Connect with us
Loading...
Loading...

ಪ್ರಚಲಿತ

ಪ್ರಭು ಶ್ರೀರಾಮನ ಮಂದಿರ ಕಟ್ಟೋಕೆ ಈ ಮುಸ್ಲಿಂ ರಾಜಮನೆತನ ಈಗ ಸನ್ನದ್ಧವಾಗಿದೆ!! ಯಾರು ಆ ಮುಸ್ಲಿಂ ರಾಜವಂಶಸ್ಥ ಗೊತ್ತೆ?

Published

on

 • 3.6K
 •  
 •  
 •  
 •  
 •  
 •  
 •  
  3.6K
  Shares

ರಾಮ ಮಂದಿರ ಎಂದರೆ ಸಾಕು ದೇಶದಲ್ಲಿ ಅದೇನೋ ಸಂಚಲನ ಉಂಟಾಗುತ್ತೆ. ರಾಮಮಂದಿರ, ಅಯೋಧ್ಯೆ, ಉತ್ತರಪ್ರದೇಶ ಅಂದರೆ ಸಾಕು ರಾಜಕೀಯ ಪಕ್ಷಗಳು, ಸೆಕ್ಯೂಲರ್ ಗಳು ಕೆಸರೆರಚಾಡುತ್ತ ತಮ್ಮ ಸೆಕ್ಯೂಲರ್ ಗಿರಿಯನ್ನ ತೋರಿಸಿ ಮುಸಲ್ಮಾನರ ತುಷ್ಟೀಕರಣಕ್ಕೆ ಮುಗಿಬಿದ್ದುಬಿಡುತ್ತಾರೆ.

ಬಹುಸಂಖ್ಯಾತ ಹಿಂದುಗಳಿರುವ ದೇಶವಾದರೂ ಭಾರತದಲ್ಲಿ ಹಿಂದುಗಳು ತಮ್ಮ ಆರಾಧ್ಯ ದೈವ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ಮಂದಿರ ಕಟ್ಟೋಕೆ ಇಷ್ಟು ಹೆಣಗಾಡಬೇಕಾ ಅನ್ನೋದೇ ಖೇದಕರ ವಿಷಯ ಬಿಡಿ. ರಾಮಮಂದಿರಕ್ಕಾಗಿ ಹೋರಾಟ ನಡೆಯುತ್ತಿರೋದು ಈ 20-30 ವರ್ಷಗಳಿಂದಲ್ಲ, ಬದಲಾಗಿ ಇದು ಸರಿ ಸುಮಾರು 500 ವರ್ಷಗಳ ನಿರಂತರ ಹಿಂದೂ ಸಮಾಜದ ಹೋರಾಟವಾಗಿದೆ.

ಯಾವುದೋ ದೇಶದಿಂದ ಬಂದ ಮತಾಂಧ, ಇಸ್ಲಾಮಿಕ್ ಆಕ್ರಮಣಕಾರ ಬಾಬರ್ ಭಾರತದ ಆಯೋಧ್ಯೆಯಲ್ಲಿದ್ದ ಭವ್ಯ ರಾಮಮಂದಿರವನ್ನ ಕೆಡವಿ ಅದೇ ಮಂದಿರದ ಅವಶೇಷಗಳನ್ನ ಬಳಸಿ ಅಲ್ಲಿ ಮಸ್ಜಿದ್ ಒಂದನ್ನ 1528 ರಲ್ಲಿ ನಿರ್ಮಿಸಿದ್ದ. ಆದರೆ ಇದರಿಂದ ರೊಚ್ಚಿಗೆದ್ದ ಹಿಂದುಗಳು ಆ ಕಳಂಕವನ್ನ ತೊಡೆದು ಹಾಕಲು ನಿರಂತರ ಹೋರಾಟ ಮಾಡುತ್ತ ಬಂದ ಫಲವಾಗಿ ಸನ್ 1992 ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನ ಕೆಡವಿ ಹಾಕಲಾಯಿತು.

ಆ ದಿನವನ್ನ ಹಿಂದೂ ಸಮಾಜ ಶೌರ್ಯ ದಿವಸ್ ಅಂತಲೇ ಆಚರಿಸುತ್ತದೆ. ಮಸೀದಿಯೇನೋ ಕೆಡವಲಾಯಿತು ಆದರೆ ಮಂದಿರ? ಮಂದಿರ ನಿರ್ಮಾಣವಾಗಲು ನಮ್ಮ ದೇಶದ ಸೋ ಕಾಲ್ಡ್ ಸೆಕ್ಯೂಲರ್ ಹಿಂದೂಗಳೇ ಅಡ್ಡಗಾಲು ಹಾಕಿ ಬಿಟ್ಟರು, ಈಗಲೂ ಅದೇ ಮಾಡ್ತಿದಾರೆ. ರಾಮಮಂದಿರ ಜನ್ಮಸ್ಥಾನ ವಿವಾದ ಕೋರ್ಟ್ ಮೆಟ್ಟಿಲೇರಿತು, ಹಿಂದುಗಳಿಗೆ ಅಲಹಾಬಾದ್ ಹೈಕೋರ್ಟ್ ನಿಂದ ಸಂತಸ ತರುವಂತಹ ತೀರ್ಪೂ ಹೊರಗೆ ಬಂತು.

ಆದರೆ ದೇಶದಲ್ಲಿರುವ ಕೆಲ ಮತಾಂಧ ಮುಸಲ್ಮಾನರು ಅಲಹಾಬಾದ್ ಹೈಕೋರ್ಟ್ ಆದೇಶವನ್ನ ಒಪ್ಪಲಿಲ್ಲ, ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದರು. ಈಗ ಸದ್ಯ ರಾಮಮಂದಿರ ಚರ್ಚೆಯ ವಿಷಯವಲ್ಲ ಬದಲಾಗಿ ಆಯೋಧ್ಯೆಯ ವಿವಾದಿತ ಜಾಗ ಯಾರ್ ಯಾರಿಗೆ ಎಷ್ಟೆಷ್ಟು ಹಂಚಿಕೆಯಾಗಬೇಕು ಅನ್ನೋದು ಸುಪ್ರೀಂಕೋರ್ಟಿನಿಂದ ಇತ್ಯರ್ಥವಾಗಬೇಕಿದೆ.

ಈ ಮಧ್ಯೆ ಅನೇಕ ಮುಸ್ಲಿಂ ಸಂಘಟನೆಗಳು, ಮುಲ್ಲಾ ಮೌಲ್ವಿಗಳು ಬಹಿರಂಗವಾಗಿಯೇ ರಾಮಮಂದಿರ ಕಟ್ಟಬೇಕು ಅಂತ ತಮ್ಮ ಬೆಂವಲವನ್ನ ಹಿಂದೂ ಸಮಾಜಕ್ಕೆ ನೀಡಿದ್ದಾರೆ.

ಈಗ ಅವರ ಸಾಲಿಗೆ ಮತ್ತೊಬ್ಬ ಮಸ್ಲಿಂ ನಾಯಕ, ಮುಸ್ಲಿಂ ನಾಯಕನಷ್ಟೇ ಅಲ್ಲ ಭಾರತವನ್ನಾಳಿದ್ದ ಮುಸ್ಲಿಂ ರಾಜಮನೆತನದ ಕುಡಿಯೊಂದು ರಾಮಮಂದಿರದ ಬೆಂಬಲಕ್ಕೆ ನಿಂತು ಬಿಟ್ಟಿದ್ದಾನೆ.

ಕೆಲ ನಕಲಿಗಳು ಹರಾಮ್ ಹರಾಮ್ ಅಂತ ಚೀರಾಡುತ್ರಿದ್ದರು, ಆದರೆ ಅಸಲಿ ಇದ್ದವರು ಮಾತ್ರ ಜೈ ಶ್ರೀರಾಮ್ ಅಂತ ಭಗವಾ ಧಾರಣ ಮಾಡಿಕೊಂಡು ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾವಾಗಬೇಕು ಅಂತ ಅಬ್ಬರಿಸಿದ್ದಾರೆ.

ಆ ಭಗವಾಧಾರಣೆ ಮಾಡಿಕೊಂಡು ಜೈ ಶ್ರೀರಾಮ್ ಘೋಷಣೆಯ ಮೂಲಕ ರಾಮಮಂದಿರದ ಬೆಂಬಲಕ್ಕೆ ಈಗ ನಿಂತವನು ಸಾಮಾನ್ಯ ಮುಸಲ್ಮಾನನಲ್ಲ, ಆತ ಬಹದ್ದೂರ್ ಷಾಹ್ ಜಫರ್ ರಾಜನ ವಂಶಜ. ಆತನನ್ನ ಈಗಲೂ‌ ಪ್ರಿನ್ಸ್ ಯಾಕೂಬ್ ಅಂತಲೇ ಮಸ್ಲಿಮರು ಕರೆಯುತ್ತಾರೆ.

ಇವರು ನಕಲಿ ಮುಸ್ಲಿಂವಾದಿ ಓವೈಸಿಯಂಥ ದೇಶದ್ರೋಹಿಗಳ ನಾಲಿಗೆ ಬಂದ್ ಮಾಡುವಂತೆ ಹೇಳಿಕೆಯೊಂದನ್ನ ನೀಡಿದ್ದಾರೆ. ಕೊನೆಯ ಮೊಘಲ್ ರಾಜ ಬಹದ್ದೂರ್ ಷಾಹ್ ಜಫರ್ ನ ಆರನೇ ವಂಶಜನಾದ ಪ್ರಿನ್ಸ್ ಯಾಕೂಬ್ ಈಗ ಜೈ ಶ್ರೀರಾಮ್ ಅಂತ ರಸ್ತೆಗಿಳಿದಿದ್ದಾರೆ.

ಆಯೋಧ್ಯೆಯಲ್ಲಿ‌ ವಿಶ್ವಹಿಂದೂ ಪರಿಷದ್ ರಾಮರಾಜ್ಯ ರಥಯಾತ್ರಾ ಮಂಚ್ ಅನ್ನುವ ರಥಯಾತ್ರೆಯನ್ನ ಆರಂಭಿಸಿದ್ದಾರೆ. ಈ ರಥಯಾತ್ರೆ ಆಯೋಧ್ಯೆಯಿಂದ ಶುರುವಾಗಿ ತಮಿಳುನಾಡಿನ ರಾಮೇಶ್ವರಂ ವರೆಗೆ ತನ್ನ ಯಾತ್ರೆ ನಡೆಸಲಿದೆ.

ಇದರ ಉದ್ದೇಶ ಶ್ರೀರಾಮನ ಆದರ್ಶ, ಆಡಳಿತ, ಪ್ರಾಮಾಣಿಕತೆಯನ್ನ ದೇಶದ ಜನರಿಗೆ ಪರಿಚಯಿಸುವುದಾಗಿದೆ. ಈ ರಥಯಾತ್ರೆ ಮೊನ್ನೆ ಉತ್ತರಪ್ರದೇಶದ ಆಯೋಧ್ಯೆಯಲ್ಲಿ ಶುರುವಾಗಿದ್ದು ಇದಕ್ಕೆ ಉತ್ತರಪ್ರದೇಶದ ಮುಸಲ್ಮಾನರೂ ಬೆಂಬಲಿಸಿದ್ದಾರೆ.

ಬರೀ ಮುಸಲ್ಮಾನರಷ್ಟೇ ಅಲ್ಲ ಬಹದ್ದೂರ್ ಷಾಹ್ ಜಫರ್ ನ ವಂಶಜ ಪ್ರಿನ್ಸ್ ಯಾಕೂಬ್ ಕೂಡ ರಾಮ ರಥಯಾತ್ರೆಯಲ್ಲಿ ಭಾಗವಹಿಸಿ ಜೈ ಶ್ರೀರಾಮ್ ಕೂಗುತ್ತ ರಾಮಮಂದಿರ ನಿರ್ಮಾಣ ಆಯೋಧ್ಯೆಯಲ್ಲೇ ಆಗಬೇಕು ಎಂದಿದ್ದಾರೆ.

ರಥಯಾತ್ರೆಯ ವೇದಿಕೆಯ ಮೇಲಿದ್ದ ಪ್ರಿನ್ಸ್ ಯಾಕೂಬ್ ಸಂತರ ಜೊತೆ ತಾನೂ ಭಗವಾ(ಕೇಸರಿ) ಶಲ್ಯ ರಧರಿಸಿ ಹಣೆಗೆ ಕುಂಕುಮವಿಟ್ಟುಕೊಂಡು ನಿಮಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾನೆ.

“ಮೂರು ತಿಂಗಳ ಹಿಂದೆ ನಾನು ರಾಮಲಲ್ಲಾನ ದರ್ಶನ ಪಡೆದು ಬಂದಿದ್ದೆ, ನನ್ನ ಪೂರ್ವಜರು ನಮಗೆ ಹಿರಿಯರ, ಸಂತರ, ಮಹಂತರ ಸಮ್ಮಾನ ಮಾಡುವಂತೆ ಹೇಳಿಕೊಟ್ಟು ಹೋಗಿದ್ದರು. ಇದರ ಜೊತೆಗೆ ಅನ್ಯಧರ್ಮೀಯರ ಮಂದಿರಗಳ ರಕ್ಷಣೆ ಮಾಡುವಂತೆಯೂ ಹೇಳಿದ್ದರು. ಪ್ರಭು ಶ್ರೀರಾಮ ಜನ್ಮಸ್ಥಳವಾದ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಲಿದೆ” ಎಂದು ಪ್ರಿನ್ಸ್ ಯಾಕೂಬ್ ಹೇಳಿದ್ದಾನೆ.


ನಾನು ಇನ್ನು ಮುಂದೆ ವಿಶ್ವಹಿಂದೂ ಪರಿಷತ್ತಿನ ಜೊತೆಗೂಡಿ ರಾಮಮಂದಿರ ಕಾರ್ಯದ ಪವಿತ್ರ ಕೆಲಸದಲ್ಲಿ ನನ್ನ ಯೋಗದಾನ ನೀಡುತ್ತೇನೆ ಅಂತಲೂ ಪ್ರಿನ್ಸ್ ಹೇಳಿದ್ದಾನೆ.

– Team Nationalist Views

©2018 Copyrights Reserved

 •  
  3.6K
  Shares
 • 3.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com