Connect with us
Loading...
Loading...

ಅಂಕಣ

ಇಸ್ಲಾಂ ಧರ್ಮ ಮೂಲತಃ ಹಿಂದೂ ಧರ್ಮವೇ? ಇಸ್ಲಾಮಿಕ್ ಸಂಪ್ರದಾಯಗಳು, ಆಚರಣೆಗಳು ಹಿಂದೂ ಧರ್ಮದಿಂದ ಪ್ರಭಾವಿತವಾಗಿವೆ?

Published

on

 • 7.7K
 •  
 •  
 •  
 •  
 •  
 •  
 •  
  7.7K
  Shares

ಮುಸಲ್ಮಾನರ ಪವಿತ್ರ ಕ್ಷೇತ್ರ ಮೆಕ್ಕಾ. ಮೆಕ್ಕಾದಲ್ಲಿನ ಕಾಬಾ ಕಲ್ಲು ಪುರಾತನ ಶಿವಲಿಂಗ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು ಅದಕ್ಕೆ ಕೆಲವು ಪುರಾವೆಗಳು ಸಾಕ್ಷಿ ರೂಪದಲ್ಲಿ ನಮಗೆ ಕಾಣಸಿಗುತ್ತವೆ.

ಮುಸಲ್ಮಾನರ ಪವಿತ್ರ ಕ್ಷೇತ್ರ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಈಗಲೂ ಶಿವಲಿಂಗವಿದೆ. ಆದರೆ ಅದು ವಿರೂಪಗೊಂಡಿದೆ ಅನ್ನೋದು ಹಲವಾರು ಸಂಶೋಧಕರ ವಾದ. ಅದು ಪ್ರಾಚೀನ ಶಿವಲಿಂಗ. ಇಸ್ಲಾಂ ಧರ್ಮದವರು ಅನುಸರಿಸುವ ನಮಾಜ್, ಈದ್-ಉಲ್-ಫಿತ್ರ್, ಬಕ್ರೀದ್, ಶಬ್-ಎ-ಬರಾತ್ ಇವುಗಳೆಲ್ಲಾ ಹಿಂದೂ ಧರ್ಮದ ವೇದಗಳ ಕಾಲದಲ್ಲಿನ ಸಂಪ್ರದಾಯಗಳಿಂದ ಬಂದಿರುವಂತೆಯೇ ಭಾಸವಾಗುತ್ತವೆ.

ಇಸ್ಲಾಂ ಧರ್ಮದಲ್ಲಿ 786 ಎಂಬ ಸಂಖ್ಯೆ ಅಥವಾ ಚಿಹ್ನೆ ಇದೆಯಲ್ಲ ಅದು ಸನಾತನ ಹಿಂದೂ ಧರ್ಮದ ಓಂ(OM)ನಿಂದ ಬಂದಿರೋದು. ಹೇಗೆ ಅಂತೀರಾ? ಕೆಳಗಿನ ಫೋಟೋ ನೋಡಿ ಎಲ್ಲಾ ಅರ್ಥ ಆಗುತ್ತೆ.

ರಾಜ ವಿಕ್ರಮಾದಿತ್ಯನ ಕಾಲದಲ್ಲಿದ್ದ ಶಾಸನವು ಮೆಕ್ಕಾದಲ್ಲಿನ ಕಾಬಾದಲ್ಲಿ ಕಂಡುಬರುತ್ತದೆ. ಕಾಬಾ ದೇವಾಲಯದೊಳಗಿರುವ ಚಿನ್ನದ ಭಕ್ಷ್ಯದ ಮೇಲೆ ಕೆತ್ತಲಾದ ಶಾಸನ ರಾಜ ವಿಕ್ರಮಾದಿತ್ಯನ ಕಾಲದ್ದಾಗಿದೆ. ಇದನ್ನು ಇಸ್ತಾಂಬುಲ್ ನ ಮಖ್ತಾಬ್-ಇ-ಸುಲ್ತಾನಾ ಗ್ರಂಥಾಲಯದಲ್ಲಿ ಅಮೂಲ್ಯವಾದ ಸಾಯರ್-ಉಲ್-ಒಕುಲ್ ಎಂಬುದರಲ್ಲಿ ದಾಖಲಿಸಲಾಗಿದೆ.

ಹಿಂದುಗಳು ತಮ್ಮ ನಂಬಿಕೆಯ ಪ್ರಕಾರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ(ಚಲಿಸುತ್ತಾರೆ) ಹಾಕುತ್ತಾರೆ. ಅದರಂತೆ ಮೆಕ್ಕಾದಲ್ಲಿರುವ ಮುಸಲ್ಮಾನರ ಪವಿತ್ರ ಕಾಬಾ ಕೂಡಾ ಮೂಲತಃ ಹಿಂದೂ ಧರ್ಮದ್ದೇ ಎಂದು ಹೇಳಲು ಇಲ್ಲೊಂದು ಸಾಕ್ಷಿ ಸಿಗುತ್ತದೆ. ಏನು ಗೊತ್ತಾ? ಹಿಂದುಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವ ಹಾಗೆ ಕಾಬಾದಲ್ಲಿ ಮುಸಲ್ಮಾನರೂ ಏಳು ಪ್ರದಕ್ಷಿಣೆ ಹಾಕುತ್ತಾರೆ. ಆದರೆ ವಿರುದ್ಧ ದಿಕ್ಕಿನಲ್ಲಿ ಹಾಕುತ್ತಾರೆ.

ಇಸ್ಮಾಂ ಧರ್ಮದವರಿಗೆ ಪವಿತ್ರವೆಂದರೆ ಅದುವೇ ಮೆಕ್ಕಾ. ಆ ಮೆಕ್ಕಾದಲ್ಲಿ ಕಾಬಾ ಅತೀ ಮುಖ್ಯವಾದ ಪವಿತ್ರ ಕ್ಷೇತ್ರ. ಅಲ್ಲಿಯೇ ಇರೋದು ಶಿವಲಿಂಗ. ಆ ಶಿವಲಿಂಗಕ್ಕೆ ಕಪ್ಪು ಬಟ್ಟೆಯನ್ನು ಹಾಕಿ ಮುಚ್ಚಿರುತ್ತಾರೆ. ಯಾಕೆಂದರೆ ಅದು ಶಿವಲಿಂಗವೆನ್ನುವುದು ತಿಳಿಯಬಾರದೆಂದು ಅಂತ ನಾವು ಭಾವಿಸಬಹುದು. ಇವಾಗ ಅದನ್ನು ಆಸ್ವಾ ಎಂದು ಕರೆಯುತ್ತಾರೆ. ಆಸ್ವಾ ಎಂಬುದು ಸಸ್ಕೃತದ ಅಶ್ವೆಟ್ ಪದ ಅಂದರೆ ಕಪ್ಪುಕಲ್ಲು. ಅಂದರೆ ಅದು ಶಿವಲಿಂಗ ಅಂತಲೇ ಆಯ್ತಲ್ವಾ?

ಮೆಕ್ಕಾ ಹೆಸರು ಮೂಲತಃ ಸಂಸ್ಕೃತ ಪದ ಮಖಾ ಎಂಬ ಶಬ್ದದಿಂದ ಬಂದದ್ದು. ಮಖಾ ಎಂದರೆ ಅಗ್ನಿ ಎಂದರ್ಥ. ಮಖಾ ಎಂಬ ಸಂಸ್ಕೃತ ಪದದ ವಿರೂಪ ಶಬ್ದವೇ ಮೆಕ್ಕಾ.

ಬಾಕರಿ-ಈದ್ (ಈದ್ ಅಲ್-ಅಧಾ) ಅಥವಾ ಭಕ್ರೀದ್ ಎಂಬ ಇಸ್ಲಾಮಿಕ್‌ ಆಚರಣೆಗಳು ವೇದ ಕಾಲಗಳ ಗೋ-ಮೇಧ ಮತ್ತು ಅಶ್ವ-ಮೇಧ ಯಜ್ಞಗಳಿಂದ ಬಂದದ್ದು. ಈದ್ ಎಂಬುದರ ಸಂಸ್ಕೃತ ಅರ್ಥ ಪೂಜೆ. ಈದ್ ಇಸ್ಲಾಮಿಕ್ ಪದವೇ ಅಲ್ಲ. ಅದೊಂದು ಶುದ್ಧ ಸಂಸ್ಕೃತ ಪದ.

ದುರಾದೃಷ್ಟವೆಂದರೆ ಈಗಿನ ಇತಿಹಾಸಕಾರರು ಗೋ-ಮೇಧ ಮತ್ತು ಅಶ್ವಮೇಧ ಯಾಗ ಅಥವಾ ಯಜ್ಞಗಳನ್ನು ಗೋವು ಮತ್ತು ಕುದುರೆಗಳನ್ನು ಬಲಿ ಕೊಡುವ ಪದ್ದತಿ ಎಂದು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಆದರೆ ಗೋ-ಮೇಧ ಮತ್ತು ಅಶ್ವ-ಮೇಧವೆಂದರೆ ಅದು ಆರಾಧನೆಯ ಸಂಪ್ರದಾಯ.

ಇಸ್ಲಾಮಿಕ್ ಉತ್ಸವ ‘ಈದ್-ಅಲ್-ಫಿತ್ರ್’ ನಂತಹ ಅನೇಕ ಇಸ್ಲಾಮಿಕ್ ಸಂಪ್ರದಾಯಗಳು ಮತ್ತು ಅಭ್ಯಾಸಗಳು ಸಂಸ್ಕೃತ ಸಂಪ್ರದಾಯದಲ್ಲಿ ಪಿತಾಮಹರನ್ನು ಆರಾಧಿಸುವ ‘ಈದ್ ಆಫ್ ಪಿಟರ್ಸ್’ (ಪಿಟ್ರ್ ಎಂದರೆ ಸಂಸ್ಕೃತದಲ್ಲಿ ಪೂರ್ವಜರು) ನಿಂದ ಹುಟ್ಟಿಕೊಂಡಿದೆ. ಭಾರತದಲ್ಲಿ, ಹಿಂದೂಗಳು ತಮ್ಮ ಪೂರ್ವಜರನ್ನು ಪಿಟ್ರ್-ಪಕ್ಷದಲ್ಲಿ ಸ್ಮರಿಸುತ್ತಾರೆ, ಇದು ಅವರ ನೆನಪಿಗಾಗಿ ಹದಿನೈದು ದಿನಗಳವರೆಗೆ ಕಾಯ್ದಿರಿಸಲಾಗಿದೆ. ಇದೇ ರೀತಿ ‘ಈದ್-ಅಲ್-ಫಿತ್ರ್’ (ಪೂರ್ವಜರ ಆರಾಧನೆಯ) ಪ್ರಾಮುಖ್ಯತೆಯಾಗಿದೆ. ಅಂದರೆ ಇಸ್ಲಾಮ್ ಧರ್ಮದವರು ಆಚರಿಸುತ್ತಿರುವ ಈದ್-ಉಲ್-ಫಿತ್ರ್ ಸಂಸ್ಕೃತದಿಂದ ಹುಟ್ಟಿಕೊಂಡಿದೆ ಅಂತಾಯ್ತಲ್ಲ.

ಇಸ್ಲಾಂ ಧರ್ಮದವರು ಆಚರಿಸುವ ಹಬ್ಬಗಳೊಂದಿಷ್ಟು ಉದಯವಾಗುವುದನ್ನ ನೋಡಿ ನಿರ್ಧರಿಸುತ್ತಾರೆ.ಈ ಆಚರಣೆಯೂ ಕೂಡಾ ಹಿಂದೂ ಸಂಪ್ರದಾಯದಿಂದಲೇ ಬಂದಿದೆ. ಇವುಗಳು ಹಿಂದೂ ಹಬ್ಬಗಳಾದ ಸಂಕ್ರಾಂತಿ ಮತ್ತು ವಿನಾಯಕ ಚತುರ್ಥಿಗಳ ಮೂಲಕ ಬಂದದ್ದು.

ಬರಾಹ್ ವಫಾತ್ (ಮಿಲಾದ್-ಅನ್-ನಬಿ) ಎಂಬುದು ಯುದ್ಧದಲ್ಲಿ ಸತ್ತವರಿಗಾಗಿ ಅಥವಾ ಶಸ್ತ್ರಾಸ್ತ್ರಗಳ ನೆನಪಿಗಾಗಿ ಅನುಸರಿಸುವ ಪದ್ಧತಿ. ಇದು ಸಂಸ್ಕೃತ ಸಂಪ್ರದಾಯದಿಂದ ಬಂದಿದೆ. ಮರಣಿಸಿದವರ ಸ್ಮರಣಾರ್ಥ ಹಿಂದೂಗಳು ಅನುಸರಿವ ಚತುರ್ದಶಿ ಯಿಂದಲೇ ಬರಾಹದ ವಫಾತ್ ಎಂಬ ಆಚರಣೆ ಹುಟ್ಟಿಕೊಂಡದ್ದು.

ಅರಬ್ ರಾಷ್ಟ್ರ ಕುದುರೆಗಳಿಗೆ ಹೆಸರುವಾಸಿಗಿದೆ‌. ಅರಬ್ ಕುದುರೆಗಳು ಶತಮಾನಗಳಿಂದಲೂ ಜಗತ್ತಿನ ಅನೇಕ ದೇಶಗಳಿಗೆ ಸರಬರಾಜು ಆಗುತ್ತವೆ. ಅರಬ್ ಅಥವಾ ಅರಬ್ ಸ್ಥಾನ ಎಂಬ ಶಬ್ದ ಮೂಲತಃ ಸಂಸ್ಕೃತದ ಆರ್ವಸ್ಥಾನ ಪದದಿಂದ ಆದದ್ದು. ಆರ್ವ ಅಂದ್ರೆ ಕುದುರೆ,ಸ್ಥಾನ ಎಂದರೆ ಸ್ಥಳ ಎಂದರ್ಥ.

ವರ್ಷದ ನಾಲ್ಕು ತಿಂಗಳ ಇಸ್ಲಾಮಿಕ್ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆ ಸಮಯದಲ್ಲಿ ಲೂಟಿ ಮತ್ತು ಇತರ ದುಷ್ಟ ಕಾರ್ಯಗಳನ್ನು ಮಾಡಲ್ಲ. ಇದು ಚತುರ್ಮಾಸದಲ್ಲಿ ಹುಟ್ಟಿದ್ದು, ಹಿಂದೂ ಸಂಪ್ರದಾಯದಲ್ಲಿ ನಾಲ್ಕು ತಿಂಗಳ ಅವಧಿಯ ವಿಶೇಷ ಶಪಥಗಳು ಮತ್ತು ಕಠಿಣತೆಗಳು ಆಚರಿಸುತ್ತಾರೆ. ಈ ಚತುರ್ಮಾಸವನ್ನೇ ಇಸ್ಲಾಮ ಧರ್ಮದವರು ಆಚರಿಸುತ್ತಾರೆ ಆದರೆ ಅವರಿಗೆ ಇದು ಮೂಲತಃ ಹಿಂದೂ ಧರ್ಮದಿಂದ ಬಂದದ್ದು ಅನ್ನುವ ವಿಚಾರ ಗೊತ್ತಿಲ್ಲ.

ಇಸ್ಮಾಮಿನ ಶಬ್-ಇ-ಬರಾತ್ ಆಚರಣೆ ಶಿವ ವೃತ ಮತ್ತು ಶಿವ ರಾತ್ರಾ ಅಥವಾ ಶಿವರಾತ್ರಿ ಎಂಬ ಹಿಂದೂ ಆಚರಣೆಯಿಂದ ಬಂದಿದೆ. ಶಿವ ವೃತದ ವಿರೂಪ ಶಬ್ದವೇ ಶಬ್-ಎ-ಬರಾತ್.‌ ಗಮನಿಸಿ ಶಿವ ವೃತ ಶಬ್ದವನ್ನು ಶಬ್-ಇ-ಬರಾತ್ ಆಗಿ ಮಾಡಿದ್ದಾರೆ.

ಈದ್ ಅಂದರೆ ಆರಾಧನೆ ಮತ್ತು ಗೃಹ ಅಂದರೆ ‘ಮನೆ’ ಎಂದರ್ಥ.
ಇಸ್ಲಾಮಿಕ್ ಶಬ್ದ ಈದ್ಗಾಹ್ ಎಂಬ ಶಬ್ದವು ‘ಪೂಜಾ ಮಂದಿರ’ವನ್ನು ಸೂಚಿಸುತ್ತದೆ. ಇದು ಪದದ ಸಂಸ್ಕೃತ ಅರ್ಥವನ್ನು ಸೂಚಿಸುತ್ತದೆ.

ಅಂತೆಯೇ ‘ನಮಾಜ್ (ಪ್ರಾರ್ಥನೆ ಎಂದರ್ಥ) ಎಂಬ ಪದವು ನಾಮ ಮತ್ತು’ ಯಜ್ಞ ‘(ನಾಮ ಯಾಜನಾ) ಎಂಬ ಎರಡು ಸಂಸ್ಕೃತ ಮೂಲಗಳಿಂದ ಹುಟ್ಟುತ್ತದೆ ಮತ್ತು ಪೂಜಿಸುವುದು ಎಂಬ ಪದದಿಂದ ಬಂದಿದೆ. ಹಾಗೆಯೇ ನಮಾಜ್ ಮಾಡುವುದು ಯೋಗದ ವಜ್ರಾಸನದ ಭಂಗಿ.

ಅಲ್ಲಾ ಎಂಬುದು ಅಲ್ + ಇಲಾಹ್ ಎರಡು ಶಬ್ದಗಳಿಂದ ಆದದ್ದು. ಅಲ್ ಪುರುಷ ಶಕ್ತಿ ಮತ್ತು ಇಲಾಹ್ ಎಂಬುದು ಸರ್ವೋಚ್ಚ ಸೃಷ್ಟಿಕರ್ತೆಯಾದ ಮಹಿಳಾ ಶಕ್ತಿ. ಇದು ವೇದ ಸಂಪ್ರದಾಯದಲ್ಲಿ ಆರ್ಧನಾರೀಶ್ವರ ಪರಿಕಲ್ಪನೆ .

ಸಂಸ್ಕೃತ ಭಾಷೆಯಿಂದ ಅನೇಕ ಸ್ಥಳೀಯ ಭಾಷೆಗಳು ಹುಟ್ಟಿಕೊಂಡಿವೆ . ಅರೇಬಿಕ್ ಭಾಷೆಯ ಮೂಲ ಕೂಡಾ ಸಂಸ್ಕೃತ ಭಾಷೆಯೇ. ಇವಾಗಲೂ 1000 ಸಂಸ್ಕೃತ ಪದಗಳು ಅರೇಬಿಕ್ ಭಾಷೆಯಲ್ಲಿವೆ. ಅರಬ್ ರಾಷ್ಟ್ರದಲ್ಲಿ ಅನೇಕ ಕತ್ತಿಗಳು ಸಂಸ್ಕೃತ ಹೆಸರಿನಿಂದಲೇ ಇದ್ದವು,ಇವಾಗಲೂ ಇರಬಹುದು. ಅಲ್ಲಿ ಆವಾಗ ಗಣಿತ ಶಾಸ್ತ್ರವನ್ನು ಹಿಂದುಸಾ ಎಂದು ಕರೆಯಲಾಗುತ್ತಿತ್ತು. ಖಗೋಳ ಶಾಸ್ತ್ರದ ಗ್ರಂಥವಾದ ಬ್ರಹ್ಮ-ಸ್ಪುತ ಸಿದ್ಧಾಂತವನ್ನು ಸಿಂದ್-ಹಿಂದ್ ಎಂದು ಕರೆಯಲಾಗುತ್ತಿತ್ತು.

ಕಾಬಾ ಎಂಬ ಪದವು ಸ್ವತಃ ಗ್ರಾಬ್/ಗ್ರಹವನ್ನು ವಿವರಿಸುತ್ತದೆ. ಕಾಬಾವು ಗಾಳಿಯನ್ನು ಎದುರಿಸಲು ಖಗೋಳವಾಗಿ ಆಧಾರಿತವಾಗಿದೆ. ಕಾಬಾದ ಆಯತಾಕಾರ ತಳದ ಸಣ್ಣ ಅಕ್ಷವು ಬೇಸಿಗೆಯ ಸೂರ್ಯೋದಯ ಮತ್ತು ಚಳಿಗಾಲದ ಸೂರ್ಯಾಸ್ತದ ಕಡೆಗೆ ಒಗ್ಗುವ ಹಾಗೆ ಜೋಡಿಸಲ್ಪಟ್ಟಿದೆ. ಇದರಲ್ಲಿ 360 ವೈದಿಕ ದೇವತೆಗಳ ಪ್ರತಿಮೆಗಳಿದ್ದವು ಮತ್ತು ಸೂರ್ಯನಿಗೆ ಸಂಭಂದಿಸಿರುವ ಮಂದಿರವಿತ್ತು. ಕಾಬಾದ ಪ್ರತಿಯೊಂದು ಗೋಡೆಯು ಒಂದೊಂದು ದಿಕ್ಕನ್ನು ಸೂಚಿಸುತ್ತದೆ. ಕಾಬಾದ ಮಧ್ಯಭಾಗದಲ್ಲಿ ಆಕ್ಟೋಗೋಮ್ ಪೀಠವಿದೆ. ಇದು ಹಿಂದೂ ಧರ್ಮದ ತಾಂತ್ರಿಕ ಮಾದರಿಯಿಂದ ಪಡೆಯಲಾಗಿದೆ.

ಈ ಸತ್ಯದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆಯಾದರೂ ಅದಕ್ಕೆ ಅರಬ್ಬ ದೇಶದವರು ವಿರೋಧ ಮಾಡಿ, ಸಂಶೋಧನೆಯನ್ನು ಮಾಡದಂತೆ ಅಡ್ಡಿಗಳು ನಡೆದಿವೆ. ಆದರೆ ಇತಿಹಾಸವನ್ನು ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ ಅನ್ನುವುದಂತೂ ಸತ್ಯ.

– Nationalist Mahi

 •  
  7.7K
  Shares
 • 7.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com