Connect with us
Loading...
Loading...

ಅಂಕಣ

ಮೋದಿ ಸುಳ್ಳುಗಾರ ಎಂದು ನಿಂದಿಸುವವರಿಗೆ ಪತ್ರಕರ್ತ ವಿದ್ಯಾರ್ಥಿಯಿಂದ ಒಂದು ಬಹಿರಂಗ ಪತ್ರ!!

Published

on

 • 3.2K
 •  
 •  
 •  
 •  
 •  
 •  
 •  
  3.2K
  Shares

* ಹೆಂಡತಿಯನ್ನು ನಡುನೀರಲ್ಲಿ ಬಿಟ್ಟು ಬಂದವನು.

* ನಮ್ಮ ಅಕೌಂಟ್ಗೆ ಹದಿನೈದು ಲಕ್ಷ ಹಾಕ್ತೀನಿ ಅಂತ ಹೇಳಿ ಮೋಸ ಮಾಡಿದ ಫಕೀರ.

* ನಮ್ಮ ತೆರಿಗೆ ದುಡ್ಡಿನಲ್ಲಿ ಫಾರಿನ್ ಟ್ರಿಪ್ ಮಾಡೋ ಡೋಂಗಿವಾದಿ.

* ಮತ್ತೆ ಮನುಸ್ಮೃತಿಯನ್ನೇ ಭಾರತದಲ್ಲಿ ಹೇರಲು ಹೊರಟ ಕೋಮುವಾದಿ.

* ಸೂಟು ಬೂಟು ಹಾಕಿ ಕ್ಯಾಮೆರಾ ಕಣ್ಣಿಗೆ ಫೋಸು ಕೊಡುವ ಶೋಕಿಲಾಲ.

* ಪೊಳ್ಳು ಭಾಷಣ ಮಾಡಿ ಜನರನ್ನು ಯಾಮಾರಿಸುವ ಮೋಸಗಾರ.

* ಇವನು ನಮ್ಮ ಪ್ರಧಾನಿ ಅಂತ ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ…

ಹೌದು ಸ್ವಾಮಿ!! ಬಹುಶಃ ಭಾರತದ ಯಾವ ಪ್ರಧಾನಿಯು ಇಷ್ಟೊಂದು ಟೀಕೆ ಎದುರಿಸಿದ ಇತಿಹಾಸವಿಲ್ಲ. ನಿಜಕ್ಕೂ ಇಷ್ಟೆಲ್ಲಾ ಅವಮಾನ ಆದರೂ ಆತನ ಮೌನ ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಯಾಕೋ ಗೊತ್ತಿಲ್ಲ ವಿರೋಧಿಗಳಿಗೆ ತನ್ನ ಮಾತಿನ ಮುಖಾಂತರ ನೀರಿಳಿಸುತ್ತಿದ್ದ ಆ ಮಾನಸಪುತ್ರ ಮೌನವಾಗಿ ಕೆಲಸ ಮಾಡುತ್ತಿದ್ದಾನೆ.

No doubt ಭಾರತದಲ್ಲಿ ನಾಯಕರಿಗೆ ಕೊರತೆ ಏನಿಲ್ಲ. ಇವತ್ತಲ್ಲ ನಾಳೆ ಮೋದಿಗಿಂತ ಶ್ರೇಷ್ಠ ನಾಯಕ ಬರುತ್ತಾನೆ. ಯಾಕಂದ್ರೆ ಈ ಮಣ್ಣಿನಲ್ಲಿ ಅಂತಹ ಶಕ್ತಿ ಇದೆ. ಆದರೆ ಇಂದು ಮೋದಿಯನ್ನು ವಿರೋಧಿಸುತ್ತಿರುವ ಪ್ರತಿಯೊಬ್ಬರು ಬರೆದಿಟ್ಟುಕೊಳ್ಳಿ. ಮುಂದೊಂದು ದಿನ ಮೋದಿ ತೆರೆಮರೆಗೆ ಸರಿದು ನಿಮಗೆ ಜ್ಞಾನೋದಯ ಆದಾಗ ಮೋದಿಯಂತ ಶ್ರೇಷ್ಠ ನಾಯಕನನ್ನು ನಾವು ಸುಖಾಸುಮ್ಮನೆ ಟೀಕಿಸಿಬಿಟ್ಟೆವಲ್ಲ ಅಂತ ಪಶ್ಚಾತ್ತಾಪ ಪಡುತ್ತೀರಿ.

ನಿಮಗೆ ಅನಿಸಬಹುದು ಇದು ಅಂಧಾಭಿಮಾನದ ಪರಮಾವಧಿ ಅಂತ. ನೀವು ಹೇಗೆ ತಿಳ್ಕೊಂಡ್ರು ನಂಗೆ ಏನು ಸಮಸ್ಯೆ ಇಲ್ಲ. ಭಾರತ ಭಾರತೀಯರು ಅಂದ್ರೆ ಮೂಗು ಮುರಿಯುತ್ತಿದ್ದ ವಿದೇಶೀಯರು ಇಂದು ಭಾರತ ಅಂದ್ರೆ ಅದೆಷ್ಟೊ ಗೌರವ ಕೊಡ್ತಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ರಾಷ್ಟ್ರಗೀತೆ ಹೇಳಲು ಹಿಂದೆ ಮುಂದೆ ನೋಡುವ ಭಾರತೀಯರು ಇರುವಾಗ ಬೇರೆ ದೇಶದಲ್ಲಿ ನಮ್ಮ ರಾಷ್ಟ್ರ ಗೀತೆ ಮೊಳಗುತ್ತಿದೆ.

ಆತ ವಿಶ್ವದ ಯಾವುದೇ ಮೂಲೆಗೆ ಹೋದರೂ ಭಾರತ್ ಮಾತಾಕಿ ಜೈ ಅನ್ನುವ ಶಬ್ದ ಝೇಂಕರಿಸುತ್ತೆ. ವಿದೇಶೀಯರು ಈತನನ್ನು ಸ್ವಾಗತಿಸಲು ನಮ್ಮ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತಾರೆ.

ಮೋದಿ ಪ್ರಧಾನಿಯಾದ ನಂತರ ಈ ಹಿಂದೆ ಯಾವ ರಾಜಕಾರಣಿಗಳು ಮಾಡಿರದಂತಹ ರೀತಿಯಲ್ಲಿ ಸಂಸತ್ತಿನ ತಲೆ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು. ಅಲ್ಲದೇ ಮೊದಲ ಭಾಷಣದಲ್ಲಿ ಈ ದೇಶದ ಪ್ರಧಾನ ಸೇವಕನಂತೆ ಕೆಲಸ ಮಾಡುತ್ತೇನೆ ನನ್ನ ಮೇಲೆ ನಂಬಿಕೆ ಇಡಿ ಎಂದರು ಆ ನಂಬಿಕೆ
ಹುಸಿಯಾಗಲಿಲ್ಲ. ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಅಧಿಕಾರವಹಿಸಿ ಕೊಂಡಾಗಿನಿಂದಲೂ ಇನ್ನೂವರೆಗೆ ಒಂದೇ ಒಂದು ರಜೆಯನ್ನು ಹಾಕಿಲ್ಲ, ದಿನಾಲೂ 18 ಗಂಟೆ ಕೆಲಸ ಮಾಡುತ್ತಾರೆ.

ಕುಡಿದು ಸಂಸತ್ತಿಗೆ ಕಾಲಿಡುವ ರಾಜಕಾರಣಿಗಳಿರುವಾಗ ತಲೆಬಾಗಿ ನಮಸ್ಕರಿಸಿದ ಮೊದಲ ಪ್ರಧಾನಿ ನಮ್ಮ ಹೆಮೆಯ ಪ್ರಧಾನಿ ಮೋದಿ. ತುಷ್ಠೀಕರಣದ ಇಳಿಜಾರಿನಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ರಾಜಕಾರಣಿಗಳಿರುವಾಗ, ಮೋದಿಯವರು ನಾನೊಬ್ಬ ಹಿಂದು ರಾಷ್ಟ್ರವಾದಿ ಎಂದು ಹೆಮ್ಮೆಯಿಂದ ಹೇಳಿದ್ದರು. ಇದರಿಂದಾಗಿ ಮೋದಿಯವರನ್ನು ಕೋಮುವಾದಿ ಎಂದು ಬೊಗಳಿದವರು ಕಡಿಮೆ ಏನಿಲ್ಲ. ಬೊಗಳೋ ನಾಯಿಗಳೇ ಮೋದಿ ಹಿಂದು ಅಪ್ಪನಿಗೆ ಹುಟ್ಟಿದ್ದಾರೆ ಅದಕ್ಕೆ ಹಿಂದು ರಾಷ್ಟ್ರವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ. ನೀವು ಹಾಗೆ ಹೇಳೋಕೆ ನಾಚಿಕೆ ಪಡುತ್ತೀರಾ ಅಂದ್ರೆ ನೀವು ಹಿಂದೂ ಅಪ್ಪನಿಗೆ ಹುಟ್ಟಿಲ್ವಾ?

ಭಗವದ್ಗೀತೆ ಕೋಮುವಾದಿ ಗ್ರಂಥ ಅಂತ ಬೊಗಳುತ್ತಿದ್ದಾಗ, ಮೋದಿಯವರು ತಾವು ಹೋದ ದೇಶಗಳಲ್ಲೆಲ್ಲಾ ಅಲ್ಲಿನ ಪ್ರಭಾವಿ ನಾಯಕರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟರು. ಇದರಿಂದ ಉರಿದುಕೊಂಡೋರು ಕಡಿಮೆ ಇಲ್ಲ. ಬಿಡಿ ಉರಿದುಕೊಳ್ಳೋ ಚಟ ನಿಮಗಿದೆ. ನಮಗೆ ನಮ್ಮ ಪ್ರಧಾನಿ ಬಗ್ಗೆ ಹೆಮ್ಮೆ ಇದೆ.

ಜನರ ತೆರಿಗೆ ದುಡ್ಡನ್ನು ತಿಂದು ತೇಗಿ ಕೊಬ್ಬಿದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ ನಾನು ತಿನ್ನಲ್ಲ, ನಿಮಗೂ ತಿನ್ನೋಕೆ ಬಿಡಲ್ಲವೆಂದ ಹೆಮ್ಮೆಯ ಪ್ರಧಾನಿ. ನಮ್ಮ ಸಂಸ್ಕೃತಿಗಳ ಬಗ್ಗೆ ನಮ್ಮವರೇ ಆದ ಎಡಬಿಡಂಗಿಗಳು ಅಸಹ್ಯವಾಗಿ ಮಾತನಾಡುತ್ತಿರುವಾಗ ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಿ ಇಡೀ ಜಗತ್ತೇ ನತಮಸ್ತಕನಾಗುವಂತೆ ಮಾಡಿದರು ಮೋದಿ.

ನರೇಂದ್ರ ಮೋದಿಯವರು ಭಾರತವನ್ನು ಆಳಲು ಬಂದವರಲ್ಲ. ಬದಲಿಗೆ ಭಾರತದ ಸೇವೆ ಮಾಡಲು ಬಂದವರು. ಹೀಗಾಗಿಯೇ ಪ್ರಧಾನಿ ಗದ್ದುಗೆಗೆ ಏರಿದ ತಕ್ಷ ತನ್ನನ್ನು ತಾನು ಪ್ರಧಾನ ಸೇವಕ ಎಂದು ಹೇಳಿಕೊಂಡರು. ನಿಜಕ್ಕೂ ಮೋದಿಯವರು ಪ್ರಧಾನ ಸೇವಕರೇ. ಸರಿಯಾಗಿ ನಿದ್ದೆ ಮಾಡದೇ, ದಿನಕ್ಕೆ 16 ಗಂಟೆಗಳು ಕೆಲಸ ಮಾಡುತ್ತಾರೆ. ಯಾರಿಗಾಗಿ? ಏತಕ್ಕಾಗಿ? ಒಂದು ಬಾರಿ ನಿಮ್ಮಲ್ಲೇ ಯೋಚನೆ ಮಾಡಿ.

ಆತನಿಗೆ ಅಳಿಯನೂ ಇಲ್ಲ, ಮಗನೂ ಇಲ್ಲ. ಹೀಗಾಗಿ ಆತನಿಗೆ ಯಾರಗೋಸ್ಕರವೂ ಕೂಡಿಡುವ ಪ್ರಮೇಯವೇ ಬರುವುದಿಲ್ಲ. ಆತ ಸರಿಯಾಗಿ ನಿದ್ದೆಯನ್ನ ಮಾಡದೇ ದಿನಕ್ಕೆ 18 ಗಂಟೆ ಕೆಲಸ ಮಾಡುವುದು ಯಾರಿಗಾಗಿ ಹೇಳಿ? ಆತನಿಗೆ ಭಾರತವನ್ನು ಅತೀ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕೆಂಬ ದೊಡ್ಡ ಕನಸಿದೆ. ಆತನಿಗೆ ಭಾರತವನ್ನು ವಿಶ್ವಗುರುವಾಗಿಸುವ ಕನಸಿದೆ. ಹೀಗಾಗಿಯೇ ಅತ ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇರುತ್ತಾನೆ.

ಆತನಿಗೆ ರಾಜಕೀಯ ದುರಾಸೆಯಾಗಲಿ, ಹಪಹಪಿಯಾಗಲಿ, ಅಧಿಕಾರದ ಆಸೆಯಾಗಲಿ ಯಾವುದೂ ಇಲ್ಲ. ಆತನ ಮುಂದಿರುವುದು ಭಾರತ ಮಾತ್ರ. ಅದನ್ನು ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಕನಸು ಮಾತ್ರ. ಆತನಿಗೆಚರಾಜಕೀಯ ದಾಹವಾಗಲಿ, ದುರಾಸೆಯಾಗಲಿ ಇಲ್ಲ ಅನ್ನುವುದಕ್ಕೆ ಕೆಲ ಉದಾಹರಣೆಗಳನ್ನು ಕೊಡುತ್ತೇನೆ.

ಆತನಿಗೆ ನಿಜವಾಗಿಯೂ ರಾಜಕೀಯ ದುರಾಸೆ ಇದ್ದಿದ್ದರೆ, ನೋಟ್ ಬ್ಯಾನ್ ನಂತಹ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ನೋಟ್ ಬ್ಯಾನ್ ಆದಾಗ ವಿರೋಧಿಗಳ ತಮ್ಮಿಂದ ಎಷ್ಟಾಗುತ್ತೋ ಅಷ್ಟು ಅಪಪ್ರಚಾರ ಮಾಡಿದರು. ಇದರ ಬಗ್ಗೆ ಮೋದಿಯವರು ತಲೆ ಕೆಡಿಸಿಕೊಳ್ಳಲಿಲ್ಲ. ಓಟುಗಳನ್ನು ಕಳೆದುಕೊಳ್ಳುತ್ತೇನೆಂದು ಭಯವೂ ಪಡಲಿಲ್ಲ. ಯಾಕೆ ಗೊತ್ತಾ? ಆತನಿಗೆ ರಾಜಕೀಯ ದುರಾಸೆ ಇಲ್ಲ. ಬದಲಿಗೆ ರಾಷ್ಟ್ರವನ್ನು ಕಟ್ಟುವ ಕನಸಿದೆ. ಹೀಗಾಗಿಯೇ ಆತ ಓಟಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಇನ್ನೊಂದು ಉದಾಹರಣೆ ಅಂದ್ರೆ GST ಜಾರಿ. ಇದರ ಬಗ್ಗೆ ಬಹತೇಕರಿಗೆ ಜ್ಞಾನವೇ ಇಲ್ಲ. ಭಾರತೀಯರನ್ನು ಹಿಂದೆ ಬಂದ ಸರ್ಕಾರ ಹೇಗೆ ಮಾಡಿದೆ ಅಂದ್ರೆ, ಬಿತ್ತಿದ ತಕ್ಷಣವೇ ಫಲ ಕೊಡಬೇಕು ಎನ್ನುವ ಮನಸ್ಥಿತಿಯನ್ನು ಉಂಟು ಮಾಡಿದ್ದಾರೆ. ಹೀಗೆ ಮಾಡಿದ್ದರ ಪರಿಣಾಮವೇ GST ಜಾರಿಗೆ ಆದ ತಕ್ಷಣವೇ ಅದರ ಫಲಿತಾಂಶ ಕೇಳಲು ಶುರು ಮಾಡಿಬಿಟ್ಟರು. GST ಅಂದ್ರೆ ಅದು ಜಾರಿಯಾದ ತಕ್ಷಣವೇ ಫಲಿತಾಂಶ ಕೊಡುವ ಯೋಜನೆಯಲ್ಲ. ಅದಕ್ಕೆ ಸುಮಾರು ವರ್ಷಗಳು ಬೇಕು. ಭಾರತೀಯರು ಕಾಯೋದಕ್ಕೆ ತಯಾರಿದ್ದಾರೆ ಬಿಡಿ. ಯಾಕಂದ್ರೆ ಸುಮಾರು ವರ್ಷಗಳು ಕಾಲ ದಾಸ್ಯದ ನೆರಳಿನಲ್ಲಿ ಬದುಕಿದ್ದಾರೆ. ಈಗ ಒಬ್ಬ ವ್ಯಕ್ತಿ ರಾಷ್ಟ್ರವನ್ನು ಕಟ್ಟಲು ಬಂದಿದ್ದಾರೆಂದರೆ, ಭಾರತೀಯರು ಕಾಯಲು ತಯಾರಿದ್ದಾರೆ ಅಂತಲೇ ಅರ್ಥ.

ಹೇಗೆ ಇಂದಿನ ಭಾರತ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಎಂಬ ಅಮೂಲ್ಯ ರತ್ನಗಳನ್ನು ಆರಾಧಿಸುತ್ತಿದೆಯೋ ಹಾಗೆ ಭವಿಷ್ಯದ ಭಾರತ ನರೇಂದ್ರ ಮೋದಿ ಎಂಬ ವಜ್ರವನ್ನು ಆರಾಧಿಸುತ್ತದೆ.

ಸಾವಿರ ನಾಯಕರು ಬರ್ತಾರೆ ಸಾವಿರ ನಾಯಕರು ಹೋಗ್ತಾರೆ. ಆದರೆ ಕೆಲವು ನಾಯಕರು ಮಾತ್ರ ಜನರ ಮನಸಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಮೋದಿ ಕೂಡ ಶಾಶ್ವತವಾಗಿ ಭಾರತಿಯರ ಮನಸಲ್ಲಿ ಉಳಿಯುತ್ತಾರೆ ನೋಡ್ತಾ ಇರಿ.

 •  
  3.2K
  Shares
 • 3.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com