Connect with us
Loading...
Loading...

ಪ್ರಚಲಿತ

ಪ್ರಧಾನಿ ಮೋದಿ ಕುರಿತು ರಾಷ್ಟ್ರಪತಿಗಳು ಹೇಳಿದ ಮಾತುಗಳಿಗೆ ಬೆಪ್ಪಾಗಿದೆ ಕಾಂಗ್ರೆಸ್!!! ಏನಂದ್ರು ರಾಷ್ಟ್ರಪತಿಗಳು?

Published

on

 • 6.3K
 •  
 •  
 •  
 •  
 •  
 •  
 •  
  6.3K
  Shares

ನರೇಂದ್ರ ಮೋದಿ, ಅದೊಂದು ಕೇವಲ ಹೆಸರಲ್ಲ ಅದೊಂದು ಅದ್ಭುತ ಶಕ್ತಿ, ಆ ಹೆಸರಿನ ಜನಪ್ರೀಯತೆಯಿಂದ ಅವರನ್ನ ಎಷ್ಟು ಜನ ಪ್ರೀತಿಸುತ್ತಾರೋ ಅಷ್ಟೇ ಜನ ಕಂಠಮಟ್ಟ ದ್ವೇಷಿಸುತ್ತಾರೆ ಕೂಡ.

ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗಿನಿಂದ ನಡುಕ ಹುಟ್ಟಿರುವ ಕಾಂಗ್ರೆಸ್ ತನ್ನ ದುಕಾನ್(ಅಂಗಡಿ) ಬಂದ್ ಮಾಡಿಕೊಂಡು ಅಂದರೆ ಒಂದೊಂದೇ ರಾಜ್ಯದಿಂದ ಅಧಿಕಾರ ಕಳೆದುಕೊಳ್ಳುತ್ತ ನೊಣ ಹೊಡೆಯುವ ಪರಿಸ್ಥಿತಿಗೆ ಬಂದು ನಿಂತಿದೆ.

ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನ ಅಧಿಕಾರದಿಂದಿಳಿಸಿ ಮತ್ತೆ ಅಧಿಕಾರಕ್ಕೆ ಬರಬೇಕು ಅಂತ ಕಾಂಗ್ರೆಸ್ ಮಾಡುತ್ತಿರುವ ಪ್ರಯತ್ನ ಅಷ್ಟಿಷ್ಟಲ್ಲ.

ಆ ಪಕ್ಷದ ಒಬ್ಬ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಭಾರತದ ಕಟ್ಟರ್ ವಿರೋಧಿ ದೇಶ ಪಾಪಿ ಪಾಕಿಸ್ತಾನಕ್ಕೆ ಹೋಗಿ ಪಾಕಿಸ್ತಾನಿಗಳಿಗೆ ಸಹಾಯ ಕೋರಿ “ಮೋದಿಯನ್ನ ಸೋಲಿಸೋಕೆ ನಿಮ್ಮ ಸಹಾಯ ಸಹಕಾರ ಬೇಕು” ಅಂತ ಸಹಾಯ ಕೇಳಿ ಬರುತ್ತಾನೆ,

ಇತ್ತ ಅದೇ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಚೀನಾ ರಾಯಭಾರಿ ಕಛೇರಿಗೆ ಹೋಗಿ ಬರ್ತಾರೆ, ಅವರು ಹೋಗಿದ್ದರ ಬಗ್ಗೆ ಮಾಧ್ಯಮಗಳು ತೋರಿಸಿದರೆ ಪಕ್ಷದ ನಾಯಕರು “ಇಲ್ಲ ರಾಹುಲ್ ಗಾಂಧಿ ಚೀನಾ ರಾಯಭಾರಿ ಕಛೇರಿಗೆ ಹೋಗೇ ಇಲ್ಲ” ಅಂತ ವಾದ ಮಾಡಿ ಕೊನೆಗೆ ಚೀನಾ ರಾಯಭಾರಿ ಕಛೇರಿಯ ಅಧಿಕಾರಿಯ ಫೋಟೋ ಚೀನಾ ವೆಬಸೈಟ್ ನಲ್ಲೇ ಬಂದಮೇಲೆ “ಹೋದ್ರೆ ತಪ್ಪೇನು?” ಅಂತ ಉಲ್ಟಾ ಹೊಡೀತಾರೆ.

ಇದಕ್ಕೂ ಮೀರಿ ಕಾಂಗ್ರೆಸ್ ಮೋದಿಯವರನ್ನ ಸೋಲಿಸಲು ಪಾಕಿಸ್ತಾನದ ಭಾರತೀಯ ರಾಯಭಾರಿಯ ಮನೆಗೂ ಹೋಗಿ ಬಂದದ್ದನ್ನ ಸ್ವತಃ ಮೋದಿಯವರೇ ಗುಜರಾತ್ ಚುನಾವಣೆ ವೇಳೆ ಬಹಿರಂಗಪಡಿಸಿದ್ದರು.

ಮೊದಮೊದಲು ಇದನ್ನೂ ವಿರೋಧಿಸಿದ ಕಾಂಗ್ರೆಸ್ ನಂತರ ಇದನ್ನೂ ಒಪ್ಪಿಕೊಂಡಿತು.

ಒಟ್ಟಿನಲ್ಲಿ ಮೋದಿಯವರನ್ನ ಹೇಗಾದರೂ ಮಾಡಿ ಅಧಿಕಾರದಿಂದ ಇಳಿಸೋಕೆ ಸತತ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಧಾನಿಯನ್ನ ಹಾಡಿ ಹೊಗಳಿದ್ದು ಕಾಂಗ್ರೆಸ್ಸಿಗೆ ತಡೆಯಲಾರದ ಶಾಕ್ ನೀಡಿದಂತಾಗಿದೆ.

ಅಷ್ಟಕ್ಕೂ ರಾಷ್ಟ್ರಪತಿಗಳು ಪ್ರಧಾನಿಯ ಬಗ್ಗೆ ಹೇಳಿದ್ದೇನು ಗೊತ್ತಾ?

ಸಂಸತ್ತಿನ ಬಜೆಟ್ ಸೆಷನ್ ನ ಇಂದಿನಿಂದ ಆರಂಭವಾಗಲಿದ್ದು ಇದನ್ನುದ್ದೇಶಿಸಿ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ.
ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹಾಡಿ ಹೊಗಳಿದ್ದಾರೆ.

ರೈತರ ಕುರಿತು ಪ್ರಧಾನಿ ಮೋದಿಯ ಕಾರ್ಯಗಳು:

ಪ್ರಧಾನಿ ಮೋದಿಯವರಿಗೆ ರೈತರ ಪರ ಇರುವ ಕಾಳಜಿಯನ್ನ ರಾಷ್ಟ್ರಪತಿಗಳು ಪ್ರಸ್ತಾಪಿಸಿದ್ದಾರೆ. ರೈತರ ಆದಾಯ 2022 ರ ವೇಳೆಗೆ ದುಪ್ಪಟ್ಟಾಗಿಸಲು ಮೋದಿ ಸರ್ಕಾರ ಶ್ರಮಪಡುತ್ತಿರುವುದರ ಬಗ್ಗೆ, ಅದು ಕಾರ್ಯಗತವಾದರೆ ರೈತರಿಗೆ ಹೇಗೆಲ್ಲಾ ಉಪಯೋಗವಾಗಲಿದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆ ಜೊತೆಗೆ ರೈತರ ಉತ್ಪಾದನೆಯಲ್ಲಿ ಶೇ. 38ರಷ್ಟು ಹೆಚ್ಚಳ ಕಂಡು ಬಂದಿದ್ದು, ಬೆಳೆ ಹಾನಿ ಪರಿಹಾರಕ್ಕಾಗಿ ‘ಕಿಸಾನ್ ಸಂಪದಾ’ ಯೋಜನೆಯನ್ನು ಜಾರಿಗೊಳಿಸಲಾಗುವುದರ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಮಹಿಳಾ ಸಬಲೀಕರಣ,‌ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ:

ಮುಸ್ಲಿಂ ಮಹಿಳೆಯರಿಗೂ ನ್ಯಾಯ ನೀಡುವ ಟ್ರಿಪಲ್ ತಲಾಕ್ ಬಿಲ್ ಆದಷ್ಟು ಬೇಗ ಜಾರಿಯಾಗಲಿ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.

ಪ್ರಧಾನಮಂತ್ರಿ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ:

ದೇಶದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಮುಖ್ಯವಾದುದಾಗಿದ್ದು, ಅದರಲ್ಲಿ ಶೌಚಾಲಯ ನಿರ್ಮಾಣವೂ ಕೂಡ ಸಾಮಾಜಿಕ ನ್ಯಾಯದ ಆಂದೋಲನವಾಗಿದೆ ಎಂದಿದ್ದಾರೆ.

ಪ್ರಧಾನಿ ಮೊದಿಯ ಉಜ್ವಲಾ ಯೋಜನೆ:

ದೇಶದಲ್ಲಿ ಮೊದಲೆಲ್ಲ ಮಹಿಳೆಯರು ಅಡುಗೆ ಮಾಡಲು ಸೀಮೆ ಎಣ್ಣೆ, ಸೌದೆ ಬಳಸಿ ಕಷ್ಟಪಡುತ್ತಿದ್ದ ಕಾಲವಿತ್ತು, ಪ್ರಧಾನಿ ಮೋದಿ ಗ್ಯಾಸ್ ಸಬ್ಸೀಡಿಯನ್ನ ಉಳ್ಳವರು ಬಿಟ್ಟುಕೊಡಲಿ ಎಂದು ನೀಡಿದ ಒಂದೇ ಒಂದು ಕರೆಗೆ ಕೋಟ್ಯಾಂತರ ಜನ ಬಿಟ್ಟುಕೊಟ್ಟಿದ್ದರ ಫಲವಾಗಿ ಕೋಟ್ಯಾಂತರ ಬಡ ಮಹಿಳೆಯರಿಗೆ ಗ್ಯಾಸ್ ನೀಡುವಲ್ಲಿ ಮೋದಿ ಸರ್ಕಾರ ಯಶಸ್ಸು ಕಂಡಿತ್ತು.

ಹಾಗು ಪ್ರಧಾನಿ ಮೋದಿ ಜಾರಿಗೆ ತಂದ ‘ಉಜ್ವಲಾ’ ಯೋಜನೆಯ ಬಗ್ಗೆಯೂ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆಯೂ ಕೂಡ ತಮ್ಮ ಮಾತುಗಳಲ್ಲಿ ರಾಷ್ಟ್ರಪತಿ ಉಲ್ಲೇಖಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದೂ ಹೇಳಿದ್ದಾರೆ. ಬಡತನದ ವಿರುದ್ಧ ಹೋರಾಡಲು ಅನೇಕ ಯೋಜನೆ ಜಾರಿ ತಂದಿದ್ದಲ್ಲದೇ, ಸಾಲ ವಿತರಣೆ, ಜನ್ ಧನ್ ಯೋಜನೆಗಳನ್ನು ಜಾರಿ ಮಾಡಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಬ್ರಾಡ್ ಬ್ಯಾಂಡ್ ಮೂಲಕ ಹಳ್ಳಿಗಳನ್ನು ಬೆಸೆಯುವ ಕೆಲಸ ಆರಂಭವಾಗಿದ್ದು, ಈವರೆಗೆ 2.5 ಲಕ್ಷ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

ಎಲ್ಲರನ್ನೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಕೆಲಸ ವೇಗ ಪಡೆದುಕೊಂಡಿದೆ. ಹಾಗಾಗಿ, 2014 ರಲ್ಲಿ ಶೇ 56ರಷ್ಟು ಹಳ್ಳಿಗಳು ರಸ್ತೆಗಳಿಗೆ ಬೆಸೆದುಕೊಂಡಿದ್ದವು. ಆದರೆ ಇಂದು 82 ರಷ್ಟು ಹಳ್ಳಿಗಳು ರಸ್ತೆ ಸಂಪರ್ಕ ಹೊಂದಿವೆಯಲ್ಲದೇ 2019 ರ ವೇಳೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ತರವಾದ ಗುರಿಯನ್ನು ಹೊಂದಿರುವ ಬಗ್ಗೆ ಅಧಿವೇಶದಲ್ಲಿ ರಾಷ್ಟ್ರಪತಿಗಳು ಹೇಳಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಯಲ್ಲ, ಸಬಲೀಕರಣವೇ ನರೇಂದ್ರ ಮೋದಿ ಸರಕಾರದ ಮಂತ್ರವಾಗಿದ್ದು, ರೈತರ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ತಿಳಿಸಿದ್ದಾರೆ.

ರಾಷ್ಟ್ರಪತಿಗಳ ಮೋದಿ ಹೊಗಳಿಕೆಯ ಈ ಭಾಷಣ ಕಾಂಗ್ರೆಸ್ ಗೆ ಇನ್ನಿಲ್ಲದ ಉರಿ ನೀಡಿದ್ದು ತಾವು ಪ್ರಧಾನಿ ಮೋದಿಯವರ ವರ್ಚಸ್ಸನ್ನ ಎಷ್ಟು ಕಡಿಮೆ ಮಾಡಲು ಹೊರಟಿದ್ದೇವೋ ಅಷ್ಟೇ ವರ್ಚಸ್ಸು ಈ ವ್ಯಕ್ತಿಯದ್ದು ಹೆಚ್ಚುತ್ತಲಿದೆಯಲ್ಲ ಅನ್ನೋದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗುತ್ತಿದೆ.

ಅದೇನೇ ಇರಲಿ ಪ್ರಧಾನಿ ಮೋದಿ ದೇಶಕ್ಕಾಗಿ ತಮ್ಮೆಲ್ಲಾ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡಿ ಭಾರತವನ್ನ ಮತ್ತೆ ವಿಶ್ವಗುರು ಮಾಡುವಲ್ಲಿ ಮೋದಿಜೀಗೆ ಸಾಥ್ ನೀಡೋಣ!!

ನಾವು ಪ್ರಧಾನಿಯವರ ಬೆಂಬಲಕ್ಕಿದ್ದೇವೆ,‌ ನೀವು???!

– ಅಕ್ಷತಾ ಪಾಟೀಲ್

 •  
  6.3K
  Shares
 • 6.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com