Connect with us
Loading...
Loading...

ಪ್ರಚಲಿತ

ಕೇಸರಿ ಪಾಳಯದಲ್ಲಿ ಹೊಸ ಸಂಚಲನ!!! ಕೇಸರಿ ವೀರನಿಗೆ ಜೈ ಎಂದ ಮುಸಲ್ಮಾನರು!!

Published

on

 • 3.7K
 •  
 •  
 •  
 •  
 •  
 •  
 •  
  3.7K
  Shares

ಕೇಸರಿ ಪಾಳಯದಲ್ಲಿ ಹೊಸ ಸಂಚಲನ. ಮೋದಿಯವರನ್ನು ಮೆಚ್ಚಿ ಅವರ ಭಕ್ತರಾದ ಮುಸಲ್ಮಾನರು!!

ತಲಾಖ್ ಆದದ್ದೇ ಆದದ್ದು ಕೇಸರಿ ಪಾಳಯದಲ್ಲಿ ದೊಡ್ಡ ಸಂಚಾರ ಉಂಟಾಗಿದೆ. ಮೋದಿಯವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ದೊಡ್ಡ ಹುನ್ನಾರ ನಡೆದಿತ್ತು. ಆದರೆ ಭಾರತದ ಮುಸಲ್ಮಾರು ಯಾರೋ ಹೇಳಿದ ಮಾತನ್ನು ಕೇಳುವುದಿಲ್ಲವೆಂದು ಮತ್ತೊಮ್ಮೆ ಸಾಬೀತಾಗಿದೆ. ಅದೇನೆಂದರೆ ಬರೊಬ್ಬರಿ ಮೊದಲ ಬಾರಿಗೆ 27 ಸಾವಿರ ಮುಸಲ್ಮಾರು ಬಿಜೆಪಿ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿ, ಮೋದಿಯವರನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಮುಸ್ಲಿಂ ಮಹಿಳೆಯರಿಗಾಗಿ ನಯೀ ರೋಶನಿ ಎಂಬ ಯೋಜನೆ ಜಾರಿಗೆ ತಂದಿದೆ. ಆ ಯೋಜನೆಯಲ್ಲಿ ಬರೋಬ್ಬರಿ 16,000 ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದರು. ಮೋದಿಯವರನ್ನಿ ಮುಸ್ಲಿಂ ವಿರೋಧಿ ಎನ್ನುವವರೇ ನೋಡಿಲ್ಲಿ, ಮೋದಿಯವರನ್ನು ಮೆಚ್ಚಿಕೊಂಡು ಮುಸಲ್ಮಾನರು ಕೇಸರಿ ಪಡೆಗೆ ಜೈ ಅಂದಿದ್ದಾರೆ.

ಮೋದಿಯವರು ಮುಸ್ಲಿಂ ವಿರೋಧಿಯಲ್ಲ ಬದಲಿಗೆ ದೇಶದ್ರೋಹಿಗಳ ವಿರೋಧಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವರು ಮೋದಿಯವರನ್ನು ಮುಸ್ಲಿಂ ವಿರೋಧಿಯೆಂದು ಬಿಂಬಿಸಲು ಹುನ್ನಾರ ಮಾಡಿದ್ದರು. ಆದರೆ ಹುನ್ನಾರ ಮಾಡುವವರ ಆಟ ಮೋದಿಯವರ ಮುಂದೆ ನಡೆಯಬೇಕಲ್ವಾ? ವಿರೋಧಿಗಳು ಮಾಡುವ ತಂತ್ರವನ್ನು ಮೋದಿಯವರು ಮೊದಲೇ ಊಹಿಸಿ ಅದಕ್ಕೆ ಪ್ರತಿತಂತ್ರ ರೂಪಿಸಿ, ವಿರೋಧಿಗಳಿಗೆ ಛಾಟಿ ಬೀಸಿ ಬೆಪ್ಪರನ್ನಾಗಿ ಮಾಡುತ್ತಲೇ ಬಂದಿದ್ದಾರೆ.

ವಿರೋಧಿಗಳು ಮುಸಲ್ಮಾನರನ್ನು ಬಿಜೆಪಿಗೆ ಸೇರದಂತೆ ಅನೇಕ ಷಡ್ಯಂತ್ರಗಳನ್ನು ಮಾಡಿದ್ದರು. ಆಗಲೆಲ್ಲ ಅವರ ಷಡ್ಯಂತ್ರಗಳು ಯಶಸ್ವಿಯಾಗಿದ್ದವು. ಆದರೆ ಈಗ ಕಾಲ ಬದಲಾಗಿದೆ. ಯಾಕೆಂದ್ರೆ ಈಗ ಆಳುತ್ತಿರುವುದು ಮೋದಿ. ಮೋದಿಯವರ ಮುಂದೆ ವಿರೋಧಿಗಳ ಆಟ ನಡೆಯುವುದಿಲ್ಲ.

ಮೋದಿಯವರು ತುಷ್ಟೀಕರಣ ಮಾಡುವವರಲ್ಲ. ರಾಜಕೀಯ ಹಪಹಪಿಗೆ ತುಷ್ಟೀಕರಣ ಮಾಡುವ ದರ್ದೂ ಅವರಿಗಿಲ್ಲ. ಅವರಿಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಧ್ಯೇಯ ಬಿಟ್ಟು ಬೇರೆನೂ ಇಲ್ಲ. ಹೀಗಾಗಿ ಮೋದಿಯವರು ತುಷ್ಟೀಕರಣ ಮಾಡದೆ ಮುಸ್ಲಿಂ ಹೆಣ್ಣುಮಕ್ಕಳಿಗ ತಲಾಖ್ ನಿಂದು ಅನ್ಯಾಯವಾಗುತ್ತಿದ್ದನ್ನನ್ನು ತಡೆದು, ತಲಾಖ್ ನ್ನು ನಿಷೇಧಿಸಿದರು.

ಮೋದಿಯವರು ತಮಗೆ ಓಟು ಬರಲೆಂದು ಬಕೆಟ್ ಹಿಡಿಯುವವರಲ್ಲ ಬದಲಿಗೆ ದೇಶದ ವಿಕಾಸಕ್ಕಾಗಿ ಏನು ಮಾಡಬೇಕೋ ಅದನ್ನು ಮಾತ್ರ ಮಾಡುತ್ತಾರೆ. ಅದಕ್ಕಾಗಿಯೇ ತಲಾಖ್ ನಂತಹ ಐತಿಹಾಸಿಕ ನಿಷೇಧವನ್ನು ಜಾರಿಗೊಳಿಸಿದರು. ಈ ಎಲ್ಲಾ ಕಾರ್ಯಗಳನ್ನು ನೋಡಿಯೇ ಮುಸಲ್ಮಾನರೂ ಕೂಡಾ ಮೋದಿಯವರ ಭಕ್ತರಾಗಿದ್ದಾರೆ.

ಮುಸ್ಲಿಂ ಮಹಿಳೆಯರಲ್ಲಿ ನಾಯಕತ್ವ ಬೆಳೆಸಿ ದೇಶದ ಅಭಿವೃದ್ಧಿ ಮಾಡಲು ರೂಪಿಸಿರುವ ಯೋಜನೆಯೇ ‘ ನಯೀ ರೋಶನಿ’. ಇದನ್ನು ರೂಪಿಸಿದವರು ರಾಜ್ಯ ಬಿಜೆಪಿಯವರಲ್ಲ ಸ್ವತಃ ಮೋದಿಯವರ ಪ್ಲ್ಯಾನ್ ಇದು.

ತ್ರಿವಳಿ ತಲಾಖ್‌ ಸೇರಿದಂತೆ ಮುಸ್ಲಿಂ ಸಮುದಾಯದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ‘ನಯೀ ರೋಶನಿ’ಯ ಮಹಿಳಾ ಬಲವನ್ನು ಬಳಸಿಕೊಳ್ಳುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿ ಅದಕ್ಕೇನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ.

ಮೋದಿಯವರ ಐತಿಹಾಸಿಕ ನಿರ್ಧಾರವಾದ ತಲಾಖ್ ನಿಷೇಧದ ಕುರಿತು ಮುಸಲ್ಮಾನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಮನುಷ್ಯನಿಗೆ ಓಟು ಮುಖ್ಯವಲ್ಲ, ಆತನಿಗೆ ದೇಶಕ್ಕೆ ಒಳಿತಾಗುವುದು ಮಾತ್ರ ಮುಖ್ಯ. ಕೇಂದ್ರ ಸರಕಾರ ‘ ತ್ರಿವಳಿ ತಲಾಕ್‌’ ರದ್ದು ಮಾಡಿ ಕಾಯ್ದೆ ತಂದ ಹಿನ್ನೆಲೆಯಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಷರಿಯತ್ತಿನಲ್ಲಿ ಮೂಗು ತೂರಿಸುತ್ತಿದೆ ಎಂದು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ.

ಈ ದೇಶದಲ್ಲಿ ಸಂವಿಧಾನವೇ ಎಲ್ಲ ಕಾನೂನುಗಳ ತಾಯಿ.
ಸಂವಿಧಾನಕ್ಕೆ ಒಪ್ಪಿತವಾಗದ ವಿಷಯಗಳು ಯಾವುದೇ ಧರ್ಮದಲ್ಲಿದ್ದರೂ, ಅದನ್ನು ಸುಧಾರಣೆ ಮಾಡಬೇಕಾಗುತ್ತದೆ. ಕೇಂದ್ರ ಸರಕಾರದ ಈ ಕ್ರಮವನ್ನು ಅಲ್ಪಸಂಖ್ಯಾತರ ವಿರೋಧಿ ಧೋರಣೆ ಎಂದು ವಿನಾ ಕಾರಣ ಹುಯಿಲೆಬ್ಬಿಸುತ್ತಿದ್ದಾರೆ. ಇದು ಕೂಡಾ ವೋಟ್‌ ಬ್ಯಾಂಕ್‌ ರಾಜಕಾರಣದ ತಂತ್ರ. ಇದರ ವಿರುದ್ಧ ನಾವೆಲ್ಲ ಹೋರಾಡಬೇಕಿದೆ,’ ಎಂದು ಸ್ವತಃ ಮುಸಲ್ಮಾನರೇ ಹೇಳುತ್ತಿದ್ದಾರೆ.

ಮೋದಿಯವರು ಮಾಡಿದ ಯೋಜನೆ “ನಯೀ ರೋಶನಿ” ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮತ್ತು ಮುಸ್ಲಿಂ ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ನಾವು ಧ್ವನಿಯಾಗುತ್ತಿದ್ದೇವೆ,” ಎಂದು ಸ್ವತಃ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜಾ ಹೇಳಿದ್ದಾರೆ. ಅಂತೂ ಇಂತೂ ಮೋದಿಯವರನ್ನು ಮುಸ್ಲಿಂ ವೀರೋಧಿ ಎಂದು ಬಿಂಬಿಸುವ ಆಟ ನಡೆಯುತ್ತಿಲ್ಲ ಅಂತಾಯ್ತು.

ಮೋದಿಯವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವವರ ಗಮನಕ್ಕೆ ಕೆಲ ವಿಷಯಗಳನ್ನು ತರುತ್ತೇನೆ.

ಮೋದಿ ಮುಸ್ಲಿಂ ವಿರೋಧಿ ಆಗಿದ್ದರೆ ಸಭೆಯೊಂದರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜಾಮುದ್ದಿನ್ ಎಂಬ ಮುಸಲ್ಮಾನ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರಲಿಲ್ಲ.

ಮೋದಿ ಮುಸ್ಲಿಂ ವಿರೋಧಿ ಆಗಿದ್ದರೆ ತಲಾಖ್ ಎಂಬ ಅನಿಷ್ಟ ಪದ್ಧತಿಗೆ ನೂರಾರು ವರ್ಷಗಳಿಂದ ಬೇಸತ್ತಿದ್ದ ಮುಸಲ್ಮಾನ ಮಹಿಳೆಯರ ಪರ ನಿಂತು ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುತ್ತಿರಲಿಲ್ಲ.

ಮೋದಿ ಮುಸ್ಲಿಂ ವಿರೋಧಿ ಆಗಿದ್ದರೆ ಮುಸಲ್ಮಾನರ ಒಂದು ಕೈಯಲ್ಲಿ ಕುರಾನ್ ಇದ್ದರೆ ಮತ್ತೊಂದು ಕೈಗೆ ನಾನು ಕಂಪ್ಯೂಟರ್ ಕೊಡ್ತೀನಿ ಅಂತ ಹೇಳ್ತಿರಲಿಲ್ಲ. ಮುಸಲ್ಮಾನರ ಏಳಿಗೆಯ ಬಗ್ಗೆ ಯೋಚನೆ ಮಾಡುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು??

ಮೋದಿ ಮುಸ್ಲಿಂ ವಿರೋಧಿ ಆಗಿದ್ದರೆ ಹಜ್ ಸಬ್ಸೀಡಿಯನ್ನು ರದ್ದು ಮಾಡಿ, ಆ ಹಣವನ್ನು ಮುಸಲ್ಮಾನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುವ ಯೋಜನೆ ಹಾಕುತ್ತಿರಲಿಲ್ಲ.

ಮೋದಿಯವರು ಮುಸ್ಲಿಂ ವಿರೋಧಿ ಅಲ್ಲವೆಂದು ಮುಸಲ್ಮಾನರು ಅರಿತಿದ್ದಾರೆ. ಹೀಗಾಗಿಯೇ ರಾಹುಲ್ ಗಾಂಧಿ ಟೆಂಪಲ್ ರನ್ ಆಟ ಶುರುಮಾಡಿ, ದೇವಸ್ಥಾನಗಳ ಭೇಟಿ ಮಾಡುತ್ತಿದ್ದಾರೆ. ಇಷ್ಟು ದಿನ ಏನೇನೋ ಆಟ ನಡೆಸಿದರು. ಆದರ ಆ ಆಟ ಮೋದಿಯವರ ಎದುರಿಗೆ ನಡೆಯಲಿಲ್ಲ. ಹೀಗಾಗಿ ದೇವಸ್ಥಾನಗಳಿಗೆ ಹೋಗಿ ಹಿಂದುಗಳ ಓಲೈಕೆಯ ಆಟ ಶುರು ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಕೂಡಾ ಇದೇ ಆಟ ನಡೆಸಿದ್ದಾಳೆ‌.

ಸಿದ್ದರಾಮಯ್ಯನವರು ಕೂಡಾ ಹಿಂದುತ್ವದ ಕುರಿತು ಮಾತನಾಡಲು ಶುರು ಮಾಡಿದ್ದಾರೆ. ಇಷ್ಟು ದಿನ ಹಿಂದೂ ವಿರೋಧಿ ಕೆಲಸ ಎಷ್ಟು ಮಾಡೋಕಾಗುತ್ತೋ ಅಷ್ಟು ಮಾಡಿ, ಇದೀಗ ತಾನು ಹಿಂದು ತನ್ನ ಹೆಸರಿನಲ್ಲಿ ರಾಮನಿದ್ದಾನೆ ಎಂಬ ಆಟವನ್ನು ಶುರು ಮಾಡಿದ್ದಾರೆ. ಇಷ್ಟು ದಿನ ಇರದ ಹಿಂದುತ್ವ ಈಗ್ಯಾಕೆ ಬಂತು? ಚುನಾವಣೆ ಹತ್ತಿರ ಬಂದಿದ್ಕಾ?

ಒಟ್ಟಿನಲ್ಲಿ ಮುಸಲ್ಮಾನರು ಮೋದಿಯವರ ಬಗ್ಗೆ ಅರಿತುಕೊಂಡು ಮೋದಿಯವರ ಭಕ್ತರಾಗಿರೋದಂತು ದೊಡ್ಡ ಬದಲಾವಣೆಯೇ ಸರಿ.

– Team Nationalist Views

 •  
  3.7K
  Shares
 • 3.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com