Connect with us
Loading...
Loading...

ಪ್ರಚಲಿತ

ಶಾಕಿಂಗ್ ನ್ಯೂಸ್: ಕರ್ನಾಟಕ ಚುನಾವಣೆಯಲ್ಲಿ ಪಾಕಿಸ್ತಾನದ ಎಂಟ್ರಿ!! ಕಾಂಗ್ರೆಸ್ ಬೆಂಬಲಕ್ಕೆ ನಿಂತು ‘ಕೈ’ ಹಿಡಿಯಿತಾ ಪಾಕಿಸ್ತಾನ?!

Published

on

  • 2.9K
  •  
  •  
  •  
  •  
  •  
  •  
  •  
    2.9K
    Shares

ಯೆಸ್, ಕರ್ನಾಟಕದ ಚುನಾವಣೆಯಲ್ಲಿ ಪಾಕಿಸ್ತಾನದ ಎಂಟ್ರಿಯಾಗಿದೆ. ಇತ್ತಿಚೆಗಷ್ಟೇ ಕೆಲ ತಿಂಗಳ ಹಿಂದಷ್ಟೇ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನ ಗುಜರಾತ್ ಚುನಾವಣೆಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ಪರ ಮತ ಹಾಕುವಂತೆ ಗುಜರಾತ್ ಮುಸಲ್ಮಾನರನ್ನ ಆಗ್ರಹಿಸಿತ್ತು.

ಪಾಕಿಸ್ತಾನ ತನ್ನ ದೇಶದಲ್ಲಿ ಸೋಶಿಯಲ್ ಮೀಡಿಯಾನಲ್ಲಿ ಗುಜರಾತಿನ ಮುಸಲ್ಮಾನರು ಕಾಂಗ್ರೆಸ್ ಗೆ ಮತ ಹಾಕಬೇಕು,‌ ಕಾಂಗ್ರೆಸ್ ಚುನಾವಣೆ ಗೆದ್ದರೆ ಅಹ್ಮದ್ ಪಟೇಲ್ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಸುದ್ದಿಯನ್ನ ಹಬ್ಬಿಸಿ ಕಾಂಗ್ರೆಸ್ ಗೆ ನೇರಾನೇರ ಬೆಂಬಲ ಸೂಚಿಸಿತ್ತು.

ಈ ಮಧ್ಯೆ ಗುಜರಾತ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಅಲ್ಲಿನ ಚುನಾವಣೆಯಲ್ಲಿ ಪಾಕಿಸ್ತಾನ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ ಅನ್ನೋದನ್ನ ಹೇಳಿದ್ದರು.

ಪ್ರಧಾನಮಂತ್ರಿಗಳು ಹಾಗೆ ಹೇಳೀದಕ್ಕೂ ಕಾರಣವಿತ್ತು!!

ನಮ್ಮ ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗರು ದೆಹಲಿಯ ಪಾಕಿಸ್ತಾನ್ ರಾಯಭಾರಿ ಕಛೇರಿಯ ಅಧಿಕಾರಿಯ ಮನೆಯಲ್ಲಿ ಮಣಿಶಂಕರ್ ಅಯ್ಯರ್ ಜೊತೆ ಊಟ ಮಾಡಿ ಸಭೆ ನಡೆಸಿ ಬಂದದ್ದನ್ನ ಮೋದಿ ಉಲ್ಲೇಖಿಸಿ ಕಾಂಗ್ರೆಸ್ ಈ ಗುಜರಾತ್ ಚುನಾವಣಾ ಸಂದರ್ಭದಲ್ಲಿ ಮನಮೋಹನ ಸಿಂಗರು ಪಾಕಿಸ್ತಾನದ ಅಧಿಕಾರಿಯನ್ನ ಭೇಟಿ ಮಾಡಿ ಅದ್ಯಾವ ಚರ್ಚೆ ಮಾಡಿದ್ದಾರೆ ಅನ್ನೋದನ್ನ ಪ್ರಶ್ನಿಸಿದ್ದರು, ಆದರೆ ಮೋದಿಯವರ ಪ್ರಶ್ನೆಗೆ ಮನಮೋಹನ್ ಸಿಂಗ್ ಉತ್ತರ ಕೊಡದೆ ತಮ್ಮ ಮೌನಿ ಶೈಲಿಯಲ್ಲೇ ಸುಮ್ಮನಾಗಿಬಿಟ್ಟು ಮೋದಿಯವರ ಆರೋಪಗಳು ಸತ್ಯ ಅನ್ನೋದನ್ನ ಪರೋಕ್ಷವಾಗಿ ಒಪ್ಪಿಕೊಂಡುಬಿಟ್ಟಂತೆ ಸುಮ್ಮನೆ ಕೂತು ಬಿಟ್ಟರು.

ಅರೇ ಆ ವಿಷ್ಯಕ್ಕೂ ಕರ್ನಾಟಕ ಚುನಾವಣೆಯಲ್ಲಿ ಪಾಕಿಸ್ತಾನದ ಎಂಟ್ರಿಗೂ ಸಂಬಂಧವೇನು ಅಂತ ಯೋಚಿಸ್ತಿದೀರ? ಖಂಡಿತ ಇದೆ‌.

ಅಂದು ಗುಜರಾತ್ ಚುನಾವಣೆಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ಪಾಕಿಸ್ತಾನ ಇದೀಗ ಕರ್ನಾಟಕ ಚುನಾವಣೆಯಲ್ಲೂ ಎಂಟ್ರಿ ಕೊಟ್ಟಿದೆ, ಅದೂ ಒಂಥರಾ ಡಿಫರೆಂಟ್ ಸ್ಟೈಲ್ ನಲ್ಲಿ. ಅಂದು ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅಹ್ಮದ್ ಪಟೇಲ್ ರನ್ನ ಮುಖ್ಯಮಂತ್ರಿಯಾಗಿಸಲು ಕಾಂಗ್ರೆಸ್ ಗೆ ಮತ ನೀಡಿ ಅಂತ ಪೋಸ್ಟರ್ ಹಾಕ್ಕೊಂಡಿದ್ದ ಪಾಕಿಸ್ತಾನ ಇದೀಗ ಕರ್ನಾಟಕ ಚುನಾವಣೆಯಲ್ಲಿ ಕರ್ನಾಟಕದ ಮುಸಲ್ಮಾನರು ಕಾಂಗ್ರೆಸ್ಗೇ ಮತ ಹಾಕುವಂತೆ ಮಾಡಲು ಬೆಚ್ಚಿಬೀಳಿಸುವಂಥ ಮತ್ತೊಂದು ಷಡ್ಯಂತ್ರ ಮಾಡಿದೆ ನೋಡಿ.

ಕರ್ನಾಟಕದಲ್ಲಿ ಭಾರಿ ವಿರೋಧದ ನಡುವೆಯೂ ಸಿದ್ದರಾಮಯ್ಯ ನಾನು ಟಿಪ್ಪು ಜಯಂತಿ ಮಾಡೇ ಮಾಡ್ತೀನಿ ಅಂತ 144 ಸೆಕ್ಷನ್ ಜಾರಿ ಮಾಡಿ ಕರ್ಫ್ಯೂ ಹೇರಿ ಟಿಪ್ಪು ಜಯಂತಿ ಮಾಡಿದ್ದು ಬಹುಶಃ ನೀವು ಮರೆತಿಲ್ಲ ಅನ್ಸತ್ತೆ ಅಲ್ವ? ಯೆಸ್ ಅದೇ ವಿಷ್ಯ ಇಟ್ಗೊಂಡು ಪಾಕಿಸ್ತಾನ ಇದೀಗ ತನ್ನ ದಾಳ ಉರುಳಿಸಿ ಕರ್ನಾಟಕದ ಚುನಾವಣೆಗೆ ಎಂಟ್ರಿ ಕೊಟ್ಟಿದೆ ನೋಡಿ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ದಕ್ಕೂ ಪಾಕಿಸ್ತಾನ ಕರ್ನಾಟಕ ಚುನಾವಣೆಯಲ್ಲಿ ಎಂಟ್ರಿ ಕೊಡೋದಕ್ಕೂ ಸಂಬಂಧವೇನು ಅಂತ ಯೋಚನೆ ಮಾಡ್ತಿದೀರ ತಾನೆ? ಇಲ್ಲಿದೆ ನೋಡಿ ಅದರ ಹಿಂದಿನ ರಹಸ್ಯ

ಹಿಂದೂ ಸಂಘಟನೆಗಳು, ಟಿಪ್ಪುವಿನ ಕ್ರೌರ್ಯ ಮತಾಂಧತೆಯಿಂದ ತಮ್ಮ ಸಾವಿರಾರು ಪೂರ್ವಜರನ್ನ ಕಳೆದುಕೊಂಡ ಕೊಡಗು ಭಾಗದ ಜನ,‌ ಮಂಗಳೂರಿನ ಕ್ರೈಸ್ತರ, ಬಿಜೆಪಿ, ನಾಯಕ್ ಸಮುದಾಯ ಹೀಗೆ ಹಲವು ಸಂಘ ಸಂಸ್ಥೆಗಳು, ಜನರ ವಿರೋಧಕ್ಕೂ ಕ್ಯಾರೆ ಅನ್ನದ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನ ಆಚರಿಸಿಯೇ ಬಿಟ್ಟಿದ್ದರು.

ಅಷ್ಟಕ್ಕೂ ಸಿದ್ದರಾಮಯ್ಯ ಟಿಪ್ಪು ಜಯಂತಿ ಯಾಕೆ ಮಾಡಿದ್ದರು, ಅದರ ಹಿಂದಿನ ತಂತ್ರ ಕುತಂತ್ರವೇನಿತ್ತು ಅನ್ನೋದನ್ನ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ ಅನ್ಸತ್ತೆ. ಆದರೂ ಹೇಳ್ತೀನಿ ಕೇಳಿ, ಟಿಪ್ಪು ಜಯಂತಿ ಮಾಡಿ ನಾನು ಮುಸಲ್ಮಾನರ ಪರ,‌ ಕಾಂಗ್ರೆಸ್ ಮುಸಲ್ಮಾನರ ಪರ ಇದೆ ಅಂತ ತೋರಿಸಿ ಮುಸ್ಲಿಂ ವೋಟಬ್ಯಾಂಕಗೋಸ್ಕರ ರಾಜ್ಯವನ್ನ ಅಕ್ಷರಶಃ ರಣಾಂಗಣಮಾಡಿಬಿಟ್ಟಿದ್ದ ನಮ್ಮ ಮುಖ್ಯಮಂತ್ರಿ.

ಅದೆಲ್ಲಾ ಆದ ನಂತರ ಕರ್ನಾಟಕ ಚುನಾವಣೆ ಹತ್ತಿರ ಬಂತು ಅಂತ ತಿಳಿದ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಕೂಡ ಮಾಡೋಕೆ ಕರ್ನಾಟಕಕ್ಕೆ ಬಂದಿದ್ದರು. ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಅಂದರೆ 42 ದಿನಗಳ ಹಿಂದೆ ಭಾಷಣ ಮಾಡಬೇಕಿದ್ರೆ ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ದೇಶಭಕ್ತನಾಗಿದ್ದ, ಸ್ವಾತಂತ್ರ್ಯ ಹೋರಾಟಗಾರನಾಗಿದ್ದ, ಹಾಗಿದ್ದ ಹೀಗಿದ್ದ ಅಂತೆಲ್ಲ ಹೇಳಿ ಹೋಗಿದ್ದು ತಮಗೆಲ್ಲಾ ನೆನಪಿರಬಹುದು.

ಯೆಸ್ ಅಂದು 42 ದಿನಗಳ ಹಿಂದೆ ರಾಹುಲ್ ಗಾಂಧಿ ಟಿಪ್ಪು ಬಗ್ಗೆ ಹೇಳಿದ್ದ ಮಾತುಗಳನ್ನೇ ಇವತ್ತು ಪಾಕಿಸ್ತಾನ ತನ್ನ ಆಫಿಷಿಯಲ್ ಟ್ವಿಟ್ಟರ್ ಅಕೌಂಟ್ ಗಳಿಂದ ಹೇಳ್ತಿದೆ. ಟಿಪ್ಪುಗೂ ಪಾಕಿಸ್ತಾನಕ್ಕೂ ಏನ್ರೀ ಸಂಬಂಧ? ಪಾಕಿಸ್ತಾನ ಟ್ವೀಟ್ ಮಾಡಿ ಟಿಪ್ಪುವನ್ನ ಹಾಡಿ ಹೊಗಳೋಕೆ ಶುರು ಮಾಡಿದೆ, ಟಿಪ್ಪು ದೇಶಭಕ್ತನಾಗಿದ್ದ, ಬ್ರಿಟೀಷರ ವಿರುದ್ಧ ಹೋರಾಡಿದ್ದ, ಆತ ಮೈಸೂರು ಹುಲಿ ಆಗಿದ್ದ ಅಂತೆಲ್ಲ ಪಾಕಿಸ್ತಾನ ಈ ಸಂದರ್ಭದಲ್ಲಿ I mean ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಟ್ವೀಟ್ ಮಾಡ್ತಿರೋದರ ಹಿಂದಿನ ಉದ್ದೇಶವಾದರೂ ಏನು?

ಟಿಪ್ಪು ಭಾರತಕ್ಕಾಗಿ ಹೋರಾಡಿದ್ದ ಅಂತಾನೇ ಇಟ್ಕೊಳ್ಳಣ, ಭಾರತಕ್ಕಾಗಿ ಹೋರಾಡಿದ್ದ ಟಿಪ್ಪು ಬಗ್ಗೆ ಪಾಕಿಸ್ತಾನಕ್ಯಾಕೆ ಸಡನ್ ಆಗಿ ಪ್ರೀತಿ ಉಕ್ಕಿ ಹರಿಯೋಕೆ ಶುರುವಾಯ್ತೂಂತ?

ಕಾರಣವಿಷ್ಟೇ, ಕರ್ನಾಟಕದಲ್ಲಿರೋ ಪಾಕಿಸ್ತಾನಿ ಪ್ರೇಮಿಗಳು, ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳೋ ಬೇವರ್ಸಿಗಳು ಪಾಕಿಸ್ತಾನ ಕೂಡ ಟಿಪ್ಪುಗೇ ಜೈ ಅಂತಿದೆ ಸಿದ್ರಾಮಯ್ಯ,‌ ಕಾಂಗ್ರೆಸ್ ಕೂಡ ಟಿಪ್ಪು ಜಯಂತಿ ಮಾಡ್ತಾ ಟಿಪ್ಪುಗೆ ಜೈ ಅಂತಿದೆ ಸೋ ಮುಸಲ್ಮಾನರ ಹಿತ ಕಾಯೋ ಪಕ್ಷ ಅಂದ್ರೆ ಅದು ಕಾಂಗ್ರೆಸ್, ಹಾಗಾಗಿ ನಾವು ಕಾಂಗ್ರೆಸ್ಗೇ ಮತ ಹಾಕಬೇಕು ಅನ್ನೋ ಮನಸ್ಥಿತಿಗೆ ಬರಲಿ ಅನ್ನೋ ಉದ್ದೇಶದಿಂದ ಪಾಕಿಸ್ತಾನ ಸಡನ್ ಆಗಿ ಟಿಪ್ಪು ಬಗ್ಗೆ ಟ್ವೀಟ್ ಮಾಡೋಕೆ ಶುರು ಮಾಡಿದೆ‌.

ರಿಪಬ್ಲಿಕ್ ಟಿವಿ ಪಾಕಿಸ್ತಾನ ಮಾಡಿರೋ ಟ್ವೀಟ್ ಗಳ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಜೀ ಯವರಿಗೆ ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ?

“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತಾಂಧ PFI, SDPI ಸಂಘಟನೆಗಳಿಗೆ ಬೆಂಬಲ ಕೊಟ್ಟಿದೆ & ಅವುಗಳು ಕೂಡ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿಸೋಕೆ ಮುಂದಾಗಿವೆ. Obviously PFI, SDPI ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕ ಟಿಪ್ಪುವನ್ನ ಆದರ್ಶ ವ್ಯಕ್ತಿ ಅಂತ ಒಪ್ಪಿಕೊಳ್ತಾರೆ, ಪಾಕಿಸ್ತಾನ ಕೂಡ ಕರ್ನಾಟಕದ ಇಂಥಾ ಮತಾಂಧ ಶಕ್ತಿಗಳನ್ನ ಪ್ರೇರೇಪಿಸೋಕೆ ಟಿಪ್ಪುವನ್ನ ಹೊಗಳೋಕೆ ಶುರು ಮಾಡಿದೆ. ಇದರಿಂದ ಕಾಂಗ್ರೆಸ್ ಗೆ ಮತಾಂಧತೆ ತುಂಬಿರೋ ಜನರಿಂದ ಬೆಂಬಲ ಸಿಕ್ಕು ಕಾಂಗ್ರೆಸ್ ಗೆ ಅವರ ಮತ ಹರಿದು ಬರುತ್ತೆ ಅನ್ನೋದು ಪಾಕಿಸ್ತಾನದ ಲೆಕ್ಕಾಚಾರ” ಅಂತ ಸುಬ್ರಮಣಿಯನ್ ಸ್ವಾಮಿ ಹೇಳ್ತಾರೆ‌.

ಹೌದು ಅವರು ಹೇಳ್ತಿರೋದು ಸತ್ಯ ಕೂಡ. ಗುಜರಾತ್ ಚುನಾವಣಾ ಸಂದರ್ಭದಲ್ಲಿ ಪಾಕಿಸ್ತಾನ ಕಾಂಗ್ರೆಸ್ ಬೆಂಬಲಿಸಿ ಅಂತ ಹೇಳೋಕೆ ಬೇರೆ ತಂತ್ರವನ್ನೇ ರೂಪಿಸಿತ್ತು & ಇದೀಗ ಕರ್ನಾಟಕ ಚುನಾವಣೆಗೋಸ್ಕರ ಟಿಪ್ಪುವಿನ ಹೆಸರಿನಿಂದ ಕುತಂತ್ರ ಮಾಡೋಕೆ ಮುಂದಾಗಿದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಇದು ನಮ್ಮ ಅಭಿಪ್ರಾಯ ಅಷ್ಟೇ ಅಲ್ಲ, ರಿಪಬ್ಲಿಕ್ ಟಿವಿ ಕೂಡ ಇದನ್ನೇ ಹೇಳ್ತಿದೆ ನೋಡಿ.

ರಿಪಬ್ಲಿಕ್ ಇಷ್ಟು ಸತ್ಯ ಮಾತ್ರ ಹೇಳಿದೆ, ಆದರೆ ಅದಕ್ಕೂ ಮಿಗಿಲಾದ ಪಾಕಿಸ್ತಾನದ ಕಾಂಗ್ರೆಸ್ ಮೇಲಿನ ಪ್ರೇಮವನ್ನ ನಾನು ಬಿಚ್ಚಿಡ್ತಿದೀನಿ ನೋಡಿ. ಈ ಹಿಂದೆ ಗುಜರಾತ್ ಚುನಾವಣೆಗೂ ಮುನ್ನ ಹಲವು ಬಾರಿ ಪಾಕಿಸ್ತಾನ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು,‌ ಮೋದಿಯನ್ನ ಸೋಲಿಸಬೇಕು ಅಂತ ಹೇಳಿದ್ದರ ಕುರಿತು ಇಲ್ಲಿದೆ ನೋಡಿ ಮಾಹಿತಿ

ಪ್ರಧಾನಿ ಮೋದಿಯನ್ನ ಹೇಗಾದರೂ ಮಾಡಿ ಅಧಿಕಾರದಿಂದಿಳಿಸಿ ತಾವು ಮತ್ತೆ ಅಧಿಕಾರಕ್ಕೆ ಬರಬೇಕಂತ ಕಾಂಗ್ರೆಸ್ ಸರ್ವಪ್ರಯತ್ನವನ್ನೂ ಮಾಡುತ್ತಿದೆ..

ಪಾಕಿಸ್ತಾನದ ಪತ್ರಕರ್ತನೊಬ್ಬ ಕಾಂಗ್ರೆಸ್ಸಿಗೆ ಪಾಕಿಸ್ತಾನ ಬೆಂಬಲ ನೀಡಲಿದೆ ಎನ್ನುವ ಸ್ಪೋಟಕ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದ.

ಆತ ಹೇಳ್ತಾನೆ “ಮೋದಿಯನ್ನ ಅಧಿಕಾರದಿಂದ ಇಳಿಸಬೇಕಾದರೆ ನಾವು(ಪಾಕಿಸ್ತಾನ) ಭಾರತದ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕು” ಅಂತ.

ಆತನ್ಯಾರು ಗೊತ್ತೆ?

ಆತನ ಹೆಸರು ಮುಬಾಶೇರ್ ಲುಕಮಾನ್ ಅಂತ. ಈತ ಪಾಕಿಸ್ತಾನದ ದೊಡ್ಡ ಪತ್ರಕರ್ತರಲ್ಲೊಬ್ಬ. ಈತನಿಗೆ ಭಾರತದ ಬಗ್ಗೆ ಮೋದಿ ಬಗ್ಗೆ ಅದೆಷ್ಟು ದ್ವೇಷ ಇದೆಯೆಂದರೆ ಈತ ಮುಂದುವರೆದು ಹೇಳ್ತಾನೆ

“ಮೋದಿ ಎಷ್ಟು ಡೇಂಜರಸ್ ಇದಾರೆ ಅಂತ ನಾವಂದುಕೊಂಡಿದ್ದೇವೋ ಅದಕ್ಕಿಂತ ನೂರು ಪಟ್ಟು ಮೋದಿ ಡೇಂಜರಸ್ ವ್ಯಕ್ತಿಯಿದಾನೆ, ಮೋದಿ ತನ್ನ ನಿಜವಾದ ಮುಖವನ್ನ ಇನ್ನೂ ನಮಗೆ ತೋರಿಸಿಲ್ಲ. ಒಂದು ವೇಳೆ ಆತ ಇಂಡಿಯಾದಲ್ಲಿ 2019 ರ ಚುನಾವಣೆಯೇನಾದರೂ ಗೆದ್ದರೆ ನಮಗೆ ಮಾಡಲು ಕೆಲಸವೇ ಇಲ್ಲದಂಗೆ ಮಾಡಿಬಿಡ್ತಾನೆ”

ಇಷ್ಟೇ ಹೇಳಿದ್ದರೆ ಅಚ್ಚರಿಪಡಬೇಕಾಗಿರಲಿಲ್ಲ ಆದರೆ ಮುಂದುವರೆದು ಆತ ಹೇಳ್ತಾನೆ

“2019 ರಲ್ಲಿ ಮೋದಿ ಇಂಡಿಯಾದಲ್ಲಿ ಸೋಲು ಕಾಣಬೇಕು, ಆತ ಸೋತರೆ ಪಾಕಿಸ್ತಾನಕ್ಕೆ ಅದೊಂದು ದೊಡ್ಡ ಜಯವಾಗುತ್ತೆ ಹಾಗು ಪಾಕಿಸ್ತಾನ ಮತ್ತೆ ಬಲಿಷ್ಟವಾಗಬಹುದು. ಒಂದು ವೇಳೆ ಮೋದಿ ಮತ್ತೆ ಗೆದ್ದುಬಿಟ್ಟರೆ ಜಗತ್ತಿನ ಜನ ಪಾಕಿಸ್ತಾನವೆಂಬ ಒಂದು ರಾಷ್ಟ್ರವೂ ಇದೆ ಅನ್ನೋದನ್ನೂ ಮರೆತುಬಿಡ್ತಾರೆ”

ಮುಬಾಶೇರ್ ಹೇಳುವ ಪ್ರಕಾರ “2019 ರಲ್ಲಿ ಮೋದಿಯನ್ನ ಸೋಲಿಸೋಕೆ ನಾವು(ಪಾಕಿಸ್ತಾನ) ಯಾವೆಲ್ಲಾ ಪ್ರಯತ್ನ ಮಾಡಬೇಕೋ ಆ ಅಸ್ತ್ರಗಳನ್ನೆಲ್ಲಾ ಪ್ರಯೋಗ ಮಾಡಿಬಿಡಬೇಕು. ಭಾರತದಲ್ಲಿ ಯಾರ್ ಯಾರು ಮೋದಿ ವಿರುದ್ಧ ಧ್ವನಿಯೆತ್ತಿದ್ದಾರೋ ಅವರೆಲ್ಲರಿಗೂ ನಾವು ಬೆಂಬಲ ನೀಡಿ ಮೋದಿಯನ್ನ ಸೋಲಿಸಬೇಕು”

ಇದನ್ನ ಆಧಾರರಹಿತವಾಗಿ ನಾವು ಹೇಳ್ತಿಲ್ಲ, ಈ ವಿಷ್ಯವನ್ನ ಸ್ವತಃ ಮುಬಾಶೇರ್ ಟ್ವೀಟ್ ಮಾಡಿದ್ದ.

ಬರೀ ಮುಬಾಶೇರ್ ಮಾತ್ರ ಹೀಗೆ ಹೇಳಿಲ್ಲ, ಇದಕ್ಕೂ ಮುನ್ನ ಪಾಕಿಸ್ತಾನದ ಹಿಂದಿನ ಸೇನಾ ಅಧಿಕಾರಿಯಾಗಿದ್ದ ತಾರೀಕ್ ಪೀರಜಾದಾ ಅಂತೂ ಓಪನ್ನಾಗಿ “ಮೋದಿಯನ್ನ ನಾವು ತಡೆಯಬೇಕಾದರೆ ಭಾರತದಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರೀವಾಲರಂಥವರನ್ನ ಬೆಂಬಲಿಸಬೇಕು. ಇದರ ಜೊತೆ ಜೊತೆಗೆ ಹಿಂದುಗಳ ಮಧ್ಯೆ ಜಾತಿ ಸಂಘರ್ಷ ಮಾಡಿಸಿ ದಂಗೆಯೆಬ್ಬಿಸಬೇಕು” ಅಂತಂದಿದ್ದ.

ಪಾಕಿಸ್ತಾನ ಸೇನೆಯ ಮಾಜಿ ರಾಷ್ಟ್ರಪತಿಯಾಗಿದ್ದ ಪರ್ವೇಜ್ ಮುಷರಫ್ ಹೇಳ್ತಾನೆ “ಪಾಕಿಸ್ತಾನ ವಿಶ್ವದಲ್ಲಿ ಕಳೆದುಕೊಂಡಿರುವ ತನ್ನ ಮಾನ ಮರ್ಯಾದೆ ಮತ್ತೆ ವಾಪಸ್ ಪಡೆಯಬೇಕಾದರೆ ನಾವು ಮೋದಿಯನ್ನ ಮೊದಲು ಇಂಡಿಯಾದಲ್ಲಿ ಸೋಲಿಸಬೇಕು”

ಈ ಹೇಳಿಕೆಗಳನ್ನೆಲ್ಲಾ ನೋಡದ್ರೆ ಒಂದು ವಿಷಯವಂತೂ ಸ್ಪಷ್ಟವಿದೆ ಪಾಕಿಸ್ತಾನ, ಅಲ್ಲಿನ ಪತ್ರಕರ್ತರು, ಅಲ್ಲಿನ ಸೇನೆ, ಅಲ್ಲಿನ ಬುದ್ಧಿಜೀವಿಗಳು ಇಂಡಿಯಾದಲ್ಲಿ ಮೋದಿಯನ್ನ ಸೋಲಿಸಿ ಮತ್ತೆ ಕಾಂಗ್ರೆಸ್ಸನ್ನ ಅಧಿಕಾರಕ್ಕೆ ವಾಪಸ್ ತರಲು ರಣಹದ್ದುಗಳಂತೆ ಕಾದು ಕುಳಿತಿದ್ದಾರೆ.

ಕಾರಣವಿಷ್ಟೇ, ಕಾಂಗ್ರೆಸ್ ಭಾರತದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಭಾರತದ ಸರ್ವನಾಶದ ಕನಸು ಸಲೀಸಾಗುತ್ತೆ ಅನ್ನೋದು ಅವರ ಲೆಕ್ಕಾಚಾರ.

ಪಾಕಿಸ್ತಾನದಲ್ಲಿ ಯಾವ ರೀತಿಯಾಗಿ ಮೋದಿಯನ್ನ ಸೋಲಿಸೋಕೆ ಪ್ಲ್ಯಾನ್ ಮಾಡಿಕೊಂಡು ಕೂತಿದ್ದಾರೋ ಅದೇ ರೀತಿಯಲ್ಲಿ ಭಾರತದಲ್ಲೂ ಮೋದಿ ವಿರೋಧಿಗಳು ಪ್ಲ್ಯಾನ್ ಮಾಡಿಕೊಂಡು ಮೋದಿಯನ್ನ ಶತಾಯಗತಾತವಾಗಿ ಸೋಲಿಸೋಕೆ ದೇಶದ್ರೋಹಿ ರಣತಂತ್ರ ರೂಪಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಇದೇ ಕಾರ್ಯತಂತ್ರದ ಮುಂದುವರೆದ ಭಾಗ ಈಗ ಪಾಕಿಸ್ತಾನ ಟಿಪ್ಪು ಬಗ್ಗೆ ಮಾಡಿರೋ ಟ್ವೀಟ್ ಗಳು.

ಈಗ ನೀವೇ ಹೇಳಿ ನೀವು ಭಾರತದ, ಕರುನಾಡಿನ ಬೆಂಬಲಕ್ಕೆ ನಿಲ್ತೀರೋ ಅಥವ ಪಾಕಿಸ್ತಾನಿ ಬೆಂಬಲಿತ ಕಾಂಗ್ರೆಸ್ಸಿನ ಬೆಂಬಲಕ್ಕೆ ನಿಲ್ತೀರೋ?

– Vinod Hindu Nationalist

Nationalist Views ©2018 Copyrights Reserved

  •  
    2.9K
    Shares
  • 2.9K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com