Connect with us
Loading...
Loading...

ಅಂಕಣ

ಶಾಕಿಂಗ್: ಆಯೋಧ್ಯೆಯಲ್ಲಿ ರಾಮಮಂದಿರವನ್ನ ಕೆಡವಿದ ಮತಾಂಧ ಬಾಬರ್ ನ ವಂಶಜನಂತೆ ರಾಹುಲ್ ಗಾಂಧಿ; ಸ್ಚತಃ ಇಂದಿರಾ ಗಾಂಧಿಯೇ ಹೇಳಿದ್ದ ಸ್ಪೋಟಕ ಸತ್ಯವೇನು ಗೊತ್ತಾ?

Published

on

 • 4.6K
 •  
 •  
 •  
 •  
 •  
 •  
 •  
  4.6K
  Shares

ಮೊನ್ನೆ ಎರಡು ಘಟನೆಗಳು ನಡೆದಿದ್ದವು: ಒಂದು ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಮಂದಿರವೊಂದಕ್ಕೆ ತೆರಳಿದ್ದಾಗ ಅಲ್ಲಿನ ಅರ್ಚಕರು ರಾಹುಲ್ ಗಾಂಧಿಯ ಗೋತ್ರ ಕೇಳಿದಾಗ ಅದಕ್ಕೆ ಅವರು ತಮ್ಮ ಗೋತ್ರವೇನಂತ ಗೊತ್ತಿಲ್ಲವೆಂದು ಹೇಳಿಕೊಂಡಿದ್ದರು, ಅಷ್ಟಕ್ಕೂ ರಾಹುಲ್ ಗಾಂಧಿ ಜನಿವಾರಧಾರಿ ಬ್ರಾಹ್ಮಣನಲ್ಲವೇ ಅದಕ್ಕೇ ಪಾಪ ಗೋತ್ರ ಗೊತ್ತಿಲ್ಲ ಅನಿಸುತ್ತೆ,

ಎರಡನೆಯ ಘಟನೆಯೆಂದರೆ ರಾಹುಲ್ ಗಾಂಧಿಯ ಪರಮಾಪ್ತರಲ್ಲೊಬ್ಬರಾದ ಶಶಿ ಥರೂರ್ ಮೊನ್ನೆ ಮೊನ್ನೆಯಷ್ಟೇ ಕೋಟ್ಯಾಂತರ ಹಿಂದುಗಳಿಗೆ ಬೈದಿದ್ದ, “ಒಳ್ಳೆಯ ಹಿಂದುಗಳ್ಯಾರೂ ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಲಿ ಅಂತ ಬಯಸುವುದಿಲ್ಲ, ಆ ಜಾಗ ಬಾಬ್ರೀ ಮಸ್ಜಿದ್ ಜಾಗವಾಗಿದೆ, ಮಂದಿರ ನಿರ್ಮಾಣದ ಪರ ಮಾತನಾಡುವುವರು ಕೆಟ್ಟ ಹಿಂದುಗಳು” ಎಂದು ಆತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದ.

ಕಾಂಗ್ರೆಸ್ಸಿನಲ್ಲಿ ಬಾಬರ್ ನ DNA ಇದೆ ಹಾಗು ಈ ಮಾತನ್ನ ನಾವು ಹೀಗೇ ಗಾಳಿಸುದ್ದಿಯಂತೆ ಸಾಕ್ಷಿಯಿಲ್ಲದೆ ಹೇಳುತ್ತಿಲ್ಲ, ಶಶಿ ಥರೂರ್ ಇದೇ ಬಾಬರ್ DNA ಹೊಂದಿರುವ ಪಕ್ಷದ ನಾಯಕ.

ಆದರೆ ರಾಹುಲ್ ಗಾಂಧಿ ಬಾಬರ್ ನ ನೇರ ವಂಶಜನಾಗಿದ್ದು ಹಾಗು ಈ ಮಾತನ್ನ ಖುದ್ದು ಆತನ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯೇ ಒಪ್ಪಿಕೊಂಡಿದ್ದಳು. ಇಂತಹದ್ದೊಂದು ಸ್ಪೋಟಕ ರಹಸ್ಯವನ್ನ ಇಂದಿರಾ ಗಾಂಧಿಯ ಕಾಲದಲ್ಲಿ ಆಕೆಯ ಸಚಿವ ಸಂಪುಟದ ವಿದೇಶಾಂಗ ಸಚಿವಾಲಯದಲ್ಲಿ ಆಫೀಸರ್ ಆಗಿ ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಬಳಿಕ ದೇಶದ ವಿದೇಶಾಂಗ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ.ನಟ್ವರ್ ಸಿಂಗ್ ರವರೇ ತಮ್ಮ ಪುಸ್ತಕದಲ್ಲಿ ಬಹಿರಂಗಗೊಳಿಸಿದ್ದಾರೆ.

ನಟ್ವರ್ ಸಿಂಗ್ ರವರು ಬರೆದ ಪುಸ್ತಕದ ಹೆಸರು “ಪ್ರೊಫೈಲ್ಸ್ & ಲೆಟರ್ಸ್”

ನಟ್ವರ್ ಸಿಂಗ್, ದೇಶದ ಮಾಜಿ ವಿದೇಶಾಂಗ ಸಚಿವ, ಒಮ್ಮೆ ಇಂದಿರಾ ಗಾಂಧಿಯ ಜೊತೆಗೆ ಅಫ್ಘಾನಿಸ್ತಾನ ಪ್ರವಾಸಕ್ಕೆ ತೆರಳಿದ್ದರು. ಇಂದಿರಾ ಗಾಂಧಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಸಡನ್ ಆಗಿ ಆಕೆ ಅಫ್ಘಾನಿಸ್ತಾನದಲ್ಲಿನ ಬಾಬರ್ ನ ಕಬ್ರ್(ಸಮಾಧಿ) ಗೆ ತೆರಳುವ ನಿರ್ಧಾರವನ್ನ ಮಾಡಿದ್ದಳು. ಈ ಎಲ್ಲಾ ವಿಷಯಗಳನ್ನ ನಟ್ವರ್ ಸಿಂಗ್ ರವರು ತಮ್ಮ ‘Profiles and Letters’ ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನಟ್ವರ್ ಸಿಂಗ್ ರವರು ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ “ನಾನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಜೊತೆ ಅಫ್ಘಾನಿಸ್ತಾನ ಪ್ರವಾಸಕ್ಕೆ ತೆರಳಿದ್ದೆ. ಸಡನ್ ಆಗಿ ಇಂದಿರಾ ಗಾಂಧಿ ಬಾಬರ್ ನ ಕಬ್ರ್ ಗೆ ಹೋಗೋದಕ್ಕೆ ನಿರ್ಣಯಿಸಿಬಿಟ್ಟರು, ನಮಗ್ಯಾರಿಗೂ ಆಕೆ ಅಲ್ಯಾಕೆ ಹೋಗಬೇಕಂದುಕೊಂಡಲು ಅನ್ನೋದು ಅರ್ಥವಾಗಲಿಲ್ಲ ಹಾಗು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ, ಕಾರಣ ಆಕೆ ಪ್ರಧಾನಮಂತ್ರಿಯಾಗಿದ್ದಳು. ಪ್ರಧಾನಿ ಹೇಳಿದ ಕೆಲಸ ಮಾಡೋದಷ್ಟೇ ನಮ್ಮ ಕೆಲಸವಾಗಿತ್ತು, ಹಾಗಾಗಿ ಇಂದಿರಾ ಗಾಂಧಿ ಜೊತೆ ನಾನೂ ಬಾಬರ್ ‌ ಸಮಾಧಿಗೆ ತೆರಳಿದ್ದೆ. ಅಲ್ಲಿ ಇಂದಿರಾ ಗಾಂಧಿ ತಲುಪಿದಾಕ್ಷಣ ಸಮಾಧಿಗೆ ತಲೆ ಹಚ್ಚಿದಳು ಹಾಗು ‘ಇಂದು ಹಿಂದೂಸ್ತಾನ ನಿಮ್ಮ ವಂಶಜರ ಕೈಯಲ್ಲಿದೆ, ಇಂದು ಹಿಂದೂಸ್ತಾನದ ಅಧಿಕಾರ ಮತ್ತೆ ನಿಮ್ಮ ವಂಶಜರ ಕೈಗೆ ಬಂದಿದೆ’ ಎಂದರು.

ಇಂದಿರಾ ಗಾಂಧಿಯವರು ಬಾಬರ್‌ನನ್ನ ತನ್ನ ಪೂರ್ವಜಳೆಂದು ಹೇಳಿದ್ದಳು ಹಾಗು ಆತನ ಸಮಾಧಿಯ ಬಳಿ ನಿಂತುಕೊಂಡು ‘ಇಂದು ಹಿಂದೂಸ್ತಾನ ನಿಮ್ಮ ವಂಶಜರ ಅಂದರೆ ನನ್ನ ಬಳಿಯಿದೆ (ಆಕೆ ಆಗ ಭಾರತದ ಪ್ರಧಾನಮಂತ್ರಿ ಅಂದರೆ ಇಡೀ ದೇಶವೇ ಆಕೆಯ ಕೈಯಲ್ಲಿದೆ)’ ಎಂದು ಹೇಳಿದ್ದರು” ಎಂದು ನಟ್ವರ್ ಸಿಂಗ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೇ ಇಂದಿರಾ ಗಾಂಧಿಯ ಗಂಡನ ಹೆಸರು ಫಿರೋಜ್ ಖಾನ್, ತಂದೆಯ ಹೆಸರು ನೆಹರುವಾಗಿತ್ತು. ನೆಹರೂ ಘಿಯಾಸುದ್ದಿನ್ ಘಾಜಿಯ ವಂಶಜನಾಗಿದ್ದ. ಘಿಯಾಸುದ್ದಿನ್ ಘಾಜಿ ಹಾಗು ಬಾಬರ್ ಒಂದೇ ವಂಶದ ಸಂಬಂಧಿಗಳಾಗಿದ್ದವರು, ಇಂದು ಅದೇ ಇಂದಿರಾ ಗಾಂಧಿಯ ಮೊಮ್ಮಗ ಇಂದು ಜನಿವಾರಧಾರಿ ಬ್ರಾಹ್ಮಣನಾಗಿದ್ದು, ಅದೇ ಪಕ್ಷ ಇಂದು ರಾಮಮಂದಿರ ನಿರ್ಮಾಣದ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸುತ್ತಿದೆ (ಇದೇ ಕಾಂಗ್ರೆಸ್ಸಿನ ಕಪಿಲ್ ಸಿಬಲ್ ಬಾಬ್ರೀ ಮಸೀದಿಯ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ವಕಾಲತ್ತು ನಡೆಸುತ್ತಿದ್ದಾನೆ)

ಸ್ವತಃ ಇಂದಿರಾ ಗಾಂಧಿಯೇ ಬಾಬರ್ ನ ಸಮಾಧಿಗೆ ತೆರಳಿ ಇಂಥಾ ಮಾತುಗಳನ್ನಾಡಿ ಬಂದಿದ್ದಳೆಂದ ಮೇಲೆ ಅದೇ ಬಾಬರ್ 500 ವರ್ಷಗಳ ಹಿಂದೆ ಭಾರತದಲ್ಲಿದ್ದ ಭವ್ಯ ರಾಮ ಮಂದಿರವನ್ನ ಕೆಡವಿ ಅದರ ಅವಶೇಷಗಳನ್ನೇ ಬಳಸಿಕೊಂಡು ಅಲ್ಲಿ ಮಸೀದಿಯನ್ನ ಕಟ್ಟಿಸುತ್ತಾನೆ ನಂತರ ಅದನ್ನ ಹಿಂದುಗಳು 1992 ಡಿಸೆಂಬರ್ 6 ರಂದು ಕೆಡವುತ್ತಾರೆ. ತಾವು ಬಾಬರ್ ನ ವಂಶಜರೆನ್ನುವ ಕಾರಣಕ್ಕೇ ಏನೋ ಇಂದು ಕಾಂಗ್ರೆಸ್ ಪಕ್ಷ ಹಿಂದುಗಳ ಆರಾಧ್ಯ ದೈವ ಶ್ರೀರಾಮ ಜನಿಸಿದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಧ್ವನಿಯೆತ್ತದೆ ಬಾಬರ್ ನ ಬಾಬ್ರೀ ಮಸೀದಿಯ ಪರ ನಿಂತುಕೊಂಡಿದ್ದಾರೆ.

K Natwar Singh

ಆಯೋಧ್ಯೆಯಲ್ಲಿ ರಾಮಮಂದಿರವನ್ನ ಬಯಸುವ ಹಿಂದುಗಳು ಕೆಟ್ಟ ಹಿಂದುಗಳು ಅಂತ ಹೇಳುವ ಶಶಿ ಥರೂರ್ ಗೆ ಬಹುಶಃ ರಾಹುಲ್ ಗಾಂಧಿ ತಾನು ಬಾಬರ್ ನ ವಂಶಜ ಎಂಬ ವಿಷಯವನ್ನೇನಾದರೂ ತಿಳಿಸಿದ್ದಾರೆಯೇ? ಅದಕ್ಕಾಗಿಯೇ ಆತ ಅದು ಬಾಬ್ರೀ ಮಸೀದಿ ಜಾಗ ಹೊರತು ರಾಮ ಜನಿಸಿದ ಸ್ಥಳವಲ್ಲ ಅಂತ ಹೇಳಿರಬಹುದೇನೋ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಚುನಾವಣಾ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ ರಾಹುಲ್ ಗಾಂಧಿ ಹಿಂದುವಾಗಿ ಅದರಲ್ಲೂ ಜನಿವಾರಧಾರಿ ಬ್ರಾಹ್ಮಣನಾಗಿ ಬದಲಾಗುವುದರ ಹಿಂದಿನ ರಹಸ್ಯವನ್ನ ಈಗಲಾದರೂ ದೇಶದ ಹಿಂದುಗಳು ಅರ್ಥ ಮಾಡಿಕೊಳ್ಳಬೇಕು.

ಅಷ್ಟೇ ಅಲ್ಲದೆ ಇಂದಿರಾ ಗಾಂಧಿ ಹಾಗು ಬಾಬರ್ ನಡುವಿನ ಸಂಬಂಧವನ್ನ ಆಕೆಯೆ ಹೇಳಿಕೊಂಡಿದ್ದನ್ನ ಬಯಲು ಮಾಡುವ ನಟ್ವರ್ ಸಿಂಗ್ ರವರ ಪುಸ್ತಕವನ್ನ ಓದಿಯಾದರೂ ನಕಲಿ ಗಾಂಧಿ ಕುಟುಂಬದ ಬಗ್ಗೆ ಸ್ವಲ್ಪ ಎಚ್ಚರವಹಿಸಿ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹಗಲಿರುಳು ಶ್ರಮಿಸಿತ್ತಿರುವ ಹಿಂದೂ ರಾಷ್ಟ್ರವಾದಿ ನರೇಂದ್ರ ಮೋದಿಯವರನ್ನ ಬೆಂಬಲಿಸಬೇಕು. ಇಲ್ಲವಾದರೆ ಮುಂದೊಂದು ದಿನ ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದರೆ ಆತನೂ ಬಾಬರ್ ನ ಸಮಾಧಿಗೆ ತೆರಳಿ ಇಂದಿರಾ ಗಾಂಧಿ ಹೇಳಿದ್ದ ಮಾತುಗಳನ್ನೇ ಆಡಿ ಬರಬಹುದು ಎಚ್ಚರ. ಇಂತಹ ನಕಲಿ, ಢೋಂಗಿ ಹಿಂದೂವಾದಿಗಳಿಂದ ಸ್ವಲ್ಪ ದೂರವಿರಿ ಎನ್ನುವುದಷ್ಟೇ ನಮ್ಮ ಸಲಹೆ ಹಾಗು ಆಶಯ.

– Vinod Hindu Nationalist

Nationalist Views ©2018 Copyrights Reserved

 •  
  4.6K
  Shares
 • 4.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com