Connect with us
Loading...
Loading...

ಪ್ರಚಲಿತ

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಸಂಜಯ್ ಪಾಟೀಲ್ ರ ಈ‌ ಖಡಕ್ ಭಾಷಣ!! ಕಾಂಗ್ರೆಸ್ ನಿಂದ ದೂರು, FIR ದಾಖಲು!! ಅಷ್ಟಕ್ಕೂ ಭಾಷಣದಲ್ಲಿ ಅವರು ಹೇಳಿದ್ದೇನು ಗೊತ್ತಾ?

Published

on

 • 1.3K
 •  
 •  
 •  
 •  
 •  
 •  
 •  
  1.3K
  Shares

ಕರ್ನಾಟಕದಲ್ಲಿ ಬೇಸಿಗೆಯ ಬಿರುಬಿಸಿಲ ಕಾವಿಗಿಂತ ಹೆಚ್ಚಾಗಿ‌ ಚುನಾವಣೆಯ ಕಾವು ಏರುತ್ತಿದೆ. ರಾಜಕೀಯ ಪಕ್ಷಗಳು ಬಿರುಬಿಸಿಲೆನ್ನುವುದನ್ನೂ ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ಬೆವರು ಹರಿಸುತ್ತ ಶತಾಯಗತಾಯವಾಗಿ ಗೆಲ್ಲಲು ರಣತಂತ್ರಗಳನ್ನ ರೂಪಿಸುತ್ತಿದ್ದಾರೆ.

ಒಂದು ಕಡೆ ಸಿಎಂ ಸಿದ್ದರಾಮಯ್ಯ ಸೋಲಿನ ಸುಳಿಯಲ್ಲಿ ಸಿಲುಕಿ ತನ್ನ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ವಿಚಾರ ಮಾಡುತ್ತಿರಬೇಕಾದರೆ ಇತ್ತ ಬಿಜೆಪಿಯನ್ನ ಅಧಿಕಾರಕ್ಕೆ ತಂದು ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಮತ್ತೊಂದು ಗರಿ ನೀಡಲು ಅಮಿತ್ ಶಾಹ್ ರಣತಂತ್ರ ರೂಪಿಸುತ್ತಿದ್ದಾರೆ. ಅತ್ತ ಜೆಡಿಎಸ್ ತಾನು ಈ ಬಾರಿಯ ಚುನಾವಣೆಯಲ್ಲಿ ಕೆಲವೊಂದಿಷ್ಟು ಸೀಟು ಗೆದ್ದು ಕಿಂಗ್ ಮೇಕರ್ ಆಗಿ ತನ್ನ ಪಕ್ಷದ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿಯಾಗಿ ಮಾಡಲು ಹೆಣಗಾಡುತ್ತಿದೆ.

ರಾಜ್ಯದಲ್ಲಿ ಈ ಚುನಾವಣಾ ಕಾವಿನಲ್ಲಿ ಸಾಕಷ್ಟು ಪ್ರಯತ್ನಗಳಿ ಈ ಮೂರೂ ಪಕ್ಷಗಳಿಂದ ನಡೆಯುತ್ತಿರಬೇಕಾದರೆ ಮತದಾರರು ಯಾರ ಪರ ನಿಂತು ಯಾವ ಪಕ್ಷಕ್ಕೆ ಅಧಿಕಾರ ಒಲಿದು ಬರುತ್ತೆ ಅನ್ನೋದನ್ನ ಮೇ 12 ರಂದು ನಿರ್ಧರಿಸಲು‌ ಕಾದು ಕುಳಿತಿದ್ದಾನೆ.

ಮುಸ್ಲಿಂ ತುಷ್ಟೀಕರಣ, ಹಿಂದುಗಳನ್ನ ಜಾತಿ ಜಾತಿಯ ಆಧಾರದಲ್ಲಿ ಒಡೆದು ಪ್ರತ್ಯೇಕ ಧರ್ಮದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ ಹಿಂದುಗಳನ್ನ ಓಲೈಸಲು ಹಾಗು ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ, ಧರ್ಮ ವಿಭಜನೆಯ ಬಗ್ಗೆ ನಾಡಿನ ಜನತೆಗೆ ತಿಳಿಸಿ ಕಾಂಗ್ರೆಸ್ಸನ್ನ ಸೋಲಿಸಲು ಬಿಜೆಪಿ ಸಜ್ಜಾಗಿ ನಿಂತಿದೆ.

ಧರ್ಮ ವಿಭಜನೆಗೆ ನಾವು ಬಿಡುವುದಿಲ್ಲ, ಸಿದ್ದರಾಮಯ್ಯನವರ ಎರಡನೆಯ ಮುಖವನ್ನ ಜನರೆದುರಿಟ್ಟು ಧರ್ಮರಕ್ಷಣೆಗೆ ಮುಂದಾಗುತ್ತೇವೆ ಎಂದು ಬಿಜೆಪಿ ಅದಾಗಾಲೇ ಕಾಂಗ್ರೆಸ್ ವಿರುದ್ಧ ರಣಕಹಳೆ ಊದಿಬಿಟ್ಟಿದೆ.

ಈ ಮಧ್ಯೆ ರಾಜ್ಯದ ಬಿಜೆಪಿ ಶಾಸಕರೊಬ್ಬರು ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆಯೊಂದು ಇದೀಗ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿದೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಂಜಯ್ ಪಾಟೀಲರ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ‌ವೈರಲ್ ಆಗುತ್ತಿದ್ದು‌ ಅದರ ಬಗ್ಗೆ ಚರ್ಚೆ ವಾಗ್ವಾದಗಳು ಶುರುವಾಗಿಬಿಟ್ಟಿವೆ. ಸಂಜಯ್ ಪಾಟೀಲ್ ಈ ಚುನಾವಣೆಯನ್ನ ಹಿಂದೂ Vs ಮುಸ್ಲಿಂ ಅನ್ನುವ ರೀತಿಯಲ್ಲಿ ನೀಡಿರುವ ಈ‌ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಅಷ್ಟಕ್ಕೂ ಶಾಸಕ ಸಂಜಯ್ ಪಾಟೀಲ್ ಹೇಳಿದ್ದೇನು?

ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಸಂಜಯ್ ಪಾಟೀಲ್ “ಈ ಚುನಾವಣೆ ಹಿಂದುಗಳ ಭವಿಷ್ಯತ್ತಿನ ಉಳಿವಿನ‌ ಚುನಾವಣೆಯಾಗಿದೆ,‌ ಹಿಂದುಗಳು ಬದುಕುಳಿದರೆ ಮಾತ್ರ ರಸ್ತೆ, ನಳ, ನೀರು, ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಹಿಂದುಗಳ ಅಸ್ತಿತ್ವವೇ ಉಳಿಯಲಿಲ್ಲವೆಂದ ಮೇಲೆ ಯಾವ ಅಭಿವೃದ್ಧಿಯಾದರೇನು ಪ್ರಯೋಜನ? ಹಾಗಾಗಿ ಹಿಂದುತ್ವದ ರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆಯಿದೆ, ಈ ಬಾರಿ ಹಿಂದೂಗಳ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ” ಎಂದಿದ್ದಾರೆ.

ಸಂಜಯ್ ಪಾಟೀಲ್ ಮಾತನಾಡುತ್ತ “ನನ್ನ ಎದೆ ಮೇಲೆ ಕೈಯಿಟ್ಟುಕೊಂಡು ಹೇಳ್ತೀನಿ ಈ ದೇಶ ಹಿಂದುಗಳ ದೇಶ ಹಾಗು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ. ಆಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಏನು ಮಾಡಲು ಬೇಕಾದರೂ ನಾನು ಸಿದ್ಧ. ಯಾರು ಬಾಬ್ರೀ ಮಸೀದಿ ಕಟ್ಟುವ ಕನಸು ಕಾಣುತ್ತಿದ್ದಾರೋ, ಟಿಪ್ಪು ಜಯಂತಿ ಆಚರಿಸಲು ಸಿದ್ಧವಾಗಿದ್ದಾರೋ ಅಂಥವರು ಕಾಂಗ್ರೆಸ್ಸಿಗೆ ಮತ ಹಾಕಲಿ. ಶಿವಾಜಿ ಮಹಾರಾಜರ ಆದರ್ಶವನ್ನ ಮೆಚ್ಚುವರು, ಸಂಭಾಜಿ ಮಹಾರಾಜರ ಸಾಹಸವನ್ನ ಅನುಸರಿಸುವರು, ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಲು ಸಿದ್ಧರಾರೋರು, ಲಕ್ಷ್ಮೀ ಮಂದಿರದಲ್ಲಿ ಪೂಜೆ ಪುನಸ್ಕಾರ ಮಾಡುವವರನ್ನ ಇಷ್ಟಪಡುತ್ತೀರಾದರೇ ಬಿಜೆಪಿಗೆ ಮತ ನೀಡಿ” ಎಂದು ಹೇಳಿದ್ದಾರೆ.

FIR_Against_BJP_Leader_Sanjay_Patil___ಸಂಜಯ್​_ಪಾಟೀಲ್​​_ವಿರುದ್ಧ_ಎಫ್​​ಐಆರ್​​​​

ಬಿಜೆಪಿಯ ಈ ಶಾಸಕನ ಭಾಷಣ ಇದೀಗ ಕಾಂಗ್ರೆಸ್ಸನ್ನ ಕೆರಳಿಸಿದ್ದು ಸಂಜಯ್ ಪಾಟೀಲರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಈ ಹಿಂದೆಯೂ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ಸಿನ ವಿರುದ್ಧ ಗುಡುಗಿದ್ದ ಸಂಜಯ್ ಪಾಟೀಲ್:

ಟಿಪ್ಪು ಜಯಂತಿ ಆಚರಣೆ ತಪ್ಪಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋದರೂ ತಪ್ಪಿಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಶಾಸಕ ಸಂಜಯ್ ಪಾಟೀಲ್ ಕಿಡಿಕಾರಿದ್ದರು. ಟಿಪ್ಪು ಜಯಂತಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಭಜರಂಗದಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.

‘ಸಿದ್ದರಾಮಯ್ಯ ನೀವು ಮೈಸೂರಿನಲ್ಲಿ ಹುಟ್ಟಿದ್ದೀರಾ?…ಅಥವಾ ಪಾಕಿಸ್ತಾನದ ಲಾಹೋರ್ ಲ್ಲಿ ಹುಟ್ಟಿದ್ದೀರಾ’…ಹಿಂದೂಗಳ ಭಾವನೆಗೆ ಧಕ್ಕೆ ತಂದು ಟಿಪ್ಪು ಜಯಂತಿ ಆಚರಿಸಿದರೆ, ಸಿಎಂ ಸಿದ್ದರಾಮಯ್ಯ ಯಾರವ? ಎಂದು ಕೇಳಬೇಕಾಗುತ್ತದೆ’ ಎಂದಿದ್ದರು.

ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಕಸಿದುಕೊಳ್ಳವ ಶಕ್ತಿ ಹಿಂದುಗಳಿದೆ ಎಂದ ಅವರು, ‘ಟಿಪ್ಪು ಜಯಂತಿಯ ದಿನ ಎಲ್ಲರ ಮನೆ ಮುಂದೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಪೂಜೆ ಮಾಡೋಣ’ ಎಂದು ಕರೆ ನೀಡಿದ್ದರು. ಮೀನು ತಿಂದು ಧರ್ಮಸ್ಥಳಕ್ಕೆ ಹೋದರೆ ತಪ್ಪಿಲ್ಲ ಅಂತ ಹೇಳುವ ಸಿಎಂ ಸಿದ್ದರಾಮಯ್ಯ ಅವರಿಗೆ ಆಚಾರ, ವಿಚಾರ ಗೊತ್ತಿಲ್ಲ ಅಂತಾ ಶಾಸಕ ಸಂಜಯ್ ಪಾಟೀಲ್ ಗುಡುಗಿದ್ದರು.

ಇದೀಗ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಚುನಾವಣಾ ಅಧಿಕಾರಿಯಿಂದ ಐಪಿಸಿ ಸೆಕ್ಷನ್‌ 153(A), 259(A) ಅಡಿ ಪ್ರಖರಣ ದಾಖಲಾಗಿದ್ದು ದೂರಿನಲ್ಲಿ ಸಂಜಯ್ ಪಾಟೀಲ್ ಅವರು ಆಭ್ಯರ್ಥಿಯಾಗಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

– Team Nationalist Views

Nationalist Views ©2018 Copyrights Reserved

 •  
  1.3K
  Shares
 • 1.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com