Connect with us
Loading...
Loading...

ಪ್ರಚಲಿತ

“ಮಾಲ್ಡೀವ್ಸ್ ವಿಚಾರಕ್ಕೆ ತಲೆಹಾಕಬೇಡಿ” ಅಂದ ಚೀನಾಕ್ಕೆ ಪ್ರಧಾನಿ ಮೋದಿ ಸೆಡ್ಡು ಹೊಡೆದದ್ದು ಹೇಗೆ ಗೊತ್ತೆ?

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭಾರತದ ಶಕ್ತಿ ಹಾಗು ಪ್ರಧಾನಿ ಮೋದಿಯವರ ಕಟುನೀತಿಗಳಿಂದಾಗಿ ಚೀನಾ ಭಾರತದೆದುರು ಮಂಡಿಯೂರುತ್ತಲೇ ಬರುತ್ತಿದೆ.

ಹಾಗೆಯೇ ಡೋಕ್ಲಾಂ ವಿಷಯದಲ್ಲಿ ಹೇಗೆ ಭಾರತದೆದುರು ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ಹೇಗೆ ಮುಖಭಂಗಕ್ಕೊಳಗಾಗಿ ಅಲ್ಲಿಂದ ವಾಪಸ್ ಸರಿಯಬೇಕಾಯಿತೋ ಅದೇ ರೀತಿಯಲ್ಲಿ ಮಾಲ್ಡೀವ್ಸ್ ವಿಷ್ಯದಲ್ಲೂ ಆಗಿ ಭಾರತದೆದುರು ತಲೆ ತಗ್ಗಿಸಿ ನಿಲ್ಲೋದು ಚೀನಾಗೆ ಬೇಕಿಲ್ಲ.

ಮಾಲ್ಡೀವ್ಸ್ ವಿಷಯವಾಗಿ ಭಾರತದ ಹಸ್ತಕ್ಷೇಪದಲ್ಲಿ ಚೀನಾ ಭಾರತಕ್ಕೆ ಹಲವು ದಿನಗಳಿಂದ ಧಮಕಿ ಹಾಕುತ್ತಲೇ ಬಂದಿದೆ ಆದರೆ ಚೀನಾದ ಯಾವ ಗೊಡ್ಡು ಬೆದರಿಕೆಗೂ ಜಗ್ಗದೆ ಭಾರತ ಮಾತ್ರ ಚೀನಾಗೆ ಸೆಡ್ಡು ಹೊಡೆದು ನಿಂತಿದೆ.

“ಮಾಲ್ಡೀವ್ಸ್ ವಿಷಯದಲ್ಲಿ ಭಾರತ ತಲೆಹಾಕಬಾರದು” ಅಂತ ಚೀನಾ ತಾಕೀತು ಮಾಡಿದ್ದಕ್ಕೆ ಭಾರತದ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

“ಮಾಲ್ಡೀವ್ಸ್ ವಿಚಾರದಲ್ಲಿ‌ ಚೀನಾ ಮೂಗು ತೂರಿಸಬಾರದು, ಹಾಗೆ ಮಾಡದಿದ್ದರೆ ಚೀನಾದ ಪರಿಸ್ಥಿತಿ ನೆಟ್ಟಗಿರಲ್ಲ” ಎಂಬ ಖಡಕ್ ಸಂದೇಶವನ್ನ ಭಾರತದ ವಿದೇಶಾಂಗ ಸಚಿವಾಲಯದ ಪ್ರವಕ್ತರಾದ ರವೀಶ್ ಕುಮಾರ ನೀಡಿದ್ದಾರೆ.

ಚೀನಾಕ್ಕೆ ನೇರಾನೇರ ತಪರಾಕಿ ನೀಡುತ್ತ ಅವರು “ಮಾಲ್ಡೀವ್ಸ್ ನಲ್ಲಿ ಭದ್ರತಾ ವಿಷಯಗಳ ಕುರಿತು ಚೀನಾ ತಲೆ ಹಾಕಿದರೆ ಚೀನಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ” ಎಂದಿದ್ದಾರೆ.

ಚೀನಾ ಮಾಲ್ಡೀವ್ಸ್ ರಾಷ್ಟ್ರವನ್ನ ತನ್ನ ಬುಟ್ಡಿಗೆ ಹಾಕಿಕೊಳ್ಳಲು ಪ್ರಯತ್ನಪಡುತ್ತಿದ್ದು ಇದರಿಂದ ಭಾರತಕ್ಕೆ ಸೆಡ್ಡು ಹೊಡೆಯಲು ಚೀನಾ ತಿಣುಕಾಡುತ್ತಿದೆ.

ರವೀಶ್ ಕುಮಾರ್ ಹೇಳ್ತಾರೆ “ಮಾಲ್ಡೀವ್ಸ್ ವಿಷಯದಲ್ಲಿ ಎಲ್ಲ ರಾಷ್ಟ್ರಗಳೂ ರಚನಾತ್ಮಕ ಪಾತ್ರ ವಹಿಸುತ್ತವೆ ಅನ್ನೋ ಭರವಸೆ ಭಾರತಕ್ಕಿದೆ” ಎಂದು.

ಇತ್ತೀಚೆಗಷ್ಟೇ ಭಾರತೀಯ ಪತ್ರಕರ್ತರಾದ ಮಣಿ ಶರ್ಮಾ ಎಂಬುವವರನ್ನ ಮಾಲ್ಡೀವ್ಸ್ ಸರ್ಕಾರ ಬಂಧಿಸಿದ್ದರ ಕುರಿತು ಮಾತನಾಡಿದ ಅವರು “ಭಾರತೀಯ ದೂತಾವಾಸಕ್ಕೆ ಈ ಕುರಿತು ಸ್ಥಳೀಯ ಅಧಿಕಾರಿಗಳನ್ನ ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳೋಕೆ ಅದಾಗಲೇ ಸೂಚನೆ ಕೊಟ್ಟಿದ್ದೇವೆ” ಎಂದಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಲಾಭ ಪಡೆಯೋಕೆ ಮುಂದಾಗಿರೋ ಚೀನಾ ಆ ಮೂಲಕ ಭಾರತಕ್ಕೆ ಸೆಡ್ಡು ಹೊಡೆಯಬಹುದು ಎಂಬ ತನ್ನ ನರಿ ಬುದ್ದಿ ಉಪಯೋಗಿಸುತ್ತಿದೆ.

ಮಾಲ್ಡೀವ್ಸ್ ರಾಷ್ಟ್ರ ಚೀನಾದಿಂದ ಆರ್ಥಿಕ ಸಾಲ ಪಡೆದು ಚೀನಾದ ಅಡಿಯಾಳಾಗುವ ಸ್ಥಿತಿಗೆ ಬಂದು ತಲುಪಿದೆ. ಮಾಲ್ಡೀವ್ಸ್ ರಾಷ್ಟ್ರದ ಎರಡನೇ ಮೂರರಷ್ಟು(2/3rd) ಸಾಲ ಚೀನಾ ನೀಡಿದೆ.

ಪಾಕಿಸ್ತಾನದ ನಂತರ ಚೀನಾದ ಜೊತೆ ಮುಕ್ತ ವ್ಯಾಪಾರ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಎರಡನೆ ರಾಷ್ಟ್ರ ಮಾಲ್ಡೀವ್ಸ್ ಆಗಿದೆ.

ಕೇವಲ ನಾಲ್ಕು ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಷ್ಟ್ರ ಭಾರತದ ದಕ್ಷಿಣ-ಪಶ್ಚಿಮ ಭಾಗಕ್ಕಿದ್ದು ಭೌಗೋಳಿಕವಾಗಿ ಶತ್ರುರಾಷ್ಟ್ರಗಳನ್ನ ಹಿಮ್ಮೆಟ್ಟಿಸಲು ಹಾಗು ಅವರ ಮೇಲೆ ಕಣ್ಣಿಡಲು ಮಹತ್ವದ ದೇಶವಾಗಿದೆ.

ಮಾಲ್ಡೀವ್ಸ್ ರಣತಂತ್ರಕ್ಕಾಗಿ ಯಾವ ರೀತಿಯಲ್ಲಿ ಭಾರತಕ್ಕೆ ಸಹಾಯ ಮಾಡಬಲ್ಲುದು ಅನ್ನೋದು ಚೀನಾಕ್ಕೆ ಗೊತ್ತಿದೆ. ಅದೇ ಕಾರಣದಿಂದ ಚೀನಾ ಮಾಲ್ಡೀವ್ಸ್ ರಾಷ್ಟ್ರಕ್ಕೆ ನೀರಿನಂತೆ ಹಣದ ಹೊಳೆ ಹರಿಸುತ್ತಿದೆ.

ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಚೀನಾ ಮಾಲ್ಡೀವ್ಸ್ ನಲ್ಲಿ ಹೂಡಿಕೆ ಮಾಡೋಕೆ ಹಿಂದೇಟು ಹಾಕುತ್ತಿದೆ, ಕಾರಣ ಮಾಲ್ಡೀವ್ಸ್ ನಲ್ಲಿ ಚೀನಾಗೆ ತಕ್ಕ ಮಾರುಕಟ್ಟೆಗಳಿರದ ಕಾರಣ ಚೀನಾ ಮಾಲ್ಡೀವ್ಸ್ ನಲ್ಲಿ ತನ್ನ ಮಿಲಿಟರಿ ಬೇಸ್ ಸ್ಥಾಪಿಸಲು ಚಿಂತಿಸುತ್ತಿದೆ.

ಸದ್ಯ ಮಾಲ್ಡೀವ್ಸ್ ನಲ್ಲಿ ಪ್ರಸ್ತುತ ಅಧ್ಯಕ್ಷನಾಗಿದ್ದ ಸರ್ವಾಧಿಕಾರಿ ಅಬ್ದುಲ್ಲಾ ಯಾಮೀನ್ ನ್ನ ಅಧ್ಯಕ್ಷಗಿರಿಯಿಂದ ಉಚ್ಛಾಟಿಸಲಾಗಿದೆ. ಮಾಹಿತಿಗಳ ಪ್ರಕಾರ ಅಬ್ದುಲ್ಲಾ ಯಾಮೀನ್ ಚೀನಾದ ಆಪ್ತನಾಗಿದ್ದು ಚೀನಾ ಜೊತೆ ಬಹಳ ನಿಕಟ ಸಂಪರ್ಕ ಹೊಂದಿದ್ದಾನೆ. ಇದೇ ಕಾರಣದಿಂದ ಮಾಲ್ಡೀವ್ಸ್ ನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನಲ್ಲಿ ಭಾರತ ತಲೆಹಾಕಬಾರದು ಅನ್ನೋದು ಚೀನಾದ ವಾದವಾಗಿದೆ.

ಭಾರತ ಮಾಲ್ಡೀವ್ಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಮಾಲ್ಡೀವ್ಸ್ ನ್ನ ತನ್ನ ತೆಕ್ಕೆಗೆ ಹಾಕಿಕೊಂಡರೆ ನಮ್ಮ ಪರಿಸ್ಥಿತಿ ಏನು? ಎಂಬ ಚಿಂತೆ ಚೀನಾಗೆ ಕಾಡುತ್ತಿದೆ.

ಆದರೆ ಈ ಮಧ್ಯೆ ಮಾಲ್ಡೀವ್ಸ್ ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನ ಶಮನಗೊಳಿಸಲು ಮಾಲ್ಡೀವ್ಸ್ ನ ಪೂರ್ವ ರಾಷ್ಟ್ರಪತಿ ಮೊಹಮ್ಮದ್ ನಶೀದ್ ಭಾರತೀಯ ಸೇನೆಯ ಸಹಾಯ ಕೇಳಿದ್ದಾನೆ. ಇದರಿಂದ ಚೀನಾ ಬೆಚ್ಚಿಬಿದ್ದಿದೆ.

ಅತ್ತ ಭಾರತದ ಸಹಾಯಹಸ್ತ ಮಾಲ್ಡೀವ್ಸ್ ಕೇಳುತ್ತಿದ್ದರೆ ಇತ್ತ ಚೀನಾ ಮಾಲ್ಡೀವ್ಸ್ ನಲ್ಲಿ ತನ್ನ ಯೋಜನೆಗಳನ್ನ ಪೂರ್ಣಗೊಳಿಸುವ ತಯಾರಿಯಲ್ಲಿದೆ.

ಇಲ್ಲಿ ಆತಂಕಕಾರಿ ವಿಷಯವೆಂದರೆ ಮಾಲ್ಡೀವ್ಸ್ ನಲ್ಲಿ 2011 ರವರೆಗೆ ಚೀನಾದ ದೂತಾವಾಸವೂ ಇರಲಿಲ್ಲ. ಆದರೆ ಈಗ ಚೀನಾ ಮಾಲ್ಡೀವ್ಸ್ ರಾಷ್ಟ್ರದ ರಾಜಕಾರಣದಲ್ಲಿ ಮೂಗು ತೂರಿಸಿ ಆಟವಾಡುತ್ತಿರೋದು ಭಾರತದ ಪಾಲಿಗೆ ಆತಂಕದ ವಿಷಯವೇ ಸರಿ.

ಇಲ್ಲಿ ಇನ್ನೊಂದು ವಿಷಯವೆಂದರೆ ಚೀನಾದ ಮಹತ್ವಾಕಾಂಕ್ಷೆ ಯೋಜನೆಯಾದ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್(BRI) ನಲ್ಲಿ ಮಾಲ್ಡೀವ್ಸ್ ಕೂಡ ಪ್ರಮುಖ ಪಾತ್ರವಹಿಸಿರುವ ರಾಷ್ಟ್ರವಾಗಿದೆ.

M

ಕಳೆದ ವರ್ಷ ಚೀನಾ ಹಾಗು ಮಾಲ್ಡೀವ್ಸ್ ರಾಷ್ಟ್ರಗಳು ಫ್ರೀ ಟ್ರೇಡ್ ಅಗ್ರಿಮೆಂಟ್ (FTA) ಒಪ್ಪಂದಕ್ಕೂ ಪರಸ್ಪರ ಸಹಿ ಹಾಕಿಕೊಂಡಿದ್ದವು‌.

ಚೀನಾದ ಜೊತೆ FTA ಒಪ್ಪಂದ ಮಾಡಿಕೊಂಡಿರುವ ಮಾಲ್ಡೀವ್ಸ್ ಸರ್ಕಾರದ ನಿರ್ಧಾರವನ್ನ ಪೂರ್ವ ರಾಷ್ಟ್ರಪತಿಯಾಗಿದ್ದ ಮೊಹಮ್ಮದ್ ನಶೀದ್ “ಇದು ಮಾಲ್ಡೀವ್ಸ್ ರಾಷ್ಟ್ರದ ಭದ್ರತೆಗೆ ಅಪಾಯಕಾರಿ” ಎಂದಿದ್ದಾರೆ.

ಈಗ ಮಾಲ್ಡೀವ್ಸ್ ನಲ್ಲಿ ಉಂಟಾದ ಬಿಕ್ಕಟ್ಟಿಗೆ ಭಾರತದ ಸಹಾಯ ಕೋರಿರುವ ನಶೀದ್ ರವರ ಕೋರಿಕೆಗೆ ಚೀನಾ ಬೆಚ್ಚಿ ಬಿದ್ದಿದೆ. ಭಾರತ ಕೂಡ ಚೀನಾಗೆ ಟಾಂಗ್ ಕೊಡಲು ಮುಂದಾಗಿರೋದು ಪ್ರಧಾನಿ ಮೋದಿಯವರ ಅಂತರಾಷ್ಟ್ರೀಯ ನೀತಿಗಳ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

– Team Nationalist Views
(2018 Copyrights Reserved)

 

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com