Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್ : ನಾಗಾ ಸಾಧುಗಳ ಭವಿಷ್ಯ!! ಮುಂಬರುವ ಚುನಾವಣೆಯಲ್ಲಿ ಇವರು ಹಿಡಿಯಲಿದ್ದಾರಂತೆ ಕರ್ನಾಟಕದ ಗದ್ದುಗೆ !! ಯಾರವರು ಗೊತ್ತಾ?

Published

on

 • 1.8K
 •  
 •  
 •  
 •  
 •  
 •  
 •  
  1.8K
  Shares

ಕೆಲ ತಿಂಗಳುಗಳ ಹಿಂದಷ್ಟೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಹುಮತದಿಂದ ಗೆದ್ದಿದೆ. ಹೇಗೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಕಮಲ ಅರಳಿದೆಯೋ ಹಾಗೆಯೇ ಕರ್ನಾಟಕದಲ್ಲೂ ಕಮಲ ಅರಳಲಿದೆ ಎಂದು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದಾರೆ. ಹೌದು ಮುಂಬರುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ನುಡಿದ ದಿನ ಎಂತಹದ್ದು ಗೊತ್ತಾ? ಶಿವನ ಭಕ್ತರಾದ ನಾಗಾ ಸಾಧುಗಳು ಶಿವರಾತ್ರಿ ದಿನವೇ ಚುನಾವಣೆ ಕುರಿತಾಗಿ ಭವಿಷ್ಯ ನುಡಿದಿದ್ದಾರೆ.

ಕುತೂಹಲ ಮೂಡಿಸಿದ್ದೇನೆಂದರೆ ಶಿವರಾತ್ರಿ ದಿನವೇ ಈ ಭವಿಷ್ಯ ನುಡಿದದ್ದು. ನಾಗಾ ಸಾಧುಗಳು ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಸ್ವಾಮಿಗಳನ್ನು ಭೇಟಿ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಹೇಗೆ ಬಿಜೆಪಿ ಜಯಭೇರಿ ಭಾರಿಸಿದೆಯೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ನಾಗಾ ಸಾಧುಗಳು ಭವಿಷ್ಯ ನೀಡಿದ್ದಾರೆ. ಶಿವರಾತ್ರಿ ದಿನ ಈ ಭವಿಷ್ಯ ನುಡಿದಿರೋದರಿಂದ ತುಂಬಾ ಕುತೂಹಲವನ್ನುಂಟು ಮಾಡಿದೆ.

ಮಾಧ್ಯಮಗಳ ಸಮೀಕ್ಷೆಯೂ ಭರಪೂರ ನಡೆದಿದೆ. ಒಂದೊಂದು ಸಮೀಕ್ಷೆಯು ಒಂದೊಂದು ರೀತಿಯಲ್ಲಿ ಹೇಳುತ್ತಿವೆ. ಒಂದಷ್ಟು ಸಮೀಕ್ಷೆಗಳು ಬಿಜೆಪಿಗೆ ಗೆಲುವು ನಿಶ್ಚಿತ ಅಂದರೆ, ಒಂದಷ್ಟು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ ಎಂದು ಹೇಳುತ್ತಿವೆ. ಇದರ ಬೆನ್ನಲ್ಲೇ ನಾಗಾ ಸಾಧುಗಳು ಬಿಜೆಪಿ ಗೆಲ್ಲವುದು ನಿಶ್ಚಿತವೆಂದು ಹೇಳಿ ಬಿಜೆಪಿಗರಲ್ಲಿ ಸಂತಸವನ್ನುಂಟು ಮಾಡಿದ್ದಾರೆ.

ಭಾರತದಲ್ಲಿ ನಾಗಾ ಸಾಧುಗಳಿಗೆ ದೊಡ್ಡ ಗೌರವವಿದೆ. ಹಾಗೂ ಅವರ ಮೇಲೆ ಜನರಿಗೆ ಶ್ರದ್ಧೆ, ನಂಬಿಕೆ ಎಲ್ಲವೂ ಇದೆ. ಹೀಗಾಗಿ ನಾಗಾ ಸಾಧುಗಳು ನುಡಿದ ಭವುಷ್ಯದಿಂದ ಕುತೂಹಲ ಉಂಟಾಗಿದೆ. ನಾಗಾ ಸಾಧುಗಳು ಕರ್ನಾಟಕಕ್ಕೆ ಬಂದದ್ದು ಇದೇ ಮೊದಲಲ್ಲ. ಹಲವಾರು ಬಾರಿ ಬಂದಿದ್ದಾರೆ. 2017ರ ಅಕ್ಟೋಬರ್ ತಿಂಗಳಿನಲ್ಲಿ ವಾರಣಾಸಿಯಿಂದು ಸುಮಾರು 18 ಜನ ನಾಗಾಸಾಧುಗಳು ದೇಶ ಸಂಚಾರ ಮಾಡುತ್ತಾ ಕರ್ನಾಟಕಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದರು‌. ಆ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ಹರಿಸಿ, ಹಾರೈಸಿ ಹೋಗಿದ್ದರು.

2017ರ ಡಿಸೆಂಬರ್ ತಿಂಗಳಿನಲ್ಲಿಯೂ ಕೂಡಾ ನಾಗಾ ಸಾಧುಗಳು ಹರಿದ್ವಾರದಿಂದ ದೇಶ ಸಂಚಾರ ಮಾಡುವಾಗ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಬಿಜೆಪಿ ಕಾರ್ಯಕರ್ತ ಕಿರಣ್ ಎನ್ನುವವರ ಮನೆಗೆ
ಆಕಸ್ಮಿಕವಾಗಿ ಆಗಮಿಸಿದ್ದರು‌‌. ಆಗಲೂ ಆ ನಾಗಾ ಸಾಧುಗಳು 2018ರ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದು ಹೋಗಿದ್ದರು‌

ಅದೇ ವರ್ಷದ ಅದೇ ಡಿಸೆಂಬರ್ ತಿಂಗಳಿನಲ್ಲಿ ನಾಗಾ ಸಾಧುಗಳು ದೇಶ ಸಂಚಾರ ಮಾಡುತ್ತಾ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಮನೆಗೆ ಭೇಟಿ ನೀಡಿದ್ದರು. ಆಗ ಸಿ.ಟಿ.ರವಿ ಅವರಿಗೆ ‎ಹರಸಿ, ಹಾರೈಸಿ ಹೋಗಿದ್ದರು. ಈಗ ಮತ್ತೊಮ್ಮೆ ನಾಗಾ ಸಾಧುಗಳು ಕರ್ನಾಟಕಕ್ಕೆ ಬಂದಿದ್ದಾರೆ. ಅದು ಶಿವರಾತ್ರಿ ದಿನವೇ ಭವಿಷ್ಯವನ್ನು ನುಡಿದು, ಈ ಬಾರಿಯ 2018ರ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಹೇಳಿ ಬಿಜೆಪಿಗರಿಗೆ ಸಂತಸ ತರಿಸಿದ್ದಾರೆ.

ಭವಿಷ್ಯ ಒಂದು ಕಡೆ ಇರಲಿ. ಭಾರತ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಸ್ವತಃ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೇ ಹೇಳಿದ್ದರು‌. ಈಗಾಗಲೇ ಕಾಂಗ್ರೆಸ್ ಮೋದಿಯವರ ಅಲೆಯಲಿ ಮಕಾಡೆ ಮಲಗಿದೆ. 2014ರಲ್ಲಿ ಮೋದಿಯವರ ದೊಡ್ಡ ಅಲೆಯಿತ್ತು. ಜೊತೆಗೆ ಕಾಂಗ್ರೆಸ್ಸಿನ ಕುಟೀಲ ನೀತಿ ಕಾಂಗ್ರೆಸ್ಸಿನ ಭ್ರಷ್ಟಾಚಾರ, ಮುಸ್ಲಿಂ ತುಷ್ಟೀಕರಣ ಇವುಗಳನ್ನೆಲ್ಲಾ ನೋಡಿದ ಭಾರತೀಯರಿಗೆ ಸಾಕಾಗಿ ಹೋಗಿತ್ತು. ಹೀಗಾಗಿ ಕಾಂಗ್ರೆಸ್ಸಿನ ಅಸ್ತಿತ್ವಕ್ಕೆ ಧಕ್ಕೆ ಬರುವ ಹಾಗೆ ಭಾರತೀಯರು ಪೆಟ್ಟು ಕೊಟ್ಟರು.
2014 ರಲ್ಲಿ ಭ್ರಷ್ಟಚಾರದಿಂದ ಅರೆಬರೆ ಉಳಿದಿದ್ದ ಕಾಂಗ್ರೆಸ್ 2019 ರ ವೇಳೆಗೆ ದೇಶದ್ರೋಹದ ಅಲೆಯಿಂದ ಸರ್ವನಾಶ ಅಗಲಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ಹೇಳಿಕೆಯನ್ನು ಹೇಳಿದ್ದರು.

ಬರೀ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಷ್ಟೇ ಅಲ್ಲ.
ಇತ್ತೀಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಕಾಂಗ್ರೆಸ್ ಮುಕ್ತ ಭಾರತವಾಗುತ್ತೆ ಎನ್ನುವ ಧಾಟಿಯಲ್ಲಿ ಮಾತಾಡಿದ್ದರು. ಮೋದಿಯವರನ್ನ 2024 ರವೆರೆಗೆ ಪ್ರಧಾನಿ ಹುದ್ದೆಯಿಂದ ಇಳಿಸೋಕೆ ಆಗಲ್ಲವೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದರು. ಯಾಕೆ ಗೊತ್ತಾ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ. ಹೀಗಾಗಿ ಆ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ. ರಾಹುಲ್ ಗಾಂಧಿ ಹೊರತು ಪಡಿಸಿ ಕಾಂಗ್ರೆಸ್’ನ ಇತರ ನಾಯಕರಿಗೆ ಇಂತಹ ವ್ಯಕ್ತಿತ್ವ ಇಲ್ಲ. ಹೀಗಾಗಿ ಬಿಜೆಪಿಯನ್ನು ಸೋಲುವುದು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ. 2024ರವರೆಗೆ ಬಿಜೆಪಿ ಮಣಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಅದೇ ಮೋದಿಯವರ ಅಲೆಯೂ ಕರ್ನಾಟಕದಲ್ಲಿ ವರ್ಕೌಟ್ ಆದರೆ ಖಂಡಿತವಾಗಿಯೂ ಭಾರತ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಅನುಮಾನವೇ ಇಲ್ಲ.

ಇತ್ತೀಚೆಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಮಾತನಾಡಿದ್ದನ್ನು ನೋಡಿದರೆ ನಾಗಾ ಸಾಧುಗಳ ಭವಿಷ್ಯ ನಿಜವಾಗುತ್ತೆ ಅಂತ ಅನಿಸೋದು ಸಹಜ. ಅಷ್ಟಕ್ಕೂ ದೇವೇಗೌಡ ಅವರು ಏನು ಹೇಳಿದ್ದರು ಗೊತ್ತಾ? ಮೊನ್ನೆ ಮೊನ್ನೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದರು. ರಾಜ್ಯದ ಖಜಾನೆಯನ್ನು ಸಿದ್ದರಾಮಯ್ಯನವರು ಲೂಟಿ ಮಾಡಿದ್ದಾರೆ. ಅದರ ಕುರಿತಾದ ವಿಷಯಗಳನ್ನು ದಾಖಲೆ ಸಮೇತ ಮಾತನಾಡುತ್ತೇನೆ.

ಇನ್ನೇನು ನಿಮ್ಮ ಟೈಂ ಮುಗಿಯುತ್ತ ಬಂದಿದೆ. ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ಸಿದ್ದರಾಮಯ್ಯನಿಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಈಗ ಮುಖ್ಯಮಂತ್ರಿ ಆದ ಬಳಿಕ ಶ್ರವಣ ಬೆಳಗೊಳದ ಕಾರ್ಯಕ್ರಮದಲ್ಲಿ ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸವಾಲು ಹಾಕಿದ್ದರು. ಇದನ್ನೆಲ್ಲಾ ಅವಲೋಕನ ಮಾಡಿದರೆ ನಾಗಾ ಸಾಧುಗಳು ಭವಿಷ್ಯ ನುಡಿದಂತೆ ಮುಂಬರುವ ಚುನಾವಣೆಯಲ್ಲಿ ಜಯಭೇರಿ ಬಾರಿಸಬಹುದು.

– Team Nationalist Views

©2018 Copyrights Reserved

 •  
  1.8K
  Shares
 • 1.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com