Connect with us
Loading...
Loading...

ಪ್ರಚಲಿತ

ಹೋದಲ್ಲೆಲ್ಲಾ ಯಡವಟ್ಟು ಮಾಡಿಕೊಳ್ಳುವ ರಾಹುಲ್ ಗಾಂಧಿ ಇದೀಗ ಮಾಡಿಕೊಂಡಿರುವ ಯಡವಟ್ಟೇನು ಗೊತ್ತೆ? ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ!!

Published

on

 • 1.5K
 •  
 •  
 •  
 •  
 •  
 •  
 •  
  1.5K
  Shares

ಮೊನ್ನೆ ಮೊನ್ನೆಯಷ್ಟೇ ರಾಹುಲ್ ಗಾಂಧಿ ಚುನಾವಣೆ ಸಮೀಪಿಸುತ್ತಿದ್ದಿದ್ದರಿಂದ ಪ್ರಚಾರದ ಕಾರ್ಯಕ್ಕೆ ಕರ್ನಾಟಕಕ್ಕೆ ಬಂದಾಗ ಕರನಾಡಿಗೆ ದೊಡ್ಡ ಅಪಮಾನವನ್ನು ಮಾಡಿದ್ದಾರೆ. ಹೌದು ಕರ್ನಾಟಕದ ಭೇಟಿ ವೇಳೆಯಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಕರುನಾಡಿಗರು ಮರೆಯಬಾರದಂತಹ ದೊಡ್ಡ ಅಪಮಾನವೊಂದನ್ನು ಮಾಡಿ ಹೋಗಿದ್ದಾರೆ. ಯಾರ ಸಲುವಾಗಿ ಹೀಗೆ ಮಾಡಿದ್ದಾರೋ ಏನೋ?? ಯಾರ ಓಲೈಕೆಗೆ ಮಾಡಿದ್ದಾರೋ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ಈ ಹಿಂದೆ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದು ಟೆಂಪಲ್ ರನ್ ಮಾಡಿ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಉತ್ತರ ಪ್ರದೇಶದ ಚುನಾವಣೆ ಹಿನ್ನಲೆಯಲ್ಲಿ ಮೃದು ಹಿಂದುತ್ವದ ವಾಲಿ ಸುಮಾರು 25 ದೇವಸ್ಥಾನಗಳನ್ನು ರಾಹುಲ್ ಗಾಂಧಿ ತಿರುಗಾಡಿದ್ದರು. ಇದು ಚುನಾವಣೆ ಗಿಮಿಕ್ ಅಲ್ಲದೇ ಮತ್ತೇನು ಅಲ್ಲ ಅಂತ ಯಾರಾದರೂ ಹೇಳಬಹುದು. ಉತ್ತರ ಪ್ರದೇಶದ ಚುನಾವಣೆ ಮುಗಿಯಿತು ಆದರೆ ರಾಹುಲ್ ನ ಟೆಂಪಲ್ ರನ್ ಆಟ ಅಷ್ಟು ವರ್ಕೌಟ್ ಆಗ್ಲಿಲ್ಲ. ಕರ್ನಾಟಕದಲ್ಲೂ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಹುಲ್ ಅದೇ ಚುನಾವಣೆ ಗಿಮಿಕ್ ಸಲುವಾವಿ ಇಲ್ಲಿಗೆ ಪ್ರವಾಸಕ್ಕೆ ಬಂದು, ಯಾರೋ ಬರೆದುಕೊಟ್ಟಿದ್ದ ಉದ್ದುದ್ದ ಭಾಷಣವನ್ನು ಬಿಗಿದು ಟೆಂಪಲ್ ರನ್ ಆಟವನ್ನಾಡಿ ಹೋದರು.

ರಾಹುಲ್ ಗಾಂಧಿ ವೋಟಿಗಾಗಿ ಹಿಂದುಗಳನ್ನು ಓಲೈಸಲು ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ತಿಣುಕಾಡುತ್ತಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿ ಕೊಳ್ಳಲು ದೊಡ್ಡ ದೊಂಬರಾಟವನ್ನೇ ಆಡಿಬಿಟ್ಟರು. ದೇವಸ್ಥಾನಗಳಿಗೆ ಭೇಟಿ ಕೊಟ್ಟದ್ದೇ ಕೊಟ್ಟದ್ದು. ತನ್ನನ್ನು ತಾನು ಶಿವನ ಭಕ್ತ ಅಂತ ಪ್ರಚಾದ ಮಾಡಿದ್ದೇ ಮಾಡಿದ್ದು. ಅಬ್ಬಾ ವೋಟಿಗಾಗಿ ಏನೆಲ್ಲಾ ಮಾಡ್ತಾರಲ್ಲ ಈ ಜನ. ಮಮತಾ ಬ್ಯಾನರ್ಜಿ ಅವರೂ ಇದಕ್ಕೆ ಹೊರತಲ್ಲ.

ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ಮಮತಾ ಬ್ಯಾನರ್ಜಿಯವರು ಬ್ರಾಹ್ಮಣರ ಸಮಾವೇಶ ನಡೆಸಿದರು. ಪ್ರಿಯಾಂಕ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಇದಕ್ಕೆ ಹೊರತಲ್ಲ. ರಾಬರ್ಟ್ ವಾದ್ರಾ ಕೂಡಾ ಸರಣಿ ದೇವಾಲಯಗಳಿಗೆ ಭೇಟಿ ಕೊಟ್ಟರು. ಇನ್ನು ಕೇರಳದ ಕಮ್ಯುನಿಸ್ಟರು ಸ್ವಾಮಿ ವಿವೇಕಾನಂದರ ಫೋಟೋವನ್ನು ತಮ್ಮ ಸಮಾರಂಭದ ಫ್ಲೆಕ್ಸ್ ಗಳಲ್ಲಿ ಹಾಕಿಸಿದ್ದರು. ಒಟ್ಟಿನಲ್ಲಿ ಓಟಿಗಾಗಿ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಲು ತಿಣುಕಾಡುತಿದ್ದಾರೆ.

ಅಷ್ಟಕ್ಕು ರಾಹುಲ್ ಗಾಂಧಿ ಇತ್ತೀಚಿನ ಕರ್ನಾಟಕದ ಭೇಟಿ ವೇಳೆ ಕರುನಾಡಿಗೆ ಹೇಗೆ ಅವಮಾನ ಮಾಡಿದ್ದಾರೆ ಗೊತ್ತಾ??

ಮೊನ್ನೆ ಮೊನ್ನೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ನಿಮಿತ್ತ ಕರ್ನಾಟಕಕ್ಕೆ ಪ್ರಚಾರ ಮಾಡಲು ಬಂದಿದ್ದರು. ಇದೇ ವೇಳೆ ರಾಹುಲ್ ಗಾಂಧಿ ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿನ ವಾಡಿಕೆಯ ಪ್ರಕಾರ ಮೈಸೂರಿನ ಗಣ್ಯರು ರಾಹುಲ್ ಗಾಂಧಿಗೆ ಮೈಸೂರಿನ ಪೇಟವನ್ನು ತೊಡಿಸಲು ಮುಂದಾಗಿದ್ದರು. ಗಣ್ಯರಿಗೆ ಮೈಸೂರು ಪೇಟ ತೊಡಿಸುವುದು ಅಲ್ಲಿನ ವಾಡಿಕೆ.

 

ಅದರಂತೆ ಮೈಸೂರಿನವರು ಗೌರವದಿಂದ ರಾಹುಲ್ ಗಾಂಧಿಗೆ ಮೈಸೂರು ಪೇಟ ತೊಡಿಸಲು ಹೋದಾಗ ರಾಹುಲ್ ಗಾಂಧಿ ಮಾಡಿದ್ದೇನು ಗೊತ್ತೆ?? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಗೆ ಮೈಸೂರಿನ ಪೇಟವನ್ನು ತೊಡಿಸಲು ಮುಂದಾದಾಗ ರಾಹುಲ್ ಗಾಂಧಿ ಗೌರವಭರಿತ ಮೈಸೂರು ಒಡೆಯರ ಪೇಟವನ್ನು ತಳ್ಳಿ, ತಾನು ತೊಡುವುದಿಲ್ಲವೆಂದು ಅವಮಾನ ಮಾಡಿದ್ದಾರೆ. ಇದು ಬರೀ ಕಾಂಗ್ರೆಸ್ ಕಾರ್ಯಕರ್ತರಿಗೆ ಆದ ಅವಮಾನವಲ್ಲ. ಬದಲಿಗೆ ಇಡೀ ಕರುನಾಡಿಗೆ ಆದ ಅವಮಾನ. ತನ್ನನ್ನು ತಾನು ಶಿವಭಕ್ತ, ತನ್ನನ್ನು ತಾನು ಹಿಂದು ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ ಹೀಗೆ ಮಾಡಿದ್ದು ನಮಗೆಲ್ಲ ಅವಮಾನವಾದಂತೆಯೇ ಸರಿ!!

ಕನ್ನಡ ಉಚ್ಛಾರ ಬರದೇ ಯಾರೋ ಬರೆದು ಕೊಟ್ಟದ್ದನ್ನು ಹೇಳಲು ಹೋಗಿ ಕನ್ನಡ ಭಾಷೆಗೆ, ಬಸವಣ್ಣನವರಿಗೆ ಅವಮಾನ ಮಾಡಿದ ರಾಹುಲ್ ಇದೀಗ ಮೈಸೂರು ಪೇಟವನ್ನು ನಿರಾಕರಿಸಿ ಇಡೀ ಕರುನಾಡಿಗೆ ಅವಮಾನ ಮಾಡಿದ್ದಾರೆ. ಹೊರಗಿನಿಂದ ಸಾಂಸ್ಕೃತಿಕ ಮೈಸೂರಿಗೆ ಯಾರೇ ಆಗಮಿಸಲು ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸುವುದು ಪ್ರತೀತಿ. ಆದರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಲ್ಲಿರುವ ರಾಹುಲ್ ಗಾಂಧಿಗೆ ಮಾತ್ರ ಇದರ ಪರಿವೇ ಇಲ್ಲ. ಇದರಿಂದ ಕರುನಾಡಿನ ಹೆಮ್ಮೆಯ ಮನೆತನ ಮೈಸೂರು ಒಡೆಯರ ಪೇಟವನ್ನೇ ಕಡೆಗಣಿಸಿ ಅವಮಾನ ಮಡಿದಂತಾಗಿದೆ. ಯಾರಿಗಾಗಿ ಈ ರೀತಿ ಮಾಡಿದ್ದು? ಯಾರನ್ನು ಓಲೈಸಲು ಮಾಡಿದ್ದು? ಟಿಪ್ಪುವಿನ ವಂಶಸ್ಥರಿಗಾ??


ಮೈಸೂರಿನ ಪೇಟ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲಿಯೂ ಸಹ ರಾರಾಜಿಸುತ್ತದೆ. ರಾಜ್ಯ ಸರ್ಕಾರ ಕೂಡ ಪ್ರಶಸ್ತಿ ಗೌರವವನ್ನು ನೀಡುವ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸುತ್ತಾರೆ, ಇದು ಮೈಸೂರು ಪೇಟಕ್ಕೆ ನೀಡುವ ಗೌರವ. ಪ್ರಶಸ್ತಿ ಪುರಸ್ಕಾರದ ಸಂದರ್ಭದಲ್ಲಿ, ಮದುವೆ ನಡೆಯುವ ಸಂದರ್ಭದಲ್ಲಿ ಮೈಸೂರು ಪೇಟವನ್ನು ಮಧು ಮಗನಿಗೆ ತೊಡಿಸುವುದು ವಾಡಿಕೆಯಾಗಿದೆ. ಮೈಸೂರು ಪೇಟಕ್ಕೆ ಇರುವ ಗೌರವ ಇಡೀ ರಾಷ್ಟ್ರಕ್ಕಲ್ಲದೆ ಇಡೀ ವಿಶ್ವಕ್ಕೆ ಗೊತ್ತು. ಇಂತಹ ಪೇಟವನ್ನು ತಳ್ಳಿ ರಾಹುಲ್ ಅವಮಾನ ಮಾಡಿಬಿಟ್ಟರಲ್ಲ!!

ತನ್ನನ್ನು ತಾನು ಹಿಂದು ಎಂದು ಬಿಂಬಿಸಿಕೊಳ್ಳಲು ರಾಹುಲ್ ಗಾಂಧಿ ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ತಿರುಗಿದರು. ಗುಜರಾತ್ ಚುನಾವಣೆಯ ಸಂದರ್ಭದಲ್ಲೂ ಅದೇ ಮಾಡಿದ್ದರು. ತನ್ನನ್ನು ತಾನು ಶಿವಭಕ್ತನೆಂದು ಬೇರೆ ಹೇಳಿದ್ದರು. ಹಾಗೆಯೇ ಕರ್ನಾಟಕಕ್ಕೆ ಬಂದು ಇಲ್ಲಿಯೂ ಅನೇಕ ದೇವಸ್ಥಾನಗಳನ್ನು ಸುತ್ತಿದ್ದರು. ಆದರೆ ಮೈಸೂರು ಪೇಟ ತೊಡಿಸಲು ಬಂದಾಗ ಮಾತ್ರ ನಿರಾಕರಿಸಿದ್ದು ಯಾಕೆ?? ಇದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬರೀ ಇರಿಸುಮುರುಸು ಆಗಿಲ್ಲ. ಬದಲಿಗೆ ಅವಮಾನವಾಗಿದೆ. ಬರೀ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮನಾವಲ್ಲ. ಇಡೀ ಕರುನಾಡಿಗೆ ಅವಮಾನ!!

ಇದರ ಸುದ್ದಿಯನ್ನ ಕನ್ನಡದ ಮಾಧ್ಯಮಗಳು ಬಿತ್ತರಿಸಿ ರಾಹುಲ್ ಗಾಂಧಿಯವರ ಈ ನಡೆಯನ್ನ ತೀವ್ರವಾಗಿ ಟೀಕಿಸಿವೆ.

ರಾಹುಲ್ ಗಾಂಧಿ ಮೈಸೂರು ಪೇಟಾ ನಿರಾಕರಿಸಿದ ವಿಡಿಯೋ ಕೆಳಗಿದೆ ನೋಡಿ:

– Team Nationalist Views

Nationalist Views ©2018 Copyrights Reserved

 •  
  1.5K
  Shares
 • 1.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com