Connect with us
Loading...
Loading...

ಪ್ರಚಲಿತ

ಪ್ರಧಾನಿ ಮೋದಿಯವರಿಂದ ದೇಶದ ಜನತೆಗೆ ಬಿಗ್ ಗಿಫ್ಟ್; ಇನ್ನುಮುಂದೆ ಬರಲಿದೆ ಹೊಸ ಕಾನೂನು; ಏನದು ಗೊತ್ತಾ?

Published

on

 •  
 •  
 •  
 •  
 •  
 •  
 •  
 •  

ಪ್ರಧಾನಿ ಮೋದಿ ವ್ಯಾಪಾರಿಗಳಿಗಾಗಿ ಬಿಗ್ ಗಿಫ್ಟ್ ಒಂದನ್ನ ಘೋಷಣೆ ಮಾಡಿದ್ದಾರೆ. ಶುಕ್ರವಾರದಂದು ತಾಲಕಟೋರಾ ಮೈದಾನದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ವ್ಯಾಪಾರಿಗಳ ಸಮ್ಮೇಳನವನ್ನಿದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಮಾತನಾಡುತ್ತ ಅವರು ಮೇ 23 ರಂದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ವ್ಯಾಪಾರಿಗಳಿಗೆ ರೈತರ ರೀತಿಯಲ್ಲೇ ವ್ಯಾಪಾರಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಜಿಎಸ್‌ಟಿ ಯ ಮೂಲಕ ರೆಜಿಸ್ಟರ್ಡ್ ವ್ಯಾಪಾರಿಗಳಿಗೆ 10 ಲಕ್ಷ ರೂ.ವರೆಗಿನ ದುರ್ಘಟನಾ ವಿಮೆ ನೀಡಲಾಗುವುದು. ಪ್ರಧಾನಮಂತ್ರಿಯವರು ಮಾತನಾಡುತ್ತ ಮುಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ವ್ಯಾಪಾರಿಗಳಿಗಾಗಿ ವ್ಯಾಪಾರಿ ಕಲ್ಯಾಣ್ ಬೋರ್ಡ್ ಸ್ಥಾಪಿಸಲಾಗುವುದು. ವ್ಯಾಪಾರಿಗಳು ಸದಾ ದೇಶದ ಬಗ್ಗೆಯೇ ಯೋಚಿಸುವಂಥವರಾಗಿದ್ದಾರೆ. ದೇಶದ ವ್ಯಾಪಾರಿಗಳಿಂದಾಗಿಯೇ ಈ ಹಿಂದೆ ಭಾರತವನ್ನ ಚಿನ್ನದ ಹಕ್ಕಿ (ಸೋನೇ ಕಿ ಚಿಡಿಯಾ) ಎಂದು ಕರೆಯಲಾಗುತ್ತಿತ್ತು.

ಆದರೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸಿನ ಆಡಳಿತದಲ್ಲಿ ವ್ಯಾಪಾರಿಗಳ ಕುರಿತಾದ ತೀವ್ರ ನಿರ್ಲಕ್ಷ್ಯದಿಂದಾಗಿ ದೇಶ ಅಧೋಗತಿಗೆ ತಲುಪಿತು, ವ್ಯಾಪಾರಿಗಳ ಕ್ಷೇಮವನ್ನ ಕಾಂಗ್ರೆಸ್ ಅಧಿಕಾರದಲ್ಲಿ ನೋಡಿಕೊಳ್ಳಲಿಲ್ಲ. ನಮ್ಮ ದೇಶದಲ್ಲಿರುವ ಕಟು ಸತ್ಯವೇನೆಂದರೆ ದೇಶದ ಸಾಮಾನ್ಯ ವ್ಯಾಪಾರಿಗಳು ಬೆಲೆಯೇರಿಕೆಯ ನಷ್ಟ ಎರಡು ಪಟ್ಟು ಅನುಭವಿಸಿತ್ತಾರೆ. ಬೆಲೆಯೇರಿಕೆ ಕಂಟ್ರೋಲ್ ಆಗುತ್ತದೆಯಾದರೆ ಜೇಬಿನಲ್ಲಿ ಹಣ ಉಳಿಯುತ್ತದೆ, ಆಗ ಮಾರ್ಕೆಟ್ ನಲ್ಲಿ ತಮ್ಮ ವ್ಯಾಪಾರ ವೇಗದಿಂದ ಮುನ್ನಡೆಸುತ್ತಾರೆ.

ಮೊದಲು ದೇಶದಲ್ಲಿ ವ್ಯಾಪಾರಿಗಳಿಗೆ ಕಾಡಿನಲ್ಲಿ ಕಾನೂನು ಹಾಗು ಕಾನೂನಿನಲ್ಲಿ ಜಂಗಲ್ ರಾಜ್ ನಿಂದಾಗಿ ಕಷ್ಟಗಳನ್ನ ಅನುಭವಿಸಬೇಕಾಗುತ್ತಿತ್ತು. 2014 ರಲ್ಲಿ ಯಾವಾಗ ನೀವು ನನ್ನನ್ನ ಕರೆದಿದ್ದರೋ ಆಗ ನಾನಿನ್ನೂ ಪ್ರಧಾನಿಯಾಗಿರಲಿಲ್ಲ. ಆಗ ವ್ಯಾಪಾರಿಗಳು ನನ್ನ‌ ರ‌್ಯಾಲಿಗೆ ಬರಲು ಹೆದರುತ್ತಿದ್ದರು, ಕಾರಣ ಎಲ್ಲಿ ಅವರ ಮೇಲೆ ಐಟಿ ರೇಡ್ ಆಗಿಬಿಡುತ್ತದೆಯೇನೋ ಎಂಬ ಭಯ ಅವರಿಗೆ ಕಾಡುತ್ತಿತ್ತು.‌ ಆಗ ಇದೇ ವೇದಿಕೆಯ ಮೇಲೆ ನಾನು ದೇಶದಲ್ಲಿ ಚಿತ್ರ ವಿಚಿತ್ರ ಕಾನೂನುಗಳಿವೆ,‌ ನಾನು ಅಧಿಕಾರಕ್ಕೆ ಬಂದರೆ ಇಂತಹ ಕಾನೂನುಗಳನ್ನು ರದ್ದುಗೊಳಿಸುತ್ತೇನೆ ಎಂದು ಹೇಳಿದ್ದೆ ಎಂದು ಅವರು ಹೇಳಿದ್ದಾರೆ.

– Team Nationalist Views

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com