Connect with us
Loading...
Loading...

ಪ್ರಚಲಿತ

PFIನ್ನು ಬ್ಯಾನ್ ಮಾಡಲು ನರೇಂದ್ರ ಮೋದಿಯವರು ತಯಾರು. ಶೀಘ್ರದಲ್ಲೇ PFI ಬ್ಯಾನ್ ಆಗಲಿದೆಯಾ?

Published

on

 • 13
 •  
 •  
 •  
 •  
 •  
 •  
 •  
  13
  Shares

ಹೌದು!! ಪಿಎಫ್ಐನ್ನು ನಿಷೇಧಿಸುವ ಕುರಿತಂತೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. NIA ತನಿಖೆಯಿಂದ ಸರಣಿ ಹಿಂದುಗಳ ಹತ್ಯೆಗೆ ಕಾರಣ ಪಿಎಫ್ಐ ಎಂಬುದು ಗೊತ್ತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಪಿಎಫ್ಐನ್ನು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ.


ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ಕೆಲವು ಪಿಎಫ್ಐ ಸದಸ್ಯರನ್ನು NIA ಬಂಧಿಸಿ ತನಿಖೆ ನಡೆಸಿದಾಗ, ಎಲ್ಲಾ ವಿಚಾರಗಳು ಬೆಳಕಿಗೆ ಬಂದಿವೆ. NIA ತನಿಖೆ ಮಾಡಿ ವರದಿಯನ್ನು ಗೃಹ ಸಚಿವಾಲಯಕ್ಕೆ ಕಳಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ಐನ್ನು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ ನ ವರದಿಯ ಪ್ರಕಾರ ಶೀಘ್ರದಲ್ಲೇ ಪಿಎಫ್ಐ ನಿಷೇಧವಾಗಬಹುದು.

ಪಿಎಫ್ ಐ!! ಈ ಹೆಸರು ಕೇಳದರೆ ಸಾಕು ಹಿಂದುಗಳ ರಕ್ತ ಕುದಿಯಲಾರಂಭಿಸುತ್ತದೆ. ಈ ಹೆಸರನ್ನು ಹಿಂದುಗಳ ರಕ್ತ ಏಕೆ ಕುದಿಯುತ್ತದೆ ಗೊತ್ತಾ? ಇಲ್ಲಿಯವರೆಗೂ ಕೇರಳ ಮತ್ತು ಕರ್ನಾಟಕದಲ್ಲಿ ಆದ ಸರಣಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವೇ ಈ ಪಿಎಫ್ ಐ ಉಗ್ರ ಸಂಘಟನೆ. ಹಿಂದುಗಳ ರಕ್ತ ಸುಖಾ ಸುಮ್ಮನೆ ಕುದಿಯಲ್ಲ. ಯಾಕಂದ್ರೆ ಹಿಂದು ಶಾಂತಿಪ್ರಿಯ, ಹಸನ್ಮುಖಿ, ಪಕ್ಕಾ ಜಾತ್ಯಾತೀತ. ಹಿಂದುಗಳಿಗೆ ಜಾತ್ಯಾತೀತದ ಪಾಠವನ್ನು ಹೇಳಿಕೊಡುವವರಿಗೆ ಮುಠ್ಠಾಳರು ಅನ್ಬಹುದು. ಯಾಕಂದ್ರೆ ಹಿಂದುವಿನಷ್ಟು ಜಾತ್ಯಾತೀತ ಮತ್ತೊಬ್ಬನಿಲ್ಲ.

ಹಿಂದೂ ಜಾತ್ಯಾತೀತನಾಗಿರುವುದಕ್ಕಾಗಿಯೇ ಈ ದೇಶದಲ್ಲಿ ಎಲ್ಲಾ ಧರ್ಮದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರ ಅನೇಕ ಅನ್ಯ ಧರ್ಮೀಯರ ದಾಳಿಗಳು ಹಿಂದುಗಳ ಮೇಲೆ ಆಗಿವೆ. ಆದರೆ ಹಿಂದುಗಳು ಅದನ್ನೆಲ್ಲಾ ಮರೆತು ಕೋಮು ಸಾಮರಸ್ಯದಿಂದ ಬದುಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ಪ್ರಯತ್ನಕ್ಕೆ ಕೆಲ ಅನ್ಯ ಧರ್ಮೀಯ ಮೂಲಭೂತವಾದಿಗಳು ಮಣ್ಣೆರೆಚುತ್ತಿದ್ದಾರೆ. ಆ ಕೆಲ ಮೂಲಭೂತವಾದಿಗಳಿಗೆ ಕೋಮು ಸಾಮರಸ್ಯ ಬೇಕಾಗಿಯೇ ಇಲ್ಲ. ಹೀಗಾಗಿಯೇ ಪಿಎಫ್ ಐ ನಂತಹ ಉಗ್ರ ಸಂಘಟನೆ ಕೋಮು ಸಾಮರಸ್ಯ ಕದಡಲು ಸರಣಿ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದೆ. ಇವರ ಬೆಂಬಲಕ್ಕೆ ನಾಚಿಕೆಗೆಟ್ಟ ರಾಜಕಾರಣಿಗಳು ನಿಂತಿದ್ದಾರೆ. ಈ ರಾಜಕಾರಣಿಗಳಿಗೆ ಈ ವಿಷಯ ರಾಜಕೀಯ ದಾಳವಾಗಿದೆ.

ತಮಗೆ ಓಟು ಬರುತ್ತವೆ ಅಂತ ಗೊತ್ತಾದರೆ ಇವರು ಬೂಟು ನೆಕ್ಕಲು ತಯಾರಾಗ್ತಾರೆ. ಬೂಟು ನೆಕ್ಕೊಂಡು ಸಾಯಲಿ ಬೇಡ ಅನ್ನಲ್ಲ. ಆದರೆ ಉಗ್ರರಿಗೆ ಬೆಂಬಲ ಕೊಡುವುದು ಎಷ್ಟು ಸರಿ? ರಾಜಕೀಯ ಪುಢಾರಿ ಲೆಕ್ಕಾಚಾರ ಬೇರೆ ರೀತಿಯದ್ದೇ ಆಗಿರುತ್ತದೆ. ಏನದು ಲೆಕ್ಕಾಚಾರ ಗೊತ್ತಾ? ನಾವೇನಾದರೂ ಪಿಎಫ್ ಐನಂತಹ ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಿದರೆ ಮುಸಲ್ಮಾನರ ಓಟುಗಳು ಕಳೆದುಕೊಳ್ಳುತ್ತೇವೆ ಎಂಬ ಭಯ. ಇವರ ಭಯಕ್ಕೆ ನನ್ನ ಎಕ್ಕಡ. ಉಗ್ರ ಸಂಘಟನೆಯನ್ನು ಬ್ಯಾನ್ ಮಾಡಿದರೆ ಮುಸಲ್ಮಾನರೇಕೆ ಕೋಪ ಮಾಡಿಕೊಳ್ತಾರೆ? ರಾಜಕೀಯ ಪುಢಾರಿಗಳೇ ಮುಸಲ್ಮಾನರು ಕೋಪಿಸಿಕೊಳ್ಳಲ್ಲ‌. ಯಾಕಂದ್ರೆ ಅವರಿಗೂ ಗಲಭೆ, ಗಲಾಟೆ ಬೇಕಾಗಿಲ್ಲ.

ಕೆಲ ಮುಲಭೂತವಾದಿಗಳು ಮಾಡುವ ತಪ್ಪಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ರಾಜಕೀಯ ಪುಢಾರಿಗಳೇ ಬೆಂಬಲಕ್ಕೆ ನಿಂತು ಪ್ರಚೋದನೆ ಮಾಡ್ತಿರೋದು. ಗಲಭೆಯಾದಾಗಲೇ ಗಲಭೆ ಮಾಡಿದವರನ್ನು ಬಂಧಿಸಿ ಬುದ್ಧಿ ಹೇಳಿದ್ದರೆ ಅಥವಾ ಶಿಕ್ಷಿಸಿದ್ದರೆ ಕೋಮು ಸಾಮರಸ್ಯ ಕದಡುತ್ತಿರಲಿಲ್ಲ. ಆದರೆ ರಾಜಕೀಯ ಪುಢಾರಿಗಳಿಗೆ ಕೋಮು ಸಾಮರಸ್ಯ, ಮಣ್ಣು-ಮಸಿ ಏನೂ ಬೇಕಾಗಿಲ್ಲ. ಕೋಮು ಸಾಮರಸ್ಯದಿಂದ ಎಲ್ಲರೂ ಚೆನ್ನಾಗಿದ್ದರೆ ನಮಗೆ ಓಟು ಸಿಗಿವುದಿಲ್ಲವೆಂದು ಲೆಕ್ಕಚಾರ ಹಾಕುವ ರಾಜಕೀಯ ಪುಢಾರಿಗಳು, ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಾರೆ.

ಅಷ್ಟಕ್ಕೂ ಪಿಎಫ್ ಐ ಎಂಬ ಉಗ್ರ ಸಂಘಟನೆ ಇಲ್ಲಿಯವರೆಗೂ ಎಷ್ಟು ಹಿಂದೂ ಕಾರ್ಯಕರ್ತರನ್ನು ಕೊಂದಿದೆ ಅಂತ ಗೊತ್ತಿದೆಯಾ?

ವಿಶ್ವನಾಥ್ 19/02/2015 – ಶಿವಮೊಗ್ಗ

ಪ್ರಶಾಂತ್ ಪೂಜಾರಿ 19/10/2015 – ಮೂಡಬಿದರಿ

ಕುಟ್ಟಪ್ಪ 10/11/2015 – ಕೊಡಗು

ರಾಜು ಮೈಸೂರ್ 13/03/2016 – ಮೈಸೂರು

ರುದ್ರೇಶ 16/10/2016 – ಬೆಂಗಳೂರು

ಕಾರ್ತಿಕ್ ರಾಜ್ 26/10/2016 – ಮಂಗಳೂರು

ಮಾಗಲಳಿ ರವಿ 05/11/2016 – ಮೈಸೂರು

ರಾಜು ಕನ್ನಡಬಾಣೆ 11/11/2015

ಯೋಗೇಶ್ ಗೌಡರ್ 16/06/2017 – ಧಾರವಾಡ

ಕಿತಗನಹಳ್ಳಿ ವಾಸು 14/03/2017

ಹರೀಶ್ ಬಂಟವಾಳ 13/11/2017

ಶ್ರೀನಿವಾಸ್ ಪ್ರಸಾದ್ 03/12/2017 – ಬೆಂಗಳೂರು

ಪರೇಶ್ ಮೇಸ್ತ – ಹೊನ್ನಾವರ

ದೀಪಕ್ ರಾವ್ – ಮಂಗಳೂರು

ಮೇಲೆ ಪಟ್ಟಿ ಮಾಡಿದ್ದು 2015 ರಿಂದ ಇಲ್ಲಿಯವರೆಗೆ ಆದ ಹಿಂದೂ ಕಾರ್ಯಕರ್ತರ ಹತ್ಯೆಗಳು. 2013 ರಿಂದ ಇಲ್ಲಿಯವರೆಗೂ ಸುಮಾರು 22 ಜನ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ಸರಣಿ ಕೊಲೆಗಳ ಹಿಂದೆ ಹಲವಾರು ಪ್ರಕರಣಗಳಲ್ಲಿ ಇರುವ ಕೈವಾಡ ಪಿಎಫ್ಐ ಉಗ್ರ ಸಂಘಟನೆಯದ್ದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಈ ಉಗ್ರ ಸಂಘಟನೆಯನ್ನು ಬ್ಯಾನ್ ಮಾಡಲು ರಾಜಕೀಯ ಪುಢಾರಿಗಳು ಹಿಂದೇಟು ಹಾಕ್ತಿದ್ದಾರೆ.

ಇತ್ತೀಚೆಗೆ ಉತ್ತರ ಕರ್ನಾಟಕದ ಗದುಗಿನಲ್ಲೂ ಇದೇ ರೀತಿಯ ಘಟನೆಯಾಗಿತ್ತು. ಗದಗ ನಗರದ ಟಾಂಗಾ ಕೂಟನಲ್ಲಿ ಕೆಲ ಮುಸ್ಲಿಮ್ ಗೂಂಡಾಗಳು ತಮ್ಮ ಅಟ್ಟಹಾಸವನ್ನು ಮೆರೆದಿದ್ದರು. ಅಷ್ಟಕ್ಕೂ ಆ ಗೂಂಡಾಗಳು ಮಾಡಿದ್ದೇನು ಗೊತ್ತಾ? ತಮ್ಮ ಅಟ್ಟಹಾಸವನ್ನು ಯಾರ ಮೇಲೆ ಪ್ರದರ್ಶಿಸಿದ್ದಾರೆ ಗೊತ್ತಾ? ಗದಗ ನಗರದ ಟಾಂಗಾ ಕೂಟನಲ್ಲಿ ಅಟ್ಟಹಾಸ ಮೆರೆಯಲು ಈ ಗೂಂಡಾಗಳಿಗೆ ಒಂದು ನೆಪ ಬೇಕಿತ್ತು. ಆ ನೆಪಕ್ಕಾಗಿ ಅವರು ಪಾರ್ಕಿಂಗ್ ಪ್ಲ್ಯಾನ್ ಮಾಡಿದರು. ಅದೇ ಪಾರ್ಕಿಂಗ್ ನೆಪ ಮಾಡಿ ಗಲಭೆ ಎಬ್ಬಿಸಿದರು. ಆ ಗಲಭೆಯಲ್ಲಿ ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ನುಗ್ಗಿ ತಮ್ಮ ಮನಬಂದಂತೆ ಅಟ್ಟಹಾಸ ಮೆರೆದು ಬಿಟ್ಟರು. ಹಿಂದೂ ವ್ಯಾಪಾರಸ್ಥರ ಅಂಗಡಿಗೆ ನುಗ್ಗಿದ ಈ ಗೂಂಡಾಗಳು ಅಲ್ಲಿನ ವ್ಯಾಪಾರಸ್ಥರ ಮೈಮೇಲಿನ ಬಂಗಾರದ ಸರ, ಅವರಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಲೂಟಿ ಮಾಡಿದ್ದಲ್ಲದೇ ವ್ಯಾಪಾರಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದರು.

ಈ ಘಟನೆಗಳು ಕೆಲವೇ ಕಲವು ಉದಾಹರಣೆಗಳು. ಇಂತಹ ಸಹಸ್ರಾರು ಗಲಭೆಗಳು ಪಿಎಫ್ಐನಿಂದ ಆಗಿವೆ. ಇವೆಲ್ಲವುಗಳು ಕಣ್ಣಿಗೆ ಕಾಣುತ್ತಿರುವ ಘಟನೆಗಳು. ಆದರೂ ಸರ್ಕಾರ ಮೌನವಹಿಸಿರೋದು ನೋಡಿದರೆ, ಹಿಂದುಗಳಿಗೆ ಉಳಿಗಾಲವಿಲ್ಲದಂತೆ ಮಾಡುತ್ತಿದ್ದಾರೆ ಎಂದು ಗೊತ್ತಾಗ್ತಿದೆ.

ಕಾಂಗ್ರೆಸ್ ಉಸ್ತುವಾರಿ ಸಚಿವರು ಇತ್ತೀಚೆಗೆ ವಿಜಯಪುರದಲ್ಲಿ ಗಂಟಾಘೋಷವಾಗಿ ರಾಜ್ಯದಲ್ಲಿ PFI ನಿಷೇಧಿಸುವ ಪ್ರಶ್ನೆಯೇ ಇಲ್ಲವೆಂದು ಹೇಳುತ್ತಾರೆ. ಅಂದ್ರೆ ಇವರಿಗೆ ದೇಶದ ಭದ್ರತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.

ಪಿಎಫ್ಐನ್ನು ನಿಷೇಧಿಸುವ ಕುರಿತಂತೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. NIA ತನಿಖೆಯಿಂದ ಸರಣಿ ಹಿಂದುಗಳ ಹತ್ಯೆಗೆ ಕಾರಣ ಪಿಎಫ್ಐ ಎಂಬುದು ಗೊತ್ತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಪಿಎಫ್ಐನ್ನು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ಕೆಲವು ಪಿಎಫ್ಐ ಸದಸ್ಯರನ್ನು NIA ಬಂಧಿಸಿ ತನಿಖೆ ನಡೆಸಿದಾಗ, ಎಲ್ಲಾ ವಿಚಾರಗಳು ಬೆಳಕಿಗೆ ಬಂದಿವೆ. NIA ತನಿಖೆ ಮಾಡಿ ವರದಿಯನ್ನು ಗೃಹ ಸಚಿವಾಲಯಕ್ಕೆ ಕಳಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ಐನ್ನು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ ನ ವರದಿಯ ಪ್ರಕಾರ ಶೀಘ್ರದಲ್ಲೇ ಪಿಎಫ್ಐ ನಿಷೇಧವಾಗಬಹುದು.

ಏನಾದರೂ ಇರಲಿ, ಒಟ್ಟಿನಲ್ಲಿ ಪಿಎಫ್ಐನ್ನು ನಿಷೇಧಿಸಿ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ತಡೆದರೆ ಸಾಕು. ಮೋದಿಯವರು ಆದಷ್ಟು ಬೇಗ ಪಿಎಫ್ಐನ್ನು ನಿಷೇಧಿಸಲಿ ಎಂಬುದೆ ನಮ್ಮ ಆಶಯ.

– Nationalist Mahi

 •  
  13
  Shares
 • 13
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com