Connect with us
Loading...
Loading...

ಅಂಕಣ

ಆಡಳಿತ ನಡೆಸಿದ್ದು ಕೇವಲ ಮೂರುವರೆ ವರ್ಷ, ಆದರೆ ಸಾಧನೆ ಮಾತ್ರ…ಅಬ್ಬಾ!!

Published

on

 • 2.9K
 •  
 •  
 •  
 •  
 •  
 •  
 •  
  2.9K
  Shares

1) ಪಾಕಿಸ್ತಾನದ ಚಳಿ ಬಿಡಿಸಿದ ಸರ್ಜಿಕಲ್ ಸ್ಟ್ರೈಕ್!

ಅದು ಮಧ್ಯರಾತ್ರಿ 12 ಗಂಟೆ 30 ನಿಮಿಷ. ದೇಶದ ಮುಖ್ಯಸ್ಥರ ಅನುಮತಿ ಪಡೆದ ಭಾರತೀಯ ಸೇನೆಯ ವೀರ ಯೋಧರು ಸಮರ ಸನ್ನದ್ಧರಾಗಿದ್ದರು. ಭಾರತದ ವಿಶೇಷ ಪಡೆಯ ಕಮಾಂಡೋಗಳನ್ನು ಯುದ್ಧ ಹೆಲಿಕಾಪ್ಟರ್‌ಗಳು ಗಡಿ ನಿಯಂತ್ರಣ ರೇಖೆಯ ಬಳಿ ಇಳಿಸಿದ್ದವು. ಎಲ್‌ಒಸಿಯಲ್ಲಿ ಭೂ ಸ್ಪರ್ಶ ಮಾಡಿದ್ದ ವಿಶೇಷ ಪಡೆ ಅಲ್ಲಿಂದ ನೇರವಾಗಿ ಸಾಗಿದ್ದು 2 ರಿಂದ 3 ಕಿಲೋ ಮೀಟರ್‌ ಶತ್ರು ರಾಷ್ಟ್ರದೊಳಗೆ ನುಗ್ಗಿ 38 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.

ಇದರಲ್ಲಿ ಮೋದಿಯವರ ಸಾಧನೆ ಏನು ಗೊತ್ತೆ? ದೃಢ ನಿರ್ಧಾರ ಮತ್ತು ಸೈನಿಕರಿಗೆ ಕೊಟ್ಟ ಸ್ವಾತಂತ್ರ್ಯದಿಂದ ಪಾಕಿಸ್ತಾನ ಪತುರುಗುಟ್ಟಿತು.

ಜಗತ್ತಿನ ಸರಿಸುಮಾರು 48 ಮುಸ್ಲಿಂ ರಾಷ್ಟ್ರಗಳಲ್ಲಿ ಯಾವೊಂದು ದೇಶವೂ ಪಾಕಿಸ್ತಾನದ ಪರವಹಿಸದಂತೆ ಮಾಡಿ ಮೋದಿ ತಮ್ಮ ರಾಜತಾಂತ್ರಿಕ ಚಾಣಾಕ್ಷತೆಯನ್ನು ಮೆರೆದರು.

ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಅದರ ಮಾಹಿತಿಯನ್ನು 22 ಪ್ರಬಲ ರಾಷ್ಟ್ರಗಳಿಗೆ ರವಾನಿಸುವ ಮೂಲಕ ಅವರಿಂದ ಬೆಂಬಲ ಸಿಗುವಂತೆ ನೋಡಿಕೊಂಡರು.

ಅಮೆರಿಕ, ಜರ್ಮನಿ, ಜಪಾನ್, ಫ್ರಾನ್ಸ್, ಇಂಗ್ಲೆಂಡ್, ರಷ್ಯಾ, ಇಸ್ರೇಲ್ ಇದರ ಜೊತೆಗೆ ಸಾರ್ಕ್ನ ಸದಸ್ಯ ರಾಷ್ಟ್ರಗಳು ಭಾರತಕ್ಕೆ ಅನಿರೀಕ್ಷಿತವೆಂಬಂತೆ ಅಭೂತಪೂರ್ವ ಬೆಂಬಲ ಕೊಟ್ಟಿತು.

ವಿಶ್ವಸಂಸ್ಥೆ,ಯುಕೆ,ಯುಎಸ್ ಎ ಮತ್ತು ಭಾರತದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು ಪ್ರಕ್ರಿಯೆಗಳು ಚುರುಕುಗೊಂಡವು.

ವಿಶ್ವಸಮುದಾಯ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡವು.

ಒಂದುಕಾಲದಲ್ಲಿ ಪಾಕಿಸ್ತಾನದ್ದೇ ಭಾಗವಾಗಿದ್ದ ಬಾಂಗ್ಲಾದೇಶ ಭಾರತದ ಪರ ಪಾಕಿಸ್ತಾನದ ವಿರುದ್ಧ ತೊಡೆತಟ್ಪಿ ನಿಂತಿತು. ಅಫ್ಘಾನಿಸ್ಥಾನ ಭಾರತದ ದಾರಿಯನ್ನು ಕೊಂಡಾಡಿತು. ಇನ್ನೂ ಪಾಕಿಸ್ತಾನದಲ್ಲಿರುವ ಪಿಒಕೆ, ಬಲೂಚಿ ಜನರು ತಮ್ಮ ಸ್ಥಾಪಿತ ಸರಕಾರದ ಧೋರಣೆಯ ವಿರುದ್ಧ ಬೀದಿಗಿಳಿದರು.

2) ಕಾಳಧನಿಕರ ನಿದ್ದೆಗೆಡಿಸಿದ ನೋಟ್ ಬ್ಯಾನ್!

ಇದನ್ನೂ ಒಂದು ರೀತಿಯ ಸರ್ಜಿಕಲ್ ಸ್ಟ್ರೈಕ್ ಅಂತಲೇ ಕರೆಯಬಹದು. ಈ ಸರ್ಜಿಕಲ್ ಸ್ಟ್ರೈಕ್ ಕಾಳಧನಿಕರ ಮೇಲೆ ನಡೆದಿತ್ತು. ಅಕ್ರಮವಾಗಿ ಗಳಿಸಿ ಕಪ್ಪು ಹಣ ಗಳಿಸಿದವರನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಲಾಗಿತ್ತು.

3) ಅನಾಗರಿಕ ಪದ್ಧತಿಯಾದ ತಲಾಖ್ ನಿಷೇಧ!

ಸಹಸ್ರಾರು ವರ್ಷಗಳಿಂದ ಮುಸ್ಲಿಂ ಮಹಿಳೆಯರು ಬೇಸತ್ತಿದ್ದ ಅನಿಷ್ಠ ಪದ್ದತಿಯೊಂದಕ್ಕೆ ಮೋದಿಯವರು ಮುಕ್ತಾಯ ಹಾಡಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದರು. ಇದು ಐತಿಹಾಸಿಕ ನಿರ್ಣಾಯವೇ ಆಗಿತ್ತು.

4) ಹಜ್ ಸಬ್ಸೀಡಿ ಬಂದ್!


ಕಳೆದ ವರ್ಷವೇ ಹಜ್ ಸಬ್ಸೀಡಿ ಬಂದ್ ಮಾಡೋದರ ಬಗ್ಗೆ ಮಾತನಾಡಲಾಗಿತ್ತು. ಈ ವರ್ಷ ಅದು ಕೂಡಾ ಜಾರಿಗೆ ಬಂತು. ಇದು ಕೂಡಾ ಮೋದಿ ಸರ್ಕಾರದ ದೃಢ ನಿರ್ಧಾರ. ರದ್ದಾದ ಸಬ್ಸೀಡಿ ಹಣವನ್ನು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿ ಹಜ್ ಸಬ್ಸೀಡಿಯನ್ನು ರದ್ದು ಮಾಡಿದರು.

5) ಸ್ವಚ್ಛ ಭಾರತದಿಂದ ಬುಲೆಟ್ ಟ್ರೈನ್ ವರೆಗೆ


ಮೋದಿಯವರ ಕನಸಿನ ಕೂಸು ಸ್ವಚ್ಛ ಭಾರತ. ಮೋದಿಯವರು ಪ್ರಧಾನಿಯಾದ ಮೊದಲ ಭಾಷಣದಲ್ಲಿಯೇ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಭಾರತೀಯರೆದುರಿಗೆ ಇಟ್ಟರು. ಸ್ವತಃ ತಾವೇ ಪೊರಕೆ ಹಿಡಿದು ನಿಂತು ಸ್ವಚ್ಛ ಭಾರತ ಅಭಿಯಾನ ಶುರು ಮಾಡಿ, ದೇಶಾದ್ಯಂತ ಸಂಚಲನವನ್ನು ಮೂಡಿಸಿದರು.

 

6) ಚೀನಾದ ಸಾಮ್ರಾಜ್ಯಶಾಹಿ ಅಹಂಕಾರದ ಹೆಡೆಮುರಿ ಕಟ್ಟಿದ ಭಾರತ:

ಈಗ ಡೊಕ್ಲಮ್‍ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಾಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ, ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಸಮಸ್ಯೆ ನಿವಾರಣೆಗೆ ಮಾತುಕತೆಯ ಪರಿಹಾರ ಸಿಗಬೇಕಾದರೆ ಭಾರತ ಅಲ್ಲಿಂದ ಜಾಗ ಖಾಲಿಮಾಡಬೇಕೆಂಬ ಚೀನಾದ ಬೇಡಿಕೆ ಸೋತಿದೆ. ಪ್ರತಿಯೊಂದು ಸಂದರ್ಭದಲ್ಲಿ ಟಿಪಾಯಿ ಮೇಲೆ ಏನಿರಬೇಕೆಂದು ನಿರ್ಧರಿಸುವ ಚೀನಾದ ಷರತ್ತು ಈ ಬಾರಿ ಚಲಾವಣೆಯಾಗಿಲ್ಲ.

ಭಾರತ-ಚೀನಾ ಗಡಿಯ ಲಡಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ, “ಮ್ಯಾಕ್ ಮೋಹನ್” ಗಡಿ ಅಸ್ಪಷ್ಟ ಕಾಲ್ಪನಿಕ ರೇಖೆಯೆಂಬ ಕಾರಣನೀಡಿ ಆಗಾಗ ಸೇನೆಗಳ ನಡುವೆ ಸಣ್ಣ ಮಟ್ಟಿನ ಗಡಿದಾಟುವಿಕೆ ಸಹಜವೆಂಬಂತೆ ನಿರಂತರವಾಗಿ ನಡೆದಿತ್ತು. ಆದರೆ ಡೊಕ್ಲಮ್ ಬಿಕ್ಕಟ್ಟನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ. ಇದೊಂದು ವಿಶೇಷ ಸಂದರ್ಭ. ಇದು ಕೂಡಾ ರಾಜತಾಂತ್ರಿಕ ಸಾಧನೆ.

7) ಭಾರತದಲ್ಲಿ ಹಿಂದೂ ಎಂದು ಹೇಳಲು ನಾಚಿಕೆಪಡುತ್ತಿದ್ದ ಕಾಲವೊಂದಿತ್ತು:

ಆದರೆ ಮೋದಿ ಬಂದನಂತರ ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ, ಜಾಗೃತರಾಗುತ್ತಿದ್ದಾರೆ. ಹೀಗಾಗಿ ಮುಸಲ್ಮಾನರನ್ನು ಓಲೈಸುವವರು ಹಿಂದೂಗಳನ್ನು ಓಲೈಸಲು ದೇವಸ್ಥಾನಗಳಿಗೆ ಭೇಟಿನೀಡುತ್ತಿದ್ದಾರೆ. ಭಾರತದಲ್ಲಿ ಈಗ ಹಿಂದೂಗಳಿಗೆ ಬೆಲೆ ಸಿಗುತ್ತಿದೆ. ಇದು ಕೂಡಾ ಸಾಧನೆಯಲ್ಲದೇ ಮತ್ತಿನ್ನೇನು?

8) ಅಲ್ಪ ಸಂಖ್ಯಾತರ ಹಿಂದೆ ಓಡುತ್ತಿದ್ದವರು ಹಿಂದೂಗಳ ಕೈ ಕಾಲು ಹಿಡಿಯುವ ವರೆಗೆ:

ರಾಹುಲ್ ಗಾಂಧಿ ಶಿವಭಕ್ತರಾಗುತಿದ್ದರೆ, ಮಮತಾ ಬ್ಯಾನರ್ಜಿ ಭಗವದ್ಗೀತೆ ಓದುತ್ತಿದ್ದಾರೆ. ಅಖಿಲೇಶ್ ಯಾದವ್ ಕೃಷ್ಣನ ಭಕ್ತರಾಗುತ್ತಿದ್ದರೆ, ಕಮ್ಯುನಿಸ್ಟ್ ಸಿಪಿಐಎಂ ವಿವೇಕಾನಂದರ ಪಠಿಸುತ್ತಿದೆ.

ಸಿದ್ಧರಾಮಯ್ಯನವರು ತಮ್ಮನ್ನ ರಾಮ ಭಕ್ತನೆಂದು ಕರೆದುಕೊಳ್ಳುತ್ತಿದ್ದರೆ ಅತ್ತ ದೇವೇಗೌಡರು ಮಠ-ಮಂದಿರ ಸುತ್ತುತ್ತಾ ಯಜ್ಞ-ಯಾಗಾದಿಗಳನ್ನ ನೆರವೇರಿಸುತ್ತಿದ್ದಾರೆ

9) ಸಾಗರ ಮಾಲಾದಿಂದ ಉಡಾನ್ ವರೆಗೆ

10) ಜನ್ ಧನ್ ಇಂದ ಜನ್ ಸುರಕ್ಷತೆವರೆಗೆ

11) ಮೇಕ್ ಇನ್ ಇಂಡಿಯಾ ದಿಂದ ಡಿಜಿಟಲ್ ಇಂಡಿಯಾವರೆಗೆ

ಹೌದು ಇದೆಲ್ಲ ನರೇಂದ್ರ ಮೋದಿಯೆಂಬ ಮಹಾನಾಯಕ ಸೃಷ್ಟಿಸಿದ ಪವಾಡವಿದು.

ನಮ್ಮ ನರೇಂದ್ರ ಮೋದಿ. ದೇಶಕ್ಕಾಗಿ ಎಂತಹದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಹಿಂದೆ ಸರಿಯಲಾರದ ಶಕ್ತಿಶಾಲಿ ನಾಯಕ!

ಕಳೆದುಕೊಳ್ಳದಿರಿ ಅವರನ್ನು!
ಮಹಾನಾಯಕನ ನಿರ್ಧಾರಗಳನ್ನು ಬೆಂಬಲಿಸದಿದ್ದರೆ ಮುಂದಿನ ಜನಾಂಗ ನಮ್ಮನೆಂದೂ ಕ್ಷಮಿಸದು!!

ಆತ ಯಾರಿಗೂ ಹೆದರುವುದಿಲ್ಲ. ಯಾವ ನಿರ್ಧಾರಕ್ಕೂ ಹಿಂದೆ ಸರಿಯುವುದಿಲ್ಲ. ಆ ನಿರ್ಧಾರದಿಂದ ದೇಶಕ್ಕೆ ಒಳ್ಳೆಯದಾಗುತ್ತೆ ಎಂದರೆ ಎಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ-ಮುಂದೆ ಯೋಚಿಸುವುದಿಲ್ಲ. ಆತ ಮತ್ಯಾರು ಅಲ್ಲ. ಭವ್ಯ ಭಾರತದ ಕನಸು ಕಂಡಿರುವ, 2022ರ ವೇಳೆಗೆ ನವ ಭಾರತ ಕಟ್ಟುವ ಸಂಕಲ್ಪ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ನರೇಂದ್ರ ಮೋದಿ..

ಸಧ್ಯ ಭಾರತದ ರಾಯಭಾರಿಯಾಗಿ ನಿಂತಿರುವವರು ನರೇಂದ್ರ ಮೋದಿ. ಭಾರತಕ್ಕೆ ಸಿಕ್ಕಿರುವ ಅಪರೂಪದ ನಾಯಕ ಅವರು. ಭಾರತದ ಶಕ್ತಿಯನ್ನು ಮತ್ತೆ ವಿಶ್ವಕ್ಕೆ ತೋರಿಸಿಕೊಟ್ಟ ಪ್ರಧಾನಿ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಆದೇಶ ನೀಡಿ ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದು ಜಗತ್ತಿಗೆ ತೋರಿಸಿ ಕೊಟ್ಟ ಪ್ರಧಾನಿ ಅವರು. ಯೋಗದ ಮೂಲಕ ವಿಶ್ವವನ್ನು ಒಗ್ಗೂಡಿಸಿದ ಚಾಣಕ್ಯ ಅವರು..

ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟರ ಮೇಲೆ ಸಮರ ಸಾರುತ್ತಿರುವ ಪ್ರಾಮಾಣಿಕ ರಾಜಕಾರಣಿ ಮೋದಿಯವರು. ಕಪ್ಪು ಕುಳಗಳ ಮೇಲೆ ರಾತ್ರೋರಾತ್ರಿ ಲಗ್ಗೆ ಇಟ್ಟು ನೋಟ್ ಬ್ಯಾನ್ ಮಾಡಿದ ಧೀರ. ನೋಟ್ ಬ್ಯಾನ್ ನಿಂದ ಏನಾದರೂ ಹೆಚ್ಚು ಕಡಿಮೆಯಾಗಿ ಅಧಿಕಾರವನ್ನು ಕಳೆದುಕೊಳ್ಳಬಹುದು ಎಂಬ ಅರಿವಿದ್ದರೂ ಅಂತಹ ಸಾಹಸಕ್ಕೆ ಕೈ ಹಾಕಿದ ಪ್ರಧಾನಿ ನರೇಂದ್ರ ಮೋದಿ.

70 ವರ್ಷ ಮುಸ್ಲಿಮರನ್ನು ಕೇವಲ ಓಟ್ ಗಾಗಿಯಷ್ಟೇ ರಾಜಕಾರಣಿಗಳು ಬಳಸಿಕೊಂಡಿದ್ದರು. ಅವರ ಕಲ್ಯಾಣದ ಕುರಿತು ಎಂದಿಗೂ ಯೋಚಿಸಲಿಲ್ಲ. ಅವರನ್ನ ಓಲೈಸುವುದಷ್ಟೇ ರಾಜಕೀಯ ಎಂದುಕೊಂಡಿದ್ದರು. ಆದರೆ ನರೇಂದ್ರ ಮೋದಿ ಕೇವಲ ಮೂರು ವರ್ಷದಲ್ಲಿ ಎಲ್ಲವನ್ನೂ ಬದಲಾಯಿಸಿದ್ದಾರೆ. ಒಂದು ಇಡೀ ಸಮುದಾಯ ತನ್ನ ವಿರುದ್ಧ ನಿಲ್ಲ ಬಹುದೆಂಬ ಅರಿವಿದ್ದರೂ ಮುಸಲ್ಮಾನ್ ಮಹಿಳೆಯರ ಪರ ನಿಂತು ತಲಾಖ್ ರದ್ದು ಪಡಿಸಿದವರು ನರೇಂದ್ರ ಮೋದಿ. ಇದೀಗ ಹಜ್ ಸಬ್ಸಿಡಿಯನ್ನ ನಿಲ್ಲಿಸಿದ್ದೂ ಇದೇ ನರೇಂದ್ರ ಮೋದಿ.

ಒಂದು ರಾಷ್ಟ್ರ ವೆಂದರೆ ಅಲ್ಲಿ ಎಲ್ಲರೂ ಸಮಾನವಾಗಿರಬೇಕು. ಎಲ್ಲರಿಗೂ ಒಂದೇ ರೀತಿಯ ನಿಯಮಗಳಿರಬೇಕು. ರಾಷ್ಟ್ರದ ಎಲ್ಲರ ತೆರಿಗೆಯ ಹಣದಲ್ಲಿ ಒಂದು ಸಮುದಾಯದವರು ಯಾತ್ರೆ ಹೋಗುವುದು ಎಷ್ಟು ಸರಿ ಅಲ್ವಾ? ಹಜ್ ಯಾತ್ರೆಗಾಗಿ ಪ್ರತೀ ವರ್ಷ ದೇಶದ ಖಜಾನೆಗೆ ಖರ್ಚಾಗುತ್ತಿದ್ದದ್ದು ಬರೋಬ್ಬರಿ‌ 700 ಕೋಟಿ! ಅದೆಷ್ಟೇ ವಿರೋಧಗಳು ಎದುರಾದರೂ ತೊಂದರೆ ಇಲ್ಲ ಎಂದು ಮತ್ತೊಂದು ಗಟ್ಟಿ ನಿರ್ಧಾರವನ್ನ ಮೋದಿ ತೆಗೆದುಕೊಂಡಾಗಿದೆ.

ಮತ್ತೆ ಬುದ್ಧಿಜೀವಿಗಳು, ನಕಲಿ ಜಾತ್ಯಾತೀತರು ಮೋದಿ ವಿರುದ್ಧ ತಿರುಗಿ ಬೀಳುವುದರಲ್ಲಿ ಅನುಮಾನವಿಲ್ಲ. ಮತ್ತೊಂದು ಸುತ್ತಿನ ಅಸಹಿಷ್ಣುತೆ ಹೋರಾಟ ಶುರುವಾದರೂ ಅಚ್ಚರಿಯಿಲ್ಲ. ಒಂದಷ್ಟು ಪ್ರಶಸ್ತಿಗಳು ಹಿಂದಿರುಗುವ ಸಾಧ್ಯತೆಗಳೂ ಇದೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವವರಲ್ಲ ನರೇಂದ್ರ ಮೋದಿ. ಇಂತಹ ನಾಟಕಗಳಿಗೆ ಹೆದರುವವರು ಅವರಾಗಿದ್ದರೆ ಎಂದಿಗೂ ಇಂತಹ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿರಲಿಲ್ಲ..

ಸ್ವಚ್ಛ ಭಾರತದಿಂದ ಬುಲೆಟ್ ಟ್ರೈನ್ ವರೆಗೆ, ಸಾಗರ ಮಾಲಾದಿಂದ ಉಡಾನ್ ವರೆಗೆ, ಜನ್ ಧನ್ ಇಂದ ಜನ್ ಸುರಕ್ಷತೆವರೆಗೆ, ಮೇಕ್ ಇನ್ ಇಂಡಿಯಾ ದಿಂದ ಡಿಜಿಟಲ್ ಇಂಡಿಯಾ ವರೆಗೆ, ಗೋಹತ್ಯೆ ನಿಷೇಧದಿಂದ ಗಂಗಾ ಸ್ವಚ್ಛತೆ ವರೆಗೆ ದೇಶದ ಮೂಲೆಮೂಲೆ ಯಲ್ಲಿಯೂ ಬದಲಾವಣೆ ತರಲು ಪ್ರಯತ್ನಿಸುತ್ತಿರುವ ನಾಯಕ ಮೋದಿ. ಸಮರ್ಥ ನಾಯಕ ರಾಷ್ಟ್ರದ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕುತ್ತಿದ್ದಾರೆ. ಅವರನ್ನ ಬೆಂಬಲಿಸದಿದ್ದರೆ ಮುಂದಿನ ಜನಾಂಗ ನಮ್ಮನ್ನ ಎಂದಿಗೂ ಕ್ಷಮಿಸದು.

ಮೋದಿಯವರ ಪ್ರಭಾವದಿಂದಾಗಿ ಇಷ್ಟು ದಿನ ಅಲ್ಪ ಸಂಖ್ಯಾತರ ಹಿಂದೆ ಓಡುತ್ತಿದ್ದವರು ಈಗ ಹಿಂದೂಗಳ ಹಿಂದೆ ಬಿದ್ದಿದ್ದಾರೆ. ರಾಹುಲ್ ಗಾಂಧಿ ಶಿವಭಕ್ತರಾಗುತ್ತಿದ್ದರೆ, ಮಮತಾ ಬ್ಯಾನರ್ಜಿ ಭಗವದ್ಗೀತೆ ಓದುತ್ತಿದ್ದಾರೆ. ಅಖಿಲೇಶ್ ಯಾದವ್ ಕೃಷ್ಣನ ಭಕ್ತರಾಗುತ್ತಿದ್ದರೆ, ಕಮ್ಯುನಿಸ್ಟ್ ಸಿಪಿಐಎಂ ವಿವೇಕಾನಂದರ ಪಠಿಸುತ್ತಿದೆ. ಸಿದ್ಧರಾಮಯ್ಯನವರು ತಮ್ಮನ್ನ ರಾಮ ಭಕ್ತನೆಂದು ಕರೆದುಕೊಳ್ಳುತ್ತಿದ್ದರೆ ಅತ್ತ ದೇವೇಗೌಡರು ಮಠ-ಮಂದಿರ ಸುತ್ತುತ್ತಾ ಯಜ್ಞ-ಯಾಗಾದಿಗಳನ್ನ ನೆರವೇರಿಸುತ್ತಿದ್ದಾರೆ. ಮೋದಿಯೆಂಬ ಮಹಾನಾಯಕ ಸೃಷ್ಟಿಸಿದ ಪವಾಡವಿದು..

ಒಂದು ರಾಷ್ಟ್ರದ ನಾಯಕನೆಂದ ಮೇಲೆ ಅಷ್ಟು ಶಕ್ತಿಶಾಲಿಯಾಗಿರಲೇಬೇಕು ಅಲ್ವಾ..? ಸುಮ್ಮನೆ ಬೇರೊಬ್ಬರ ರಬ್ಬರ್ ಸ್ಟ್ಯಾಂಪ್ ಆಗಿಯೋ ಅಥವಾ ಯಾರದೋ ಒತ್ತಡಕ್ಕೆ ಮಣಿಯುವ ನಾಯಕನೋ ಆಗಿರಬಹುದು. ಭಾರತವೆಂಬ ಬೃಹತ್ ರಾಷ್ಟ್ರಕ್ಕೊಬ್ಬ ಸದೃಢ ನಾಯಕ ಸಿಕ್ಕಿದ್ದಾನೆ. ತಲಾಖ್ ನಿಷೇಧ, ಹಜ್ ಸಬ್ಸಿಡಿ, ಸರ್ಜಿಕಲ್ ಸ್ಟ್ರೈಕ್, ನೋಟ್ ಬ್ಯಾನ್ ಅಷ್ಟೇ ಅಲ್ಲ, ಅವರಿಂದ ಇನ್ನಷ್ಟು ದೊಡ್ಡ ದೊಡ್ಡ ನಿರ್ಧಾರಗಳು ಹೊರಬೀಳಲಿವೆ.. ಹೊರ ಬೀಳಬೇಕಿದೆ.. ಅದೆಲ್ಲದಕ್ಕೂ ಭಾರತೀಯರ ಬೆಂಬಲಬೇಕಿದೆ..

ನರೇಂದ್ರ ಮೋದಿಯವರು ತಪ್ಪು ಹೆಜ್ಜೆ ಇಟ್ಟರೆ ಸರಿ ಪಡಿಸೋಣ.. ರಾಷ್ಟ್ರಕ್ಕಾಗಿ ತೆಗೆದುಕೊಳ್ಳುವ ಅವರ ಪ್ರತೀ ನಿರ್ಧಾರಕ್ಕೂ ಧ್ವನಿಗೂಡೋಣ.

ನಮ್ಮ ಭಾರತ ದೇಶದ ಭವಿಷ್ಯದ ದ್ರಷ್ಠಿಯಲ್ಲಿ ಓದಲೇ ಬೇಕಾದ ಲೇಖನ, ತಪ್ಪದೇ ಓದಿ, ನಿಮಗೆ ಈ ಮಾತು ಸತ್ಯವೆಂದಾದರೆ ಶೇರ್ ಮಾಡಿ.

 •  
  2.9K
  Shares
 • 2.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com