Connect with us
Loading...
Loading...

ಇತಿಹಾಸ

“ಮಾರೋ, ಕಾಟೋ, ಬಾಂಟೋ” ಅನ್ನುವ ಕ್ರೂರ ಮುಸ್ಲಿಂ ರಜಾಕಾರ್ ಸೈನ್ಯಕ್ಕೆ ತನ್ನ ಪವಾಡದ ಮೂಲಕ ಉತ್ತರ ಕೊಟ್ಟಿದ್ದ ಈ ಮಹಾನ್ ಸಂತನ ಬಗ್ಗೆ ನಿಮಗೆ ಗೊತ್ತೆ?

Published

on

 • 404
 •  
 •  
 •  
 •  
 •  
 •  
 •  
  404
  Shares

ನನ್ನ ಬಾಲ್ಯದ ಬಹುತೇಕ ದಿನಗಳನ್ನು ನಾನು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಆಡುತ್ತಲೆ ಕಳೆದೆ, ಇಲ್ಲಿ ಆಡುತ್ತಾ ಆಡುತ್ತಾ ಅದೆಷ್ಟೋ ವಿಷಯಗಳನ್ನು ತಿಳಿದುಕೊಂಡೆ ಆಗೆಲ್ಲ ಅವುಗಳು ನನಗೆ ರೋಮಾಂಚನ ಕಥೆಗಳು ಎಂದೆನಿಸುತಿದ್ದವು, ಆದರೆ ಇಂದು ಅವುಗಳನ್ನು ಮೆಲುಕು ಹಾಕುತಿದ್ದರೆ ಅದೆಂಥಾ ಪವಾಡ ನಮ್ಮ ಶರಣರದು ಎಂದೆನಿಸುತ್ತದೆ.

ನಾವು ಈ ಗುಡಿಯನ್ನು ಹೆಚ್ಚಾಗಿ ಅಪ್ಪನಗುಡಿ ಎಂದೆ ಕರೆದವರು ಕೆಲವೊಮ್ಮೆ ಶಾಣಬಸ್ಸಪ್ಪನ್ ಗುಡಿ ಎಂದು ಸಂಭೋದಿಸಿದವರು! ಅದು ಹೇಗೆ ನಮ್ಮ ನಡುವಣ ಜನ ಸ್ಟೈಲಿಷ್ ಆಗಿಬಿಟ್ವಿ ಅಂದರೆ ಇದನ್ನು ಎಸ್.ಬಿ ಟೆಂಪಲ್ ಎಂದು ಕರೆಯಲು ಶುರುಮಾಡಿದೆವು ( ಆಂಗ್ಲರ ಪುಣ್ಯ! )

ಅವರನ್ಯಾಕೆ ಇಲ್ಲಿ ನೆನಿತಾಇದಿನಿ ಅಂತೀರಾ!?

ಅವರದ್ದು ಹಾಗೂ ಪಾಪಿಸ್ತಾನದ್ದೂ ಬಹುದೊಡ್ಡ ಕೃಪಾಕಟಾಕ್ಷ (ವ್ಯಂಗ್ಯ) ನಮ್ಮ ಕಲ್ಯಾಣ ಕರ್ನಾಟಕದ ಮೇಲಿದೆ.

ಅದು ಹೇಗೆ ಅಂದರೆ 1947 ಅಗಸ್ಟ್ 15 ಭಾರತ ದೇಶ ಸ್ವತಂತ್ರ ಭಾರತವಾಯಿತು , ಆದರೆ ಇತ್ತಕಡೆ ನಿಜಾಮ ಮೀರ್ ಉಸ್ಮಾನ್ ಅಲಿ “ಡೆಕ್ಕನ್ ರೇಡಿಯೋ” (ಅಥವಾ “ನಿಜಾಮ್ ರೇಡಿಯೋ” ) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ.

ಆಗಿನ ಕಾಲದಲ್ಲಿ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್ ಹಾಗು ಪಾಪಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು. ನಿರೀಕ್ಷೆಯಂತೆ ಪಾಕಿಸ್ತಾನವು ‘ಹೈದರಾಬಾದ’ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು.

ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ಜನರು ಮತ್ತೊಮ್ಮೆ ಸ್ವಾತಂತ್ರ ಚಳುವಳಿ ಪ್ರಾರಂಭಿಸಿದ್ರು.

ಇವರನ್ನು ಹತೋಟಿಗೆ ತರಲೆಂದೆ ನಿಜಾಮ್ ರಾಜ ಹುಟ್ಟು ಹಾಕಿದ ಗುಂಪೆ ರಜಾಕಾರ್ ಹಾಗಂದರೆ ಪರ್ಶಿಯನ್ ಭಾಷೆಯಲ್ಲಿ ಸ್ವಯಂಸೇವಕರು ಎಂದರ್ಥ, ಇವರಿಗೆ ಹೇಳಿಕೊಟ್ಟ ಮಂತ್ರ ತುಂಬಾ ಸುಲಭ “ಮಾರೊ, ಕಾಟೊ, ಬಾಟೊ” ಅಂತ.

ಇವರ ಜೊತೆಗೆ ಬೆನ್ನೆಲುಬಾಗಿ ನಿಂತವರು ನಿಜಾಮ್ ಸರ್ಕಾರದ ಪೋಲೀಸರು.ಇವರುಗಳ ದಾಳಿಗೆ ತುತ್ತಾಗಿದ್ದ ಗ್ರಾಮಗಳ ಪೈಕಿ ಕಲಬುರ್ಗಿ ಜಿಲ್ಲೆಯ 87 ಗ್ರಾಮಗಳು ಸಹ ಸೇರುತ್ತವೆ.

ಗ್ರಾಮಗಳ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವುದು ಇವೆಲ್ಲ ಪ್ರಜಾಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಗಳಾಗಿದ್ದವು.

ಇಲ್ಲಿಯೆ ಬರುತ್ತದೆ ನಮ್ಮ ಶಾಣಬಸ್ಸಪ್ಪನ ಪವಾಡ:

ಅಂದು ರಜಾಕಾರರ ಗುಂಪೊಂದು ದೇವಸ್ಥಾನದ ಮೇಲೆ ಆಕ್ರಮಣ ನಡೆಸಿಯೆಬಿಟ್ಟಿತು! ದೇವಸ್ಥಾನದ ಎದುರಿಗೆ ಇದ್ದ ದೊಡ್ಡ ನಂದಿಯ (ನಮ್ಮ ಆಡುಮಾತಿನಲ್ಲಿ ಬಸವಣ್ಣನ ಮೂರ್ತಿ) ಕೊಂಬು , ಕಿವಿಗಳನ್ನು ಕತ್ತರಿಸಿ ಮೂರ್ತಿಯನ್ನು ಭಗ್ನಗೊಳಿಸಿದರು. ಈ ಸದ್ದು ಗದ್ದಲವನ್ನು ಕೇಳಿ ಪೂಜಾರಿ ಪಕ್ಕದ ಶಾಲೆ(?ಧರ್ಮಶಾಲೆ)ಯಲ್ಲಿ ಅವಿತು ಕುಳಿತ.


ನಂದಿಯನ್ನು ಭಗ್ನಗೊಳಿಸಿದ ಗುಂಪು ಗರ್ಭಗುಡಿ ಹೊಕ್ಕಿತು , ಮೂಲ ಗುರುಶಿಷ್ಯರ ಮೂರ್ತಿಗಳ ಹಾಳುಮಾಡಲೆಂದು.

ಆದರೆ ಆ ದೈವಸಂಕಲ್ಪವೇ ಬೇರೆಯಾಗಿತ್ತು!

ಕೂಡಲೆ ನಂದಾದೀಪಗಳು ಹತ್ತಿ ಉರಿಯತೊಡಗಿದವು, ಝಾಂಗಟೆ, ಘಂಟೆ, ಢೋಲು ತಮ್ಮಷ್ಟಕ್ಕೆ ತಾವೆ ಭಾರಿಸ ತೊಡಗಿದವು.ಮಂಗಳಾರತಿ ತಟ್ಟೆ ಗಾಳಿಯಲ್ಲಿ ತೇಲುತ್ತ ಶರಣಬಸವೇಶ್ವರರನ್ನು ಬೆಳುಗತೊಡಗಿತು.ಈ ಪವಾಡವನ್ನು ಕಂಡ ದುಷ್ಕರ್ಮಿಗಳು ದಿಗ್ಭ್ರಾಂತರಾದರು, ದಿಕ್ಕು ತೋಚದೆ ಕಾಲಿಗೆ ಬುದ್ಧಿ ಹೇಳಿದರು.

ಕೆಲವು ದಿನಗಳ ನಂತರ ಭಗ್ನ ನಂದಿಯನ್ನು ಪೂಜಿಸಬಾರದೆಂಬ ಕಾರಣಕ್ಕೆ ಈ ನಂದಿಯನ್ನು ಪಕ್ಕದ ಬೇವಿನ ಮರದ ಕೆಳಗಿಟ್ಟು.ಆ ಸ್ಥಳಕ್ಕೆ ಹೊಸನಂದಿಯನ್ನು ಪ್ರತಿಷ್ಠಾಪಿಸಿ ಪೂಜೆಸಲ್ಲಿಸತೊಡಗಿದರು.

ಆದರೆ ಕಾಲಾನುಕ್ರಮೇಣ ಕಲ್ಲುನಾಡಿನ ಶರಣರಿಗೊಂದು ವಿಸ್ಮಯಕಾದಿತ್ತು!

ಅದುವೇ ಭಗ್ನ ನಂದಿಯ ಕೊಂಬುಗಳು!! ಅವು ದಿನೆ ದಿನೆ ಬೆಳೆಯುತ್ತಾ ಹೊರಟವು! ಆ ಶಿವಶರಣರ ಮಹಿಮೆ ಎಂಥದ್ದು ನೋಡಿ! ಇದನ್ನು ಗಮನಿಸಿದ ಸ್ಥಳೀಯರು ಈ ನಂದಿಗೂ ಸಹ ಪೂಜೆ ಸಲ್ಲಿಸತೊಡಗಿದರು!

ಇಲ್ಲಿ ಮಕ್ಕಳಾಗದವರು ಸಂತಾನ ಭಾಗ್ಯ ಕಲ್ಪಿಸಿದರೆ ತೊಟ್ಟಿಲು ಕಟ್ಟುವುದಾಗಿ ಕೇಳಿಕೊಳ್ಳುವುದು ಸರ್ವೇ ಸಾಮಾನ್ಯ.
ಇದು ನಮ್ಮ ಬಸವಣ್ಣನ ಮಹಿಮೆ!!

ಅಮ್ಮಮ್ಮ ಹೇಳಿದ ಕಥೆಗಳು.
(ನಾನೆಂದೂ ಪ್ರೂಫ್ ಕೇಳಲಿಲ್ಲ)

– ಡಾ.ನಾಗನಾಥ್ ಯಾದಗಿರಿ

 •  
  404
  Shares
 • 404
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com