Connect with us
Loading...
Loading...

ಅಂಕಣ

ಭಾರತದ ಬಗೆಗಿನ‌ ಈ ವಿಷಯಗಳು ನಿಮಗೆ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ!!! ಓದಿ ತಪ್ಪದೇ ಶೇರ್ ಮಾಡಿ

Published

on

 • 109
 •  
 •  
 •  
 •  
 •  
 •  
 •  
  109
  Shares

ಭಾರತ ಎಂದರೆ ಅದೊಂದು ಬರೀ ದೇಶವಲ್ಲ, ಭಾರತವನ್ನೋದು ಸಂಸ್ಕೃತಿಯ ತವರೂರು, ವಿಭಿನ್ನತೆಯಲ್ಲಿ ಏಕತೆ ಎತ್ತಿ ತೋರಿಸುವ ಮಹಾನ್ ತಪೋ ಭೂಮಿ.

ಸಂತರು ತಪಗೈದು ಪುಣ್ಯಭೂಮಿಯಾಗಿ ಪರಿವರ್ತಿಸಿದ ದೇವಲೋಕವೆಂದರೂ ತಪ್ಪಾಗಲಾರದೇನೋ!!

ಈ ಪುಣ್ಯಭೂಮಿಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಇಂಟರೆಸ್ಟಿಂಗ್ ವಿಷ್ಯಗಳನ್ನ ನೋಡೋಣ ಬನ್ನಿ.

1. ನೀರಿನಲ್ಲಿ ತೇಲುವ ಪೋಸ್ಟ್ ಆಫೀಸ್

ಇಡೀ ಜಗತ್ತಿನಲ್ಲಿ ಅತಿ ದೊಡ್ಡ ಅಂಚೆ ಸಂಪರ್ಕ(postal network) ಇರೋದು ನಮ್ಮ ಭಾರತದಲ್ಲಿಯೇ. ಭಾರತದಲ್ಲಿ ಸರಿಸುಮಾರು 1, 55,015 ಪೋಸ್ಟ್ ಆಫೀಸ್ ಗಳಿವೆ.

ಸರಾಸರಿಯಾಗಿ ಒಂದು ಪೋಸ್ಟ್ ಆಫೀಸ್ ಬರೋಬ್ಬರಿ 7,175 ಜನರಿಗೆ ಪತ್ರ ವ್ಯವಹಾರಕ್ಕೆ, ಸಂದೇಶ ರವಾನೆ ಮಾಡಲು ಅನುಕೂಲಕರವಾಗಿ ನಿಂತಿದೆ.

ಭಾರತದಲ್ಲಿ ಇಷ್ಟೊಂದು ಪೋಸ್ಟ್ ಆಫೀಸ್ ಗಳಲ್ಲಿ ಗಮನಸೆಳೆಯುವ ಒಂದು ಪೋಸ್ಟ್ ಆಫೀಸ್ ಕಾಶ್ಮೀರದಲ್ಲಿದೆ.

ಈ ಪೋಸ್ಟ್ ಆಫೀಸಿನ ವಿಶೇಷತೆಯೆಂದರೆ ಇದು ಸರೋವರದಲ್ಲಿ ತೇಲುವ ಪೋಸ್ಟ್ ಆಫೀಸ್ ಆಗಿದೆ. ಇದು ಇರೋದು ಕಾಶ್ಮೀರದ ಶ್ರೀನಗರ ಜಿಲ್ಲೆಯ ದಾಲ್ ಸರೋವರದಲ್ಲಿ. ಇದನ್ನ 2011 ರ ಆಗಷ್ಟ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.

2. ಆಕಾಶದಿಂದ ನೋಡಿದರೂ ಕಾಣುವ ಬೃಹತ್ ಕುಂಭಮೇಳದ ಅದ್ಭುತ ದೃಶ್ಯ

ಇಲ್ಲೀವರೆಗೂ ಭಾರತ ದಲ್ಲಿ ನಡೆದ ಕುಂಭಮೇಳಗಳಲ್ಲಿ 2011 ರಲ್ಲಿ ನಡೆದ ಕುಂಭಮೇಳ ಅತಿ ಹೆಚ್ಚು ಶ್ರದ್ಧಾಳುಗಳು ಸೇರಿದ್ದ ಕುಂಭಮೇಳವಾಗಿದೆ, ಇದರಲ್ಲಿ ಸರಿಸುಮಾರು 75 ಮಿಲಿಯನ್ ಅಂದರೆ ಏಳೂವರೆ ಕೋಟಿ ಜನ ಭಾಗವಹಿಸಿದ್ದರು.

ಇಷ್ಟು ಜನ ಸೇರಿದ್ದ ಕುಂಭಮೇಳದ ಅಮೋಘ ದೃಶ್ಯವು ಅಂತರಿಕ್ಷದಿಂದ ನೋಡಬಹುದಾಗಿತ್ತಂತೆ.

3. ಜಗತ್ತಿನ ಅತಿ ಮಳೆ ಬೀಳುವ ಪ್ರದೇಶವಿರೋದು ಭಾರತದಲ್ಲಿ

ಮೇಘಾಲಯದ ಖಾಸಿ ಪರ್ವತ ಶ್ರೇಣಿಯಲ್ಲಿನ ಮೌಸಿನ್ರಾಮ್ ಎಂಬ ಪುಟ್ಟ ಹಳ್ಳಿಯಲ್ಲಿ ಇಡೀ ಜಗತ್ತಿನಲ್ಲಿ ಬೀಳದಿರೋಷ್ಟು ಮಳೆ ಇಲ್ಲಾಗುತ್ತೆ.

ಮೇಘಾಲಯದ ಚಿರಾಪುಂಜಿ ಕೂಡ ಇದಕ್ಕೆ ಹೊರತಾಗಿಲ್ಲ,
1861 ರಲ್ಲಿ ಇಲ್ಲಿ ವಿಶ್ವದಾಖಲೆಯ ಮಳೆಯಾಗಿದ್ದರ ಪುರಾವೆಗಳಿವೆ.

4. ಬಾಂದ್ರಾ ವರ್ಲಿಯ ಸ್ಟೀಲ್ ಸೀ ಲಿಂಕ್

ಪೂರ್ತಿ ಸ್ಟೀಲ್‌ನ್ನ ಬಳಸಿ 2,57,00,000 ಗಂಟೆಗಳ ಸತತ ಕೆಲಸದ ಮೂಲಕ ಈ ಸೇತುವೆಯನ್ನು ನಿರ್ಮಿಸಲಾಗಿದೆ, ಇದರ ತೂಕ 50,000 ಆಫ್ರಿಕನ್ ಆನೆಗಳ ತೂಕದಷ್ಟಿದೆ ಎಂಬ ಅಂದಾಜಿದೆ. ಇದೊಂದು ಇಂಜಿನಿಯರಿಂಗ್ ಹಾಗು ಆರ್ಕಿಟೆಕ್ಚರ್ ವಿಭಾಗದ ಅತ್ಯುತ್ತಮ ನಿದರ್ಶನವಾಗಿದೆ.

5. ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನ ಭಾರತದಲ್ಲೇ ಇರೋದು

ಹಿಮಾಚಲ ಪ್ರದೇಶದ ಚೇಲ್ ಪ್ರದೇಶದಲ್ಲಿರುವ ಚೇಲ್ ಕ್ರಿಕೆಟ್ ಗ್ರೌಂಡ್ ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು ಇದು 2,444 ಮೀಟರ್ ಎತ್ತರದ ಪ್ರದೇಶದಲ್ಲಿ 1893 ರಲ್ಲಿ ನಿರ್ಮಿಸಲಾಗಿದೆ.

ಸದ್ಯ ಈ ಕ್ರಕೆಟ್ ಮೈದಾನ ಚೇಲ್ ಮಿಲಟರಿ ಶಾಲೆಯ ಅಧಿನದಲ್ಲಿದೆ

6. ಶ್ಯಾಂಪು ಅನ್ನೋದು ಭಾರತದ ಅನ್ವೇಷಣೆ

ಇಂದು ನಾವು ನೀವು ಬಳಸುವ ಶ್ಯಾಂಪು ಭಾರತದ ಅನ್ವೇಷಣೆಯಾಗಿದ್ದು ಇದು ಕಮರ್ಷಿಯಲ್ ಲಿಕ್ವಿಡ್ ಒಳಗೊಂಡಿರದೆ ಗಿಡಮೂಲಿಕೆಗಳಿಂದ ತಯಾರಿಸಲ್ಪಡುವ ಲಿಕ್ವಿಡ್ ಆಗಿತ್ತು.

ಶಾಂಪೂ ಅನ್ನೋ ಶಬ್ದ ಸಂಸ್ಕೃತ ಶಬ್ದವಾದ ‘ಚಂಪೂ’ ಎಂಬ ಪದದಿಂದ ಎರವಲು ಪಡೆಯಲಾಗಿದೆ. ಚಂಪೂ ಪದದ ಅರ್ಥ ಮಸಾಜ್ ಎಂಬುದಾಗಿದೆ

7. ಇಲ್ಲೀವರೆಗೂ ನಡೆದ ಕಬಡ್ಡಿ ವರ್ಲ್ಡ್ ಕಪ್ ಗಳನ್ನ ಭಾರತವೇ ಗೆದ್ದಿದೆ

8. ಚಂದ್ರನಲ್ಲಿ ನೀರಿದೆ ಅನ್ನೋದನ್ನ ಕಂಡುಹಿಡಿದದ್ದು ಭಾರತ

2009 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದ್ದ ಚಂದ್ರಯಾನ-1 ಚಂದ್ರನಲ್ಲಿ ನೀರಿದೆ ಅನ್ನೋದನ್ನ ತನ್ನ ಮೂನ್ ಮಿನರಾಲಜಿ ಮ್ಯಾಪರ್ ಮೂಲಕ ಜಗತ್ತಿಗೆ ತಿಳಿಸಿತ್ತು.

ಅಲ್ಲೀವರೆಗೂ ಚಂದ್ರನಲ್ಲಿ ನೀರಿದೆ ಅನ್ನೋದು ಜಗತ್ತಿಗೆ ಗೊತ್ತಿರಲಿಲ್ಲ, ಭಾರತದಿಂದ ಜಗತ್ತಿಗೆ ಈ ವಿಷ್ಯ ಗೊತ್ತಾಗುವಂತಾಗಿತ್ತು.

9. ಸ್ವಿಟ್ಜರ್ಲೆಂಡ್‌‌ ನಲ್ಲಿ ವಿಜ್ಞಾನ ದಿನವನ್ನ ಭಾರತೀಯನೊಬ್ಬನ ಹೆಸರಿನಿಂದ ಆಚರಿಸಲಾಗುತ್ತದೆ

ಹೌದು ಸ್ವಿಟ್ಜರ್ಲೆಂಡ್‌‌ ನಲ್ಲಿ ವಿಜ್ಞಾನ ದಿನವನ್ನ ಭಾರತದ ಹೆಮ್ಮೆಯ ಪುತ್ರ, ಮಾಜಿ ಅಬ್ದುಲ್ ಕಲಾಂ ಅವರ ಹೆಸರಿನಿಂದ ಆಚರಿಸಲಾಗುತ್ತೆ.

ಮಿಸೈಲ್ ತಂತ್ರಜ್ಞಾನದ ಪಿತಾಮಹ ಅಂತ ಕರೆಯುವ ಅಬ್ದುಲ್ ಕಲಾಂ ರವರು 2006 ರ ಮೇ 26 ಕ್ಕೆ ಸ್ವಿಟ್ಜರ್ಲೆಂಡ್‌‌ ಗೆ ಭೇಟಿ ನೀಡಿದ್ದರು, ಇದರ ಕಾರಣ ದಿನವನ್ನೇ ಸ್ವಿಟ್ಜರ್ಲೆಂಡ್‌‌ ವಿಜ್ಞಾನ ದಿನವಂತ ತನ್ನ ರಾಷ್ಟ್ರದಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತ ಬಂದಿದೆ.

10. ಭಾರತದ ಮೊದಲ ರಾಷ್ಟ್ರಪತಿ ಪಡೆದ ಸಂಬಳವೆಷ್ಟು ಗೊತ್ತಾ?

ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ತಮ್ಮ ಸಂಬಳದ ಕೇವಲ 50% ಮಾತ್ರ ಪಡೆದವರಾಗಿದ್ದರು.

ನನಗೆ ಇಷ್ಟು ಸಂಬಳ ಪಡೆಯುವ ಅವಶ್ಯಕತೆಯಿಲ್ಲ, ಸಂಬಳವನ್ನ ಮಾತ್ರ ಪಡೆಯುತ್ತೇನೆ ಅಂತ ರಾಜೇಂದ್ರಪ್ರಸಾದರು ತಮ್ಮ ಸಂಬಳದ 50% ನ್ನ ಪಡೆಯಲಿಲ್ಲ.

12 ವರ್ಷಗಳ ಅಧಿಕಾರಾವಧಿಯ ಕೊನೆಯಲ್ಲಿ ಅವರು ತಮ್ಮ ಸಂಬಳದ ಕೇವಲ 25% ವನ್ನಷ್ಟೆ ಪಡೆದಿದ್ದರಂತೆ. ಆಗ ರಾಷ್ಟ್ರಪತಿಗಳ ಸಂಬಳ 10,000 ಇತ್ತು

11. ಭಾರತದ ಮೊದಲ ರಾಕೆಟ್ ನ್ನ ಉಡಾವಣಾ ಸ್ಥಳಕ್ಕೆ ಕೊಂಡೊಯ್ದದ್ದು ಹೇಗೆ ಗೊತ್ತಾ?

ಭಾರತದ ಮೊದಲ ರಾಕೆಟ್ ನ್ನ ಟ್ರಾನ್ಸಪೋರ್ಟೇಷನ್ ಗಾಗಿ ಸೈಕಲ್ ಮೇಲೆ ಕೊಂಡೊಯ್ಯಲಾಗಿತ್ತು.

ಮೊದಲ ರಾಕೆಟ್ ಗಾತ್ರದಲ್ಲಿ ಚಿಕ್ಕದಾಗಿದ್ದು ಅದನ್ನ ಕೇರಳದ ತಿರುವನಂತಪುರಂ ನಲ್ಲಿರುವ ಥುಂಬಾ ಲಾಂಚಿಂಗ್ ಸ್ಟೇಷನ್ನಿಗೆ ಬೈಸಿಕಲ್ ಮೂಲಕ ಕೊಂಡೊಯ್ಯಲಾಗಿತ್ತು.

12. ಜಗತ್ತಿನಲ್ಲಿ ಅತಿ ಹೆಚ್ಚು ಇಂಗ್ಲಿಷ್ ಮಾತನಾಡುವ ಜನರಿರೋದು ಭಾರತದಲ್ಲಿ

ಅಮೇರಿಕಾದ ನಂತರ ಭಾರತದಲ್ಲಿ ಇಂಗ್ಲಿಷ್ ಮಾತನಾಡುವ ಅತಿ ಹೆಚ್ಚು ಜನರಿದ್ದಾರೆ, ಈ ಸಂಖ್ಯೆ ಒಂದೂವರೆ ಕೋಟಿ ಅಂದರೆ ಭಾರತದ ಜನಸಂಖ್ಯೆಯ ಕೇವಲ 10% ಮಾತ್ರ.

13. ಜಗತ್ತಿನಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳು ಇರುವ ದೇಶ ಭಾರತ

ಭಾರತದ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳೋ ಏನೋ ಗೊತ್ತಿಲ್ಲ ಆದರೆ ಭಾರತದ 20-40% ಜನ ಸಸ್ಯಾಹಾರಿಗಳಂತೆ

14. ಜಗತ್ತಿನ “ಮಾನವ ಕಂಪ್ಯೂಟರ್” ನಮ್ಮ ದೇಶದವರೇ

ಭಾರತದ ಹೆಮ್ಮೆಯ ಮಹಿಳೆ ಶಕುಂತಲಾ ದೇವಿಯವರನ್ನ ಮಾನವ ಕಂಪ್ಯೂಟರ್ ಅಂತ ಕರೆಯಲಾಗುತ್ತೆ.

13 ಅಂಕಿಯ ಎರಡು ಸಂಖ್ಯೆಗಳನ್ನ ಕೆಲವೇ ಸೆಕೆಂಡುಗಳಲ್ಲಿ ಲೆಕ್ಕ ಹಾಕುವ ಶಕ್ತಿ ಶಕುಂತಲಾ ದೇವಿಯವರಲ್ಲಿತ್ತು.

ಉದಾ:
7,686,369,774,870 × 2,465,099,745,779 ಎಂಬ ಎರಡು random ನಂಬರ್ ಗಳನ್ನ ಗುಣಿಸಲು ಶಕುಂತಲಾ ದೇವಿಯವರಿಗೆ ಹೇಳಿದಾಗ ಅವರು ಕೇವಲ 28 ಸೆಕೆಂಡುಗಳಲ್ಲಿ ನಿರ್ದಿಷ್ಟವಾದ ಉತ್ತರವನ್ನ ನೀಡಿದ್ದರು.

15. ಗಗನಯಾತ್ರಿ ರಾಕೇಶ್ ಶರ್ಮಾರನ್ನ ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತೆ ಅಂತವಕೇಳಿದ ಪ್ರಶ್ನೆಗೆ ಅವರು ನೀಡಿದ್ದ ಉತ್ತರವೇನು ಗೊತ್ತಾ?

ಮಾಜಿ ಪ್ರಧಾನಿ ಇಂದಿರಾಗಾಂಧಿ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾರನ್ನ ಈ ರೀತಿಯ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ “ಸಾರೇ ಜಹಾನ್ ಸೇ ಅಚ್ಛಾ” ಎಂಬ ನಮ್ಮ ದೇಶದ ಸುಪ್ರಸಿದ್ಧ ದೇಶಭಕ್ತಿ ಗೀತೆ.

ಭಾರತದ ಬಗ್ಗೆ ಹೇಳಲು ಇರೋ ವಿಷಯಗಳು ಒಂದೇ ಎರಡೇ ಪಟ್ಟಿ ಮಾಡುತ್ತ ಹೋದರೆ ಸಂಖ್ಯೆಗಳಿಗೆ ಬರ ಬರಬಹುದೇನೋ!!

ಭಾರತ ಮಾತಾ ಕೀ ಜೈ!!!

 •  
  109
  Shares
 • 109
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com