Connect with us
Loading...
Loading...

ಅಂಕಣ

31 ವರ್ಷಗಳ ನಂತರ ನೀರಜಾ ಕೇಸ್ ರೀಓಪನ್!! 300 ಜನರ ಪ್ರಾಣವನ್ನು ರಕ್ಷಿಸಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ನೀರ್ಜಾ ಭನೋತ್ ಬಗ್ಗೆ ನಿಮಗೆಷ್ಟು ಗೊತ್ತು?

Published

on

 • 1.4K
 •  
 •  
 •  
 •  
 •  
 •  
 •  
  1.4K
  Shares

ನೀರ್ಜಾ ಭನೋತ್ ..!!
ಈ ಹೆಸರು ಗೊತ್ತೇ..? ಇವಳ ಸಾಹಸ ಗೊತ್ತೇ..?? ತನ್ನ ಸಮಯಪ್ರಜ್ಞೆಯಿಂದ 300 ಜನರ ಪ್ರಾಣವನ್ನು ಈಕೆ ರಕ್ಷಿಸಿದ್ದಳು ಅನ್ನೋದರ ಬಗ್ಗೆ ಗೊತ್ತೇ..??

ನೀರ್ಜಾ ಭನೋತ್ ಹುಟ್ಟಿದ್ದು ಸೆಪ್ಟೆಂಬರ್ 7, 1963 ಚಂಡೀಗಢದಲ್ಲಿ. ಬಾಲ್ಯದಿಂದಲೂ ಈಕೆಗೆ ಆಗಸದಲ್ಲಿ ಸಂಚರಿಸುವ ಕನಸು, ಸ್ವಚ್ಛಂದವಾಗಿ ಆಕಾಶದಲ್ಲಿ ವಿಹರಿಸುವ ಅದಮ್ಯ ಬಯಕೆ. ತನ್ನ ಪರಿಶ್ರಮದಿಂದ ಕನಸನ್ನು ಸಾಕಾರಮಾಡಿಕೊಂಡಳು.

‘ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್’ ಪದವಿಗೆ ಅರ್ಜಿ ಸಲ್ಲಿಸಿದಳು. ಸುಮಾರು 10 ಸಾವಿರ ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕೊನೆಯ 80 ಜನ ಮಹಿಳೆಯರಲ್ಲಿ ‘ನೀರಜಾ ಭಾನೋಟ್’ ಒಬ್ಬಳಾಗಿ ತರಬೇತಿಗೆ ಆಯ್ಕೆಯಾಗಿದ್ದಳು.

ಅಮೆರಿಕದ ಮಯಾಮಿಯಲ್ಲಿ ಜರುಗಿದ ತರಬೇತಿಯಲ್ಲಿ ಜಯಗಳಿಸಿದ ಅವಳನ್ನು ಚೀಫ್ ಫ್ಲೈಟ್ ಪರ್ಸರ್ ಆಗಿ ನೇಮಿಸಲಾಯಿತು.

‘ಟೆರರಿಸಂ ವಿರುದ್ಧದ ಟ್ರೈನಿಂಗ್’ ನಲ್ಲೂ ಆಕೆಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. ನೀರಜಾಳಿಗಿದ್ದ ಧೈರ್ಯ,ಮುಂದಾಳತ್ವದ ಗುಣ ಅವಳ ತರಭೇತಿಯಲ್ಲಿ ಆಕೆಗೆ ಸಹಾಯಕವಾಗಿದ್ದವು.

ಡಿಸೆಂಬರ್ 5, 1986 ರಲ್ಲಿ ಅವಳು ಗಗನಸಖಿಯಾಗಿದ್ದ ಅಮೇರಿಕಾದ ವಿಮಾನ ಭಾರತದಿಂದ ಅಮೇರಿಕಾಕ್ಕೆ ಪಾಕಿಸ್ತಾನದ ಮೂಲಕ ತೆರಳುವುದಿತ್ತು. ಫ್ಲೈಟ್ ಮುಂಬೈನ ಸಹಾರಾ ಏರ್ಪೋರ್ಟ್ ನಿಂದ ಪಾಕಿಸ್ತಾನದ ಕರಾಚಿಯ ವಿಮಾನನಿಲ್ದಾಣಕ್ಕೆ ತಲುಪಿ ಪ್ರಯಾಣಿಕರನ್ನು ತುಂಬಿಕೊಂಡು ಪೈಲೆಟ್ನ ಆಗಮನದ ನಿರೀಕ್ಷೆಯಲ್ಲಿತ್ತು.

ಆಗ ನಡೆಯಿತು ಭಯೋತ್ಪಾದಕರ ಅಟ್ಟಹಾಸ!!

ನೋಡು ನೋಡುತ್ತಿದ್ದಂತೇ 4 ಜನ ಉಗ್ರರು ವಿಮಾನವನ್ನು ಸೇರಿ ಜನರನ್ನು ಶಸ್ತ್ರಾಸ್ರಗಳಿಂದ ಸುತ್ತುವರಿದರು. 500 ಜನರಿದ್ದ ವಿಮಾನದಲ್ಲಿ ಭೀಕರದೃಶ್ಯ. ಆ ಭಯೋತ್ಪಾದಕರು ಪಾಕಿಸ್ತಾನ ಸರಕಾರಕ್ಕೆ ಪೈಲೆಟ್ ನ್ನು ಬೇಗ ಕಳುಹಿಸುವ ಬೇಡಿಕೆಯಿಟ್ಟರು.

ವಿಮಾನನ್ನು ಹೈಜಾಕ್ ಮಾಡುವ ಉದ್ದೇಶ ಅವರದ್ದಾಗಿತ್ತು. ಈ ಉದ್ದೇಶವನ್ನು ಅರಿತ ಪಾಕಿಸ್ತಾನದ ಸರಕಾರ ಪೈಲೆಟನ್ನು ಕಳುಹಿಸಲು ನಿರಾಕರಿಸಿತು. ಕೋಪಗೊಂಡ ಉಗ್ರರು, ಎಲ್ಲಾ ಪ್ರಯಾಣಿಕರ ಪಾಸ್ಪೋರ್ಟ್ ಪಡೆಯುವಂತೇ ಗಗನಸಖಿಯರಿಗೆ ಹೇಳಿದರು.

ಯಾರಾದರೂ ಅಮೇರಿಕಾ ನಾಗರಿಕರಿದ್ದರೆ ಅವರನ್ನು ಕೊಂದು ಪಾಕಿಸ್ತಾನ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಅವರದ್ದಾಗಿತ್ತು.

ನಂಬಿ.. ಅಮೇರಿಕಾ ತನ್ನ ಪ್ರಜೆಗಳ ರಕ್ಷಣೆಗೆ ಯಾವ ಬಲಿದಾನವನ್ನಾದರೂ ಮಾಡುತ್ತದೆ. ಪಾಕಿಸ್ತಾನದಲ್ಲಿ ತನ್ನ ಪ್ರಜೆಗಳ ಹತ್ಯೆಯಾದರೆ ಅಮೇರಿಕಾ ಸುಮ್ಮನಿರಲಾರದು ಎಂಬ ವಿಚಾರ ಉಗ್ರರಿಗೆ ಗೊತ್ತಿತ್ತು. ಅಮೇರಿಕಾದ ಪ್ರಜೆಗಳನ್ನು ಕೊಲ್ಲುವೆನೆಂಬ ಬೆದರಿಕೆಯೊಡ್ಡಿದರೆ ಪಾಕಿಸ್ತಾನ ಸರಕಾರ ಅವರ ಬೇಡಿಕೆಯನ್ನು ಪೂರೈಸುತ್ತದೆಯೆಂಬ ವಿಚಾರವೂ ಅವರಿಗೆ ತಿಳಿದಿತ್ತು..

ಗಗನಸಖಿ ನೀರಜಾ ಎಲ್ಲರ ಪಾಸ್ಪೋರ್ಟ್ ಪಡೆದುಕೊಂಡಳು. 5 ಜನ ಅಮೇರಿಕಾ ಯಾತ್ರಿಕರಿದ್ದರು.. ನೀರಜಾ ತನ್ನ ಜಾಣತನದಿಂದ ಐದು ಪಾಸ್ಪೋರ್ಟನ್ನು ಅಡಗಿಸಿ ಉಳಿದ ಪಾಸ್ಪೋರ್ಟ್ಗಳನ್ನು ಉಗ್ರರಿಗೆ ನೀಡಿದಳು. ಅಷ್ಟಕ್ಕೂ ಬಿಡದ ಉಗ್ರರು ಬ್ರಿಟಿಷ್ ಪ್ರಜೆಯೊಬ್ಬನನ್ನು ಹಿಡಿದು ಕೊಲ್ಲಲು ಮುಂದಾದರು. ನೀರಜ ಹೇಗೋ ಉಗ್ರರ ಮನವೊಲಿಸಿ ಅದನ್ನೂ ತಪ್ಪಿಸಿದಳು.

ಅಲ್ಲಿಗೆ 16 ಘಂಟೆಗಳು ಕಳೆದೇಹೋಗಿದ್ದವು.

ಉಗ್ರರ – ಪಾಕಿಸ್ತಾನ ಸರಕಾರದ ಮಾತುಕತೆ ಇನ್ನೂ ಬಗೆಹರಿಯುವ ಹಂತ ತಲುಪಿರಲಿಲ್ಲ. ಉಗ್ರರ ಸಹನೆಯ ಕಟ್ಟೆಯೊಡೆಯುತ್ತಿತ್ತು. ಯಾವ ಕ್ಷಣದಲ್ಲಾದರೂ ಜನರ ಮೇಲೆ ಮುಗಿಬೀಳುವ ಸಾಧ್ಯತೆಯಿತ್ತು..

ವಿಮಾನದಲ್ಲಿ ಇಂಧನ ಖಾಲಿಯಾಗುವ ಹಂತದಲ್ಲಿದೆಯೆಂಬ ವಿಚಾರ ನೀರಜಾಳಿಗೆ ತಿಳಿಯಿತು. ಇಂಧನ ಖಾಲಿಯಾದ ಮೇಲೆ ವಿಮಾನದಲ್ಲಿ
ಬೆಳಕಿಲ್ಲದೇ ಕತ್ತಲೆ ಕವಿಯುತ್ತದೆಯೆಂಬ ವಿಷಯ ನೀರಜಾಳಿಗೆ ಗೊತ್ತಿತ್ತು.

ಒಂದು ಉಪಾಯ ಹೊಳೆಯಿತು. ಉಗ್ರರ ಮನವೊಲಿಸಿ, ಪ್ರಯಾಣಿಕರಿಗೆ ಅಹಾರವನ್ನು ಒದಗಿಸುವಂತೆ ತನ್ನ ಸಖಿಯರಿಗೆ ಹೇಳಿದಳು. ಸಖಿಯರು ಆಹಾರ ನೀಡುತ್ತಾ ವಿಮಾನದ ತುರ್ತುದ್ವಾರವನ್ನು ಹೇಗೆ ತೆರೆಯುವುದೆಂದು ಪ್ರಯಾಣಿಕರಿಗೆ ರಹಸ್ಯವಾಗಿ ತಿಳಿಹೇಳಿದರು.

ಸ್ವಲ್ಪ ಸಮಯ.. ನೀರಜಾ ಯೋಚಿಸಿದಂತೇ ವಿಮಾನದ ಇಂಧನ ಖಾಲಿಯಾಯಿತು.. ಎಲ್ಲಡೆ ಕತ್ತಲೆ ಕವಿಯಿತು.. ಕೂಡಲೇ ಪ್ರಯಾಣಿಕರು , ಗಗನಸಖಿಯರು ವಿಮಾನದ ಎಲ್ಲಾ ತುರ್ತುದ್ವಾರಗಳನ್ನು, ಕಿಡಕಿಗಳನ್ನು ತೆಗೆದರು. ಪ್ರಯಾಣಿಕರು ತುರ್ತುದ್ವಾರಗಳಿಂದ ಹಾರತೊಡಗಿದರು.

ಏನು ನಡೆಯುತ್ತಿದೆಯೆಂದು ಅರ್ಥೈಸಿಕೊಳ್ಳಲಾಗದೇ
ಭಯೋತ್ಪಾದಕರು ಕತ್ತಲೆಯಲ್ಲೇ ಗುಂಡಿನ ದಾಳಿಗೈದರು.

20 ಜನ ಪ್ರಯಾಣಿಕರು ಕೊಲ್ಲಲ್ಪಟ್ಟರು, ಕೆಲವರಿಗೆ ಗಾಯಗಳಾದವು ಆದರೆ ಉಳಿದ 300 ಜನರನ್ನ ನೀರಜಾ ಪ್ರಾಣಾಪಾಯದಿಂದ ಪಾರು ಮಾಡಿದ್ದಳು.

ಇನ್ನೊಂದು ಕಡೆ ಪಾಕಿಸ್ತಾನದ ಸೈನ್ಯಪಡೆ ಉಗ್ರರ ಕಡೆ ದಾಳಿಗೈದಿತ್ತು. ಮೂರೂ ಜನ ಉಗ್ರರನ್ನು ಸದೆಬಡಿದಿತ್ತು..

ನೀರಜಾ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿ ತಾನೂ ವಿಮಾನದಿಂದ ಜಿಗಿಯುವವಳಿದ್ದಳು ಆದರೆ ಅಷ್ಟರಲ್ಲಿ ಚಿಕ್ಕಮಕ್ಕಳ ಅಳು ಕೇಳಿಬಂತು. ನೀರಜಾ ಮಕ್ಕಳನ್ನು ಹುಡುಕಿದಳು.

3 ಚಿಕ್ಕಮಕ್ಕಳು ವಿಮಾನದಲ್ಲಿಯೇ ಇದ್ದರು. ನೀರಜಾ ಅವರನ್ನು ಹಿಡಿದುಕೊಂಡು ತುರ್ತುದ್ವಾರದ ಬಳಿ ಸಾಗುತ್ತಿದ್ದಳು. ಅಷ್ಟರಲ್ಲಿ ಜೀವ ಉಳಿಸಿಕೊಂಡಿದ್ದ ನಾಲ್ಕನೇ ಉಗ್ರ ಎದುರಾದ. ನೋಡುತ್ತಿಂದ್ದಂತೇ ಮಕ್ಕಳನ್ನು ತುರ್ತುದ್ವಾರದ ಮೂಲಕ ಹೊರಗೆ ತಳ್ಳಿದಳು.

ಉಗ್ರ ಎದುರಿಗೆ ನಿಂತು ನೀರಜಾಳ ದೇಹದ ಮೇಲೆ ಗುಂಡಿನ ಸುರಿಮಳೆಗೈದ. 23 ವಯಸ್ಸಿನ ಪುಟ್ಟಹುಡುಗಿಯ ಜೀವ ಪಂಚಭೂತಗಳಲ್ಲಿ ಲೀನವಾಗಿಬಿಟ್ಟಿತ್ತು.

ಪಾಕಿಸ್ತಾನ ಸೇನೆ ಆ ಉಗ್ರನನ್ನೂ ಸಾಯಿಸಿತು. ಆದರೂ ವೀರಹುಡುಗಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಳು. ನೀರ್ಜಾ ಭನೋತ್ ಬಯಸಿದ್ದರೆ ಎಲ್ಲರಿಗಿಂತ ಮುಂಚೆಯೇ ಕಿಡಕಿಯಿಂದ ಹಾರಿ ತನ್ನ ಜೀವವನ್ನು ಉಳಿಸಿಕೊಳ್ಳಬಹುದಿತ್ತು.

ಆದರೆ ಆಕೆ ಭಾರತ ಮಾತೆಯ ವೀರಪುತ್ರಿಯಾಗಿದ್ದಳು. ತನ್ನ ಕರ್ತವ್ಯವನ್ನು ಪೂರೈಸುವುದೇ ಅವಳ ಉದ್ದೇಶವಾಗಿತ್ತು. ನೀರಜಾಳ ಈ ಶೌರ್ಯಕ್ಕೆ ಭಾರತ ಸರ್ಕಾರ ಅಶೋಕಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪಾಕಿಸ್ತಾನ ಸರ್ಕಾರವೂ , ತಮಗ-ಎ- ಇನ್ಸಾನಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಸ್ವಾತಂತ್ರ್ಯ ಭಾರತದ ವೀರವನಿತೆ ನೀರಜಾ.. ಇಂತಹ ವೀರಪುತ್ರಿಯರನ್ನು ಹಡೆದ ಭಾರತಮಾತೆಯೇ ಧನ್ಯ!! ಸಹೋದರಿ ನೀರಜಾಳಿಗೆ ನಮ್ಮ ಕೋಟಿ-ಕೋಟಿ ನಮನಗಳು..

ಅಂದು ಅಂದರೆ 31 ವರ್ಷಗಳ ಹಿಂದೆ ಕರಾಚಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕದ ಎಫ್‌ಬಿಐ ಏಜ್‌ ಪ್ರೊಗ್ರೆಸ್ಡ್‌ ಟೆಕ್ನಾಲಜಿ ಬಳಸಿಕೊಂಡು ನಾಲ್ವರು ಶಂಕಿತ ಉಗ್ರರ ಚಿತ್ರಗಳನ್ನು ಪ್ರಕಟಿಸಿದೆ.


ಈ ನಾಲ್ವರನ್ನು ಮೊಹಮ್ಮದ್‌ ಹಫೀಜ್‌ ಅಲ್‌ ತುರ್ಕಿ, ಜಮಾಲ್‌ ಸಯೀದ್‌ ಅಬ್ದುಲ್‌ ರಹೀಂ, ಮೊಹಮ್ಮದ್‌ ಅಬ್ದುಲ್ಲಾ ಖಲೀಲ್‌ ಹುಸೇನ್‌ ಉರ್‌ ರಹಯಾಲ್‌ ಮತ್ತು ಮೊಹಮ್ಮದ್‌ ಅಹ್ಮದ್‌ ಅಲ್‌ ಮುನಾವರ್‌ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಅಬು ನಿದಲ್‌ ಸಂಘಟನೆಗೆ ಸೇರಿದವರಾಗಿದ್ದು, ಅಮೆರಿಕದ ಮೋಸ್ಟ್‌ ವಾಂಟೆಂಡ್‌ ಟೆರರಿಸ್ಟ್‌ ಪಟ್ಟಿಗೆ ಸೇರಿಸಲಾಗಿದೆ ತನಿಖಾ ಸಂಸ್ಥೆ ಹೇಳಿದೆ.

 •  
  1.4K
  Shares
 • 1.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com