Connect with us
Loading...
Loading...

Uncategorized

ನಿಮ್ಮ ಮೋದಿ ಏನು ಮಾಡಿದ್ದಾರೆ ಎಂದು ಕೇಳಿದ ಕಾಂಗ್ರೆಸ್ಸಿಗನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಮೋದಿ ಅಭಿಮಾನಿ!! ಇಂಗು ತಿಂದ ಮಂಗನಂತನಾದ ಕಾಂಗ್ರೆಸ್ಸಿಗ

Published

on

 • 9.1K
 •  
 •  
 •  
 •  
 •  
 •  
 •  
  9.1K
  Shares

ನನಗೆ ಕಾಂಗ್ರೆಸ್ ನವರು ತುಂಬಾ ಪ್ರಶ್ನೆ ಮಾಡುತ್ತಾರೆ. ” ನಾಲ್ಕು ವರ್ಷ ಆಯ್ತು ನಿಮ್ಮ ಮೋದಿ ಏನು ಮಾಡಿದ್ದಾರೆ ???? ನಿಮ್ಮ ಮೋದಿ ಏನು ಮಾಡಿದ್ದಾರೆ ?? ”

ಅವರಿಗೆ ನನ್ನ ಉತ್ತರ :
ನಮ್ಮ ಮೋದಿ ಏನು ಮಾಡಿದಾರೆ ಅಂತ ಆಮೇಲೆ ಹೇಳ್ತಿನಿ.  ಮೊದಲು ಮೋದಿ ನಿನಗೆ ಏನು ಮಾಡಿದ್ದಾರೆ ಗೊತ್ತಾ ?

“ಹಾಂ ನನಗೆ ? ನನಗೆ ನಿಮ್ಮ ಮೋದಿ ಏನು ಮಾಡಿಲ್ಲ ??”

” ಹೌದೋ ಅವಿವೇಕಿ ನಿನ್ನಂಥ ಶತಮೂರ್ಖರಿಗೆ ತುಂಬಾ‌ ಒಳ್ಳೆಯದು ಮಾಡಿದ್ದಾರೆ ನನ್ನ ಮೋದಿ. ನಿನಗೆ ಏನೇನು ಮಾಡಿದ್ದಾರೆ ನನ್ನ ಮೋದಿ ಹೇಳ್ತೀನಿ ಕೇಳು”.


೧. ಎಪ್ಪತ್ತು ವರ್ಷ ಕಾಂಗ್ರೆಸ್ ಆಳ್ವಿಕೆಯಲ್ಲಿ ನಿನ್ನ ಬುದ್ದಿ ತುಕ್ಕು ಹಿಡಿದಿತ್ತು. ನಾಲಿಗೆ ಸತ್ತು ಹೋಗಿತ್ತು. ನೀನು ಪ್ರಜೆ ಆಗಿಯೂ ಅಪ್ರಯೋಜಕನಾಗಿದ್ದೆ.

” ನಮ್ಮನ್ನು ಆಳುವವರಿಗೆ ಪ್ರಶ್ನೆ ಕೇಳಬೇಕು” ಎನ್ನುವ ಪ್ರಜ್ಞೆಯೇ ಇಲ್ಲದಿದ್ದ ನಿನಗೆ, ಪ್ರಶ್ನೆ ಕೇಳಬೇಕು ಎಂಬ “ಜಾಗೃತ ಪ್ರಜ್ಞೆ ” ತಂದದ್ದು ಮೋದಿ ಆಳ್ವಿಕೆ. ಈಗ ನೀನು ಪ್ರಶ್ನೆ ಕೇಳುತ್ತಿದ್ದಿಯಲ್ಲ. “ಮೋದಿ ಏನು ಮಾಡಿದ್ದಾರೆ ಎಂದು ಹೀಗೆ ಒಂದು ಸಾರಿಯೂ ಎಪ್ಪತ್ತು ವರ್ಷಗಳವರೆಗೆ ” ಕಾಂಗ್ರೆಸ್ ನವರು ಏನು ಮಾಡಿದ್ದಾರೆ ” ಎಂದು ಕೇಳದ ಗುಲಾಮ ನೀನು!!

೨. ಸರಕಾರ ಇರುವುದು ಅಭಿವೃದ್ಧಿ ಮಾಡಲು ಎಂದು ನಿನಗೆ ಮನವರಿಕೆ ಮಾಡಿದ್ದು ನನ್ನ ಮೋದಿ ಆಳ್ವಿಕೆ!!

೩. ದೇಶವನ್ನು ಮುನ್ನಡೆಸಬೇಕಾದ ರಾಜಕಾರಣಿ ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯಬೇಕು ಎಂದು ನಿನಗೆ ತೋರಿಸಿದ್ದು ನನ್ನ ಮೋದಿ ಆಳ್ವಿಕೆ!!


೪. 70 ವರ್ಷಗಳಿಂದ ಸರ್ಕಾರ & ಪ್ರಜೆಗಳು ಸಂಭಂದವೇ ಇಲ್ಲದಂತೆ ಇರುತ್ತಿದ್ದರು. ಆದರೆ ಇವತ್ತು ಸರ್ಕಾರ & ಪ್ರಜೆ ಇಬ್ಬರೂ ಸೇರಿ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜೆಗಳಿಗೆ ಅವರ ಕರ್ತವ್ಯವನ್ನು & ಕರ್ತವ್ಯ ಮಾಡಲು ಸರಿಯಾದ ಸಂವಹನ ಮಾಧ್ಯಮ, ವೇದಿಕೆಯನ್ನೂ ಕೊಟ್ಟಿದ್ದಾರೆ ನನ್ನ ಮೋದಿಜಿ
Ex: ಸ್ವಚ್ಛ ಭಾರತ, Namo App, ಮನ್ ಕಿ ಬಾತ್ etc

೫. ಇಂದು ಪ್ರತಿಯೊಬ್ಬ ಪ್ರಜೆಯು ನನ್ನ ನರೇಂದ್ರ ಮೋದಿಯವರಿಗಾಗಲಿ ಅಥವಾ ಅವರ ಸಚಿವರಿಗಾಗಲಿ ನೇರವಾಗಿ ಪ್ರಶ್ನೆ ಕೇಳಬಹುದು, ಸಲಹೆ ಸೂಚನೆ ನೀಡಬಹುದು. ಹಾಂ ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಕೊಡುತ್ತಾ ಇದ್ದಾರೆ ನನ್ನ ಮೋದಿಜಿ .

೬. ಮೊದಲು ವಿಶ್ವ ನಾಯಕರುಗಳ ಸಮ್ಮೇಳನದಲ್ಲಿ ಭಾರತದ ‘ಮೂಕ’ ಪ್ರಧಾನಿಯನ್ನು ಯಾರೂ ‘ಮೂಸಿ’ ಸಹ ನೋಡುತ್ತಿರಲಿಲ್ಲ. ಇಂದು ನೋಡು ಇಡೀ ವಿಶ್ವದ ನಾಯಕರು ಭಾರತದ ಕಡೆಗೆ ಬೆಕ್ಕಸಬೆರಗಾಗಿ ನೋಡುವಂತೆ ಮಾಡಿ, ಭಾರತದಲ್ಲಿ ಆ ನಾಯಕರುಗಳು ಹಣ ಹೂಡಿಕೆ ಮಾಡುವಂತೆ ಮಾಡುತ್ತಿದ್ದಾರೆ ನನ್ನ ಮೋದಿಜಿ.


೭. ಹಿಂದೂಗಳಿಂದ ಬಂದ, ಹೌದು ರ್ರೀ ಸನಾತನ ಹಿಂದೂಗಳಿಂದ ಪ್ರಪಂಚಕ್ಕೆ ಪರಿಚಯಿಸಲ್ಪಟ್ಟ ಶ್ರೇಷ್ಠ ಜೀವನ ಪದ್ದತಿ ” ಯೋಗ ” ವನ್ನು ಇಡೀ ಜಗತ್ತೆ ಒಪ್ಪಿ, ಮಾಡುವಂತೆ ಮಾಡಿದ್ದು ನನ್ನ ಮೋದಿಜಿ. ಮುಸ್ಲಿಂಮರು ವಿರೋಧಿಸುವ ಯೋಗವನ್ನು , ಮುಸ್ಲಿಮರ ಮೂಲದೇಶ ಸೌದಿ ಅರೇಬಿಯಾ ಒಪ್ಪುವಂತೆ ಮಾಡಿದ್ದು ನನ್ನ ಮೋದಿಜಿ!!

೮. ಪಾಕಿಸ್ತಾನ, ಚೀನಾ ದಂತಹ ಶತ್ರುಗಳ ತಂತ್ರಗಳಿಗೆ ಪ್ರತಿ ತಂತ್ರ ಮಾಡಿ, ಇಡೀ ಜಗತ್ತಿನಲ್ಲಿ ಪಾಕಿಸ್ತಾನ ಮೂಲೆಗುಂಪು ಆಗುವಂತೆ ಮಾಡಿದ್ದು ನನ್ನ ಮೋದಿಜಿ. ಪಾಕಿಸ್ತಾನ ಮೋದಿ 2019 ರಲ್ಲಿ ಪ್ರಧಾನಿ ಆಗಬಾರದು ಎಂದು ಬಹಿರಂಗವಾಗಿ ಹೇಳುತ್ತದೆ ಎಂದರೆ ಪಾಕಿಸ್ತಾನಕ್ಕೆ ಎಂಥ ಮರ್ಮ ಘಾತ ಕೊಟ್ಟಿರಬೇಡ ನನ್ನ ಮೋದಿಜಿ!!
Ex : ಸರ್ಜಿಕಲ್ ಸ್ಟ್ರೈಕ್ , ಡೊಕ್ಲಾಂ ನಿರ್ವಹಣೆ, ಉಗ್ರಗಾಮಿಗಳ ನಿರಂತರ ಹತ್ಯೆ, ಛಹಬಾರ ಪೋರ್ಟ ಖರೀದಿ ಇತ್ಯಾದಿ


೯. ಹಗರಣಗಳು, ಭ್ರಷ್ಟಾಚಾರ ಗಳಿಂದ ತತ್ತರಿಸಿ ಬೇಜಾರಾಗಿ, ಸೋತು ಸರ್ಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡು ನಿರಾಶಾವಾದಿಯಾಗಿದ್ದ ಪ್ರಜೆಗೆ, ಹಗರಣ, ಭ್ರಷ್ಟಾಚಾರ ಇಲ್ಲದೆ ಸರ್ಕಾರ ನಡೆಸಿ ಆಶಾವಾದಿಯಾಗಿ ಮಾಡಿ ದೇಶದಲ್ಲೆಲ್ಲಾ ಧನಾತ್ಮಕತೆ‌ ತುಂಬಿದರು ನನ್ನ ಮೋದಿಜಿ!!

೧೦. ದೇಶದ ದುಸ್ಥಿತಿ, ನಿರಾಶೆಗೆ ಕಾರಣವಾಗಿದ್ದ ನಿನ್ನ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಇನ್ನೂ ಕೆಲವೇ ವರ್ಷಗಳಲ್ಲಿ ನಿರ್ನಾಮ ಮಾಡಲಿದ್ದಾರೆ ನನ್ನ ಮೋದಿಜಿ!!

೧೧. ದಿವಸಕ್ಕೆ 18 ಗಂಟೆಯಂತೆ, ಕಳೆದ ಹದಿನೆಂಟು ವರ್ಷಗಳಿಂದ ದೇಶಕ್ಕಾಗಿ ಒಂದು ದಿವಸವೂ ವಿಶ್ರಾಂತಿ ತೆಗೆದುಕೊಳ್ಳದೇ, ಹೌದು ರ್ರೀ ಒಂದು ದಿವಸವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡಿದರೂ ಸಹ ತನ್ನನ್ನು ತಾನು ಕೇವಲ ಕಾಮನ್ ಮ್ಯಾನ್ (CM), ಪ್ರಧಾನ ಸೇವಕ (ಪ್ರಧಾನ ಮಂತ್ರಿ ಅಲ್ಲ) ಎಂದು ಕರೆದುಕೊಳ್ಳುತ್ತಾರೆ ನನ್ನ ಮೋದಿಜಿ!!


ಇಂತಹ ಅತ್ಯಂತ ನಿರ್ಲಿಪ್ತ, ನಿರಹಂಕಾರಿ ಸೇವಕ ಎಂದಿಗೂ ಭಾರತಕ್ಕೆ ಸಿಗಲಿಕ್ಕಿಲ್ಲ. ಭಾರತ ಯಾಕೆ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರವೂ ಇಲ್ಲಿಯ ತನಕ ಹೊಂದಿರದ, ಹೊಂದಲಾಗದ ಮಹಾನ್ ರಾಷ್ಟ್ರ ಸೇವಕ ನನ್ನ ಮೋದಿ!! ಓ ಕಾಂಗ್ರೆಸ್ ಬೆಂಬಲಿಸುವ, ಮೋದಿ ವಿರೋಧಿಸುವ ಶತಮೂರ್ಖನೇ ತಿಳಿಯಿತೆ ಮೋದಿ ನಿನ್ನಲ್ಲಿ, ನಿನಗೆ ತಿಳಿಯದಂತೆ & ಈ ದೇಶದಲ್ಲಿ ಎಂಥಾ ಬದಲಾವಣೆ ತಂದಿದ್ದಾರೆಂದು ??

ಮೋದಿ ತನ್ನ ವಿರೋಧಿಗಳ ಕ್ಷುಲ್ಲಕ ಟೀಕೆಗಳಿಗೆ ಇದುವರೆಗೆ ಎದುರು ಮಾತನಾಡಿಲ್ಲ. ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಪ್ರಯತ್ನಿಸಿಲ್ಲ. ಗಮನಿಸಿ ಕಾಂಗ್ರೆಸಿಗರ ಹಗರಣಗಳನ್ನು ಹಿಡಿದು ಹಲವರನ್ನು ಹೆಡೆಮುರಿ ಕಟ್ಟಿ ಮಲಗಿಸಿ ಚುನಾವಣೆಯಿಂದ ದೂರ ಸರಿಸಬಹುದಿತ್ತು, ಆದರೆ ಹಾಗೆ ಮಾಡಲಿಲ್ಲ. ಅದೇ ಸಮಯದಲ್ಲಿ, ಮೋದಿ ಕೇವಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆತನನ್ನು ರಾಜಕೀಯವಾಗಿ ದೈಹಿಕವಾಗಿ ಮುಗಿಸಲು ಪಟ್ಟ ಪ್ರಯತ್ನಗಳೆಷ್ಟೆಂಬುದನ್ನು ನೆನಪಿಸಿಕೊಳ್ಳಿ. ಆದರೆ ಮೋದಿ ಆ ಯಾವುದಕ್ಕೂ ಸೇಡು ತೀರಿಸಿಕೊಳ್ಳಲು ಹೋಗಿಲ್ಲ. ನನ್ನಂತಹ ಹಲವರಿಗೆ ಮೋದಿ ಸೇಡು ತೀರಿಸಿಕೊಳ್ಳಲಿ ಎಂಬ ಆಸೆಯಿದೆ, ಅದು ಮೋದಿಗೂ ಗೊತ್ತಿದೆ.


ಮೋದಿ ದೇಶಕ್ಕೆ ಯಾವುದು ಹಿತವೋ, ದೇಶದ ಜನರಿಗೆ ಯಾವುದು ಒಳಿತೊ ಅದನ್ನು ಮಾಡಿ ಕೊಂಡು ಹೋಗುತ್ತಾರೆ. “ಅದನ್ನಷ್ಟೇ ಮಾತ್ರ ಮಾಡುತ್ತಾರೆ”. ಕೆಲವೊಮ್ಮೆ ಅವರ ನಿರ್ಧಾರಗಳು ಜನರಿಗೆ ಕಷ್ಟವಾಗಬಹುದು, ಔಷಧಿ ಕಹಿಯಾದರೂ ಅದು ರೋಗ ವಾಸಿಯಾಗುವ ದೃಷ್ಟಿಯಿಂದ ನೋಡಬೇಕಷ್ಟೆ.

ಅದನ್ನು ಅರಿಯದಷ್ಟು ಮೂರ್ಖ ಮತದಾರರಿದ್ದರೆ ಅಂತಹ ದೇಶವನ್ನು ಮೋದಿಯಲ್ಲ ದೇವರೆ ಬಂದರೂ ಉದ್ದಾರ ಮಾಡಲಾಗಲ್ಲ. ಅರಿಯುವ ಬುದ್ದಿವಂತ ಮತದಾರನಾದರೆ ಮೋದಿ ಚುನಾವಣೆಗಾಗಿ ಕೆಲಸ ಮಾಡಬೇಕಿಲ್ಲ. ಇಷ್ಟಕ್ಕೂ ಮೋದಿಗೆ ಪರ್ಯಾಯ ವ್ಯಕ್ತಿ ತೋರಿಸಿ ನಂತರ ಯೋಚಿಸೋಣ. ಪರ್ಯಾಯ ವ್ಯಕ್ತಿ ಸಿಗುವವರೆಗೂ ಮೋದಿನೇ ಇರ್ಲಿ.

ಶೇರ್ ಮಾಡಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಇದು ಮುಟ್ಟಬೇಕು

 •  
  9.1K
  Shares
 • 9.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com