Connect with us
Loading...
Loading...

ಪ್ರಚಲಿತ

ಹೈದ್ರಾಬಾದ್ ಕರ್ನಾಟಕದಲ್ಲಿ ಬಿತ್ತು ಮತಾಂಧನಿಂದ ಹಿಂದೂ ಹುಡುಗಿಯ ರೇಪ್ & ಮರ್ಡರ್!! ಮಾಧ್ಯಮಗಳು ಸೈಲೆಂಟ್, ವಿಪಕ್ಷಗಳಿಗೆ ಈ ವಿಷ್ಯ ಸಂಬಂಧವೇ ಇಲ್ಲ!!! ನಮ್ ದುರಾದೃಷ್ಟ

Published

on

 • 6
 •  
 •  
 •  
 •  
 •  
 •  
 •  
  6
  Shares

ಸರಣಿ ಹಿಂದೂ ಕಾರ್ಯಕರ್ತರ ಹತ್ಯೆಯಿಂದ ತಿಂಗಳಿಗೊಂದು “ಓ ಶಾಂತಿ” ಎಂದು ಬರೆದಿಡುವ ಪರಿಸ್ಥಿತಿ ಹಿಂದೂ ಸಮಾಜಕ್ಕೆ ಬಂದಿತ್ತು. ಇಷ್ಟು ದಿನ ಹಿಂದೂ ಹುಡುಗರ ಹತ್ಯೆಗಳನ್ನ ನೋಡುತ್ತಲೇ ಬಂದಿದ್ದೆವು. ಮತಾಂಧರಿದೀಗ ಹಿಂದೂ ಹುಡುಗಿಯರನ್ನೂ ಬಿಡುತ್ತಿಲ್ಲ ಎನ್ನುವುದೇ ವಿಪರ್ಯಾಸವಾಗಿದೆ.

ಮೊನ್ನೆ ಅಂದರೆ 27ನೇ ತಾರೀಖು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೊಸಂ ಗ್ರಾಮದ 20 ವಯಸ್ಸಿನ ಪೂಜಾ ಹಡಪದ ಎಂಬ ಹಿಂದೂ ಹುಡುಗಿ ಪ್ರೀತಿ ನಿರಾಕರಿಸಿದ್ದಕ್ಕೆ 24 ವಯಸ್ಸಿನ ಶಮಸುದ್ದಿನ್ ಎಂಬ ಮುಸ್ಲಿಂ ಹುಡುಗ ಬಲವಂತದ ಅತ್ಯಾಚಾರ ಮಾಡಿ ಕತ್ತು ಸೀಳಿ ಕೊಲೆಮಾಡಿದ್ದಾನೆ. ಆ ರಾಕ್ಷಸ ಸ್ವರೂಪಿ ಮತಾಂಧನಿಗೆ ಗಲ್ಲು ಶಿಕ್ಷೆಯಾಗಬೇಕು .

ಸುಮಾರು ತಿಂಗಳುಗಳಿಂದ ಆಕೆಯ ಹಿಂದೆ ಬಿದ್ದಿದ್ದ ಮುಸ್ಲಿಂ ಹುಡುಗ ಶಮಸುದ್ದೀನ್. ಆದರೆ ಆ ಹುಡುಗಿ ಇವನ ಕಡೆ ತಿರುಗಿಯೂ ನೋಡಿರಲಿಲ್ಲ. ಈತ ನಿಜವಾಗಿಯೂ ಪ್ರೀತಿಸಿದ್ದರೆ ಇಂತಹ ಹೇಯ ಕೃತ್ಯ ಮಾಡುತ್ತಿರಲಿಲ್ಲ. ತಮ್ಮ ಸಂಖ್ಯೆಯನ್ನು ಹೆಚ್ಚಿಸುವುದೇ ಧಾರ್ಮಿಕ ಕರ್ತವ್ಯವೆಂದು ತಿಳಿದುಕೊಂಡಿರುವ ಮತವೊಂದರಲ್ಲಿ ಹುಟ್ಟಿದ ಈತನಿಗೆ ಪ್ರೀತಿಯ ಬೆಲೆ ಹೇಗೆ ಗೊತ್ತಿರೋಕೆ ಸಾಧ್ಯ?

ಗೊತ್ತಿದ್ದಿದ್ದರೆ ಆ ಪಾಪಿ ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಆ ಊರಿನವರು ಹೇಳುವ ಪ್ರಕಾರ, ಹುಡುಗಿಯ ಅಣ್ಣನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ನಂಬಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪಾಪಿ ಅತ್ಯಾಚಾರವೆಸಗಿದ್ದಾನೆ. ಆಕೆಯ ರೋಧನ ಕೇಳಿ ಅಲ್ಲಿದ್ದ ಜನ ಹೋದರೆ ಅವರಿಗೆ ತಲವಾರ ತೋರಿಸಿ ಹೆದರಿಸಿ, ತಕ್ಷಣವೇ ಆಕೆಯ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ.

ಪಾಪಿಯ ಅಮಾನವೀಯ ಕೃತ್ಯದಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಕರ್ನಾಟಕದಲ್ಲಿ ಏನ್ ನಡಿತಿದೆ ಅಂತ ಅರಚಿಕೊಳ್ಳುತ್ತಿದ್ದ ಪ್ರಕಾಶ್ ರೈ ಅವರೇ ಎಲ್ಲಿದ್ದೀರಾ? ಸಿದ್ದರಾಮಯ್ಯನವರೆ ನಿದ್ದೆ ಮಾಡಿದ್ದಾಯ್ತಾ? ನಿದ್ದೆ ಮಾಡ್ತಾನೆ ಇರಿ, ಮುಂದಿನ ಬಾರಿ ಸರಿಯಾದ ಬುದ್ಧಿ ಕಲಿಸುತ್ತೇವೆ.

ಹುಡುಗಿಯ ಹತ್ಯೆಯ ರೋಧನೆಯಲ್ಲಿ ಪೋಷಕರಿರಬೇಕಾದರೆ, ಅಲ್ಲಿನ ಪೋಲಿಸರು ಬೇಗ ಅಂತ್ಯಕ್ರಿಯೆ ಮುಗಿಸಿ ಅಂತ ಹೇಳ್ತಿದ್ರಂತೆ. ಯಾಕೆ ಅಂತ ಕೇಳಿದರೆ ನಮಗೆ ಮೇಲಿನಿಂದ ಒತ್ತಡವಿದೆ ಅಂತ ಹೇಳಿದ್ರಂತೆ. ಪಾಪ ಪೋಷಕರು ರೋಧನೆಯಲ್ಲಿದ್ದರೆ ಸರ್ಕಾರ ಪೋಲಿಸರ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿತ್ತು. ಇದು ಹಿಂದುಗಳ ಇಂದಿನ ಸ್ಥಿತಿ.

ಮಾಧ್ಯಮದವರೇ ನೀವೆಲ್ಲಿದ್ದೀರಾ? ಯಾವುದೋ ದೇಶದಲ್ಲಿ ಮುಸಲ್ಮಾನನ ಮೇಲೆ ದಾಳಿ ನಡೆದರೆ, ಇಡೀ ದಿನ ಬೊಬ್ಬೆ ಹೊಡಿತೀರಲ್ಲ ಈಗ ಎಲ್ಲಿದ್ದೀರಾ?

ಬರೀ ಆರೋಪ ಮಾತ್ರವೇ ಕೇಳಿ ಬಂದಾಗ ಸಾಧು ಸಂತರ ಹಿಂದೆ ಬಿದ್ದು ಬೊಬ್ಬೆ ಹೊಡಿತೀರಲ್ಲ. ಈಗ ಎಲ್ಲಿದ್ದೀರಾ? ಹಿಂದುಗಳು ಮಾತ್ರವೇ ನಿಮ್ಮ ಟಾರ್ಗೆಟ್ ಆ? ಸಾಧು ಸಂತರ ಮೇಲೆ ಅತ್ಯಾಚಾರದ ಆರೋಪ ಹೊರೆಸಿದಾಗ, ನ್ಯಾಯಾಲಯದ ತೀರ್ಪು ಹೊರಬೀಳುವ ಮುಂಚೆ ಆ ಸಾಧು ಸಂತರನ್ನು ಅತ್ಯಾಚಾರಿ ಎಂದು ಬಿಂಬಿಸಿ ನಮ್ಮ ಸಮಾಜಕ್ಕೆ ಕೆಟ್ಟ ಸಂದೇಶವನ್ನು ಕೊಡುವ ಮಾಧ್ಯಮದವರೇ ಈಗ ಎಲ್ಲಿದ್ದೀರಾ?

ಅಪ್ಪಿ ತಪ್ಪಿ ಯಾವುದೋ ಕಾರಣಕ್ಕೊ ಹಿಂದು-ಮುಸ್ಲಿಂ ಗಲಾಟೆ ನಡೆದು ಹಿಂದುವಿನ ಕೈ ಮೇಲಾದರೆ ಬೊಬ್ಬೆ ಹೊಡೆಯುವ ಮಾಧ್ಯಮದವರೇ ಈಗ ಎಲ್ಲಿದ್ದೀರಾ?

ಯಾಕೆ ಅತ್ಯಾಚಾರವೆಸಗಿ, ಕೊಲೆಗೈದವನು ಮುಸಲ್ಮಾನ ಅಂತ ನೀವು ಮುಸ್ಲಿಂ ತುಷ್ಟೀಕರಣಕ್ಕೆ ನಿಂತುಬಿಟ್ಟಿದ್ದೀರಾ ಅಥವಾ ಅವರಿಗೆ ಹೆದರಿದ್ದೀರಾ? ಅಥವಾ ನಿಮಗೆ ಹಿಂದುಗಳು ಮಾತ್ರ ಬಲಿಪಶುವಾಗಬೇಕಾ?

ಹಿಂದು ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯವರೇ ನೀವೆಲ್ಲಿದ್ದೀರಾ? ಬರೀ ಹಿಂದುಗಳ ಶವವನ್ನಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಿಮ್ಮ ಬುದ್ಧಿಗೆ ನನ್ನದೊಂದು ಧಿಕ್ಕಾರವಿದೆ. ಬಿಜೆಪಿಯವರೇ ಅಷ್ಟಕ್ಕೂ ನಿಮಗೆ ಉತ್ತರ ಕರ್ನಾಟಕದವರೆಂದರೆ ಅಸಡ್ಡೆ ಏಕೆ?

ಉತ್ತರ ಕರ್ನಾಟಕದ ಹಿಂದುಗಳು ಹಿಂದು ಅಲ್ವಾ? ಉತ್ತರ ಕರ್ನಾಟಕದಲ್ಲೂ ಜಿಹಾದಿಗಳು ಆಗಾಗ ಅಟ್ಟಹಾಸ ಮೆರೆದಿದ್ದಾರೆ. ಅದರಿಂದ ಹಿಂದುಗಳ ಕೊಲೆಯೂ ಆಗಿದೆ. ಆದರೆ ನೀವು ಮಾತ್ರ ಅತ್ತಕಡೆ ಗಮನ ಹರಿಸಿಲ್ಲ. ಯಾಕೆ ಈ ಅಸಡ್ಡೆ? ಕರಾವಳಿ ಭಾಗದಲ್ಲಿ ಹತ್ಯೆಯಾದವರು ಮಾತ್ರ ಹಿಂದುಗಳಾ?

ಕೆಲ ತಿಂಗಳಗಳ ಹಿಂದೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿತ್ತು. ಬಿಜೆಪಿಯವರೇ ಆಗ ನೀವೆಷ್ಟು ಸಲ ಪ್ರತಿಭಟನೆ ಮಾಡಿದ್ರಿ? ಪ್ರತಿಭಟನೆಯಂತೂ ದೂರದ ಮಾತು, ಆ ಹಿಂದೂ ಕಾರ್ಯಕರ್ತನ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ. ಯಾಕೆ ಈ ಅಸಡ್ಡೆ. ಉತ್ತರ ಕರ್ನಾಟಕದ ಹಿಂದುಗಳ ಪ್ರಾಣಕ್ಕೆ ಬೆಲೆ ಇಲ್ವಾ?

ಕೆಲ ತಿಂಗಳುಗಳ ಹಿಂದೆ ನಮ್ಮ ಕಲಬುರಗಿ ಜಿಲ್ಲೆಯ ಆಂದೋಲದ ಸಂತರನ್ನು ಪೋಲಿಸರು ಬಂಧಿಸಿದ್ದರು. ಕರಾವಳಿ ಭಾಗದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿರುವಂತೆ ನಮ್ಮ ಕಲಬುರಗಿ ಭಾಗದಲ್ಲಿ ಹಿಂದು ಹೃದಯಿ ಆಂದೋಲಾ ಶ್ರೀಗಳಿದ್ದಾರೆ. ಅವರನ್ನು ಬಂಧಿಸಿದ್ದಾಗ ತನ್ನನ್ನು ತಾನು ಹಿಂದೂ ರಕ್ಷಕ ಎಂದು ಬಿಂಬಿಸಲು ಹೆಣಗಾಡುತ್ತಿರುವ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರಿಗೆ ಫೋನ್ ಮಾಡಿ, ಸಂತರ ಬಂಧನವಾಗಿದೆ ಅಂತ ಹೇಳಿದ್ದೇವು. ಆದರೆ ಆ ಪ್ರಭಾವಿ ಮುಖಂಡ ತುಂಬಾ ಅಸಡ್ಡೆ ಮಾಡಿಬಿಟ್ಟರು. ಯಾಕೆ? ನಾವು ಉತ್ತರ ಕರ್ನಾಟಕದವರು ಅಂತ ಅಸಡ್ಡೆ ಅಲ್ವಾ? ಅದೇ ಕರಾವಳಿ ಭಾಗದ ಅಥವಾ ಮೈಸೂರು ಅಥವಾ ಬೆಂಗಳೂರು ಭಾಗದಲ್ಲಿ ಸಂತರ ಬಂಧನವಾಗಿದ್ದರೆ ನಿಮ್ಮ ರಾಜಕೀಯಕ್ಕಾಗಿ ಧಾವಿಸಿ ಬರುತ್ತಿದ್ರಿ ಅಲ್ವಾ?

ಅಷ್ಟಕ್ಕೂ ಕರಾವಳಿಯ ಹಿಂದುಗಳ ಮೇಲೆ ನಿಮಗೆ ಅಂತಹ ಪ್ರೀತಿ ಇಲ್ಲ. ನಿಮ್ಮ ರಾಜಕೀಯಕ್ಕಾಗಿ ಅವರನ್ನು ಬಳಸಿಕೊಳ್ತಿದ್ದೀರಿ. ಅಷ್ಟಕ್ಕೂ ಕರಾವಳಿಯಲ್ಲಿ ಸರಣಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ನೀವು ಮಾಡಿದ್ದು ರಾಜಕೀಯ. ಶವವನ್ನಿಟ್ಟುಕೊಂಡು ರಾಜಕೀಯ ಮಾಡುವಂತಹ ದರ್ದೂ ಏನಿದೆ ನಿಮಗೆ? ಹಿಂದೂ ಪಕ್ಷವೆಂದು ಹೇಳಿಕೊಂಡು ತಿರುಗಾಡುವ ನೀವು, ಹಿಂದೂ ಕಾರ್ಯಕರ್ತರ ಜೊತೆ ನಿಷ್ಠರಾಗಿದ್ದರೆ ನಾವು ಈ ಮಾತುಗಳನ್ನು ಆಡುವ ಪ್ರಮೇಯವೇ ಬರುತ್ತಿರಲಿಲ್ಲ.

ಬಿಜೆಪಿಯವರೇ ಹಿಂದೂಗಳಿಗೆ ಇರೋದು ಪಕ್ಷ ಅಂತ ಇರೋದು ನಿಮ್ದು ಒಂದೇ ಅಲ್ಲ. ಆದರೆ ನಮಗೆ ಮೋದಿ ಬೇಕಾಗಿರೋದರಿಂದ ನಿಮಗೆ ಓಟ್ ಹಾಕಿದ್ದೇವೆ ಹೊರತು ನಿಮ್ಮನ್ನ ನೋಡಿಯಲ್ಲ. ನಮಗೆ ನೀವು ಅನಿವಾರ್ಯವಲ್ಲ. ಹಿಂದು ಪಕ್ಷವೆಂದು ಹೆಸರೇಳಿ ರಾಜಕೀಯ ಮಾಡೋದನ್ನು ಬಿಟ್ಟುಬಿಡಿ. ರಾಜಕೀಯಕ್ಕಾಗಿ ಹಿಂದುತ್ವ ಮಾಡುವುದನ್ನು ಬಿಟ್ಟುಬಿಡಿ.

ಬಿಜೆಪಿಗರೇ ದಯವಿಟ್ಟು ರಾಜಕೀಯ ಬಿಟ್ಟು ಹಿಂದೂಗಳಿಗೆ ನ್ಯಾಯ ಕೊಡಿಸಿ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಬಿಡಿ.

ಈಗಾಗಲೇ ಸಾಲು ಸಾಲು ಹಿಂದೂ ಕಾರ್ಯಕರ್ತರನ್ನು ಹಿಂದೂ ಸಮಾಜ ಕಳೆದುಕೊಂಡಿದೆ. ಹತ್ಯೆ ಮಾಡಿ ನಗುತ್ತಿರುವ ಮುಸ್ಲಿಂ ಮತಾಂಧರು ಒಂದು ಕಡೆಯಾದರೆ, ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಸರ್ಕಾರ ಒಂದು ಕಡೆ. ನಂತರ ತಲೆ ತಗ್ಗಿಸಿ ನಿಂತ ರಾಜ್ಯದ ಜನರು ಎಲ್ಲರನ್ನೂ ಬೈಯ್ಯುತ್ತ ಮನೆ ಕಡೆಗೆ.

ಬೀದರಿನ ಹಿಂದುಗಳೆ ನಿದ್ದೆಯಿಂದ ಎದ್ದು ಸಹೋದರಿಗೆ ಆದ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕಿಸಿ ಕೊಡಿ. ಇಲ್ಲವಾದರೆ ಮುಂದೊಂದು ದಿನ ಮತಾಂಧರಿಂದ ನಿಮ್ಮ ಮನೆ ಹೆಣ್ಣುಮಕ್ಕಳಿಗೂ ಅದೇ ಪಾಡು ಬರಬಹುದು.

ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ತೇಗೆದುಕೊಳ್ಳಬೇಕು ಇಲ್ಲವಾದರೆ ಆ ಯುವತಿಯ ತಂದೆ ತಾಯಿಯ ಶಾಪ ನಿಮ್ಮನ್ನು ತಟ್ಟದೆ ಬಿಡುವುದಿಲ್ಲ ….

ಕೊನೆಯ ಮಾತು ಅಲ್ಪಸಂಖ್ಯಾತರ ತೃಷ್ಟೀಕರಣ ಮಾಡಲು ನೀವುಗಳು ತರಹೋರಟ “ಮುಗ್ದ ಅಲ್ಪಸಂಖ್ಯಾತರ ಮೇಲಿನ ಕೇಸು ವಾಪಸಾತಿ ಕಾನುನೂ ಈಗಾಗಲೇ ನಿಮ್ಮ ಮೇಲಿನ ನಂಬಿಕೆ ಸಂಪೂರ್ಣ ಹೋಗುವ ಹಾಗೆ ಮಾಡಿದೆ ಕೊನೇ ಪಕ್ಷ ಆ ಯುವತಿಗೆ ನ್ಯಾಯ ಕೊಡಿಸಿ ಸ್ವಲ್ಪವಾದರೂ ಮಾನ ಉಳಿಸಿಕೊಳ್ಳಿ.

ಇದು ಹಿಂದೂ ಹುಡುಗಿ ಆಗಿರದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರೆ ಈಗಾಗಲೇ ಕರ್ನಾಟಕ ರಾಜ್ಯ ಹೊತ್ತಿ ಉರಿಯುತಿತ್ತು ಮಾಧ್ಯಮಗಳು ಜೋರು ಸಾಕಷ್ಟಿರುತಿತ್ತು ಆದರೆ ಪಾಪ ಅವಳು ನಮ್ಮ ಸಹೋದರಿಯಲ್ಲವೇ ನಿಮಗೆ …
ಇದೆಲ್ಲ ನಿಮಗೆ ಕಂಡರು ನಿಮ್ಮದು ಜಾಣ ಕುರುಡಲ್ಲವೇ…?

ಕ್ಷಮೆಯಿರಲಿ ಸಹೋದರಿ ಓಂ ಶಾಂತಿ….

– ಸಿದ್ದು ಬಿರಾದಾರ

 •  
  6
  Shares
 • 6
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com