Connect with us
Loading...
Loading...

ಅಂಕಣ

ಶಾಕಿಂಗ್ ಎಕ್ಸಪೋಸ್: ಮದರ್ ತೆರೆಸಾ ಕುರಿತಾದ ಸ್ಪೋಟಕ, ಕರಾಳ ಸತ್ಯ ಬಯಲು ಮಾಡಿದ ಇಂಗ್ಲೆಂಡ್ ಸಂಶೋಧಕ; ಬೆಚ್ಚಿಬಿದ್ದ ಕ್ರಿಶ್ಚಿಯನ್ ಮಿಷ’ನರಿ’ಗಳು..!

Published

on

 • 4.2K
 •  
 •  
 •  
 •  
 •  
 •  
 •  
  4.2K
  Shares

ಮದರ್ ತೆರೆಸಾ ಕುರಿತಾದ ಇದೀಗ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ತೆರೆಸಾ ಒಬ್ಬ ಸಂತನ ವೇಷದಲ್ಲಿ ಕೇವಲ ಲೂಟಿಕೋರರಿಂದ ಕೇವಲ ಹಣವನ್ನಷ್ಟೆ ಪಡೆಯುತ್ತಿದ್ದಳಲ್ಲದೆ ಅನ್ಯಾಯ, ಅಕ್ರಮದ ಜೊತೆಗೂ ಕೂಡ ಕೈ ಜೋಡಿಸಿದ್ದಳು ಅನ್ನೋದು ಈ ಮಾಹಿತಿಯಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ. ಹೀಗಂತ ಹೇಳುತ್ತಿರೋದು ನಾವಲ್ಲ ಇಂತಹ ಸ್ಪೋಟಕ ಮಾಹಿತಿಯನ್ನ ಕ್ರಿಸ್ಟೋಫರ್ ಹಚೆನ್ಸ್ ರವರು ತಾವು ಬರೆದಿರುವ ‘ದಿ ಮಿಷನರೀಸ್ ಪೊಸೀಷನ್’: ಮದರ್ ತೆರೆಸಾ ಇನ್ ಥಿಯರಿ & ಪ್ರ್ಯಾಕ್ಟಿಸ್’ ಎಂಬ ಪುಸ್ತಕದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆ ಪುಸ್ತಕದಲ್ಲಿ ಮದರ್ ತೆರೆಸಾ ಗೆ ಚಾರ್ಲ್ಸ್ ಕೀಟಿಂಗ್ 252 ಲಕ್ಷ ಡಾಲರ್ ಗಳನ್ನ ನೀಡಿದ್ದ, ಈ ಹಣವನ್ನ ಆತ ಒಬ್ಬ ಜಡ್ಜ್ ಗೆ ಲಂಚದ ರೂಪದಲ್ಲಿ ನೀಡಿ ತನ್ನನ್ನ ಜೈಲಿನಿಂದ ಹೊರಬರುವಂತೆ ಮಾಡೋಕೆ ಆಕೆಗೆ ನೀಡಲಾಗಿದ್ದನಂತೆ. ಅಷ್ಟಕ್ಕೂ ಈ ಚಾರ್ಲ್ಸ್ ಕೀಟಿಂಗ್ ಯಾರಂತ ಗೊತ್ತಾ? ಚಾರ್ಲ್ಸ್ ಕೀಟಿಂಗ್ ಲಕ್ಷಾಂತರ ಅಮೇರಿಕನ್ನರ ಬೆವರು ಸುರಿಸಿ ಗಳಿಸಿದ್ದ ಸಾವಿರಾರು ಕೋಟಿ ಹಣವನ್ನ ಲೂಟಿ ಮಾಡಿ ಓಡಿ ಹೋದವನಾಗಿದ್ದ. ಈ ರೀತಿಯಾಗಿ ಲೂಟಿ ಮಾಡಿದ್ದ ಹಣದಿಂದ ಆತ ಐಷಾರಾಮಿ ಜೀವನ ನಡೆಸಿದ್ದಷ್ಟೇ ಅಲ್ಲದೆ ಅದರಲ್ಲಿನ ಹಣವನ್ನ ಆತ ಮದರ್ ತೆರೆಸಾಗೆ ನೀಡುತ್ತಿದ್ದನಂತೆ, ಸೇವೆಯ ಸೋಗಿನಲ್ಲಿ ಭಾರತಕ್ಕೆ ಬಂದು ತಾನು ಯೇಸುವಿನ ಅನುಯಾಯಿ, ಸಕಲ ಜೀವಿಯಲ್ಲೂ ದೇವರನ್ನ ಕಾಣ್ತೀನಿ ಅಂತಿದ್ದ ತೆರೆಸಾ ಲೂಟಿ ಮಾಡಿಕೊಂಡು ಬಂದು ನೀಡಿದ್ದ ಹಣವನ್ನ ಚಾರ್ಲ್ಸ್ ಕೀಟಿಂಗ್ ನಿಂದ ಯಾವುದೇ ಆಕ್ಷೇಪಣೆಯಿಲ್ಲದೆ ಸ್ವೀಕರಿಸುತ್ತಿದ್ದಳಂತೆ. ಈ ಕುರಿತಾಗಿ ಪಾಲ್ ಡಬ್ಲ್ಯೂ ಟರ್ಲಿ ಪತ್ರ ಬರೆದು ಮಾಹಿತಿ ಕೇಳಿದರೂ ತೆರೆಸಾ ಯಾವತ್ತೂ ಉತ್ತರವನ್ನೇ ಕೊಟ್ಟಿರಲಿಲ್ಲ.

ಚಾರ್ಲ್ಸ್ ಕೀಟಿಂಗ್ ಸಣ್ಣ ಮನೆಗಳನ್ನ ಕಡಿಮೆ ಖರ್ಚಿನಲ್ಲಿ ನಿರ್ಮಿಸಿ ಕೊಡುತ್ತೇನೆಂದು ಅಮೇರಿಕಾದ ಲಕ್ಷಾಂತರ ಜನರ ಸಾವಿರಾರು ಕೋಟಿ ಹಣವನ್ನ ಅವರಿಂದ ಪಡೆದುಕೊಂಡು ನಂತರ ಅವರೆಲ್ಲರಿಗೂ ಮೋಸ ಮಾಡಿ ಹಣದೊಂದಿದೆ ಪರಾರಿಯಾಗಿದ್ದ. ತಾನು ಲೂಟಿ ಮಾಡಿದ್ದ ಹಣವನ್ನ ಆತ ಒಂದೋ ತನ್ನ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡುತ್ತಿದ್ದ ಇಲ್ಲ ನನ್-ಕ್ಯಾಥೋಲಿಕ್ ಗಳ ವಿರುದ್ಧ ನಡೆಯುವ ಅಭಿಯಾನಕ್ಕಾಗಿ ದೇಣಿಗೆ ರೂಪದಲ್ಲಿ ನೀಡುತ್ತಿದ್ದ. ಇದೇ ಕಾರಣಕ್ಕಾಗಿ ಕೀಟಿಂಗ್ ಬರೋಬ್ಬರಿ 252 ಲಕ್ಷ ಡಾಲರ್ ನಷ್ಟು ಹಣವನ್ನ ಆತ ಮದರ್ ತೆರೆಸಾ ಗೆ ಕ್ರಿಶ್ಚಿಯನ್ ಮತದ ಪ್ರಚಾರಕ್ಕಾಗಿ ನೀಡಿದ್ದ. ಮೋಸದ ಹಣವಂತ ಗೊತ್ತಿದ್ದರೂ ತೆರೆಸಾ ಆ ಹಣವನ್ನ ಯಾವುದೇ ಪಾಪಪ್ರಜ್ಞೆಯಿಲ್ಲದೆಯೇ ಹಲ್ಲು ಗಿಂಜಿಕೊಂಡು ಸ್ವೀಕರಿಸಿದ್ದಳು.

ಲಕ್ಷಾಂತರ ಜನರ ಹಣವನ್ನ ಲೂಟಿ ಮಾಡಿದ್ದ ಕಾರಣಕ್ಕಾಗಿ ಕೀಟಿಂಗ್ ಗೆ ಸಜೆ ಆಗಬಹುದಂತ ಗೊತ್ತಿದ್ದರೂ ತೆರೆಸಾ ಆ ಹಣವನ್ನ ಸ್ವೀಕರಿಸಿದ್ದಳು. ಕ್ರಿಸ್ಟೋಫರ್ ಹಚೆನ್ಸ್ ಬರೆದ ಪುಸ್ತಕದಲ್ಲಿ ಬಯಲಾದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ತೆರೆಸಾ ಕೀಟಿಂಗ್ ನ್ನ ಎಷ್ಟು ಪ್ರೀತಿಸುತ್ತಿದ್ಳಂದ್ರೆ ಆಕೆ ಆತನನ್ನ ಜೈಲಿನಲ್ಲಿ ಕಂಬಿ ಎಣಿಸೋ ದೃಶ್ಯವನ್ನ ನೋಡೋಕೆ ಇಷ್ಟವೇ ಇರಲಿಲ್ಲವಂತೆ. ಇದೇ ಕಾರಣಕ್ಕಾಗಿ ಕೀಟಿಂಗ್ ನ ಹಗರಣದ ಕುರಿತಾಗಿ ತೆರೆಸಾ ಒಬ್ಬ ಜಡ್ಜ್ ಗೂ ಪತ್ರ ಬರೆದಿದ್ದಳು.

Charles Keating with Teresa

ಆ ಪತ್ರದಲ್ಲಿ ಆಕೆ ಬರೆದ ವಿಷಯವೇನಿತ್ತು ಗೊತ್ತಾ?

“ನಾನು ಕೀಟಿಂಗ್ ನ ವ್ಯವಹಾರದಿಂದ ಹಿಡಿದು ಆತನ ರಾಜಕೀಯದ ಬಗೆಗಿನ ಯಾವುದೇ ವಿಷಯಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಆದರೆ ಆತ ಒಬ್ನ ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯಾಗಿದ್ದಾನೆ ಅಂಥವರನ್ನ ಜೈಲಿನಲ್ಲಿರಿಸೋದು ತಪ್ಪು. ನೀವು ಆತ ತಪ್ಪು ಮಾಡಿದ್ದಾನೆಂದು ಅಂದುಕೊಂಡಿರಬಹುದು ಆದರೆ ಕೀಟಿಂಗ್ ನ ವಿಷಯದಲ್ಲಿ ನೀವು ಜೀಸಸ್ ನ ಧಾರ್ಮಿಕ ಭಾವನೆಗಳನ್ನ ಗಮನದಲ್ಲಿಟ್ಟುಕೊಂಡು ತೀರ್ಪು ನೀಡಬೇಕು” ಎಂದು ಜೀಸಸ್ ಹೆಸರೇಳಿಕೊಂಡು ಹೆಸರಿಸಲು ಯತ್ನಿಸಿದ್ದಳು.

ಆದರೆ ನ್ಯಾಯಾಲಯದ ಡೆಪ್ಯೂಟಿ ಅಟಾರ್ನಿ ಪಾಲ್ ಡಬ್ಲ್ಯೂ ಟರ್ಲಿ ತೆರೆಸಾ ಮುಖಕ್ಕೆ ಹೊಡೆದಂತೆ ಉತ್ತರ ನೀಡಿದ್ದಷ್ಟೇ ಅಲ್ಲದೆ ತೀಕ್ಷ್ಣವಾದ ಕಠಿಣ ಪ್ರಶ್ನೆಗಳನ್ನೂ ಕೇಳಿದ್ದರು. ಟರ್ಲಿ ಯವರ ಆ ಪ್ರಶ್ನೆಗಳಿಗೆ ತೆರೆಸಾ ಕಡೆಯಿಂದ ಯಾವ ಉತ್ತರವೂ ಬರಲೇ ಇಲ್ಲ. ತೆರೆಸಾಗೆ ಉತ್ತರ ನೀಡುತ್ತ ಟರ್ಲಿ ಯವರು ಹೀಗೆ ಹೇಳ್ತಾರೆ “ಒಂದು ವೇಳೆ ಕೀಟಿಂಗ್ ಒಳ್ಳೆಯ ವ್ಯಕ್ತಿಯೇ ಆಗಿದ್ದರೆ, ಆತನಿಗೆ ಜೀಸಸ್ ನ ಅನುಗ್ರಹವಾಗಿದ್ದರೆ ಆತ ಜನರ ಹಣವನ್ನ ಯಾವತ್ತೋ ಹಿಂದಿರುಗಿಸುತ್ತಿದ್ದ” ಎಂದಿದ್ದರು.

Teresa letter to Paul W Turley

ಟರ್ಲಿ ತಾನು ತೆರೆಸಾ ಗೆ ಬರೆದ ಪತ್ರದಲ್ಲಿ ಕೀಟಿಂಗ್ ನ ಪ್ರತಿಯೊಂದು ಪಾಪಕೃತ್ಯಗಳ ಬಗ್ಗೆಯೂ ವಿವರವಾಗಿ ಬರೆದಿದ್ದ. ಆ ಪತ್ರದಲ್ಲಿ ಅವರು “ಯಾವ ರೀತಿಯಲ್ಲಿ ಆತ ಸೋ ಕಾಲ್ಡ್ ಲೋಕಲ್ಯಾಣ ಕಾರ್ಯಕ್ಕಾಗಿ ಫಂಡಿಂಗ್ ಮಾಡುತ್ತಿದ್ದಾನೋ ಆ ಹಣವನ್ನ ಆತ ತಾನು ಲೂಟಿ ಹೊಡೆದಿದ್ದ ಆ ಬಡ ಜನರಿಗೆ ಎಂದೋ ವಾಪಸ್ ಮಾಡಬಹುದಾಗಿತ್ತು” ಎಂದು ತೆರೆಸಾ ಗೆ ಖಾರವಾಗಿಯೇ ಉತ್ತರಿಸಿದ್ದರು. ಆದರೆ ತೆರೆಸಾ ಕಡೆಯಿಂದ ಟರ್ಲಿಯವರ ಆ ಪ್ರಶ್ನೆಗಳಿಗೆ ತಾನು ಸಾಯುವವರೆಗೂ ಉತ್ತರ ಬರಲೇ ಇಲ್ಲ. ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ ಹರಾಮಿನಿಂದ ಗಳಿಸಿರುವ ಹಣವನ್ನ ಕೀಟಿಂಗ್ ನಿಂದ ಪಡೆದುಕೊಂಡ ತೆರೆಸಾ ಳಲ್ಲಿ ಪಾಪ ಪ್ರಜ್ಞೆ ಅನ್ನೋದು ಸತ್ತೇ ಹೋಗಿತ್ತು.

ಪ್ರಪಂಚದ ಪುರಾತನ ಗುಪ್ತಚರ ಏಜೆನ್ಸಿಯ ಮಾಜಿ ಮುಖ್ಯಸ್ಥ ಹಾಗು ಜಗತ್ತಿನ ಅತೀ ಶ್ರೀಮಂತ ಸಂಘಟನೆಯ ಪ್ರಮುಖನೊಬ್ಬನನ್ನ ಭೇಟಿಯಾಗುತ್ತಲಿದ್ದಳು ತೆರೆಸಾ. ಆ ಗುಪ್ತಚರ ಸಂಸ್ಥೆಗೆ ಯಾವುದೇ ರೀತಿಯ ತೆರಿಗೆಗಳೂ ಅನ್ವಯವಾಗುವುದಿಲ್ಲ. ಇಂತಹ ವ್ಯಕ್ತಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದನ್ನ ನೋಡಿದರೆ ಆಕೆ ಬೇರೆಯದ್ದೇ ರೀತಿಯ ನೆಟವರ್ಕ್ ಹೊಂದಿದ್ದಳು ಅನ್ನೋದು ಸಾಬೀತಾಗುತ್ತದೆಯಲ್ಲದೆ ಆಕೆ ಭಾರತಕ್ಕೆ ಯಾವ ಸಮಾಜ ಸೇವೆಯಾಗಲಿ ಅಥವ ಮಾನವನ ಸೇವೆಗಾಗಲಿ ಅಲ್ಲ ಬದಲಾಗಿ ಇಲ್ಲಿನ ಹಿಂದುಗಳನ್ನ ಮತಾಂತರಿಸುವ ಕಾರ್ಯದ ನಿಮಿತ್ತವೇ ಬಂದಿದ್ದಳನ್ನೋದು ಅರ್ಥವಾಗದ ವಿಷಯವೇನಲ್ಲ ಬಿಡಿ.

ಕ್ರಿಶ್ಚಿಯಾನಿಟಿಯನ್ನ ವಿಸ್ತಾರಗೊಳಿಸುವುದೇ ಆಕೆಯ ಕಾಯಕವಾಗಿತ್ತು & ಅದಕ್ಕಾಗಿ ಆಕೆಗೆ ಕ್ರಿಶ್ಚಿಯನ್ ಸಮುದಾಯದ ಶ್ರೀಮಂತ ಸಂಘಟನೆಗಳ, ವ್ಯಕ್ತಿಗಳಿಂದ ದುಡ್ಡೂ ಹರಿದು ಬರಿತ್ತಿತ್ತು. ಒಂದು ವೇಳೆ ಆಕೆ ನಿಜವಾಗಿಯೂ ಬಡವರ, ದೀನ ದಲಿತರ ಸೇವೆ ಮಾಡುವ ಉದ್ದೇಶದಿಂದಲೇ ಭಾರತಕ್ಕೆ ಬಂದಿದ್ದರೆ ರಾಂಚಿ ಜೊತೆ ಜೊತೆಯಲ್ಲಿಯೇ ಝಾರ್ಖಂಡ್ ನ ಹಲವು ಜಿಲ್ಲೆಗಳಲ್ಲಿ ಆಕೆಯ ಮೂಲಕ ಸ್ಥಾಪಿಸಲಾದ ಸಂಸ್ಥೆಗಳಲ್ಲಿ ಮಕ್ಕಳ ಮಾರಾಟದ ಪ್ರಕರಣಗಳಯ ಬೆಳಕಿಗೆ ಬರುತ್ತಲೇ ಇರಲಿಲ್ಲವೇನೋ.

ದುರ್ದೈವದ ಸಂಗತಿಯೆಂದರೆ ದುಡ್ಡಿಗಾಗಿ, ತನ್ನ ಮತದ ಪ್ರಚಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲವಳಾಗಿದ್ದ ಆಕೆಯನ್ನ ನಮ್ಮ ದೇಶದಲ್ಲಿ ಮದರ್ ತೆರೆಸಾ, ಸೇವೆಗೆ ಮತ್ತೊಂದು ಹೆಸರೇ ಮದರ್ ತೆರೆಸಾ ಅಂತೆಲ್ಲ ಆಕೆಯ ಪುತ್ಥಳಿಯನ್ನ ದೇಶದಲ್ಲಿ ತಲೆಯೆತ್ತುವಂತೆ ಮಾಡಿದ್ದು ದೇಶದ ಜನತೆಗೆ ಅದರಲ್ಲೂ ಹಿಂದುಗಳಿಗೆ ಮಾಡಿದ ಮಹಾ ದ್ರೋಹವೇ ಸರಿ.

– Vinod Hindu Nationalist

Ref: “The Missionary Position: Mother Teresa in Theory and Practice” by Christopher Hitchens

 •  
  4.2K
  Shares
 • 4.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com