Connect with us
Loading...
Loading...

Uncategorized

ಬಯಲಾಯ್ತು ಮಹಾಸಮೀಕ್ಷೆ: ಪ್ರಧಾನಿ ಮೋದಿಯವರ ಕುರಿತಾಗಿ ಈ ಸಮೀಕ್ಷೆಯಲ್ಲಿ ಹೇಳಿದ್ದೇನು‌ ಗೊತ್ತಾ?

Published

on

 • 2K
 •  
 •  
 •  
 •  
 •  
 •  
 •  
  2K
  Shares

ಪ್ರಧಾನಮಂತ್ರಿ ಮೋದಿಯವರ ಕುರಿತಾಗಿ ಇದೀಗ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಜನಪ್ರೀಯತೆಯ ವಿಷಯದಲ್ಲಿ ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನ ದೇಶದ ಜನ ಪ್ರಥಮ‌ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ. ದೇಶದ ಪ್ರಗತಿ ಹಾಗು ಅಭಿವೃದ್ಧಿಯ ವಿಷಯದ ಕುರಿತಾಗಿ ಮೋದಿ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಗಳ ಕಾರಣ ಪ್ರಧಾನಿ ಮೋದಿಯವರ ನೇತೃತ್ವವನ್ನ ಜನ ಮೆಚ್ಚಿದ್ದು ಅವರಿಗೆ ಮೊದಲನೆಯ ಸ್ಥಾನವನ್ನ ನೀಡಿದ್ದಾರೆ. ‌ಪ್ರಧಾನಿ ಮೋದಿ ದೇಶದ ಜನ ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನ ಹುಸಿಗೊಳಿಸದೆ ಹಗಲು ರಾತ್ರಿ ಶ್ರಮವಹಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಅವಿರತ ಶ್ರಮಕ್ಕೆ ಫಲ ಸಿಕ್ಕಿದ್ದು ದೇಶದ 48% ಜನ ಪ್ರಧಾನಿ ಮೋದಿಯವರನ್ನೇ ಸರ್ವೋಚ್ಛ ನಾಯಕನೆಂದು ವೋಟ್ ಮಾಡಿದ್ದಾರೆ.

ಈ ಸರ್ವೇಕ್ಷಣವು ದೇಶದ 712 ಜಿಲ್ಲೆಗಳಲ್ಲಿ ಆನಲೈನ್ ಪ್ರಕ್ರಿಯೆಯ ಮೂಲಕ ನಡೆಸಲಾಗಿದ್ದು ಇದರಲ್ಲಿ ದೇಶದ 923 ರಾಜಕೀಯ ನಾಯಕರು ತಮ್ಮ ಜನರಿಗೆ ತಮ್ಮಿಷ್ಟದ ನಾಯಕನಿಗೆ ವೋಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಬನ್ನಿ ಈ ಸರ್ವೇ ನಲ್ಲಿ ಬಂದ ಫಲಿತಾಂಶ ಹಾಗು ಯಾರು ಯಾವ ಸ್ಥಾನದಲ್ಲಿದ್ದಾರೆ ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ.

ದೇಶದ 48% ಜನ ಪ್ರಧಾನಮಂತ್ರಿ ಮೋದಿಯವರನ್ನೇ ಆರಿಸಿದ್ದಾರೆ

ರಾಜಕೀಯ ರಣನೀತಿಜ್ಞ ಪ್ರಶಾಂತ್ ಕಿಶೋರ್ ರವರಿಗೆ ಸಂಬಂಧಿಸಿದ ಎಡ್ವೋಕೇಸಿ ಗ್ರೂಪ್ ಇಂಡಿಯನ್ ಪಾಲಿಟಿಕಲ್ ಆ್ಯಕ್ಷನ್ ಕಮಿಟಿ (I-PAC) ಈ ಸರ್ವೇಯನ್ನ ದೇಶದಾದ್ಯಂತ ಈ‌ಸರ್ವೇ ಮಾಡಿದೆ. ಈ ಸರ್ವೇ ಯಲ್ಲಿ ಜನರಿಗೆ ಆಯ್ಕೆಗಳನ್ನು ನೀಡಲಾಗಿತ್ತು, ಅದರಲ್ಲಿ 923 ಜನ ರಾಜಕೀಯ ನೇತಾರರ ಹೆಸರೂ ಇದ್ದು ಅವುಗಳಲ್ಲಿ ತಮಗಿಷ್ಟದ ನಾಯಕನನ್ನ ಆಯ್ಕೆ ಮಾಡಬಹುದಾಗಿತ್ತು.
ಆನಲೈನ್ ನಲ್ಲಿ ನಡೆದ ಈ ಸರ್ವೇಕ್ಷಣದಲ್ಲಿ ಪ್ರಧಾನಿ ಮೋದಿಯವರನ್ನೇ ಸರ್ವಶ್ರೇಷ್ಟ ನಾಯಕನೆಂದು ಈ ಸರ್ವೇ ಯಲ್ಲಿ‌ ಜನ ವೋಟ್ ಮಾಡಿದ್ದು ಪ್ರಧಾನಿ ಮೋದಿಯವರನ್ನ ಬೆಂಬಲಿಸಿ 48% ವೋಟ್ ಹಾಕಿದ್ದಾರೆ.

ಉಳಿದ ನಾಯಕರ ಬಗ್ಗೆ ಹೇಳಬೇಕೆಂದರೆ ಅನ್ಯ ನಾಯಕರು ಪ್ರಧಾನಿ ಮೋದಿಯವರ ಹತ್ತಿರವೂ ಸುಳಿದಿಲ್ಲ. ರಫೇಲ್ ಡೀಲ್ ಕುರಿತಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ರಾಹುಲ್ ಗಾಂಧಿಗೆ ಈ ಆನಲೈನ್ ಸರ್ವೇ ನಲ್ಲಿ ಕೇವಲ 11% ವೋಟ್ ಬಂದಿವೆ. ಇದರ ಮೂಲಕ ಪ್ರಧಾನಿ ಮೋದಿಯವರ ಬಳಿಕ ಅಂದರೆ ಈ 11% ಮತಗಳ ಮೂಲಕ ರಾಹುಲ್ ಗಾಂಧಿ ಎರಡನೆಯ ಸ್ಥಾನವನ್ನ ಪಡೆದಿದ್ದಾರೆ.

ನ್ಯಾಷನಲ್ ಅಜೆಂಡಾ ಫೋರಂ ನ ಪ್ರಕಾರ I-PAC ವತಿತಿಂದ ನಡೆಸಿರುವ ಈ ಆನಲೈನ್ ಸರ್ವೇಕ್ಷಣೆಯಲ್ಲಿ ಆಶ್ಚರ್ಯಜನಕ ರೀತಿಯಲ್ಲಿ 9.3% ಮತಗಳು ಪಡೆಯುವ ಮೂಲಕ‌ ಅರವಿಂದ್ ಕೇಜ್ರೀವಾಲ್ ಮೂರನೆಯ ಸ್ಥಾನ ಪಡೆದಿದ್ದಾರೆ. ಇವರೆಲ್ಲರ ಬಳಿಕ‌ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ 7% ವೋಟ್ ಪಡೆದು ನಾಲ್ಕನೆಯ ಸ್ಥಾನದಲ್ಲಿದ್ದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗು ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಾಯಾವತಿಗೆ ಕ್ರಮವಾಗಿ 5 ಹಾಗು 6 ನೆಯ ಸ್ಥಾನ ಲಭಿಸಿದೆ.

ಇಂತಹ ಜನ ರಾಜಕೀಯದಲ್ಲಿ ಇರಬೇಕಿತ್ತು ಎಂದ ಜನ

ಆನಲೈನ್ ಮೂಲಕ ನಡೆದ ಈ ಸರ್ವೇನಲ್ಲಿ ಹಲವಾರು ಅಚ್ಚರಿಯ ಅಂಶಗಳು ಹೊರಬಂದಿವೆ. ಸೆಪ್ಟೆಂಬರ್ 3 ರಂದು ಬಹಿರಂಗವಾದ ಈ ಲಿಸ್ಟ್ ನಲ್ಲಿ ಜನರ ಪ್ರಕಾರ ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗು ಪತ್ರಕರ್ತ ರವೀಶ್ ಕುಮಾರ್ ರಾಜಕೀಯಕ್ಕೆ ಬರಬೇಕು ಎಂದು ಜನ ಬಯಸಿದ್ದಾರೆ.
ಅಕ್ಷಯಕುಮಾರ್ ಸಮೇತವಾಗಿ ರಘುರಾಮ್ ರಾಜನ್ ಹಾಗು ಪತ್ರಕರ್ತ ರವೀಶ್ ಕುಮಾರ್ ದೇಶದ ಸಮಸ್ಯೆಗಳನ್ನ ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ವಿಶೇಷವಾಗಿ ಅಕ್ಷಯಕುಮಾರ್ ಬಗ್ಗೆ ಮಾತನಾಡುವುದಾದರೆ ಅವರು ತಮ್ಮ ಫಿಲಂ ಗಳ ಮೂಲಕ ದೇಶದ ಜ್ವಲಂತ ಸಮಸ್ಯೆಗಳನ್ನ ಜನರೆದುರಿಡುವ ಕೆಲಸ ಮಾಡುತ್ತಿದ್ದಾರೆ.

I-PAC ನಲ್ಲಿ ಇರುವ ಸದಸ್ಯರ ಪ್ರಕಾರ ಈ ಸರ್ವೇಯ ಉದ್ದೇಶ ಇಂಟರ್ನೆಟ್ ಸೌಲಭ್ಯವಿರುವ ಜನರ ಬಳಿ ದೇಶದ ಕುರಿತಾದ ವಿಷಯಗಳನ್ನ ಮುಟ್ಟಿಸುವುದಾಗಿದೆಯಂತೆ. ಈ ಸರ್ವೇಯಲ್ಲಿ ಇದೀಗ ಸ್ಪಷ್ಟವಾಗಿ ಬಹಿರಂಗಗೊಂಡ ವಿಷಯವೆಂದರೆ ಪ್ರಧಾನಿ ಮೋದಿಯವರ ಯೋಜನೆಗಳಿಂದ ಮಾತ್ರ ಜನ ಲಾಭ ಪಡೆಯುತ್ತಿಲ್ಲ ಬದಲಾಗಿ ಪ್ರಧಾನಿ ಮೋದಿಯವರ ಕಾರ್ಯಶೈಲಿ ಕೂಡ ತಮಗಿಷ್ಟವಾಗಿದೆ ಅನ್ನೋದನ್ನ ಜನ ಸ್ಪಷ್ಟವಾಗಿ ಈ ಸರ್ವೇ ಮೂಲಕ ತಿಳಿಸಿದ್ದಾರೆ.

ನಿಮಗೊಂದು ಪ್ರಶ್ನೆ

ಯಾರನ್ನ ನೀವು ಮುಂದಿನ ಪ್ರಧಾನಿಯಾಗಿ ನೋಡಲು ಬಯಸುತ್ತೀರ?

Source: NBT

– Team Nationalist Views

Nationalist Views ©2018 Copyrights Reserved

 •  
  2K
  Shares
 • 2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com