Connect with us
Loading...
Loading...

ಅಂಕಣ

ಬಯಲಾಯ್ತು ದೊಡ್ಡ ಷಡ್ಯಂತ್ರ: ಆತ ಮತಾಂತರದ ವಿರುದ್ಧ ಹೋರಾಡುತ್ತಿದ್ದಾನೆ ಹೀಗಾಗಿ ಆತನನ್ನು ಉಡಾಯಿಸಿಬಿಡೋಣವೆಂದು ಆ ಹಿಂದೂ ಸಂತನನ್ನು ಕೊಂದೇಬಿಟ್ಟರು!!

Published

on

 • 2.6K
 •  
 •  
 •  
 •  
 •  
 •  
 •  
  2.6K
  Shares

2008, ಅಗಸ್ಟ್ 23ರಂದು ಇಡೀ ಹಿಂದೂ ಸಮಾಜ ಕೃಷ್ಣಾಷ್ಟಮಿಯ ಸಡಗರದಲ್ಲಿತ್ತು. ಅಂದು ಓರಿಸ್ಸಾದಲ್ಲಿ ಕ್ರೈಸ್ತ ಉಗ್ರರು ರಕ್ತದೋಕುಳಿ ಆಡಿಬಿಟ್ಟಿದ್ದರು. ಅವರ ಟಾರ್ಗೆಟ್ ಇದ್ದದ್ದು
ಓರಿಸ್ಸಾದ ಕಂದಮಾಲ್‌ನ ಹಿಂದೂ ಸಂತ ಸ್ವಾಮಿ ಲಕ್ಷಣಾನಂದರು. ಆ ಹಿಂದೂ ಸಂತ ತನ್ನ ಇಡೀ ಜೀವನವನ್ನೇ ವನವಾಸಿ ಜನರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದರು. ಹಿಂದೂ ಧರ್ಮವನ್ನು ಬಿಟ್ಟುಹೋಗಿ ನರಳುತ್ತಿರುವವರನ್ನು ಮರಳಿ ಮಾತೃಧರ್ಮಕ್ಕೆ ತರುವ ಶುದ್ಧಿ ಕಾರ್ಯ ನಡೆಸಿದ್ದರು. ಆ ಪ್ರದೇಶದಲ್ಲಿ ಕ್ರೈಸ್ತರ ಹಾವಳಿ ಜಾಸ್ತಿಯಾಗಿದ್ದರಿಂದ ಕ್ರೈಸ್ತರು ಈ ಹಿಂದೂ ಸಂತರನ್ನು ಟಾರ್ಗೆಟ್ ಮಾಡಿದ್ದರು.

2008, ಅಗಸ್ಟ್ 23ರಂದು ಕಂದಮಾಲ್‌ನ ತನ್ನ ಆಶ್ರಮದಲ್ಲಿ ಸ್ವಾಮಿ ಲಕ್ಷ್ಮಣಾನಂದರು ಮಕ್ಕಳೊಂದಿಗೆ ಬೆರೆತು ಭಜನೆ ಮಾಡುತ್ತಿದ್ದಾಗ ಕ್ರೈಸ್ತ ಉಗ್ರರು ಒಮ್ಮೆಂದೊಮ್ಮೆಲೆ ಆ ಆಶ್ರಮದ ಮೇಲೆ ಮುಗಿಬಿದ್ದು ರಕ್ತದೋಕುಳಿ ಆಡಿಬಿಟ್ಟಿದ್ದರು. ಇದೇನು ಆಕಸ್ಮಿಕವಾಗಿರಲಿಲ್ಲ. ಈ ಹಿಂದೆ ಅನೇಕ ಬಾರಿ ಆ ಹಿಂದೂ ಸಂತರ ಮೇಲೆ ಹಲ್ಲೆಗಳು ನಡೆದಿದ್ದವು, ಬೆದರಿಕೆ ಪತ್ರಗಳು ಬಂದಿದ್ದವು. 2008ರ ಆಗಸ್ಟ್ 13ರಂದು ಕಂದಮಾಲ್ ಸ್ವಾಮೀಜಿಗೆ ಬದೆರಿಕೆ ಪತ್ರ ಬಂದಿತ್ತು. ಆ ಪತ್ರವನ್ನು ಪೋಲಿಸರ ಬಳಿ ಒಯ್ದು ಸೂಕ್ತ ಭದ್ರತೆ ಕೊಡಿ ಎಂದು ಕೇಳಿದಾಗ ಪೋಲಿಸರು ಭದ್ರತೆ ಕೊಡಲೇ ಇಲ್ಲ. ಯಾಕಂದ್ರೆ ಕೇಂದ್ರದಲ್ಲಿ ಇಟಲಿಯ ಕ್ರೈಸ್ತೆ ಸೋನಿಯಾಳ ಆಡಳಿತವಿತ್ತು.


ಅಂದು ಪೋಲಿಸರು ಭದ್ರತೆ ಕೊಡದ ಪರಿಣಾಮ ಕ್ರೈಸ್ತ ಭಯೋತ್ಪಾದಕರು ಆಶ್ರಮಕ್ಕೆ ನುಗ್ಗಿ ಸ್ವಾಮೀಜಿಯನ್ನು ಕೊಂದೇ ಬಿಟ್ಟರು. ಎಂತಹ ವಿಪರ್ಯಾಸ ನೋಡಿ ಸರ್ಕಾರಕ್ಕೆ ಸಂಬಂದವಿರದ ವಾದ್ರಾನಿಗೆ Z+ ಸೆಕ್ಯುರಿಟಿ. ಆದರೆ ಸಮಾಜದ ಒಳಿತಿಗಾಗಿ ಹೋರಾಡುತ್ತಿದ್ದ ಸ್ವಾಮೀಜಿಗೆ ಬೆದರಿಕೆ ಇದ್ದರೂ ಕನಿಷ್ಟ ಮಟ್ಟದ ಭದ್ರತೆಯೂ ಕೊಟ್ಟಿರಲಿಲ್ಲ. ಇದರ ಪರಿಣಾಮವಾಗಿ ಕೃಷ್ಣಾಷ್ಟಮಿಯಂದೇ ಸ್ವಾಮೀಜಿ ಸೇರಿದಂತೆ ಅವರ ನಾಲ್ವರು ಶಿಷ್ಯರ ಹತ್ಯೆಯಾಯಿತು. ಸ್ವಾಮೀಜಿ ಹತ್ಯೆಗೆ ಕಾರಣ ಕ್ರೈಸ್ತರೇ ಎಂಬುದು ಗೊತ್ತಾದರೂ ಅವರನ್ನು ಬಂಧಿಸಲು ಸೋನಿಯಾಳ ಸರ್ಕಾರ ಮೀನಾಮೇಷ ಎಣಿಸಿ ಸುಮ್ಮನಾಗಿತ್ತು.

ಹೇಳಿಕೇಳಿ ಸೋನಿಯಾ ಕ್ರೈಸ್ತೆ ಆಗಿದ್ದರಿಂದ ಒಡಿಶ್ಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಝಾರ್ಖಂಡ್ ಮೊದಲಾದ ಹಿಂದುಳಿದವರೇ ಹೆಚ್ಚಾಗಿರುವ ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಚಟುವಟಿಕೆ ಶರವೇಗದಲ್ಲಿ ಸಾಗಿತ್ತು.‌ ಇದರ ಪರಿಣಾಮವೇ ಸ್ವಾಮಿ ಲಕ್ಷಣಾನಂದರ ಕೊಲೆ!! ಈ ಹತ್ಯೆಯ ಹಿಂದೆ ಬಿಜೆಡಿ ಸಂಸದ ಸುರ್ಗಿಬಾ ಸಿಂಗ್ ಪನ್ನಾ, ಕಾಂಗ್ರೆಸ್ ಸಂಸದ ರಾಧಾಕಾಂತ್ ನಾಯಕ್ ಮತ್ತು ಓರ್ವ ಕ್ರೖೆಸ್ತ ಪಾದ್ರಿ ಇದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದೇ ತಡ, ಪ್ರಕರಣದ ತನಿಖೆ ನಂತರ ಮುಂದೆ ಸಾಗಲೇ‌ ಇಲ್ಲ!!


ಓರಿಸ್ಸಾದ ಕಂಧಮಾಲ್‌ನಲ್ಲಿ ಅಂದು ನಡೆದ ಸ್ವಾಮೀಜಿಯ ಕೊಲೆಗೆ ನಾವೇ ಕಾರಣ ಎಂದು ಓರಿಸ್ಸಾದ ಸಿಪಿಐಎಂನ ರಾಜ್ಯ ಸಮಿತಿ ಗಂಟಾಘೋಷವಾಗಿ ಹೇಳಿದರೂ ಅವರನ್ನು ಬಂಧಿಸಲೇ ಇಲ್ಲ. ಇದರ ಮೂಲಕ ಇಟಲಿಯ ಕ್ರೈಸ್ತೆ ಇಡೀ ದೇಶವನ್ನು ಕ್ರೈಸ್ತೀಕರಣ ಮಾಡುವ ಉದ್ದೇಶದಲ್ಲಿದ್ದಳು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಹಿಂದೂ ಸಂತರ ಕೊಲೆಯಾಗಿದ್ದು ಇದೇನು ಮೊದಲಲ್ಲ. ಹಿಂದಿನಿಂದ ಇಂದಿನವರೆಗೂ ಹಿಂದೂ ಸಂತರ ಮೇಲೆ ಆಗುವ ದಬ್ಬಾಳಿಕೆಗಳು, ಕೊಲೆಗಳು ಕಡಿಮೆ ಆಗಿಯೇ ಇಲ್ಲ. ಹಿಂದೂ ಧರ್ಮವನ್ನು ಕಾಯುತ್ತಿರುವುದು, ಜಾಗೃತಿಗೊಳಿಸುತ್ತಿರುವುದು ಹಿಂದುಗಳ ಶ್ರದ್ಧಾಬಿಂದುವಾದ ಹಿಂದು ಸಂತರು.

ಇದೇ ಕಾರಣಕ್ಕಾಗಿಯೇ ಮತಾಂಧರು ಹಿಂದೂ ಸಂತರನ್ನು ಟಾರ್ಗೆಟ್ ಮಾಡಿದ್ದು, ಮಾಡ್ತಿರೋದು. ಕ್ರೈಸ್ತರು ಕ್ರೈಸ್ತೀಕರಣಕ್ಕಾಗಿ, ಮುಸಲ್ಮಾನರು ಇಸ್ಲಾಮೀಕರಣಕ್ಕಾಗಿ ಮಾಡುತ್ತಿರುವ ದೌರ್ಜನ್ಯದ ವಿರುದ್ಧ ಹಿಂದೂ ಸಂತರು ಶುದ್ಧೀಕರಣ ನಡೆಸಿರುವ ಪರಿಣಾಮ ಹಿಂದೂ ಸಂತರು ಟಾರ್ಗೆಟ್ ಆಗುತ್ತಿದ್ದಾರೆ. ಹಿಂದೂ ಸಂತರನ್ನು ಮುಗಿಸಿದರೆ ಹಿಂದೂ ಧರ್ಮವೇ ನಾಶವಾಗುತ್ತೆಂದು ಭಾವಿಸಿದ ಮತಾಂಧರು ಹಿಂದೂ ಸಂತರ ಮೇಲೆ ಮುಗಿಬಿದ್ದದ್ದು. ಇದಕ್ಕೆ ನಮ್ಮನಾಳುವವರ ಬೆಂಬಲವೂ ಇತ್ತು. ನಮ್ಮನ್ನಾಳಿದ ನೆಹರೂ ಮನೆತನದವರ ಬೆಂಬಲವಿತ್ತು!! ಈಗಲೂ ಇದೆ.


ಭಾರತದ ಮೇಲೆ ದಾಳಿ ಮಾಡಿದ ವಿದೇಶಿಯರೆಲ್ಲ ಮಾಡಿದ್ದು ಸಂಪತ್ತಿಗಾಗಿ ಅಂತ ನಾವೆಲ್ಲ ಭಾವಿಸಿದರೆ ಅದು ತಪ್ಪು. ಮೊದ ಮೊದಲು ವಿದೇಶಿಯರು ದಾಳಿ ಮಾಡಿದ್ದು ಸಂಪತ್ತಿಗಾಗಿಯೇ ಆದರೂ ತದನಂತರ ಅವರು ಕೈ ಹಾಕಿದ್ದು ಹಿಂದೂ ಧರ್ಮಕ್ಕೆ. ಮೊಘಲರ ಅಟ್ಟಹಾಸದಿಂದ ಹಿಂದೂ ಧರ್ಮ ಅವನತಿಯತ್ತ ಹೋಗಿತ್ತು. ಆಗ ಹಿಂದೂ ವೀರರು ತಮ್ಮ ಕ್ಷಾತ್ರ ತೇವವನ್ನು ಪ್ರದರ್ಶಿಸಿದ ಪರಿಣಾಮ ಹಿಂದೂ ಧರ್ಮದ ಪುನರುತ್ಥಾನವಾಯ್ತು.

ಬ್ರಿಟಿಷರ ಕಾಲದಲ್ಲೂ ಬ್ರಿಟಿಷ್ ಮುಖವಾಡ ಹೊತ್ತಿದ್ದ ಕ್ರೈಸ್ತರು ಹೀನಾತೀತವಾಗಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸಿದರು. ಇವರ ಮಾತಿಗೆ, ಇವರ ಜೊತೆಯ ಪಸಂದಾದ ಪ್ರೇಮಕ್ಕೆ ನೆಹರೂ ಈ ದೇಶವನ್ನು ಇಬ್ಭಾಗ ಮಾಡಿಬಿಟ್ಟ. ನೆಹರೂ ಅವರ ಗುರು ಎನಿಸಿಕೊಂಡ ಗಾಂಧಿ ಕೂಡಾ ಮುಸ್ಲಿಂ ತುಷ್ಟೀಕರಣಕ್ಕಾಗಿ ಇಡೀಯ ಹಿಂದೂ ಧರ್ಮಕ್ಕೆ ಮೋಸ ಮಾಡಿಬಿಟ್ಟರು. ಗಾಂಧಿಜಿಯ ಇನ್ನೊಂದು ಮುಖದ ಅನಾವರಣ ಮಾಡಲೇಬೇಕಾಗಿದೆ. ಗಾಂಧಿಯ ಮುಸ್ಲಿಂ ಪ್ರೇಮಕ್ಕೆ ಅಂದು ಕೂಡಾ ಹಿಂದೂ ಸಂತರ ಬರ್ಬಲ ಕೊಲೆಯಾಗಿ ಹೋಗಿತ್ತು!! ಹೌದು ಬಹುತೇಕರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ?!


ಒಂದನೇ ಜಾಗತಿಕ ಯುದ್ಧದಲ್ಲಿ (1914-1918) ಟರ್ಕಿಯ ಸುಲ್ತಾನ ಖಲೀಫ ಅಬ್ದುಲ್ ಮಜೀದ್ ಸೋತು ಅವನ ಸಿಂಹಾಸನ, ಅಧಿಕಾರವನ್ನು ಕಳೆದುಕೊಂಡ. ಯಾವುದೋ ದೇಶದಲ್ಲಿ ಯಾವುದೋ ಖಲೀಫನ ಅಧಿಕಾರ ಹೋಗಿದ್ಕೆ ಇಲ್ಲಿನ ಮುಸಲ್ಮಾನರು ಖಂಡಿಸುವ ಆಂದೋಲನ ಮಾಡಿದರು ಅದಕ್ಕೆ ಖಿಲಾಪತ್ ಚಳುವಳಿ ಎಂದು ಹೆಸರಿಟ್ಟರು. ಈ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಈ ಖಿಲಾಪತ್ ಚಳುವಳಿಗೆ ಗಾಂಧೀಜಿಯೇ ಮುಂದಾಳತ್ವ ವಹಿಸಿದ್ದರು. ಕಾಂಗ್ರೆಸ್ಸಿನ ಈ ಮುಸ್ಲಿಂ ತುಷ್ಟೀಕರಣ ಮುಂದೆ ಲೆಕ್ಕವಿಲ್ಲದಷ್ಟು ಹಿಂದುಗಳ ಬಲಿ ತೆಗೆದುಕೊಂಡಿತು. ಇವಾಗಲೂ ಈ ಕಾಂಗ್ರೆಸ್ಸಿಗರ ಮುಸ್ಲಿಂ ತುಷ್ಟೀಕರಣ ನಿಂತಿಲ್ಲ ಹಾಗೆಯೇ ಹಿಂದುಗಳು ಬಲಿಯಾಗೋದು ನಿಂತಿಲ್ಲ. ಇವಾಗಲೂ ಯಾವುದೋ ದೇಶದಲ್ಲಿ ಯಾವುದೋ ಮುಸಲ್ಮಾನನಿಗೆ ಯಾರೋ ಹೊಡೆದರೆ ಭಾರತದ ಮುಸಲ್ಮಾನರು ಹಿಂದುಗಳ ಮೇಲೆ ಹಲ್ಲೆ ಮಾಡ್ತಾರೆ.

ಕೇರಳದೆಲ್ಲೆಡೆ ಖಿಲಾಪತ್ ಧ್ವಜಗಳು ಕಾಂಗ್ರೆಸ್ ಕಚೇರಿಗಳ ಮೇಲೆ ಹಾರಾಡತೊಡಗಿದವು. ಕಾಂಗ್ರೆಸ್ಸಿಗರೇ ಖಿಲಾಪತ್ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡರು. ಎಲ್ಲಿ ನೋಡಿದರೂ ಖಿಲಾಪತ್ ಚಳುವಳಿಯ ವಿಜೃಂಭಣೆ,ಖಿಲಾಪತ್ ಪರ ಘೋಷಣೆ, ಟೋಪಿ ಧರಿಸಿದ ಕಾಂಗ್ರೆಸ್ಸಿಗರು. ಟರ್ಕಿ ಅಧಿಕಾರಿಯ ಅಧಿಕಾರ ಹೋಗಿದ್ಕೆ ಇಲ್ಲಿಯ ಮುಸಲ್ಮಾನರು ಅಂದೋಲನ ಮಾಡ್ತಾರೆ ಅಂದ್ರೆ ಏನಾದ್ರೂ ಅರ್ಥವಿದೆಯಾ? ಅದಕ್ಕೆ ಕಾಂಗ್ರೆಸ್ಸಿಗರ ಬೆಂಬಲ ಬೇರೆ. ಖಿಲಾಪತ್ ಚಳುವಳಿಯ ಸಂದರ್ಭದಲ್ಲಿ ಅಲ್ಲಾ ಹೋ ಅಕ್ಬರ್ ಘೋಷಣೆಯೇ ಭಾರತ ಮಾತಾ ಕಿ ಜೈ ಘೋಷಣೆಗಿಂತಲೂ ಶ್ರೇಷ್ಠವೆಂದು ಗಾಂಧಿ ಹೇಳ್ತಾರೆ. ಆದರೆ ಅದೇ ಮಾಪಿಳ್ಳೆ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ಮಾಡಿದಾಗ ಅಲ್ಲಿಯ ಜನ ಗಾಂಧೀಜಿಯ ಹೆಸರನ್ನ ಹೇಳಿ ಬೇಡಿಕೊಂಡಾಗ ಆ ಮತಾಂಧರು ಗಾಂಧೀಜಿಯು ನಮ್ಮ ಪ್ರಕಾರ ಕಾಫಿರನೇ ಅಂತಾರೆ. ಗಾಂಧೀಜಿಗೆ ಅಲ್ಲಾ ಹೋ ಅಕ್ಬರ್ ಶ್ರೇಷ್ಠವಾಗಿರಬಹುದು ಆದರೆ ಸರ್ವಸಾಧಾರಣ ಮುಸಲ್ಮಾನನಿಗೆ ಅದು ಕಾಫಿರರ ವಿರುದ್ಧದ ಯುದ್ಧ ಘೋಷಣೆಯಾಗಿತ್ತು.

ಆ್ಯನಿ ಬೆಸೆಂಟರು ಹೇಳುವಂತೆ ,ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆ ಮುಸಲ್ಮಾನರು ಹಿಂದುಗಳ ತಲೆಗಳನ್ನು ಕತ್ತರಿಸಿ ಎಸೆದರು. ಸ್ತ್ರೀಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು,ನಂತರ ಎಲ್ಲರೆದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭವನ್ನು ಸೀಳಿ ಶಿಶುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ,ಹಸುಳೆ,ವೃದ್ಧೆ ಯಾರನ್ನೂ ಬಿಡದೆ ಅತ್ಯಾಚಾರ ಮಾಡುತ್ತಿದ್ದರು. ಮತಾಂತರಕ್ಕೆ ವಿರೋಧಿಸಿದವರನ್ನು ಕೊಂದರು. ಸುಮಾರು ಲಕ್ಷ ಮಂದಿ ಮೈಮೇಲಿನ ಉಟ್ಟ ಬಟ್ಟೆಯಿಂದಲೇ ಮನೆ ಮಠ ಬಿಟ್ಟು ನಿರಾಶ್ರಿತರಾಗಿ ಓಡಿಹೋದರು. ಅದೆಷ್ಟೋ ಗರ್ಭಿಣಿ ಸ್ತ್ರೀಯರು ಮಾರ್ಗ ಮಧ್ಯೆಯೇ ಶಿಶುಗಳಿಗೆ ಜನ್ಮ ನೀಡಿದರು.

ಅದೇ ಸಮಯದಲ್ಲಿ ಮುಸ್ಲಿಂ ಲೀಗ್ ನ ಅಧಿವೇಶನದ ಭಾಷಣದಲ್ಲಿ ಒಬ್ಬ ಮತಾಂಧ ಮುಸ್ಲಿಂ ಈ ಕೃತ್ಯವನ್ನು ಸಮರ್ಥಿಸುತ್ತಾ ಹಿಂದುಗಳು ಜಿಹಾದ್ ಸ್ವೀಕರಿಸಿ ಮತಾಂತರಗೊಳ್ಳದಿದ್ದರೆ ಅವರು ನಮ್ಮ ಶತ್ರುಗಳೇ ಅಂದ (ಅಹಮದಾಬಾದ್ ನಲ್ಲಿ ನಡೆದ ಅಧಿವೇಶನ). ಆ ಸಭೆಯಲ್ಲಿ ಗಾಂಧಿ ಸಹ ಇದ್ದರು ಆದರೆ ಗಾಂಧಿ ತುಟಿ ಬಿಚ್ಚಲೇ ಇಲ್ಲ. ಇದನ್ನೆಲ್ಲಾ ನೋಡಿದರೆ ಗಾಂಧೀಜಿಯನ್ನು ಮುಸ್ಲಿಂ ತುಷ್ಟೀಕರಣದ ಪಿತಾಮಹ ಅನ್ನಬಹುದು.


ಇಸ್ಲಾಮೀ ಮತಾಂಧರ ಈ ಕೃತ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದು ಧರ್ಮಕ್ಕೆ ಕರಾಳ ಭವಿಷ್ಯ ಕಾದಿದೆ ಎಂದು ಆಲೋಚಿಸಿ ಮರಳಿಮಾತೃ ಧರ್ಮಕ್ಕೆ ಬರುವಂತೆ ಶುದ್ಧಿಕರಣ ಕಾರ್ಯವನ್ನು ಶುರು ಮಾಡಿದರು. ತಪ್ಪಿಲ್ಲದ ಜನತೆಯ ಮೇಲೆ ಗುಂಡು ಹಾರಿಸುವುದಕ್ಕಿಂತ, ಮೊದಲು ನನ್ನ ಎದೆಗೆ ನಿಮ್ಮ ಬಂದೂಕುಗಳಿಂದ ಗುಂಡು ಹಾರಿಸಿರಿ ಎಂದು ಘರ್ಜಿಸಿ ಎದುರಿದ್ದವರ ಎದೆಗಂದುವಂತೆ ಮಾಡಿದ ವೀರ ಸನ್ಯಾಸಿಯ ಹೆಸರು ಸ್ವಾಮಿ ಶ್ರದ್ಧಾನಂದ. ಇಡೀ ಭಾರತಕ್ಕೆ ನಿರ್ಭಿತಿಯ ಮತ್ತು ಶೌರ್ಯದ ಸಂದೇಶವನ್ನು ಕೊಟ್ಟ ಮಹಾ ಸಂತ ಸ್ವಾಮಿ ಶ್ರದ್ಧಾನಂದರು.

ಭಯ,ಬಲಾತ್ಕಾರ, ಆಮಿಷಗಳಿಗೆ ಸಿಲುಕಿ ಮತಾಂತರವಾದವರನ್ನು ಶದ್ಧಿಕಾರ್ಯದೊಂದಿ ಮರಳಿ ಮಾತೃ ಧರ್ಮಕ್ಕೆ ಕರೆತಂದವರು ಸ್ವಾಮಿ ಶ್ರದ್ಧಾನಂದರು. ಮರಳಿ ಮಾತೃಧರ್ಮಕ್ಕೆ ತರುವ ಶುದ್ಧಿಕಾರ್ಯವನ್ನು ಆರಂಬಿಸಿದರು. ಭಯ,ಬಲಾತ್ಕಾರ,ಆಮಿಷಕ್ಕೆ ಸಿಲುಕಿದವರು ಮರಳಿ ಮಾತೃಧರ್ಮಕ್ಕೆ ಬರಲಾರಂಭಿಸಿದರು. ಉತ್ತರ ಪ್ರದೇಶ ಒಂದರಲ್ಲೇ ಒಂದು ವರ್ಷದಲ್ಲಿ ಸುಮಾರು 18,000ಕ್ಕೂ ಅಧಿಕ ಜನ ಮರಳಿ ಮಾತೃಧರ್ಮಕ್ಕೆ ಬಂದರು. ಇದನ್ನು ಸಹಿಸದ ಮತಾಂಧ ಮೌಲ್ವಿಗಳು ಅವರನ್ನು ಹೀಗಳೆಯಲು ಆರಂಭಿಸಿದರು. ಕಾಂಗ್ರೆಸ್ಸಿಗರೂ ಆ ಮೌಲ್ವಿಗಳ ಧ್ವನಿಗೆ ಧ್ವನಿಗೂಡಿಸಿ ಶ್ರದ್ಧಾನಂದರನ್ನು ಖಂಡಿಸತೊಡಗಿದರು.


ಮುಸಲ್ಮಾನರ ದಾರ್-ಉಲ್-ಇಸ್ಲಾಂ ಕನಸು ನುಚ್ಚು ನೂರಾದೀತೆಂದು 1926 ಡಿಸೆಂಬರ್ 26ರಂದು ಅಬ್ದುಲ್ ರಶೀದ್ ಎಂಬ ಮತಾಂಧ ಸ್ವಾಮಿ ಶ್ರಧ್ದಾನಂದರನ್ನು ಗುಂಡಿಟ್ಟುಕೊಂದ. ಶ್ರದ್ಧಾನಂದರ ಕೊಲೆಯ ಬಗ್ಗೆ ಗಾಂಧೀಜಿಗೆ ಪ್ರತಿಕ್ರಿಯೆ ಕೇಳಿದಾಗ ಗಾಂಧೀ ಹೇಳ್ತಾರೆ. ನಾನು ರಶೀದ್ ನನ್ನು ಸಹೋದರನೆಂದು ಭಾವಿಸಿದ್ದೇನೆ ಎಂದರು. ಬರೀ ಅಷ್ಟೇ ಅಲ್ಲ ಅವನ ಪರ ವಾದಿಸಲು ಸಿದ್ಧರಾಗಿದ್ದರು. ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿಯ ಉಲ್ಲೇಖದ ಪ್ರಕಾರ ಆ ಸಮಯದಲ್ಲಿ ಕೊಲೆಗೀಡಾದ ಹಿಂದುಗಳ ಸಂಖ್ಯೆ 1500, ಬಲಾತ್ಕಾರದಿಂದ ಮತಾಂತರಗೊಂಡವರು 20,000. ಹಿಂದು ಸ್ತ್ರೀಯರ ಮಾನಭಂಗ, ಅಪಹರಣಗಳ ಸಂಖ್ಯೆಗಳ ಬಗ್ಗೆ ಲೆಕ್ಕವೇ ಇಲ್ಲ.

ಅಂದು ಗಾಂಧಿ ತನ್ನನ್ನು ತಾನು ಜಾತ್ಯಾತೀತವ್ಯಾದಿ ಎಂದು ಗುರಿತಿಸಿಕೊಳ್ಳಲಿಕ್ಕೆ ಮುಸ್ಲಿಂ ತುಷ್ಟೀಕರಣಕ್ಕೆ ನಿಂತು ಅವರ ಪರ ನಿಂತ ಪರಿಣಾಮ ಸ್ವಾಮಿ ಶ್ರದ್ಧಾನಂದರ ಕೊಲೆಯಾಯ್ತು. ಅಂದು ಗಾಂಧಿ, ನೆಹರು ಬಿತ್ತಿದ ತುಷ್ಟೀಕರಣದ ಬೀಜ ಇಂದು ಹೆಮ್ಮರವಾಗಿ ಹಿಂದುಗಳ ಮೇಲೆ ದೌರ್ಜನ್ಯಗಳಾಗುತ್ತಿವೆ. ಇದರ ಪರಿಣಾಮವೇ ಸ್ವಾಮಿ ಲಕ್ಷಣಾನಂದರ ಕೊಲೆ!! ಇಂದು ಅದೇ ರೀತಿಯಾಗಿ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

Source: http://hindutva97.blogspot.com/2008/08/christist-terrorists-murdered-swami.html

 

– Nationalist Mahi

 •  
  2.6K
  Shares
 • 2.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com