Connect with us
Loading...
Loading...

ಪ್ರಚಲಿತ

400 ವರ್ಷಗಳ ಹಿಂದೆಯೇ ಮೋದಿಜೀಯ ಬಗ್ಗೆ ಆ ವಿದೇಶಿ ಜ್ಯೋತಿಷಿ ಹೇಳಿದ್ದೇನು ಗೊತ್ತಾ?

Published

on

 • 8.2K
 •  
 •  
 •  
 •  
 •  
 •  
 •  
  8.2K
  Shares

400 ವರ್ಷಗಳ ಹಿಂದೆಯೇ ವಿದೇಶಿ ಜ್ಯೋತಿಷಿಯೊಬ್ಬ ಮೋದಿಯವರ ಕುರಿತು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆಯಾ? ಅಷ್ಟಕ್ಕೂ ಆ ವಿದೇಶಿ ಜ್ಯೋತಿಷಿ ಮೋದಿಯವರ ಕುರಿತು ಏನು ಹೇಳಿದ್ದಾ ಗೊತ್ತೆ?

ಹೌದು!! ಆ ವಿದೇಶಿ ಜ್ಯೋತಿಷಿಯ ಹೆಸರು ನಾಸ್ಟ್ರಡೋಮಸ್. ಈತ ಫ್ರೆಂಚ ದೇಶದ ಒಬ್ಬ ಸಂತ. ‌ನಕ್ಷತ್ರಗಳ ಚಲನ ವಲನವನ್ನು ಆಧರಿಸಿ ಭವಿಷ್ಯವನ್ನು ನುಡಿಯುತ್ತಾರೆ. ಈ ಭವಿಷ್ಯವಾಣಿಯನ್ನು ಎಲ್ಲರಿಂದಲೂ ನುಡಿಯೋದಕ್ಕೆ ಆಗೋದಿಲ್ಲ. ಅದಕ್ಕೆ ಅದರದೆ ಆದ ಅಧ್ಯಯನದ ಅವಶ್ಯಕತೆ ಇದೆ. ನಕ್ಷತ್ರಗಳ ಚಲನವಲನವನ್ನು ಆಧರಿಸಿ ಜಾಣ್ಮೆಯಿಂದ ಭವಿಷ್ಯ ನುಡಿಯುವವರು ಸಿಗೋದು ತುಂಬಾ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪ ಈ ಫ್ರೆಂಚ್ ಸಂತ ನಾಸ್ಟ್ರಡೋಮಸ್.

ಹಲವಾರು ಶತಮಾನಗಳ ಹಿಂದೆಯೇ ಮುಂದೆ ವಿಶ್ವದಲ್ಲಿ ಆಗಬಹುದಾದ ಬದಲಾವಣೆಯನ್ನು ನುಡಿದಿದ್ದ ಮಹಾನ್ ಜ್ಯೋತಿಷಿ ನಾಸ್ಟ್ರಡೋಮಸ್. ಈ ಫ್ರೆಂಚ್ ಸನ್ಯಾಸಿ ನಾಸ್ಟ್ರಡೋಮಸ್ ಮುಂದಿನ ಹಲವಾರು ಶತಮಾನಗಳ ಭವಿಷ್ಯವನ್ನಿ 16 ನೇ ಶತಮಾನದಲ್ಲಿ ನುಡಿದು, ಅದನ್ನು ಬರೆದಿಟ್ಟಿದ್ದ. ಆತ ಅಂದು ನುಡಿದು ಬರೆದಿಟ್ಟಿದ್ದ ಅನೇಕ ಭವಿಷ್ಯಗಳು ಇಂದು ಸತ್ಯವಾಗಿವೆ.

ಅಮೆರಿಕಾದ ಎರಡು ಗಗನಚುಂಬಿ ಕಟ್ಟಡಗಳು ನಾಶವಾಗುವದರ ಕುರಿತಾಗಿ ಈ ಫ್ರೆಂಚ್ ಸಂತ ನಾಸ್ಟ್ರಡೋಮಸ್ 16 ನೇ ಶತಮಾನದಲ್ಲೇ ನುಡಿದು, ಬರೆದಿಟ್ಟಿದ್ದ. ಅಷ್ಟಕ್ಕೂ ಆತ ಅಮೆರಿಕಾದ ಆ ಎರಡು ಕಟ್ಟಡದ ನಾಶವಾಗುವಿದರ ಬಗ್ಗೆ ಬರೆದದ್ದಾದರೂ ಏನು ಗೊತ್ತೆ?

“9 ಶತಮಾನ ಹಾಗೂ 9 ತಿಂಗಳುಗಳ ಕಾಲಾವಧಿಯಲ್ಲಿ ಒಬ್ಬ ಭಯೋತ್ಪಾದಕ ಬರುತ್ತಾನೆ. ಆಕಾಶವು 45 ಡಿಗ್ರಿಗಳಷ್ಟು ಸುಡಲ್ಪಟ್ಟು, ಮಹಾನ್ ನಗರವೊಂದಕ್ಕೆ ಬೆಂಕಿ ಆವರಿಸುತ್ತದೆ. ನ್ಯೂಯಾರ್ಕ್ ನಗರದಲ್ಲಿ ದೊಡ್ಡ ಕುಸಿತವುಂಟಾಗುತ್ತದೆ, ಅವಳಿ ಸಹೋದರರು ಅವ್ಯವಸ್ಥೆಯಿಂದ ಛಿದ್ರವಾಗುತ್ತಾರೆ ಕೋಟೆಗಳು ಧರೆಗಪ್ಪಳಿಸಿದಾಗ ಮಹಾನ್ ನಾಯಕ ಸಡಿಲವಾಗುತ್ತಾನೆ ದೊಡ್ಡ ನಗರವು ಸುಡುವ ಸಂದರ್ಭದಲ್ಲಿ ಮೂರನೆಯ ಮಹಾಯುದ್ಧವು ಪ್ರಾರಂಭವಾಗುತ್ತದೆ.” ಹೀಗೆ ಆ ಫ್ರೆಂಚ್ ಸಂತ ನಾಸ್ಟ್ರಡೋಮಸ್ ಬರೆದಿಟ್ಟಿದ್ದ. ಆತ ಬರೆದಿಟ್ಟಂತೆ ಅದು ನಿಜವೂ ಆಗಿದೆ.

ಹೇಗೆ ಅಂದರೆ, ಅವನು ಬರೆದಿಟ್ಟಂತೆ ಇಲ್ಲಿ ಅವಳಿ ಸಹೋದರರರನ್ನು ನ್ಯೂಯಾರ್ಕ್ ನಗರದ ಆ ಎರಡು ಅವಳಿ ಗೋಪುರಗಳಿಗೆ ಹೋಲಿಸಲಾಗಿದೆ. ಭಯೋತ್ಪಾದಕ ಬರುತ್ತಾನೆ ಅಂತ ಬರೆದುದರಲ್ಲಿ ಆ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್. ಹಾಗೆ ಆತ ಬರೆದ ಕಾಲವನ್ನು ಗಮನಿಸಿದರೆ ಸರಿಯಾಗಿ ಗಮನಿಸಿದರೆ ಆತ ಬರೆದಿಟ್ಟ 9 ಶತಮಾನಗಳ ಮತ್ತು 9 ತಿಂಗಳುಗಳ ಬಳಿಕವೇ ಸಂಭವಿಸಿದೆ. ಅಂದರೆ 2001ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆದು ಹೋಗಿದೆ. ಆತ ಬರೆದಿಟ್ಟದ್ದು 14 ನೇ ಶತಮಾನದಲ್ಲಿ.

ಇನ್ನೊಂದು ಭವಿಷ್ಯದಲ್ಲಿ ಆತ ಅಮೆರಿಕಾವನ್ನು ಡೊನಾಲ್ಡ್ ಟ್ರಂಪ್ ಆಳುತ್ತಾರೆಂದು ನುಡಿದು, ಬರೆದಿಟ್ಟಿದ್ದ. ಏನಂತ ಬರೆದಿದ್ದನೆಂದರೆ, ಒಬ್ಬ ಜಗಳಗಂಟ ವ್ಯಕ್ತಿ, ಮುಂಗೋಪಿ, ಸೇನೆಯ ನಾಯಕನಾಗಿ ಆಯ್ಕೆಯಾಗುತ್ತಾನೆ. ಜನ ಆತನನ್ನು ಟ್ರಂಪ್ ಎಂಬುದಾಗಿ ಕರೆಯುತ್ತಾರೆ. ಆತನೇ ಜಗತ್ತಿನ ಶಕ್ತಿಶಾಲಿ ಸೇನೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ಆ ಫ್ರೆಂಚ್ ಸಂತ ನಾಸ್ಟ್ರಡೋಮಸ್ ಬರೆದಿಟ್ಟಂತೆ ಈಗ ಅಮೆರಿಕಾವನ್ನು ಡೊನಾಲ್ಡ್ ಟ್ರಂಪ್ ಆಳುತ್ತಿದ್ದಾನೆ.

ಅನೇಕರು ಜ್ಯೋತಿಷ್ಯವನ್ನು ನಂಬುವುದಿಲ್ಲ. ಆದರೆ ಈ ಫ್ರೆಂಚ್ ಸಂತ ನಾಸ್ಟ್ರಡೋಮಸ್ ನುಡಿದಿದ್ದ ಭವಿಷ್ಯವಾಣಿ ಕಳೆದ 400 ವರ್ಷಗಳಲ್ಲಿ 800 ಭವಿಷ್ಯಗಳು ನಿಜವಾಗಿವೆ.

ನಮ್ಮ ದೇಶದ ವಿಷಯಕ್ಕೆ ಬರುವುದಾದರೆ ಆತ ನಮ್ಮ ದೇಶದ ಕುರಿತು ಭವಿಷ್ಯ ನುಡಿದು ಬರೆದಿಟ್ಟಿದ್ದ. ಭಾರತವು ವಿಶ್ವಗುರುವಾಗಲಿದೆ. ಆ ಸ್ಥಾನಕ್ಕೆ ಭಾರತವನ್ನು ಕೊಂಡುಯ್ಯುವ ವ್ಯಕ್ತಿಯ ಕುರಿತು ಆತ ಭವಿಷ್ಯ ನುಡಿದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ.

1555 ರಲ್ಲಿ ನಾಸ್ಟ್ರಡೋಮಸ್ ಭವಿಷ್ಯ ನುಡಿದು ಪುಸ್ತಕದಲ್ಲಿ ಕೆಳಗಿನಂತೆ ಉಲ್ಲೇಖಿಸಿದ್ದಾನೆ.

“ದೀರ್ಘ ಕಾಲದ ಕಾಯುವಿಕೆಗೆ, ಭಾರತವನ್ನು ಆಳಲು ಒಬ್ಬ ಸಮರ್ಥ ಆಡಳಿತಗಾರ ಆಗಮಿಸುತ್ತಾನೆ. ಆತನ ಮುಂದೆ ಇಡೀ ವಿಶ್ವವೇ ತಲೆ ಬಾಗಲಿದೆ. ಮೊದ ಮೊದಲು ಈತನನ್ನು ಅನೇಕರು ವಿರೋಧಿಸುತ್ತಾರೆ. ಆದರೆ ಬರುಬರುತ್ತಾ ಆತನ ಭಕ್ತರಾಗಿಬಿಡುತ್ತಾರೆ. 2014ರಿಂದ ತೊಡಗಿ 2026 ರ ತನಕ ಹಿಂದುತ್ವದ ಪ್ರತಿನಿಧಿ ಭಾರತವನ್ನು ಮುನ್ನಡೆಸುತ್ತಾನೆ, ಪ್ರಾರಂಭದ ಹಂತದಲ್ಲಿ ಆತನ್ನು ಅನೇಕರು ವಿರೋಧಿಸಿದರೂ ನಂತರ ಆತನನ್ನು ಮನಸ್ಸಿನಿಂದ ಗೌರವಿಸಲು , ಪ್ರೀತಿಸಲು ಪ್ರಾರಂಭಿಸುತ್ತಾರೆ. ಅದೇ ವ್ಯಕ್ತಿ ದೇಶದ ಅಭಿವೃದ್ಧಿಯ ವಿಜಯದ ಪತಾಕೆಯನ್ನೇ ಹಾರಿಸಲಿದ್ದಾರೆ. ಈತನ ಆಡಳಿತದ ಅವಧಿಯಲ್ಲಿ ಭಾರತವು ವಿಶ್ವಗುರುವಾಗಿ ನಿರ್ಮಾಣವಾಗುವುದು ಮಾತ್ರವಲ್ಲದೇ, ಅನೇಕ ರಾಷ್ಟ್ರಗಳೂ ಭಾರತದ ಆಶ್ರಯವನ್ನು ಪಡೆಯಲಿವೆ” ಇದು ನಾಸ್ಟ್ರಡೋಮಸ್ ಭವಿಷ್ಯ ನುಡಿದು ಪುಸ್ತಕದಲ್ಲಿ ಉಲ್ಲೇಖಿಸಿದ್ದು.

ಆತನ ಉಲ್ಲೇಖದಂತೆ ಮೋದಿಯವರ ಆಗಮನವಾಗಿದೆ. ಆತನ ಉಲ್ಲೇಖದಂತೆ ಇಡೀ ವಿಶ್ವವೇ ಮೋದಿಯವರಿಗೆ ಗೌರವಿಸುತ್ತಿದೆ. ಆತನ ಉಲ್ಲೇಖದಂತೆ ಭಾರತ ವಿಶ್ವ ಆಗುವತ್ತ ದಾಪುಗಾಲು ಹಾಕಿದೆ. ಆತನ ಉಲ್ಲೇಖದಂತೆ ಮೊದಮೊದಲು ಮೋದಿಯವರನ್ನು ವಿರೋಧಿಸಿದವರು ಬರುಬರುತ್ತಾ ಮೋದಿಯವರ ಭಕ್ತರಾಗುತ್ತಿದ್ದಾರೆ. ಆತನ ಉಲ್ಲೇಖದಂತೆ 2014ರಲ್ಲೇ ಮೋದಿಯವರು ಭಾರತದ ಚುಕ್ಕಾಣಿಯನ್ನು ಹಿಡಿದಿದ್ದಾರೆ.

ಇನ್ನೊಂದು ಸಂತೋಷದ ವಿಚಾರವೇನೆಂದರೆ ಫ್ರೆಂಚ್ ಸಂತ ನಾಸ್ಟ್ರಡೋಮಸ್ ನ ಉಲ್ಲೇಖದಂತೆ 2014 ರಲ್ಲಿ ಭಾರತದ ಚುಕ್ಕಣಿ ಹಿಡಿದವರು 2026 ರವರೆಗೆ ಹಿಡಿದಿರುತ್ತಾರೆ. ಇದರರ್ಥ ಮೋದಿಯವರೇ 2026 ರವರೆಗೆ ಭಾರತವನ್ನು ಆಳುತ್ತಾರೆ ಎಂಬಂತಾಯ್ತು.

ಫ್ರೆಂಚ್ ಸಂತ ನಾಸ್ಟ್ರಡೋಮಸ್ ನ ಹೇಳಿದಂತೆ 2014ರಲ್ಲಿ ಭಾರತದ ಚುಕ್ಕಾಣಿಯನ್ನು ಮೋದಿಯವರು ಹಿಡಿದದ್ದಾಗಿದೆ. ಇನ್ನೇನಿದ್ದರೂ ಈಗ ಭಾರತ ವಿಶ್ವಗುರುವಾಗುವತ್ತ ದೊಡ್ಡ ಹೆಜ್ಜೆ ಹಾಕಿದೆ. ಅದರ ನೇತೃತ್ವವನ್ನು ಮೋದಿಯವರು ವಹಿಸಿಕಕೊಂಡು, ಭಾರತ ವಿಶ್ವಗುರುವಾಗಲಿಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಅವರ ಜೊತೆಗೆ ನಾವು ನಮ್ಮಿಂದ ಎಷ್ಟು ದೊಡ್ಡ ಹೆಜ್ಜೆ ಇಡುವುದಕ್ಕೆ ಆಗುತ್ತೋ ಅಷ್ಟು ದೊಡ್ಡ ಹೆಜ್ಜೆ ಇಟ್ಟು ಅಳಿಲು ಸೇವೆ ಮಾಡೋಣ.

ಮುಂದೆ ಭಾರತ ವಿಶ್ವಗುರುವಾದಾಗ, ಭಾರತ ವಿಶ್ವಗುರುವಾಗಲಿಕ್ಕೆ ನಾನೇನು ಮಾಡಿಲ್ವಲ್ಲ ಅಂತ ಕೊರಗೋದು ಬೇಡ. ಈಗಲೇ ಭಾರತ ವಿಶ್ವಗುರುವಾಗಲಿಕ್ಕೆ ನಮ್ಮಿಂದ ಏನು ಅಳಿಲು ಸೇವೆ ಮಾಡುವುದಕ್ಕಾಗುತ್ತೋ ಅದನ್ನು ಮಾಡಿಬಿಡೋಣ.

ಭಾರತ ವಿಶ್ವಗುರುವಾಗೋದಂತು ಖಚಿತ, ಅದರಲ್ಲಿ ಅನುಮಾನವೇ ಬೇಡ. ಈಗಿನ ಎಲ್ಲಾ ಪರಿಸ್ಥಿತಿಗಳನ್ನು ಅವಲೋಕನ ಮಾಡಿದರೆ ಭಾರತ ವಿಶ್ವಗುರುವಾಗುವುದು ತುಂಬಾನೆ ಸನಿಹವಿದೆ. ಈಗಾಗಲೇ ವಿಶ್ವವೇ ಭಾರತವನ್ನು ಕೊಂಡಾಡುತ್ತಿದೆ. ಯೋಗವನ್ನು ಇಡೀ ವಿಶ್ವ ನತಮಸ್ತಕನಾಗಿ ಓಂಕಾರದೊಂದಿಗೆ ಸ್ವೀಕರಿಸಿದೆ.

ಈ ಭವಿಷ್ಯವನ್ನು ಕೆಲವರು ಅಲ್ಲಗಳೆಯಬಹುದು ಆದರೆ ಆ ಸಂತ ಹೇಳಿದ್ದು ನಿಜವಂತು ಆಗಿದೆ. ಒಬ್ಬ ದಕ್ಷ ಆಡಳಿತಗಾರ ಭಾರತವನ್ನು ಆಳುತ್ತಿದ್ದಾನೆಂಬುದಂತು ಸತ್ಯದ ಮಾತು ಅಲ್ವಾ? ಹಾಗೆ 2026ರವರೆಗೆ ಮೋದಿಯವರೇ ಭಾರತವನ್ನು ಆಳುತ್ತಾರೆಂಬಂತೆ ಉಲ್ಲೇಖಿಸಲಾಗಿದೆ. ಇದು ಅಂತ ತುಂಬಾ ಖುಷಿಯ ವಿಚಾರ.

– Team Nationalist Views

 •  
  8.2K
  Shares
 • 8.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com