Connect with us
Loading...
Loading...

ಪ್ರಚಲಿತ

ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಸ್ಟಾರ್ ಹಿಂದುತ್ವದ ಕುರಿತು ಹೀಗೆ ಹೇಳಿದ್ದಾನೆ!! ಅಷ್ಟಕ್ಕೂ ಆತ ಹೇಳಿದ್ದೇನು ಗೊತ್ತೆ?

Published

on

 • 7.6K
 •  
 •  
 •  
 •  
 •  
 •  
 •  
  7.6K
  Shares

ಇತ್ತೀಚೆಗೆ ಎರಡು ಬಾರಿ ಆಸ್ಕರ ಪಡೆದ ಹಾಲಿವುಡ್ ನಟ ವಿಲ್ ಸ್ಮಿತ್ ಭಾರತಕ್ಕೆ ಭೇಡಿ ನೀಡಿದ್ದರು. ಆಗ ಆತ ಭಾರತದ ಕುರಿತು ಹಾಗೂ ಹಿಂದೂ ಧರ್ಮದ ಕುರಿತು ಏನು ಹೇಳಿದ್ದಾನೆ ಗೊತ್ತೆ?

“ನನಗೆ ಭಾರತವೆಂದರೆ ತುಂಬಾ ಇಷ್ಟ. ನಾನು ಇಂದು ಇಷ್ಟು ಯಶಸ್ಸು ಗಳಿಸಿರೋದಕ್ಕೆ ಕಾರಣ ಭಗದ್ಗೀತೆ” ಎಂದು ಎರಡು ಬಾರಿ ಆಸ್ಕರ ಪಡೆದ ಹಾಲಿವಿಡ್ ನಟ ವಿಲ್ ಸ್ಮಿತ್ ಹೇಳಿದ್ದರು. ಇದು ಭಾರತದ ಹೆಮ್ಮೆ, ಭಾರತೀಯರ ಹೆಮ್ಮೆ.

ವಿಲ್ ಸ್ಮಿತ್ ಇತ್ತೀಚೆಗೆ ಭಾರತಕ್ಕೆ ಬಂದದ್ದು ಅದು ಅವರ ಭಾರತದ ನಾಲ್ಕನೇ ಭೇಟಿ. ಇತ್ತೀಚಿಗೆ ಬಂದಿದ್ದರ ಕಾರವೇನೆಂದರೆ ಅವರ ಮುಂದಿನ ಸಿನೆಮಾ “ಬ್ರೈಟ್” ಎಂಬ ಚಿತ್ರದ ಪ್ರಚಾರದ ಸಲುವಾಗಿ.

“ನಾನಿಂದು 90% ಪರಿಪೂರ್ಣ ಆಗಿರೋದು ಭಗವ್ದೀತೆಯಿಂದ” ಅಂತ ಹೇಳಿ ಎಲ್ಲರ ಹುಬ್ಬೇರುವಂತೆ ಮಾತಾಡಿದ್ದರು. “ಈಗಾಗಲೇ ಭಗವದ್ಗೀತೆಯ 90% ಭಾಗವನ್ನು ಓದಿದ್ದೇನೆ. ಭಗವದ್ಗೀತೆ ಓದುವುದೆಂದರೆ ನನಗೆ ತುಂಬಾ ಇಷ್ಟ. ಮುಂದಿನ ಬಾರಿ ನಾನು ಬಂದು ಹಿಂದೂ ಧರ್ಮದ ಪವಿತ್ರ ಸ್ಥಳವಾದ ರಿಷಿಕೇಶಕ್ಕೆ ಹೋಗುತ್ತೇನೆ” ಎಂದು ಅವರು ತಮ್ಮ ಹಿಂದು ಧರ್ಮದೆಡೆಗಿನ ಗೌರವ, ಪ್ರೀತಿಯನ್ನು ತೋರಿಸಿದ್ದರು.

ಕಳೆದ ಬಾರಿ ವಿಲ್ ಸ್ಮಿತ್ ಬಂದಾಗ ರಾಷ್ಟ್ರವಾದಿಯಾದ ನಮ್ಮೆಲ್ಲರ ಅಚ್ಚು ಮೆಚ್ಚಿನ ಅಕ್ಷಯ್ ಕುಮಾರ್ ಅವರ ಮನೆಯಲ್ಲಿ ಊಟ ಮಾಡಿದ್ದರು. ಅದನ್ನು ಎಂದಿಗೂ ಮರೆಯಲಾಗುವುದಿಲ್ಲವೆಂದು ಭಾರತದ ಊಟದ ರುಚಿಯ ಕುರಿತು ಮಾತಾಡಿದ್ದರು.

ಇದು ಭಾರತೀಯರು ಹೆಮ್ಮೆ ಪಡಲೇಬೇಕಾದ ವಿಷಯ. ನಮ್ಮಲ್ಲೇ ಅನೇಕರಿಗೆ ಭಗವದ್ಗೀತೆಯ ಬಗ್ಗೆ ಗೊತ್ತಿಲ್ಲ.‌ಓದುವ ಆಸಕ್ತಿಯೂ ಇಲ್ಲ. ಕೆಲವರಂತೂ ಭಗವದ್ಗೀತೆಯನ್ನು ಸುಟ್ಟು ಹಾಕುವ ಮಾತುಗಳನ್ನಾಡುತ್ತಾರೆ. ಇವರೆಲ್ಲ ವಿಲ್ ಸ್ಮಿತ್ ಅವರಿಂದ ಕಲಿಯಬೇಕು.

ವಿದೇಶಿಯರು ನಮ್ಮ ಸನಾತನ ಸಂಸ್ಕೃತಿಗೆ ಮರುಳಾಗುತ್ತಿದ್ದಾರೆ. ಆದರೆ ನಾವು?

ಭಗವದ್ಗೀತೆಯ ಬಗ್ಗೆ ವಿದೇಶಿಯರು ಶ್ರದ್ಧೆಯಿಂದ ಓದುತ್ತಿರಬೇಕಾದರೆ, ಭಗವದ್ಗೀತೆಯನ್ನು ಕೊಟ್ಟ ನಮಗೆ ಅದರ ಬಗ್ಗೆ ಸ್ವಲ್ಪವೂ ಗೊತ್ತಿರದೇ ಇದ್ದರೆ ಹೇಗೆ? ಸ್ವಲ್ಪವಾದರೂ ಭಗವದ್ಗೀತೆಯ ಬಗ್ಗೆ ತಿಳಿದಿರಬೇಕಲ್ವಾ? ಅದಕ್ಕಾಗಿ ಭಗವದ್ಗೀತೆಯ ಕಿರುಪರಿಚಯವನ್ನು ನಿಮ್ಮ ಮುಂದಿಡುತ್ತೇನೆ. ಓದಿ ಶೇರ್ ಮಾಡಿ.

ಭಗವದ್ಗೀತೆಯ ಕಿರು ಪರಿಚಯ:

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.

* ಯಾವಾಗ ಬೋಧಿಸಿದ..?
ಉತ್ತರ : ಇಂದಿನಿಂದ ಸುಮಾರು 7 ಸಾವಿರ ವರ್ಷಗಳ ಹಿಂದೆ.

* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.

* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.

* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.

* ಎಷ್ಟು ಸಮಯ ಬೋಧಿಸಿದ..?
ಉತ್ತರ : 45 ನಿಮಿಷ.

* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?
ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ.. ತನ್ನ ಕರ್ತವ್ಯದಿಂದ ಅರ್ಜುನ ವಿಮುಖನಾಗಲು ಬಯಸುತ್ತಾನೆ..ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ..ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.

* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.

* ಎಷ್ಟು ಶ್ಲೋಕಗಳಿವೆ..?
ಉತ್ತರ : 700 ಶ್ಲೋಕಗಳು.

* ಗೀತೆಯಲ್ಲಿರುವ ವಿಷಯಗಳಾವವು..?
ಉತ್ತರ : ಜ್ಞಾನ ಭಕ್ತಿ ಕರ್ಮ ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ..

* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು…?
ಉತ್ತರ : ಭಗವಾನ್ ಸೂರ್ಯದೇವನಿಗೆ.

* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.

* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.

* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದು..

* ಭಗವದ್ಗೀತೆಯಲ್ಲಿ ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ – 574, ಅರ್ಜುನ – 85, ಧೃತರಾಷ್ಟ್ರ – 01 ಸಂಜಯ – 40, ಶ್ರೀಕೃಷ್ಣಾರ್ಪಣಮಸ್ತು

ಭಾರತವೆಂದರೆ ನನಗೆ ತುಂಬಾ ಇಷ್ಟ ಎಂದು ವಿದೇಶಿಗ ವಿಲ್ ಸ್ಮಿತ್ ಹೇಳ್ತಾರೆ. ಆದರೆ ನಮ್ಮವರೇ ಆದ ಕೆಲವರಿಗೆ ಭಾರತವೆಂದರೆ ಅಸಡ್ಡೆ.

ಆದರೆ ಭಾರತದ ತಾಕತ್ತು ಎಂತಹದ್ದು ಗೊತ್ತಾ?

ಜಗತ್ತೇ ಬೆಕ್ಕಸ ಬೆರಗಾಗುವ ರೀತಿಯಲ್ಲಿ ಭಾರತ ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನ, ಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು ಹೀಗೆ ಹಲವಾರು ಕ್ಷೇತ್ರದಲ್ಲಿ ಉತ್ತುಂಗದಲ್ಲಿತ್ತು.

ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು! ಒಂದು ರಾಷ್ಟ್ರವನ್ನು ವೈಭವಪೂರ್ಣ ಮಾಡುವಲ್ಲಿ ಆಗಿನ ವಿದ್ಯಾಮಂದಿರಗಳು ಮುಂದಾಗಿದ್ದವು.

ವಿಶ್ವದ ಮೊದಲ ವಿಶ್ವವಿದ್ಯಾಲಯವಿದ್ದುದು ಭಾರತದಲ್ಲಿ ಅದು ತಕ್ಷ ಶಿಲಾ.

ಚಂದ್ರನತ್ತ ಉಪಗ್ರಹ ಕಳುಹಿಸಿದ 6ನೇ ದೇಶ ಭಾರತ. ಈ ಯೋಜನೆಯ ಹೆಸರು ಚಂದ್ರ ಯಾನ. ಈ ಯೋಜನೆಯ ಮೂಲ ಹೆಸರು – ಸೋಮಯಾನ

ಪೈಥಾಗೋರಸ್ ಪ್ರಮೇಯವನ್ನು ಮೊದಲೇ ಕಂಡು ಕೊಂಡಿದ್ದ ಪ್ರಾಚೀನ ಭಾರತದ ರೇಖಾ ಗಣಿತಜ್ಞ- ಬೋಧಾಯನ.

ಕೃತಕ ಜೀನ್ ಆವಿಷ್ಕಾರಕ್ಕಾಗಿ ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿ- ಡಾ| ಹರ್‌ಗೋಬಿಂದ್ ಖುರಾನಾ.

ಪ್ಲಾಸ್ಟಿಕ್ ಸರ್ಜರಿ ಕುರಿತು ಸಮರ್ಪಕ ಮಾಹಿತಿ ತಿಳಿದಿದ್ದ ಪ್ರಾಚೀನ ಭಾರತದ ಶ್ರೇಷ್ಠ ಶಸ್ತ್ರಚಿಕಿತ್ಸಕ- ಸುಶ್ರುತ.

’ಪರಮ್-10,000′ ಈ ಸೂಪರ್ ಕಂಪ್ಯೂಟರ್ ನಿರ್ಮಾತೃ ಡಾ| ವಿಜಯ್ ಭಾಟ್ಕರ್.

ಜಗತ್ತಿನ 7 ನೇ ಅತಿ ದೊಡ್ಡ ದೇಶ, 4ನೇ ದೊಡ್ಡ ಸೈನ್ಯ, 3ನೇ ದೊಡ್ಡ ರೈಲ್ವೆ, 2ನೇ ಹೆಚ್ಚು ಜನಸಂಖ್ಯೆಯ ದೇಶ.

2ನೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ, 2ನೇ ಅತಿ ದೊಡ್ಡ ಅಕ್ಕಿ ಮತ್ತು ಚಹಾ ಉತ್ಪಾದಕ.

ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ನಂ.1, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ಜಗತ್ತಿನ ಅತಿ ದೊಡ್ಡ ಕಾರ್ಮಿಕ ಶಕ್ತಿ.

ಇಸ್ರೋ-ಎತ್ತಿನ ಗಾಡಿಯಿಂದ ಹಿಡಿದು ಜಿ.ಎಸ್.ಎಲ್.ವಿ. ವರೆಗೆ ಸಾಧನೆಗಳ ವಿಕ್ರಮ. ಅಮೇರಿಕದ ಅಂತರಿಕ್ಷ ಬಜೆಟ್ 16 ಬಿಲಿಯನ್ (₹. 8,000 ಕೋಟಿ) ಡಾಲರ್. ಆದರೆ ಇಸ್ರೋದ್ದು – 700 ಮಿಲಿಯನ್ ಡಾಲರ್ (₹. 350 ಕೋಟಿ ಮಾತ್ರ)

ಪೇಪರ್‌ನಷ್ಟು ತೆಳುವಾಗಿರುವ ನ್ಯಾನೋ ಪೇಪರ್‌ನಿಂದ ಬ್ಯಾಟರಿ ಸೆಲ್ ತಯಾರಿಸಿದವರು ಅಲ್ಟ್ರಾ ಥಿನ್ ಬ್ಯಾಟರೀಸ್ ಸೆಲ್ಲುಲೋಸ್ ಅನ್ನು ಬಳಸಿ. ಅಮೇರಿಕದ ಮೂರು ವಿ.ವಿ.ಗಳಲ್ಲಿ ಸಂಶೋಧನೆ ಮಾಡುತ್ತಿರುವ ಭಾರತೀಯ ವಿಜ್ಞಾನಿಗಳು – ಅಜೇಯನ್, ನಲ್ಲಮಾಸು, ಮುರುಗೇಶನ್, ಮಣಿಕೋಟ್, ಪುಷ್ಪರಾಜ್, ಕುಮಾರ್.

ಭಾರತದ ಆರ್ ಶಿವರಾಮನ್(34) ಚೆನ್ನೈ, ಕಂಪ್ಯೂಟರ್ ಹಾರ್ಡ್ ಡ್ರೈವ್‌ನಲ್ಲಿ ೫೦೦ ಜಿ.ಬಿ.ಅಷ್ಟು ಸ್ಥಳಾವಕಾಶದಲ್ಲಿ, 30ಟೆರ್ರಾ ಬೈಟ್ ಕೂರಿಸುವಲ್ಲಿ ಯಶಸ್ವಿಯಾಗಿದ್ದಾನೆ. ನ್ಯಾನೋ ಕಣಗಳ ಆಧಾರಿತವಾಗಿ ನೀರಿನ ಸೋಸುವಿಕೆ ಯಂತ್ರವನ್ನು ಮೊದಲ ಬಾರಿಗೆ ಐಐಟಿ ಚೆನ್ನೈನಲ್ಲಿ ಸಿದ್ಧಪಡಿಸಲಾಗಿದೆ. ಇದನ್ನು ನ್ಯಾನೋ ಟೆಕ್ನಾಲಜಿ ಎಂದರೆ, ಅಣು ಪರಮಾಣು ಮಟ್ಟದಲ್ಲಿ ಕಣಗಳ ನಿಯಂತ್ರಣ ಮತ್ತು ಬಳಕೆ ಎಂದರ್ಥ. ಇದರಲ್ಲಿ ಭಾರತ ಏನೂ ಹಿಂದುಳಿದಿರಲಿಲ್ಲ. 3,000 ವರ್ಷಗಳ ಹಿಂದೆಯೇ ಭಾರತದ ಖ್ಯಾತ ಉಕ್ಕು ‘ವೂಟ್ಸ್’ ನಲ್ಲಿ ಮತ್ತು ಅಜಂತಾ ವರ್ಣ ಚಿತ್ರಗಳಲ್ಲಿ ಸಹ ಈ ತಂತ್ರಜ್ಞಾನದ ಬಳಕೆ ಆಗಿದೆ.

ಅಬ್ಬಾ ಭಾರತದ ಬಗ್ಗೆ ಹೇಳೋದಕ್ಕೆ ಸಾವಿರಾರು ಇವೆ. ಹೇಳುತ್ತಾ ಹೋದರೆ ಮುಗಿಯದ ಕಥೆ. ವಿದೇಶಿಗರಿಂದ ನಮ್ಮ ಸನಾತನ ಸಂಸ್ಕೃತಿ, ಭಾರತಕ್ಕೆ ಮರುಳಾಗುತ್ತಿದ್ದಾರೆ. ನಾವು ಹೆಮ್ಮೆಯ ಭಾರತೀಯರು ಹೀಗಾಗಿ ನಮ್ಮ ಬಗ್ಗೆ ನಾವು ತಿಳಿಯೋಣ.

 •  
  7.6K
  Shares
 • 7.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com