Connect with us
Loading...
Loading...

ಪ್ರಚಲಿತ

ಪಾಕಿಸ್ತಾನ ಕೂಡ ಪ್ರಧಾನಿ ಮೋದಿಯವರನ್ನ ಹೊಗಳುತ್ತಿದೆ!!! ಏನಂದಿದೆ ಪಾಕಿಸ್ತಾನ ಗೊತ್ತಾ?

Published

on

  • 8.9K
  •  
  •  
  •  
  •  
  •  
  •  
  •  
    8.9K
    Shares

ವಿಶ್ವವೇ ಕೊಂಡಾಡುತ್ತಿದೆ ನರೇಂದ್ರನನ್ನು. ವೈರಿ ರಾಷ್ಟ್ರ ಪಾಕಿಸ್ತಾನವೂ ಕೊಂಡಾಡುವಂತಹ ನಾಯಕ ನಮಗೆ ಸಿಕ್ಕಿದ್ದಾನೆ. ನರೇಂದ್ರ ಮೋದಿಯವರ ಬಗ್ಗೆ ಪಾಕಿಸ್ತಾನ ಏನು ಹೇಳಿದೆ ಗೊತ್ತಾ?

ಈಗ ಟ್ರೆಂಡ್ ಹೇಗಿದೆ ಅಂದ್ರೆ ಪ್ರತಿಯೊಬ್ಬರ ಬಾಯಲ್ಲೂ ಮೋದಿ ಮೋದಿ ಎನ್ನುವ ಜಪ. ವಿರೋಧಿಗಳು ಕೂಡಾ ಮೋದಿಯ ಜಪ ಮಾಡುತ್ತಲೇ ಇದ್ದಾರೆ. ವಿಶ್ವವೇ ಮೋದಿಯ ಜಪ ಮಾಡುತ್ತಿರಬೇಕದಾರೆ ಭಾರತದಲ್ಲಿರುವ ವಿರೋಧಿಗಳು ಮೋದಿಯ ಜಪ ಮಾಡದೇ ಇರುತ್ತಾರೆಯೇ?

ವಿರೋಧಿಗಳು ಮೋದಿಯವರ ಯಾವುದಾದರೂ ಹುಳುಕು ಸಿಗುತ್ತದೇನೋ ಎನ್ನುವ ಭ್ರಮೆಯಲ್ಲಿ ಮೋದಿಯ ಜಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೊದ ಮೊದಲು ಹಳುಕು ಹುಡುಕಲು ಪ್ರಯತ್ನಿಸಿ, ಹುಳುಕು ಸಿಗದೆ ಮೋದಿಯ ಭಕ್ತರಾಗಿಬಿಟ್ಟಿದ್ದಾರೆ.

ಮೋದಿಯವರು ಅಧಿಕಾರಕ್ಕೆ ಬಂದಾಗಿಂದಲೂ ಪಾಕಿಸ್ತಾನದ ನೀರಿಳಿಸುತ್ತಿದ್ದಾರೆ. ಅಷ್ಟೇ ಯಾಕೆ ದೈತ್ಯ ರಾಷ್ಟ್ರ ಚೀನಾಕ್ಕೂ ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಡೊಕ್ಲಾಮ್ ವಿಚಾರವಾಗಿ ಚೀನಾ ದೇಶವನ್ನು ವಿಶ್ವದ ಎದರಿಗೆ ತಲೆ ತಗ್ಗಿಸುವಂತೆ ಮಾಡಿದ್ದರು.

ಮೇಲಿಂದ ಮೇಲೆ ಪೆಟ್ಟು ತಿಂದ ಪಾಪಿ ಪಾಕಿಸ್ತಾನ ಈಗ ಹುಷಾರಾಗಿ ಮೋದಿಯವರ ಸಹವಾಸವೇ ಬೇಡ ಎನ್ನುವ ನಿರ್ಧಾರ ಮಾಡಿದೆ. ಮೊದಲೆಲ್ಲಾ ನಮ್ಮ ಆಟ ನಡೆಯುತ್ತಿತ್ತು ಆದರೆ ಈಗ ಭಾರತವನ್ನು ಆಳುತ್ತಿರುವುದು ಕ್ಷಾತ್ರ ತೇಜವಿರುವ ಹಿಂದೂ ರಾಜ, ಹೀಗಾಗಿ ನಮಗೆ ಭಾರತದ ಸಹವಾಸವೇ ಬೇಡವೆಂದು ನಿರ್ಧರಿಸಿ ಮೋದಿಯವರನ್ನು ಹೊಗಳಲು ಶುರು ಮಾಡಿದೆ.

ಪಾಪ ಪಾಕಿಸ್ತಾನಕ್ಕೆ ಇನ್ನೇನು ಮಾಡೋಕಾಗುತ್ತೆ ಹೇಳಿ.‌ ಮೊದಲೇ ಬೆದರಿ ಬೆಂಡಾಗಿದೆ. ಇನ್ನೇನಾದರೂ ಕುಂಯ್ಯ ಅಂದ್ರೆ ಮೋದಿಯವರು ಅಟ್ಟಾಡಿಸಿ ಹೊಡಿತಾರೆ ಅಂತ ಪಾಕಿಸ್ತಾನಕ್ಕೆ ಖಾತ್ರಿಯಾಗಿದೆ.

ಅಷ್ಟಕ್ಕೂ ಪಾಕಿಸ್ತಾನದ ಮಾಧ್ಯಮ ಮೋದಿಯವರ ಕುರಿತು ಹೇಳಿದ್ದೇನು ಗೊತ್ತಾ?

“ಮೋದಿಯಂತಹ ವರ್ಚಸ್ಸು ಇರುವ, ಪವಾಡಸದೃಶ್ಯ ನಾಯಕ ಒಂದು ವೇಳೆ ಮುಸ್ಲೀಂರಲ್ಲಿ ಇದ್ದಿದ್ದೆ ಆದರೆ, ಅವರಿಗೊಸ್ಕರ ಪ್ರತಿ ಮುಸಲ್ಮಾನ ತಲೆ ಕತ್ತರಿಸಿಕೊಳ್ಳಲು ಸಿದ್ಧನಾಗುತಿದ್ದನೇ ಹೊರತು ಅವರ ತಲೆ ಬಾಗಲು ಬೀಡುತ್ತಿರಲಿಲ್ಲ”. ಆದರೆ ಹಿಂದೂ……?

(- ಪಾಕಿಸ್ತಾನದ ಮಾಧ್ಯಮ)

ಜನರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವವನು, ಅವರಲ್ಲಿ ಒಳ್ಳೆಯ ಪರಿಪಾಠ ಬೆಳೆಸುವವನು, ಸಮಯ ಬಂದಾಗ ಅವರ ಅಸಮಾಧಾನವನ್ನೂ ಲೆಕ್ಕಿಸದೇ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುವವನು ನಾಯಕನೆನಿಸಿಕೊಳ್ಳುತ್ತಾನೆ.

ಪಾಕಿಸ್ತಾನದ ಬುದ್ಧಿಜೀವಿಯೊಬ್ಬ ಮೋದಿಯವರ ಕುರಿತು ಹೇಳಿದ್ದೇನು ಗೊತ್ತೆ?

“ನಮ್ಮ ನೆರೆಯ ರಾಷ್ಟ್ರ ಹಿಂದೂಸ್ಥಾನ (ಭಾರತ ) ತುಂಬಾ ಅದೃಷ್ಟ ಮಾಡಿದೆ. ಏಕೆಂದರೆ ಅದರ ನಾಯಕತ್ವ ನರೇಂದ್ರ ಮೋದಿ ಯಂಥ ಮಹಾನ್ ವ್ಯಕ್ತಿಯ ಕೈಯಲ್ಲಿ ಇದೆ. ಇಂತಹ ನಾಯಕನ ಜನನವನ್ನು ನಾವು ಪಾಕಿಸ್ತಾನದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲ!”

– ಹಸನ್ ನಿಸಾರ್.
( ಪಾಕಿಸ್ತಾನದ ಹಿರಿಯ ಪತ್ರಕರ್ತ, ಬುದ್ಧಿಜೀವಿ.)

ಅಷ್ಟೇ ಯಾಕೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾ ಕೂಡಾ ಮೋದಿಯವರನ್ನು ಕೊಂಡಾಡಿದೆ. ಅಮೇರಿಕಾದ ಖ್ಯಾತ ತಜ್ಞರೊಬ್ಬರು ಮೋದಿಯವರ ಕುರಿತು ತುಂಬಾ ಮೆಚ್ಚಗೆಯ ಮಾತುಗಳನ್ನಾಡಿದ್ದರು. ಈ ವಿಶ್ವದಲ್ಲಿ ಚೀನಾದ ಎದರು ಎದೆ ಸೆಟೆಸಿ ನಿಲ್ಲಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂದು ಅಮೆರಿಕಾದ ತಜ್ಞರೊಬ್ಬರು ಹೇಳಿದ್ದರು.

“ಅಮೆರಿಕಾದಂತಹ ಅಮೆರಿಕಾ ಚೀನಾದ ಒಂದಷ್ಟು ವಿವಾದಾತ್ಮಕ ಯೋಜನೆಗಳ ಬಗ್ಗೆ ಮಾತಾಡಿರಲಿಲ್ಲ. ಆದರೆ ಮೋದಿಯವರು ಚೀನಾದ ವಿವಾದಾತ್ಮಕ ಯೋಜನೆಗಳನ್ನು ವಿರೋಧಿಸಿದ್ದಾರೆ. ಹೀಗಾಗಿ ಚೀನಾದ ವಿರುದ್ಧ ಸೆಡ್ಡು ಹೊಡೆಯ ಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ”

“ನನ್ನ ಸ್ನೇಹಿತ ಮೋದಿ ಒಬ್ಬ ದೂರದೃಷ್ಟಿ ಹೊಂದಿರುವ ನಾಯಕ” ಹೀಗೆ ಹೇಳಿದ್ದು ಜಪಾನ್ ಪ್ರಧಾನಿ ಶಿಂಜೋ ಅಬೆ.

“ನಾವು ಸುಮಾರು ಸಾವಿರ ವರ್ಷಗಳಿಂದ ಈ ಘಳಿಗೆಗಾಗಿ ಕಾಯತ್ತಿದ್ದೆವು. ಈಗ ಆ ಘಳಿಗೆ ಕೂಡಿ ಬಂದಿದೆ. ಭಾರತವನ್ನು ನನ್ನ ಮಾತೃಭೂಮಿ ಎನ್ನಲು ನನಗೆ ಹೆಮ್ಮೆ ಇದೆ” ಹೀಗೆ ಹೇಳಿದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇಲ್ಲಿಯವರೆಗೆ ಭಾರತದ ಪ್ರಧಾನಿ ಇಸ್ರೇಲ್ ಗೆ ಭೇಟಿ ನೀಡಿರಲಿಲ್ಲ. ಅದೇನೋ ಸೆಕ್ಯುಲರ್ ಎನ್ನುವ ಪೆಡಂಭೂತದಲ್ಲಿ ಮಿಂದವರು ಸೆಕ್ಯುಲರ್ ಗಳನ್ನು ಸಮಾಧಾನ ಪಡಿಸುವುದಕ್ಕಾಗಿ ಇಸ್ರೇಲ್ ಗೆ ಭೇಟಿ ಕೊಟ್ಟಿರಲಿಲ್ಲ. ಆದರೆ ಇಸ್ರೇಲ್ ಕಾಯುತ್ತಲೇ ಇತ್ತು. ಆ ಕಾಯುವಿಕೆಯನ್ನು ಮೋದಿಯವರು ನೀಗಿಸಿ ಐತಿಹಾಸಿಕ ಘಟನೆಯೊಂದಕ್ಕೆ ಮುನ್ನುಡಿ ಬರೆದು, ಸೆಕ್ಯುಲರ್ ಗಳಿಗೆ ಬರೆ ಕೊಟ್ಟುಬಿಟ್ಟರು.

ಇದೆಲ್ಲಾ ಬಿಡಿ. ವಿರೋಧ ಪಕ್ಷದವರು ಮೊಪದಿಯವರ ಕುರಿತು ಹೊಗಳುತ್ತಿದ್ದಾರೆಂದರೆ ಮೋದಿಯವರ ತಾಕತ್ತು ಎಷ್ಟಿರಬಹುದು. ವಿರೋಧಿಗಳು ಕೂಡಾ ಮೋದಿಯವರ ಕಾರ್ಯ ವೈಖರಿಗೆ ಸೋತು ಮೋದಿಯವರ ಭಕ್ತರಾಗುತ್ತಿದ್ದಾರೆ. ಅಷ್ಟಕ್ಕೂ ವಿರೋಧ ಪಕ್ಷದವರು ಮೋದಿಯವರ ಕುರಿತು ಏನು ಹೇಳಿದ್ದಾರೆ ಗೊತ್ತೆ? ಅಷ್ಟಕ್ಕೂ ವಿರೋಧ ಪಕ್ಷದ ಆ ವ್ಯಕ್ತಿ ಯಾರು ಗೊತ್ತಾ?

ಇತ್ತೀಚೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಖಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಮೋದಿಯವರು ಗಾಂಧೀಜಿಗಿಂತಲೂ ಶ್ರೇಷ್ಠವೆಂದು ಹಾಡಿ ಹೊಗಳಿದ್ದಾರೆ. ಒಬ್ಬ ಕಟ್ಟರ್ ಕಾಂಗ್ರೆಸ್ಸಿಗ ಅದು ಕೂಡಾ ಇಂದಿರಾಗಾಂಧಿಯವರ ಆಪ್ತ ಮೋದಿಯವರನ್ನು ಹಾಡಿ ಹೊಗಳಿದ್ದಾರೆಂದರೆ ನೀವೇ ಅಲೋಚಿಸಿ ಮೋದಿಯವರ ವರ್ಚಸ್ಸು ಎಷ್ಟಿರಬಹುದು.

“ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮ ಗಾಂಧೀಜಿಗಿಂತ ಶ್ರೇಷ್ಠ. ಬಡವರ ಜೀವನದಲ್ಲಿ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಮೌಲ್ಯಯುತ ಪರಿಣಾಮವನ್ನು ಮೋದಿ ಬೀರಿದ್ದಾರೆ ಹಾಗೂ ಅವರು ಭಗವಂತನ ಅವತಾರವಿದ್ದಂತೆ”

ಈ ಮಾತುಗಳನ್ನು ಹೇಳಿರುವುದು ಬಿಜೆಪಿಯ ಕಾರ್ಯಕರ್ತರು ಇರಬೇಕು ಅಂತ ನೀವು ಅಂದುಕೊಂಡಿದ್ದರೆ ಅದು ಸುಳ್ಳು!! ಹೌದು ಮೇಲಿನ ಮಾತುಗಳನ್ನು ಹೇಳಿದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದ ಹಾಗೂ ಜೀವನದುದ್ದಕ್ಕೂ ಕಟ್ಟರ್ ಕಾಂಗ್ರೆಸ್ಸಿಗರಾಗಿದ್ದ ಪದ್ಮಭೂಷಣ್ ಲೋಕೇಶ್ ಚಂದ್ರ ಹೊಗಳಿದ ಪರಿಯಿದು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಅಧ್ಯಕ್ಷರಾಗಿ ಲೋಕೇಶ್ ಚಂದ್ರ ಅವರು ನೇಮಕವಾಗಿದ್ದು, ಸಂದರ್ಶನವೊಂದರಲ್ಲಿ ಅವರು ಆಡಿದ ಮಾತುಗಳಿವು.

ವಿರೋಧ ಪಕ್ಷದವರು, ವಿರೋಧಿ ರಾಷ್ಟ್ರಗಳು ಮೋದಿಯವರ ಕುರಿತು ಈ ಮಾತುಗಳನ್ನಾಡುತ್ತಿದ್ದಾರೆ ಎಂದರೆ ಮೋದಿಯವರ ವ್ಯಕ್ತಿತ್ವ ಎಷ್ಟಿದೆ ಎಂಬುದನ್ನು ನೀವೇ ಆಲೋಚಿಸಿ.

ರಾಜಕೀಯ ದೃಷ್ಟಿಯಿಂದ ಈ ಲೇಖನ ಬರೆದಿಲ್ಲ. ಮೋದಿ ಒಬ್ಬ ರಾಷ್ಟ್ರವಾದಿ. ದೇಶವನ್ನು ಕಟ್ಟಲೆಂದೆ ಮೋದಿಯವರು ಬಂದಿದ್ದಾರೆ. ಅವರಿಗೆ ರಾಜಕೀಯ ಹಪಹಪಿ ಇಲ್ಲವೇ ಇಲ್ಲ. ಒಂದು ವೇಳೆ ಇದ್ದಿದ್ದರೆ ನೋಟ್ ಬ್ಯಾನ್, GST, ತಲಾಖ್ ನಿಷೇಧ, ಹಜ್ ಸಬ್ಸೀಡಿಯ ನಿಷೇಧದಂತಹ ದೃಢ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಅವರಿಗೆ ರಾಜಕೀಯ ಬೇಕಿಲ್ಲ, ಅವರಿಗೆ ಬೇಕಿರುವುದು ಭಾರತವನ್ನು ವಿಶ್ವಗುರುವಾಗಿಸೋದು.

– Sachin Jain Haleyur

  •  
    8.9K
    Shares
  • 8.9K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com