Connect with us
Loading...
Loading...

ಅಂಕಣ

ತುಂಬಿದ ಮುಸ್ಲಿಂರ ಸಭೆಯಲ್ಲೇ ರಾಮಮಂದಿರ ಅಲ್ಲೇ ಕಟ್ತೇವೆ ಅಂತ ಶಪಥ ಮಾಡಿದ ಪೋಲಿಸ್ ಅಧಿಕಾರಿ!! ಆ ಅಧಿಕಾರಿ ಯಾರು ಗೊತ್ತೆ?

Published

on

 • 2.7K
 •  
 •  
 •  
 •  
 •  
 •  
 •  
  2.7K
  Shares

ರಾಮ ಮಂದಿರ ಕುರಿತಂತೆ ಆದು ಹಿಂದುಗಳ ದೌರ್ಬಲ್ಯವೋ ಅಥವಾ ಕೆಲ ಹಿಂದುಗಳ ತಲೆ ಹಿಡುಕತನದ ಪರಮಾವಧಿಯೋ ಗೊತ್ತಿಲ್ಲ. ಸ್ವಾತಂತ್ರ್ಯಾ ಪೂರ್ವದಲ್ಲಿ ವಿದೇಶಿ ಆಕ್ರಮಣಕಾರರಿಂದ ತುಳಿಸಿಕೊಂಡೆವು. ಆದರೆ ಸ್ವಾತಂತ್ರ್ಯಾ ನಂತರವಾದರೂ ನಮಗೆ ನಮ್ಮ ಧಾರ್ಮಿಕ ಹಕ್ಕು ಸಿಕ್ಕಿದೆಯಾ ಅನ್ನೋದೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಯಾರು ಹಿಂದೂ ಧರ್ಮದ ಪುನರುತ್ಥಾನಕ್ಕೆ ರಕ್ತ ಬಸಿದರೊ ಅವರು ಈಗಿನ ಸಂದರ್ಭವನ್ನು ನೋಡಿದ್ದರೆ ಖಂಡಿತವಾಗಿಯೂ ಸಹಿಸಿಕೊಳ್ಳುತ್ತಿರಲಿಲ್ಲ.

ಸ್ವಾತಂತ್ರ್ಯಾ ಪೂರ್ವದಲ್ಲಿ ಭಾರತದ ಮೇಲೆ ವಿದೇಶಿ ಆಕ್ರಮಣಕಾರರು ದಾಳಿ ಮಾಡಿದ್ದು ನಮ್ಮ ಸಂಪತ್ತನ್ನು ಸೂರೆಗೈಯಲು. ಆ ವಿದೇಶಿ ಆಕ್ರಮಣಕಾರರ ಪೈಕಿ ಮುಸಲ್ಮಾನರು ಮತ್ತು ಬ್ರಿಟಿಷ್ ಆಕ್ರಮಣಕಾರರು ಮಾತ್ರ ತುಂಬಾ ದುರುದ್ದೇಶವನಿಟ್ಟುಕೊಂಡು ದಾಳಿ ಮಾಡಿದ್ದರು. ಮೊದ ಮೊದಲು ಸಂಪತ್ತನ್ನು ಸೂರೆಗೈದರು. ಸಂಪತ್ತನ್ನು ಕೊಳ್ಳೆ ಹೊಡೆದ ನಂತರ ಹಿಂದೂ ಧರ್ಮದ ಸಂಸ್ಕೃತಿಗೆ ಕೈ ಹಾಕಿದರು.

ಮೊಹಮದ್ ಘಜನಿಯ ಆಕ್ರಮಣ, ಮೊಹಮದ್ ಘೋರಿಯ ಆಕ್ರಮಣ, ಬಾಬರ್ ನ ಆಕ್ರಮಣ ಹೀಗೆ ಲೆಕ್ಕವಿಲ್ಲದಷ್ಟು ಆಕ್ರಮಣ ಭಾರತದ ಮೇಲೆ, ಸನಾತನ ಸಂಸ್ಕೃತಿಯ ಮೇಲೆ ಆದವು. ನಮ್ಮ ದೇವಾಲಯಗಳ ಮೇಲೆ ಹೀನಾತೀತ ಆಕ್ರಮಣಗಳಾದವು. ಹಿಂದೂ ಮಹಿಳೆಯರ ಸಾಮೂಹಿಕ ಅತ್ಯಾಚಾರಗಳಾದವು. ಸಾಮೂಹಿಕ ಮತಾಂತರಗಳಾದವು. ಮತಾಂತರಕ್ಕೆ ಒಪ್ಪದವರನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಒಟ್ಟಿನಲ್ಲಿ ವಿದೇಶಿ ಭಾರತದ ಇತಿಹಾಸದ ಪುಟಗಳು ರಕ್ತರಂಜಿತವಾಗುವಂತಾಯಿತು.

ಇದೇ ಸಂದರ್ಭದಲ್ಲಿಯೇ ಪ್ರಭು ಶ್ರೀರಾಮನ ಮಂದಿರದ ಮೇಲೆ ಆಕ್ರಮಣ ನಡೆದದ್ದು. ಹಿಂದುಗಳ ಪವಿತ್ರ ಏಳು ಕ್ಷೇತ್ರಗಳ ಪೈಕಿ ಅಯೋಧ್ಯೆ ಮೊದಲ ಸ್ಥಾನದಲ್ಲಿದೆ. ಪ್ರಭು ಶ್ರಿರಾಮನ ಮಂದಿರವನ್ನು ರಾಜ ವಿಕ್ರಮಾದಿತ್ಯನು 14-15ನೇ ಶತಮಾನದಲ್ಲಿ ಕಟ್ಟಿಸಿ, ಪ್ರಭು ಶ್ರೀರಾಮನ ನೆನಪನ್ನು ಹಿಂದೂಸ್ತಾನದಲ್ಲಿ ಶಾಶ್ವತವಾಗಿಸಿದ. ಅದು ಏಳು ಅಂತಸ್ತಿನ ಭವ್ಯವಾದ ದೇವಸ್ಥಾನ.

ನಮ್ಮ ಹಿಂದೂ ಧರ್ಮದ ಮೇಲೆ ಸುಮಾರು ಶತಮಾನಗಳಿಂದ ದಾಳಿ ನಡೆಯುತ್ತಲೇ ಇದೆ. 15ನೇ ಶತಮಾನದ ಕಾಲಾವಧಿಯಲ್ಲಿ ಭಯೋತ್ಪಾದಕ ಬಾಬರ್ ನ ಕಣ್ಣು ಭಾರತದ ಮೇಲೆ ಬಿತ್ತು. ಆಗಲೇ ಮೊಘಲರಿಂದ ಭಾರತ ತತ್ತರಿಸಿ ಹೋಗಿತ್ತು. ಆ ಸಂದರ್ಭದಲ್ಲಿಯೇ ಬಾಬರ್ ಕೂಡಾ ಭಾರತದ ಮೇಲೆ ದಾಳಿ ಮಾಡಿ ಮೊಘಲರ ದೊರೆಯಾಗಿಬಿಟ್ಟ. ಭಯೋತ್ಪಾದಕ ಬಾಬರ್ ಮೂಲತಃ ಟರ್ಕಿಯ ಉಜ್ಬೇಕಿಸ್ತಾನ ಮೂಲದ ತೈಮೂರ್ ಮತ್ತು ಚೆಂಗಿಸ್ ಖಾನರ ಸಂಭಂದಿಯಾಗಿದ್ದ.

ಇಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಅದೇನೆಂದರೆ ಬಾಬರ್ ಎಂಬ ಭಯೋತ್ಪಾದಕ ವಿದೇಶದವನು. ಹಾಗಿದ್ದ ಮೇಲೆ ವಿದೇಶಿ ದಾಳಿಕೋರನ ಮಸೀದಿ ಬೇಕು ಅಂತ ಭಾರತದಲ್ಲಿರುವ ಕೆಲವರು ಹೇಳುತ್ತಾರಲ್ಲ. ವಿದೇಶಿ ಆಕ್ರಮಣಕಾರನ ಮಸೀದಿ ಬೇಕು ಎನ್ನುವವರು ಈ ದೇಶಕ್ಕೆ ನಿಷ್ಠರಲ್ಲ ಎನ್ನಬಹುದಲ್ವಾ? ಇದು ಮಾತ್ರ ತುಂಬಾ ವಿಪರ್ಯಾಸದ ಸಂಗತಿ. ಒಬ್ಬ ಭಯೋತ್ಪಾಕನ ಮಸೀದಿ ಬೇಕು ಅನ್ನೋದಕ್ಕಿಂತಲೂ ಘೋರ ತಪ್ಪು ಮತ್ತೊಂದಿಲ್ಲ.

ಉಜ್ಬೇಕಿಸ್ತಾನದ ಭಯೋತ್ಪಾದಕ ಬಾಬರ್ ಭಾರತದ ಮೇಲೆ ದಾಳಿ ಮಾಡಿ ಮೊಘಲ್ ದೊರೆ ಎನಿಸಿಕೊಂಡು ಅನಂತರ ಆತ ಅಯೋಧ್ಯೆಯ ಏಳು ಅಂತಸ್ತಿನ ಪ್ರಭು ಶ್ರೀರಾಮನ ಮಂದಿರದ ಮೇಲೆ ಕಣ್ಣು ಹಾಕಿದ. ನಮ್ಮ ಸಂಸ್ಕೃತಿ ನಾಶ ಮಾಡಲು ಆತ ಆ ದೇವಾಲಯವನ್ನು ನಾಶ ಮಾಡಬೇಕೆಂದುಕೊಂಡು ತನ್ನ ಸೇನೆಯನ್ನು ಅಯೋಧ್ಯೆಯ ಪ್ರಭು ಶ್ರೀರಾಮನ ಮಂದಿರದ ಮೇಲೆ ಮೀರ್ ಬಾಕಿ ನೇತೃತ್ವದಲ್ಲಿ ದಾಳಿ ಮಾಡಿಸಿ, ದೇವಾಲಯವನ್ನು ನಾಮಾವಶೇಷ ಮಾಡಿದ.

15 ನೇ ಶತಮಾನದಲ್ಲಿ ಭಯೋತ್ಪಾದಕ ಬಾಬರ್ ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು. ಭಾರತಕ್ಕೆ ಬಂದು ದಾಳಿಮಾಡಿ ಮೊಗಲ ದೊರೆ ಎನಿಸಿಕೊಂಡ. ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮಮಂದಿರದ ಮೇಲೆ ಬಿತ್ತು .ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತೆ ಎಂದು ಭಾವಿಸಿ ತನ್ನ ಸೇನೆಯನ್ನ ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿಸಿ ಕೆಡವಿದ.

ದೇವಸ್ತಾನವನ್ನು ಕೆಡವಿದ ಭಯೋತ್ಪಾದಕ ಬಾಬರ್ ಅದೇ ದೇವಸ್ಥಾನದ ಅವಶೇಷಗಳಿಂದ ಮಸೀದಿ ಕಟ್ಟಿಸಿ ಅದಕ್ಕೆ ಜನ್ಮಸ್ಥಾನ ಮಸೀದಿ ಎಂದು ಹೆಸರಿಟ್ಟ. ಯಾರ ಜನ್ಮಸ್ಥಾನ ಅಂತ ಗೊತ್ತಲ್ವಾ? ಅದುವೇ ಪ್ರಭು ಶ್ರೀರಾಮನ ಜನ್ಮಸ್ಥಾನ. ಈಗ ಬಾಬರಿ ಮಸೀದಿ ಅಂತ ಕರೆಯಲು ಶುರು ಮಾಡಿದ್ದಾರೆ. ಅಸಲಿಗೆ 1985ರವರೆಗೂ ಆ ಮಸೀದಿಯನ್ನು ಜನ್ಮಸ್ಥಾನ ಮಸೀದಿ ಅಂತಲೇ ಕರೆಯುತ್ತಿದ್ದರು. ಜನ್ಮಸ್ಥಾನ ಅಂತ ಕರೆಯೋದರಿಂದ ಯಾರ ಜನ್ಮಸ್ಥಾನ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅರಿತ ಬಾಬರ್ ಕ್ರಿಯಾಸಮಿತಿ ಹಾಗೂ ಕೆಲ ತಲೆಹಿಡುಕರು ಬಾಬರಿ ಮಸೀದಿ ಎಂದು ಕರೆಯಲು ಶುರು ಮಾಡಿದರು.

ತನ್ನ ಪವಿತ್ರ ಏಳು ಕ್ಷೇತ್ರಗಳ ಪೈಕಿ ಮೊದಲ ಸ್ಥಾನದಲ್ಲಿರುವ ಅಯೋಧ್ಯೆಯ ಮೇಲೆ ಭಯೋತ್ಪಾದಕ ಬಾಬರ್ ದಾಳಿ ಮಾಡಿದ್ದಕ್ಕೆ ಹಿಂದೂ ಸಮಾಜ ಕುದ್ದು ಹೋಗಿತ್ತು. ಹಿಂದೂ ತನಗೆ ಆದ ಅನ್ಯಾಯವನ್ನು ತೊಡೆದು ಹಾಕಲು ಬಾಬರ್ ಮಸೀದಿಯನ್ನು ಕೆಡವಲು ಸುಮಾರು 72 ಬಾರಿ ಪ್ರಯತ್ನಿಸಿದ. ಪ್ರತಿ ಸಂದರ್ಭದಲ್ಲೂ ಅನೇಕ ರಾಮ ಭಕ್ತರು ಬಲಿಯಾಗಿದ್ದಾರೆ. ದಾಸ್ಯದ ಕುರುಹಾದ ಬಾಬರ್ ಮಸೀದಿಯನ್ನು ತೊಡೆದು ಹಾಕಲು ಹೋಗಿ 71 ಬಾರಿ ಹಿಂದೂ ಸಮಾಜ ಸೋತಿತ್ತು. ಆದರೆ 72ನೇ ಬಾರಿ ಮಾತ್ರ ಹಿಂದೂಗಳ ಘರ್ಜನೆಗೆ ಮಾತ್ರ ಬಾಬರಿ ಮಸೀದಿ ನೆಲ ಸಮವಾಗಿ ದಾಸ್ಯದ ಕುರುಹು ಅಳಿಸಿ ಹೋಯ್ತು. ಅದು 1992 ಡಿಸೆಂಬರ್ 6.

ಸ್ವಾತಂತ್ರ್ಯಾ ಪೂರ್ವದಲ್ಲಿ ವಿದೇಶಿಯರು ಇದ್ರು ಹಾಗಾಗಿ ಅವರೆಲ್ಲ ನಮ್ಮ ಧಾರ್ಮಿಕ ಹಕ್ಕನ್ನು ಕಸಿಯುವ, ಹಿಂದುಗಳ ದಮನ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಸ್ವಾತಂತ್ರ್ಯಾ ನಂತರವಾದರೂ ಮೂಲ ಭಾರತೀಯನಾದ ಹಿಂದುವಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿದೆಯಾ? ಧಾರ್ಮಿಕ ಹಕ್ಕು ಸಿಕ್ಕಿದ್ದರೆ ರಾಮ ಮಂದಿರ ನಿರ್ಮಾಣವಾಗಬೇಕಿತ್ತು ಅಲ್ವಾ? ಊಹೂ ಹಿಂದುವಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಗಲೇ ಇಲ್ಲ, ಸಿಕ್ಕೂ ಇಲ್ಲ. ಮುಂದೆಯಾದರೂ……??

100 ಕೋಟಿ ಹಿಂದೂಗಳ ಆರಾಧ್ಯ ದೇವ ಪ್ರಭು ಶ್ರೀರಾಮನ ಮಂದಿರ ನಮ್ಮಿಂದ ಕಟ್ಟಿಸೋಕೆ ಆಗುತ್ತಿಲ್ಲವಲ್ಲ. ಇದಕ್ಕಿಂತಲೂ ನಾಚಿಕೆಗೇಡಿತನ ಬೇರೆ ಯಾವುದೂ ಇರಲಿಕ್ಕಿಲ್ಲ. ಬಾಯಿ ಬಿಟ್ಟರೆ ಸ್ವಾತಂತ್ರ್ಯ ಬಂದು 70 ವರ್ಷ ಆಯ್ತು ಅಂತ ಬಡ್ಕೊಳ್ತೀವಿ. ಆದರೆ ನಿಜವಾಗಿಯೂ ಹಿಂದುವಿಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ರಾಜಕೀಯ ಪಕ್ಷಗಳು ರಾಮ ಮಂದಿರದ ವಿಷಯವನ್ನಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ. ರಾಮ ಮಂದಿರಕ್ಕೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೋ ಇಲ್ವೋ ಎಂಬುದು ಗೊತ್ತಿಲ್ಲ.

ಆದರೆ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ರಾಮ ಮಂದಿರ ಕುರಿತಂತೆ ಸಕಾರಾತ್ಮಕ ವಾತಾವರಣ ಸಿಗತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಲಿವೆ. ಅದರಲ್ಲೂ ಯೋಗಿ ಆದಿತ್ಯಾನಾಥರು ಉತ್ತರ ಪ್ರದೇಶದ ಚುಕ್ಕಾಣಿಯನ್ನು ಹಿಡಿದ ಮೇಲೆ ರಾಮ ಮಂದಿರದ ವಿಷಯ ತುಂಬಾ ಚರ್ಚೆಯಾಗುತ್ತಿದೆ. ಕರ್ನಾಟಕದ ರವಿಶಂಕರ್ ಗುರೂಜಿಯವರು ರಾಮ ಮಂದಿರ ಕುರಿತಂತೆ ವಿವಾದ ಬಗೆಹರಿಸಲು ಓಡಾಡುತ್ತಿದ್ದಾರೆ.

ಅಷ್ಟೇ ಯಾಕೆ ತುಂಬಾ ಜನ ಮುಸ್ಲಿಂ ಬಾಂಧವರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದಾರೆ. ಬರೀ ಬೆಂಬಲವಷ್ಟೇ ಅಲ್ಲ. ಶ್ರೀ ರಾಮನ ಮಂದಿರಕ್ಕೆ ಯಾವ ತ್ಯಾಗಕ್ಕೂ ಸಿದ್ದ ಎಂಬ ಘೋಷಣೆಯನ್ನು ಮಾಡಿದ್ದಾರೆ. ಇದು ನಿಜಕ್ಕೂ ಸಕಾರಾತ್ಮಕ ವಾತಾವರಣವೇ ಸರಿ. ಇದೇ ಅಲ್ವಾ ಕೋಮು ಸಾಮರಸ್ಯ?

ರಾಮ ಮಂದಿರ ನಿರ್ಮಾಣ ಕುರಿತಂತೆ ನಾವೆಲ್ಲಾ ಮಾತಾಡೋದು ನಿಜ. ಆದರೆ ಆಶ್ಚರ್ಯ ಎಂಬಂತೆ ಐಪಿಎಸ್ ಅಧಿಕಾರಿ ಶುಕ್ಲಾ ಅವರು ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣವಾಗಬೇಕು ಎಂದು ಮುಸಲ್ಮಾನರೂ ಇದ್ದಂತಹ ಸಭೆಯಲ್ಲಿ ಬಹಿರಂಗವಾಗಿಯೇ ಘೋಷಿಸಿದ್ದಾರೆ.

ಇತ್ತೀಚೆಗೆ ಅಂದರೆ ಜನವರಿ 28 ರಂದು ಲಕ್ನೋ ವಿಶ್ವ ವಿದ್ಯಾಲಯ ಆವರಣದಲ್ಲಿ ಅಖಿಲ ಭಾರತ ಸಮಗ್ರ ವಿಚಾರ್ ಮಂಚ್ ಸಂಕೀರ್ಣವೊಂದನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿ ಶುಕ್ಲಾ ಅವರು ಭಾಗವಹಿಸಿ ರಾಮ ಮಂದಿರ ನಿರ್ಮಿಸುವ’ ಬಗ್ಗೆ ಸಂಕಲ್ಪ ಮಾಡಿದ್ದಾರೆ.

ಒಟ್ಟಿನಲ್ಲಿ ಈಗ ರಾಮ ಮಂದಿರ ಕುರಿತಂತೆ ಪೂರಕ ವಾತಾವರಣ ಸೃಷ್ಟಿಯಾಗಿರೋದಂತು ನಿಜ. ಈಗಲೇ ರಾಮ ಮಂದಿರ ನಿರ್ಮಾಣವಾದರೆ ಒಳಿತು.

– Team Nationalist Views

©2018 Copyrights Reserved

 •  
  2.7K
  Shares
 • 2.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com