Connect with us
Loading...
Loading...

ಪ್ರಚಲಿತ

ಇನ್ಮುಂದೆ ದೇಶದ ಜನತೆಗೆ ನೀರಿನ ಸಮಸ್ಯೆಯೇ ಇರೋದಿಲ್ಲ!!! ಮೋದಿ ಹಾಕಿದ್ದಾರೆ ಮಾಸ್ಟರಪ್ಲ್ಯಾನ್!! ಏನದು ಗೊತ್ತಾ?

Published

on

 • 6.4K
 •  
 •  
 •  
 •  
 •  
 •  
 •  
  6.4K
  Shares

ರಾಜ್ಯದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಭುಗಿಲೆದ್ದಿದೆ. ಮಹಾದಾಯಿ ನೀರಿಗಾಗಿ ಉತ್ತರ ಕರ್ನಾಟಕದ ರೈತರು, ಸಾಮಾನ್ಯ ಜನರು ಕಳೆದ 900 ದಿನಗಳಿಂದ ಅಂದರೆ ಸರಿಸುಮಾರು 4 ವರ್ಷಗಳಿಂದ ಧರಣಿ, ಸತ್ಯಾಗ್ರಹ, ರಸ್ತೆ ತಡೆ, ಬಂದ್ ಮಾಡುವ ಮೂಲಕ ಪ್ರತಿಭಟನೆಗಳನ್ನ ಮಾಡುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರ ಮಾತ್ರ ಇದನ್ನ ಪರಿಹರಿಸುವ ಗೋಜಿಗೂ ಹೋಗದೆ ರೈತರನ್ನ, ವಿವಿಧ ಸಂಘಟನೆಗಳಿಗೆ ಪ್ರಧಾನಿ ಮೋದಿಯತ್ತ ಬೊಟ್ಟು ಮಾಡಿ ಇದಕ್ಕೆ ನಾವೇನೂ ಮಾಡಕ್ಕಾಗಲ್ಲ,‌ ಮೋದಿ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ ಅಂತ ಪ್ರಧಾನಿ ಮೋದಿಯನ್ನ ಈ ವಿವಾದಕ್ಕೆ ಅನಗತ್ಯವಾಗಿ ಎಳೆದು ತರಲಾಗುತ್ತಿದೆ.

ನಿಜ ಪ್ರಧಾನಿ ಮೋದಿ ಈ ಸಮಸ್ಯೆಯನ್ನು ಬಗೆಹರಿಸೋದಕ್ಕೆ ಮುಂದಾಗಬೇಕು ಆದರೆ ಗೋವಾ ಹಾಗು ಕರ್ನಾಟಕ ಎರಡೂ ರಾಜ್ಯಗಳು ಒಮ್ಮತದ ನಿರ್ಧಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ಇತ್ತ ರಾಜ್ಯ ಕಾಂಗ್ರೆಸ್ ಮನೋಹರ್ ಪಾರಿಕ್ಕರ್ ನೇತೃತ್ವದ ಗೋಚಾ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಅತ್ತ ಗೋವಾದಲ್ಲಿನ ಕಾಂಗ್ರೆಸ್ ಒಂದು ಹನಿ ನೀರನ್ನೂ ಬಿಡೋಕೆ ನಾವು ಒಪ್ಪಲ್ಲ ಅಂತ ಪಟ್ಟು ಹಿಡಿದಿದೆ.

ಅತ್ತ ತಮಿಳುನಾಡು ಮತ್ತೆ ಕಾವೇರಿ ನದಿ ನೀರಿಗಾಗಿ ಕ್ಯಾತೆ ತೆಗೆದಿದೆ. ಈಗಲೇ ತಮಿಳುನಾಡಿಗೆ ನೀರು ಹರಿಸಿ ಅಂತ ಕೇಳಿದೆ. ಇದಕ್ಕೆ ಮೊದಲ ರಿಯಾಕ್ಷನ್ ನಂತೆ ಸಿದ್ದರಾಮಯ್ಯನವರು ರಾತ್ರಿ “ನಮಗೇ ನೀರಿಲ್ಲ ನಿಮಗೆಲ್ಲಿಂದ ಬಿಡೋದು” ಅಂತ ಹೇಳಿ ಬೆಳಿಗ್ಗೆ ಅನ್ನೋಷ್ಟೊತ್ತಿಗೆ ನೀರು ಹರಿಸಿಬಿಟ್ಟರು.

ಅತ್ತ ಆಂದ್ರಪ್ರದೇಶ ಕೂಡ ಕೃಷ್ಣಾ ನದಿ ನೀರಿಗಾಗಿ ಕರ್ನಾಟಕದ ಜೊತೆ ಮುನಿಸಿಕೊಂಡಿದೆ. ಅಷ್ಟಕ್ಕೂ ಇನ್ನೂ ಎಲ್ಲಿವರೆಗೆ ಈ ನೀರಿನ ಸಮಸ್ಯೆ? ದಶಕಗಳೇ ಕಳೆದರೂ ಇನ್ನೂ ರಾಜ್ಯ ರಾಜ್ಯಗಳ ನಡುವೆ ನದಿ ನೀರಿಗಾಗಿ ಒಂದು ರೀತಿಯ ಕೋಲ್ಡ್ ವಾರ್ ನಡೆಯುತ್ತಲೇ ಇವೆ. ಹಾಗಾದರೆ ಈ ನೀರಿನ ಸಮಸ್ಯೆಗೆ ದೇಶದಲ್ಲಿ ಪರಿಹಾರವೇ ಇಲ್ಲವಾ?

ಇದೆ.. ಆ ಪರಿಹಾರವನ್ನ ಪ್ರಧಾನಿ ಮೋದಿ ಪರಿಹರಿಸಲಿದ್ದಾರೆ.
ತಮ್ಮ ಮಾಸ್ಟರ್ ಪ್ಲ್ಯಾನ್ ಮೂಲಕ ದೇಶದ ಕುಡಿಯುವ ನೀರಿನ ಸಮಸ್ಯೆಯನ್ನ ಶಾಶ್ವತವಾಗಿ ಪರಿಹರಿಸುವ ಕಾರ್ಯಕ್ಕೆ ಪ್ರಧಾನಿ ಮೋದಿ ಕೈ ಹಾಕಿದ್ದಾರೆ.

ಅಷ್ಟಕ್ಕೂ ಆ ಮಾಸ್ಟರಪ್ಲ್ಯಾನ್ ಏನು ಗೊತ್ತಾ?

ದೇಶದ ಸುಮಾರು ​60 ನದಿಗಳನ್ನು ಜೋಡಿಸಿ ಅವುಗಳ ಮೂಲಕ ರಿವರ್ ಇಂಟರಲಿಂಕಿಂಗ್ ಮಾಡಲಿದ್ದಾರೆ ಪ್ರಧಾನಿ ಮೋದಿ.

ನಮ್ಮ ದೇಶದಲ್ಲಿರುವ ನದಿಗಳನ್ನ ಒಂದಕ್ಕೊಂದು ಇಂಟರ್ ಲಿಂಕ್ ಮಾಡಿ ಒಂದುಗೂಡಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.

ದೇಶದ ಪ್ರಮುಖ ನದಿಗಳನ್ನ ಒಂದಕ್ಕೊಂದು ಜೋಡಿಸಲು ಪ್ರಧಾನಿ ಮೋದಿ 5 ಲಕ್ಷ ಕೋಟಿ ರೂ.ಗಳ ಯೋಜನೆಯನ್ನ ಸದ್ಯದಲ್ಲೇ ಆರಂಭಿಸಲಿದೆ.

ರಿವರ್ ಇಂಟರಲಿಂಕಿಂಗ್(ನದಿ ಜೋಡಣೆ) ಯೋಜನೆಯ ಮೊಟ್ಟಮೊದಲ ಬಾರಿಗೆ ಕನಸು ಕಂಡಿದ್ದು ಭಾರತ ಕಂಡ ಶ್ರೇಷ್ಟ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು, ಆದರೆ ರಾಜಕೀಯ ಪಕ್ಷಗಳ ಕುತಂತ್ರದಿಂದ ವಾಜಪೇಯಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ವಾಜಪೇಯಿಯವರು ಕಂಡಿದ್ದ ರಿವರ್ ಇಂಟರಲಿಂಕಿಂಗ್ ಪ್ಲ್ಯಾನ್ ಅಲ್ಲಿಗೇ ನಿಂತುಹೋಯಿತು. ಕಾಂಗ್ರೆಸ್ ನೇತೃತ್ವದ UPA ಸರ್ಕಾರ ಅಧಿಕಾರಕ್ಕೆ ಬಂತು, ಅವರಿಗೋ ನದಿಯೂ ಬೇಕಾಗಿರಲಿಲ್ಲ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸೋದೂ ಬೇಕಾಗಿರಲಿಲ್ಲ.

ಎಲ್ಲಿ ಏನು ಕಾಣುತ್ತೋ ಅಲ್ಲಿ ಲೂಟಿ ಹೇಗೆ ಮಾಡಬೇಕು ಅನ್ನೋದಷ್ಟೇ ಕಣ್ಣಿಗೆ ಕಂಡು ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ದೇಶವನ್ನ ಎಷ್ಟರ ಮಟ್ಟಿಗೆ ಲೂಟಿ ಹೊಡೆಯಬಹುದೋ ಅಷ್ಟು ಲೂಟಿ ಹೊಡೆದೇ ಬಿಟ್ಟರು.

ಅದಕ್ಕೇ ಅಲ್ವಾ ಇಡೀ ಜಗತ್ತಿನ ಅತೀ ಭ್ರಷ್ಟ 10 ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ಸಿಗೆ 4ನೇ ಸ್ಥಾನ ಸಿಕ್ಕಿರೋದು.

ಅದಿರಲಿ,‌ ಪ್ರಧಾನಿ ಮೋದಿಯವರ ಯೋಜನೆಗೆ ಮರಳೋಣ.

ಪ್ರಧಾನಿ ಮೋದಿಯವರು ಅಟಲ್ ಬಿಹಾರಿ ವಾಜಪೇಯಿಯವರು ಕಂಡ ಕನಸನ್ನು ಈಡೇರಿಸಲು ಹಾಗು ರಾಷ್ಟ್ರದ ಜನತೆಗೆ ನೀರಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಕೊಡಿಸಲು ಯೋಜನೆಯೊಂದಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದೆ.

ಈ ಯೋಜನೆಯಿಂದ ಪ್ರವಾಹ ನಿರ್ವಹಣೆ ಹಾಗು ನೀರಿನ ಸಮಸ್ಯೆ ಬಗೆಹರಿಸುವುದಾಗಿದೆ.

ದೇಶದ 60 ಪ್ರಮುಖ ನದಿಗಳನ್ನ ಜೋಡಿಸುವ ಮೊದಲ ಹಂತದ ಕಾರ್ಯಕ್ಕೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ.

ದೇಶದ ಪ್ರಮುಖ 60 ನದಿಗಳ ಜೋಡಣೆಯಾದರೆ ರೈತರು ಮಳೆಗಾಲಕ್ಕಾಗಿ ಕಾಯುತ್ತ ಮಳೆಗಾಗಿ ನಿರೀಕ್ಷಿಸುತ್ತ ಕೂರುವ ಸ್ಥಿತಿ ಬದಲಾಗಲಿದೆ. ಇದರ ಜೊತೆ ಜೊತೆಗೆ ನದಿ ಜೋಡಣೆಯಿಂದ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನೂ ಮಾಡಬಹುದಾಗಿದೆ. ಒಂದೇ ಯೋಜನೆಯ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಈ ನದಿಜೋಡಣೆ ಯೋಜನೆಯಿಂದ ಸಿಗಲಿದೆ.

ಈ ಯೋಜನೆಯ ಕನಸು 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬಂದದ್ದು ಅವರು ಆರ್ಥರ್ ಕಾಟನ್ ಅವರ ಯೋಜನೆಯೊಂದನ್ನ ಅಧ್ಯಯನ ನಡೆಸಿದ ಮೇಲೆ. ಆರ್ಥರ್ ಕಾಟನ್ ಬ್ರಿಟಿಷ್ ಅಧಿಕಾರಿಯಾಗಿದ್ದ, ಆತ ಈ ನದಿ ಜೋಡಣೆಯ ರೂಪುರೇಷೆಯೊಂದನ್ನ ಆಗಿನ ಕಾಲದಲ್ಲಿ ಅಂದರೆ 19 ನೆ ಶತಮಾನದಲ್ಲಿಯೇ ಕಂಡಿದ್ದ.

ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದರೂ ಈ ಯೋಜನೆಯ ಅನುಷ್ಟಾನಕ್ಕೆ ಸ್ವತಂತ್ರ ಭಾರತದ ಯಾವ ಸರ್ಕಾರವೂ ನಿರ್ಧಾರ ಕೈಗೊಳ್ಳಲಿಲ್ಲ(ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನ ಹೊರತುಪಡಿಸಿ)

ಅಟಲ್ ಬಿಹಾರಿ ವಾಜಪೇಯಿಯವರು ಶುರು ಮಾಡಬೇಕೆಂದಿದ್ದ ಯೋಜನೆಯನ್ನ ಯುಪಿಎ ಸರ್ಕಾರ ಹಳ್ಳ ಹಿಡಿಸಿತು. ಈಗ ಪ್ರಧಾನಿ ಮೋದಿ ಅಟಲ್ ಜೀ ಕನಸನ್ನ ಸಾಕಾರಗೊಳಿಸಲು ಈ ಯೋಜನೆಗೆ ಮತ್ತೆ ಮರುಜೀವ ನೀಡಿದ್ದು ಇದೇನಾದರೂ ಕಾರ್ಯಗತವಾದರೆ ದೇಶದಲ್ಲಿ ನೀರಿಮ ಸಮಸ್ಯೆಯೇ ಇರುವುದಿಲ್ಲ, ರಾಜ್ಯ ರಾಜ್ಯಗಳ ನಡುವೆ ಸಂಘರ್ಷವಿರೋದಿಲ್ಲ, ರೈತನಿಗೆ ಮಳೆಗಾಗಿ ಕಾದು ಕೂರುವ ಪರಿಸ್ಥಿತಿ ಇರೋಲ್ಲ, ವಿದ್ಯುತ್ ಉತ್ಪಾದನೆ ತಾನೇ ತಾನಾಗಿ ಹೆಚ್ಚಾಗುತ್ತೆ. ಪ್ರವಾಹವನ್ನ ಸಮರ್ಥವಾಗಿ ನಿಭಾಯಿಸಲು ಈ ಯೋಜನೆ ಸಹಕಾರಿಯಾಗಲಿದೆ.

ಕಲಿಯುಗದ ಭಗೀರಥನಾಗಿ ಮುಂದೆ ಭಾರತೀಯರಿಗೆ ಕಂಡರೂ ಅದರಲ್ಲಿ ಸಂದೇಹವಿಲ್ಲ

 •  
  6.4K
  Shares
 • 6.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com