Connect with us
Loading...
Loading...

ರಾಜಕೀಯ

ಚುನಾವಣಾ ಹೊತ್ತಲ್ಲೆ ರಾಹುಲ್ ಗಾಂಧಿಗೆ ಎದುರಾಯ್ತು ಭಾರಿ ಸಂಕಷ್ಟ.! ಏನದು ಗೊತ್ತಾ.?

Published

on

 •  
 •  
 •  
 •  
 •  
 •  
 •  
 •  

ಈ ಬಾರಿ ಲೋಕಸಭಾ ಚುನಾವಣೆಯ ಭರ್ಜರಿಯ ಪ್ರಚಾರದಲ್ಲಿ ತೊಡಗಿದ ಎಲ್ಲಾ ಪಕ್ಷಗಳು ಒಬ್ಬರನ್ನೊಬ್ಬರು ಸೋಲಿಸಲು ರಣತಂತ್ರ ರೂಪಿಸಿತ್ತಿದ್ದಾರೆ, ಈ ಹಿನ್ನಲೆಯಲ್ಲಿ ಪ್ರಣಾಳಿಕೆಯ ಮೂಲಕ ಜನರ ಮತಗಳನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಭರಪೂರ ಯೋಜನೆಗಳ ಭರವಸೆ ನೀಡುತ್ತಿದ್ದಾರೆ.

ಕಾಂಗ್ರೆಸ್ ಪ್ರತಿವರ್ಷದಂತೆ ಗರಿಬಿ ಹಠಾವೋ ಎಂಬ ಘೋಷಣೆಯೊಂದಿಗೆ ಈ ವರ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಒಂದು ಹೆಜ್ಜೆ ಮುಂದೆ ಎಂಬಂತೆ ಈ ಬಾರಿ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಗಳಿಗೆ 72000 ರೂಪಾಯಿ ನೀಡುವುದಾಗಿ ಘೋಷಿಸಿಕೊಂಡಿದ್ದು ನರೇಂದ್ರ ಮೋದಿಯವರನ್ನು ಸೋಲಿಸಲು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೇ ಈ ನಿರ್ಧಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದೂರೊಂದು ಅಲಹಾಬಾದ್​ ಹೈಕೋರ್ಟ್​​ನಲ್ಲಿ ದಾಖಲಾಗಿದೆ. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಡಿರುವ ​ಹೈ ಕೋರ್ಟ್​ ಮೇ 13ಕ್ಕೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದು ಈ ನಿರ್ಧಾರದ ಕುರಿತು ತನಿಖೆ ನಡೆಸಲು ಮುಂದಾಗಿದೆ. ಈ ಪ್ರಕರಣದ ಕುರಿತು ಚುನಾವಣಾ ಆಯೋಗ ಮತ್ತು ಕಾಂಗ್ರೆಸ್​ ಪಕ್ಷ, ಎರಡಕ್ಕೂ ಪ್ರತಿಕ್ರಿಯೆ ತಿಳಿಸುವಂತೆ ನೋಟಿಸ್​ ಜಾರಿ ಮಾಡಿದೆ.

ಈಗಾಗಲೇ ಕಾಂಗ್ರೆಸ್​ನ ಪ್ರಣಾಳಿಕೆಯಲ್ಲಿರುವ ಈ ಅಂಶದಿಂದ ಮತದಾರರಿಗೆ ಹಣದ ಆಮಿಷವೊಡ್ಡಿದಂತೆ ಆಗುತ್ತದೆ. ಮತದಾನಕ್ಕೆ ಪರೋಕ್ಷವಾಗಿ ಲಂಚದ ಆಮಿಷ ಒಡ್ಡಿದಂತಾಗುತ್ತದೆ ಹಾಗಾಗಿ ಇಂತಹ ನಿರ್ಧಾರ ಪ್ರಜಾಪ್ರತಿನಿಧಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಕಾಂಗ್ರೆಸ್​ನ ಪ್ರಣಾಳಿಕೆಯಿಂದ ಬಡವರಿಗೆ ನೀಡುತ್ತೇವೆ ಎನ್ನಲಾದ ಹಣದ ಅಂಶವನ್ನು ತೆಗೆದುಹಾಕಲು ಸೂಚಿಸುವಂತೆ ವಕೀಲರಾದ ಮೋಹಿತ್​ ಕುಮಾರ್​ ಮತ್ತು ಅಮಿತ್​ ಪಾಂಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ವಕಿಲರು ನೀಡಿದ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುಧೀರ್​ ಅಗರ್ ವಾಲ್ ಮತ್ತು ರಾಜೇಂದ್ರ ಕುಮಾರ್​ ಪೀಠ ಇದೀಗ ಮೇ 13 ರಂದು ಈ ಪ್ರಕರಣ ಕುರಿತಾದ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಪ್ರಕರಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಖಾತ್ರಿಯಾದರೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಇಂದ 72000 ನೀಡುವ ಅಂಶ ತೆಗೆದುಹಾಕಬೇಕಾಗುತ್ತೆ.

ಅದೇನೆ ಇರಲಿ ಜನರಿಗೆ ಹಣದ ಆಸೆ ಆಮಿಷ ತೋರಿಸಿ ಮತಯಾಚನೆ ಮಾಡುವುದು ಎಷ್ಟು ಸರಿ.? ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳನ್ನು ಕೊಂಡುಕೊಳ್ಳಲು ಸಾಧ್ಯವೇ.? ಇಂತಹ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ‌ಗೆ ಹೈಕೋರ್ಟ್ ತನಿಖೆ ಮಾಡಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಷ್ಟೆ.

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com