Connect with us
Loading...
Loading...

ಪ್ರಚಲಿತ

ಅಷ್ಟಕ್ಕೂ ಈತ ಬೈದಿದ್ದು ಯಾರಿಗೆ ಗೊತ್ತಾ? ನಾಳೆ ಅಯ್ಯಪ್ಪ ಮಾಲಾಧಾರಿಗಳನ್ನೂ ಟಾರ್ಗೇಟ್ ಮಾಡಬಹುದು ಈ ಕುಮಾರಸ್ವಾಮಿ!! ಎಚ್ಚರ ಹಿಂದುಗಳೇ!!!

Published

on

 • 3.9K
 •  
 •  
 •  
 •  
 •  
 •  
 •  
  3.9K
  Shares

ದತ್ತಮಾಲಾದಾರಿಗಳು ಮಾಲೆ ಧರಿಸುವುದು ಭಿಕ್ಷೆ ಬೇಡುವುದಕ್ಕೆ ಎನ್ನುವ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಮಾತಾಡಿದ್ದಾರೆ. ನಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆಂದ ದೇವೇಗೌಡರ ಮಗ ಕುಮಾರ್ ಸ್ವಾಮಿ ಅವರ ಬಾಯಲ್ಲಿ ಇಂತಹ ಮಾತು ಅನಿರೀಕ್ಷಿತವೇನಲ್ಲ ಬಿಡಿ.

ದೇಶದ್ರೋಹಿ ಫಾರುಕ್ ಅಬ್ದುಲ್ ನನ್ನು ಕರೆಸಿ ಸಮಾವೇಶ ಮಾಡುವವರ ಬಾಯಲ್ಲಿ ಇಂತಹ ಮಾತುಗಳು ಬರದೇ ಇನ್ನೇನು ಬಂದಾವು?

ಮೂಡಿಗೆರೆಯಲ್ಲಿ ನೆಡೆದ ಕುಮಾರಪರ್ವದಲ್ಲಿ ಮಾತನಾಡಿದ ಜೆಡಿಎಸ್ ನ ಕುಮಾರಸ್ವಾಮಿ “ಅದೇನೋ ಶ್ರೀರಾಮನ ಹೆಸರಲ್ಲಿ ಮಾಲೆ ಹಾಕ್ತಾರಂತೆ, ಚಿಕ್ಕಮಗಳೂರಿನ ಬೀದಿಯಲ್ಲಿ ತಾಳ ಹೊಡೆದುಕೊಂಡು ಹೋಗ್ತಾರಂತೆ, ಇದನ್ನು ನೀವು ಮೆಚ್ಚಿಕೊಳ್ತೀರ, ಅದಲ್ದೆ ಭಿಕ್ಷೆ ಬೇರೆ ಬೆಡ್ತಾರಂತೆ” ಸಾರ್ವಜನಿಕ ಸಭೆಯಲ್ಲಿ ಹೇಳ್ತಾರಂದ್ರೆ ಹಿಂದುಗಳ ಭಾವನೆಗಳಿಗೆ ಬೆಲೆ ಇಲ್ವಾ?

ಅಷ್ಟಕ್ಕೂ ಕುಮಾರಸ್ವಾಮಿ ಅಂದಿದ್ದೇನು? ವೀಕ್ಷಿಸಿ ಈ ವಿಡಿಯೋ!!

ಯಾರನ್ನೋ ಓಲೈಸುವುದಕ್ಕಾಗಿ ಮಾತೃ ಧರ್ಮದ ಆಚರಣೆಯ ಕುರಿತು ಕೀಳಾಗಿ ಮಾತನಾಡುವ ಮನಸ್ಥಿತಿಯಾದರು ಹೇಗೆ ಬಂತು ಕುಮಾರ ಸ್ವಾಮಿಯವರಿಗೆ? ಅದು ಸಣ್ಣ ಪುಟ್ಟ ವ್ಯಕ್ತಿಯೂ ಅಲ್ಲ, ಮಾಜಿ ಮುಖ್ಯಮಂತ್ರಿ. ಮಾಜಿ ಮುಖ್ಯಮಂತ್ರಿಗಳಿಗೆ ಭಾಷಣ ಮಾಡುವಾಗ ಪ್ರಜ್ಞೆ ಇರಬೇಕಲ್ವಾ? ಮಾತಿನಲ್ಲಿ ಹಿಡಿತ ಇರಬೇಕಲ್ವಾ? ಅದು ಕೂಡಾ ಸಾರ್ವಜನಿಕ ಸ್ಥಳದಲ್ಲಿ ಈ

ರೀತಿಯ ಹೇಳಿಕೆಗಳನ್ನು ಕೊಡುತ್ತಾರೆಂದರೆ ಇವರಿಗೆ ಸಾಮಾಜಿಕ ಜವಾಬ್ದಾರಿ ಇದೆಯಾ? ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಾಗಲೇ ಹಿಂದೂ ವಿರೋಧಿ ಹೇಳಿಕೆಗಳು ಬರಲಾರಂಭಿಸುತ್ತವೆ ಎಂದು ನಾವು ಭಾವಿಸಿದ್ದೆವು.

ಈಗ ಅದರಂತೆ ಆಗಿದೆ. ದೇವಸ್ಥಾನಗಳಿಗೆ ತಿರುಗುವ, ಮೇಲಿಂದ ಮೇಲೆ ಹೋಮ ಹವನ, ಯಜ್ಞಗಳನ್ನು ಮಾಡಿಸುವವರು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆಂದರೆ ಇದು ಓಲೈಕೆ ರಾಜಕಾರಣ ಅಲ್ಲದೇ ಬೇರೇನೂ ಅಲ್ಲ. ಹೋಮ, ಹವನ, ಯಜ್ಞ-ಯಾಗಾದಿಗಳನ್ನು ಮಾಡಿಸಿ ರಾಜಕೀಯ ಆಕಾಂಕ್ಷೆಗಳನ್ನು ದೇವರಲ್ಲಿ ಬೇಡುವುದು ಒಂದು ರೀತಿಯ ಭಿಕ್ಷೆ ಅಲ್ವಾ?

ಹೌದು ದತ್ತಮಾಲಾಧಾರಿಗಳು ದೇವರ ಸ್ಮರಣೆಯಲ್ಲಿ ತಮ್ಮ ನಂಬಿಕೆಗೆ ಅನುಸಾರವಾಗಿ ಆಚರಣೆ ಮಾಡುವುದು ಭಿಕ್ಷೆಯ ರೀತಿ ಅನಿಸಿದರೆ, ಕುಮಾರ ಸ್ವಾಮಿಯವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಹೋಮ, ಹವನ, ಯಜ್ಞಗಳನ್ನು ಮಾಡಿಸಿ ರಾಜಕೀಯದ ಕುರಿತು ದೇವರಲ್ಲಿ ಕೇಳಿಕೊಳ್ಳೋದು ಒಂದು ರೀತಿಯ ಭಿಕ್ಷೆ ಅಲ್ವಾ?

ಕನ್ನಡಿಗರ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಕುಮಾರ್ ಸ್ವಾಮಿಯವರಿಗೆ ಜಾಗವಿತ್ತು. ಆದರೆ ಕುಮಾರ್ ಸ್ವಾಮಿಯವರು ಯಾವಾಗ ದೇಶದ್ರೋಹಿ ಫಾರುಕ್ ಅಬ್ದುಲ್ ನನ್ನು ಕರೆಸಿ, ಮೈಸೂರಿನಲ್ಲೆಲ್ಲಾ ಉರ್ದು ಫ್ಲೆಕ್ಸ್ ಹಾಕಿಸಿದರೋ ಆಗಲೇ ಕುಮಾರ ಸ್ವಾಮಿಯವರು ಕನ್ನಡಿಗರ ಮನಸ್ಸಿನಿಂದ ದೂರವಾದರು. ಅಷ್ಟಕ್ಕೂ ಆ ಫಾರುಕ್ ಅಬ್ದುಲ್ ದೇಶದ್ರೋಹಿ ಅಂತ ಗೊತ್ತಿದ್ದರೂ ಕರೆಸುವುದು ಅಗತ್ಯವಿತ್ತಾ? ದೇಶಪ್ರೇಮಿ ಮುಸಲ್ಮಾನರೇ ಸಿಗಲಿಲ್ವಾ? ಸ್ವಾಮಿ ಇದರಲ್ಲೇ ಕ್ಲಿಯರ್ ಆಗಿ ಗೊತ್ತಾಗುತ್ತೆ.

ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಮತಾಂಧನನ್ನು ಕರೆಸಿದರೆ ಆತನ ಮಾತುಗಳಿಂದ ಕರ್ನಾಟಕದ ಮುಸಲ್ಮಾನರು ಕೆರಳಿ ತನಗೆ ಓಟು ಹಾಕುತ್ತಾರೆಂಬ ದುರಾಸೆ. ಓಟಿಗಾಗಿ ಈ ಮಟ್ಟಿಗೆ ಇಳಿಯೋದು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿಡಿ, ಕಾಶ್ಮೀರದ ಲಾಲ್ ಚೌಕ್ ನಲ್ಲಿ ನಿಮ್ಮಲ್ಲಿ ತಾಕತ್ತಿದ್ದರೆ ಭಾರತದ ಧ್ವಜ ಹಾರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿ ಭಾರತೀಯರಿಗೆ ಅವಮಾನ ಮಾಡಿದ ದೇಶದ್ರೋಹಿ ಫಾರುಕ್ ಅಬ್ದುಲ್ ನನ್ನು ಕುಮಾರ್ ಸ್ವಾಮಿಯವರು ಕರೆಸಿದಾಗಲೇ ಕುಮಾರ್ ಸ್ವಾಮಿಯವರು ಕನ್ನಡಿಗರ ಮನಸ್ಸಿನಲ್ಲಿದ್ದ ತಮ್ಮ ಸ್ಥಾನವನ್ನು ಕಳೆದುಕೊಂಡು ಬಿಟ್ಟರು.

ಜಾಗೃತ ಹಿಂದುಗಳ ಮನಸ್ಸಿನಿಂದ ಕುಮಾರ್ ಸ್ವಾಮಿಯವರು ದೂರವಾಗಿ ಬಹುಕಾಲವಾಯ್ತು. ಜಾತ್ಯಾತೀತವೆಂದು ಪಕ್ಷದ ಹೆಸರಿಟ್ಟುಕೊಂಡು ಜಾತ್ಯಾತೀತ ಎಂಬ ಪದಕ್ಕೆ ಮಸಿ ಬಳೆಯಲು ಹೊರಟಿದ್ದಾರೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನೇ ಜಾತ್ಯಾತೀತ ಅಂತ ಅಂದುಕೊಂಡಿದ್ದಾರೋ ಏನೋ? ಕಾಂಗ್ರೆಸ್ಸಿಗರಂತೂ ಅನ್ಕೊಂಡಿರೋದು ನಿಜ. ಈಗೀಗ ಕುಮಾರ್ ಸ್ವಾಮಿಯವರು ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಓಹ್ ಈಗ ಅರ್ಥ ಆಯ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದ್ಯಾಕೆ ಅಷ್ಟೊಂದು ಹಿಂದೂ ವಿರೋಧಿಗಳೆಂದು. ಯಾಕಂದ್ರೆ ಸಿದ್ದರಾಮಯ್ಯನವರು ಬೆಳದು ಬಂದದ್ದು ದೇವೆಗೌಡರ ಗರಡಿಯಿಂದಲೇ ಅಲ್ವಾ? ಹೀಗಾಗಿಯೇ ಸಿದ್ರಾಮಯ್ಯನವರು ಹೀಗೆಲ್ಲಾ ಆಡ್ತಿರಬಹುದು.

ರವಿ ಬೆಳಗೆರೆಯವರ ಮುಸ್ಲಿಂ ಎಂಬ ಪುಸ್ತಕದಲ್ಲಿ ದೇವೇಗೌಡರ ಕುರಿತು ಬರೆದ ಸಾಲುಗಳು ನೆನಪಿಗೆ ಬರುತ್ತಿವೆ. ಭಾರತದಲ್ಲಿದ್ದುಕೊಂಡೇ ಈ ದೇಶದ ಭದ್ರತೆಗೆ ಅಪಾಯ ತಂದಿಡುವ ಕೃತ್ಯಗಳಲ್ಲಿ ತೊಡಗಿದ ‘ಸಿಮಿ’ ಸಂಘಟನೆಯನ್ನು ಬಹಿಷ್ಕರಿಸಿ, ಅದನ್ನು ಬುಡ ಸಮೇತ ನಾಶ ಮಾಡಬೇಕು. ಇಷ್ಟು ಮಾತ್ರದ ನಿರ್ಧಾರಕ್ಕೆ ಬರಲು ತುಂಬ ತರ್ಕ ಬೇಕಿಲ್ಲ. ಆದರೆ ನಮ್ಮ ಓಟು ಪಾಲಿಟಿಕ್ಸಿನ ರಾಜಕಾರಣಿಗಳು ಬೇರೇಯದೇ ಧಾಟಿಯಲ್ಲಿ ಆಲೋಚಿಸುತ್ತಾರೆ ಮತ್ತು ವ್ಯವಹರಿಸುತ್ತಾರೆ. ‘ಸಿಮಿ’ ತರಹದ ಸಂಘಟನೆಯನ್ನು ಬಹಿಷ್ಕರಿಸುವುದರ ಮೂಲಕ ಭಾರತದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ !

ಇಷ್ಟಕ್ಕೂ ‘ಸಿಮಿ’ ಒಂದು ರಾಷ್ಟ್ರವಿರೋಧಿ ಸಂಘಟನೆಯೆಂದು ಹೇಳಲು ನಿಮ್ಮ ಬಳಿ ಸಾಕ್ಷ್ಯವೆಲ್ಲಿದೆ? ಎಂಬಂತಹ ಹೇಳಿಕೆಗಳನ್ನು ನೀಡುತ್ತಾರೆ. ಬೇರೇ ಯಾರೋ ಅಲ್ಲ, ಆಕಸ್ಮಿಕವಾಗಿ ಭಾರತ ದೇಶಕ್ಕೆ ಪ್ರಧಾನಿಯಾಗಿ ಆ ಹುದ್ದೆಯಲ್ಲಿ ಹತ್ತು ತಿಂಗಳು ಕುಳಿತು ದ ಎಚ್.ಡಿ.ದೇವೆಗೌಡರು ಇಂಥ ಮಾತಾಡುತ್ತಾರೆ. ಪಾರ್ಲಿಮೆಂಟ್ ಭವನ ನುಗ್ಗಿ ಹತ್ಯೆಗಳನ್ನು ಮಾಡಿದವರು ಪಾಕ್ ಬೆಂಬಲಿತ ಉಗ್ರಗಾಮಿಗಳು ಅನ್ನುವುದಕ್ಕೆ ನಿಮಗೆ ಸಾಕ್ಷ್ಯವೇನಿದೆ ಎಂದು ಕೇಳಿದ ಪಾಕಿಸ್ತಾನದ ಅಧ್ಯಕ್ಷ ಪರವೇಜ್ ಮುಷರಫ್ ಗೂ ಈ ದೇವೇಗೌಡರಿಗೂ ನನಗೆ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ.

ಈ ಓಟು ಪಾಲಿಟಿಕ್ಸಿನ ರಾಜಕಾರಣಿಗಳಿಗೆ ಪಾನ್ ಇಸ್ಲಾಮಿಕ್ ಚಳವಳಿಯ ಅಪಾಯವೆಂಥದೆಂಬುದು ಗೊತ್ತೂ ಇರುವುದಿಲ್ಲ. ಗೊತ್ತಿದ್ದರೂ, ಅದನ್ನು ಖಂಡಿಸುವ ಮೂಲಕ ಭಾರತದ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುತ್ತೇವೆ ಎಂಬ ಆತಂಕ ಅವರನ್ನು ಕಾಡುತ್ತದೆ. ಇದು ರವಿ ಬೆಳಗೆರೆ ಅವರ ಮುಸ್ಲಿಂ ಎಂಬ ಪುಸ್ತಕದ ಸಾಲುಗಳು.

ರವಿ ಬೆಳಗೆರೆಯವರು ಬರೆದಂತೆ ದೇವೇಗೌಡರು ವರ್ತಿಸುತ್ತಿದ್ದಾರೆ. ಅವರಂತೆ ಅವರ ಪುತ್ರ ಕುಮಾರ್ ಸ್ವಾಮಿಯವರು ವರ್ತಿಸುತ್ತಿದ್ದಾರೆ. ಬಾಯಿ ಬಿಟ್ಟರೆ ಕನ್ನಡ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಇದೇ ಪಕ್ಷದವರು. ಅಂದು ಫಾರುಕ್ ಅಬ್ದುಲ್ ಬಂದಾಗ ಮೈಸೂರಿನಲ್ಲಿ ಅದ್ಯಾವ ಭಾಷೆಯ ಫ್ಲೆಕ್ಸ್ ಹಾಕ್ಸಿದ್ರಿ ನೆನಪಿದೆಯಾ? ಉರ್ದು ಭಾಷೆಯ ಫ್ಲೆಕ್ಸ ಹಾಕ್ಸಿದ್ರಿ. ಬಾಯಿಬಿಟ್ಟರೆ ಹಿಂದಿ ಹೇರಿಕೆ ಎನ್ನುವವರು ಮೈಸೂರಿನಲ್ಲಿ ಉರ್ದೂ ಫ್ಲೆಕ್ಸ್ ಹಾಕಿಸಿದ್ದು ಉರ್ದೂ ಹೇರಿಕೆ ಅಲ್ಲವೇ?? ಉರ್ದು ಒಂದು ಅಬ್ಬೆಪಾರಿ ಭಾಷೆ. ಅದಕ್ಕೊಂದು ವಿಧಿಬದ್ಧ ವ್ಯಾಕರಣವಿಲ್ಲ. ತನ್ನದೇ ಆದ ಶಬ್ದ ಸಂಪತ್ತಿಲ್ಲ.

ಸಂಸ್ಕೃತ ಭಾಷೆಯ ಕೆಲ ಪದಗಳನ್ನು ಕದ್ದು ರೂಪಗೊಳಿಸಿದ ಭಾಷೆಯದು. ಮೊಘಲರ ಕಾಲದಲ್ಲಿ ಸೈನ್ಯವನ್ನು ಸಂಭಾಳಿಸಲಿಕ್ಕೆ ಸೃಷ್ಟಿಸಿಕೊಂಡ ಭಾಷೆಯದು. ಅದರ ಫ್ಲೆಕ್ಸ್ ಹಾಕಿಸಿದವರು ಹಿಂದಿ ಹೇರಿಕೆಯ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾಮನಾಗಿ ಹುಟ್ಟುತ್ತೇನೆ ಅಂದಿದ್ರು ಈಗ ನೋಡಿದರೇ ಈಗಿನಿಂದಲೇ ಅದರ ತಯಾರಿ ನಡೆದಿದೆ ಅನಿಸ್ತಿದೆ. ಕುಮಾರ್ ಸ್ವಾಮಿಯವರ ಮಾತುಗಳನ್ನು ಕೇಳಿದರೆ ಈಗಲೇ ಅದರ ತಯಾರಿ ನಡೆದಿದೆಯಾ?

ಕುಮಾರ್ ಸ್ವಾಮಿಯವರಿಗೆ ಕರ್ನಾಟಕದ ಜನರು ತಮ್ಮ ಮನಸ್ಸಿನ ಅದ್ಯಾವುದೋ ಮೂಲೆಯಲ್ಲಿ ಸ್ವಲ್ಪವಾದರೂ ಜಾಗ ಕೊಟ್ಟಿದ್ದರು. ಈಗ ಈ ಮಾತುಗಳನ್ನು ಕೇಳಿದರೆ ಯಾರೂ ಕೂಡಾ ಸಹಿಸಿಕೊಳ್ಳುವುದಿಲ್ಲ. ಕುಮಾರ್ ಸ್ವಾಮಿಯವರು ಓಟಿಗಾಗಿ ಇಂತಹ ಹಿಂದೂ ವಿರೋಧಿ ಹೇಳಿಕೆಗಳನ್ನು ಕೊಟ್ಟು ಜನರ ಮನಸ್ಸಿನಿಂದ ದೂರವಾಗಿತ್ತಿದ್ದಾರೆನ್ನುವುದಂತೂ ಸತ್ಯ.

– Team Nationalist Views

©2018 Copyrights Reserved

 •  
  3.9K
  Shares
 • 3.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com