Connect with us
Loading...
Loading...

ಇತಿಹಾಸ

ಹೇಗೆ ಸಾಯೋಕೆ ಇಷ್ಟಪಡ್ತೀಯ ‘ಬಂದಾ? ಸಾವಿಗೆ ನಾ ಹೆದರಲ್ಲ! ಅಂದಾಗ ಆತನ 5 ವರ್ಷದ ಪುಟ್ಟ ಮಗನನ್ನ ಕತ್ತರಿಸಿ ಮಗನ ಮಾಂಸವನ್ನ ಆತನ ಬಾಯಲ್ಲಿ ತುರುಕಿ ನಂತರ ಆತನನ್ನ….

Published

on

 • 4.2K
 •  
 •  
 •  
 •  
 •  
 •  
 •  
  4.2K
  Shares

ಇಂದು ಅಂದರೆ ಜೂನ್ 9 ಭಾರತದ ತ್ರಿವಿಕ್ರಮ, ಶಕ್ತಿಶಾಲಿ, ಮಹಾನ್ ಯೋಧನಾದ ಬಂದಾ ಬೈರಾಗಿ ಯ ಬಲಿದಾನ ದಿನ. ಎಷ್ಟು ಹಿಂದುಗಳಿಗೆ ಈ ವೀರ ಯೋಧನ ಬಗ್ಗೆ ಪರಿಚಯವಿದೆ? ಬಹುಶಃ ಬಹಳಷ್ಟು ಜನರಿಗೆ ಬಂದಾ ಬೈರಾಗಿ ಅಂದರೆ ಯಾರು ಅನ್ನೋದೇ ಗೊತ್ತಿರಲಿಕ್ಕಿಲ್ಲ. ಇದು ಹಿಂದುಗಳ ತಪ್ಪಲ್ಲ ಇದು ನಮ್ಮ ಪಠ್ಯಕ್ರಮಗಳಲ್ಲಿ ವಾಮಪಂಥೀಯ ಇತಿಹಾಸಕಾರರು ಸ್ವಾತಂತ್ರ್ಯಾನಂತರ ಪಠ್ಯಗಳಲ್ಲಿ‌ಒಂತಹ ಶೂರರ ಇತಿಹಾಸವನ್ನ ಸೇರಿಸದೇ ನಮ್ಮ ಇತಿಹಾಸಕ್ಕೆ ಮೋಸ ಮಾಡಿದ ಕಾರಣ ಇತಿಹಾಸದ ಪುಟಗಳಲ್ಲಿ ತೆರೆಮರೆಗೆ ಸರಿದ ವೀರ ಯೋಧನಾಗಿದ್ದಾನೆ ಬಂದಾ ಬೈರಾಗಿ.

ಹಾಗಾದರೆ ಧರ್ಮಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಆ ವೀರನ ಬಲಿದಾನ ವ್ಯರ್ಥವಾಯಿತಾ? ಹಿಂದುಗಳು ದಮಯವಿರುವಾಗಲೇ ತಮ್ಮ ಇತಿಹಾಸವನ್ನ ತಿಳಿಯುವರೇ? ಹಿಂದುಗಳು ತಮ್ಮ ಪೂರ್ವಜರು ಮಾಡಿದ ಬಲಿದಾನದ ಋಣವನ್ನ ತೀರಿಸಿ ಅವರ ಆತ್ಮಕ್ಕೆ ಮೋಕ್ಷ ದೊರಕಿಸುವರೇ?

ಬಂದಾ ಬೈರಾಗಿಯಂತೆ ದೇಶದ ಅಖಂಡತೆಗೆ, ಧರ್ಮರಕ್ಷಣೆಗಾಗಿ ಪ್ರಾಣತೆತ್ತ ಲಕ್ಷಾಂತರ ಜನ ಹಿಂದು ವೀರ ಸೇನಾನಿಗಳ ಇತಿಹಾಸವನ್ನ ಕನಿಷ್ಟಪಕ್ಷ ತಿಳಿಯುವ ಪ್ರಯತ್ನವಾದರೂ ಮಾಡೋಣ ಬನ್ನಿ. ಈ ಲೇಖನವನ್ನ ಓದಿ ನಮ್ಮ ಪೂರ್ವಜರ ಬಲಿದಾನದ ಇತಿಹಾಸವನ್ನ ಎಷ್ಟಾಗುತ್ತೋ ಅಷ್ಟು ವೈರಲ್ ಮಾಡಿ ನಮ್ಮ ಧರ್ಮದ ಮಹಾನ್ ಕ್ಷಾತ್ರತೇಜಸ್ಸನ್ನ ಪಸರಿಸಿ.

ಬಂದಾ ಬೈರಾಗಿ ಯವರಿಗೆ ಆ ಹೆಸರು ಬಂದದ್ದು ಹೇಗೆ ಗೊತ್ತಾ?

ಬಂದಾ ಬೈರಾಗಿಯವರ ಜನ್ಮವು ಅಕ್ಟೋಬರ್ 2, 1670 ರಲ್ಲಿ ಕಾಶ್ಮೀರದ ಪೂಂಛ್ ಜಿಲ್ಲೆಯ ತಚ್ಛಲ್ ಕೋಟೆಯಲ್ಲಿ ಶ್ರೀರಾಮದೇವರ ಮನೆಯಲ್ಲಾಗಿತ್ತು. ಅವರ ಬಾಲ್ಯದ ಹೆಸರು ಲಕ್ಷಣದಾಸ್ ಆಗಿತ್ತು. ಲಕ್ಷಮದಾಸ್ ತನ್ನ ಯುವಾವಸ್ಥೆಯಲ್ಲಿದ್ದಾಗ ಆತನಿಗೆ ಬೇಟೆಯಾಡೋದೆಂದರ ಪಂಚಪ್ರಾಣವಾಗಿತ್ತು.

ಹೀಗೇ ಒಮ್ಮೆ ಲಕ್ಷಣದಾಸನು ಬೇಟೆಗಾಗಿ ಹೋದಾಗ ಆ ಯುವಕ ತನಗರಿಯದೆ ಗರ್ಭವತಿ ಜಿಂಕೆಯೊಂದನ್ನ ಬೇಟೆಯಾಡಿಬಿಡುತ್ತಾನೆ. ಜಿಂಕೆ ಒದ್ದಾಡಿ ಸಾಯುವಾಗ ಅದರ ಹೊಟ್ಟೆಯಲ್ಲಿದ್ದ ಮರಿ ಹೊರಬಿದ್ದು ಒದ್ದಾಡಿ ಸತ್ತು ಹೋಗುತ್ತೆ. ನಂತರ ಆತ ಎಂಥಾ ಘೋರ ತಪ್ಪು ಮಾಡಿದೆ,‌ ಜಿಂಕೆಯನ್ನ ಸಾಯಿಸಿದ್ದಷ್ಟೇ ಅಲ್ಲದೆ ಅದರ ಹೊಟ್ಟೆಯಲ್ಲಿದ್ದ ಕೂಸನ್ನೂ ಕೊಂದೆನಲ್ಲಾ ಎಂಬ ನೋವು, ದುಖಃ ಲಕ್ಷಣದಾಸನಿಗೆ ಪಾಪಪ್ರಜ್ಞೆಯಂತೆ ಕಾಡಲಾರಂಭಿಸಿತು.

ಇದರಿಂದ ಖಿನ್ನತೆಗೊಳಗಾದ ಲಕ್ಷ್ಮಣದಾಸ್ ಎಂಬ ಆ ಯುವಕ ತನ್ನ ಹೆಸರನ್ನ ಮಾಧೋದಾಸ್ ಎಂದು ಬದಲಿಸಿಕೊಂಡು ತನ್ನ 15 ನೆಯ ವಯಸ್ಸಿನಲ್ಲಿ ಮನೆಯನ್ನ ತೊರೆದು ತೀರ್ಥಯಾತ್ರೆಗೆ ಹೊರಟುಬಿಟ್ಟ. ನಂತರ ಆತ ಅನೇಕ ಸಾಧು ಸಂತರನ್ನ ಭೇಟಿಯಾಗಿ ಅವರಿಂದ ಯೋಗ, ಆಧ್ಯಾತ್ಮ ಮುಂತಾದ ಸಾಧನೆಗಳನ್ನ ಕಲಿತು ಕಾಶ್ಮೀರದಿಂದ ಹೊರಟಂಥವನು ಕೊನೆಗೆ ಮಹಾರಾಷ್ಟ್ರದ ನಾಂದೇಡ್‌ಗೆ ತಲುಪಿ ಅಲ್ಲಿ ಒಂದು ಕುಟೀರ ನಿರ್ಮಿಸಿಕೊಂಡು ಅಲ್ಲೇ ಧ್ಯಾನದಲ್ಲಿ ಮಗ್ನನಾಗಿಬಿಟ್ಟ.

ಗುರುಗೋವಿಂದ್ ಸಿಂಗರು ಹಾಗು ಮಾಧೋದಾಸ್ ನ ಮಿಲನ:

ಗುರು ಗೋವಿಂದ ಸಿಂಗರು ಅದಾಗಲೇ ಮೊಘಲರ ಅಟ್ಟಹಾಸದ ವಿರುದ್ಧ ಹೋರಾಡುತ್ತ ಬಂದಿದ್ದ. ತನ್ನ ನಾಲ್ಕು ಮಕ್ಕಳನ್ನೂ ಮೊಘಲ್ ತುರ್ಕರು ಘೋರವಾಗಿ ಕೊಂದು ಹಾಕಿದ್ದರು. ಆದರೆ ಛಲಬಿಡದ ಗುರುಗೋವಿಂದರು ಮುಸ್ಲಿಂ ಆಕ್ರಮಣಕಾರರಾದ ಮೊಘಲರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಾಗು ತನ್ನ ಸಾಮ್ರಾಜ್ಯವನ್ನ ಸೂಕ್ತವಾದ ಕ್ಷಾತ್ರತೇಜಸ್ಸಿನ ವ್ಯಕ್ತಿಯ ಕೈಗೊಪ್ಪಿಸಲು ತೀರ್ಮಾನಿಸಿಬಿಟ್ಟಿದ್ದರು.

ಅಂತಹ ಕ್ಷಾತ್ರತೇಜಸ್ಸಿನ ವ್ಯಕ್ತಿಗಾಗಿ ಗುರುಗೋವಿಂದ ಸಿಂಗರು ಹುಡುಕಾಟವನ್ನ ನಡೆಸಿದ್ದರು. ತನ್ನ ಆಸ್ಥಾನದಲ್ಲಿನ ದೀವಾನರು, ಸಭೆಯಲ್ಲಿ ಸೇರಿದ್ದ ಘಟಾನಿಘಟಿಗಳ ಬಳಿ ಅಂತಹ ವ್ಯಕ್ತಿ ಯಾರಿದ್ದಾರೆ ಎಂದು ಕೇಳುತ್ತಿರುವಾಗಲೇ ಅವರಿಗೆ ಸಭೆಯಲ್ಲಿದ್ದವರಿಂದ ನಾಂದೇಡ್ ನಲ್ಲಿ‌ ವಾಸಿಸುತ್ತಿರುವ ಮಾಧೋದಾಸ್ ನ ಬಗ್ಗೆ ತಿಳಿಯಿತು. ಆತನ ಬಗ್ಗೆ ತಿಳಿಯುತ್ತಲೇ ಗುರುಗೋವಿಂದ ಸಿಂಗರು ಆತನನ್ನೇ ತನ್ನ ಸಾಮ್ರಾಜ್ಯದ ನಾಯಕತ್ವ ವಹಿಸಲು ತೀರ್ಮಾನಿಸಿಬಿಟ್ಟರು.

ಸೆಪ್ಟೆಂಬರ್ ತಿಂಗಳು 1708 ರಂದು ಸೂರ್ಯ ಗ್ರಹಣವಾಗಿತ್ತು ಆ ಸಂದರ್ಭದಲ್ಲಿ ಜಾತ್ರೆಯೊಂದು ನಾಂದೇಡ್ ನಲ್ಲಿ ನಡೆದಿದ್ದ ಸಂದರ್ಭದಲ್ಲಿ ಗುರು ಗೋವಿಂದಸಿಂಗರು ಮಾಧೋದಾಸನಿದ್ದ ಕುಟೀರಕ್ಕೆ ಆಗಮಿಸಿದ್ದರು. ಆಗ ಗೋದಾವರಿ ನದಿಯ ದಡದ ತೀರದಲ್ಲಿ ಜಾತ್ರೆ ನಡೆಯುತ್ತಿದ್ದು ಮಾಧೋದಾಸ್ ತನ್ನ ಕುಟೀರದಲ್ಲಿರಲಿಲ್ಲ.

ಆಗ ವೈರಾಗಿ ಮಾಧೋದಾಸನು ಗೋದಾವರಿಯಲ್ಲಿ ಸ್ನಾನಕ್ಕೆಂದು ಹೋಗಿ‌ ನಂತರ ತನ್ನ ಕುಟೀರಕ್ಕೆ ವಾಪಸ್ಸಾದ ಬಳಿಕ‌ಆತನ ಶಿಷ್ಯರು ಆತನಿಗೆ “ಗುರುಗಳೇ ಪ್ರಮುಖ ಸಿಖ್ಖರ ಗುಂಪೊಂದು ಕುಟೀರಕ್ಕೆ ಬಂದು ಇಲ್ಲಿದ್ದ ಒಂದು ಜಿಂಕೆ, ಒಂದು ಕುರಿ ಹಾಗು ಅದರ 2 ಕುರಿಮರಿಗಳನ್ನ ಕೊಂದು ಅದನ್ನ ಇಲ್ಲಿಯೇ ಬೇಯಿಸಿ ತಿಂದು ಹೋಗಿದ್ದಾರೆ” ಎಂದು ಹೇಳ್ತಾರೆ.

ಇದನ್ನ ಕೇಳಿದ ಸಂತ ಮಾಧೋದಾಸನಿಗೆ ಆಕ್ರೋಶವುಕ್ಕಿ ಬರುತ್ತೆ. ಹಿಂದೆ ತಾನು ಕಾಶ್ಮೀರದಲ್ಲಿದ್ದಾಗ ತಾನೂ ಕೂಡ ಒಂದು ಗರ್ಭವತಿ ಜಿಂಕೆ ಹಾಗು ಅದರ ಹೊಟ್ಟೆಯಲ್ಲಿದ್ದ ಜಿಂಕೆ ಮರಿಯನ್ನ ಆತ ಕೊಂದ ಘಟನೆ ಆತನಿಗೆ ನೆನಪಾಗಿ ಆತನ ಪಿತ್ತ ನೆತ್ತಿಗೇರಿ ತನ್ನ ಕುಟೀರಕ್ಕೇ ಬಂದು ಮೂಕ ಪ್ರಾಣಿಗಳನ್ನ ಕೊಂದವರನ್ನ ಬಿಡಲಾರೆ ಎಂದು ಹಲ್ಲು ಮಸಿಯುತ್ತ ತನ್ನ ರಜಪೂತ ಕ್ಷಾತ್ರತೇಜಸ್ಸಿನ ರೂಪಕ್ಕೆ ಮರಳಿಬಿಡುತ್ತಾನೆ.

ನಂತರ ಆ ಸಿಖ್ಖರ ತಂಡವನ್ನ ಹುಡುಕಿ‌ ಹೊರಟಾಗ ಆತನಿಗೆ ಶ್ರೀಗುರುಗಳಾದ ಗುರುಗೋವಿಂದ ಸಿಂಗರ ಬಳಿಗೆ ಬಂದೇ ಬಿಡ್ತಾನೆ. ಆತ ಖಂಡಿತವಾಗಿಯೂ ಬರ್ತಾನೆ ಅಂತ ಗೊತ್ತಿದ್ದ ಗುರುಗೋವಿಂದರು ಆತನನ್ನ ಕಂಡ ತಕ್ಷಣ ಮುಗುಳ್ನಕ್ಕು ಹೇಳ್ತಾರೆ

“ಮಾಧೋದಾಸ್! ನಾವು ನಿನ್ನನ್ನ ಭೇಟಿಯಾಗೋಕೆ ಬಂದಿದ್ದೆವು, ನೀ ಎಲ್ಲಿಗೆ ಹೋಗಿದ್ದೆ?”

ವೈರಾಗಿ ಮಾಧೋದಾಸ ಕ್ರೋಧದಿಂದ ಉತ್ತರಿಸುತ್ತ “ಗರೀಬ್ ನವಾಜರೇ ನೀವ್ಯಾರಂತ ನನಗ್ ಗೊತ್ತಿಲ್ಲ,‌ ನೀವೆಲ್ಲಿಂದ ಬಂದಿದ್ದೀರ ಅನ್ನೋದೂ ಗೊತ್ತಿಲ್ಲ,‌ ನಿಮಗೆ ನನ್ನ ಪರಿಚಯವಿದ್ದರೆ ನೀವು ನನಗಾಗಿ ಕಾಯಬಹುದಿತ್ತು ಆದರೆ ನೀವು ನನ್ನ ಕುಟೀರದಲ್ಲಿದ್ದ ಮೂಕ, ಸಾಧು ಪ್ರಾಣಿಗಳನ್ಯಾಕೆ ಕೊಂದಿರಿ? ಈ ಕುಟೀರ ವೈಷ್ಣವ ಸಾಧುಗಳ ಕುಟೀರವಾಗಿದೆ,‌ ಇಲ್ಲಿ ಪ್ರಾಣಿಹತ್ಯೆ ನಡೆಸೋದು ಮಹಾಪಾಪ” ಎಂದ.

ಇದಕ್ಕೆ ಉತ್ತರಿಸುತ್ತ ಗುರುಗೋವಿಂದರು “ಮಾಧೋದಾಸ್! ನನ್ನ ನಿನ್ನ ಭೇಟಿ ಒಮ್ಮೆ ಹೃಷಿಕೇಶ್-ಹರಿದ್ವಾರದಲ್ಲಾಗಿತ್ತು, ಆಗ ನೀನು ಸಾಧುಗಳ ಮಂಡಳಿಯಲ್ಲಿದ್ದೆ, ಆ ಸಾಧುಗಳ ಮುಖ್ಯಸ್ಥ ನಾಸಿಕ್ ನವರಾದ ಓಘಡನಾಥ್ ಯೋಗಿಯಾಗಿದ್ದರು” ಎಂದರು

ಇದನ್ನ ಕೇಳಿದಾಕ್ಷಣ ಒಮ್ಮೆಲೆ ಆ ದಿನಗಳನ್ನ ನೆನೆಸಿಕೊಂಡ ಮಾಧೋದಾಸನು ಉದ್ಘಾರದಿಂದ “ಮಹಾರಾಜರೇ,‌ ನೀವು ಗುರುಗೋವಿಂದ ಸಿಂಗರಲ್ಲವೇ? ನಿಮ್ಮ ತಂದೆಯವರು ದೆಹಲಿಯಲ್ಲಿ ಶಿರಚ್ಛೇದದ ಮೂಲಕ ಬಲಿದಾನ ಮಾಡಿದ್ದವರಲ್ಲವೇ?” ಎಂದ.

ಅಷ್ಟೊತ್ತಿಗಾಗಲೇ ವೈರಾಗಿ ಮಾಧೋದಾಸನ ಕೋಪ ತಣ್ಣಗಾಗಿತ್ತು ಆಗ ಗುರುಗೋವಿಂದರು “ಹೌದು ಮಾಧೋದಾಸ್ ನಾನು ಅದೇ ಗುರುಗೋವಿಂದ ಸಿಂಗ್” ಎಂದು ಉತ್ತರಿಸುತ್ತ “ಮಾಧೋದಾಸ್! ಈ‌ಕುಟೀರ ವೈಷ್ಣವ ಸಾಧುಗಳ‌ ಕುಟೀರ ವೆಂದು ಹೇಳಿ ಇಲ್ಲಿ ಪ್ರಾಣಿಗಳ ಹತ್ಯೆ ಯಾಕೆ ಮಾಡಿದಿರಿ ಅಂತ ಕೇಳಿದೆಯಲ್ಲ ಅದರ ಉತ್ತರ ಕೊಡ್ತೀನಿ‌ ಕೇಳು. ಮಾಧೋದಸ್, ನಾನು‌ ಈ ಮೂಕ ಪ್ರಾಣಿಗಳನ್ನ ಕೊಂದದ್ಯಾಕಂದ್ರೆ ನಾನು ನಿನ್ನೊಳಗೆ ಕಳೆದು ಹೋಗಿದ್ದ ಆ ಕ್ಷಾತ್ರತೇಜಸ್ಸನ್ನ ಬಡಿದೆಬ್ಬಿಸಬೇಕಿತ್ತು ಹಾಗಾಗಿ ನಾನು ನೀನಿರುವ ಜಾಗ ಹುಡುಕಿಕೊಂಡು ಬಂದೆ. ಕಾರಣವಿಲ್ಲದೆ ನಾನ್ಯಾಕೆ ನಿನ್ನ ಹತ್ತಿರ ಬಂದು ಈ ಕೃತ್ಯಗಳೆಲ್ಲಾ ಮಾಡಬೇಕಿತ್ತು ಹೇಳು?” ಎಂದು ಮಾತನ್ನ ಮುಂದುವರೆಸುತ್ತ ಗುರುಗೋವಿಂದರು ತಾವು ಕೈಗೊಂಡಿರುವ ಸಂಕಲ್ಪವನ್ನ ಮಾಧೋದಾಸನಿಗೆ ತಿಳಿಸಲು ಮುಂದಾಗುತ್ತಾರೆ.

“ನೋಡು ಮಾಧೋದಾಸ್ ಈ‌ ನಾಲ್ಕು‌ ಅಮಾಯಕ ಪ್ರಾಣಿಗಳ ಹತ್ಯೆ ಮಾಡಿದ್ದಕ್ಕೆ ‌ನಿನ್ನ ಆಶ್ರಮ ಅವಿತ್ರವಾಯಿತೆಂದು ಹೇಳಿದೆಯಲ್ಲಾ ಹಾಗಾದರೆ ಪುಣ್ಯಭೂಮಿಯಾಗಿ ಸಾಕ್ಷಾತ್ ಆಶ್ರಮದಂತಿರುವ ಈ ಭರತಭೂಮಿಯಲ್ಲಿ ಇಸ್ಲಾಮಿಕ್ ಆಕ್ರಮಣಕಾರರಿಂದ ದಿನನಿತ್ಯ ನೂರಾರು‌ಅಮಾಯಕ ಹಿಂದುಗಳ ಹತ್ಯೆಯಾಗುತ್ತಿರೋದು ನಿನಗೆ ತಿಳಿದಿಲ್ಲವೇ? ಅದನ್ನ ನಿನಗೆ ಮನವರಿಕೆ ಮಾಡಿಕೊಡಲು ನಾನು ಈ ರೀತಿಯಾಗಿ ನಿನ್ನ ಆಶ್ರಮದಲ್ಲಿ ಮೂಕ ಪ್ರಾಣಿಗಳ ಹತ್ಯೆ ಮಾಡಬೇಕಾಯಿತಷ್ಟೇ” ಎಂದರು.

ಗುರುಗೋವಿಂದರ ಮಾತಿನ ತಾತ್ಪರ್ಯ ಹಾಗು ಭರತಭೂಮಿಯಲ್ಲಿ ನಡೆಯುತ್ತಿರುವ ಪಾಪಕೃತ್ಯಗಳ ಬಗ್ಗೆ ಅರಿವಾದ ವೈರಾಗಿ ಮಾಧೋದಾಸ್ ನು‌ ತಲೆಬಾಗಿ ಗುರುಗೋವಿಂದರಿಗೆ ವಿನಮೃವಾಗಿ ಉತ್ತರಿಸುತ್ತ

“ನಾನು ಇಂದಿನಿಂದ ನಿಮ್ಮ ಬಂದಾ(ನಿಮ್ಮ ಹುಡುಗ), ಮುಂದೆ ನನ್ನಿಂದ ಎಂಥಾ ಕೈಂಕರ್ಯಗಳು‌ ನಡೆಯಬೇಕು ಅನ್ನೋದನ್ನ ತಿಳಿಸಿ ಗುರುಗಳೇ” ಎಂದ.

ಈ ರೀತಿಯಲ್ಲಿ ವೈರಾಗಿಯಾಗಿದ್ದ ಮಾಧೋದಾಸನು ಮಾಧೋದಾಸನಾಗಿ ಉಳಿಯದೆ ಗುರುಗೋವಿಂದರ ಶಿಷ್ಯನಾಗಿ ತನ್ನ ಜೀವವನ್ನ ಗುರುಗಳ ಆಜ್ಞೆಗಾಗಿ ಮೀಸಲಿಟ್ಟು “ಬಂದಾ ಬೈರಾಗಿ” ಯಾಗಿ ಬದಲಾಗಿ ಬಿಟ್ಟ. ಇಲ್ಲಿ ಬಂದಾ ಅಂದರೆ ಶಿಷ್ಯ ಬೈರಾಗಿ ಅಂದರೆ ವೈರಾಗ್ಯ ಸ್ವೀಕರಿಸಿದ್ದ ವೈರಾಗಿ ಎಂದರ್ಥ

ಇದಾದ ನಂತರ ಗುರು ಗೋವಿಂದ ಸಿಂಗರು ಬಂದಾ ಬೈರಾಗಿಯಲ್ಲಿದ್ದ ಕ್ಷಾತ್ರತೇಜಸ್ಸನ್ನ ಬಡಿದೆಬ್ಬಿಸಿದ ಬಳಿಕ ಇಬ್ಬರೂ ಒಂದೆಡೆ ಕುಳಿತು ರಹಸ್ಯ ಮಾತುಕತೆಗಳನ್ನ ನಡೆಸಿದರು. ನಂತರ ಬಂದಾ ಬೈರಾಗಿ ಗುರುಗೋವಿಂದರ ಪಾದಕ್ಕೆರಗಿ ಅವರಿಂದ ದೀಕ್ಷೆ ಪಡೆದು ಧರ್ಮರಕ್ಷಣೆಗಾಗಿ‌ ಕಟಿಬದ್ಧನಾಗಿ ನಿಂತುಬಿಟ್ಟ.

ಗುರುಗೋವಿಂದ ಸಿಂಗರು ತಮ್ಮ‌ ಭಾವಿ ನೇತೃತ್ವವನ್ನ ಬಂದಾ ಬೈರಾಗಿಗೆ ವಹಿಸಿ ಅಲ್ಲಿಂದ ಹೊರಟು ಹೋದರು. ಅವರು ಆಶ್ರಮದಿಂದ ಕೆಲ ದೂರ ಹೊರನಡೆದ ನಂತರ ಬಂದಾ ಬೈರಾಗಿ ಅವರನ್ನ “ಎಷ್ಟು ದಿನಗಳ‌ ಕಾಲ ಈ ವಿಷಯ ರಹಸ್ಯವಾಗಿರಬೇಕು?” ಎಂದು ಕೇಳಿದ.

ಗುರು ಗೋವಿಂದರು ಉತ್ತರಿಸುತ್ತ “9 ವಾರ ಹತ್ತು ದಿಬಗಳು, ಅದರ ನಂತರ ನಿನಗೇ ಅರ್ಥವಾಗುತ್ತೆ” ಎಂದರು.

ಇದಾದ ಕೆಲ ದಿನಗಳ ನಂತರ ವೈರಾಗಿ ಮಾಧೋದಾಸ್ ಅಂದರೆ ಬಂದಾ ಬೈರಾಗಿ ಗುರಿಗೋವಿಂದ ಸಿಂಗರ ಆಜ್ಞೆ, ಅಣತಿಯಂತೆ ತನ್ನ ಆಶ್ರಮವನ್ನ ಹರಿದಾಸ್ ದಖ್ಖನಿಗೆ ವಹಿಸಿ ಗುರುಗೋವಿಂದರಿದ್ದ ಸ್ಥಳಕ್ಕೆ ಬಂದುಬಿಟ್ಟ‌.

ಆತ ಬಂದ ಎರಡನೆಯ ದಿನಕ್ಕೆ ಭಾಯಿ ದಯಾ ಸಿಂಗರು ಮಾಧೋದಾಸನಿಗೆ “ಸಂತರೇ ತಯಾರಿ ಶುರು ಮಾಡಿ ನಿಮಗೆ ಶ್ರೀಗುರುಗಳು ತಮ್ಮ ಪಾವನಹಸ್ತದಿಂದ ವಿಧಿ ಪೂರ್ವಕವಾಗಿ ನಿಮಗೆ ದೀಕ್ಷೆ ನೀಡುತ್ತಾರೆ” ಎಂದ.

ಸಮ್ವತ 1765 ರ ವಿಕ್ರಮಿಯ ಕಾರ್ತಿಕ ಶುಕ್ಲ ತೃತಿಯದ ದಿನ ವೈರಾಗಿ ಮಾಧೋದಾಸನು ಬಂದಾ ಸಿಂಗ್ ನಾಗಿ ಆತನಿಗೆ ದೀಕ್ಷೆ ನೀಡಿ ಭಗವಂತ್ ಸಿಂಗ್ ಬಂಗೇಶ್ವರಿ ಜೊತೆಯಲ್ಲಿ ಮದ್ರದೇಶ (ಪಂಜಾಬ್ ನ ಮೂಲ ಹೆಸರು) ಕ್ಕೆ ತೆರಳಲು ಆದೇಶ ನೀಡಿದರು.

ಬಂದಾ ಸಿಂಗನ ಜೊತೆ ಭಗವಂತ್ ಸಿಂಗ್, ಕೋಯಿರ್ ಸಿಂಗ್, ಬಾಜ್ ಸಿಂಗ್, ವಿನೋದ್ ಸಿಂಗ್ ಹಾಗು ಕಾಹನ್ ಸಿಂಗರೆಂಬ ಐವರು ಪ್ರಮುಖ ಸಿಖ್ಖರನ್ನ ಕಳಿಸಿಕೊಟ್ಟರು. ಗುರುಗೋವಿಂದರು ಬಂದಾ ಸಿಂಗನಿಗೆ ಒಂದು ಕೃಪಾಣ, ಒಂದು ತಲ್ವಾರ್, ಐದು ಬಾಣಗಳು ಹಾಗು ಒಂದು ನಿಶಾನ್ ಸಾಹಿಬ್ ಕೊಟ್ಟು ಪಂಜಾಬಿ ನತ್ತ ತೆರಳು ಆದೇಶವಿತ್ತರು.

ಗುರುಗೋವಿಂದರ ಆಶೀರ್ವಾದ ಪಡೆದ ಬಂದಾ ಸಿಂಗ್ ಒಂಭತ್ತು ವಾರಗಳೊಳಗೆ ಗುಪ್ತವಾದ ಬಲಿಷ್ಟ ಸೈನ್ಯವೊಂದನ್ನ ಕಟ್ಟಿ ತಯಾರು ಮಾಡಿ ಅದರ ಮೂಲಕ ಮೊಘಲರನ್ನ ಸೋಲಿಸಲು ಮುಂದಾದ. ನಂತರ ಗುರುಗೋವಿಂದರ ತಂದೆ, ತಾಯಿ ಹಾಗು ಅವರ ನಾಲ್ವರು ಪುತ್ರರನ್ನ ಚಿತ್ರಹಿಂಸೆ ಕೊಟ್ಟು ಕೊಂದಿದ್ದ ಮೊಘಲರನ್ನ ಒಬ್ಬೊಬ್ಬರಾಗಿ ಕೊಲ್ಲುತ್ತ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನುವ ರೀತಿಯಲ್ಲಿ ಮೊಘಲರ ವಿರುದ್ಧ ತೀರಿಸಿಕೊಳ್ಳುತ್ತ ಮುನ್ನುಗ್ಗಿದ.

ಮೊಘಲರ ವಿರುದ್ಧ ಪರಾಕ್ರಮಿಯಾಗಿ ಹೋರಾಡುತ್ತ ಬಂದಾ ಬೈರಾಗಿಯ ಜೀವನವೇ ಬದಲಾಗಿತ್ತು. ಬಂದಾ ಬೈರಾಗಿ ಸಾವಿರಾರು ಸೈನಿಕರ ಜೊತೆಗೂಡಿ ಆತ ಮೊದಲು ಗುರು ತೇಗಬಹದ್ದೂರರ ತಲೆ ಕಡಿದು ಕೊಂದಿದ್ದ ಕ್ರೂರಿ ಜಲಾಲುದ್ದಿನ್ ನ ತಲೆ ಕಡಿದು ಪ್ರತೀಕಾರ ತೀರಿಸಿಕೊಂಡ. ನಂತರ ಆತ ಹಿಂದೂಸ್ತಾನದ ನವಾಬನಾಗಿ ಮೆರೆಯುತ್ತಿದ್ದ ವಜೀರ್ ಖಾನನ ವಧೆ ಮಾಡಿದ. ಯಾವ ಹಿಂದೂ ರಾಜರುಗಳು ಮೊಘಲರಿಗೆ ಸಹಾಯ ಮಾಡಿ ದೇಶ, ಧರ್ಮದ ಮಾನವನ್ನ ಅಡವಿಟ್ಟಿದ್ದರೋ ಅವರನ್ನೂ ಬಂದಾ ಬೈರಾಗಿ ಬಿಡಲಿಲ್ಲ. ಬಂದಾ ಬೈರಾಗಿಯ ಶೌರ್ಯತೆ ಇಡೀ ಮೊಘಲರ ಸೈನ್ಯವನ್ನ ತಲ್ಲಣಗೊಳಿಸಿಬಿಟ್ಟಿತ್ತು.

ಬಂದಾ ಬೈರಾಗಿಯ ಪರಾಕ್ರಮವನ್ನ ಮಣಿಸಲು‌ ಮೊಘಲರು ಬರೋಬ್ಬರಿ 10 ಲಕ್ಷ ಸೈನ್ಯದ ಮೂಲಕ ಬಂದಾ ಬೈರಾಗಿಯ ಮೇಲೆ ಯುದ್ಧ ಹೂಡಿ ಮೋಸದಿಂದ ಡಿಸೆಂಬರ್ 17, 1715 ರಲ್ಲಿ ಬಂಧಿಯಾಗಿಸಿಬಿಟ್ಟರು. ಬಂಧಿಸಿದ ಬಂದಾ ಬೈರಾಗಿಯನ್ನ ಕಬ್ಬಿಣದ ಸರಳುಗಳ ಮೂಲಕ‌ ಆನೆಗೆ ಕಟ್ಟಿ ದೆಹಲಿಗೆ ಕಲ್ಲು ಮುಳ್ಳಿನ ರಸ್ತೆಯ ಮೂಲಕ ಎಳೆದು ತರಲಾಯಿತು. ಬಂದಾ ಬೈರಾಗಿಯವರ ಜೊತೆಯಲ್ಲಿ ಮೊದಲಿನಿಂದಲೂ ಬಂದಾ ಬೈರಾಗಿಯ ಜೊತೆಗೇ ಇದ್ದ 740 ಜೊತೆಗಾರರನ್ನೂ ಎಳೆದು ತರಲಾಗಿತ್ತು.

ಯುದ್ಧದಲ್ಲಿ ವೀರಮರಣವನ್ನಪ್ಪಿದ್ದ ಉಳಿದ ಸಿಖ್ ಸೈನಿಕರ ತಲೆಯನ್ನ ಕಡಿದು ಈಟಿಯ ಮೇಲ್ಭಾದಲ್ಲಿ ಸಿಕ್ಕಿಸಿ ದೆಹಲಿಗೆ ತರಲಾಗಿತ್ತು. ರಸ್ತೆಯುದ್ದದಲ್ಲೂ ಎಳೆದು ತಂದಿದ್ದ ಪರಿಣಾಮ ಬಂದಾ ಬೈರಾಗಿಯ ದೇಹದಿಂದ ಮಾಂಸಖಂಡಗಳು ಹೊರಬಿದ್ದಿದ್ದವು.

ನಂತರ ದೆಹಲಿಗೆ ಕರೆತರಲಾದ ಬಂದಾ ಬೈರಾಗಿ ಹಾಗು ಆತನ ಸಹಚರರನ್ನ ಇಸ್ಲಾಮಿಗೆ ಮತಾಂತರವಾಗೋ ಪ್ರಸ್ತಾಪವನ್ನ ಇಡಲಾಯಿತು. ಆದರೆ ಬಂದಾ ಬೈರಾಗಿ ಸಮೇತ ಒಬ್ಬನೇ ಒಬ್ಬ ಸಿಖ್ ನೂ ಕೂಡ ಅದನ್ನ ಒಪ್ಪಲಿಲ್ಲ‌. ನಂತರ ಇಂದು ದೆಹಲಿಯಲ್ಲಿರುವ ಹಾರ್ಡಿಂಗ್ ಲೈಬ್ರರಿ ಇರುವ ಸ್ಥಳದಲ್ಲಿ ಅಂದು ಅಂದರೆ ಮಾರ್ಚ್ 7, 1716 ರಲ್ಲಿ ಪ್ರತಿದಿನ 100 ಸಿಖ್ಖರ ನ್ನ ಚಿತ್ರ ವಿಚಿತ್ರ ಹಿಂಸೆ ನೀಡಿ ಕೊಲ್ಲುತ್ತ ಬಂತು ಮೊಘಲ್ ಸೇನೆ.

ಈ ಮಧ್ಯರ ಮೊಘಲ್ ದರಬಾರಿಯಾಗಿದ್ದ ಮೊಹಮ್ಮದ್ ಅಮೀನ್ ಬಂದಾ ಬೈರಾಗಿಗೆ “ನೀನ್ಯಾಕೆ ಇಂಥಾ ಕೆಟ್ಟ ಕೆಲಸ ಮಾಡೋಕೆ ಮುಂದಾದೆ? ನಿನ್ನ ಕೆಟ್ಟ ಕೆಲಸಗಳಿಂದಲೇ ಇಂದು ನೀನು ಈ ಸ್ಥಿತಿಗೆ ಬಂದಿದ್ದೀಯ” ಅಂತಾನೆ.

ಬಂದಾ ಬೈರಾಗಿ ಎದೆಯುಬ್ಬಿಸಿ ಶೌರ್ಯದಿಂದಲೇ ಉತ್ತರಿಸುತ್ತ “ನಾನು ಪ್ರಜೆಗಳಿಗೆ ಹಿಂಸಿಸುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪರಮೇಶ್ವರನ ಕೈಯಲ್ಲಿರುವ ಶಸ್ತ್ರ ಅಷ್ಟೇ,‌ ನಿನಗೆ ಗೊತ್ತಾ ಈ ಲೋಕದಲ್ಲಿ ಅನ್ಯಾಯ ಅತ್ಯಾಚಾರ, ದುರಾಚಾರಗಳು ಮೀತಿ ಮೀರಿದಾಗ ಪರಮೇಶ್ವರನು ನನ್ನಂತಹ ಸೇವಕನನ್ನ ಅಧರ್ಮವನ್ನ ತೊಡೆದು ಹಾಕಲು‌ ಈ ಭೂಮಿಗೆ ಕಳಿಸ್ತಾನೆ” ಎಂದನು.

ಸರಿ ಸರಿ ನೀನೀಗ ಸಾಯುವ ಸಮಯ ಹತ್ತಿರವಾಗಿದೆ ಹೇಳು ಯಾವ ರೀತಿಯಲ್ಲಿ ಸಾಯೋಕೆ ಇಷ್ಟಪಡ್ತೀಯ ಎಂದು ಆತನಿಗೆ ಕೇಳಿದಾಗ ಬಂದಾ ಬೈರಾಗಿ ನೀಡಿದ ಉತ್ತರವೇನಿತ್ತು ಗೊತ್ತಾ?

“ನಾನೀಗ ಸಾವಿಗೆ ಹೆದರುವ ಮನುಷ್ಯನಲ್ಲ, ಯಾಕಂದ್ರೆ ನಾನು ಈ ಶರೀರದ ದುಖಃವನ್ನ ಅದಾಗಲೇ ತ್ಯಜಿಸಿಬಿಟ್ಟಿದ್ದೇನೆ, ಈ ಶರೀರವೇ ದುಖಃದ ಮೂಲ” ಎಂದಾಗ ಇಡೀ ಮೊಘಲ್ ಸೇನೆ ಹಾಗು ನವಾಬ ಒಮ್ಮೆ ಸ್ಥಬ್ದವಾಗಿ ನಿಂತಿಬಿಟ್ಟಿತು.

ಆತನನ್ನ ಹೇಗಾದರೂ ಮಾಡಿ ಭಯಭೀತನನ್ನಾಗಿ ಮಾಡಲು ಮೊಘಲ್ ಸೇನೆ ಆತನ 5 ವರ್ಷದ ಮಗನಾದ ಅಜಯ್ ಸಿಂಗನನ್ನ ಬಂದಾ ಬೈರಾಗಿಯ ಮಡಿಲಲ್ಲಿಟ್ಟು ಆತನ ಕೈಗೆ ಚೂರಿಯೊಂದನ್ನ ಇಟ್ಟು ತನ್ನ ಮಗನ ಕತ್ತು ಸೀಳು ಎಂವ ಆದೇಶವನ್ನಿತ್ತರು ಕ್ರೂರ ತುರ್ಕರು. ಆದರೆ ಇದಕ್ಕೆ ಬಂದಾ ಬೈರಾಗಿ ಒಪ್ಪಲಿಲ್ಲ.

ಇದರಿಂದ ಕ್ರೋಧಿತರಾದ ಮೊಘಲ್ ಸೇನೆಯ ಸೈನಿಕನೊಬ್ಬ ಅಜಯಸಿಂಗನನ್ನ ಚೂರಿಯಿಂದ ಇರಿದು ಎರಡು ಹೋಳು ಮಾಡಿ ಆತನ ದೇಹದಿಂದ ಮಾಂಸಖಂಡಗಳನ್ನ ಬೇರ್ಪಡಿಸಿ ಬಂದಾ ಬೈರಾಗಿಯ ಬಾಯಲ್ಲಿ ಆತನ ಮಗನ ಮಾಂಸವನ್ನ ತುರುಕಿ ಚಿತ್ರಹಿಂಸೆ ನೀಡಿದರು.

ಆದರೆ ಬಂದಾ ಬೈರಾಗಿ ಇವೆಲ್ಲಸರಿಂದ ಅದಾಗಲೇ ಮೊದಲೇ ಅರಿತು ಸತ್ತರು ಚಿಂತೆಯಿಲ್ಲ ಎಂದೇ ಮೊಘಲರ ವಿರುದ್ಧ ಹೋರಾಟಕ್ಕೆ ನಿಂತವರಾಗಿದ್ದರು. ಬಂದಾ ಬೈರಾಗಿಯನ್ನ ಆನೆಯ ಮೂಲಕ ಕಲ್ಲು ಮುಳ್ಳುಗಳ ಹಾದಿಯಿಂದ ಎಖೆದು ತಂದಿದ್ದರಿಂದ ಅದಾಗಲೇ ಅವರ ಮೈ ಜರ್ಜರಿತವಾಗಿತ್ತು‌. ಬರೀ ಎಲುಬು ಗಳಷ್ಟೇ ಮೈಯಲ್ಲಿ ಉಳಿದಿದೆ ಅನ್ನುವಂತಾಗಿತ್ತು ಬಂದಾ ಬೈರಾಗಿಯ ಸ್ಥಿತಿ.

ನಂತರ ಜೂನ್ 9, 1716 ರಲ್ಲಿ ಬಂದಾ ಬೈರಾಗಿಯನ್ನ ಆನೆಯ ಕಾಲಿನಿಂದ ತುಳಿಸಿ ಆತನನ್ನ ಕ್ರೂರವಾಗಿ ಕೊಂದುಬಿಟ್ಟಿದ್ದರು ಕ್ರೂರ ಮುಸಲ್ಮಾನರು. ಈ ರೀತಿಯಲ್ಲಿ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದ ಬಂದಾ ಬೈರಾಗಿಯೆಂಬ ವೀರ ಧರ್ಮಯೋಧ.

ಬಂದಾ ಬೈರಾಗಿಯಂತಹ ಅದೆಷ್ಟೋ ಲಕ್ಷಾಂತರ ಜನ ಧರ್ಮದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿಬಿಟ್ಟರು. ಆದರೆ ಇವತ್ತು ಅವರ ಬಲಿದಾನದ ದಿನವಿದ್ದರೂ ನಮ್ಮ ಯುವಜನತೆಗೆ ಅದರ ಬಗ್ಗೆ ಗೊತ್ತೇ ಇಲ್ಲದಿರುವುದು ಖೇದದ ವಿಷಯವೇ ಸರಿ.

ಅವರಿಗೆ ಗೊತಗತಿಲ್ಲದಿರೋದು ಅವರ ತಪ್ಒಲ್ಲ ಬದಲಿಗೆ ನಮಗೆ ಶಿಕ್ಷಣದ ರೂಪದಲ್ಲಿ ಮಹಾಪುರುಷರ, ವೀರಸೇನಾನಿಗಳ ಬಗ್ಗೆ ಪಾಠ ಓದಿಸದೇ, ಆ ಮಹಾಪುರುಷರ ಇತಿಹಾಸವನ್ನ ನಮ್ಮ ಪಠ್ಯದಲ್ಲಿ ಸೇರಿಸದೆ ಇತಿಹಾಸಕ್ಕೆ ದ್ರೋಹ ಮಾಡಿದ ಕಮ್ಯುನಿಸ್ಟ್ ಪ್ರೇರಿತ ಸೋ ಕಾಲ್ಡ್ ಇತಿಹಾಸಕಾರರು ನಮಗೆ ಅಕ್ಬರ್ ದಿ ಗ್ರೇಟ್, ಹುಮಾಯುನ್ ಹಂಗಿದ್ದ, ಬಾಬರ್ ಹಿಂಗಿದ್ದ, ಶಾಹಜಹಾನ್ ಪ್ರೇಮ ಸೌಧ ಕಟ್ಟಿಸಿದ ಅಂತ ಹೇಳುತ್ತ ಬಂದರೇ ಹೊರತು ಆ ಮುಸ್ಲಿಂ ಆಕ್ರಮಣಕಾರರ ಕ್ರೌರ್ಯ ಹೇಗಿತ್ತು ಅನ್ನೋದನ್ನ ನಮ್ಮ ಪಠ್ಯಪುಸ್ತಕಗಳಲ್ಲಿ ಹೇಳಲೇ ಇಲ್ಲ.

ಇತಿಹಾಸ ಮರೆತರೆ ಅದೇ ಇತಿಹಾಸಕ್ಕೆ ನಾವು ಬಲಿಯಾಗೋದು ಶತಸಿದ್ಧ, ಈಗಲಾದರೂ ಎಚ್ಚೆತ್ತುಕೊಂಡು ನೈಜ ಇತಿಹಾಸವನ್ನ ತಿಳಿಯಲು ಪ್ರಯತ್ನಿಸಿ ಹಿಂದುಗಳೇ, ಇಲ್ಲವಾದರೆ ಅಂದು ಮೊಘಲ್ ಸೇನೆ ಮಾಡಿದ ಕ್ರೌರ್ಯವನ್ನ ಇಂದಲ್ಲ ನಾಳೆ ಜಿಹಾದಿಗಳು, ಇಸ್ಲಾಮಿಕ್ ಭಯೋತ್ಪಾದಕರು ನಮ್ಮ ವಿರುದ್ಧ ಮಾಡೋದ್ರಲ್ಲಿ ಸಂಶಯವೇ ಇಲ್ಲ.

– Vinod Hindu Nationalist

Nationalist Views ©2018 Copyrights Reserved

 •  
  4.2K
  Shares
 • 4.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com