Connect with us
Loading...
Loading...

ಇತಿಹಾಸ

ವೈರಿ ರಾಷ್ಟ್ರ ಪಾಕಿಸ್ತಾನದಲ್ಲೂ ಮೊಳಗಿದ ಜೈ ಶ್ರೀರಾಮ್ ಘೋಷಣೆ!!! ಈ ಮಂದಿರದಲ್ಲಾಗಲಿದೆ ರಾಮ ಹನುಮನ ಮೂರ್ತಿ ಪ್ರತಿಷ್ಟಾಪನೆ!!!

Published

on

 • 27
 •  
 •  
 •  
 •  
 •  
 •  
 •  
  27
  Shares

ಹಿಂದೂಸ್ತಾನದಲ್ಲಿಯೇ ಹಿಂದುಗಳ ಆರಾಧ್ಯ ದೇವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಮಾಡೋಕೆ ಆಗ್ತಿಲ್ಲ. ಇಂತಹ ಸಂದರ್ಭದಲ್ಲಿ ಕರ್ಮಠ ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಾ? ಎಂಬಂತಹ ಯೋಚನೆಗಳು ಎಲ್ಲರ ತಲೆಯಲ್ಲಿ ಬರುವುದು ಸಹಜ.

ಕೆಲ ಸೋ ಕಾಲ್ಡ್ ಸೆಕ್ಯುಲರ್ ಗಳಿಂದ, ಕೆಲ ರಾಜಕೀಯ ಕಾರಣಕ್ಕಾಗಿ, ಕೆಲ ಮತಾಂಧರಿಂದಾಗಿ ಹಿಂದುಸ್ತಾನದಲ್ಲಿ ಹಿಂದುಗಳ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿಯೇ ನಮ್ಮಿಂದ ಒಂದೇ ಒಂದು ರಾಮ ಮಂದಿರವನ್ನು ಸ್ವಾತಂತ್ರ್ಯ ಬಂದ ಬಳಿಕವೂ ಕಟ್ಟೋಕೆ ಆಗ್ತಿಲ್ಲ. ಹಿಂದುಗಳಿಗೆ ಹಿಂದೂಸ್ತಾನ, ಮುಸಲ್ಮಾನರಿಗೆ ಪಾಕಿಸ್ತಾನ ಅಂತ ಇಬ್ಭಾಗವಾದ ಮೇಲೂ ಬಹಸಂಖ್ಯಾತ ಹಿಂದುಗಳಿಗೆ ಒಂದು ರಾಮ ಮಂದಿರವನ್ನು ಕಟ್ಟಿಸುವ ಹಕ್ಕಿಲ್ಲ ಎನ್ನುವುದಂತು ವಿಪರ್ಯಾಸದ ಸಂಗತಿ.

ಹಿಂದುಗಳು ಬರೀ ಭಾರತದ ಬಹಸಂಖ್ಯಾತರಷ್ಟೇ ಅಲ್ಲ. ಬದಲಿಗೆ ಭಾರತದ ಮೂಲದವರು. ಭಾರತ ಹಿಂದುಗಳ ಸ್ವತ್ತು. ಆದರೂ ನಮ್ಮಿಂದ ಒಂದೇ ಒಂದು ಮಂದಿರ ನಿರ್ಮಾಣ ಮಾಡೋಕೆ ಆಗ್ತಿಲ್ಲ ಅನ್ನೋದು ನಮ್ಮ ಷಂಡತನ ಎನ್ನಬಹುದೇನೋ?

ನಮ್ಮಲ್ಲೇ ನಮಗೆ ರಾಮ ಮಂದಿರ ಕಟ್ಟೋಕೆ ಆಗ್ತಿಲ್ಲ. ಆದರೆ ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಪ್ರಭು ಶ್ರೀರಾಮನ ಕುರಿತಂತೆ ಅಚ್ಚರಿಯ ತೀರ್ಪೊಂದು ಅಲ್ಲಿನ ಸುಪ್ರೀಂಕೋರ್ಟ್ ಕೊಟ್ಟಿದೆ.

ಅದೇನು ಗೊತ್ತಾ? ಪಾಕಿಸ್ತಾನದಲ್ಲಿರುವ ಹಿಂದುಗಳ ಪವಿತ್ರ ಕಾಟಾಸ್ರಾಜ್ ದೇವಸ್ಥಾನದ ಕುರಿತು ಮಹತ್ವದ ತೀರ್ಪನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಕೊಟ್ಟಿದೆ.

ಆ ದೇವಸ್ಥಾನಕ್ಕೆ ಸಂಭಂದಪಟ್ಟ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿರುವ ಪಾಕಿಸ್ತಾನದ ಹೈಕೋರ್ಟ್, ಶೀಘ್ರದಲ್ಲಿಯೇ ಕಾಟಾಸ್ರಾಜ್ ದೇವಸ್ಥಾನದಲ್ಲಿ ಪ್ರಭು ಶ್ರೀರಾಮ ಚಂದ್ರನ ಮತ್ತು ರಾಮನ ಭಕ್ತ ಭಜರಂಗಿಯ ವಿಗ್ರಹಗಳನ್ನು ಪ್ರತಿಸ್ಠಾಪಿಸುವಂತೆ ಆದೇಶವನ್ನು ಹೊರಡಿಸಿದೆ.

ಅಷ್ಟೇ ಅಲ್ಲ. ಅದೇ ಕಾಟಾಸ್ರಾಜ್ ದೇವಸ್ಥಾನದ ಸರೋವರದ ಕುರಿತಂತೆಯೂ ಅಲ್ಲಿನ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿದೆ. ಕಾಟಾಸ್ರಾಜ್ ದೇವಸ್ಥಾನಕ್ಕೆ ಸಂಭಂದಪಟ್ಟ ಸರೋವರ ಏಕೆ ಒಣಗಿ ಹೋಗಿದೆ? ಎಂಬಂತಹ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಅದಕ್ಕೆ ಸಂಭಂದಪಟ್ಟ ಅಧಿಕಾರಿಗಳಿಗೆ ಕೇಳಿದೆ. ಹಾಗೂ ಅದರ ಬಗ್ಗೆ ಅತೀ ಶಿಘ್ರದಲ್ಲಿ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಶಕೀಬ್ ನಿಸಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.

ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.

ಭಾರತ ವಿಭಜನೆಗಿಂತ ಮೊದಲು 428 ಹಿಂದೂ ದೇವಾಲಯಗಳು ಆ ಪ್ರದೇಶದಲ್ಲಿ ಇದ್ದವು. ಆದರೆ ಇಂದು ಕೇವಲ 26 ದೇವಾಲಯಗಳು ಮಾತ್ರ ಉಳಿದುಕೊಂಡಿವೆ.


ಪಾಕಿಸ್ತಾನದಲ್ಲಿ ಈಗ ಉಳಿದ ದೇವಾಲಯಗಳ ಪೈಕಿ ಕಾಟಾಸ್ರಾಜ್ ದೇವಾಲಯ ಪ್ರಸಿದ್ಧ ದೆವಾಲಯ. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ.

ಕಟಾಸರಾಜ ದೇವಾಲಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕವಾಲ್ ಜಿಲ್ಲೆಯ ಕಟಾಸ್ ಗ್ರಾಮದಲ್ಲಿರುವ ಒಂದು ಶಿವ ದೇವಾಲಯ. ಈ ದೇವಾಲಯವು ಮಹಾಭಾರತ ಕಾಲದಿಂದಲೂ ಆಸ್ತಿತ್ವದಲ್ಲಿದೆ. ಪಾಂಡವರ ಅಜ್ಞಾತವಾಸ ಕಾಲದಲ್ಲಿ ಇಲ್ಲಿ ವಾಸವಾಗಿದ್ದರೆಂಬ ನಂಬಿಕೆಯಿತ್ತು. ಈ ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ದೇವಾಲಯದ ಸುತ್ತಲೂ ಹಲವು ಚಿಕ್ಕ ದೇವಾಲಯಗಳು ಇವೆ.

ಸುಮಾರು 900 ವರ್ಷಗಳ ಹಿಂದೆ ಈ ದೇವಾಲಯ ನಿರ್ಮಾಣವಾಗಿರಬೇಕೆಂಬ ಅಂದಾಜಿದೆ.
ಈ ದೇವಾಲಯದ ಕುರಿತಾಗಿ ಹಲವು ದಂತಕಥೆಗಳು ಆಸ್ತಿತ್ವದಲ್ಲಿವೆ. ಅವುಗಳ ಪ್ರಕಾರ ಪಾಂಡವರು ವನವಾಸದ ಅವಧಿಯಲ್ಲಿ 4 ವರ್ಷಗಳ ಅವಧಿ ಇಲ್ಲಿ ಕಳೆದರೆಂದು ಹೇಳಲಾಗುತ್ತದೆ. ದೇವಾಲಯದ ಆವರಣದಲ್ಲಿರುವ ಸರೋವರದಲ್ಲಿಯೇ ಯುಧಿಷ್ಟರ ಯಕ್ಷನನ್ನು ಸೋಲಿಸಿ ತನ್ನ ಸಹೋದರರ ಪ್ರಾಣ ಮರಳಿ ಪಡೆದದ್ದು ಎಂಬ ನಂಬಿಕೆಯಿದೆ.

ಇನ್ನೊಂದು ದಂತಕಥೆಯ ಪ್ರಕಾರ ಶಿವನ ಹೆಂಡತಿ ಸತಿಯ ಪ್ರಾಣೋತ್ಕ್ರಮಣ ಕಾಲದಲ್ಲಿ ಶಿವ ಬಹುವಾಗಿ ಅತ್ತಿದ್ದರಿಂದ ಅವನ ಕಣ್ಣೀರಿನ ಕೋಡಿಯೇ ಹರಿದು 2 ಸರೋವರಗಳಾದವೆಂದು (ಕುಂಡಗಳು) ಹೇಳಲಾಗುತ್ತದೆ. ಒಂದು ಅಜ್ಮೀರದ ಪುಷ್ಕರ ಇನ್ನೊಂದು ಕೇತಾಕ್ಷ ಸಂಸ್ಕೃತ ಭಾಷೆಯಲ್ಲಿ ಕೇತಾಕ್ಷ ಎಂದರೆ ಆಶ್ರುಧಾರೆ.

ಈ ಕಟಾಸ್ ರಾಜ್​​ ದೇಗುಲದ ಮುಂದೆ ಇರವ ಸರೋವರದ (ಕುಂಡದ) ತೀರ್ಥ ತುಂಬಾನೇ ಶಕ್ತಿಯುತವಾಗಿದೆ. ಈ ಕುಂಡದಲ್ಲಿರೋ ನೀರನ್ನು ಕುಡಿದ್ರೆ, ಮೋಕ್ಷ ಸಿಗುತ್ತಂತೆ. ಎಲ್ಲಾ ಪಾಪ ಕರ್ಮಗಳು ಕಳೆಯುತ್ತವಂತೆ. ಈ ಕುಂಡದಲ್ಲಿ ಮಿಂದೆದ್ದವರು ಹಲವು ಖಾಯಿಲೆಗಳಿಂದ ಗುಣಮುಖರಾಗಿದ್ದಾರಂತೆ.

1947ರಲ್ಲಿ ಹಿಂದೂಗಳು ಪಾಕಿಸ್ತಾನದಿಂದ ವಲಸೆ ಬಂದಾಗಲೂ ಆ ಮಂದಿರದಲ್ಲಿ ಪೂಜೆ ನಿರಂತವಾಗಿ ನಡೆಯುತ್ತಲೇ ಇದೆ. ಈ ದೇವಾಲಯದಲ್ಲಿ ಎಲ್ಲ ಬಗೆಯ ಶ್ರದ್ಧಾವಂತರು ಅವರವರ ನಂಬಿಕೆಗನುಸಾರವಾಗಿ ಪೂಜೆಯನ್ನು ಕೈಗೊಳ್ಳುತ್ತಾರೆ. ಆ ಮಂದಿರದ ಸರೋವರಗಳಲ್ಲಿ ಸ್ನಾನ ಮಾಡುವುದರಿಂದ ಪಾಪವು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಹಲವು ದಶಕಗಳವರೆಗೆ ಸುಸ್ಥಿತಿಯಲ್ಲಿದ್ದ ಮಂದಿರ ಇತ್ತೀಚೆಗೆ ನಡೆದ ಧಾಳಿಗಳಿಂದ ಗೋಡೆಗಳು ನಾಶಗೊಂಡಿವೆ. ಪವಿತ್ರವಾದ ಸರೋವರಗಳು ತ್ಯಾಜ್ಯಗಳಿಂದ ಮಲೀನಗೊಳ್ಳುತ್ತವೆ. ಸ್ಥಳೀಯ ಅಧಿಕಾರಿಗಳಿಂದ ನಿರ್ಲಕ್ಷಕ್ಕೊಳಗಾಗಿವೆ.

2006-07ರಲ್ಲಿ ಪಾಕಿಸ್ತಾನ ಸರ್ಕಾರವು ಹಿಂದು ದೇವದೇವತೆಗಳ ಮೂರ್ತಿಗಳನ್ನು 7 ಮಂದಿರಗಳಲ್ಲಿ ಅವುಗಳ ನೈಜ ಸ್ಥಾನದಲ್ಲಿರಿಸಿ, ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿತ್ತು. ಅಷ್ಟಕ್ಕೂ ಅಂದು ಪಾಕಿಸ್ತಾನದ ಸರ್ಕಾರ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಏಕೆ ಮಾಡಿತ್ತು ಗೊತ್ತೆ? ಇಸ್ಲಾಂ ರಾಷ್ಟ್ರವಾಗಿದ್ದರೂ ಕೂಡಾ ದೇವಾಲಯದ ಜೀರ್ಣೋದ್ಧಾರದ ಕೆಲಸ ಮಾಡಿತ್ತು ಅಂದ್ರೆ ಅಚ್ಚರಿ ಪಡಬೇಕಾದ ವಿಷಯ.

ಅಷ್ಟಕ್ಕೂ ಅಂದು ಪಾಕಿಸ್ತಾನದ ಸರ್ಕಾರ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಏಕೆ ಮಾಡಿತ್ತು ಗೊತ್ತೆ?

ಭಾರತ ಮತ್ತು ಪಾಕಿಸ್ತಾನ 1947 ರಲ್ಲಿ ಇಬ್ಭಾಗವಾದಾಗ, ಹಿಂದೂಸ್ತಾನಕ್ಕೆ ಸೇರಿದ್ದ ಈ ಕಟಾಸ್​ರಾಜ್​​ ದೇಗುಲ ಪಾಕ್​​ ಪಾಲಾಯ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಂಬಾನೇ ಹಳಸಿತ್ತು. ಇದರಿಂದಾಗಿ ಈ ಪವಿತ್ರ ತೀರ್ಥಕ್ಷೇತ್ರಕ್ಕೆ ಹೋಗಿ ಶಿವನ ದರ್ಶನ ಪಡೆಯಬೇಕು. ಈ ಕುಂಡದಲ್ಲಿ ಮಿಂದೇಳಬೆಕು ಅನ್ನೋ ಭಕ್ತರ ಆಸೆ ಕೇವಲ ಆಸೆಯಾಗಿಯೇ ಉಳಿದು ಬಿಟ್ತು.

ಆದರೆ 2004 ರಲ್ಲಿ ಎನ್​ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪಾಕಿಸ್ತಾನದ ಜೊತೆ ಬಾಂಧವ್ಯ ವೃದ್ಧಿಗಾಗಿ ಪ್ರಯತ್ನಿಸಿದ್ದರು. ಇದಕ್ಕೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್​ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದ. ಅಷ್ಟೇ ಅಲ್ಲ, ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಈ ಕಟಾಸ್​ರಾಜ್​​ ದೇಗುಲದ ಜೀರ್ಣೋದ್ದಾರಕ್ಕೂ ಅಡಿಪಾಯ ಹಾಕಿದ್ದರು.

ಪಾಕಿಸ್ತಾನದ ನೆಲದಲ್ಲಿ ಬೇರೂರಿರೋ ಹಿಂದೂ ತೀರ್ಥಕ್ಷೆತ್ರದ ಜೀರ್ಣೋದ್ದಾರಕ್ಕೆ, ಸ್ವತಃ ಪಾಕಿಸ್ತಾನಾವೇ ಮುಂದಾಗಿದೆ. ಇದಕ್ಕೆ ಕಾರಣ ಯಾರು ಗೊತ್ತೆ.? ಭಾರತದ ಹಿರಿಯ ರಾಜಕೀಯ ಮುತ್ಸದ್ದಿ. ಬಿಜೆಪಿಯ ಭೀಷ್ಮ ಎಲ್​.ಕೆ ಅಡ್ವಾಣಿ. ಇದರ ಹಿಂದೆ ಎಲ್.ಕೆ. ಅಡ್ವಾಣಿಯವರ ಪರಿಶ್ರಮವಿದೆ.

ಇನ್ನು ಇದೇ ವೇಳೆ ಭಾರತದ ಯಾತ್ರಾರ್ಥಿಗಳಿಗೂ ಈ ಪುಣ್ಯಕ್ಷೇತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಯ್ತು. 2005 ರಲ್ಲಿ ಸ್ವತಃ ಎಲ್​ಕೆ ಅಡ್ವಾಣಿ ಈ ತೀರ್ಥ ಕ್ಷೇತ್ರಕ್ಕೆ ಬಂದು, ಈ ಕುಂಡದಲ್ಲಿ ಮಿಂದೆದ್ದಿದ್ದರು. ಅಂದಿನಿಂದ ಪಾಕಿಸ್ತಾನದ ನೆಲದಲ್ಲಿರೋ, ಈ ಹಿಂದೂ ತೀರ್ಥಕ್ಷೇತ್ರದ ಅಭಿವೃದ್ಧಿಗೆ ಪಾಕ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ.

2 ಕೋಟಿ ರೂಪಾಯಿಯಲ್ಲಿ ಶಿವಲಿಂಗಕ್ಕೆ ಮತ್ತೆ ಐತಿಹಾಸಿಕ ಮೆರುಗು ನೀಡಿದೆ. 2006-07 ರಲ್ಲಿ ಈ ದೇಗುಲದ ಜೀರ್ಣೋದ್ದಾರಕ್ಕೆ ಪಾಕ್ ಸರ್ಕಾರ ನೀಡಿದ ಮೊತ್ತ, ಬರೋಬ್ಬರಿ 8 ಕೋಟಿ.

ಈ ದೇವಸ್ಥಾನ ಒಟ್ಟು 7 ಮಂದಿರಗಳ ಒಂದು ಸಮ್ಮಿಲನ. ಕ್ರಿ.ಪೂ 650 ರಿಂದ 950 ರ ಕಾಲದಲ್ಲಿ ಈ ದೇಗುಲದ ನಿಮಾರ್ಣ ಆಗಿದೆ ಅಂತ ಅಂದಾಜಿಸಲಾಗಿದೆ. ಅಂದ್ರೆ 2500 ವರ್ಷಗಳಿಗಿಂತಲೂ ಹಳೆಯ ಕಾಲದ ದೇವಸ್ಥಾನ ಇದು..

ಈ ದೇಗುಲವನ್ನ ಚೌಕಾಕಾರವಾಗಿ ಕಟ್ಟಲಾಗಿದೆ. ಪೂರ್ವದ ದಿಕ್ಕಿನಲ್ಲಿ ಪ್ರವೇಶ ದ್ವಾರ ಇದೆ. ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ. ಮಂದಿರದೊಳಗೆ ಬಂದ ಭಕ್ತರು, ಮೊದಲಿಗೆ ಬಿಲ್ವಪತ್ರೆಯನ್ನಿಟ್ಟು, ಶಿವಲಿಂಗಕ್ಕೆ ಪೂಜೆ ಸಲ್ಲಿಸ್ತಾರೆ. ನಂತರ ಹೂವು, ಹಣ್ಣುಗಳನ್ನು ಶಿವನಿಗೆ ಸಮರ್ಪಿಸಿ, ಪಾವನರಾಗ್ತಾರೆ. ಇನ್ನು ಇಲ್ಲಿಗೆ ಬರೋ ಕೆಲವರು, ಶಿವನ ಭಜನೆ ಮಾಡ್ತಾ, ಶಿವನಾಮಸ್ಮರಣೆಯಲ್ಲಿ ಮುಳುಗಿಬಿಡ್ತಾರೆ.

ಏನೇ ಆಗಲಿ ಶತೃ ರಾಷ್ಟ್ರದಲ್ಲಿ ಹಿಂದೂ ದೇವಾಲಯ ತಲೆ ಎತ್ತಿ ನಿಂತದ್ದು ಖುಷಿಯ ವಿಚಾರ. ಹಾಗೂ ವೈರಿ ರಾಷ್ಟ್ರವೇ ದೇವಾಲಯಗಳ ಜೀರ್ಣೋದ್ಧಾರಕ್ಕೆ ನಿಂತಿರೋದು ಸಮಾಧಾನಕರ ಸಂಗತಿ. ಈಗ ಪಾಕಿಸ್ತಾನದ ಸುಪ್ರೀಂಕೋರ್ಟ್ ಕಾಟಾಸರಾಜ್ ದೇವಾಲಯದಲ್ಲಿ ಪ್ರಭು ಶ್ರೀರಾಮನ ಮತ್ತು ರಾಮನ ಭಕ್ತ ಹನುಮಾನನ ವಿಗ್ರಹ ಪ್ರತಿಷ್ಠಾಪನೆಗೆ ಆದೇಶ ಕೊಟ್ಟಿರುವುದು, ಹಿಂದುಗಳು ಹೆಮ್ಮೆ ಪಡಬೇಕಾದ ವಿಷಯ.

 •  
  27
  Shares
 • 27
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com