Connect with us
Loading...
Loading...

ಇತಿಹಾಸ

ಅಜ್ಜಿ ಜೈಲಿಗೆ ಹೋಗಿ ಬಂದಿದ್ದಳು, ತಾನು ಬೇಲ್ ಮೇಲೆ ಹೊರಗಿದೀನಿ ಅನ್ನೋದನ್ನ ಮರೆತು ಮಾತಾಡ್ತಿದಾರಾ ‘ರಾಗಾ’?

Published

on

 • 956
 •  
 •  
 •  
 •  
 •  
 •  
 •  
  956
  Shares

1975-77ರ ನಡುವಿನ 22 ತಿಂಗಳ ಆ ತುರ್ತು ಪರಿಸ್ಥಿತಿಯ ಅವಧಿಯ ನೆನಪು ಎಷ್ಟು ಮುಖ್ಯ? ತುರ್ತು ಪರಿಸ್ಥಿತಿಯಲ್ಲಿ ಏನೇನು ಸಂಗತಿಗಳು-ಅನಾಹುತಗಳು ಜರುಗಿ ಹೋದವು? ಭಾರತ ಮತ್ತೊಮ್ಮೆ ಆ ಕರಾಳ ಅಧ್ಯಾಯವನ್ನು ಕಾಣದಿರಬೇಕಾದರೆ ಆ ಅವಧಿಯ ಪರಿಚಯ-ನೆನಪು ಅತ್ಯಗತ್ಯ.

ಈ ಆಪತ್ಕಾಲಿನ ಅವಧಿಯಲ್ಲಿ ದೇಶದ ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಭಾರತೀಯ ನಾಗರಿಕರು ಯಾವುದೇ ವಿಚಾರಣೆ ಇಲ್ಲದೇ ಜೈಲುವಾಸ ಅನುಭವಿಸಿದರು. 22 ತಿಂಗಳ ಆ ಅವಧಿಯಲ್ಲಿ. ಈ ರೀತಿ ಲಕ್ಷಾಂತರ ಜನ ಜೈಲುವಾಸಿಗಳಾದರೂ ದೇಶಕ್ಕೆ ಈ ಸುದ್ದಿಯೇ ಗೊತ್ತಾಗದಂತಹ ವ್ಯವಸ್ಥೆ ಇತ್ತು. ಎಲ್ಲಾ ಪತ್ರಿಕೆಗಳ ಸ್ವಾತಂತ್ರ್ಯವನ್ನು ಹರಣಮಾಡಿ, ಪತ್ರಿಕೆಗಳ ಸುದ್ದಿಯ ಮೇಲೆ ಸೆನ್ಸಾರ್‌ಶಿಪ್ ವಿಧಿಸಲಾಗಿದ್ದ ದುರ್ದೈವದ ಮಹಾಕಾಲ ಈ ತುರ್ತು ಪರಿಸ್ಥಿತಿ. ಜೂನ್ 25-26 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ದೆಹಲಿಯಲ್ಲಿ ದಿನ ಪತ್ರಿಕೆಗಳ ಕಾರ್ಯಾಲಯಗಳಿಗೆ ವಿದ್ಯುತ್ ಸರಬರಾಜನ್ನೇ ನಿಲ್ಲಿಸುವ ದಾಷ್ಟ್ಯದ ಕ್ರಮ ಕೈಗೊಳ್ಳಲಾಗಿತ್ತು.

ಈಗ ನಮಗೆ ನಗು ಬರಬಹುದು ಅಥವಾ ನಾವು ನಂಬದಿರಬಹುದು. ಆ ದಿನಗಳ ಹಿಂದಿ ಚಲನಚಿತ್ರಗಳ ಪ್ರಖ್ಯಾತ ಗಾಯಕ ಕಿಶೋರ್‌ಕುಮಾರ್ ಯುವ ಕಾಂಗ್ರೆಸಿನ ಸಮಾವೇಶ ಒಂದರಲ್ಲಿ ಹಾಡಲು ನಿರಾಕರಿಸಿದ್ದರಿಂದ ಆತನ ಎಲ್ಲಾ ಹಾಡುಗಳನ್ನು ಮತ್ತು ಅವರು ನಟಿಸಿದ ಚಲನಚಿತ್ರಗಳನ್ನು ಆಕಾಶವಾಣಿ-ದೂರದರ್ಶನದಲ್ಲಿ ಸಂಪೂರ್ಣವಾಗಿ ಪ್ರತಿಬಂಧಿಸಲಾಗಿತ್ತು. ಖ್ಯಾತ ಚಲನಚಿತ್ರ ಸಾಹಿತಿ-ನಿರ್ದೇಶಕ ಗುಲ್ಜಾರ್ ನಿರ್ದೇಶಿಸಿ 23 ಯಶಸ್ವಿ ವಾರಗಳನ್ನು ಪೂರೈಸಿದ್ದ ‘ಆಂಧಿ’ ಹಿಂದಿ ಚಲನಚಿತ್ರವನ್ನು ಸಹ ಪ್ರತಿಬಂಧಿಸಲಾಯಿತು. ಕಾರಣ ಆ ಚಿತ್ರದ ನಾಯಕಿಯ ಕಥೆ ದೇಶದ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ ಜೀವನವನ್ನು ಹೋಲುತಿತ್ತು.

ಸಂಸತ್ತಿನ ಲೋಕಸಭೆ-ರಾಜ್ಯಸಭೆಗಳು ಒಂದು ರೀತಿ ಆಟದ ವಸ್ತುಗಳಾಗಿ ಬಿಟ್ಟವು. ಶ್ರೀಮತಿ ಇಂದಿರಾ ಗಾಂಧಿ ಅವರ ಚುನಾವಣಾ ಫಲಿತಾಂಶ ನೀಡಿದ್ದ ನ್ಯಾಯಾಲಯದ ತೀರ್ಪುಗಳನ್ನು ಸಂವಿಧಾನದ ತಿದ್ದುಪಡಿಗಳ ಮೂಲಕ ನಗಣ್ಯ ಮಾಡಲಾಯಿತು. ಪ್ರಧಾನಮಂತ್ರಿ ಸ್ಥಾನವನ್ನು ರಾಷ್ಟ್ರಪತಿ-ಉಪರಾಷ್ಟ್ರಪತಿ ಸ್ಥಾನಗಳ ಜೊತೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಾಧಿಸದಂತೆ ತಿದ್ದುಪಡಿ ತರಲಾಯಿತು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು 5 ವರ್ಷಗಳಿಂದ 6 ವರ್ಷಗಳಿಗೆ ಹೆಚ್ಚಿಸಲಾಯಿತು. ರಾಜಕೀಯ ಖೈದಿಗಳನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಯಿತು.

ಹೀಗೆ ಇಂದು ನಾವು ಊಹೆ ಮಾಡಲಿಕ್ಕೂ ಸಾಧ್ಯವಾಗದ ಸಂಗತಿಗಳು ಜರುಗಿ ಹೋದವು. ಓರ್ವ ನಾಯಕಿಗೆ ತನ್ನ ಸ್ಥಾನದ ಬಗ್ಗೆ ಉಂಟಾಗಿದ್ದ ಆತಂಕ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಬೀಗುತ್ತಿದ್ದ ಭಾರತದಲ್ಲಿ ಏನೆಲ್ಲ ಘಟನೆಗಳನ್ನು ಜರುಗಿಸಿ ಬಿಟ್ಟಿತು. ಇಂತಹ ಕರಾಳ ಅಧ್ಯಾಯದ ನಡುವೆಯೂ ಅನೇಕ ಉತ್ಸಾಹಿ ಸಂಗತಿಗಳೂ ಉಗಮಿಸಿದವು.

ಇಡೀ ದೇಶವನ್ನೇ ಒಂದು ಕಾರಾಗಹವನ್ನಾಗಿ ಮಾರ್ಪಾಟು ಮಾಡಿದ ಕೀರ್ತಿ ಅಂದಿನ ಪ್ರಧಾನಮಂತ್ರಿಯದಾದರೆ, ರಾಜಕೀಯ ಖೈದಿಗಳಿಂದ ತುಂಬಿ ತುಳುಕುತ್ತಿದ್ದ ದೇಶದ ಬಂಧಿಖಾನೆಗಳು ರಾಜಕೀಯ ಶಾಸ್ತ್ರದ ವಿಶ್ವವಿದ್ಯಾಲಯಗಳಾಗಿದ್ದೂ ಸಹ ಅದೇ ತುರ್ತು ಪರಿಸ್ಥಿತಿಯ ದೊಡ್ಡ ಕೊಡುಗೆ. ಇಂದಿನ ಪ್ರಧಾನ ಮಂತ್ರಿ, ಕಾನೂನು ಸಚಿವರು, ಗಹ ಸಚಿವ, ಬಿಹಾರದ ಮುಖ್ಯಮಂತ್ರಿ, ನಮ್ಮ ರಾಜ್ಯದ ಅನೇಕ ರಾಜಕೀಯ ಧುರೀಣರು… ಇವರೆಲ್ಲರೂ ತುರ್ತು ಪರಿಸ್ಥಿತಿ ಸಮಯದಲ್ಲಿ ನಡೆದ ಹೋರಾಟದಿಂದ ರಾಜಕೀಯವಾಗಿ ಜನಿಸಿದವರೇ.

ತುರ್ತು ಪರಿಸ್ಥಿತಿ ದಿಢೀರನೇ ಬಂದಿರಲಿಲ್ಲ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭೆಯ 283 ಸ್ಥಾನಗಳನ್ನು ಮಾತ್ರ ಗಳಿಸಿ ಎಂಟು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತ್ತು. 1969ರಲ್ಲಿ ಇಂದಿರಾ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಿ ಲೋಕಸಭೆಯಲ್ಲಿ ಬಹುಮತವಿಲ್ಲದಿದ್ದರೂ ಕಮ್ಯುನಿಸ್ಟರ ಸಹಾಯದಿಂದ ಅಧಿಕಾರದಲ್ಲಿ ಮುಂದುವರೆದಿದ್ದರು. 1971ರಲ್ಲಿ ಮಧ್ಯಾವಧಿ ಚುನಾವಣೆ ಘೋಷಿಸಿ ‘ಗರೀಬಿ ಹಟಾವೊ’ ಎಂಬ ಘೋಷಣೆ ನೀಡಿ ಚುನಾವಣೆಯಲ್ಲಿ 352 ಸ್ಥಾನಗಳನ್ನು ಗಳಿಸಿ ಸರಕಾರ ರಚಿಸಿದ್ದರು. ಅದೇ ವರ್ಷ ಭಾರತದ ಸೇನೆಯ ಸಹಾಯದಿಂದ ಬಾಂಗ್ಲಾ ದೇಶ ಹುಟ್ಟುವುದಕ್ಕೆ ಕಾರಣವಾಗಿದ್ದರು. ಭಾರತದ ಸಂಸತ್ತಿನಲ್ಲಿ ಅವರನ್ನು ದುರ್ಗೆ ಎಂದು ಹೊಗಳಲಾಗಿತ್ತು. ಎಕನಮಿಸ್ಟ್ ಪತ್ರಿಕೆ ಅವರನ್ನು ಭಾರತದ ಸಾಮ್ರಾಜ್ಞಿ ಎಂದು ಸಂಬೋಧಿಸಿತ್ತು.

ಆದರೆ ನಂತರಅವರು ಎಲ್ಲಾ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳಲು ಪ್ರಾರಂಭಿಸಿದರು. ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ನಾಮಕರಣ ಮಾಡಲು ಪ್ರಾರಂಭಿಸಿದರು. 1973ರ ಹೊತ್ತಿಗೆ ಆಂಧ್ರ ಪ್ರದೇಶ ಹಾಗೂ ಉತ್ತರ ಪ್ರದೇಶಗಳು ರಾಷ್ಟ್ರಪತಿಗಳ ಆಡಳಿತಕ್ಕೆ ಒಳಗಾಗಿದ್ದವು. 1973ರ ಎಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂರು ನ್ಯಾಯಾಧೀಶರ ಹಿರಿತನವನ್ನು ಮೀರಿ ಅಜಿತ ನಾಥ ರೇ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುವ ಮೂಲಕ ನ್ಯಾಯಾಂಗದ ಮೇಲೂ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.

ದೇಶದಲ್ಲಿ ಸರ್ವಾಧಿಕಾರ ಮೂಗು ತೂರಿಸಲು ಪ್ರಾರಂಭಿಸಿತ್ತು. ಕಾಂಗ್ರೆಸ್ಸಿನ ಸಂಸದ ಶಶಿ ಭೂಷಣರು ಭಾರತಕ್ಕೆ ಸೀಮಿತ ಸರ್ವಾಧಿಕಾರದ ಆವಶ್ಯಕತೆ ಇದೆ ಎಂದು ಹೇಳಲು ಪ್ರಾರಂಭಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರೂವ ಅವರು ‘ಇಂದಿರಾ ಅವರೇ ಇಂಡಿಯಾ, ಇಂಡಿಯಾವೇ ಇಂದಿರಾ’ ಎಂದು ಘೋಷಿಸಿದ್ದರು.

ಇಡೀ ಭಾರತವನ್ನೇ ಜೈಲಾಗಿ ಮಾರ್ಪಾಡು ಮಾಡಿದ್ದ ಇಂದಿರಾ ಗಾಂಧಿ ಕೂಡ ಜೈಲಿಗೆ ಹೋಗಿ ಬಂದವರೇ ಆಗಿದ್ದರಲ್ಲವಾ?

ರಾಹುಲ್ ಗಾಂಧಿ ಸೋನಿಯಾ ಗಾಂಧಿ ಇಂದು ಕರ್ನಾಟಕಕ್ಕೆ ಬಂದು ಅವರು ಜೈಲಿಗೆ ಹೋಗಿ ಬಂದಿದ್ದಾರೆ ಇವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತ ಮಾತನಾಡುವ ಮೊದಲು ತಮ್ಮ ಇತಿಹಾಸ ಹಾಗು ಸದ್ಯ ತಾವು ಬೇಲ್ ಮೇಲೆ ಹೊರಗೆ ಬಂದು ಮಾತನಾಡ್ತಿದೀವಿ ಅನ್ನೋದನ್ನ ಯಾಕೋ ಮರೆತಂತೆ ಕಾಣಸ್ತಿದೆ.

ಮಾತೆತ್ತಿದರೆ ಸಾಕು ಅವರು ಜೈಲು ಇವರು ಜೈಲು ಅನ್ನುವ ಕಾಂಗ್ರೆಸ್ಸಿನ ನಾಯಕರು ತಾವಯ ಮಾತನಾಡುವ ಸ್ಟೇಜ್ ಮೇಲೆಯೇ ಜೈಲಿಗೆ ಹೋಗಿ ಬಂದವರನ್ನ ಕೂರಿಸಿಕೊಂಡು, ಅವರಿಂದ ಶಾಲು, ಹೂವು ಹಾಕಿಸಿಕೊಳ್ಳೋದನ್ನ ನೋಡಿದರೆ ಬಾಯಿ ಚಪಲಕ್ಕೆ, ಜನರಿಗೆ ಸುಳ್ಳುಗಳನ್ನ ಹೇಳಿ ಮತ ಧ್ರುವೀಕರಣಕ್ಕೆ ಪ್ರಯತ್ನಪಡ್ತಿದಾರೆ ಅನ್ನೋದು ಸಾಮಾನ್ಯ ಜನರಿಗೆ ಅರ್ಥವಾಗಲ್ಲ ಅಂದುಕೊಂಡಿದ್ದಾರೇನೋ!

ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸದ್ಯ ಬೇಲ್ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಅದ್ಹೇಗೆ ಬೇರೆಯವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತ ಹೇಳಲು ಮನಸ್ಸು ಬರುತ್ತೋ ಅದು ಆತ ನಂಬುವ ದೇವರೇ ಬಲ್ಲ.

ಒಟ್ಟಿನಲ್ಲಿ ತಮ್ಮ ಪೂರ್ವಾಪರ, ಇತಿಹಾಸ ತಿಳಿಯದೆಯೇ ಮಾತನಾಡುವ ರಾಹುಲ್ ಗಾಂಧಿ ಮತ್ತೆಮತ್ತೆ ನಗೆಪಾಟಲಿಗೀಡಾಗುತ್ತಿರೋದಂತೂ ಸುಳ್ಳಲ್ಲ!!!

– Team Nationalist Views

 •  
  956
  Shares
 • 956
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com