Connect with us
Loading...
Loading...

ಅಂಕಣ

ಸಂಸತ್ತಿನ ಗೇಟ್ ನಂಬರ್ 1 ಕ್ಕೆ ಬಂದ ಆ ಉಗ್ರ ಬರೋಬ್ಬರಿ 16 ಗುಂಡುಗಳು ಆಕೆಯ ದೇಹಕ್ಕೆ ಹೊಕ್ಕಿಸಿದ್ದ!!! ಅಂದು ಆಕೆ ಇರದಿದ್ದರೆ ಇಂದು ಭಾರತದ ಸಂಸತ್ತೇ ಇರುತ್ತಿರಲಿಲ್ಲ!!

Published

on

 • 754
 •  
 •  
 •  
 •  
 •  
 •  
 •  
  754
  Shares

ಆ ದಿನ ನಡೆದ ಘಟನೆ ಭಾರತವಷ್ಟೇ ಅಲ್ಲ ಇಡೀ ವಿಶ್ವವೇ ತಲ್ಲಣಗೊಂಡಿದ್ದ ದಿನ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸಂಸತ್ತಿನ ಮೇಲೆ ಪಾಕಿಸ್ತಾನಿ ಉಗ್ರರು ಮಾಡಿದ ದಾಳಿ ಅದಾಗಿತ್ತು.

ಹೌದು ಬರೋಬ್ಬರಿ 16 ವರ್ಷಗಳ ಹಿಂದೆ 13-12-2001 ರಂದು ಲಷ್ಕರ್-ಏ-ತೊಯ್ಬಾ ಮತ್ತು ಜೈಷ್-ಏ-ಮೊಹಮ್ಮದ್ ಎಂಬ ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿ ಸಂಘಟನೆಗಳು ಮಾಸ್ಟರ್ ಮೈಂಡ್ ಅಫ್ಜಲ್ ಗುರು ನೇತೃತ್ವದಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ದೇಗುಲ ಅಂತ ಕರೆಯುವ ಸಂಸತ್ತಿನ ಮೇಲೆ ದಾಳಿಮಾಡಿದ್ದರು. ಸಂಸತ್ತಿನ ಪ್ರಮುಖ “ಗೇಟ್ ನಂಬರ್ ಒನ್” ಮೂಲಕ ಸಂಸತ್ತೇ ಛಿದ್ರವಾಗುವಷ್ಟು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸೂಸೈಡ್ ಬಾಂಬರ್ ಉಗ್ರರು ಅಂಬಾಸಿಡರ್ ಕಾರಿನಲ್ಲಿ ಸಂಸತ್ತನ್ನ ಪ್ರವೇಶಿಸುವುದಕ್ಕೆ ಪ್ರಯತ್ನಪಟ್ಟಿದ್ದರು.

ಉಗ್ರರು ಬರುವುದನ್ನು ನೋಡಿದ ಧೀರ ಮಹಿಳೆ ‘ಕಮಲೇಶ್ ಕುಮಾರಿ ಯಾದವ್’ ಓಡಿ ಹೋಗಿ ಗೇಟ್ ನಂಬರ್ 1 ನ್ನ ಮುಚ್ಚಿ ಉಗ್ರರು ಬಂದಿದ್ದಾರೆ ಎಲ್ಲರೂ ಎಚ್ಚೆತ್ತುಕೊಳ್ಳಿ ಅಂತ ಅಲ್ಲಿನ ಭದ್ರತಾ ಸಿಬ್ಬಂದಿಗೆ ಕರೆ ನೀಡುವ ಮೂಲಕ ಉಗ್ರರ ಪ್ರಥಮ ಗುಂಡಿಗೆ ಎದೆಕೊಟ್ಟು ವೀರ ಮರಣವನ್ನಪ್ಪಿದಳು.

ಆಕೆಗೆ ಗುಂಡಿಟ್ಟ ಉಗ್ರರು ಬರೋಬ್ಬರಿ ಹನ್ನೊಂದು ಗುಂಡುಗಳನ್ನ ಆಕೆಯ ದೇಹಕ್ಕೆ ಹೊಕ್ಕಿಸಿಬಿಟ್ಟಿದ್ದರು.

ಸಿ.ಆರ್.ಪಿ.ಎಫ್ ನ ಜೊತೆ ಕಾನ್ ಸ್ಟೇಬಲ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಆ ಧೀರ ಮಹಿಳೆ ಒಂದು ವೇಳೆ ಉಗ್ರರ ಪ್ರಥಮ ಗುಂಡಿಗೆ ಎದೆ ಒಡ್ಡದಿದ್ದಿದ್ದರೆ ಸೂಸೈಡ್ ಬಾಂಬರ್ ಗಳು ಸಂಸತ್ತನ್ನು ಪ್ರವೇಶಿಸುವ ಮೂಲಕ ಇಡೀ ಸಂಸತ್ತನ್ನೇ ಛಿದ್ರ ಛಿದ್ರವಾಗಿಮಾಡುತ್ತಿದ್ದರು. ಆ ಮೂಲಕ ಭಾರತದ ಹೆಮ್ಮೆಯ ನಾಯಕರುಗಳಾದ ಅಟಲ್ ಬಿಹಾರ್ ವಾಜಪೇಯಿ, ಅಡ್ವಾಣಿ, ಇನ್ನೂ ನೂರಾರು ಸಂಸತ್ತಿನ ಸದಸ್ಯರುಗಳು, ಮಂತ್ರಿಗಳು, ವಿರೋಧ ಪಕ್ಷದ ನಾಯಕರುಗಳನ್ನು ಕಳೆದುಕೊಂಡ ಭಾರತದ ಪ್ರಜಾಪ್ರಭುತ್ವವೇ ಅನಾಥ ವಾಗಿಬಿಟ್ಟಿರುತ್ತಿತ್ತೇನೋ.

ಮೂಲತಃ ಕಮಲೇಶ್ ಕುಮಾರಿ ಯಾದವ್ ಉತ್ತರಪ್ರದೇಶನ ಸಿಕಂದರ್ ಮೂಲದವಳು. ಕೆಚ್ಚೆದೆಯ ಧೀರ ಮಹಿಳೆಯಾದ ಇವಳು ಹೇಗೆ ರಾಣಿ ಲಕ್ಷ್ಮೀಬಾಯಿ ಝಾನ್ಸಿ ಮೇಲೆ ಬ್ರಿಟಿಷರು ದಾಳಿಮಾಡಲು ಬಂದಾಗ “ಮೇರಿ ಝಾನ್ಸಿ ನಹಿ ದೂಂಗಿ” ಅಂದರೆ ನನ್ನ ಝಾನ್ಸಿಯನ್ನು ನಾನು ನಿಮಗೆ ಒಪ್ಪಿಸುವುದಿಲ್ಲ ಅಂತ ಅತ್ಯಂತ ವೀರಾವೇಶದಿಂದ ಹೋರಾಡಿ ಹುತಾತ್ಮಳಾದಳೊ ಹಾಗೇ ಈ ಝಾನ್ಸಿ (ಕಮಲೇಶ್ ಕುಮಾರಿ) ಅದೇ ಉತ್ತರ ಪ್ರದೇಶದಿಂದ ಬಂದು “ಮೇರಿ ಸಂಸತ್ ನಹಿ ದೂಂಗಿ” ಎಂದು ಆ ಉಗ್ರರರೊಂದಿ ಹೋರಾಡಿ ಹುತಾತ್ಮಳಾಗಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಓಬವ್ವ ಹುಟ್ಟಿದ ಈ ಪುಣ್ಯಭೂಮಿಯಲ್ಲಿ ಮತ್ತೇ ಕೆಚ್ಚೆದೆಯ ವೀರ ಮಹಿಳೆಯರು ಹುಟ್ಟುತ್ತಾರೆಂದು ಸಾಬೀತು ಮಾಡಿದಳು.

ಈಕೆಯನ್ನ “ಆಧುನಿಕ ಭಾರತದ ಝಾನ್ಸಿ” ಎಂದು ಕರೆದರೆ ಅತಿಶಯೊಕ್ತಿ ಆಗಲಾರದು.

ಈ ದಾಳಿಯ ತೀವ್ರತೆಯನ್ನು ತಡೆದ ಕಮಲೇಶ್ ಕುಮಾರಿ ಯಾದವ್ ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ “ಅಶೋಕ ಚಕ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಆದರೆ ಇಂದು ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಕೆಲವು ಘಟನೆಗಳು ನಡೆಯುತ್ತಿವೆ ಅದೇನೆಂದರೆ ಕೆಲವರು ವಿರೋಧಿಸಬೇಕಾದದ್ದನ್ನು ಬೆಂಬಲಿಸುತ್ತಿದ್ದಾರೆ, ಬೆಂಬಲಿಸಬೇಕಾದದ್ದನ್ನು ವಿರೋಧಿಸುತ್ತಿದ್ದಾರೆ..! ಎಂತಹ ದುರ್ದೈವದ ಸಂಗತಿ..!

ಯಾವುದನ್ನು ನಾವು ಪ್ರಜಾಪ್ರಭುತ್ವದ ದೇಗುಲ ಅಂತ ಕರೆಯುತ್ತೇವೆಯೋ ನಮ್ಮ ಸಂಸತ್ತಿನ ದಾಳಿಮಾಡಿದ ಪ್ರಮುಖ ರೂವಾರಿಯಾದ ‘ಮಾಸ್ಟರ್ ಮೈಂಡ್’ ಅಫ್ಜಲ್ ಗುರುನನ್ನು ಗಲ್ಲಿಗೆರಿಸಿದ್ದೇ ತಪ್ಪು ಅಂತ JNU ವಿದ್ಯಾರ್ಥಿ ಮುಖಂಡ ಕನ್ನಯ್ಯ ಹಾಗೂ ಉಮರ್ ಖಾಲಿದ್ ಹಾಗೂ ಇವರಿಗೆ ಕೆಲವು ದರಿದ್ರ ರಾಜಕಾರಣಿಗಳು, ಬುದ್ಧಿಜೀವಿಗಳು ಬೆಂಬಲ ಸೂಚಿಸಿದ್ದರು.

ಅಫ್ಜಲ್ ಗುರು ಉಗ್ರ ಅಲ್ಲ ಆತನನ್ನು ಗಲ್ಲಿಗೆರಿಸಿದ್ದು ತಪ್ಪು ಅಂತ ಪ್ರತಿಭಟನೆಗೆ ಕೂರುತ್ತಾರೆ ಹಾಗೂ ಆತನಿಗೆ ಶ್ರದ್ಧಾಂಜಲಿ ಅರ್ಪಿಸಿ “ಅಪ್ಜಲ್ ಗುರು ಜಿಂದಾಬಾದ್ ಹಿಂದೂಸ್ತಾನ್ ಮುರ್ದಾಬಾದ್” ಅಂತ ಘೋಷಣೆ ಕೂಗುತ್ತಾರೆ.

ಹಾಗಾದರೆ ಅಫ್ಜಲ್ ಗುರು ಇವರ ಪ್ರಕಾರ ಹುತಾತ್ಮನೆ ಅಥವಾ ಮಹಾತ್ಮನೇ ..?? ಅಥವಾ ಆವತ್ತು ಸಂಸತ್ತನ್ನು ರಕ್ಷಿಸಲು ಕಮಲೇಶ್ ಕುಮಾರಿ ಯಾದವ್ ಳು ಅಪ್ಜಲ್ ಬೆಂಬಲಿಗರ ಉಗ್ರರ ಕಾರು ಪಾರ್ಲಿಮೆಂಟಿನ ಹತ್ತಿರ ಬಂದಾಗ ತನ್ನ ಪ್ರಾಣವನ್ನು ಲೆಕ್ಕಿಸದೆ ಓಡಿ ಹೋಗಿ ಪಾರ್ಲಿಮೆಂಟಿನ ಗೇಟನ್ನು ಮುಚ್ಚಿ ಉಗ್ರರ ಮೊದಲ ಗುಂಡಿಗೆ ಪ್ರಾಣ ಅರ್ಪಿಸಿದ CRPF Constable ಕಮಲೇಶ್ ಕುಮಾರಿ ಯಾದವ್ ಹಾಗೂ ಅನೇಕ ಸೈನಿಕರು ತಮ್ಮ ಪ್ರಾಣ ಅರ್ಪಿಸಿದ ಇಂತಹ ದೇಶಭಕ್ತರನ್ನು ನಾವು ಭಯೋತ್ಪಾದಕರು ಎನ್ನಬಹುದೇ..??

ಯಾಕಂದ್ರೆ ಭಾರತದ ಮೇಲೆ ದಾಳಿ ಮಾಡಲು ಬಂದ ಅಪ್ಜಲ್ ಗುರು, ಯಾಕುಬ್ ಮೆಮನ್ ಮುಂತಾದವರು ‘ಹುತಾತ್ಮ’ರಾದರೆ ಇವರೆಲ್ಲ ಯಾರು..??

ಉಗ್ರರು ಮುಸ್ಲಿಂ ಎಂಬ ಕಾರಣಕ್ಕೆ ಅವರಿಗೆ ಬೆಂಬಲ ಸೂಚಿಸಿ ಮೆರವಣಿಗೆ ಮಾಡುವುದನ್ನು ನಿಲ್ಲಿಸಿ, ಆತನನ್ನು ಗಲ್ಲಿಗೇರಿಸಬೇಡಿ, ಆತನಿಗೆ ಮಕ್ಕಳಿದ್ದಾರೆ ಕ್ಷಮಾಪಣೆ ನೀಡಿ ಅಂತ ಪ್ರತಿಭಟನೆ ಕೂರುತ್ತಾರೆ. ಹಾಗಾದರೆ ಅಲ್ಲಿ ಹುತಾತ್ಮರಾದ ಸೈನಿಕರಿಗೆ, ಸಿ.ಆರ್.ಪಿ.ಎಫ್ ಯೋಧರಿಗೆ ಮಕ್ಕಳು ಇರಲಿಲ್ವಾ? ಕಮಲೇಶ್ ಕುಮಾರಿ ಯಾದವಳಿಗೂ ಎರಡು ಹೆಣ್ಣು ಮಕ್ಕಳಿದ್ದರು ಅವಳಿಗೇಕೆ ನಿಮ್ಮ ಹೃದಯ ಮಿಡಿಯಲಿಲ್ಲ..?

ರಾಷ್ಟ್ರದ ಹಿತಾಸಕ್ತಿಗಾಗಿ ಯಾರು ಪ್ರಾಣವನ್ನು ಕೊಡುತ್ತಾರೋ ಹಾಗೂ ಯಾರು ದೇಶದ ಐಕ್ಯತೆಗೆ ದುಡಿಯುತ್ತಾರೋ ಅಂಥವರಿಗೆ ಗೌರವವನ್ನು ಸೂಚಿಸಬೇಕು ಅದು ಯಾರೇ ಆಗಿರಲಿ ಹಿಂದು, ಮುಸ್ಲಿಂ, ಕ್ರೈಸ್ತ ಯಾರೇ ಆಗಿರಲಿ ಅವರನ್ನು ನಾವು ಗೌರವಿಸಬೇಕು ಕಾರಣ ಅವರು ತಮಗೊಸ್ಕರ ಸೇವೆ ಸಲ್ಲಿಸುವುದಿಲ್ಲ ಬದಲಾಗಿ ನಮಗಾಗಿ ಹಾಗೂ ರಾಷ್ಟ್ರದ ಹಿತಕ್ಕಾಗಿ ಸೇವೆ ಸಲ್ಲಿಸಿರುತ್ತಾರೆ. ಯಾವುದನ್ನು ಬೆಂಬಲಿಸಬೇಕೋ ಹಾಗು ಯಾವುದನ್ನು ಗೌರವಿಸಬೇಕೋ ಅದನ್ನು ಮಾಡಿ ಹಾಗು ಪ್ರಬುದ್ಧ ಭಾರತವನ್ನು ಕಟ್ಟಲು ಕೈ ಜೋಡಿಸಿ……!!!!

ಅತಿಯಾದ ಮುಸ್ಲಿಂ ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣ ನಮ್ಮ ದೇಶದಲ್ಲಿ ಮಿತಿ ಮೀರಿರುವುದರಿಂದಲೇ ಇಂದು ಅಫ್ಜಲ್ ಗುರು ನಂತಹ ಭಯೋತ್ಪಾದಕ ಹೀರೋ ಆಗಿ ದೇಶಕ್ಕಾಗಿ ಪ್ರಾಣತೆತ್ತ ವೀರರು ದೇಶದ್ರೋಹಿಗಳಾಗಿ ಬಿಂಬಿಸಲ್ಪಡುತ್ತಿದ್ದಾರೆ.

ಇದೇ ರೀತಿ ದೇಶ ಮುಂದುವರೆದರೆ ಮುಂದೊಂದು ದಿನ ಪಾಕಿಸ್ತಾನದ ಕೈಯಲ್ಲೇ ನಮ್ಮ ಪ್ರಜಾಪ್ರಭುತ್ವವನ್ನ ಕೊಟ್ಟು ಬಿಡಿ ಅಂತ ಈ ದೇಶದ್ರೋಹಿಗಳು ಪ್ರತಿಭಟನೆ ಮಾಡಿದರೂ ಅಚ್ಚರಿಯಿಲ್ಲ!!

– ಶಿವರಾಜ್

 •  
  754
  Shares
 • 754
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com