ್ತು ತರುತ್ತದೋ ಎಂಬ ಭಯದಿಂದ ಹಂಪಿಗೆ ಹೋದವರು ವಿರೂಪಾಕ್ಷ ದೇವಾಲಯಕ್ಕೆ ಹೋಗಲಿಲ್ಲ.

ಹಂಪಿ ಮುಸಲ್ಮಾನರ ದಾಳಿಯ ವಿರುದ್ಧ ದಕ್ಷಿಣ ಭಾರತಕ್ಕೆ ರಕ್ಷೆಯಾಗಿ ನಿಂತ ವಿಜಯನಗರದ ರಾಜರ ರಾಜಧಾನಿಯಾಗಿ ಮೆರೆದ ಜಾಗ. ಮುತ್ತು-ಹವಳಗಳನ್ನು ಬೀದಿಬದಿಯಲ್ಲಿ ಮಾರಿದ ಸಮೃದ್ಧಿಯ ಸಿರಿವಂತಿಕೆಯ ನೆನಪಾಗಿ ಉಳಿದಿರುವ ಗುರುತದು. ಎಂತೆಲ್ಲ ವೈಭವಗಳನ್ನು ಕಂಡು ಮೆರೆದು ಈಗ ಹೃದಯವಿದ್ರಾವಕ ರೀತಿಯಲ್ಲಿ ಭಗ್ನವಾಗಿ ಕುಳಿತು ಮನ ಮರುಗಿಸುವ ವಿಶ್ವ ಪರಂಪರೆ ತಾಣವದು.

ಅಂತಹ ಸುಪ್ರಸಿದ್ಧ ವಿಜಯ ನಗರ ಸಾಮ್ರಾಜ್ಯ ಮತಾಂಧರ ದಾಳಿಯಿಂದ ಪತನವಾಯಿತು. ಆ ಕಾರಣದಿಂದಲೋ ಏನೂ ವಿರುಪಾಕ್ಷ ದೇವ ಮತಾಂಧರ ಬೆಂಬಲಕ್ಕೆ ನಿಂತ ಕಾಂಗ್ರೆಸ್ಸಿಗರ ಮೇಲೆ ಕೋಪ ತೀರಿಸಿಕೊಂಡಿಬಹುದು ಅಂತ ಹೇಳಲಾಗುತ್ತಿದೆ. ಅದರಿಂದಲೇ ರಾಜೀವ್ ಗಾಂಧಿ ವಿರುಪಾಕ್ಷ ದೇವಾಲಯಕ್ಕೆ ಹೋಗಿ ಬಂದ ನಂತರ ಸಾವಿಗೀಡಾಗಿದ್ದರು ಅಂತ ಜನರು ಹೇಳುತ್ತಾರೆ.

ಅದೇನೇ ಇರಲಿ ಕರ್ನಾಟಕಕ್ಕೆ ಬಂದ ರಾಹುಲ್ ಗಾಂಧಿ ಹಂಪಿಗೆ ಭೇಟಿ ಕೊಟ್ಟರೂ ಕೂಡಾ ವಿರುಪಾಕ್ಷ ದೇವಾಲಯಕ್ಕೆ ಹೋಗಿಲ್ಲ ಎನ್ನುವುದಂತೂ ಸತ್ಯ. ಆ ದೇವಸ್ಥಾನಕ್ಕೆ ಹೋದರೆ ತಾನು ಮುಂಬರುವ ಚುನಾವಣೆಯಲ್ಲಿ ಸೋಲಬಹುದೆಂದು ಅನ್ನಿಸಿರಬಹುದು.

– Team Nationalist Views

©2018 Copyrights Reserved

 •  
  1.6K
  Shares
 • 1.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com