Connect with us
Loading...
Loading...

ಅಂಕಣ

ಜಿಹಾದಿಗಳಿಂದ ಶಬರಿಮಲೈ ಆಯ್ತು ಇದೀಗ ದುರ್ಗಾ ಮಾತೆ ಟಾರ್ಗೆಟ್; ದಸರಾ ಸಂದರ್ಭದಲ್ಲಿ ಜಿಹಾದಿಗಳು ಮಾಡಿದ್ದೇನಂತ ತಿಳಿದರೆ ಬೆಚ್ಚಿಬೀಳುವಿರಿ

Published

on

 • 2.3K
 •  
 •  
 •  
 •  
 •  
 •  
 •  
  2.3K
  Shares

ಶಬರಿಮಲೈ ಆಯ್ತು ಇದೀಗ ಜಿಹಾದಿಗಳ ಕಣ್ಣು ಹಿಂದುಗಳ ವಿಜಯದಶಮಿ ಹಾಗು ದುರ್ಗಾ ಮಾತೆಯ ಮೇಲೆ ಬಿದ್ದಿದೆ ನೋಡಿ. ಅತ್ತ ಶಬರಿಮಲೈ ದೇವಸ್ಥಾನದಲ್ಲಿ ಹೆಣ್ಣುಮಕ್ಕಳಗೆ ಪ್ರವೇಶ ನೀಡಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಮುಸ್ಲಿಂ ಲಾಯರ್ ನೌಶಾದ್ ಖಾನ್ ದಾವೆ ಹೂಡಿದ್ದ. ಇದಾದ ಬಳಿಕ ಸುಪ್ರೀಂಕೋರ್ಟ್ ಕೂಡ ಆತನ ಅರ್ಜಿಯನ್ನ ಸ್ವೀಕರಿಸಿ ವಿಚಾರಣೆ ನಡೆಸಿ ಶಬರಿಮಲೈಗೆ ಹೆಣ್ಣುಮಕ್ಕಳ ಪ್ರವೇಶ ನೀಡಬೇಕೆಂಬ ತೀರ್ಪನ್ನ ನೀಡಿತ್ತು.

ಆದರೆ ಈ ತೀರ್ಪಿನ‌ ಬಳಿಕವೂ ಅಯ್ಯಪ್ಪನ ಮಹಿಳಾ ಭಕ್ತಾದಿಗಳು ಸಂಸ್ಕಾರ ಆಚಾರ ವಿಚಾರ, ಸಂಪ್ರದಾಯವನ್ನ ಗೌರವಿಸುತ್ತ ದೇವಸ್ಥಾನಕ್ಕೆ ತೆರಳುವ ಬದಲು ಅಯ್ಯಪ್ಪ ಸ್ವಾಮಿ ಮಂದಿರವನ್ನ ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಲು ಮುಸ್ಲಿಂ, ಕ್ರಿಶ್ಚಿಯನ್, ಕಮ್ಯುನಿಸ್ಟ್ ಮಹಿಳೆಯರು ಪ್ರಯತ್ನ ಪಡುತ್ತಿದ್ದಾರೆ. ಹೇಗಾದರೂ ಮಾಡಿ ಅಯ್ಯಪ್ಪನ ಸನ್ನಿಧಿಯನ್ನ ಅಪವಿತ್ರ ಮಾಡುವ ಸಂಚನ್ನ ಇವರು ರೂಪಿಸಿದ್ದು ಅದರಲ್ಲಿ ಅವರಿಗೆ ಯಶಸ್ಸು ಸಿಗುತ್ತಿಲ್ಲ. ಈ ಮಧ್ಯೆ ಅಯ್ಯಪ್ಪ ಆಯ್ತು ಇದೀಗ ದುರ್ಗಾಮಾತೆಯ ಮೇಲೆ ಜಿಹಾದಿಗಳ ಕಣ್ಣು ಬಿದ್ದಿದೆ.

ಜಿಹಾದಿ ಮಾನಸಿಕತೆಯ ಭಯೋತ್ಪಾದಕರು ಇದೀಗ ಝಾರ್ಖಂಡ್ ನ ಪಲಾಮು ನಲ್ಲಿನ ದುರ್ಗಾಮಾತೆಯ ಮೇಲೆ ಕಣ್ಣು ಹಾಕಿದ್ದಾರೆ. ಝಾರ್ಖಂಡ್ ನ ಪಲಾಮು ಶಾಂತವಾಗೇ ವಿಜಯದಶಮಿಯ ಸಡಗರದಲ್ಲಿತ್ತು, ಆದರೆ ಜಿಹಾದಿಗಳು ಎಲ್ಲಿಂದ ಬಂದರೋ ಗೊತ್ತಿಲ್ಲ ಇಡೀ ಊರಿಗೆ ಊರೇ ರಣರಂಗವಾಗಿಬಿಟ್ಟಿತು ನೋಡಿ. ನವರಾತ್ರಿಯ ಬಳಿಕ ದುರ್ಗಾ ಮಾತೆಯ ಮೂರ್ತಿಯನ್ನ ವಿಸರ್ಜಿಸಲು ತೆರಳುತ್ತಿದ್ದ ಭಕ್ತರ ಮೇಲೆ ಜಿಹಾದಿಗಳು ತೀವ್ರವಾದ ಹಲ್ಲೆ ನಡೆಸಿದ್ದು ಅದರಲ್ಲಿ ಒಬ್ಬ ಹಿಂದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ದುರ್ಗಾ ಮಾತೆಯ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ದಾಳಿ ಮಾಡಿದ ಜಿಹಾದಿಗಳು ಹಲವಾರು ವಾಹನಗಳನ್ನೂ ಬೆಂಕಿಗಾಹುತಿ ಮಾಡಿದ್ದಾರೆ, ಅದರಲ್ಲಿ ಒಂದು ಟ್ರ್ಯಾಕ್ಟರ್ ಟ್ರಾಲಿ, ಐದು ಟೆಂಪೋ, ಎರಡು ಮೋಟರ್ ಸೈಕಲ್ ಗಳು ಹಾಗು ಒಂದು ಬೊಲೆರೋ ವಾಹನ ಸುಟ್ಟು ಕರಕಲಾಗಿವೆ. ಇಷ್ಟೇ ಅಲ್ಲದೆ ಮೂರು ಅಂಗಡಿಗಳು ಹಾಗು ಎರಡು ಮನೆಗಳಿಗೂ ಬೆಂಕಿಯಿಟ್ಟಿದ್ದಾರೆ ಜಿಹಾದಿಗಳು.

ದುರ್ಗಾ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಜಿಹಾದಿಗಳು ಬೇಕಾಬಿಟ್ಟಿ ಕಲ್ಲು ತೂರಾಟ ನಡೆಸಿದ್ದು ಮೂವರು ಪೋಲಿಸರು ಅನಿರುಧ್ ಪ್ರಸಾದ್(ದಾರೋಗಾ), ಅಜಿತ್ ಕುಮಾರ್ ಸಿಂಗ್ ಹಾಗು ಪಿಂಟು ಪಾಸ್ವಾನ್ ಸಮೇತ ಹಲವಾರು ಹಿಂದುಗಳೂ (ಕುಂಜಲ್ ಸಿಂಗ್, ಶಿವ ಸಾವ್, ಮುಕೇಶ್ ಕುಮಾರ್ ಸಿಂಗ್, ಅರ್ಜುನ್ ಸಾವ್, ಗುಲಟೇನಾ ರಾಮ್, ಶಿವಪ್ರಸಾದ್ ಹಾಗು ಇನ್ನಿತರರು) ಗಾಯಗೊಂಡಿದ್ದಾರೆ.

Representational image

ಸುದ್ದಿ ಮೂಲಗಳ ಪ್ರಕಾರ ತಿಳಿದು ಬಂದಿರುವ ಮಾಹಿತಿಯಂತೆ ಶುಕ್ರವಾರದಂದು ಝಾರ್ಖಂಡ್ ನ ಪಲಾಮು ನಲ್ಲಿ ಎರಡು ದುರ್ಗಾ ಮೂರ್ತಿಗಳು ವಿಸರ್ಜನಾ ಮೆರವಣಿಗೆ ನಡೆದಿತ್ತು. ದುರ್ಗಾ ಮಾತೆತ ಭಕ್ತರ ಗುಂಪು ಮಾತೆಯ ಭಜನೆ, ಹಾಡುಗಳನ್ನ ಹಾಡುತ್ತ ಮುಂದೆ ಸಾಗುತ್ತಿತ್ತು. ಇದೇ ವೇಳೆಗೆ ಮುಸ್ಲಿಂ ಸಮುದಾಯದ ಗುಂಪೊಂದು ಮೆರವಣಿಗೆಯನ್ನ ತಡೆಯಿತು. ಮಾತುಕತೆಯಾಡಲು ಹಿಂದುಗಳು ಮುಂದಾದ ತಕ್ಷಣವೇ ಜಿಹಾದಿಗಳು ಏಕಾಏಕಿ ದಾಳಿ ನಡೆಸಿ ದುರ್ಗಾಮಾತೆಯ ಮೂರ್ತಿಯ ಮೇಲೆ ಹೊಲಸು ನೀರನ್ನ ಎರಚೋದಕ್ಕೆ ಶುರು ಮಾಡಿದ್ದಾರೆ.

ದುರ್ಗಾಮಾತೆಯ ಭಕ್ತರು ಇದನ್ನ ವಿರೋಧಿಸೋಕೆ ಶುರು ಮಾಡಿದಾಗ ಜಿಹಾದಿಗಳು ಏಕಾಏಕಿ ಕಲ್ಲು ತೂರಾಟಕ್ಕೆ ಮುಂದಾಗಿ ಸಿಕ್ಕ ಸಿಕ್ಕವರನ್ನ ಎಳೆದಾಡಿ ಹೊಡೆಯಲಾರಂಭಿಸಿದ್ದಾರೆ. ಅದಾದ ಬಳಿಕ ಅಲ್ಲಿ ಕೋಮು ಗಲಭೆಯುಂಟಾಗಿದೆ. ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ಪಲಾಮು, ರಾಂಚಿ, ಖೂಂಟಿ, ಲೋಹರದಗಾ ಹಾಗು ಲಾತೇಹಾರ್ ಜಿಲ್ಲೆಗಳಿಂದಲೂ ಹೆಚ್ಚಿನ ಪೋಲಿಸರನ್ನ ಕರೆಸಲಾಗಿದೆ ಆದರೆ ಜಿಹಾದಿಗಳು ಪೋಲಿಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಪೋಲಿಸರಿಗೆ ತೀವ್ರ ಗಾಯಗಳಾಗಿದ್ದರೆ ಒಬ್ಬ ಹಿಂದು ಸ್ಥಳದಲ್ಲೇ ತೀವ್ರ ಗಾಯವಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ತಮ್ಮ ಹಕ್ಕುಗಳಿಗಾಗಿ, ದೇವಸ್ಥಾನದ ಪಾವಿತ್ರ್ಯತೆಯನ್ನ ಕಾಪಾಡಲು ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರೆ ಅವರನ್ನ ರೌಡಿಗಳು, ಧರ್ಮೋನ್ಮತ್ತ ಗೂಂಡಾಗಳೆಂದು ಕಳೆದ ಒಂದು ವಾರದಿಂದ ಬೈಯುತ್ತ ಕೂತಿರುವ ಮೀಡಿಯಾಗಳಿಗೆ ಮಾತ್ರ ಜಿಹಾದಿಗಳಿಂದ ಹಿಂದುಗಳ ಮೆರವಣಿಗೆಯ ಮೇಲೆ ಆಗಿರುವ ದಾಳಿ ಹಾಗು ಸತ್ತ ಹಿಂದುವಿನ ಬಗ್ಗೆ ಸುದ್ದಿ ತೋರಿಸೋಕೆ ಪಾಪ ಸಮಯವೇ ಇಲ್ಲವಂತ ಕಾಣುತ್ತೆ. ಹಿಂದುಗಳನ್ನ ಭಯೋತ್ಪಾದಕರು, ಗೂಂಡಾಗಳು, ರೌಡಿಗಳಂತ ಕರೆಯೋಕೆ ಈ ಮೀಡಿಯಾಗಳಿಗೆ ಧಮ್ ಇದೆ,‌ ಕಾರಣ ಹಿಂದುಗಳು ಸಹಿಷ್ಣುಗಳಲ್ಲವೇ? ಆದರೆ ಇವರಿಗೆ ಮುಸಲ್ಮಾನರನ್ನ ಜಿಹಾದಿಗಳು, ರೌಡಿಗಳು, ಭಯೋತ್ಪಾದಕರಂತ ಕರೆಯೋಕೆ ಮಾತ್ರ ನರ ಇದ್ದಂತೆ ಕಾಣುತ್ತಿಲ್ಲ. ಹಾಗೇನಾದರೂ ಹೇಳಿದರೆ ತಮ್ಮ ಚಾನೆಲ್ಲಿನ ಆಫೀಸನ್ನೂ ಪುಡಿ ಪುಡಿ ಮಾಡಿಬಿಡುತ್ತಾರೆ ಅನ್ನೋ ಭಯ ಅನ್ಸತ್ತೆ ಅಲ್ವಾ?

ಹಿಂದುಗಳ ವಿರುದ್ಧ ದೇಶದಲ್ಲಿ ಭಾರೀ ಷಡ್ಯಂತ್ರ ನಡೆಯುತ್ತಿದೆ, ಈಗಲಾದರೂ ಎಚ್ಚರಗೊಳ್ಳಿ ಹಿಂದುಗಳೇ, ಇಲ್ಲವಾದರೆ ಇಂದು ಬೀದಿಯಲ್ಲಿರುವ ಜಿಹಾದಿಗಳು ನಿಮ್ಮ ಮನೆಗೂ ನುಗ್ಗಬಹುದು ಎಚ್ಚರ..!

Source: Sudarshan News

– Team Nationalist Views

Nationalist Views ©2018 Copyrights Reserved

 •  
  2.3K
  Shares
 • 2.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com