Connect with us
Loading...
Loading...

ಅಂಕಣ

ಮೋದಿಯವರನ್ನ 2024 ರವೆರೆಗೆ ಪ್ರಧಾನಿ ಹುದ್ದೆಯಿಂದ ಇಳಿಸೋಕೆ ಆಗಲ್ಲ!! ಹೀಗಂದಿದ್ದು ಬಿಜೆಪಿಯವರಲ್ಲ, ಯಾರು ಹೀಗಂದಿದ್ದು?

Published

on

  • 4K
  •  
  •  
  •  
  •  
  •  
  •  
  •  
    4K
    Shares

“ಮೋದಿಯವರನ್ನ 2024 ರವೆರೆಗೆ ಪ್ರಧಾನಿ ಹುದ್ದೆಯಿಂದ ಇಳಿಸೋಕೆ ಆಗಲ್ಲ!!”, ಹೀಗಂದಿದ್ದು ಬಿಜೆಪಿಗರಲ್ಲ, ಆರ್ಎಸ್ಎಸ್ ನವರು ಅಲ್ಲ, ಎಬಿವಿಪಿಯವರು ಅಲ್ಲ. ಈ ಹೇಳಿಕೆಯನ್ನು ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್.

ಶುಕ್ರವಾರ ಮುಂಬೈ ಮರಾಠಿ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ಅಂಬೇಡ್ಕರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ. ಹೀಗಾಗಿ ಆ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ. ರಾಹುಲ್ ಗಾಂಧಿ ಹೊರತು ಪಡಿಸಿ ಕಾಂಗ್ರೆಸ್’ನ ಇತರ ನಾಯಕರಿಗೆ ಇಂತಹ ವ್ಯಕ್ತಿತ್ವ ಇಲ್ಲ. ಹೀಗಾಗಿ ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ. 2024ರವರೆಗೆ ಬಿಜೆಪಿ ಮಣಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ಮೋದಿಯವರನ್ನು ದೆಹಲಿ ಗದ್ದುಗೆಗೆ ಕೂರಿಸುವುದೇ ಇಡೀ ದೇಶಪ್ರೇಮಿ ಬಳಗಕ್ಕೆ ದೊಡ್ಡ ಸವಾಲಾಗಿತ್ತು. ಅದೆಷ್ಟೋ ವರ್ಷಗಳಿಂದ ಭಾರತೀಯರು ಕಾದಿದ್ದರೋ ಏನೋ 26 ಮೇ 2014ರಂದು ಭವ್ಯಭಾರತದ ಚುಕ್ಕಾಣಿಯನ್ನು ಮೋದಿಯವರಿಗೆ ವಹಿಸಿಬಿಟ್ಟರು. ಭಾರತೀಯರು ಸುಮಾರು ವರ್ಷಗಳಿಂದ ಬೇಸತ್ತಿದ್ದರೋ ಏನೋ ಕೊನೆಗೆ 2014ರಲ್ಲಿ ಮೋದಿಯವರನ್ನು ಗೆಲ್ಲಿಸಿಬಿಟ್ಟರು.

 

ಗುಜರಾತಿನ ಕಾರ್ಯವೈಖರಿಯನ್ನು ನೋಡಿದ್ದಕ್ಕೋ ಏನೋ ಭಾರತೀಯರು ಬಹುಮತದಿಂದ ಗೆಲ್ಲಿಸಿದ್ದರು. ಅದೆಷ್ಟು ಭರ್ಜರಿ ಬಹುಮತ ಸಿಕ್ಕಿತ್ತೆಂದರೆ ಮೋದಿ ತಾವು ಸ್ಪರ್ದಿಸಿದ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಯಾರ ಬೆಂಬಲ ಪಡೆಯದೆ ಸರ್ಕಾರ ರಚನೆ ಮಾಡುವಂತಾಯ್ತು. ಇದರರ್ಥ ಭಾರತೀಯರು ನೊಂದು ಬೆಂದು ರೋಸಿಹೋಗಿದ್ದರಾ? ಏನೋ ಗೊತ್ತಿಲ್ಲ. ಇದ್ದರೂ ಇರಬಹುದು. ಎಷ್ಟೋ ರಾಜ್ಯಗಳಲ್ಲಿ MP ಅಭ್ಯರ್ಥಿಗಳ ಹೆಸರು ಅಲ್ಲಿನ ಜನರಿಗೆ ಗೊತ್ತೇ ಇರಲಿಲ್ಲ. ಕಾರಣವಿಷ್ಟೇ ಭಾರತೀಯರಿಗೆ ಹಿಂದಿನ ಸರ್ಕಾರ ನೋಡಿ ನೋಡಿ ಸಾಕಾಗಿತ್ತು.

ಮೋದಿ ಪ್ರಧಾನಿಯಾದ ನಂತರ ಈ ಹಿಂದೆ ಯಾವ ರಾಜಕಾರಣಿಗಳು ಮಾಡಿರದಂತಹ ರೀತಿಯಲ್ಲಿ ಸಂಸತ್ತಿನ ತಲೆ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು.ಅಲ್ಲದೇ ಮೊದಲ ಭಾಷಣದಲ್ಲಿ ಈ ದೇಶದ ಪ್ರಧಾನ ಸೇವಕನಂತೆ ಕೆಲಸ ಮಾಡುತ್ತೇನೆ ನನ್ನ ಮೇಲೆ ನಂಬಿಕೆ ಇಡಿ ಎಂದರು ಆ ನಂಬಿಕೆ ಹುಸಿಯಾಗಲಿಲ್ಲ. ಪ್ರಧಾನಿ ಮೋದಿ ಅಧಿಕಾರವಹಿಸಿ ಕೊಂಡಾಗಿನಿಂದಲೂ ಇನ್ನೂವರೆಗೆ ಒಂದೇ ಒಂದು ರಜೆಯನ್ನು ಹಾಕಿಲ್ಲ,ದಿನಾಲೂ 18 ಗಂಟೆ ಕೆಲಸ ಮಾಡುತ್ತಾರೆ.

ಕುಡಿದು ಸಂಸತ್ತಿಗೆ ಕಾಲಿಡುವ ರಾಜಕಾರಣಿಗಳಿರುವಾಗ ತಲೆಬಾಗಿ ನಮಸ್ಕರಿಸಿದ ಮೊದಲ ಪ್ರಧಾನಿ ಮೋದಿ. ಭಗವದ್ಗೀತೆ ಕೋಮುವಾದಿ ಗ್ರಂಥ ಅಂತ ಬೊಗಳುತ್ತಿದ್ದಾಗ, ಮೋದಿಯವರು ತಾವು ಹೋದ ದೇಶಗಳಲ್ಲೆಲ್ಲಾ ಅಲ್ಲಿನ ಪ್ರಭಾವಿ ನಾಯಕರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟು ಭಾರತದ ಹಿರಿಮೆಯನ್ನು ಹೆಚ್ಚಿಸಿದರು.

ಜನರ ತೆರಿಗೆ ದುಡ್ಡನ್ನು ತಿಂದು ತೇಗಿ ಕೊಬ್ಬಿದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ ನಾನು ತಿನ್ನಲ್ಲ,ನಿಮಗೂ ತಿನ್ನೋಕೆ ಬಿಡಲ್ಲವೆಂದ ಹೆಮ್ಮೆಯ ಪ್ರಧಾನಿ. ನಮ್ಮ ಸಂಸ್ಕೃತಿಗಳ ಬಗ್ಗೆ ನಮ್ಮವರೇ ಆದ ಎಡಬಿಡಂಗಿಗಳು ಅಸಹ್ಯವಾಗಿ ಮಾತನಾಡುತ್ತಿರುವಾಗ ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಿ ಇಡೀ ಜಗತ್ತೇ ನತಮಸ್ತಕನಾಗುವಂತೆ ಮಾಡಿದರು ಮೋದಿ.

ತುಷ್ಠೀಕರಣದ ಇಳಿಜಾರಿನಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ರಾಜಕಾರಣಿಗಳಿರುವಾಗ, ಮೋದಿಯವರು ನಾನೊಬ್ಬ ಹಿಂದು ರಾಷ್ಟ್ರವಾದಿ ಎಂದು ಹೆಮ್ಮೆಯಿಂದ ಹೇಳಿದ್ದರು. ಇದರಿಂದಾಗಿ ಮೋದಿಯವರನ್ನು ಕೋಮುವಾದಿ ಎಂದು ಬೊಗಳಿದವರು ಕಡಿಮೆ ಏನಿಲ್ಲ. ಮುಸ್ಲಿಮರ ವಿರೋಧಿ ಎಂದು ಜರಿದರು.

ನಿಜಕ್ಕೂ ಮೋದಿಯವರು ಮುಸ್ಲಿಂ ವಿರೋಧಿಯಾ?

* ಸಭೆಯೊಂದರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜಾಮುದ್ದಿನ್ ಎಂಬ ಮುಸಲ್ಮಾನ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

* ತಲಾಖ್ ಎಂಬ ಅನಿಷ್ಟ ಪದ್ಧತಿಗೆ ನೂರಾರು ವರ್ಷಗಳಿಂದ ಬೇಸತ್ತಿದ್ದ ಮುಸಲ್ಮಾನ ಮಹಿಳೆಯರ ಪರ ನಿಂತು ಅವರಿಗೆ ಸಾಮಾಜಿಕ ನ್ಯಾಯ ಕೊಡಿಸಿದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು??

* ಇಸ್ಲಾಂ ಭಯೋತ್ಪಾದನೆಯಿಂದ ಸಂಕಷ್ಟದಲ್ಲಿರುವ ಅದೇ ಇಸ್ಲಾಂ ರಾಷ್ಟ್ರವಾದ ಅಫ್ಘಾನಿಸ್ಥಾನಕ್ಕೆ ಭಾರತೀಯರ ತೆರಿಗೆಯಿಂದ ಸಂಸತ್ ಭವನ ಮತ್ತು ಅಲ್ಲಿನ ಮುಸಲ್ಮಾನರಿಗಾಗಿ ಒಂದು ಅಣೆಕಟ್ಟು ಕಟ್ಟಿಸಿ ಕೊಟ್ಟ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಎರಡೂವರೆ ಕೋಟಿ ಬಡ ಭಾರತೀಯರಿಗೆ ಮೋದಿ ಉಚಿತ ಅಡುಗೆ ಅನಿಲದ ವ್ಯವಸ್ಥೆ ಮಾಡಿಕೊಟ್ರು ಅದರಲ್ಲಿ ಲಕ್ಷಾಂತರ ಬಡ ಮುಸಲ್ಮಾನರು ಇದ್ದರು… ಆದರೂ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು ??

* ವಿದೇಶಿ ನಾಯಕರು ಭಾರತದ ಭೇಟಿಗಾಗಿ ಬಂದಾಗ ಅತಿ ಉತ್ಸಾಹದಿಂದ ಅವರಿಗೆ ಇಲ್ಲಿನ ಐತಿಹಾಸಿಕ ಮಸೀದಿ ದರ್ಗಾಗಳ ಇತಿಹಾಸ ತಿಳಿಸಿ ಹೆಮ್ಮೆ ಪಡುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ತಾವು ಟೋಪಿ ಹಾಕಿಕೊಂಡು ಮುಸಲ್ಮಾನರಿಗೂ ಟೋಪಿ ಹಾಕುವ ನಾಯಕರ ನಡುವೆ ನಾನು ಟೋಪಿ ಹಾಕಿ ಮೋಸ ಮಾಡುವುದಿಲ್ಲ ಮುಸಲ್ಮಾನರ ಒಂದು ಕೈಯಲ್ಲಿ ಕುರಾನ್ ಇದ್ದರೆ ಮತ್ತೊಂದು ಕೈಗೆ ನಾನು ಕಂಪ್ಯೂಟರ್ ಕೊಡ್ತೀನಿ ಅಂತ ಹೇಳಿ ಮುಸಲ್ಮಾನರ ಏಳಿಗೆಯ ಬಗ್ಗೆ ಯೋಚನೆ ಮಾಡುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು??

* ತನ್ನ ಜೀವನದಲ್ಲಿ ಒಮ್ಮೆಯೂ ಕುರಾನ್ ಬಗ್ಗೆ ಮತ್ತು ಪೈಗಂಬರ್ ರವರ ಬಗ್ಗೆ ಅವಹೇಳನ ಮಾಡದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಮಾಧ್ಯಮಗಳ ಮುಂದೆ ಗುಜರಾತಿನ ಮುಸಲ್ಮಾನ ಮಹಿಳೆಯರು ನಾವು ಮೋದಿ ಆಡಳಿತದಲ್ಲಿ ಸಂತೋಷವಾಗಿದ್ದೇವೆ ಅಂತ ಹೇಳ್ತಾರೆ ಆದರೂ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಹಜ್ ಸಬ್ಸೀಡಿಯನ್ನು ರದ್ದು ಮಾಡಿ, ಆ ಹಣವನ್ನು ಮುಸಲ್ಮಾನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುವ ಯೋಜನೆ ಹಾಕಿದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

ಇವೆಲ್ಲಾ ಅಂಶಗಳು ಭಾರತದ ಮುಸಲ್ಮಾನರಿಗೆ ಗೊತ್ತಿರುವುದರಿಂದಲೇ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ.

ಅಷ್ಟೇ ಯಾಕೆ ಸ್ವತಃ ವಿರೋಧ ಪಕ್ಷದವರು ಮೋದಿಯವರನ್ನು ಹೊಗಳುತ್ತಿದ್ದಾರೆ. ಯಾವುದೇ ವ್ಯಕ್ತಿಗಾಗಲಿ ತನ್ನ ವಿರೋಧಿ ಹೊಗಳುತ್ತಿದ್ದಾನೆಂದರೆ ಆ ವ್ಯಕ್ತಿತ್ವ ಎಷ್ಟಿರಬಹುದು ಆಲೋಚಿಸಿ.
ಇತ್ತೀಚೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಖಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಮೋದಿಯವರು ಗಾಂಧೀಜಿಗಿಂತಲೂ ಶ್ರೇಷ್ಠವೆಂದು ಹಾಡಿ ಹೊಗಳಿದ್ದಾರೆ. ಒಬ್ಬ ಖಟ್ಟರ್ ಕಾಂಗ್ರೆಸ್ಸಿಗ ಅದು ಕೂಡಾ ಇಂದಿರಾಗಾಂಧಿಯವರ ಆಪ್ತ ಮೋದಿಯವರನ್ನು ಹಾಡಿ ಹೊಗಳಿದ್ದಾರೆಂದರೆ ನೀವೇ ಅಲೋಚಿಸಿ

“ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮ ಗಾಂಧೀಜಿಗಿಂತ ಶ್ರೇಷ್ಠ. ಬಡವರ ಜೀವನದಲ್ಲಿ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಮೌಲ್ಯಯುತ ಪರಿಣಾಮವನ್ನು ಮೋದಿ ಬೀರಿದ್ದಾರೆ ಹಾಗೂ ಅವರು ಭಗವಂತನ ಅವತಾರವಿದ್ದಂತೆ”, ಈ ಮಾತುಗಳನ್ನು ಹೇಳಿದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದ ಹಾಗೂ ಜೀವನದುದ್ದಕ್ಕೂ ಕಟ್ಟರ್ ಕಾಂಗ್ರೆಸ್ಸಿಗರಾಗಿದ್ದ ಪದ್ಮಭೂಷಣ್ ಲೋಕೇಶ್ ಚಂದ್ರ ಹೊಗಳಿದ ಪರಿಯಿದು.


ಬರೀ ನಮ್ಮ ದೇಶದಲ್ಲೇ ಅಲ್ಲ ವಿದೇಶಗಳಲ್ಲೂ ಮೋದಿಯವರ ಪ್ರಭಾವವಿದೆ. ಅವರ ವ್ಯಕ್ತಿತ್ವ ತಾಕತ್ತಿನ ಬಗ್ಗೆ ಪರಿಚಯವಿದೆ. ಇದಕ್ಕೆ ಪ್ರಬಲ ಸಾಕ್ಷಿಯೆಂದರೆ ಚೀನಾಕ್ಕೆ ದೇಶಕ್ಕೆ ಸೆಡ್ಡು ಹೊಡೆಯಬಲ್ಲ ತಾಕತ್ತು ಇರೋ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂದು ಅಮೇರಿಕಾದವರು ಹೇಳಿದ್ದಾರೆ. ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಚೀನಾದ ಕುರಿತು ಮಾತನಾಡುತ್ತಾ, “ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ” ಎಂದು ಹೇಳಿದ್ದಾರೆ. ಇದು ಮೋದಿಯವರ ತಾಕತ್ತು ಎಂದರೆ ತಪ್ಪಾಗಲಿಕ್ಕಿಲ್ಲ.

ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಅಮೇರಿಕಾದ ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕರು. ಕಳೆದ ವರ್ಷ ನಡೆದ ಅಮೇರಿಕಾದ ಸಂಸದೀಯ ಸಮಾವೇಶದಲ್ಲಿ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಮಾತನಾಡುತ್ತಾ ಚೀನಾದ ವಿವಾದಾತ್ಮಕ ಯೋಜನೆಯಾದ ಬೆಲ್ಟ್ and ರೋಡ್ ಗೆ ಎದೆ ಸೆಟೆದು ನಿಂತ ಜಗತ್ತಿನ ಎಕೈಕ ವ್ಯಕ್ತಿ ನರೇಂದ್ರ ಮೋದಿಯವರು ಮಾತ್ರ ಅಂತ ಹೇಳಿದ್ದರು. ದೇಶ ವಿದೇಶದವರು ಹೊಗಳುತ್ತಿರುವುದರಿಂದಲೇ ಮೋದಿಯವರನ್ನು 2024ರವರೆಗೆ ಸಾಧ್ಯವಿಲ್ಲವೆಂದು ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದಾರೆ.

ಮೋದಿಯವರನ್ನ 2024 ರವೆರೆಗೆ ಪ್ರಧಾನಿ ಹುದ್ದೆಯಿಂದ ಇಳಿಸೋಕೆ ಆಗಲ್ಲ!! ಎಂದಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್.

ಯಾಕೆ ಮೋದಿಯವರನ್ನ ಸೋಲಿಸಲಾಗವುದಿಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ!!

ಮೋದಿಯವರ ಮೇಲೆ ಭಾರತೀಯರಿಗೆ ಅಪಾರ ನಂಬಿಕೆ ಇದೆ. ಅದಕ್ಕೆ ಉದಾಹರಣೆ ಕೊಡ್ತೀನಿ. ಕಳೆದ ಸರ್ಕಾರದ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿದ್ದ ಪಿ.ಚಿದಂಬರನ್ ಅವರು ಭಾರತೀಯರನ್ನು ಕುರಿತು ಕೇಳಿಕೊಂಡಿದ್ದರು. ಅದೇನೆಂದರೆ ಬಂಗಾರದ ರೇಟ್ ಜಾಸ್ತಿ ಆಗ್ತಿದೆ ಅದರಿಂದ ನಮ್ಮ ದೇಶದ ವಿದೇಶಿ ವಿನಿಮಯ ಕಡಿಮೆ ಆಗ್ತಿದೆ. ಹೀಗಾಗಿ ದಯವಿಟ್ಟು ಸ್ವಲ್ಪ ದಿನ ಬಂಗಾರವನ್ನು ಕೊಂಡು ಕೊಳ್ಳುವುದನ್ನು ನಿಲ್ಲಿಸಿ ಅಂತ ಭಾರತೀಯರನ್ನು ಕುರಿತು ಪಿ.ಚಿದಂಬರನ್ ಕೇಳಿಕೊಂಡಿದ್ದರು.

ಆದರೆ ಭಾರತೀಯರು ಅದೇ ವರ್ಷ ದಾಖಲೆಯ ಮೊತ್ತದಲ್ಲಿ ಬಂಗಾರವನ್ನು ಖರೀದಿ ಮಾಡಿದ್ದರು. ಯಾಕೆ ಭಾರತೀಯರು ಹಣಕಾಸು ಮಂತ್ರಿ ಪಿ.ಚಿದಂಬರನ್ ಮಾತು ಕೇಳಿರಲಿಲ್ಲವೆಂದು ಗೊತ್ತಾ? ಅವರ ಮೇಲೆ ಭಾರತೀಯರಿಗೆ ನಂಬಿಕೆ ಇರಲಿಲ್ಲವೆನ್ನಬಹುದು. ನಂಬಿಕೆ ಇಲ್ಲವೆಂತಲೇ ಪಿ.ಚಿದಂಬರನ್ ಏನೋ ಹೇಳ್ತಿದ್ದಾರೆಂದರೆ ಇದರರ್ಥ ಏನೋ ಕೊಳ್ಳೆ ಹೊಡೆಯುವ ಪ್ರಯತ್ನ ಅಥವಾ ಇನ್ನೇನೋ ಅಂತ ಜನ ಕಲ್ಪಿಸಿಕೊಂಡು ದಾಖಲೆಯ ಮೊತ್ತದಲ್ಲಿ ಬಂಗಾರವನ್ನು ಖರೀದಿ ಮಾಡಿದ್ದರು. ಇದರರ್ಥ ಇಷ್ಟೇ ಪಿ.ಚಿದಬರ್ ಅವರ ಮೇಲೆ ಭಾರತೀಯರಿಗೆ ನಂಬಿಕೆ ಇರಲಿಲ್ಲ.

ಆದರೆ ಮೋದಿಯವರು ಜನರನ್ನು ಕುರಿತು ಕೇಳಿಕೊಂಡಿದ್ದರು.
ಮೋದಿಯವರು ಭಾರತೀಯರನ್ನು ಕುರಿತು ಕೇಳಿಕೊಂಡಿದ್ದೇನು ಗೊತ್ತಾ? ಭಾರತೀಯರನ್ನು ಕುರಿತು ಮೋದಿಯವರು ಅಗತ್ಯವಿಲ್ಲದಿದ್ದರೂ ಗ್ಯಾಸ್ ಸಿಲಿಂಡರ್ ಗೆ ಸಬ್ಸೀಡಿ ತೆಗೆದುಕೊಳ್ಳುತ್ತಿದ್ದರೆ ದಯವಿಟ್ಟು ದೇಶಕ್ಕಾಗಿ ವಾಪಸ್ಸು ಕೊಡ್ತೀರಾ ಅಂತ ಕೇಳಿಕೊಂಡಿದ್ದರು.

ಭಾರತೀಯರು ಮೋದಿಯವರ ಮಾತಿಗೆ ಓಗೊಟ್ಟು ಮಾಡಿದ್ದೇನು ಗೊತ್ತಾ?

ಅಂಕಿ-ಅಂಶಗಳ ಪ್ರಕಾರ ಬರೋಬ್ಬರಿ 1 ಕೋಟಿಗೂ ಹೆಚ್ಚು ಜನ ತಮ್ಮ ಸಬ್ಸೀಡಿಯನ್ನು ಬಿಟ್ಟು ಕೊಟ್ಟಿದ್ದಾರೆ. ಪಿ.ಚಿದಂಬರನ್ ಮತ್ತು ಮೋದಿಯವರು ಇಬ್ಬರೂ ಕೇಳಿಕೊಂಡಾಗ ಜನ ಮೋದಿಯವರ ಮಾತನ್ನು ಕೇಳಿದರು. ಇದರರ್ಥ ಕೇಳಿಕೊಳ್ಳುವ ವ್ಯಕ್ತಿಯ ಘನತೆಯ ಬಗ್ಗೆ ಆಲೋಚಿಸಿ. ಮೋದಿಯವರ ಮೇಲೆ ಭಾರತೀಯರಿಗೆ ನಂಬಿಕೆ ಇದೆ ಹಾಗಾಗಿಯೇ ಅವರನ್ನು ಸೋಲಿಸಲು ಸಾಧ್ಯವಿಲ್ಲ ಅಂತ ಎಲ್ಲೆಡೆ ಕೇಳಿ ಬರುತ್ತಲಿದೆ. ಅದಕ್ಕೆ ಇಂಬು ಕೊಡುವಂತೆ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿರೋ ಪ್ರಕಾರ ಮೋದಿಯವರು ವಿಶ್ವದ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿದ್ದಾರೆ.

ನೋಟ್ ಬ್ಯಾನ್ ಮತ್ತು GST ನಂತರ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರೇ ಅತ್ಯಂತ ಪ್ರಖ್ಯಾತ ವ್ಯಕ್ತಿ ಎಂದು ಸಾಬೀತಾಗಿದೆ.

ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರದೇಶದ 88 % ಜನರು ಪ್ರಧಾನಿ ಮೋದಿಗೆ ಬೆಂಬಲವಾಗಿದ್ದಾರೆ ಎನ್ನಲಾಗಿದೆ. 88% ಜನ ಮೋದಿಯವರ ಪರ ಇದ್ದಾರೆಂದರೆ ಅವರನ್ನು ಸೋಲಿಸೋಕಾಗುತ್ತಾ? ಹೀಗಾಗಿಯೇ ಅವರನ್ನು 2024ರವರೆಗೆ ಸೋಲಿಸಲು ಸಾಧ್ಯವಿಲ್ಲವೆಂದು ಎಲ್ಲೆಡೆ ಕೇಳಿ ಬರುತ್ತಿದೆ.

ಮೋದಿಜಿ ಬರುವ ಮುನ್ನ ಹಿಂದು ಎಂದು ತನ್ನನ್ನು ತಾನು ಕರೆದುಕೊಳ್ಳಲು ನಾಚಿಕೊಳ್ಳುತ್ತಿದ್ದ ಜನ, ಮೋದಿಯವರ ಆಗಮನವಾದಮೇಲೆ ತನ್ನನ್ನು ತಾನು ಹಿಂದೂ ಎಂದು ಬಿಂಬಿಸಲು ಹೆಣಗಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಹಿಂದುಗಳು ಜಾಗೃತರಾಗಿದ್ದಾರೆ. ಹಿಂದುಗಳು ಹಿಂದೂವಾದಿಯನ್ನು ಗೆಲ್ಲಿಸುತ್ತಾರೆ. ಹೀಗಾಗಿಯೇ ನಾಲ್ಕಾರು ವರ್ಷಗಳ ಹಿಂದೆ ತಮ್ಮನ್ನು ತಾವು ಹಿಂದು ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದವರು ಇಂದು ತಾವು ಹಿಂದೂ ಎಂದು ಹೇಳಿಕೊಳ್ಳಲು ಶುರು ಮಾಡಿದ್ದಾರೆ. ಓಟಿಗಾಗಿ ಹಿಂದುಗಳನ್ನು ಓಲೈಸಲು ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ತಿಣುಕಾಡುತ್ತಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿ ಕೊಳ್ಳಲು ದೊಡ್ಡ ದೊಂಬರಾಟವನ್ನೇ ಆಡಿಬಿಟ್ಟರು. ದೇವಸ್ಥಾನಗಳಿಗೆ ಭೇಟಿ ಕೊಟ್ಟದ್ದೇ ಕೊಟ್ಟದ್ದು. ತನ್ನನ್ನು ತಾನು ಶಿವನ ಭಕ್ತ ಅಂತ ಪ್ರಚಾದ ಮಾಡಿದ್ದೇ ಮಾಡಿದ್ದು. ಅಬ್ಬಾ ಓಟಿಗಾಗಿ ಏನೆಲ್ಲಾ ಮಾಡ್ತಾರಲ್ಲ ಈ ಜನ. ಮಮತಾ ಬ್ಯಾನರ್ಜಿ ಅವರೂ ಇದಕ್ಕೆ ಹೊರತಲ್ಲ. ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ಮಮತಾ ಬ್ಯಾನರ್ಜಿಯವರು ಬ್ರಾಹ್ಮಣರ ಸಮಾವೇಶ ನಡೆಸಿದರು.

ಪ್ರಿಯಾಂಕ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಇದಕ್ಕೆ ಹೊರತಲ್ಲ. ರಾಬರ್ಟ್ ವಾದ್ರಾ ಕೂಡಾ ಸರಣಿ ದೇವಾಲಯಗಳಿಗೆ ಭೇಟಿ ಕೊಟ್ಟರು.

ಇನ್ನು ಕೇರಳದ ಕಮ್ಯುನಿಸ್ಟರು ಸ್ವಾಮಿ ವಿವೇಕಾನಂದರ ಫೋಟೋವನ್ನು ತಮ್ಮ ಸಮಾರಂಭದ ಫ್ಲೆಕ್ಸ್ ಗಳಲ್ಲಿ ಹಾಕಿಸಿದ್ದರು.

ಒಟ್ಟಿನಲ್ಲಿ ಓಟಿಗಾಗಿ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಲು ತಿಣುಕಾಡುತಿದ್ದಾರೆ. ಇದುವೇ ಜಾಗೃತ ಹಿಂದುವಿನ ತಾಕತ್ತು. ಇವರೆಲ್ಲಾ ತಿಣುಕಾಡುತ್ತಿರುವುದು ಮೋದಿಯವರನ್ನು ಸೋಲಿಸಲು ಹಿಂದುಗಳ ಮನ ಓಲೈಸುತ್ತಿದ್ದಾರೆ.

ಕೊನೆಯ ಚುನಾವಣೆಯಲ್ಲಿ ಮೋದಿಯವರು ಗೆದ್ದೆಗೆಲ್ಲುತ್ತಾರೆಂದು ಇಡೀ ಭಾರತಕ್ಕೆ ಗೊತ್ತಿತ್ತು. ಹೀಗಾಗಿಯೇ ರಾಹುಲ್ ಗಾಂಧಿಯವರು ಚುನಾವಣೆಯಿಂದ ದೂರ ಸರಿದಿದ್ದರು. 2014ರ ಚುನಾವಣೆ ವೇಳೆಯಲ್ಲಿ ದೇಶದ ಪಾಲಿಗೆ ರಾಹುಲ್ ಗಾಂಧಿ ನಾನು ಪ್ರಧಾನಿಯಾಗಲಾರೆ ಎಂದು ಬಿಟ್ಟಿದ್ದರು. ಇಷ್ಟಕ್ಕೂ ಆಗ ರಾಹುಲ್ ಗಾಂಧಿ ರಣರಂಗದಿಂದ ಹಿಂಜರಿಯಲು ಕಾರಣ ಏನು ಗೊತ್ತೆ? ಎದುರಾಳಿ ಮೋದಿಯೆಂಬುದು ಖಾತ್ರಿಯಾದುದರಿಂದ.

ದೇಶಕ್ಕೆ ದೇಶವೇ ಮೋದಿಯ ಹೆಸರನ್ನು ಜಪಿಸುತ್ತಿರುವುದನ್ನು ನೋಡಿ ರಾಹುಲ್ ಗಾಂಧಿ ಒಳಗಿಂದೊಳಗೆ ಹೆದರಿ ಬಿಟ್ಟಿದ್ದರು. ಮೋದಿಯ ಚಾಟಿ ತಿರುಲಾರಂಭಿಸಿದರೆ ಉಳಿಯೋದು ಕಷ್ಟ ಅಂತಾನೇ ಯುದ್ಧ ಆರಂಭವಾಗುವುದಕ್ಕೂ ಮೊದಲೇ ರಾಹುಲ್ ಬಾಬಾ ನಿವೃತ್ತಿ ಘೋಷಿಸಿಬಿಟ್ಟಿದ್ದರು. ಈ ಬಾರಿಯ ಚುನಾವಣೆಗಾಗಿ ರಾಹುಲ್ ಗಾಂಧಿ ದೊಂಬರಾಟ ಶುರು ಮಾಡಿದ್ದಾರೆ. ದೇವಸ್ಥಾನಗಳಿಗೆ ಭೇಟಿ ಕೊಟ್ಟದ್ದೆ ಕೊಟ್ಟದ್ದು. ಎಲ್ಲೆಡೆ 2024ರವರೆಗೆ ಮೋದಿಯವರನ್ನು ಸೋಲಿಸಲು ಸಾಧ್ಯವೇ ಇಲ್ಲವೆಂದು ಕೇಳಿಬರುತ್ತಿರುವುದರಿಂದ ಈ ಬಾರಿಯೂ ರಾಹುಲ್ ಗಾಂಧಿಯವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೋ ಏನೋ?

– Nationalist Mahi

  •  
    4K
    Shares
  • 4K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com