Connect with us
Loading...
Loading...

ಅಂಕಣ

ಅಂದು ಇವರಿರದಿದ್ದರೆ ಇಂದು ನಮಗೆ ಮೋದಿಜೀಯಂತ ಬಲಿಷ್ಟ ನಾಯಕ ಸಿಗುತ್ತಿರಲಿಲ್ಲವೇನೋ!! ಆ ಮಹಾನ್ ವ್ಯಕ್ತಿ ಯಾರು ಗೊತ್ತೆ?

Published

on

 • 2.1K
 •  
 •  
 •  
 •  
 •  
 •  
 •  
  2.1K
  Shares

ಹೌದು ಈ ಮಹಾನ್ ವ್ಯಕ್ತಿಯಿರದಿದ್ದರೆ ಇಂದು ನಾವು ನೀವಷ್ಟೇ ಯಾಕೆ ಇಡೀ ಜಗತ್ತೇ ಹಾಡಿ ಹೊಗಳುತ್ತಿರುವ ನರೇಂದ್ರ ಮೋದಿಯವರು ಪ್ರಧಾನಿಯಾಗಿರುತ್ತಿರಲಿಲ್ಲ.

ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ರಾಮನಾಥ್ ಕೋವಿಂದರು ರಾಷ್ಟ್ರಪತಿಯಾಗಿರುತ್ತರಲಿಲ್ಲ,‌ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಗಳಾಗಿರುತ್ತಿರಲಿಲ್ಲ.

ಅಷ್ಟಕ್ಕೂ ಆ ವ್ಯಕ್ತಿ ಯಾರು? ಅವರ ಹಿನ್ನೆಲೆಯೇನು? ಬನ್ನಿ ತಿಳಿದುಕೊಳ್ಳೋಣ!!

ಅವರೇ ಮಾಧವ ಸದಾಶಿವರಾವ್ ಗೊಳವಲ್ಕರ್, ಹೌದು ಆರೆಸ್ನಸ್ಸಿನ ಎರಡನೇ ಸರಸಂಘಚಾಲಕರಾದ ಡಾಕ್ಟರ್ ಗುರೂಜಿ.

ಅವರ ಜೀವನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ!

ನಾಗಪುರದಲ್ಲಿ ಮಾಧವನ ಜನ್ಮವಾಗಿತ್ತು. ಮಾಧವನಿಗೆ ಮರಾಠಿಯಷ್ಟೇ ಪ್ರಭುತ್ವ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿಇತ್ತು. ಅವರು ಶಂಕರಾಚಾರ್ಯ, ರಾಮಾನುಜಾಚಾರ್ಯ ಇವರ ಸಂಸ್ಕೃತದಗ್ರಂಥಗಳನ್ನು ಓದಿದ್ದರು. ಮಾಧವನ ತರಗತಿಯಲ್ಲಿ ಒಮ್ಮೆ ಶಿಕ್ಷಕರು ತುಲಸೀ ರಾಮಾಯಣದ ಮಹಾತ್ಮೆಯನ್ನುಹೇಳಿದರು. ಅವರು ಕೂಡಲೇ ಸಂಪೂರ್ಣ ತುಲಸೀ ರಾಮಾಯಣ ಓದುವುದನ್ನು ನಿಶ್ಚಯಿಸಿದನು. ಮಾಧವನು ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ರಾಮಾಯಣ ಒದುತ್ತಾ ಕುಳಿತಿರುತ್ತಿದ್ದನು. ಭೋಜನದ ಸಮಯದಲ್ಲಿಯೂ ಅವನಿಗೆ ಬಲವಂತವಾಗಿ ಎಬ್ಬಿಸಬೇಕಾಗಿತ್ತು. ಅವನು ರಾತ್ರಿಯಲ್ಲಿ ಸ್ವಲ್ಪ ಸಮಯ ನಿದ್ರೆ ಮಾಡುತ್ತಿದ್ದನು. 5 ದಿನಗಳಲ್ಲಿ ಅವನು ಗ್ರಂಥ ಓದಿ ಮುಗಿಸಿದನು.

ಕೇವಲ ಓದಿದ್ದಲ್ಲದೆ ಅದರಲ್ಲಿರುವಅನೇಕ ದೋಹಾಗಳನ್ನು ಅವನು ಕಂಠಪಾಠ ಮಾಡಿದನು. ನಂತರ ಅವನು ತಾಯಿಗೆ ರಾಮಾಯಣದಕಥೆಗಳನ್ನು ಹೇಳಲಾರಂಭಿಸಿದನು.

ತಾಯಿಯು ‘ನಂತರ ಹನುಮಂತನು ಏನು ಹೇಳಿದನು?’ ಎಂಬಂತಹ ಒಂದು ಪ್ರಶ್ನೆಯನ್ನು ಕೇಳಿದಾಗ ಮಾಧವನು ಆ ಕಥಾಪ್ರಸಂಗವನ್ನು ಹೇಳುವುದಲ್ಲಿ ಒಂದು ಗಂಟೆಯಷ್ಟು ತಲ್ಲೀನವಾಗಿ ಹೋಗುತ್ತಿದ್ದನು.

ಮಹಾವಿದ್ಯಾಲಯದ ಶಿಕ್ಷಣ

ಮಾಧವರಾವ್ ಇಂಟರ್ ಸೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದನು. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಲಖ್ನೌಗೆ ಹೋದ, ಆದರೆ ಅಲ್ಲಿ ಆತನಿಗೆ ಪ್ರವೇಶ ದೊರೆಯಲಿಲ್ಲ. ಕೊನೆಗೆ ಕಾಶಿಯಲ್ಲಿರುವ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ತರಗತಿಯಲ್ಲಿ ಪ್ರವೇಶ ಪಡೆದನು. ಅವರು ಗಂಗೆಯತೀರದಲ್ಲಿಹೋಗಿ ಕುಳಿತುಕೊಳ್ಳುತ್ತಿದ್ದರು ಮತ್ತು ಗಂಗೆಯ ಪವಿತ್ರ ಧಾರೆಯೆಡೆಗೆ ನೋಡುತ್ತಾ ಧ್ಯಾನಮಗ್ನರಾಗುತ್ತಿದ್ದರು.

ಮಾಧವರಾವರಿಗೆ ಇವೆಲ್ಲ ಅಭ್ಯಾಸವೇ ಆಯಿತು. ಅವರು ಮದನಮೋಹನ ಮಾಲವೀಯರಲ್ಲಿಗೆ ಹೋಗುತ್ತಿದ್ದರು. ಅನೇಕ ಬಾರಿ ಅವರು ಶ್ರೀ ರಾಮಕೃಷ್ಣ ಆಶ್ರಮಕ್ಕೆಹೋಗುತ್ತಿದ್ದರು. ಭಾರತೀಯ ತತ್ತ್ವಜ್ಞಾನ, ಅರ್ಥಶಾಸ್ತ್ರ, ರಾಜನೀತಿಶಾಸ್ತ್ರ ಮುಂತಾದ ವಿಷಯಗಳಲ್ಲಿನ ಪ್ರಮಾಣಭೂತ ಗ್ರಂಥಗಳಅಧ್ಯಯನವನ್ನುಅವರುಅದೇ ಸಮಯದಲ್ಲಿ ಮಾಡಿದ್ದರು.

1926 ರಲ್ಲಿ ಅವರು ಬಿ. ಎಸ್ಸಿ. ಆದರು. 1928 ರಲ್ಲಿ ಪ್ರಾಣಿಶಾಸ್ತ್ರ ವಿಷಯ ಐಚ್ಚಿಕವಾಗಿಪಡೆದು ಅವರು ಪ್ರಥಮ ಶ್ರೇಣಿಯಲ್ಲಿ ಎಮ್. ಎಸ್ಸಿ. ಆದರು.

ಸ್ವಯಂಸೇವಕ ಸಂಘದೊಂದಿಗೆ ಸಂಬಂಧ

ಇದೇ ಸಮಯದಲ್ಲಿನಾಗಪುರದ ರಾಮಕೃಷ್ಣ ಮಠದ ಪ್ರಮುಖರಾದಸ್ವಾಮೀ ಭಾಸ್ಕರೇಶ್ವರಾನಂದರೊಂದಿಗೆ ಮಾಧವರಾವರ ಸಂಪರ್ಕ ಬೆಳೆಯಿತು. ಆಗ ಅವರು ವಿವೇಕಾನಂದರ ಸಾಹಿತ್ಯದ ಅಧ್ಯಯನ ಮಾಡಿದರು. ಕೌಟುಂಬಿಕ ಪರಿಸ್ಥಿತಿಯಿಂದಾಗಿ ಮಾಧವರಾವರವರು ಕಾಶಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ನೌಕರಿಯನ್ನು ಸ್ವೀಕರಿಸಿದರು. ಕಲಿಸುವ ಕುಶಲತೆಯಿಂದಾಗಿ ಅವರು ವಿದ್ಯಾರ್ಥಿಗಳಲ್ಲಿ ಪ್ರೀಯರಾದರು. ವಿದ್ಯಾರ್ಥಿಗಳು ಅವರನ್ನು ಬಹಳ ಆದರದಿಂದ ‘ಗುರೂಜಿ’ ಎಂದುಕರೆಯಲಾರಂಭಿಸಿದರು !

ಭಯ್ಯಾಜಿ ದಾಣಿ ಮತ್ತು ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿನ ಇತರ ಸ್ವಯಂಸೇವಕರಿಂದಾಗಿ ಮಾಧವರಾವರ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಬಂದಿತು. ಸಂಘದ ಸಂಸ್ಥಾಪಕರಾದ ಡಾ. ಹೆಡಗೆವಾರ ಕಾಶಿಯಲ್ಲಿ ಬಂದಾಗ ಅವರದ್ದು ಭೇಟಿಯಾಯಿತು. ಡಾಕ್ಟರವರ ಕಲಿಸುವಿಕೆಯ ವರ್ತನೆಯಿಂದ ಅವರು ಬಹಳ ಪ್ರಭಾವಿತಗೊಂಡರು. ಅವರು ಆಗಾಗ ಸಂಘಶಾಖೆಯಲ್ಲಿ ಹೋಗಲಾರಂಭಿಸಿದರು.

ಡಾ. ಹೆಡಗೆವಾರರು ಅವರನ್ನು ನಾಗಪುರದ ಸಂಘದ ವಿಜಯದಶಮಿ ಉತ್ಸವವನ್ನು ವೀಕ್ಷಿಸಲು ಕರೆದರು. ಅವರು ಮಾಧವರಾವರಿಗೆ ತನ್ನೊಂದಿಗೆ ಭಂಡಾರಾದಲ್ಲಿಯೂ ಕೊಂಡೊಯ್ದರು. ಪ್ರಯಾಣದಲ್ಲಿ ಅವರು ಡಾಕ್ಟರರಿಗೆ ಸಂಘಸಂಬಂಧದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಡಾಕ್ಟರರ ಉತ್ತರಗಳನ್ನು ಕೇಳಿ ಅವರಿಗೆ ಬಹಳಷ್ಟು ಸಮಾಧಾನವಾಯಿತು. ನಾಗಪುರದಿಂದ ಮರಳಿದಾಗ ಕಾಶಿಯಲ್ಲಿನ ಸಂಘಶಾಖೆಯೆಡೆಗೆ ಮಾಧವರಾವರು ವಿಶೇಷ ಗಮನ ನೀಡಲಾರಂಭಿಸಿದರು.

ಸಂಘದ ಸ್ವಯಂಸೇವಕರು ಮಾಧವರಾವರೆಡೆಗೆ ಬರಲಾರಂಭಿಸಿದರು. ಮಾಧವರಾವರೂ ಸ್ವಯಂಸೇವಕರೆಡೆಗೆ ಹೋಗಲಾರಂಭಿಸಿದರು. ತಾತ್ತ್ವಿಕ ಚರ್ಚೆಯ ಮುಂದೆ ಹೋಗಿ ಪ್ರತ್ಯಕ್ಷ ಪ್ರೀತಿ ಮತ್ತು ಬಂಧುತ್ವಗಳ ವ್ಯವಹಾರವು ಪ್ರಾರಂಭವಾಯಿತು. ಅವರು ಆತ್ಮೀಯತೆಯಿಂದ ಸ್ವಯಂಸೇವಕರ ಅಡಚಣೆಗಳನ್ನು ದೂರ ಮಾಡಲಾರಂಭಿಸಿದರು. ಅನೇಕ ಬಾರಿ ಅವರು ಸ್ವಯಂಸೇವಕರಿಗೆ ಕರೆದುಕೊಂಡು ಪಂಡಿತ ಮದನಮೋಹನ ಮಾಲವೀಯಜಿರೆಡೆಗೆ ಹೋಗುತ್ತಿದ್ದರು. ಸಂಘದ ಕಾರ್ಯ ನೋಡಿ ಮಾಲವೀಯಜಿಯರು ವಿದ್ಯಾಪೀಠದ ಪರಿಸರದಲ್ಲಿ ಸಂಘಶಾಖೆಗಾಗಿ ಸ್ಥಳ ನೀಡಿದರು ಮತ್ತು ಚಿಕ್ಕದಾದ ವಾಸ್ತುವನ್ನೂ ಕಟ್ಟಿ ನೀಡಿದರು.

ಈಗ ಡಾ. ಹೆಡಗೆವಾರರು ಕೂಡಾ ಅವರನ್ನು ‘ಗುರೂಜಿ’ ಎಂದು ಸಂಬೋಧಿಸಲಾರಂಭಿಸಿದರು. ಡಾಕ್ಟರವರ ಮುಖದಿಂದ ಮೊದಲು ಬಾರಿ, “ಗುರೂಜಿ, ನಿಮಗೆ ಇಂದು ಶಾಖೆಯಲ್ಲಿ ಸ್ವಯಂಸೇವಕರ ಮುಂದೆ ಮಾತನಾಡಲಿಕ್ಕಿದೆ” ಎಂಬುದನ್ನು ಕೇಳಿದಾಗ ಅವರು ಸ್ವಲ್ಪ ಸಂಕೋಚದಿಂದ ಅವರಿಗೆ ಹೇಳಿದರು, ಇದೇನು ಡಾಕ್ಟರ್, ತಾವು ನನಗೆ ಗುರೂಜಿ ಎಂದು ಹೇಳುತ್ತೀರಿ ?” ಡಾ. ಹೆಡಗೆವಾರ ಅವರಿಗೆ, “ನೀವೇನು ವಿಶಿಷ್ಟ ತರಗತಿಯಲ್ಲಿನ ವಿಶಿಷ್ಟ ಮಕ್ಕಳಿಗೆ ಕಲಿಸುವಿರೇನು ? ನೀವು ಎಲ್ಲರ ಗುರೂಜಿಯಾಗಿದ್ದೀರಿ ” ಎಂದು ಹೇಳಿದರು.

ಸಂಘ ಕಾರ್ಯದಲ್ಲಿ ಪ್ರತ್ಯಕ್ಷ ಗಮನ ನೀಡುವುದು

ಮುಂಬೈಯ ಸಂಘದ ಶಾಖೆಯ ಸ್ಥಿತಿಯು ಕೆಟ್ಟದಾಗಿತ್ತು. ‘ಕೆಲಸ ಕಡಿಮೆ ಮತ್ತು ಗೊಂದಲ ಜಾಸ್ತಿ’ ಎಂಬ ನುಡಿಯಂತೆ ಆಗಿತ್ತು. ಅದನ್ನು ಕೇಳಿದಾಗ ಗುರೂಜಿಯರು ಡಾ. ಹೆಡಗೆವಾರರಿಗೆ, “ಸದ್ಯ ಮಹಾವಿದ್ಯಾಲಯಕ್ಕೆ ರಜೆಯಿದೆ, ತಾವು ಹೇಳಿದರೆ ನಾನು ಮುಂಬೈಗೆ ಹೋಗುವೆನು ಮತ್ತು ಅಲ್ಲಿನ ಶಾಖೆಗೆ ವ್ಯವಸ್ಥಿತ ರೂಪ ನೀಡಲು ಪ್ರಯತ್ನಿಸುವೆನು.’ ಗುರೂಜಿಯರ ಬಾಯಿಯಿಂದ ಶಬ್ದಗಳನ್ನು ಕೇಳಿ ಡಾಕ್ಟರರಿಗೆ ಬಹಳ ಆನಂದವಾಯಿತು. ಅವರು ಕೂಡಲೇ ಗುರೂಜಿಯರಿಗೆ ಮುಂಬೈಗೆ ಕಳುಹಿಸಿದರು. ಬಹಳ ಪರಿಶ್ರಮಪಟ್ಟು ಗುರೂಜಿಯರು ಮುಂಬೈಯ ಕೆಲಸಕ್ಕೆ ಹೊಸ ವೇಗವನ್ನು ನೀಡಿದರು. ಅವರು ಕಾರ್ಯಕರ್ತರ ಮನಸ್ಸಿನ ಸಂದೇಹಗಳನ್ನು ದೂರ ಮಾಡಿದರು. ಯಶಸ್ವಿಯಾಗಿ ಗುರೂಜಿ ನಾಗಪೂರಕ್ಕೆ ಮರಳಿದರು.

1934 ರ ಬೇಸಿಗೆ ಕಾಲದಲ್ಲಿ ಅಕೊಲಾದಲ್ಲಿ ಸಂಘಶಿಕ್ಷಣ ತರಗತಿಯಾಯಿತು. ಡಾಕ್ಟರರು ಗುರೂಜಿಯನ್ನು ಈ ತರಗತಿಯ ವ್ಯವಸ್ಥಾಪನ ಅಧಿಕಾರಿಯಾಗಿ ನೇಮಿಸಿದರು. ಅವರು ತರಗತಿಯಲ್ಲಿನ ಚಿಕ್ಕ-ದೊಡ್ಡ ಸ್ವಯಂಸೇವಕರ ಸರಿಯಾಗಿ ಕಾಳಜಿ ವಹಿಸಿದರು. ಬೇನೆಬಿದ್ದ ಸ್ವಯಂಸೇವಕರ ಸಮೀಪ ಕುಳಿತು ಅವರ ಶುಶ್ರೂಷೆ ಮಾಡುತ್ತಿದ್ದರು.

ವಿವಾಹ ಮಾಡದಿರುವ ನಿಶ್ಚಯ

1935 ರಲ್ಲಿ ಅವರು ವಕೀಲ ಪರಿಕ್ಷೆಯನ್ನು ಉತ್ತೀರ್ಣಗೊಂಡರು. ತಂದೆ ಗುರೂಜಿಯವರಿಗೆ ವಿವಾಹದ ಬಗ್ಗೆ ಕೇಳಿದ್ದರು; ಆದರೆ ಗುರೂಜಿಯರು ಅವರಿಗೆ ಸ್ಪಷ್ಟ ಶಬ್ದಗಳಲ್ಲಿ ನಿರಾಕರಿಸಿ, ‘ನನಗೆ ವಿವಾಹ ಮಾಡುವ ಇಚ್ಛೆಯಿಲ್ಲ. ಪ್ರಪಂಚದಲ್ಲಿ ಸುಖ ದೊರೆಯುವುದೆಂದು ನನಗೆ ಎನಿಸುವುದಿಲ್ಲ’ ಎಂದು ಹೇಳಿದರು. ಮಾತೆಯ ಪ್ರೀತಿಯ ಆಗ್ರಹವನ್ನು ತಡೆಯುವುದು ಕಠಿಣವಾಗಿರುತ್ತದೆ; ಆದರೆ ಗುರೂಜಿಯರು ತಾಯಿಗೆ, “ನನ್ನಂತಹ ಅನೇಕರ ವಂಶ ನಾಶವಾಗಿ ಸಮಾಜದ ಸ್ವಲ್ಪವಾದರೂ ಕಲ್ಯಾಣವಾಗಲಿಕ್ಕಿದ್ದರೆ ಇಂದಿನ ಪರಿಸ್ಥಿತಿಯಲ್ಲಿ ಅದು ಆವಶ್ಯಕವಾಗಿದೆ. ನಮ್ಮ ವಂಶ ನಷ್ಟವಾಗುವ ಸ್ವಲ್ಪವೂ ಖೇದ ನನಗೆನಿಸುವುದಿಲ್ಲ” ಎಂದು ಹೇಳಿದರು.

ಗುರುಮಂತ್ರ

ಅಕಸ್ಮಿಕವಾಗಿ ಆಕ್ಟೊಬರ 1936 ರ ಮೂರನೆಯ ವಾರದಲ್ಲಿ, ದೀಪಾವಳಿಗೆಗೆ ಏಳು-ಎಂಟು ದಿನಗಳಿರುವಾಗ ಗುರೂಜಿ ಯಾರಿಗೂ ಹೇಳದೆ ಕೊಲಕಾತಾದಿಂದ 120 ಮೈಲು ದೂರವಿರುವ ಸಾರಗಾಛಿಯ ಸ್ವಾಮಿ ಅಖಂಡಾನಂದ ಆಶ್ರಮಕ್ಕೆ ಹೋದರು. ಸ್ವಾಮಿ ಅಖಂಡಾನಂದರು ಶ್ರೀ ಗುರೂಜಿಗೆ ದೀಕ್ಷೆ ನೀಡಿದರು, ಗುರುಮಂತ್ರ ನೀಡಿದರು ಮತ್ತು ಸಮಾಜದಲ್ಲಿ ಹೋಗಿ ಕಾರ್ಯ ಮಾಡಲಿಕ್ಕಾಗಿ ಆಶಿರ್ವಾದ ನೀಡಿದರು. ಗುರೂಜಿಯರು ನಾಗಪುರಕ್ಕೆ ಮರಳಿ ಬಂದರು.

ಸರಸಂಘಚಾಲಕ ಪದವಿಗೆ ನಿಯುಕ್ತಿ

1938 ರಲ್ಲಿ ನಾಗಪುರದ ಸಂಘಶಿಕ್ಷಣ ತರಗತಿಯಲ್ಲಿ ಗುರೂಜಿ ಉತ್ತಮ ಸೇವೆ ಮಾಡಿದರು. ಶಾರೀರಿಕ ಕಾರ್ಯಕ್ರಮ, ಭೋಜನ ವ್ಯವಸ್ಥೆ, ದವಾಖಾನೆ, ಸ್ವಚ್ಛತೆ ಮುಂತಾದ ಎಲ್ಲ ವಿಷಯಗಳೆಡೆಗೆ ಅವರ ಸೂಕ್ಷ್ಮ ಗಮನವಿತ್ತು. ರಾತ್ರಿ ಭೋಜನ ಶಾಲೆಗೆ ಹೋಗಿ ಅಲ್ಲಿನ ಅಗ್ನಿಯು ವ್ಯವಸ್ಥಿತವಾಗಿ ಶಾಂತವಾಗಿದೆಯೋ ಇಲ್ಲವೆಂಬುವುದನ್ನೂ ಅವರು ನೋಡುತ್ತಿದ್ದರು.

1939 ರಲ್ಲಿ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹಕರೆಂದು ಘೋಷಿಸಲಾಯಿತು. ಆಗ ಡಾಕ್ಟರರು ಸಂಘದಲ್ಲಿನ ಕೆಲವು ಮುಖ್ಯ ಮಂಡಳಿಗಳ 10 ದಿನಗಳ ಒಂದು ಸಭೆ ತೆಗೆದುಕೊಂಡರು. ಆ ಸಭೆಯಲ್ಲಿ ಸಂಘದ ಸಂವಿಧಾನ, ಆಜ್ಞೆ, ಪ್ರಾರ್ಥನೆ, ಪ್ರತಿಜ್ಞೆ ಇತ್ಯಾದಿಗಳ ಸಂಭಂಧದಲ್ಲಿ ಅನೇಕ ಮೂಲಭೂತ ನಿರ್ಣಯಗಳನ್ನು ನಿರ್ಧರಿಸಲಾದವು. ಇಂದು ಪ್ರಚಲಿತವಾಗಿರುವ ಸಂಘದ ಸಂಸ್ಕೃತ ಪ್ರಾರ್ಥನೆಯ ಮೂಲ ಮರಾಠಿಯನ್ನು ಇದೇ ಸಭೆಯಲ್ಲಿ ಗುರೂಜಿಯವರು ಬರೆದರು. ಅದರ ನಂತರ ಡಾಕ್ಟರರು ಗುರೂಜಿಯವರಿಗೆ ಸಂಘದ ಶಾಖೆ ಪ್ರಾರಂಭಿಸಲು ಕೋಲ್ಕತ್ತಾಗೆ ಕಳುಹಿಸಿದರು. ಗುರೂಜಿ ಈಗ ಡಾಕ್ಟರರೊಂದಿಗೆ ಪ್ರಯಾಣ ಮಾಡಲಾರಂಭಿಸಿದರು.

ಬಹುಶಃ ಡಾಕ್ಟರರು ಅವರನ್ನೇ ಮಾತನಾಡಲು ಹೇಳುತ್ತಿದ್ದರು ಮತ್ತು ಅವರು ಏನು ಮಾತನಾಡುತ್ತಾರೆ, ಹೇಗೆ ಮಾತನಾಡುತ್ತಾರೆ ಎಂಬುದನ್ನು ಗಮನವಿಟ್ಟು ಕೇಳುತ್ತಿದ್ದರು. ಮುಂದೆ ಡಾಕ್ಟರ ಯೋಜನೆಗನುಸಾರ ಸಹಕಾರ್ಯವಾಹ ಎಂಬ ಸಂಬಂಧದಿಂದ ಗುರೂಜಿ ದೇಶದ ಅನೇಕ ಮುಖ್ಯ ನಗರಗಳಿಗೆ ಭೇಟಿ ನೀಡಿದರು. 1940 ರಲ್ಲಿ ಪುನಃ ಅವರನ್ನು ನಾಗಪುರದ ಸಂಘಶಿಕ್ಷಣ ತರಗತಿಯ ಆಯೋಜನಾಧಿಕಾರಿಯೆಂದು ನೇಮಿಸಲಾಯಿತು. ಈ ತರಗತಿಯ ಕೊನೆಗೆ ಡಾ. ಹೆಡಗೆವಾರರು ಮಾಡಿದ ಭಾಷಣ ಕೊನೆಯದ್ದಾಯಿತು. ತನ್ನ ಉತ್ತರಾಧಿಕಾರಿಯೆಂದು ಡಾಕ್ಟರರು ಗುರೂಜಿಯ ಹೆಸರನ್ನು ಇದೇ ಸಮಯದಲ್ಲಿ ಘೋಷಿಸಿದರು. 21 ಜೂನ್ 1940 ರಂದು ಡಾ. ಹೆಡಗೆವಾರರ ನಿಧನದ ನಂತರ ಗುರೂಜಿ ಸರಸಂಘಚಾಲಕರಾದರು.

ನಿರ್ಭಯತೆ

ಸರಸಂಘಚಾಲಕರಾದ ದಿನದಿಂದ ಗುರೂಜಿಯ ಪ್ರಯಾಣವು ಪ್ರಾರಂಭವಾಯಿತು. ಅದು ಸತತ 33 ವರ್ಷಗಳಷ್ಟು ನಡೆದಿತ್ತು. ನಡೆದು, ಎತ್ತಿನಗಾಡಿಯಿಂದ, ಕುದುರೆ ಬಂಡಿಯಿಂದ, ಚತುಷ್ಚಕ್ರ ವಾಹನ, ರೈಲು, ವಿಮಾನ ಮುಂತಾದ ಎಲ್ಲ ರೀತಿಯ ವಾಹನಗಳಿಂದ ಅವರು ಲಕ್ಷಗಟ್ಟಲೆ ಮೈಲುಗಳ ಪ್ರಯಾಣ ಮಾಡಿದರು. ಪ್ರತಿಯೊಂದು ಪ್ರಾಂತಕ್ಕೆ ಅವರು ವರ್ಷದಲ್ಲಿ ಎರಡು ಬಾರಿಯಾದರೂ ಭೇಟಿ ನೀಡುತ್ತಿದ್ದರು.

ಎರಡನೆಯ ಮಹಾಯುದ್ಧ ಪ್ರಾರಂಭವಾಗಿದ್ದಾಗ ಬಂಗಾಳದಲ್ಲಿ ಗುರೂಜಿಯ ಪ್ರಯಾಣ ನಿರ್ಧರಿಸಲಾಗಿತ್ತು. ಜಪಾನಿ ಆಕ್ರಮಣದಿಂದಾಗಿ ಬಂಗಾಳದ ಜನರು ಭಯಭೀತಗೊಂಡಿದ್ದರು. ಕಾರ್ಯಕರ್ತರು ಗುರೂಜಿಯ ಪ್ರಯಾಣವನ್ನು ರದ್ದುಗೊಳಿಸಲು ಮುಂದಾದರು. ಗುರೂಜಿ ಕೂಡಲೇ ಸಂಬಂಧಿತರಿಗೆ ಪತ್ರ ಕಳುಹಿಸಿ ಪ್ರಯಾಣವ ನಿರ್ಧರಿಸಿದಂತೆಯಾಗುವುದೆಂದು ತಿಳಿಸಿದರು. ಪ್ರಯಾಣವು ವ್ಯವಸ್ಥಿತವಾಗಿ ನಡೆಯಿತು ಕೂಡ. ಗುರೂಜಿ ಕಾರ್ಯಕರ್ತರೆದುರು, “ಇತರರು ಹೆದರಿದ್ದಾಗ ನಾವು ಧೈರ್ಯದಿಂದ ಸ್ಥಿತಿಯನ್ನು ಎದುರಿಸಬೇಕು. ಸಂಘ ಎಲ್ಲೆಡೆ ನಿರ್ಭಯತೆ ನಿರ್ಮಿಸುವ ಕಾರ್ಯ ಮಾಡಲಿದೆ, ಆದರೆ ನಾವೇ ಹೆದರಿದರೆ ಜನರು ಯಾರಲ್ಲಿ ಧೈರ್ಯ ಕಂಡುಕೊಳ್ಳಬೇಕು?” ಎಂದು ಹೇಳಿದರು.

ಸಂಘದ ಮೇಲಿನ ಮೊದಲನೆಯ ನಿರ್ಬಂಧ ಮತ್ತು ಗುರೂಜಿಯ ಬಂಧನ

ಜನವರಿ 1948 ರಲ್ಲಿ ಗಾಂಧಿಜಿಯ ಹತ್ಯೆಯಾಯಿತು. ಗಾಂಧಿಜಿಯ ಹತ್ಯೆಯೊಂದಿಗೆ ಸಂಘ ಅಥವಾ ಗುರೂಜಿಯ ಯಾವುದೇ ಸಂಬಂಧವಿರಲಿಲ್ಲ; ಆದರೆ ತತ್ಕಾಲಿಕ ಪ್ರಧಾನಮಂತ್ರಿ ಮತ್ತು ಕಾಂಗ್ರೆಸ್ಸಿನ ನೇತಾರರು ಸಂಘದ ಮೇಲೆ ಮನಸ್ಸಿಗೆ ಬಂದಂತೆ ಆರೋಪ ಹೊರಿಸಲು ಪ್ರಾರಂಭಿಸಿದರು. ಈರ್ಷ್ಯೆ, ಮತ್ಸರ, ದ್ವೇಷಗಳ ಗದ್ದಲ ಪ್ರಾರಂಭವಾಯಿತು. ಗಾಂಧಿಯ ಹೆಸರು ಹೇಳುತ್ತಾ ರಾಜಕಾರಣಿಗಳು ಸುಳ್ಳು ಮಾತುಗಳನ್ನು ಮಾತನಾಡಲಾರಂಭಿಸಿದರು. ಆಕಾಶವಾಣಿ, ವರ್ತಮಾನಪತ್ರಿಕೆಗಳ ಮಾಧ್ಯಮದಿಂದ ವಿಷಕಾರಿಕೆ ಪ್ರಾರಂಭವಾಯಿತು. ಊರೂರಿನಲ್ಲಿ ಸ್ವಯಂಸೇವಕರನ್ನು ಥಳಿಸಲಾಯಿತು. ಕೆಲವರಿಗೆ ಜೀವಂತವಾಗಿ ಸುಡಲಾಯಿತು ಮತ್ತು ಕೆಲವರ ಮನೆಗಳನ್ನು ಸುಡಲಾಯಿತು. ಪೋಲಿಸರು ಗುರೂಜಿಯನ್ನು ಬಂಧಿಸಿದರು. 1948 ಫಬ್ರವರಿ 4 ರಂದು ಸರಕಾರವು ‘ಸಂಘಕಾರ್ಯವು ಕಾನೂನುಬಾಹಿರ’ವೆಂದು ಘೋಷಿಸಿತು.

ಸಂಪೂರ್ಣ ದೇಶದಲ್ಲಿ ವಿವಿಧ ರೀತಿಯ ಆರೋಪಗಳ ಮೇಲೆ ಸಾವಿರಾರು ಸ್ವಯಂಸೇವಕರನ್ನು ಬಂಧಿಸಲಾಯಿತು. ಗುರೂಜಿಯ ಮೇಲೆ ಗಾಂಧಿಜಿಯ ಹತ್ಯೆಯ ಸಂಚು ಮಾಡುವ, ದೊಂಬಿ ಎಬ್ಬಿಸುವ, ಸರಕಾರದ ವಿರುದ್ಧ ಕಾರ್ಯಾಚರಣೆಯ ಪ್ರಯತ್ನ ಮಾಡುವುದಂತಹ ಆರೋಪಗಳನ್ನು ಹೊರಿಸಲಾಯಿತು. ಸ್ವಲ್ಪ ದಿನಗಳಲ್ಲಿ ತಮ್ಮ ಮೂರ್ಖತನ ತಿಳಿದ ನಂತರ ಎಲ್ಲ ಆರೋಪಗಳನ್ನು ತೆಗೆದುಹಾಕಿ ಗುರೂಜಿಯನ್ನು ಸ್ಥಾನಬದ್ಧತೆಯಲ್ಲಿ ಇಡಲಾಯಿತು. ಕಾರಾಗೃಹದಿಂದ ಅವರು ಸಂಘಕಾರ್ಯದ ಚಿಂತನೆಯೊಂದಿಗೆ ಆಸನ, ಧ್ಯಾನಧಾರಣೆ, ಜಪ ಇತ್ಯಾದಿ ವಿಷಯಗಳಲ್ಲಿ ತಲ್ಲೀನರಾದರು. 6 ಆಗಸ್ಟ 1948 ರಲ್ಲಿ ಸರಕಾರವು ಅವರನ್ನು ಮುಕ್ತಗೊಳಿಸಿತು ಆದರೆ ಪುನಃ 12 ನವೆಂಬರ 1948 ರಲ್ಲಿ ಬಂಧಿಸಿತು.

ಸಂಘವು ದೇಶವ್ಯಾಪಿ ಸತ್ಯಾಗ್ರಹದ ಆದೇಶ ನೀಡಿತು. ಚಿಕ್ಕ-ದೊಡ್ಡ ನಗರಗಳಲ್ಲಿ ಸಂಘದ ಅಧಿಕಾರಿಗಳು ಸತ್ಯಾಗ್ರಹದ ಘೋಷಣೆ ಮಾಡಿದರು. ಕೊನೆಗೆ ಸರಕಾರವು ಸಂಘದ ಮೇಲಿನ ನಿರ್ಬಂಧವನ್ನು ಮುಕ್ತಗೊಳಿಸಿತು.

ಇತರ ಸೇವಾಕಾರ್ಯಗಳು

ಗುರೂಜಿಯ ಆದೇಶಕ್ಕನುಸಾರ ಡಾ. ಶಾಮಾಪ್ರಸಾದ ಮುಖರ್ಜಿ ರಾಜಿಕೀಯ ಕ್ಷೇತ್ರದಲ್ಲಿ ಕಾರ್ಯ ಮಾಡಲಾರಂಭಿಸಿದರು. ‘ಭಾರತೀಯ ಜನಸಂಘ’ ಹೆಸರಿಂದ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಭಾರತೀಯ ಮಜದೂರ ಸಂಘ, ವಿಶ್ವ ಹಿಂದೂ ಪರಿಷತ್ತು, ವನವಾಸಿ ಕಲ್ಯಾಣ, ಮಹಾರೋಗಿ ಸೇವಾ, ರಾಷ್ಟ್ರೀಯ ಶಿಶು ಶಿಕ್ಷಣ ಮುಂತಾದ ಅನೇಕ ಸಂಸ್ಥೆಗಳು ಗುರೂಜಿಯ ಪ್ರೇರಣೆಯಿಂದ ಸೇವೆ ಮಾಡಲಾರಂಭಿಸಿದವು. ಡಾ. ಹೆಡಗೆವಾರರ ಸಮಾಧಿ ಸ್ಥಾನದಲ್ಲಿ ಸ್ಮೃತಿಮಂದಿರದ ನಿರ್ಮಾಣ, ಕನ್ಯಾಕುಮಾರಿಯ ವಿವೇಕಾನಂದ ಶಿಲಾಸ್ಮಾರಕ ಹಾಗೂ ನೂರಾರು ಶಿಕ್ಷಣ ಸಂಸ್ಥೆಗಳು ಗುರೂಜಿಯರ ಪ್ರೇರಣೆಯಾ ಫಲವಾಗಿವೆ.

ಮಹಾನಿರ್ವಾಣ

1969 ರಿಂದ ಗುರೂಜಿಯ ಅರೋಗ್ಯ ಕ್ಷೀಣಿಸಲು ಆರಂಭಿಸಿತು, ಆದರೂ ಅವರ ಪ್ರಯಾಣ ನಿಲ್ಲದೆ ನಡೆದಿತ್ತು. ಅವರು ವಿನೋದದಿಂದ ‘ರೈಲು ಬಂಡಿಯ ಡಬ್ಬವೇ ನನ್ನ ಮನೆಯಾಗಿದೆ’ ಎಂದು ಹೇಳುತ್ತಿದ್ದರು. 18 ಮೇ 1970 ರಲ್ಲಿ ಅವರ ಅಸ್ವಾಸ್ಥ್ಯದ ಕಾರಣ ನಿಶ್ಚಿತವಾಯಿತು – ಕರ್ಕರೋಗ !

ಜ್ಯೇಷ್ಠ ಶುದ್ಧ ಪಂಚಮಿ, 5 ಜೂನ 1973 ರಲ್ಲಿ ಪಾರ್ಥಿವ ಶರೀರದ ತ್ಯಾಗ ಮಾಡಿ ಗುರೂಜಿ ಸತ್-ಚಿತ್-ಆನಂದದಲ್ಲಿ ವಿಲೀನರಾದರು.

ಪೂ. ಗುರೂಜಿಯ ಚರಣಗಳಲ್ಲಿ ನಮ್ಮ ಕೊಟ್ಯಾವಧಿ ಪ್ರಣಾಮಗಳು!!

– ಶ್ರೀ. ಮುಳ್ಯೆ, ರತ್ನಾಗಿರಿ

 •  
  2.1K
  Shares
 • 2.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com