Connect with us
Loading...
Loading...

ಇತಿಹಾಸ

ಪಂಜಾಬಿನಲ್ಲಿ ಹಿಂದೂಗಳ ಹೆಣ ಬಿದ್ದಿದ್ದವು, ಅದಕ್ಕಾಗೇ ಇತ್ತ ಇವರ ಹೆಣ ಬೀಳಬೇಕಾಯಿತು!!!

Published

on

 • 2.6K
 •  
 •  
 •  
 •  
 •  
 •  
 •  
  2.6K
  Shares

“ತನ್ನ ದೇಶಕ್ಕೆ ನಿಷ್ಠೆ ತೋರಿಸುವುದು ಪಾಪವೆಂದು ಗಣಿಸಲ್ಪಟ್ಚರೆ, ನಾನು ಅಂಥ ಪಾಪ ಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಅದು ಪುಣ್ಯದ ಕೆಲಸವೇ ಆಗಿದ್ದರೆ ಅಂಥ ಶ್ರೇಯಸ್ಸನ್ನು ನಾನು ವಿನಮ್ರನಾಗಿ ಅರ್ಹತೆಯೊಡನೆ ಸ್ವೀಕರಿಸುತ್ತೇನೆ.”

ನಾಥೂರಾಮ ಗೋಡ್ಸೆ

ಈ ಮೇಲಿನ ಮಾತನ್ನು ಆತನಾಡಿದ್ದಾನೆಂದರೆ ಅದರಲ್ಲೇ ತಿಳಿಯುತ್ತದೆ ಆ ವ್ಯಕ್ತಿತ್ವ ದೇಶವನ್ನ ಅದೆಷ್ಟು ಪ್ರೀತಿಸುತ್ತಿತ್ತೆಂದು ಹಾಗೂ ದೇಶಕ್ಕಾಗಿ ಯಾವ ಕೆಲಸ ಮಾಡಲು ಸಿದ್ಧನಾಗಿದ್ದ!!!

ಮತ್ತೆ ಗಾಂಧೀಜಿ ಎಂದರೆ?

ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವ ಮಹಾತ್ಮ ಹಾಗೂ ದೇಶವೇ ಗೌರವಿಸುತ್ತಿದ್ದ ಒಂದು ಚೇತನ ಆದರೆ ಈ ಚೇತನವನ್ನ ಕೊಂದದ್ದು ಒಬ್ಬ ಅಪ್ರತಿಮ ದೇಶಭಕ್ತ!! ಆತನ ಧ್ಯೇಯವೆಂತದೆಂದರೆ ಪ್ರಾಣಾರ್ಪಣೆ ಮಾಡಿಯಾದರು ದೇಶದ ಅಂಥಸತ್ವ ಕಾಪಾಡುವೆ ಎಂದು ಹೇಳುತ್ತಿದ್ದ.

ಈ ಭಕ್ತ ಗಾಂಧಿಯನ್ನ ಕೊಂದನೆಂದರೆ ಅದಕ್ಕೆ ಅದೆಂತಹ ಕಾರಣವಿರಬಹುದು ಒಮ್ಮೆ ಯೋಚಿಸಿ.

ಗಾಂಧೀಜಿಯನ್ನು ಆತ ಕೊಂದದ್ದು ಎಲ್ಲರಿಗು ತಿಳಿದ ವಿಷಯವೇ ಆದರೆ ಅವನ ಬಗ್ಗೇಲೆ ನಮಗೆಲ್ಲ ಸರೀಲಿಯಾಗಿ ತಿಳಿದೇ ಇಲ್ಲ!!

ಅಷ್ಟಕ್ಕು ಯಾರು ಈ ಗೋಡ್ಸೆ???

ನಾಥೂರಾಮ ಗೋಡ್ಸೆ ಒಂದು ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವ ಹಾಗೂ ಇವನದು ತಂದೆ-ತಾಯಿ, ಅಣ್ಣ-ಅತ್ತಿಗೆ, ತಮ್ಮ ನಾದಿನಿಯಿರುವ ಅವಿಭಕ್ತ ಕುಟುಂಬ. ಆದರೆ ಈತ ಮಾತ್ರ ಮದುವೆ ಎಂಬ ಜಂಜಾಟಕ್ಕೆ ಸಿಲುಕುವುದು ಬೇಡವೆಂದು ಮದುವೆ ಆಗದೆಯೆ ಬ್ರಹ್ಮಚಾರಿ ಜೀವನ ನಡೆಸುತ್ತಿದ್ದ..!!

ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕ ವಯಸ್ಸಿನಿಂದಲೆ ತೊಡಗಿಸಿ ಕೊಂಡಿದವನು ಈ ನಾಥೂರಾಮ ಗೋಡ್ಸೆ!! ಗಣಪತಿ ಉತ್ಸವಗಳಲ್ಲಿ ಸ್ವಾತಂತ್ರ್ಯ ಗೀತೆಗಳನ್ನ ಸ್ವತಃ ರಚಿಸಿ ಹಾಡುತ್ತಿದ್ದ ಕವಿ ಹಾಗೂ ಹಾಡುಗಾರನೀತ!!

ಗಾಂಧೀ ಮತ್ತು ಸುಭಾಷರೆಂದರೆ ಅಚ್ಚುಮೆಚ್ಚು ಈ ಬಾಲಕ ಗೋಡ್ಸೆಗೆ, ಈತ ಬೆಳೆಯುತ್ತ ಬೆಳೆಯುತ್ತ ಹಿಂದೂ ಮಹಾ ಸಭಾದ ಕಾರ್ಯಕರ್ತನಾದ ಅಲ್ಲಿ ದೇಶದ ಅಖಂಡತೆ ದೇಶದ ಮೂಲ ಎಲ್ಲವನ್ನು ತಿಳಿದು ಭಗವದ್ಗೀತೆಯನ್ನು ಕಂಠಪಾಠ ಮಾಡಿಕೊಂಡವನು ಈ ಅಪ್ರತಿಮ ಹಿಂದುತ್ವವಾದಿ!

ಅದೇ ಸಂಧರ್ಭಕ್ಕೆ ದೇಶದಲ್ಲಿ ನಡೆದ ಕೆಲವು ಘಟನೆಗಳು ಆತನ ಮನಸ್ಸಿಗೆ ನೇರವಾಗಿ ಚುಚ್ಚಲಾರಂಭಿಸಿತು, ದೇಶ ವಿಭಜನೆ ಎಂಬ ಘೋರ ಕೆಲಸವೊಂದು ಸ್ವಾತಂತ್ರ್ಯ ಭಾರತದಲ್ಲಿ ನಡೆದೆ ಹೋಯಿತು!!

ದೇಶ ವಿಭಜನೆಯಲ್ಲಿ ಪಾಕಿಸ್ತಾನದ ಎರಡು ಮೂಲೆಗಳಿಂದ ಅಂದರೆ ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಗಡಿಗಳಲ್ಲಿ ನಡೆದ ದುರ್ಘಟನೆಗಳಿಗೆ ಲೆಕ್ಕವೇ ಇಲ್ಲದಂತಾಯಿತು.

ಎರಡೂ ರಾಜ್ಯದಲ್ಲಿದ್ದ ಹಿಂದೂ ಸಹೋದರ ಹಾಗೂ ಸಹೋದರಿಯರ ಮೇಲೆ ನಡೆದ ಅತ್ಯಾಚಾರ, ಅವರ ಮನೆಗೆ ನುಗ್ಗಿ ದಾಂಧಲೆ ಹಾಗೂ ಹೇಳಲಾಗದ ಅನೇಕ ಬೀಬತ್ಸ ಕೆಲಸಗಳು ವಿಭಜನೆಗೊಳಗಾದ ಪಾಪಿ ಪಾಕಿಸ್ತಾನಿ ಹಾಗೂ ಕೆಲವು ನಮ್ಮ ದೇಶದ ಮುಸಲ್ಮಾನರಿಂದ ನಡೆದು ಹೋಯಿತು!!(ದೇಶ ವಿಭಜನೆಯ ದುರಂತದ ಬಗ್ಗೆ ಮುಂದೆ ಒಂದು ದೊಡ್ಡ ಲೇಖನದಲ್ಲಿ ತಿಳಿಸುವೆ)

ಇವೆಲ್ಲ ನಡೆಯುತ್ತಿರುವಾಗ ವಿಭಜನೆಯನ್ನ ಒಪ್ಪಿದ್ದ ಗಾಂಧೀ ನೆಹರೂ ಮಾತ್ರ ನಿಶಬ್ಧವಾಗಿ ಕುಳಿತದ್ದು ಮಾತ್ರ ದುರಂತ!!

ಈ ಸಮಯದಲ್ಲೆ ಹೈದ್ರಾಬಾದ್ ಕೂಡ ಸಂಪೂರ್ಣ ಸ್ವಾತಂತ್ರ್ಯವಾಗಿರಲಿಲ್ಲ. ಅಲ್ಲಿ ಹೈದ್ರಾಬಾದ್ ನಿಜಾಮನ ಆಳ್ವಿಕೆ ನಡೆಯುತ್ತಿತ್ತು. ಅವರುಗಳು ಕೂಡಾ ಪಾಪಿ ಪಾಕಿಸ್ತಾನದ ಜೊತೆ ಕೈ ಜೋಡಿಸಿ ತಾವು ಭಾರತದಿಂದ ಬೇರೆಯಾಗಲು ಉಪಾಯ ಮಾಡಿ ಕಾಯುತ್ತಿದ್ದರು. ಆದರೆ ಇದರ ಅರಿವೇ ಇಲ್ಲದ ದೇಶದ ಪ್ರಾಧಾನಿ ಮಾತ್ರ ಸುಮ್ಮನಿದ್ದದ್ದು ದುರಂತ. ಪುಣ್ಯಕ್ಕೆ ಸರ್ದಾರ್ ವಲ್ಲಭಾಯಿ ಪಟೇಲರು ಇದ್ದಿದ್ದಕ್ಕೆ ಮುಂದೆ ಹೈದ್ರಾಬಾದ್ ನಮ್ಮದಾಗಿಯೇ ಉಳಿಯಿತು!!

ಈ ದುರ್ಘಟನೆಗಳನ್ನೆಲ್ಲ ನೋಡಿ ಕೋಪಗೊಂಡ ಪಟೇಲರು ಪಾಕಿಸ್ತಾನಕ್ಕೆ ಕೊಡಲು ಒಪ್ಪಿದ್ದ 50 ಕೋಟಿ ರೂಪಾಯಿಯನ್ನು ತಡೆದು ಬಿಟ್ಟರು!!

ಇಷ್ಟುದಿನ ಏನು ಮಾತನಾಡದೆ ಕುಳಿತಿದ್ದ ಗಾಂಧೀಜಿ ಈ ವಿಷಯವನ್ನ ಕೇಳಿದಾಕ್ಷಣ ಉಪವಾಸಕ್ಕೆ ಕುಳಿತೇ ಬಿಟ್ಟರು! ಇದನ್ನೆಲ್ಲ ನೋಡಿ ಕೊನೆಗು ಪಟೇಲರು ತಡೆದಿದ್ದ ಹಣವನ್ನ ಬಿಡುಗಡೆ ಮಾಡುವ ಮುಖಾಂತರ ಗಾಂಧೀಜಿಯನ್ನು ಶಾಂತವಾಗಿಸಿದರು.

ಇಲ್ಲಿಗೆ ಅಪ್ಪಟ ದೇಶಭಕ್ತನ ಸಮಾಧಾನದ ಕಟ್ಟೆ ಹೊಡೆಯಿತು. ಆತ ತನ್ನ ಆತ್ಮಿಯನನ್ನು ಕರೆದುಕೊಂಡು ಗಾಂಧೀಜಿಯ ಆಶ್ರಮಕ್ಕೆ ಪ್ರಯಾಣ ಬೆಳೆಸಿಯೇ ಬಿಟ್ಟ!!

ನಾಥೂರಾಮ ತನ್ನ ಆತ್ಮಿಯನೊಡನೆ ಒಂದಾದನು. ಆದರೆ ಆತನಿಗೆ ಗಾಂಧೀಜಿಯ ಕೊಲೆಯ ಸಂಚನ್ನು ಮಾತ್ರ ಹೇಳಿರಲಿಲ್ಲ. ನಾಥೂರಾಮ ಗೋಡ್ಸೆ, ನಾನಾ ಆಪ್ಟೆ ಹಾಗೂ ಮದನಲಾಲ್ ಪಹ್ವಾ ಒಂದಾದರು.

ಮದನಲಾಲ್ ಜನವರಿ 20ರಂದು ಗಾಂಧಿ ಇದ್ದ ಸ್ಥಳದಲ್ಲಿ ಬಾಂಬ್ ಸ್ಪೋಟ ಮಾಡಿ ಸಿಕ್ಕಿಬಿದ್ದ. ಅಷ್ಟೆ ಅವನು ಜೈಲುವಾಸಿ ಆಗಿದ್ದ!!

ಮಹರಾಷ್ಟ್ರದಲ್ಲೇ ಇದ್ದು ಇದನ್ನೆಲ್ಲ ಗಮನಿಸುತ್ತಿದ್ದ ಗೋಡ್ಸೆ ತಾನೇ ಗಾಂಧೀಜಿಯನ್ನ ಕೊಲ್ಲಲು ಹೋಗಬೇಕೆಂದು ಯೋಚಿಸಿ, ನಾನಾ ಆಪ್ಟೆಯನ್ನ ಜೊತೆಯಲ್ಲಿ ಕರೆದು ಕೊಂಡು ಹೊರಟೇಬಿಟ್ಟ.

ಅಂದು ಅಂದರೆ ಜನವರಿ 30, 1948ರಂದು ಸಂಜೆ 5ಕ್ಕೆ ಗಾಂಧೀಜಿಯು ತಮ್ಮ ಬಿರ್ಲಾ ಭವನದ ಪ್ರಾರ್ಥನಾ ಮಂದಿರಕ್ಕೆ ಬರುವವರಿದ್ದರು. ಇದನ್ನೆ ಸಮಯ ಮಾಡಿಕೊಂಡ ಗೋಡ್ಸೆ ಅಲ್ಲಿಗೆ 4.50ಕ್ಕೆ ಹೋಗಿ ಕಾದು ನಿಂತ.

ಸುತ್ತಲಿನ ಕೆಲವು ಸಿಪಾಯಿಗಳು ಇವನನ್ನು ಗಮನಿಸುತ್ತಿದ್ದನ್ನು ಕಂಡುಕೊಂಡ. ಗೋಡ್ಸೆ ಅಲ್ಲಲ್ಲೆ ಇದ್ದ ಗುಂಪುಗಳಲ್ಲಿ ಸೇರಿಕೊಂಡು ಸಿಪಾಯಿಗಳ ಕಣ್ಣು ತಪ್ಪಿಸಿ ಕಾದು ನಿಂತ.

ಅಷ್ಟಕ್ಕೆ ಗಾಂಧೀ ತಮ್ಮ ಆಪ್ತರೊಡನೆ ತಮ್ಮ ಕೊಠಡಿಯಿಂದ ಪ್ರಾರ್ಥನಾ ಮಂದಿರದೆಡೆಗೆ ಬರುವುದನ್ನು ಗಮನಿಸಿ, ಈಗಲೇ ಗಾಂಧೀ ಬಳಿಗೆ ಹೋಗಲು ಸೂಕ್ತವೆಂದು ಮನದಲ್ಲೆ ಅಂದು ಕೊಂಡ. ಅದರಂತೆ ಅವರ ಬಳಿಗೆ ಹೋಗಿ ನಿಂತೆ ಬಿಟ್ಟ ಗೋಡ್ಸೆ!!

ಅವನ ಮನದಲ್ಲಿದ್ದದ್ದು ಮೊದಲು ಗಾಂಧೀಜಿಯ ಸ್ವಾತಂತ್ರ್ಯ ಹೋರಾಟಕ್ಕೇ ನಮಿಸುವುದು‌ ನಂತರ ಅವರ ಪಕ್ಕದಲ್ಲಿದ್ದ ಇಬ್ಬರು ಹೆಂಗಸರಲ್ಲಿ ಒಬ್ಬರು ಅವರಿಗೆ ಬಹಳ ಹತ್ತಿರವೆ ಇದ್ದುದರಿಂದ ಅವರಿಗೂ ಗುಂಡು ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ಅವರನ್ನು ಪಕ್ಕಕ್ಕೆ ತಳ್ಳಿ ಗಾಂಧಿಗೆ ಗುಂಡು ಹಾರಿಸುವುದು.

ಹಾಗೆಯೆ ಅವರ ಮುಂದೆ ಹೋಗುತ್ತಿದ್ದಂತೆ ಜೇಬಿನಲ್ಲಿದ್ದ ಪಿಸ್ತೂಲನ್ನ ಸಿದ್ಧ ಪಡಿಸಿ, ಮೊದಲು ಗಾಂಧೀಜಿಯವರಿಗೆ ನಮಸ್ಕರಿಸಿ, ನಂತರ ಪಕ್ಕದಲ್ಲಿದ್ದ ಆ ಹೆಂಗಸನ್ನು ತಳ್ಳಿ, ಕೈಗೆತ್ತು ಕೊಂಡ ಪಿಸ್ತೂಲಿನಿಂದ 3 ಗುಂಡುಗಳನ್ನ ಕ್ಷಣ ಮಾತ್ರದಲ್ಲೇ ಗಾಂಧೀಜಿಯ ಬಳಿಗೆ ಹಾರಿಸೇ ಬಿಟ್ಟ ಗೋಡ್ಸೆ!!

ಗಾಂಧೀಜಿಯ ಅಚ್ಛೇದ್ಯ, ಅದಾಹ್ಯ, ಅಕ್ಲೇದ್ಯ, ಅಶೋಷ್ಯವಾದ ಆತ್ಮವು ದೇಹಬಿಟ್ಟು ಹೊರಟಿತು!!..

ಮುಂದೆ ಯಾರು ತನ್ನ ಬಳಿ ಬಾರದಿದ್ದಾಗ ತಾನಾಗಿಯೇ ಪೋಲಿಸರನ್ನು ಕರೆದು ಅವರ ಸೆರೆಯಾಳಾದ , ಈ ದೇಶಭಕ್ತನಿಗಿದ್ದ ಒಂದೇ ಉದ್ದೇಶ ದೇಶದ ಹಿಂದೂಗಳ ವಿರುದ್ದ ಪಡೆದ ಕೆಲವು ನಿಲುವುಗಳಿಂದ ಗಾಂಧೀಜಿಯ ಹತ್ಯೇ ಆಗಲೇ ಬೇಕಿತ್ತೆಂಬುದು. ತನ್ನ ಜೀವವನ್ನು ಲೆಕ್ಕಿಸದೇ ಆತ ಗಾಂಧೀಜಿಯಂತ ಗಾಂಧೀಯನ್ನೆ ಕೊಲ್ಲಲು ತಯಾರಾಗಿ ಅದರಲ್ಲಿ ಯಶಸ್ವಿಯು ಆದ.

ಕೊನೆಗೆ ಆತನೊಡನೇ ಜೊತೆಯಲ್ಲೇ ಇದ್ದ ಗೆಳೆಯ ನಾನಾ(ನಾರಾಯಣ) ಆಪ್ಟೆಯನ್ನು ಜೈಲಿಗೆ ದೂಡಿದರು. ಜೊತೆಯಲ್ಲೇ ಮದನಲಾಲನು ದೆಹಲಿ ಪೋಲಿಸರ ಸೆರೆಯಾಳಾಗಿದ್ದ. ನಂತರದ ವಿಚಾರಣೆಯಲ್ಲಿ ಗೋಡ್ಸೆಯ ತಮ್ಮ ಗೋಪಾಲ ಗೋಡ್ಸೆ, ವಿಷ್ಣು ಕರಕರೆ, ದಿಗಂಬರ ಬಡಗೆ ಕೊನೆಯಲ್ಲಿ ಹುಡುಕಾಟ ಪ್ರೇರಿತವಾಗಿ ವೀರ ಸಾವರ್ಕರ್ ಇಷ್ಟು ಜನರು ಗಾಂಧಿ ಹತ್ಯೆಯ ಕೇಸಿನಲ್ಲಿ ಜೈಲು ಸೇರಿದರು.

ಆದರೆ ಕೊನೆಯಲ್ಲಿ ಆಪ್ಟೆ ಮತ್ತು ನಾಥೂರಾಮನಿಗೆ ಗಲ್ಲು ಶಿಕ್ಷೇಯಾಯಿತು. I

ಈ ಎಲ್ಲದರ ಮಾಹಿತಿ ಹಾಗೂ ನಾಥೂರಾಮನ ಬಗ್ಗೆ ಅಂದಿನ ಭಾರತೀಯರಿಟ್ಟಿದ್ದ ಗೌರವವನ್ನ ಮುಂದಿನ ಬರವಣಿಗೆಯಲ್ಲಿ ತಿಳಿಸುವೆ….

ಕಾಯುತ್ತಿರಿ…

– Hemanth Shekhar

 •  
  2.6K
  Shares
 • 2.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com