Connect with us
Loading...
Loading...

ಅಂಕಣ

ಟಿಪ್ಪುವನ್ನ ಅಡ್ಡಡ್ಡ ಸೀಳಲು ಮುಂದಾಗಿದ್ದ ಈ ಶೂರನ ಬಗ್ಗೆ ನಿಮಗೆಷ್ಟು ಗೊತ್ತು?

Published

on

 • 3.7K
 •  
 •  
 •  
 •  
 •  
 •  
 •  
  3.7K
  Shares

ಭರತಭೂಮಿ ಒಂದಲ್ಲ ಎರಡಲ್ಲ ಲಕ್ಷಾಂತರ, ಕೋಟ್ಯಾಂತರ ವೀರ ಸುಪುತ್ರರಿಗೆ ಜನ್ಮ ನೀಡಿದೆ, ಅಂಥವರಿಂದಲೇ ಈ ರಾಷ್ಟ್ರ ಇಂದಿಗೂ ಬಲಿಷ್ಟವಾಗಿ ನಿಂತಿದೆಯೆಂದರೆ ತಪ್ಪಾಗಲಾರದು.

ಆದರೆ ದುರ್ದೈವದ ಸಂಗತಿಯೆಂದರೆ ಇಂತಹ ಪುಣ್ಯಭೂಮಿಯನ್ನ ಕೆಲ ರಾಜಕಾರಣಿಗಳು‌ ತಮ್ಮ ರಾಹಕೀಯ ಸ್ವಾರ್ಥಕ್ಕೋಸ್ಕರ ಮಾರಲು ಹೊರಟರೆ ಇನ್ನು ಕೆಲವೊಮ್ಮೆ ಬಾಲಿವುಡ್ ನಂತಹ ಕುಡಿದು ಕುಣಿದು ಕುಪ್ಪಳಿಸಿ ದೇಶದ ಮಾನ ಹರಾಜು ಹಾಕುವವರನ್ನ ಹೀರೋಗಳಾಗಿ ಇಂದಿಗೂ ಕಾಣುತ್ತಿದ್ದೇವೆ ಹೊರತು ಭಾರತಕ್ಕಾಗಿ, ಭಾರತದ ಅಸ್ಮಿತೆಗಾಗಿ ಪ್ರಾಣತೆತ್ತ ವೀರರು ಮಾತ್ರ ನಮಗೆ ಹೀರೋಗಳಾಗಿ ಕಾಣುವಿದಿಲ್ಲ.

ಅಂತಹ ಹೀರೋಗಳಲ್ಲಿ‌ ಒಬ್ಬ ನಾನಾ ಫಡ್ನವಿಸ್ ಎಂಬ ಅಪ್ರತಿಮ ವೀರ. ನಾನಾ ಫಡ್ನವಿಸ್ ಎಂಬ ಆ ವೀರ ಭಾರತದ ಶೌರ್ಯದ ಪ್ರತೀಕನಾಗಿದ್ದ, ಅವರಿಂದ ಮಹಾರಾಷ್ಟ್ರದ ಭೂಮಿ ಇಂದಿಗೂ ಗೌರವಾದರದಿಂದ ಕಾಣುತ್ತೆ. ಇಂದು ಅಂತಹ ಮಹಾನ್ ಅಮರ ಬಲಿದಾನಿ ನಾನಾ ಫಡ್ನವಿಸರ ಜನ್ಮದಿನ.

ಆದರೆ ಇಂದು ಅಂತಹ ಮಹಾನ್ ಯೋಧ ಹಾಗು ಅಮರ ಬಲಿದಾನಿಯ ಇತಿಹಾಸವನ್ನ ತಮ್ಮ ತೆವಲಿಗೆ ಸೋ ಕಾಲ್ಡ್ ಇತಿಹಾಸಕಾರರು ಇತಿಹಾಸದ ಪುಟಗಳಲ್ಲಿ ಮುಚ್ಚಿ ಹಾಕುವ ಎಲ್ಲ ಪ್ರಯತ್ನವನ್ನೂ ಮಾಡಿದ್ದಾರೆ ಅಥವ ಅವರ ಬಗ್ಗೆ ಕೇವಲ ಒಂದೆರಡು ಸಾಲುಗಳಲ್ಲಿ ಮಾತ್ರ ಉಲ್ಲೇಖಿಸಿ ಕೈ ಬಿಟ್ಟು ಬಿಟ್ಟಿದ್ದಾರೆ. ಇದು ಇತಿಹಾಸಕ್ಕೆ ಹಾಗು ಮಹಾನ್ ಕ್ರಾಂತಿಕಾರಿಗಳಿಗೆ ಮಾಡಿದ ಮೋಸವಲ್ಲದೆ ಮತ್ತೇನು?

ನಾನಾ ಫಡ್ನವಿಸರು ಮಹಾರಾಷ್ಟ್ರದ ಮೈನಾವಲಿ ಗ್ರಾಮದಲ್ಲಿ‌ ಜನಿಸಿದ್ದರು. ಯಾವತ್ತೂ ನಾನಾ ಫಡ್ನವಿಸರು ನೆನಪಾಗದ ಬಾಲಿವುಡ್ ಮಂದಿಗೆ ದುಡ್ಡು ಮಾಡುವ ಶೋಕಿಗಾಗಿ ನೆನಪು‌ ಬರೋದು ಮಾತ್ರ ಗ್ರಾಮೀಣ ಭಾಗಗಳು. ಆಗ ಕಿಲೋ ಮೀಟರ್ ಗಟ್ಟಲೇ ದೂರ ಸವೆಸಿಯಾದರೂ ತಾವು ಶೂಟಿಂಗ್ ಮಾಡುವ ಸ್ಥಳಕ್ಕೆ ತಲುಪಿಬಿಡುತ್ತಾರೆ.

ಎಲ್ಲರೂ ಹಾಗಯೇನಿಲ್ಲ, ಕೆಲವು ದೇಶಭಕ್ತ ನಿರ್ದೇಶಕರೂ ನಮ್ಮಲ್ಲಿದಾರೆ, ನಾನಾ ಫಡ್ನವಿಸರ ಜನ್ಮಸ್ಥಳವಾದ ಮೈನಾವಲಿಯಲ್ಲಿ ಗಂಗಾಜಲ, ಸ್ವದೇಶ, ದಬಂಗ್ ನಂತಹ ಅದೆಷ್ಟು ಚಿತ್ರೀಕರಣವಾಗಿವೆಯೋ.

ಯಾರಿಗೆ ಭಾರತದ ಭವ್ಯ ಇತಿಹಾಸದ ಬಗ್ಗೆ ಅರಿವಿದೆಯೋ ಅವರೆಲ್ಲಾ ನಾನಾ ಫಡ್ನವಿಸರ ಆ ವಿಶಾಲವಾದ ವಾಡೆಯಲ್ಲಿ ಬ್ರಿಟಿಷರ ವಿರುದ್ಧ ಹತ್ತಿದ ಸ್ವಾತಂತ್ರ್ಯದ ಕಿಚ್ಚಿನ ಸ್ಥಳವನ್ನ‌ ನೋಡಲು ಈಗಲೂ ತೆರಳುತ್ತಾರೆ.

ನಾನಾ ಫಡ್ನವಿಸರ ಆ ವಾಡೆಯಿಂದಲೇ ಮರಾಠಾ ಸಾಮ್ರಾಜ್ಯವನ್ನ ಪುನಶ್ಚೇತನಗೊಳಿಸಿ ಬ್ರಿಟಿಷರಿಗೆ ಮಣ್ಣುಮುಕ್ಕಿಸುವ ರಣತಂತ್ರ ರೂಪುಗೊಂಡಿತ್ತು.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೃಷ್ಣಾ ನದಿಯ ತಟದಲ್ಲಿ ಒಂದು ಪುಟ್ಟ ಊರಿದೆ ಅದರ ಹೆಸರೇ ‘ವಾಯಿ’. ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ಆವೃತವಾಗಿರುವ, ಕೃಷ್ಣಾ ನದಿಯ ದಡದಲ್ಲಿರುವ ಈ ಊರಿನ ಸುತ್ತ ಮುತ್ತ ಅನೇಕ ಸುಪ್ರಸಿದ್ಧ ಘಾಟ್ ಗಳಿವೆ. ಅನೇಕ ಪ್ರಾಚೀನ ಹಿಂದೂ ದೇವಾಲಯಗಳನ್ನೂ ನೀವಿಲ್ಲಿ ಕಾಣಬಹುದು. ವಾಯಿ ಯ ಒಂದು ವಿಶೇಷತೆಯೆಂದರೆ ಭಾರತೀಯ ಇತಿಹಾಸ ಕಂಡ ಎರಡು ದೊಡ್ಡ ಪರಿವಾರಗಳು ಇದೇ ಪುಣ್ಯಭೂಮಿಯಲ್ಲಿ ನಮಗೆ ಕಾಣಸಿಗುತ್ತವೆ.

ಇಲ್ಲಿ ಮೋರೋಪಂತ ತಾಂಬೆಯವರಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ತಂದೆಯಾಗುವ ಸೌಭಾಗ್ಯ ಒದಗಿ ಬಂದದ್ದು ಹಾಗು ನಾನಾ ಫಡ್ನವಿಸ್ ಎಂಬ ಅಪ್ರತಿಮ ಶೂರ ಜನಿಸಿದ್ದೂ ಇದೇ ಊರಿನಲ್ಲಿ.

ವಾಯಿ ಯಿಂದ ಸ್ವಲ್ಪ ದೂರದಲ್ಲೇ ನಾನಾ ಫಡ್ನವಿಸರು ಮೆನ್ವಾಲಿ ಎಂಬ ಊರಿನಲ್ಲಿ‌ ತಮ್ಮ ವಾಡೆ(ಬಂಗಲೆ)ಯನ್ನ ಕಟ್ಟಿ ಆಗಿನ ಕಾಲದಲ್ಲಿ ಬ್ರಿಟಿಷರಿಗೆ, ಹೈದರಾಲಿಗೆ, ಟಿಪ್ಪುಗೆ ಸೆಡ್ಡು ಹೊಡೆದದ್ದು ಅದೇ ವಾಡೆಯಿಂದಲೇ.

ಪಾಣಿಪತ್ ಯುದ್ಧದ ಸೋಲಿನ ನಂತರವೂ ಮರಾಠಾ ಸಾಮ್ರಾಜ್ಯವನ್ನ ಬಲಗೊಳಿಸಲು ನಾನಾ ಫಡ್ನವಿಸರು ಮರಾಠಾ ಸಾಮ್ರಾಜ್ಯದ ಪ್ರಧಾನ ಮಂತ್ರಿಗಳಾಗಿ ಅದ್ಭುತವಾದ ಯೋಗದಾನ ನೀಡಿದ್ದರು.

ನಾನಾ ಫಡ್ನವಿಸರು ಇಲ್ಲಿ ತಮ್ಮ ವಾಡೆ, ಶಿವಮಂದಿರ, ಮೇನೇಶ್ವರ ಮಂದಿರವನ್ನೂ ಕಟ್ಟಿಸಿದ್ದರು.

ಬನ್ನಿ ಮೆನ್ವಾಲಿ ಹಳ್ಳಿಯ ಜೊತೆಗೆ ಬೆಸೆದುಕೊಂಡಿರುವ ರೋಚಕ, ಐತಿಹಾಸಿಕ ಕಥೆ ಹಾಗು ಹೇಗೆ ತನ್ನ ಚಾಣಾಕ್ಷ ಬುದ್ಧಿಯಿಂದ ನಾನಾ ಫಡ್ನವಿಸರು ಬ್ರಿಟಿಷರಿಗೆ ಬಾರಿ ಬಾರಿ ಮಣ್ಣುಮುಕ್ಕಿಸಿ ಅಜೇಯರಾಗಿ ಉಳಿದಿದ್ದರು ಅನ್ನೋದನ್ನ ತಿಳಿದುಕೊಳ್ಳೋಣ.

ನಾನಾ ಫಡ್ನವಿಸರ ಜನನ ಸತಾರಾ ಜಿಲ್ಲೆಯಲ್ಲಿ ಬಾಲಾಜಿ ಜನಾರ್ಧನ ಭಾನು ಎಂಬ ಹೆಸರಿನಿಂದಾಗಿತ್ತು. ನಾನಾ ಎಂಬುದು ಅವರ ಉಪನಾಮವಾಗಿತ್ತು. ನಾನಾರ ಅಜ್ಜ ಬಾಲಾಜಿ‌ ಭಾನುರವರು ಕೊಂಕಣ ಕ್ಷೇತ್ರದ ಶ್ರೀವರ್ಧನನ ಸಮುದ್ರತಟದಿಂದ ಹೊರಟು ಹೋಗಿದ್ದರು ಹಾಗು ಮೊದಲನೆಯ ಪೇಶ್ವೆ ಬಾಲಾಜಿ ವಿಶ್ವನಾಥರಿಗೆ ಇವರು ತುಂಬಾ ಹತ್ತಿರದವರಾಗಿದ್ದರು.

ಬಾಲಾಜಿಯವರು ಪೇಶ್ವೆಗಳನ್ನ ಮೊಘಲರಿಂದ ಒಮ್ಮೆ ಬಚಾವ್ ಮಾಡಿದ್ದರು. ಇದರ ಫಲವಾಗಿ ಪೇಶ್ವೇಗಳು ಅವರಿಗೆ ಫಡ್ನವಿಸ್ ಎಂಬ ಬಿರುದನ್ನ ನೀಡಿದ್ದರು. ನಂತರ ಪೇಶ್ವೇಗಳು ಪುಣೆಯ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದ ನಂತರ ಫಡ್ನವಿಸರಿಗೆ ವಿತ್ತ ಮಂತ್ರಿಯ ಜವಾಬ್ದಾರಿಯನ್ನೂ ನೀಡಿದ್ದರು.

ಪರಂಪರಾನುಗತವಾಗಿ ಬಾಲಾಜಿ ಭಾನುರವರಿಗೆ ತಮ್ಮ ಅಜ್ಜನ ಹೆಸರು ಹಾಗು ಶೀರ್ಷಿಕೆ ಸಿಕ್ಕು ನಾನಾ ಫಡ್ನವಿಸ್ ಆಗಿದ್ದರು. ಪೇಶ್ವೆ ತನ್ನ ಮಗನಾದ ವಿಶ್ವಾಸರಾವ್, ಮಾಧವರಾವ್ ಹಾಗು ನಾರಾಯಣರಾವ್ ಗೆ ಫಡ್ನವಿಸರ ಸಮ್ಮುಖದಲ್ಲೇ ಶಿಕ್ಷಣ ಕೊಡಿಸಿದ.

1761ರಲ್ಲಿ ನಡೆದ ಪಾಣಿಪತ್ ನ ಮೂರನೇ ಯುದ್ಧದಲ್ಲಿ ಪೇಶ್ವೇಗಳಿಗಾದ ಸೋಲಿನಿಂದ ಬಾಲಾಜಿರಾವ್ ಪೇಶ್ವೆ ಜರ್ಜರಿತರಾಗಿಬಿಟ್ಟಿದ್ದ. ಆ ಕ್ಷಣ ಮರಾಠ ಸಾಮ್ರಾಜ್ಯಕ್ಕೆ ಒಂದು ರೀತಿಯ crucial time ಅಂತಲೇ ಹೇಳಬಹುದೇನೋ.

ಪಾಣಿಪತ್ ನ ಸೋಲು‌ ಕೇವಲ ಮರಾಠ ಸಾಮ್ರಾಜ್ಯದ ಸೋಲಲ್ಲ ಬದಲಾಗಿ ಮರಾಠ ಸಾಮ್ರಾಜ್ಯದ ಸಮ್ಮಾನ್ ಹಾಗು ಪ್ರತಿಷ್ಠೆಗೆ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡಿತ್ತು. ಈ ಯುದ್ಧದಲ್ಲಿ ಪೇಶ್ವೆ ತನ್ನ ವಾರಸುದಾರನಾಗಿದ್ದ ವಿಶ್ವಾಸರಾವನನ್ನ ಕಳೆದುಕೊಂಡುಬಿಟ್ಟರು. ಅಷ್ಟೇ ಅಲ್ಲ ಮರಾಠ ಸಾಮ್ರಾಜ್ಯದ ಪ್ರಬಲ ಕಮಾಂಡರ್ ಆಗಿದ್ದ ಸದಾಶಿವರಾವ್ ಭಾವುರವರನ್ನೂ ಕಳೆದುಕೊಂಡಿದ್ದರಿಂದ ಮರಾಠ ಸಾಮ್ರಾಜ್ಯಕ್ಕೆ ವಿಪರೀತವಾಗಿ ವಿತ್ತೀಯ ಸಮಸ್ಯೆಗಳು ತಲೆದೋರಿದವು.

ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ತಪ್ಪಿ ಹೋಗಿತ್ತು, ಮುಂದೆ ಪೇಶ್ವೆಯ ಅಧಿಕಾರದ ಪಟ್ಟಕ್ಕೇರುವ ಮಾಧವರಾವನಿಗೆ ಆಗಿನ್ನೂ ಕೇವಲ 17 ವರ್ಷ. ಇಂತಹ ವಿಷಮ‌ ಪರಿಸ್ಥಿತಿಯಲ್ಲಿ ನಾನಾ ಫಡ್ನವಿಸರು ಯುವ ಪೇಶ್ವೆಗಳ‌ ಮಾರ್ಗದರ್ಶನ ನೀಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ಗೋಪಾಲರಾವ್ ಪಟವರ್ಧನ್, ತ್ರಯಂಬಕರಾವ್ ಪೇಟೆ ಹಾಗು ರಾಮಶಾಸ್ತ್ರಿಗಳ ಜೊತೆಗೂಡಿದ ಫಡ್ನವಿಸರು ಅಧಿಕಾರ ಹೇಗೆ ನಡೆಸಬೇಕು ಎಂಬ ಸಕಲ ಮಾರ್ಗದರ್ಶನವನ್ನೂ ನೀಡಿದರು. ಹಾಗು ರಾಜ್ಯದ ಸಮಸ್ಯೆಗಳನ್ನ ಹೇಗೆ ಪರಿಹರಿಸಬೇಕು ಎಂಬ ಸಲಹೆಯ ಜೊತೆ ಜೊತೆಗೆ ಸಾಮ್ರಾಜ್ಯದ ಖಜಾನೆಯನ್ನ ಸಂರಕ್ಷಿಸುವುದು ಹೇಗೆ ಎಂಬುದನ್ನೂ ತಿಳಿಸಿಕೊಟ್ಟರು.
ಕೆಲವೇ ಸಮಯದಲ್ಲಿ ಮರಾಠಾ ಸಾಮ್ರಾಜ್ಯ ಮತ್ತೆ ಪುಟಿದೆದ್ದಿತು.

ನಿಜಾಮರ ಮೇಲೆ ಯುದ್ಧ ಹೂಡಿ ಪೇಶ್ವೆಗಳು ಪಾಣಿಪತ್ ಯುದ್ಧದ ನಂತರ ಕಳೆದುಕೊಂಡಿದ್ದ ಅಸ್ತಿತ್ವವನ್ನ ಪುನಃ ಮರಳಿಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮಾಧವರಾವ್ ಟಿಬಿಯ ಕಾರಣ ನಿಧನವಾಯಿತು ಹಾಗು ಆತನ ತಮ್ಮ ನಾರಾಯಣರಾವ್ ಮುಂದಿನ ಪೇಶ್ವೆಯಾಗಿ ಅಧಿಕಾರ ಸ್ವೀಕರಿಸಿಕೊಂಡ. ಆದರೆ ನಾರಾಯಣರಾವ್ ಪೇಶ್ವೆ ಸಾಮ್ರಾಜ್ಯ ಮುನ್ನಡೆಸಲು ಅಸಮರ್ಥನಾಗಿದ್ದ.

ಇದನ್ನರಿತ ನಾನಾ ಫಡ್ನವಿಸ್ 11 ಮರಾಠ ರಾಜರಗಳ ಕೈಗೆ ಹೋಗಿದ್ದ ರಾಜ್ಯಗಳನ್ನೆಲ್ಲಾ ಪುನಃ ವಾಪಸ್ ಪಡೆದು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟರು.

ಉಳಿದ 11 ಮರಾಠಾ ಸರದಾರರಾಗಿದ್ದ ತುಕೋಜಿರಾವ್ ಹೋಳ್ಕರ್, ಮಹಾದಜಿ ಸಿಂಧ್ಯಾ, ಹರಿಪಂತ ಫಡಕೆ, ಮೋರೊಬಾ ಫಡನಿಸ್, ಶಂಕರಬಾಪು ಬೋಕಿಲ್, ತ್ರಿಂಬಕ್ರಾಮಾ ಪೇಟೆ, ಫಲಟಣಕರ್, ಭಗವಾನರಾವ್ ಪ್ರತಿನಿಧಿ, ಮಾಲೋಜಿ ಘೋರ್ಪಡೆ, ಸರ್ದಾರ್ ರಸ್ತೆ ಹಾಗು ಬಾಬುಜೀ ನಾಯಕರು ಸೇರಿ ಒಂದು ರಿಜೆನ್ಸಿ ಕೌನ್ಸಿಲ್ ಒಂದನ್ನ ಸ್ಥಾಪಿಸಿ ಅದಕ್ಕೆ ಬಾರಭಾಯಿ ಪರಿಷದ್ ಎಂಬ ಹೆಸರನ್ನಿಟ್ಟು ಅದರ ಮೂಲಕ ಬಾಲ ಪೇಶ್ವೆ ಮಾಧವರಾವ್ II ನ್ನ ಸಂರಕ್ಷಿಸಿದರು.

ನಾನಾ ಫಡ್ನವಿಸರು ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವರಾಗಿರಲಿಲ್ಲ. ಅವರಿಗೆ ಹಿಂದೂ ಸಾಮ್ರಾಜ್ಯ ಕಟ್ಟುವುದೇ ಸರ್ವಶ್ರೇಷ್ಠ ವಾದ ಕಾರ್ಯವಾಗಿತ್ತು.

ಫಡ್ನವಿಸರು ಒಬ್ಬ ದೂರದೃಷ್ಟಿಯುಳ್ಳ ವ್ಯಕ್ತಿತ್ವದವರಾಗಿದ್ದರು. ಬ್ರಿಟಿಷ್ ಹಾಗು ಫ್ರೆಂಚರ ಒಳಸಂಚಿನ ಬಗ್ಗೆ ಹಾಗು ಅವರ ವೀಕ್ನೆಸ್ಗಳನ್ನ ಫಡ್ನವಿಸರು ತುಂಬಾ ಚೆನ್ನಾಗಿಯೇ ಅಧ್ಯಯನ ನಡೆಸಿದ್ದರು. ಫಡ್ನವಿಸರು ವಿಶಿಷ್ಟವಾದ ಗೂಢಚಾರಿ ವಿಭಾಗ ಹಾಗು ಗೂಢಚಾರಿಗಳ ನೆಟವರ್ಕನ್ನ ಸ್ಥಾಪಿಸಿಬಿಟ್ಟಿದ್ದರು.
ಅದು ಎಷ್ಟು ಬಲಿಷ್ಟವಾದ ನೆಟವರ್ಕ್ ಆಗಿತ್ತೆಂದರೆ ತಮ್ಮ ಸಾಮ್ರಾಜ್ಯದ ಯಾವುದೇ ಮೂಲೆಯಲ್ಲಿ ಏನೇ ಘಟನೆಗಳು ಸಂಭಂವಿಸಿದರೂ ಜೆಲವೇ ಗಂಟೆಗಳಲ್ಲಿ ಅದರ ರಿಪೋರ್ಟ್ ಫಡ್ನವಿಸರಿಗೆ ತಲುಪುತ್ತಿತ್ತು.

ಮರಾಠಾ ಸಾಮ್ರಾಜ್ಯವನ್ನ ಸೋಲಿಸಿ ಧೂಳಿಪಟ ಮಾಡಬೇಕೆಂದರೆ ಅದು ಫಡ್ನವಿಸರನ್ನ ಮುಗಿಸಿದರೆ ಮಾತ್ರ ಸಾಧ್ಯವೆಂಬುದು ಅದಾಗಲೇ ಬ್ರಿಟಿಷರಿಗೆ ಅರ್ಥವಾಗಿತ್ತು. ತಮ್ಮ ಕುಟಿಲನೀತಿಗಳಿಂದ ಬ್ರಿಟೀಷರು ಫಡ್ನವಿಸರನ್ನ ಅಧಿಕಾರದಿಂದ ಕೆಳಗಿಳಿಸೋಕೆ ಅನೇಕ ಕುತಂತ್ರಗಳನ್ನ ಮಾಡಿದರು ಆದರೆ ಮರಾಠ ಸಾಮ್ರಾಜ್ಯದ ಜನ ಮಾತ್ರ ಫಡ್ನವಿಸರನ್ನ ಸೋಲಲು ಬಿಡದೆ ಬ್ರಿಟೀಷರ ಕುಟೀಲ ನೋತಿಗೆ ತಣ್ಣೀರೆರಚಿಬಿಟ್ಟಿದ್ದರು.

ಇದರ ಮಧ್ಯೆ 1775 ರಲ್ಲಿ‌ ಸೂರತ್ ನಲ್ಲಿ ಮರಾಠರ ಜೊತೆ ಬ್ರಿಟೀಷರು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಆದರೆ ಫಡ್ನವಿಸರು ಚಾಣಾಕ್ಷತನದ ಮುಂದೆ ಬ್ರಿಟಿಷರ ಆಟ ನಡೆಯಲಿಲ್ಲ. 1777 ರಲ್ಲೂ ಬ್ರಿಟಿಷರು ಮರಾಠರ ಜೊತೆ ಮತ್ತೊಂದು ಒಪ್ಪಂದ ಮಾಡಿಕೊಂಡರು. ಅದರ ಉದ್ದೇಶವೇ ಫಡ್ನವಿಸರನ್ನ ಕೆಳಗಿಳಿಸೋದಾಗಿತ್ತು.

ಎಂತಹ ಒಪ್ಪಂದಗಳಾದರೂ ಅದು ಬರೀ ಹೆಸರಿಗೆ ಮಾತ್ರ ಸೀಮಿತವಾಗಿತ್ತು ಬ್ರಿಟಿಷರಿಗೆ.
ನಾನಾ ಫಡ್ನವಿಸರು ನಿಜಾಮ, ಹೈದರಾಲಿ, ಆರಕೋಟದ ನವಾಬ ಹಾಗು ಮೊಘಲ್ ಸಾಮ್ರಾಟನಾಗಿದ್ದ ಶಾಹ್ ಆಲಮ್ ನ ಜೊತೆಗೂಡಿ ಮೈತ್ರಿಕೂಟವೊಂದನ್ನ ರಚಿಸಿಬಿಟ್ಟ. ಇದರ ಉದ್ದೇಶ ಸ್ಪಷ್ಟವಾಗಿತ್ತು, ಅದುವೇ ಬ್ರಿಟೀಷರನ್ನ ಭಾರತ ಬಿಟ್ಟೋಡಿಸೋದು.

ಇದಾದ ನಂತರ ಹುಂಬನಾಗಿದ್ದ ಹೈದರಾಲಿಯ ಮಗ ಕಂಡ ಕಂಡ ರಾಜ್ಯಗಳ ಅದರಲ್ಲೂ ತನ್ನ ಮಿತ್ರ ರಾಜ್ಯಗಳ ಮೇಲೂ ಹುಚ್ಚನ ಹಾಗೆ ಎರಗಿ ಯುದ್ಧಕ್ಕೆ ಹೊರಡುತ್ತಿದ್ದ. ಅಂತಹ ಹುಂಬ ಟಿಪ್ಪುವನ್ನ ನಾನಾ ಫಡ್ನವಿಸರು ತಕ್ಕ ಪಾಠವನ್ನ ಗಜೇಂದ್ರಗಢದಲ್ಲಿ ನಡೆದ ಯುದ್ಧದಲ್ಲಿ ತೋರಿಸಿದ್ದಕ್ಕೆ ರಣರಂಗದಿಂದಲೇ ಹೇಡಿ ಟಿಪ್ಪು ಓಡಿ ಹೋಗಿದ್ದ.

ಆಗಿನ ಬ್ರಿಟಿಷ್ ಗವರ್ನರ್ ಆಗಿದ್ದ ವಾರನ್ ಹೆಸ್ಟಿಂಗ್ ಒಡೆದಾಳುವ ನೀತಿ ಅನುಸರಿಸಿ ಮಹಾದಾಜಿ ಶಿಂಧೆಯ ಜೊತೆ ಒಪ್ಪಂದವೊಂದಕ್ಕೆ ಸಹಿ ಮಾಡಿಸಿಕೊಂಡು ಫಡ್ನವಿಸರಿಗೆ ಪಾಠ ಕಲಿಸಲು ಮುಂದಾದ. ಆದರೆ ಫಡ್ನವಿಸರ ಚಾಣಾಕ್ಷತೆಯ ಮುಂದೆ ವಾರನ್ ಹೆಸ್ಟಿಂಗ್ ಸೋತು ಸುಣ್ಣವಾಗಿಬಿಟ್ಟ.

ನಾನಾ ಫಡ್ನವಿಸರು‌1800 ರಲ್ಲಿ ವಿಧಿವಶರಾದರು ಹಾಗು ಅವರ ನಿಧನದ ಜೊತೆಯಲ್ಲೇ ಮರಾಠಾ ಸಾಮ್ರಾಜ್ಯದ ಹಿರಿಮೆ ಗರಿಮೆ ಕೂಡ ಪತನ ಕಾಣುವಂತಾಯಿತು.

ಫಢ್ನವಿಸರ ನಿಧನದ ನಂತರ ಬ್ರಿಟಿಷರು ಸ್ವಾರ್ಥಿ ಮರಾಠ ಸಾಮ್ರಾಜ್ಯದ ರಾಜರುಗಳಾಗಿದ್ದ ಕೆಲವರನ್ನ ತಮ್ಮೆಡೆ ಸೆಳೆದು ಅವರೆಲ್ಲರನ್ನೂ ಒಬ್ಬರನ್ನೊಬ್ಬರು ದ್ವೇಷಿಸುವ ಹಾಗೆ ಮಾಡಿಬಿಟ್ಟಿದ್ದರು.

ಸಂಕ್ಷೀಪ್ತವಾಗಿ ಹೇಳಬೇಕೆಂದರೆ 1800 ರಲ್ಲಿ‌ ಫಡ್ನವಿಸರ ನಿಧನದ ನಂತರವೇ ಬ್ರಿಟೀಷರು ಭಾರತದ ಮೇಲಿನ ತಮ ಅಂಕುಶವನ್ನ ಮತ್ತಷ್ಟು ಬಿಗಿಗೊಳಿಸಿದ್ದು ಹೊರತು ಫಡ್ನವಿಸರು ಬದುಕಿರುವವರೆಗೂ ಬ್ರಿಟೀಷರು ಬಾಯಿ ಮುಚ್ಚಿಕೊಂಡು ಭಾರತದಲ್ಲಿದ್ದರು.

ನಾನಾ ಫಡ್ನವಿಸರ ಮರಣದ 50 ವರ್ಷಗಳವರೆಗೆ ಬ್ರಿಟಿಷರನ್ನ ಎದುರಿಸೋರು ಯಾರೂ ಇಲ್ಲದಂತಹ ಪರಿಸ್ಥಿತಿಯಿತ್ತು. ಅಷ್ಟರಲ್ಲೇ “ಮತ್ತೊಬ್ಬ ನಾನಾ” ಎಂದೇ ಪ್ರಸಿದ್ಧರಾದ ತಾತ್ಯಾ ಟೋಪೆ ಹಾಗು ನಾನಾಸಾಹೇಬರ ಜೋಡಿ ಬ್ರಿಟೀಷರಿಗೆ ಮಣ್ಣುಮುಕ್ಕಿಸಲು ಸಜ್ಜಾಗಿ ನಿಂತಿದ್ದ‌.

ಆದರೆ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಸಫಲವಾಗಿತ್ತು. ಅದಾದ ನಂತರ 90 ವರ್ಷಗಳ ಕಾಲ ಬ್ರಿಟೀಷರಿಗೆ ಟಾಂಗ್ ಕೊಡುವಂತಹ ಯಾವ ನಾಯಕನೂ‌ ಇರಲಿಲ್ಲ. ಒಂದು ವೇಳೆ ಎರಡನೆ ವಿಶ್ವಯುದ್ಧದಲ್ಲಿ ಬ್ರಿಟಿಷರ ಪರಿಸ್ಥಿತಿ ಕೆಟ್ಟದಾಗಿರುತ್ತಿರಲಿಲ್ಲವಾದರೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ರಂತಹ ಮಹಾನ್ ಕ್ರಾಂತಿಕಾರಿಗಳ ಹೋರಾಟವನ್ನೂ ಬ್ರಿಟಿಷರು ಹತ್ತಿಕ್ಕುತ್ತಿದ್ದರೇನೋ.

ಅಂದು ಆ ನಾನಾ ಫಡ್ನವಿಸರಿಗೆ ಹೆದರಿದ್ದ ಬ್ರಿಟಿಷರು ಮತ್ತೆ ಹೆದರಿದ್ದು ಸುಭಾಷರಿಗೆಂದರೆ ಅತಿಶಯೋಕ್ತಿಯೇನಲ್ಲ ಬಿಡಿ.

ಇಂದು ಆ ಮಹಾನ್ ಚಾಣಾಕ್ಷ ನಾನಾ ಫಡ್ನವಿಸರ ಜನ್ಮದಿನ, Nationalist Views ತಂಡದ ವತಿಯಿಂದ ಆ ಮಹಾನ್ ಕ್ರಾಂತಿಕಾರಿ ನಾನಾ ಫಡ್ನವಿಸರಿಗೊಂದು ಶತ ಶತ ನಮನಗಳು!!

– Team Nationalist Views

©2018 Copyrights Reserved

 •  
  3.7K
  Shares
 • 3.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com