Connect with us
Loading...
Loading...

ಪ್ರಚಲಿತ

ಪಾಕ್ ವಿರುದ್ಧ ಮೋದಿ ಘರ್ಜನೆ.! ಭಾರತದಲ್ಲಿ ಅಣುಬಾಂಬ್ ಇರುವುದು ದೀಪಾವಳಿ ಆಚರಿಸೋಕಾ..?

Published

on

 •  
 •  
 •  
 •  
 •  
 •  
 •  
 •  

ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ನ ಒಂದೋಂದು ಹಗರಣಗಳನ್ನು ಬಯಲಿಗೆಳೆಯುವುದಷ್ಟೇ ಅಲ್ಲ ಪಾಕ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಇತ್ತಿಚಿಗಷ್ಟೇ ನಡೆದ ಪುಲ್ವಾಮ ದಾಳಿಯ ವಿರುದ್ಧವಾಗಿ ಏರ್ ಸರ್ಜಿಕಲ್ ಸ್ಟ್ರೈಕ್ ಉಗ್ರರಿಗೆ ಹಾಗೂ ಅವರನ್ನು ಬೆಳೆಸುತ್ತಿರುವ ಪಾಪಿ ನಡೆಸಿ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ನಡೆಸಿದ ಚುನಾವಣಾ ರ‌್ಯಾಲಿಯಲ್ಲಿ ಮತ್ತೆ ಸರ್ಜಿಕಲ್​ ಸ್ಟ್ರೈಕ್​ ಹಾಗೂ ಏರ್​ಸ್ಟ್ರೈಕ್​ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನವನ್ನು ತರಾಟೆ ತೆಗೆದುಕೊಂಡ ನರೇಂದ್ರ ಮೋದಿ, ಪಾಕಿಸ್ತಾನ ಸದಾ ತನ್ನ ಬಳಿ ಅಣುಬಾಂಬ್​, ಅದರ ಬಟನ್​ ಒತ್ತುತ್ತೇವೆ ಎನ್ನುತ್ತಲೇ ಇದೆ. ಹಾಗಾದರೆ ನಮ್ಮ ಬಳಿ ಇರುವ ಅಣುಬಾಂಬ್​ ದೀಪಾವಳಿ ಹಬ್ಬಕ್ಕಾ ಅಂತ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಅಣುಬಾಂಬ್​ನ ವಾರ್ನಿಂಗ್​ ಕೊಟ್ಟಿರುವ ಮೋದಿ ಕಾಂಗ್ರೆಸ್​ ಪಕ್ಷವನ್ನು ಕೂಡ ಟೀಕಿಸಿದ್ದಾರೆ.

1971 ರಲ್ಲಿ ಕಾಶ್ಮೀರದ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್​ ಸರ್ಕಾರಕ್ಕೆ ಸುವರ್ಣಾವಕಾಶ ಇತ್ತು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದ ಒತ್ತೆಯಾಳಾಗಿದ್ದ 90 ಸಾವಿರಕ್ಕೂ ಅಧಿಕ ಪಾಕ್​ ಸೈನಿಕರನ್ನ ರಿಲೀಸ್​ ಮಾಡಿದ ಅಂದಿನ ಕಾಂಗ್ರೆಸ್​ ಸರ್ಕಾರ, ಶತ್ರುರಾಷ್ಟ್ರ ವಶಕ್ಕೆ ಪಡೆದುಕೊಂಡಿದ್ದ ಕಾಶ್ಮೀರದ ಭಾಗವನ್ನು ವಾಪಸ್​ ಪಡೆಯುವ ಪ್ರಯತ್ನವನ್ನು ಶಿಮ್ಲಾ ಒಪ್ಪಂದದ ವೇಳೆ ಮಾಡಲಿಲ್ಲ ಅಂತಾ ದೂರಿದ್ರು. ಅಲ್ಲದೇ ಅದರ ಪರಿಣಾಮವನ್ನು ದೇಶವೀಗ ಎದುರಿಸುವಂತಾಗಿದೆ ಎಂದ ನರೇಂದ್ರ ಮೋದಿ, ಈಗ ಭಾರತ ಪಾಕಿಸ್ತಾನದ ಅಣುಬಾಂಬ್​ ಬೆದರಿಕಗೆ ಬಗ್ಗುವುದಿಲ್ಲ ಎಂದಿದ್ದಾರೆ.

ಭಾರತೀಯ ಸೈನಿಕರು ಯುದ್ಧವಿಲ್ಲದೇ , ಭಯೋತ್ಪಾದಕರನ್ನು ಹೊಡೆದುರಿಳಿಸಿದ್ದನ್ನು ಪ್ರಸ್ತಾಪಿಸಿದ ಮೋದಿ ನಮ್ಮ ಸರ್ಕಾರ ಬಲಿಷ್ಟ ಸರ್ಕಾರ ಅಂತಾ ಬಣ್ಣಿಸಿಕೊಂಡರು. ಅಲ್ಲದೇ ನಮ್ಮ ಸರ್ಕಾರ ಪಾಕಿಸ್ತಾನದ ಅಹಂಕಾರವನ್ನು ಹೊಡೆದುಹಾಕಿದ್ದಷ್ಟೆ ಅಲ್ಲದೇ ವಿಶ್ವದೆಲ್ಲೆಡೆ ಹಣಕ್ಕಾಗಿ ಭಿಕ್ಷೆ ಬೇಡುವಂತೆ ಮಾಡಿದ್ದೇವೆ ಎಂದಿದ್ದಾರೆ.

ಮತ್ತೆ ಪಾಕಿಸ್ತಾನ ಕ್ಯಾತೆ ತೆಗೆದರೆ ಈ ಬಾರಿ ಕಠಿಣ ಪರಿಸ್ಥಿತಿ ಎದುರಿಸಲಿದೆ, ನಮ್ಮ ಭಾರತೀಯ ಸೇನೆಯ ಬಳಿಯೂ “ಅಣು ಬಾಂಬ್ ಇರುವುದು ದೀಪಾವಳಿ ಆಚರಿಸುವುದಕ್ಕಲ್ಲ” ಎಂಬ ಖಡಕ್ ಸಂದೇಶ ಕೊಟ್ಟಿದ್ದಾರೆ ಅಂದರೇ ಈ ಬಾರಿ ಪಾಕ್ ಕೆಣಕಿದರೆ ಅಣು ಬಾಂಬ್ ಮೂಲಕ ಸರ್ವನಾಶ ಮಾಡಲಿದ್ದೆವೆ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೆ ಪಾಕ್ ಸುಮ್ಮನಿದ್ದರೇ ಸರಿ ಇಲ್ಲವಾದ್ದಲ್ಲಿ ಕೈ ಪರಚಿ ಮೈ ಸುಟ್ಟುಕೊಳ್ಳುವುದಂತೂ ಖಂಡಿತ.

-Gururaj Sahukar

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com