Connect with us
Loading...
Loading...

ಅಂಕಣ

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಂತೆ!!! ಪ್ರಧಾನಿ ಮೋದಿಯನ್ನ ಸೋಲಿಸಲಿದ್ದಾರಂತೆ ‘ರಾಗಾ’!! ಆ ಅರ್ಹತೆ ಇದೆಯಾ ಇವರಿಗೆ?

Published

on

 • 1.2K
 •  
 •  
 •  
 •  
 •  
 •  
 •  
  1.2K
  Shares

ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿರುವುದಂತೂ ಎಲ್ಲರಿಗೂ ಗೊತ್ತಿರುವ ವಿಚಾರ. ತುಂಬಾ ಜನ ಏನು ಹೇಳ್ತಾರಂದ್ರೆ ರಾಹುಲ್ ಗಾಂಧಿ ಕರ್ನಾಕಕ್ಕೆ ಬಂದರೆ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಭಯವಾಗುತ್ತದೆಯಂತೆ.‌ ಕಾರಣವಿಷ್ಟೇ ರಾಹುಲ್ ಕರ್ನಾಟಕಕ್ಕೆ ಬಂದು ಏನೋ ಮಾತಾಡಿ ಎಡವಟ್ಟು ಮಾಡ್ತಾರೆ ಎಂಬ ಭಯ. ಯಾಕಂದ್ರೆ ರಾಹುಲ್ ಹೋದಲ್ಲಿ ಬಂದಲ್ಲಿ ಮಾತಾಡಿದಾಗಲೆಲ್ಲ ಎಡವಟ್ಟೇ ಆಗಿವೆ. ಸರಿಯಾಗಿ ಮಾತನಾಡಲು ಬರಲ್ಲ. ಏನೋ ಮಾತಾಡಲು ಹೋಗಿ ಇನ್ನೇನೋ ಮಾತಾಡಿ ಬಿಡುತ್ತಾರೆ.

ಹಿಂದೊಮ್ಮೆ ಬೆಂಗಳೂರಿಗೆ ಬಂದಾಗ ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ ಆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ನಗೆಪಾಟಲೀಗೀಡಾಗಿದ್ದರು. ಆ ಸಂವಾದದಲ್ಲಿ ಮೋದಿಯವರನ್ನು ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದಾಗ ಆ ವಿದ್ಯಾರ್ಥಿಗಳು ಮೋದಿಯವರ ಪರವಾದ ಉತ್ತರ ಕೊಟ್ಟಿದ್ದರು. ಇದರಿಂದಾಗಿ ಹಾಸ್ಯಕ್ಕೊಳಗಾಗಿದ್ದರು. ಸರಿಯಾಗಿ ಮಾತನಾಡೋಕೆ ಬರದ ರಾಹುಲ್ ಭವ್ಯ ಭಾರತದ ಪ್ರಧಾನಿಯಾಗಲು ಯೋಗ್ಯನಾ? ಈ ಪ್ರಶ್ನೆ ತುಂಬಾ ಜನರಲ್ಲಿ ಕಾಡುತ್ತಲೇ ಇದೆ.

ಮಾತೇ ಆಡದ ಮನ್ ಮೋಹನ್ ಸಿಂಗರು ಭವ್ಯ ಭಾರತದ ಪ್ರಧಾನಿಯಾಗಿದ್ದರು ಆ ಮಾತು ಬೇರೆ ಬಿಡಿ. ಮಾತು ಬಾರದ ಮನ್ ಮೋಹನ್ ಸಿಂಗರು ಪ್ರಧಾನಿಯಾಗಿದ್ದಕ್ಕೆ ನಾವು ಬೆಲೆ ತೆತ್ತಿದ್ದೇವೆ. ಅವರಿಂದಾಗಿ ಭಾರತ ಅಭಿವೃದ್ಧಿಯಾಗಬೇಕಿತ್ತು. ಆದರೆ ಪಾತಾಳಕ್ಕೆ ತಳ್ಳಿ ಹೋಗಿದ್ದಾರೆ. ಗೋಲ್ಡ್ ಮೆಡಲ್ ಪುರಸ್ಕೃತ ಮನ್ ಮೋಹನ್ ಸಿಂಗರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಬಹುದು ಎಂದುಕೊಂಡಿದ್ದ ನಮಗೆ ಬೇಸರವಾಗಿರೋದಂತು ನಿಜ.

ಅಭಿವೃದ್ಧಿಯ ಮಾತು ಬಿಡಿ ಅವರ ಅಧಿಕಾರದಲ್ಲಿ ಬಾಯಿ ಬಿಟ್ಟು ಮಾತಾಡಲೂ ಇಲ್ಲ. ಚೀನಾ ಭಾರತದ ಗಡಿಯೊಳಗೆ ಸುಮಾರು 29km ಬಂದಾಗ ಏನೂ ಮಾಡಲಾಗದೇ ತೊಳಲಾಡಿದ್ದರು. ಕೊನೆಗೆ ಗೋಗರೆದು ಬೇಡಿಕೊಂಡಿದ್ದರು. ಇಂಥವರೆಲ್ಲ ನಮ್ಮನ್ನಾಳಿದರು. ಈಗ ರಾಹುಲ್ ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ಸಿಗರು ಹೆಣಗಾಡುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಹಲವಾರು ಹಿರಿತಲೆಗಳಿದ್ದರೂ ರಾಹುಲ್ ನನ್ನು ಪ್ರಧಾನಿ ಮಾಡುವುದಕ್ಕಾಗಿ ಹೆಣಗಾಡುತ್ತಿರುವುದನ್ನು ನೋಡಿದರೆ ಖಂಡಿತವಾಗಿಯೂ ನಗು ಬರುತ್ತೆ.

ಬಿಡಿ ಅದು ಅವರ ಕರ್ಮ. ಆದರೆ ರಾಹುಲ್ ನನ್ನು ಪ್ರಧಾನಿಯಾಗಿ ಮಾಡಲು ಹೆಣಗಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಹೊರಟಿದ್ದಾರೆ ಅನಿಸಿಬಿಡುತ್ತದೆ. ನಿಜ!! ಮೊದಲನೆಯದಾಗಿ ರಾಹುಲ್ ಗಾಂಧಿ ಕಾಂಗ್ರೆಸ್ಸ ಪಕ್ಷದ ಅಧ್ಯಕ್ಷನಾಗಿರುವುದು ಕಾಂಗ್ರೆಸ್ ಪಕ್ಷದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ ಎಂದು ಅನೇಕರು ಹೇಳುತ್ತಿದ್ದಾರೆ. ಈಗ ಪ್ರಧಾನಿ ಮಾಡಲು ಹೊರಟಿದ್ದಾರೆ, ಹೀಗಾಗಿ ಪಕ್ಕಾ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಗುದ್ದಲಿ ಪೂಜೆ ನಡೆದಿದೆ ಅಂತಲೇ ಅರ್ಥ.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಡಿಸೆಂಬರ್ 17 ರಂದು ಅಧಿಕಾರ ವಹಿಸಿಕೊಂಡ. ಅಧ್ಯಕ್ಷತೆ ವಹಿಸಿಕೊಂಡಿದ್ದೆ ತಡ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಒಂದನೇ ಮೊಳೆಯನ್ನು ಹೊಡೆದಂತೆ ಎರಡು ಪ್ರದೇಶಗಳಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. ಅಂತೂ ಇಂತೂ ರಾಹುಲ್ ಗಾಂಧಿ ಅಧ್ಯಕ್ಷನಾಗಿ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಒಂದೊಂದೆ ಮೊಳೆಯನ್ನು ಹೊಡೆಯಲು ಶುರುಮಾಡಿದ್ದಾರೆ. ಮೋದಿಯವರ ಅಲೆಯಿಂದ ಧೂಳಿಪಟವಾದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ. ಮೋದಿಯವರ ಮುಂದೆ ಕಾಂಗ್ರೆಸ್ಸಿನಲ್ಲಿ ಹಿರಿಯ ತಲೆ ಸ್ಪರ್ದೆ ಮಾಡಬೇಕು. ಅದು ಬಿಟ್ಟು ಸರಿಯಾಗಿ ಮಾತಾಡಲು ಬರದ ರಾಹುಲ್ ನನ್ನು ಮೆರೆಸುತ್ತಿದ್ದಾರೆ.

ಕಳೆದ ಕೆಲ ತಿಂಗಳು ಹಿಂದೆ ನಡೆದ ಹಿಮಾಚಲ ಪ್ರದೇಶ ಮತ್ರು ಗುಜರಾತಿನ ಚಿನಾವಣೆಯಲ್ಲಿ ರಾಹುಲ್ ಗಾಂಧಿಗೆ ಸೋಲುತ್ತೇನೆಂದು ಖಚಿತವಾಗಿ ಗೊತ್ತಿತ್ತು. ಆತ ಕಾಂಗ್ರೆಸ್ ಮುಕ್ತ ಕಾಂಗ್ರೆಸ್ಸಿನ ಅಧ್ಯಕ್ಷನಾಗಿರುವುದು.‌ ತನಗೆ ಆ ಹುದ್ದೆ ನಿಭಾಯಿಸಲಾಗುವುದಿಲ್ಲ, ಜೊತೆಗೆ ಯೋಗ್ಯತೆವೂ ಇಲ್ಲ ಎಂಬುದು ರಾಹುಲ್ ಗಾಂಧಿಗೆ ಗೊತ್ತಿದೆ. ಅವರಿಗೆ ಅಧ್ಯಕ್ಷನಾಗುವುದಕ್ಕು, ಪ್ರಧಾನಿ ಅಭ್ಯರ್ಥಿ ಆಗುವುದಕ್ಕು ಇಷ್ಟವೂ ಇಲ್ಲ, ಯೋಗ್ಯತೆಯೂ ಇಲ್ಲ. ಆದರೆ ಒತ್ತಾಯದ ಮೇರೆಗೆ ಅಧ್ಯಕ್ಷನಾಗಿರಬಹುದು.

ರಾಹುಲ್ ಗಾಂಧಿಗೆ ತನ್ನ ಸೋಲು ಗೊತ್ತಾಗಿದ್ದು ಹಿಮಾಚಲ ಪ್ರದೇಶ ಮತ್ತು ಗುಜರಾತಿನ ಚುನಾಚಣೆಯ ಸಮಯದಲ್ಲೇನಲ್ಲ. ಹಿಂದೆಯೂ ರಾಹುಲ್ ಗಾಂಧಿಗೆ ತಾನು ಸೋಲುತ್ತೇನೆಂದು ಗೊತ್ತಿತ್ತು. ಹೀಗಾಗಿಯೇ 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಖಾಡದಿಂದ ದೂರ ಸರಿದಿದ್ದರು. ಅಷ್ಟಕ್ಕೂ 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹಿಂದೆ ಸರಿದದ್ದು ಯಾಕೆ ಗೊತ್ತಾ?

2014ರ ಚುನಾವಣೆ ವೇಳೆಯಲ್ಲಿ ರಾಹುಲ್ ಗಾಂಧಿ ನಾನು ಪ್ರಧಾನಿಯಾಗಲಾರೆ ಎಂದು ಬಿಟ್ಟಿದ್ದ. ಇಷ್ಟಕ್ಕೂ ಆಗ ರಾಹುಲ್ ಬಾಬಾ ರಣರಂಗದಿಂದ ಹಿಂಜರಿಯಲು ಕಾರಣ ಏನು ಗೊತ್ತೆ? ಎದುರಾಳಿ ಮೋದಿಯೆಂಬುದು ಖಾತ್ರಿಯಾದುದರಿಂದ. ದೇಶಕ್ಕೆ ದೇಶವೇ ಮೋದಿಯ ಹೆಸರನ್ನು ಜಪಿಸುತ್ತಿರುವುದನ್ನು ನೋಡಿ ರಾಹುಲ್ ಗಾಂಧಿ ಒಳಗಿಂದೊಳಗೆ ಹೆದರಿ ಬಿಟ್ಟಿದ್ದ.

ಪಾಪ ಅಷ್ಟಕ್ಕೂ ರಾಹುಲ್ ಗಾಂಧಿಗಿರುವ ಸಾಮರ್ಥ್ಯವಾದರೂ ಎಂತಹುದು ಹೇಳಿ? ಆತ ಮುಖ್ಯಮಂತ್ರಿಯಾಗಿ ಒಂದು ರಾಜ್ಯದ ಹೊಣೆ ಹೊತ್ತಿರುವವರಾ? ಅಥವಾ ಕ್ಷೇತ್ರದ ಅಭಿವೃದ್ಧಿ ಸಾಧಿಸಿ ಮಾದರಿ ಮಾಡಿದ್ದಾರಾ? ಅವೆಲ್ಲಾ ಬಿಡಿ. ಅವರ ಪಕ್ಷದ ಆಡಳಿತಾವಧಿಯಲ್ಲಿ ಸಮಸ್ಯೆಗಳ ಆಗರವಾಗಿರುವ ಭಾರತದ ಕುರಿತಂತೆ ಸಂಸತ್ತಿನಲ್ಲಿ ದನಿ ಎತ್ತಿದ್ದಾರಾ? ಲೆಕ್ಕ ಹಾಕಿದರೆ ಮೂರ್ನಾಲ್ಕು ಗಂಟೆಗಳು ಸಂಸತ್ತಿನಲ್ಲಿ ಮಾತಾಡಿರದ ರಾಹುಲ್ ಪ್ರಧಾನಿಯಾಗಿ ಏನು ಮಾಡಿಯಾರು ಹೇಳಿ! ಮೋದಿಯ ಚಾಟಿ ತಿರುಲಾರಂಭಿಸಿದರೆ ಉಳಿಯೋದು ಕಷ್ಟ ಅಂತಾನೇ ಯುದ್ಧ ಆರಂಭವಾಗುವುದಕ್ಕೂ ಮೊದಲೇ ರಾಹುಲ್ ಗಾಂಧಿ ನಿವೃತ್ತಿ ಘೋಷಿಸಿಬಿಟ್ಟಿದ್ದರು. ಇದು ಒಳ್ಳೆಯ ಬೆಳವಣಿಗೆಯೇ.

ಇಲ್ಲಿ ಇನ್ನೊಂದು ಸ್ವಾರಸ್ಯಕರವಾದ ವಿಚಾರ ಹೇಳಲೇಬೇಕು. ಹಿಂದೊಮ್ಮೆ ರಾಹುಲ್ ಗಾಂಧಿಗೆ ಮದುವೆ ಯಾವಾಗ ಆಗ್ತೀರಾ? ಯಾಕೆ ಆಗ್ತಿಲ್ಲ ? ಅಂತ ಪ್ರಶ್ನೆ ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಏನು ಗೊತ್ತಾ? ಮದುವೆಯಾದರೆ ಮಕ್ಕಳಾಗುತ್ತವೆ. ಆಮೇಲೆ ಅವರಿಗೂ ಅಧಿಕಾರದ ಬಯಕೆ ಹತ್ತಿಬಿಡುತ್ತದೆ ಹೀಗಾಗಿಯೇ ಮದುವೆಯೇ ಬೇಡವೆಂದಿದ್ದೇನೆ ಎಂದು ಬಿಟ್ಟಿದ್ದರು.

ಅದರ ಬದಲು ರಾಜೀವ್ ಗಾಂಧಿಯ ಮಗನೆನ್ನುವ ಕಾರಣಕ್ಕೆ ತಾನೇ ಕಾಂಗ್ರೆಸ್ಸನ್ನು ಆಳುವುದನ್ನು ಬಿಟ್ಟು ಸ್ವಂತ ಉದ್ಯೋಗ ಮಾಡಿದರೆ ಗಂಟೇನು ಹೋಗುತ್ತೆ ಹೇಳಿ? ಲಾಲದ ಬಹದ್ದೂರ್ ಶಾಸ್ತ್ರಿಯವರ ಮಗ ಹಾಗೇ ಬದುಕಿರಲಿಲ್ಲವೇ? ಮಹಾತ್ಮ ಗಾಂಧಿಯವರು ತಮ್ಮ ಮಕ್ಕಳನ್ನು ಸಕ್ರಿಯ ರಾಜಕಾರಣಕ್ಕೆ ತರಲಿಲ್ಲವಲ್ಲ!!

ರಾಹುಲ್ ಗಾಂಧಿಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ಈಗ ನೋಡಿದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿಬಿಟ್ಟಿದ್ದಾನೆ. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಈಗ ಅಧ್ಯಕ್ಷ ಸ್ಥಾನಕ್ಕೆ ಬೇರೆ ಕೂರಲಿದ್ದಾರೆ. ಕುಟುಂಬ ರಾಜಕಾರಣ ಇಷ್ಟವಿಲ್ಲವೆಂಬ ಧಾಟಿಯಲ್ಲಿ ಮಾತನಾಡುವ ರಾಹುಲ್ ಗಾಂಧಿ ತನ್ನ ತಾಯಿಯನ್ನು ಕರೆದುಕೊಂಡು ಇಟಲಿಗೆ ಹೊರಟು ಬಿಟ್ಟರೆ ಕಾಂಗ್ರೆಸ್ಸನಲ್ಲಿರುವ ಪಿಡುಗನ್ನು ನಾಶ ಮಾಡಿಬಿಡಬಹುದು ಎಂಬ ಕನಿಷ್ಠ ಜ್ಞಾನ ಅವರಿಗಿಲ್ಲವೇ?

ಕೆಲ ಅಂಶಗಳನ್ನು ಓದುಗರ ಮುಂದಿಡುತ್ತೇನೆ ಆಗ ನೀವೇ ಆಲೋಚಿಸಿ ರಾಹುಲ್ ಪ್ರಧಾನಿಯಾಗುವುದಕ್ಕೆ ಯೋಗ್ಯನಾ ಅಂತ ಹೇಳಿ :

* ಒಂದಷ್ಟು ಜನ ಪಾಕಿಸ್ತಾನಿ ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದ್ದಾಗ, ರಾಹುಲ್ ಗಾಂಧಿಯವರು ತಮ್ಮ ಸ್ನೇಹಿತನ ಜೊತೆಯಲ್ಲಿ ಮೋಜು-ಮಸ್ತಿ , ಗುಂಡು ಇತ್ಯಾದಿ ಹರಟೆ ಕೆಲಸಗಳನ್ನು ಮಾಡುತ್ತಿದ್ದರು.

* ಪ್ರಧಾನಿ ಮೋದಿ ಅವರ ಮೊದಲ ಬಜೆಟ್ ಅಧಿವೇಶನದಲ್ಲಿಯೂ ರಾಹುಲ್ ಗಾಂಧಿ ಅವರು 56 ದಿನಗಳ ಕಾಲ ಮರೆಯಾಗಿದ್ದರು. ಆ ಸ್ಥಳವನ್ನು ಸಹ ರಹಸ್ಯವಾಗಿರಿಸಲಾಗಿತ್ತು.

* ಮೀರಾ ಕುಮಾರ್ ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸಿದಾಗ ರಾಹುಲ್ ಗಾಂಧಿಯವರು ಕಾಣೆಯಾಗಿದ್ದರು.

* ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸೋತು ಭಾರಿ ಮುಖಭಂಗವಾದಾಗ ರಾಹುಲ್ ಅವರು ಅಂದೇ ಅಂದಿನ ಕಾಂಗ್ರೆಸ್ಸಿನ ಹೀನಾಯ ಸೋಲಿನ ಬಳಿಕ ಹಾಲಿವುಡ್ Movie ನೋಡಲು Theatreಗೆ ಹೋಗಿದ್ದರು. ನವದೆಹಲಿಯ PVR ಚಾನಕಯಾ Theatreಲ್ಲಿ ಹಾಲಿವುಡ್ ಚಿತ್ರ “ಸ್ಟಾರ್ ವಾರ್ಸ್” ಅನ್ನು ವೀಕ್ಷಿಸುತ್ತಿದ್ದರು.

ಗುಜರಾತ್ ಸೋಲಿನ 6 ಗಂಟೆಗಳ ನಂತರ ರಾಹುಲ್ ಗಾಂಧಿ ಅವರು ದೆಹಲಿಯ ಸಿನೆಮಾ ಮಂದಿರದಲ್ಲಿ ಸ್ಟಾರ್ ವಾರ್ಸ್’ ಚಿತ್ರ ವೀಕ್ಷಿಸುತ್ತಿದ್ದರು. ವಾವ್ ವಾವ್! ಇಂತಹ ಅಧ್ಯಕ್ಷರನ್ನು ಎಲ್ಲಾದರೂ ಕಂಡಿದ್ದೀರಾ? ಇಂತವರೆಲ್ಲಾ ಭಾರತದ ಪ್ರಧಾನಿಯಾಗುವವರು ಅಂದ್ರೆ ಇವರೆಲ್ಲಾ ಹೇಗೆ ಆಳಬಹುದು? ನೀವೇ ಆಲೋಚಿಸಿ.

– Team Nationalist Views

©2018 Copyrights Reserved

 •  
  1.2K
  Shares
 • 1.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com