Connect with us
Loading...
Loading...

ಪ್ರಚಲಿತ

ಚೀನಾದ ನರನಾಡಿಗಳು ಗೊತ್ತಿರುವ ಈ ಅಧಿಕಾರಿಗೆ ಮೋದಿ ನೀಡಲಿದ್ದಾರೆ ದೊಡ್ಡ ಜವಾಬ್ದಾರಿ!!! ಆ ವ್ಯಕ್ತಿ ಯಾರು ಗೊತ್ತೆ?

Published

on

 • 2.4K
 •  
 •  
 •  
 •  
 •  
 •  
 •  
  2.4K
  Shares

ಭಾರತ ಮತ್ತು ಚೀನಾ ನಡುವೆ ಇರುವ ವೈರತ್ವದ ಬಗ್ಗೆಯಂತೂ ನಿಮಗೆಲ್ಲಾ ಗೊತ್ತೇ ಇದೆ, ಆದರೆ ಚೀನಾ ಪಾಕಿಸ್ತಾನದ ಹಾಗೆ ಭಾರತದ ಜೊತೆ ವೈರತ್ವವನ್ನ ಕಟ್ಟಿಕೊಂಡಿಲ್ಲ, ಬದಲಾಗಿ ಒಂದು ರೀತಿಯ ಕೋಲ್ಡ್ ವಾರ್, ಅಂದರೆ ಬೆನ್ನಿಗೆ ಚೂರಿ ಹಾಕುತ್ತ ಭಾರತದ ವೈರತ್ವವನ್ನ ಕಟ್ಟಿಕೊಂಡಿದೆ.

ಇದೇ ಚೀನಾ ಕೆಲ ತಿಂಗಳ ಹಿಂದೆ ಭಾರತದ ಗಡಿ ಪ್ರದೇಶವಾದ ಡೋಕ್ಲಾಂ ನಲ್ಲಿ ತನ್ನ ಸೈನಿಕರನ್ನ ಜಮಾವಣೆಗೊಳಿಸಿತ್ತು. ಡೋಕ್ಲಾಂ ಭಾರತದ ಪ್ರದೇಶವಾದರೂ ಚೀನಾ ಅದು ನನ್ನ ಜಾಗ ಅನ್ನೋ ಕ್ಯಾತೆ ಭಾರತದ ಜೊತೆ ತೆಗೆಯುತ್ತಲೇ ಇತ್ತು. ಇನ್ನೇನು ಭಾರತ ಚೀನಾ ನಡುವೆ ಯುದ್ಧ ನಡೆದೇ ಬಿಡುತ್ತೇನೋ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿ ಬಿಟ್ಟಿತ್ತು.

ಆದರೆ ಈ ದೇಶದಲ್ಲೀಗ ಮಾತೇ ಆಡದೆ 10 ವರ್ಷ ಬಾಯಿಮುಚ್ಚಿಕೊಂಡು ಕೂತಂತಹ ಪ್ರಧಾನಿಯಿಲ್ಲ, ಏಟಿಗೆ ಎದುರೇಟು ನೀಡುವಂತಹ ಸಮರ್ಥ ಪ್ರಧಾನಿಯಾದ ಮೋದಿ ಅಧಿಕಾರದ ಗದ್ದುಗೆ ಮೇಲೆ ಕೂತಿದ್ದಾರೆ.

ಪ್ರಧಾನಿ ಮೋದಿ ಯಾಕೆ ಸದಾ ವಿದೇಶ ಪ್ರವಾಸ ಮಾಡ್ತಾರೆ? ಅವರು ಭಾರತದ NRI ಪ್ರಧಾನಿ, ಹಾಗೆ ಹೀಗೆ ಅಂತ ವಿರೋಧಿಗಳು ಅವರನ್ನ ದೂಷಿಸುತ್ತಲೇ ಇರುತ್ತಾರೆ. ಅದನ್ನ ತೆವಲು ಅಂತಲೂ ಕರೀಬಹುದೇನೋ. ಕೈಲಾಗದಿದ್ದವನು ಮೈ ಪರಚಿಕೊಂಡ ಅನ್ನೋದು ಅವರ ಸ್ಥಿತಿ.

ಮೋದಿ ವಿದೇಶ ಪ್ರವಾಸಕ್ಕೆ ಸುಮ್ಮನೇ ಹೋಗಲ್ಲ, ದೇಶ ವಿದೇಶಗಳ ಜೊತೆ ಮಹತ್ವದ ಒಪ್ಪಂದಗಳನ್ನ ಮಾಡಿಕೊಂಡು ದೇಶದ ರಕ್ಷಣೆಗೆ ಬೇಕಾದ ಎಲ್ಲ ವಿಷಯಗಳನ್ನೂ ಚರ್ಚಿಸಿ ಬರೋರಿ ಮೋದಿ.

ಚೀನಾ ವಿಷ್ಯದಲ್ಲೂ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿ ಫಲಪ್ರದವಾಗಿತ್ತು. ಜಗತ್ತಿನ ಹಲವು ರಾಷ್ಟ್ರಗಳು ಈಗಾಗಲೇ ಭಾರತದ ಬೆನ್ನಿಗೆ ನಿಂತಿವೆ, ಇದೇ ಕಾರಣದಿಂದ ಚೀನಾ ಭಾರತವೆಂದರೆ ಪದರುಗುಟ್ಟುವಂತಾಗಿದೆ.

ಭಾರತವನ್ನ 1962 ರಲ್ಲೇನೋ ಸೋಲಿಸಿರಬಹುದು ಆದರೆ ಆಗಿನ ಭಾರತದ ಪರಿಸ್ಥಿತಿ, ನಾಯಕತ್ವಕ್ಕೂ ಈಗಿನ ಪರಿಸ್ಥಿತಿ, ನಾಯಕತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಅನ್ನೋದು ಚೀನಾಗೆ ಅರ್ಥವಾಗಿದೆ. ಹಾಗಾಗಿಯೇ ಡೋಕ್ಲಾಂ ಪ್ರದೇಶದ ತನ್ನ ಸೈನ್ಯವನ್ನ ಸೈಲೆಂಟಾಗಿ ಚೀನಾ ವಾಪಸ್ ಕರೆಸಿಕೊಂಡಿತ್ತು.

ಈಗ ಅದೇ ಚೀನಾದ ನರನಾಡಿಗಳು ಗೊತ್ತಿರುವ ವ್ತಕ್ತಿಯೊಬ್ಬರಿಗೆ ಪ್ರಧಾನಿ ಮಹತ್ವದ ಹುದ್ದೆಯೊಂದನ್ನ ಕೊಡಲು ನಿರ್ಧರಿಸಿದ್ದಾರೆ. ಭಾರತ ಮತ್ತು ಚೀನಾ ನಡುವಣ ವಿವಾದವನ್ನ ತನ್ನ ಚಾಣಾಕ್ಷತನದಿಂದ ಬಗೆಹರಿಸಿದ್ದ ವಿಜಯ್ ಕೇಶವ್ ಗೋಖಲೆಯವರನ್ನ ದೇಶದ 31 ನೆಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಿದ್ದಾರೆ ಪ್ರಧಾನಿ ಮೋದಿ.

ಶ್ರೀ ವಿಜಯ್ ಕೇಶವ್ ಗೋಖಲೆಯವರು 1981 ರ ಬ್ಯಾಚಿನ ವಿದೇಶಾಂಗ ಸೇವೆಯ ಅಧಿಕಾರಿಯಾದ ಎಸ್.ಜಯಶಂಕರ್ ರವರ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.

ಇಲ್ಲಿ ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ಭಾರತ ಮತ್ತು ಚೀನಾ ನಡುವಿನ ವಿವಾದದ ಬಿಸಿ ನೋಡಿದ ಪ್ರಧಾನಿ ಮೋದಿ ಈ ಸಮಸ್ಯೆಯನ್ನ ಬಗೆಹರಿಸಲು ಚೀನಾ ಕುರಿತಾದ ವಿಶೇಷಜ್ಞ ಅಂತಲೇ ಹೆಸರುವಾಸಿಯಾಗಿರುವ ಇದೇ ವಿಜಯ್ ಗೋಖಲೆಯವರಿಗೆ ಜವಾಬ್ದಾರಿ ವಹಿಸಲಾಗಿತ್ತು.

ಶ್ರೀ.ವಿಜಯ್ ಗೋಖಲೆಯವರು ಕಳೆದ ವರ್ಷ ಭಾರತ ಹಾಗು ಚೀನಾ ಸೇನೆಗಳ ನಡುವಿನ 73 ದಿನಗಳ ಡೋಕ್ಲಾಂ ಶೀತಲಸಮರದ ಸಮಸ್ಯೆಯನ್ನ ಬಹಳ ಸಲೀಸಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದರು.

ಗೋಖಲೆಯವರು ಭಾರತದ ಕಟುನೀತಿಯಲ್ಲಿ ಜಯಗೊಳಿಸುವುದರ ಜೊತೆ ಜೊತೆಗೆ ಮತ್ತೆ ಚೀನಾ ಭಾರತದತ್ತ ಕಣ್ಣು ಹಾಯಿಸಿ ನೋಡೋಕೂ ಆಗದಂತೆ ಮಾಡಿದ್ದರು.

ಚೀನಾದ ಸಾಮ್ರಾಜ್ಯಶಾಹಿ ಅಹಂಕಾರದ ಡೋಕ್ಲಾಮ್ ವಿವಿದವನ್ನು ಹೆಡೆಮುರಿ ಕಟ್ಟಿದ್ದ ಭಾರತ. ಅದರ ಯಶಸ್ಸಿಗೆ ಕಾರಣ ಕಾರಣರಾದವರಲ್ಲಿ ಶ್ರೀ.ವಿಜಯ್ ಗೋಖಲೆಯವರು ಒಬ್ಬರು.

ಅಷ್ಟಕ್ಕೂ ಡೋಕ್ಲಾಮ್ ವಿವಾದವೇನು ಗೊತ್ತಾ?

ಈಗ ಡೊಕ್ಲಮ್‍ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ, ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಸಮಸ್ಯೆ ನಿವಾರಣೆಗೆ ಮಾತುಕತೆಯ ಪರಿಹಾರ ಸಿಗಬೇಕಾದರೆ ಭಾರತ ಅಲ್ಲಿಂದ ಜಾಗ ಖಾಲಿಮಾಡಬೇಕೆಂಬ ಚೀನಾದ ಬೇಡಿಕೆ ಸೋತಿದೆ. ಪ್ರತಿಯೊಂದು ಸಂದರ್ಭದಲ್ಲಿ ಟಿಪಾಯಿ ಮೇಲೆ ಏನಿರಬೇಕೆಂದು ನಿರ್ಧರಿಸುವ ಚೀನಾದ ಷರತ್ತು ಈ ಬಾರಿ ಚಲಾವಣೆಯಾಗಿಲ್ಲ.

ಭಾರತ-ಚೀನಾ ಗಡಿಯ ಲಡಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ, “ಮ್ಯಾಕ್ ಮೋಹನ್” ಗಡಿ ಅಸ್ಪಷ್ಟ ಕಾಲ್ಪನಿಕ ರೇಖೆಯೆಂಬ ಕಾರಣನೀಡಿ ಆಗಾಗ ಸೇನೆಗಳ ನಡುವೆ ಸಣ್ಣ ಮಟ್ಟಿನ ಗಡಿದಾಟುವಿಕೆ ಸಹಜವೆಂಬಂತೆ ನಿರಂತರವಾಗಿ ನಡೆದಿತ್ತು. ಆದರೆ ಡೊಕ್ಲಮ್ ಬಿಕ್ಕಟ್ಟನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ. ಇದೊಂದು ವಿಶೇಷ ಸಂದರ್ಭ. ಇದು ಕೂಡಾ ರಾಜತಾಂತ್ರಿಕ ಸಾಧನೆ. ಈ ಸಾಧನೆಯಲ್ಲಿ ಶ್ರೀ.ವಿಜಯ್ ಗೋಖಲೆಯವರ ಕೈಚಳಕವಿದೆ.

ಪ್ರಧಾನಮಂತ್ರಿ ಅಧ್ಯಕ್ಷತೆಯ ಕ್ಯಾಬಿನೆಟ್ ನಿಯುಕ್ತಿ ಸಮಿತಿ(CCA)ಯು ಗೋಖಲೆಯವರನ್ನ ವಿದೇಶಾಂಗ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಲು ತೀರ್ಮಾನಿಸಿದೆ.

ವಿಜಯ್ ಗೋಖಲೆಯವರ ಕಾರ್ಯಕಾಲ ಎರಡು ವರ್ಷದ್ದಾಗಿರುತ್ತದೆ. ವಿದೇಶಾಂಗ ಕಾರ್ಯದರ್ಶಿಯ ಕಾರ್ಯ ಕಾಲ ಎರಡು ವರ್ಷದ್ದಾಗಿರುತ್ತದೆ.

ವಿಜಯ್ ಗೋಖಲೆಯವರ ಬಗ್ಗೆ ಇನ್ನೂ ಹೇಳಬೇಕೆಂದರೆ ಅವರು ಚೀನಾದಲ್ಲಿ ಭಾರತದ ರಾಜದೂತರಾಗಿತೂ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆ ಜೊತೆಗೆ 2013 ರಿಂದ 2016 ರವರೆಗೆ ಇವರು ಜರ್ಮನಿಯ ಭಾರತ ರಾಯಭಾರಿ ಕಛೇರಿಯಲ್ಲೂ ರಾಜದೂತರಾಗಿ ಕಾರ್ಯನಿರ್ವಹಿಸಿದ್ದಾರೆ.

ನ್ಯೂಯಾರ್ಕ್‌, ಹನೋಯಿ, ಹಾಂಗಕಾಂಗ್, ಬೀಜಿಂಗ್ ನಲ್ಲೂ ಭಾರತೀಯ ಮಿಷನ್ ಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ವಿದೇಶಾಂಗ ಸಚಿವಾಲಯದ ವತಿಯಿಂದ ಚೀನಾದ ನಿರ್ದೇಶಕರಾಗಿ ಹಾಗು ಏಷ್ಯಾ ಸಂಯುಕ್ತ ರಾಷ್ಟ್ರಗಳ ಪದವಿಯ ಮೂಲಕವೂ ಭಾರತಕ್ಕೆ ಮಹತ್ವದ ಕೊಡುಗೆಗಳನ್ನ ನೀಡಿದ್ದಾರೆ.

ಗೋಖಲೆಯವರಿಗೆ ವಿದೇಶಾಂಗ ಕಾರ್ಯದರ್ಶಿಯ ಸ್ಥಾನ ಸಿಗುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತಷ್ಟು ಬಲಿಷ್ಟವಾಗುವುದರಲ್ಲಿ ಸಹಾಯಕವಾಗಲಿದೆ ಎಂದೇ ಹೇಳಲಾಗುತ್ತಿದೆ.

ಗಣರಾಜ್ಯೋತ್ಸವದ ದಿನ ಮೋದಿಯವರು ಚೀನಾಗೆ ಖೆಡ್ಡಾಗೆ ಬೀಳಿಸುವ ತಂತ್ರವನ್ನು ರೂಪಿಸಿದ್ದರು. ಮೊದಲೇ ಡೋಕ್ಲಾಮ್ ವಿವಾದದಲ್ಲಿ ಸೋತ ಚೀನಾ ಈ ಸುದ್ದಿ ಗೊತ್ತಾದೊಡನೆ ಬೆವೆತು ಹೋಗಿದೆ. ಗಣರಾಜ್ಯೋತ್ಸವದ ದಿನ ಚೀನಾದ ವೈರಿ ರಾಷ್ಟ್ರಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆಸಿ, ಚೀನಾಗೆ ಬಿಸಿ ಮುಟ್ಟಿಸಿದ್ದರು‌.

ಚೀನಾದ ಬದ್ಧವೈರಿಗಳನ್ನು ಮೋದಿಯವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದಿರುವ ಉದ್ದೇಶವೇನಿತ್ತು ಗೊತ್ತಾ?

ಚೀನಾದ ವೈರಿ ರಾಷ್ರದ ಅತಿಥಿಗಳನ್ನು ಗಣರಾಜ್ಯೋತ್ಸವಕ್ಕೆ ಕರೆಸಿದ್ದು ಭಾರತದ ಶಕ್ತಿ ಪ್ರದರ್ಶನವನ್ನು ಇಡೀ ವಿಶ್ವಕ್ಕೆ ತೋರಿಸುವುದರ ಹಿಂದೆ ಚೀನಾಕ್ಕೆ ಎಚ್ಚರಿಸುವ ಸಂದೇಶವಿದೆ. ಈಗಾಗಲೆ ಬೆದರಿರುವ ಚೀನಾ ಈ ಸುದ್ದಿಯನ್ನು ಕೇಳಿದ ಚೀನಾ ಹೆದರಿದೆ.

ಈಗ ಭಾರತ ಮತ್ತು ಚೀನಾ ನಡುವಣ ವಿವಾದವನ್ನ ತನ್ನ ಚಾಣಾಕ್ಷತನದಿಂದ ಬಗೆಹರಿಸಿದ್ದ ವಿಜಯ್ ಕೇಶವ್ ಗೋಖಲೆಯವರನ್ನ ದೇಶದ 31 ನೆಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಿದ್ದಾರೆ ಪ್ರಧಾನಿ ಮೋದಿ. ಇದರಿಂದ ಚೀನಾಕ್ಕೆ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದಂತಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರವೂ ದೇಶದ ಹಿತ ಹಾಗು ಅಖಂಡತೆಯನ್ನ ಉಳಿಸುವ ಸಲುವಾಗಿಯೇ ಇರುತ್ತದೆ ಅನ್ನೋದು ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ.

– Team Nationalist Views

 •  
  2.4K
  Shares
 • 2.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com