Connect with us
Loading...
Loading...

ಪ್ರಚಲಿತ

ಮುಸ್ಲಿಂ ಇಮಾಮ್ ಗೋವಿನ ಬಗ್ಗೆ ಹೀಗೆ ಹೇಳಿದ್ದಕ್ಕೆ ಕೆಂಡಾಮಂಡಲವಾಗಿದ್ದಾರೆ ಕಟ್ಟರ್ ಮುಸಲ್ಮಾನರು!!! ಏನಂದಿದ್ದಾರೆ ಗೊತ್ತಾ ಆ ಇಮಾಮ್?

Published

on

 • 6.3K
 •  
 •  
 •  
 •  
 •  
 •  
 •  
  6.3K
  Shares

ಮುಸ್ಲಿಂ ಇಮಾಮ್ ಗಳು ಗೋಮಾತೆಯ ಕುರಿತಾಗಿ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ. ಇಮಾಮ್ ಗಳ ಈ ನಿರ್ಧಾರಕ್ಕೆ ಕಟ್ಟರ್ ಮುಸ್ಲಿಮರು ಸಿಕ್ಕಾಪಟ್ಟೆ ಗರಂ ಆಗಿದ್ದಾರಂತೆ.

ತಮ್ಮದೇ ಧರ್ಮದ ಇಮಾಮ್ ಗಳ ನಿರ್ಧಾರಕ್ಕೆ ಕಟ್ಟರ್ ಮುಸ್ಲಿರ್ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಗೊತ್ತಾ?

ಹಾಗಿದ್ದರೆ ಈ ಸ್ಟೋರಿ ಓದಿ!!!

ಘಜ್ನಿ-ಘೋರಿಯರಿಂದ ಹಿಡಿದು ಇತ್ತೀಚಿನ ಬುದ್ದಿಜೀವಿಗಳವರೆಗೆ ಎಲ್ಲರಿಗೂ “ಗೋವು” ಹಿಂದುಗಳ ಶ್ರದ್ಧಾ ಸಂಕೇತವೆನ್ನುವುದೊಂದೇ ಆಕ್ರೋಶ. ನಾವು ಪೂಜಿಸುತ್ತೇವೆ ಅನ್ನೋದೇ ಅದರ ಸಾವಿಗೆ ಕಾರಣವಾಯಿತಲ್ಲ ಅನ್ನೋದು ನೋವಿನ ಸಂಗತಿಯೋ, ಷಂಡತನವೋ ದೇವರೇ ಬಲ್ಲ.

ದಿನ ಬೆಳಗಾದರೆ ದನ ಕಳುವಾಗಿದೆ ಎಂಬ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಅಷ್ಟೇ ಯಾಕೆ ಕತ್ತಿ, ತಲವಾರ ತೆಗೆದು ಹೆದರಿಸಿ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುವವರೂ ಇದ್ದಾರೆ. ನಾವು ಪೂಜಿಸುವುದರಿಂದಲೋ ಏನೋ ಗೋವಿನ ಮೇಲೆ ಕೆಲವರಿಗೆ ಆಕ್ರೋಶವಿದೆ. ಅದರಲ್ಲೂ ಮುಸಲ್ಮನಾರಂತೂ ಗೋವನ್ನು ಕಂಡರೆ ಕಿಡಿ ಕಾರ್ತಾರೆ. ನಾವು ಆರಾಧಿಸುತ್ತೇವೆಂಬ ಕಾರಣಕ್ಕೆ ಬಲಿಯಾಗುತ್ತಿರುವುದು ಗೋವು ಅನ್ನುವುದೇ ವಿಪರ್ಯಾಸ.

ಭಾರತ ಕೋಮು ಸೌಹಾರ್ದದ ರಾಷ್ಟ್ರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವೆಂದು ಪದೇ ಪದೇ ಸಾಬೀತಾಗುತ್ತಲೇ ಇದೆ. ಅದೇನು ಗೊತ್ತಾ? ಕೆಲ ಮುಸಲ್ಮಾನರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಅಂತ ಬೆಂಬಲ ಕೊಡುತ್ತಿದ್ದಾರೆ. ಇದೇ ಅಲ್ವಾ ಕೋಮು ಸೌಹಾರ್ದತೆ ಉದಾಹರಣೆ.

ಇಮಾಮ್ ಗಳ ಸಮೂಹವೊಂದು ಗೋವನ್ನ ರಾಷ್ಟ್ರೀಯ ಪ್ರಾಣಿ ಅಂತ ಘೋಷಿಸಲು ನಿರ್ಧಾರ ಕೈಗೊಂಡಿದ್ದಾರೆ. ಹಿಂದುಗಳೂ ಕೂಡ ಗೋವನ್ನ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಅನೇಕ ವರ್ಷಗಳಿಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿವೆ, ಆಂದೋಲನಗಳೂ ನಡೆದಿವೆ, ಪ್ರತಿಭಟನೆಗಳೂ ನಡೆದಿವೆ.

ಏತನ್ಮಧ್ಯೆ ಈಗ ಹಿಂದುಗಳ ಕೂಗಿಗೆ ಮುಸಲ್ಮಾನರ ಕೂಗೂ ಹಿಂದುಗಳ ಅಭಿಯಾನಕ್ಕೆ ಆನೆ ಬಲ ತಂದಿದೆ.

ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ (AIIO) ನ ಮುಖ್ಯಸ್ಥ ಡಾ.ಇಮಾಮ್ ಉಮರ್ ಅಹ್ಮದ್ ಇಲಿಯಾಸಿ ಗೋವನ್ನ ಭಾರತದ ರಾಷ್ಟ್ರ ಪ್ರಾಣಿಯಾಗಿ ಘೋಷಿಸಬೇಕೆಂದು ಹೇಳಿದ್ದಾರೆ.

ಇದರಿಂದ ಅಮಾಯಕ ಗೋವುಗಳ ಹತ್ಯೆ ನಿಲ್ಲುತ್ತವೆ ಹಾಗು ಇದರ ಜೊತೆ ಜೊತೆಗೆ ಗೋವುಗಳ ರಕ್ಷಣೆಗಾಗಿ ಖಡಕ್ ಕಾನೂನನ್ನ ಜಾರಿಗೊಳಿಸಬೇಕು, ಗೋವನ್ನ ಕಡಿಯುವವರಿಗೆ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಜೈಲಿಗಟ್ಟುವಂತೆ ಮಾಡಬೇಕೆಂದು ಅವರು ಹೇಳಿದ್ದಾರೆ.

ಇಲಿಯಾಸಿ ಮಾತನಾಡುತ್ತ ಹೇಳ್ತಾರೆ “ಕೇವಲ ಹಿಂದೂ ಸಮಾಜವಷ್ಟೇ ಅಲ್ಲ ಬದಲಾಗಿ ದೇಶ್ ಸಮಸ್ತ ಮುಸ್ಲಿಂ ಸಮುದಾಯವೂ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡರೆ ಸ್ವಾಗತ ಮಾಡಿತ್ತೇವೆ” ಅಂದಿದ್ದಾರೆ

8 ನೆಯ ಭಾರತೀಯ ವಿದ್ಯಾರ್ಥಿಗಳ ಸಂಸದ್ ಕಾರ್ಯಕ್ರಮವನ್ನ ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿ (MIT WPU) ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ 8 ನೆಯ BCS ನ್ನು ಪುಣೆಯ MIT ಹಾಗು WPU ಜಂಟಿಯಾಗಿ ಆಯೋಜನೆ ಮಾಡಿದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸುತ್ತ ಮಾತನಾಡಿದ ಇಲಿಯಾಸಿ ಗೋವಿನ ವಿಷಯ ‘ರಾಷ್ಟ್ರನೀತಿ’ಗೆ ಸಂಬಂಧಿಸಿದೆ, ಇದರ ಜೊತೆಗೆ ತ್ರಿವಳಿ ತಲಾಕ್ ‘ಧರ್ಮನೀತಿ’ಗೆ ಸಂಬಂಧಿಸಿದ ವಿಷಯವಾಗಿದೆ ಎಂದರು.

ನಾವು ಜಾತಿ ಮತ ಪಂಥಗಳ ಎಲ್ಲೆ ಮೀರಿ ಬಂದು ಈ ವಿಷಯಗಳ ಬಗ್ಗೆ ಯೋಚನೆ ಮಾಡಬೇಕಿದೆ.

‘ತಲಾಕ್’ ಸಂಬಂಧವನ್ನ ಮುರಿಯುವ ಪ್ರಯಾಸವಾದರೆ ‘ನಿಕಾಹ್’ ಸಂಬಂಧವನ್ನ ವೃದ್ಧಿಗೊಳಿಸುವ ಪ್ರಕ್ರಿಯೆಯಾಗಿದೆ.

ಮದುವೆಯೆಂಬ ಸಂಬಂಧ ಗಂಡ ಮತ್ತಯ ಹೆಂಡತಿಯ ನಡುವಿನ ಪವಿತ್ರ ಅನುಬಂಧವಾಗಿದೆ. ಇಸ್ಲಾಮಿಕ್ ಕಾನೂನಿನ ಪ್ರಕಾರ ಕೇವಲ ಪತಿಯಷ್ಟೇ ಪತ್ನಿಯನ್ನ ತಲಾಕ್ ಹೇಳುವ ಅಧಿಕಾರವಿಲ್ಲ ಬದಲಾಗಿ ಪತ್ನಿಗೂ ತನ್ನ ಗಂಡನ ಜೊತೆ ಸಂಸಾರ ಮಾಡಲಾಗಲಿಲ್ಲ ಎಂದರೆ ಆತನಿಗೆ ಡೈವೊರ್ಸ್ ನೀಡಬಹುದಾಗಿದೆ.

ಆಲ್ ಇಂಡಿಯಾ ಇಮಾಮ್ ಸಂಘಟನೆ ಹಿಂದೂ ವಿವಾಹ ಅಧಿನಿಯಮದ ಮಾಡೆಲ್ ನ್ನ ನಮ್ಮ ಧರ್ಮದಲ್ಲೂ ಅಳವಡಿಸಿಕೊಳ್ಳುವ ಚಿಂತನೆ ನಡೆಸಿದ್ದೇವೆ.

ಈ ನಿಕಾಹ್ ನೀತಿಯಲ್ಲಿ ಆರ್ಬಿಟ್ರೇಷನ್ ಕ್ಲಾಸ್ ಕೂಡ ಸೇರ್ಪಡೆಗೊಳಿಸಲಾಗುತ್ತೆ, ಇದರಿಂದ ತಲಾಕ್ ನಂತಹ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬೀಳಲಿದೆ ಎಂದರು.

ಗೋಮಾತೆಯ ಬಗ್ಗೆ ನಾವು ಹೇಳುವುದಾದರೆ,
ಗೋಮಾತೆ ಕೇವಲ ಸಸ್ಯಾಹಾರಿಗಳಿಗೆ ಆಶಾಕಿರಣವಲ್ಲ, ಸ್ವತಃ ಮಾಂಸಾಹಾರಿಗಳ ಬದುಕಿಗೂ. ನೆನಪಿರಲಿ ಕೇವಲ ಕೃಷಿ ಆಧಾರಿತ ಅರ್ಥವ್ಯವಸ್ಥೆಗೆ ಮಾತ್ರ ಗೋವು ಸೀಮಿತವಾಗಿಲ್ಲ. ನಮ್ಮ ಭಾವನೆಗಳ ಭಾವವನ್ನು ಸಮರ್ಪಕವಾಗಿ ಅರ್ಥೈಸಬಲ್ಲ ಸಂಜೀವಿನಿ ಗೋವು.

ನಮಗೆ ಕಷ್ಟ ಎಂಬುದು ತಲೆದೋರಿದಾಗ ನಮ್ಮ ಬದುಕಿಗೆ ಬೆಳಕಾಗಬಲ್ಲಳು ಆಕೆ. ನಮ್ಮ ತಾಯಿ ನಮಗೆ ಹಾಲನ್ನು ಉಣಿಸುವುದನ್ನು ನಿಲ್ಲಿಸಿದಾಗ ಆಹಾರದ ಮುಂದಿನ ಹಂತ ನಮಗೆ ಪವಾಡದ ಮೂಲಕ ಲಭಿಸುವುದಲ್ಲ.

ಅದನ್ನು ದಯಪಾಲಿಸುವವಳು ಕರುಣಾಮೂರ್ತಿ ಗೋಮಾತೆ. ಒಂದಲ್ಲಾ ಒಂದು ಹಂತದಲ್ಲಿ ಆಕೆಯನ್ನು ಅವಲಂಬಿಸಿಯೇ ನಾವು ಬದುಕುತ್ತಿರುವುದು ಅಕ್ಷರಶಃ ಯಾರೂ ಅಲ್ಲಗಳೆಯಲಾಗದ ವಾಸ್ತವ ಸತ್ಯ.

ನಮ್ಮ ಜೀವನವನ್ನು ಸಮರ್ಥವಾಗಿ ಜೀವಿಸಲು ಆಧಾರವಾಗಿ ನಿಂತಿರುವ ಗೋವು ನಮ್ಮ ಬಾಳಿನ ಬೆಳಕಾಗಿದ್ದಾಳೆ. ನಮ್ಮ ಬದುಕಿನ ಎರಡನೆಯ ತಾಯಿಯಾಗಿ ಗೋವು ಪರಿವರ್ತನೆಯಾಗಿದ್ದಾಳೆ.

ಈ ನಿಟ್ಟಿನಲ್ಲಿ ಗೋವು ಪವಿತ್ರ. ನಾವು ದುಃಖದ ಸನ್ನಿವೇಶದಲ್ಲಿರುವಾಗ ತಾನೂ ದುಃಖಿಸುವ ಒಂದು ಪ್ರಾಣಿಯಿದ್ದರೆ ಅದು ಗೋವು. ಮಾನವನೊಂದಿಗೆ ಅನ್ಯೋನ್ಯವಾದ ಸಂಬಂಧವನ್ನು ಹೊಂದಿದ ಕಾರಣ ಆ ಮುಗ್ಧ ಪ್ರಾಣಿ.

ಇಮಾಮ್ ಹೇಳಿದ ಗೋವು ಹಾಗು ತಲಾಕ್ ವಿಚಾರಕ್ಕೆ ದೇಶದಲ್ಲಿನ ಓವೈಸಿಯಂತಹ ಕಟ್ಟರ್ ಮುಸಲ್ಮಾನರೇನೋ ವಿರೋಧ ವ್ಯಕ್ತಪಡಿಸಬಹುದು ಆದರೆ ನೈಜ ಮುಸ್ಲಿಂ ಸಮುದಾಯ ಮಾತ್ರ ಈ ಇಮಾಮ್ ಹೇಳಿದ್ದರಲ್ಲಿ ನೂರಕ್ಕೆ ನೂರು ಸತ್ಯ ಇದೆ ಎನ್ನುತ್ತಿದ್ದಾರೆ.

ಇಲ್ಲಿ ಇನ್ನೊಂದು ಮಹತ್ವದ ವಿಚಾರವನ್ನು ಹೇಳಲೇಬೇಕಾಗಿದೆ. ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲೇ ಕಟ್ಟಬೇಕು ಇದು ನಮ್ಮ ಭಾವನಾತ್ಮಕ ವಿಷಯ. ಅದು ಅಲ್ಲದೇ ಬಾಬರ್ ಮಸೀದಿ ದಾಸ್ಯದ ಕುರುಹು ಎಂದು ಹಿಂದು ತನ್ನ ಹಕ್ಕನ್ನು ಸುಮಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾನೆ.

ಇದಕ್ಕೆ ಸುಮಾರು ಜನ ಮುಸಲ್ಮಾನರ ಬೆಂಬಲವೂ ಇದೆ. ಶಿಯಾ ಮುಸಲ್ಮಾನರು ರಾಮ ಜನ್ಮ ಭೂಮಿಯಲ್ಲಿ ಪ್ರಭು ಶ್ರೀರಾಮನ ಮಂದಿರ ಕಟ್ಟಲಿ ನಾವು ಬೆಂಬಲಕ್ಕೆ ಇರುತ್ತೇವೆಂದು ಅನೇಕ ಬಾರಿ ಹೇಳಿದ್ದಾರೆ. ಇದೇ ಅಲ್ವಾ ಕೋಮು ಸೌಹಾರ್ದತೆ?

ಒಟ್ಟಿನಲ್ಲಿ ದೇಶದಲ್ಲಿ ಹಿಂದೂ ಮುಸಲ್ಮಾನರು ಒಟ್ಟಾಗಿ ಸಾಮರಸ್ಯದಿಂದ ಬಾಳಬೇಕಾದರೆ ಇಮಾಮ್ ಹೇಳಿದಂತೆ ಕೆಲ ಬದಲಾವಣೆಗಳು ಇಸ್ಲಾಮಿನಲ್ಲೂ ತರುವ ಅಗತ್ಯವಿದೆ.

 •  
  6.3K
  Shares
 • 6.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com