Connect with us
Loading...
Loading...

ಪ್ರಚಲಿತ

ಕೇಜ್ರಿವಾಲ್ ಗೆ ಬಿಗ್ ಶಾಕ್ ನೀಡಿದ ರಾಷ್ಟ್ರಪತಿಗಳು!!! ಶಾಸಕತ್ವ ಕಳೆದುಕೊಂಡ ಆಪ್ ನ 20 ಶಾಸಕರು

Published

on

  • 767
  •  
  •  
  •  
  •  
  •  
  •  
  •  
    767
    Shares

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಆಪ್(ಆಮ್ ಆದ್ಮಿ ಪಕ್ಷ)ದ 20 ಶಾಸಕರನ್ನ ಅನರ್ಹಗೊಳಿಸಲು ಶಿಫಾರಸ್ಸು ಪತ್ರಕ್ಕೆ ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟಿತ್ತು.

ಚುನಾವಣಾ ಆಯೋಗ ಶಿಫಾರಸ್ಸು ಮಾಡಿದ ಕಡತಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಇದರಿಂದ ಆಪ್ ನ 20 ಶಾಸಕರು ತಮ್ಮ ಶಾಸಕತ್ವವನ್ನ ಕಳೆದುಕೊಂಡಿದ್ದಾರೆ.

ಆಪ್ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 20 ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು.

ಆದರೆ ಆಪ್ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ “ಸಂಸದೀಯ ಕಾರ್ಯದರ್ಶಿ ಹುದ್ದೆಯೇನೋ ಇದೆ ಆದರೆ ನಾವು ಯಾವುದೇ ರೀತಿಯ ಸಂಬಳ, ಸವಲತ್ತು ಪಡೆದಿಲ್ಲ, ಹೀಗಾಗಿ ನಮ್ಮನ್ನ ಅನರ್ಹಗೊಳಿಸಬಾರದು” ಅಂತ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ್ದರು.

ತಮ್ಮನ್ನ ಅನರ್ಹಗೊಳಿಸಲು ಚುನಾವಣಾ ಆಯೋಗ ಶಿಫಾರಸು ಮಾಡಿದ್ದರ ವಿರುದ್ಧ ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ದೆಹಲಿ ಹೈಕೋರ್ಟ್ ಸೋಮವಾರ ನಡೆಸಲಿದೆ.

ದೆಹಲಿ ಹೈಕೋರ್ಟ್ ನಲ್ಲೂ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟಿಗೂ ಹೋಗ್ತೇವೆ ಅಂದಿದ್ದಾರೆ ಆಪ್ ಶಾಸಕ ಗೋಪಾಲ್ ರಾಯ್.

ರಾಷ್ಟ್ರಪತಿಗಳ ಅಂಕಿತದಿಂದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದ್ದು, ಶೀಘ್ರದಲ್ಲಿಯೇ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಪ್ರಸ್ತುತ 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಆಪ್ ಪಕ್ಷ 66 ಸ್ಥಾನಗಳನ್ನು ಹೊಂದಿದೆ.

ರಾಷ್ಟ್ರಪತಿಗಳ ಅಂಕಿತದ ನಂತರ 20 ಅನರ್ಹರಾದ ಕಾರಣ ಆಪ್ ಸ್ಥಾನಗಳ ಸಂಖ್ಯೆ 46ಕ್ಕೆ ಇಳಿಕೆಯಾಗಲಿದೆ. ಶಾಸಕರ ಸಂಖ್ಯೆ ಕಡಿಮೆಯಾದರೂ ಕೇಜ್ರಿವಾಲ್ ಆಡಳಿತದಲ್ಲಿ ಮುಂದುವರಿಯಲಿದ್ದಾರೆ.

35ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇರುವ ಕಾರಣ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ.

ಏನಿದು ಅನರ್ಹ ಶಾಸಕರ ಪ್ರಕರಣ?

2016 ರ ದೆಹಲಿ ವಿಧಾನಸಭಾ ಚುನಾವಣೆಯ ನಂತರ ಅರವಿಂದ್ ಕೇಜ್ರಿವಾಲ್ ಭರ್ಜರಿ ಗೆಲುವು ಸಾಧಿಸಿ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿತ್ತು.

ಕೇಜ್ರೀವಾಲ್ ಸಿಎಂ ಆಗಿ ಆಯ್ಕೆಯಾದ ನಂತರ ತನ್ನ 21 ಆಪ್ ಶಾಸಕರನ್ನ ವಿಧಾನಸಭಾ ಕಾರ್ಯದರ್ಶಿಗಳಾಗಿ ನೇಮಕ ಮಾಡಿದ್ದು ಇದನ್ನ ಪ್ರಶ್ನಿಸಿ ಪ್ರಶಾಂತ್ ಪಟೇಲ್ ಎಂಬ ವ್ಯಕ್ತಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದ. ಈ ಕೇಸನ್ನ ರಾಷ್ಟ್ರಪತಿಗಳು ಚುನಾವಣಾ ಆಯೋಗಕ್ಕೆ ವರ್ಗಾವಣೆ ಮಾಡಿದ್ದರು.

ಇದರ ಜೊತೆಜೊತೆಗೆ 2016 ರಲ್ಲಿ ಆಪ್ ಪಕ್ಷದ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಚುನಾವಣಾ ಆಯೋಗಕ್ಕೆ ಕಂಪ್ಲೇಂಟ್ ಮಾಡಿತ್ತು.

ಕಾಂಗ್ರೆಸ್ಸಿನ ಕಂಪ್ಲೇಟ್ ಏನಿತ್ತು ಗೊತ್ತಾ?

ಕಾಂಗ್ರೆಸ್ ಕೂಡ ಆಪ್ ನ 21 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಲೇ ದೂರು ನೀಡಿತ್ತು. ಏನ್ರೀ ಇದು ಇದಕ್ಕೆ ನಿಮ್ಮ ಪಕ್ಷ ಉತ್ತರಸಬೇಕು ಅಂತ ಚುನಾವಣಾ ಆಯೋಗ ಆಪ್ ಪಕ್ಷಕ್ಕೆ ತರಾಟೆಗೆ ತೆಗೆದುಕೊಂಡಿತ್ತು.

ಆ ತರಹ ಏನೂ ಇಲ್ಲ ನಾವು ಲಾಭದಾಯಕ ಹುದ್ದೆ ಹೊಂದಿಲ್ಲ, ಈ ಪ್ರಕರಣ ರದ್ದು ಮಾಡಿ ಅಂತ ಆಪ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ರು ಆದರೆ ಇದನ್ನ ಆಯೋಗ ತಿರಸ್ಕರಿಸಿತ್ತು.

ಈಗ ಚುನಾವಣಾ ಆಯೋಗ ಶಿಫಾರಸ್ಸು ಮಾಡಿದ ಕಡತಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿರೋದ್ರಿಂದ ಆಮ್ ಆದ್ಮಿ ಪಕ್ಷದ 20 ಶಾಸಕರು ತಮ್ಮ ಶಾಸಕತ್ವವನ್ನ ಕಳೆದುಕೊಂಡಿದ್ದಾರೆ.

  •  
    767
    Shares
  • 767
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com