Connect with us
Loading...
Loading...

ಕದನ-ಕಥನ

ಹೆಂಡತಿಯ ಪತ್ರವನ್ನ ಓದದೇ ಜೇಬಿನಲ್ಲಿಟ್ಟಕೊಂಡು ಯುದ್ಧಕ್ಕೆ ಹೋಗಿ ಹುತಾತ್ಮನಾಗಿದ್ದ!! ಅಷ್ಟಕ್ಕೂ ಆ ಪತ್ರದಲ್ಲಿ ಬರೆದಿದ್ದಾದರೂ ಏನಿತ್ತು ಗೊತ್ತಾ?

Published

on

 • 1.2K
 •  
 •  
 •  
 •  
 •  
 •  
 •  
  1.2K
  Shares

ಆ ಯೋಧ ತಾನು ಯುದ್ಧಕ್ಕೆ ಹೋಗುವ ಮೊದಲೇ ತನ್ನ ಹೆಂಡತಿಗೆ ಪತ್ರ ಬರೆದಿದ್ದರು. ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಅಂತ ತನ್ನ ಹೆಂಡತಿಗೆ ಪತ್ರವನ್ನು ಆ ಯೋಧ ಬರೆದಿದ್ದ.

ಆ ಪತ್ರಕ್ಕೆ ಆ ಯೋಧನ ಹೆಂಡತಿ ಮರುಪತ್ರ ಕಳಿಸಿರುತ್ತಾರೆ. ಆದರೆ ಆ ಪತ್ರ ತಲುಪುವುದರೊಳಗೆ ಆ ಯೋಧ ತನ್ನ ಪ್ರಾಣವನ್ನು ಮಾತೃಭೂಮಿಗೆ ಸಮರ್ಪಣೆ ಮಾಡಿರುತ್ತಾನೆ. ಆ ಯೋಧ ತನ್ನನ್ನು ತಾನು ದೇಶಕ್ಕಾಗಿ ಸಮರ್ಪಿಸಿಕೊಂಡಾಗ ಆ ಯೋಧನ ವಯಸ್ಸು ಕೇವಲ 26 ವರ್ಷಗಳಾಗಿದ್ದವು‌! ಆ ಮಹಾಯೋಧನ ಹೆಸರು ರಾಜೇಶ್ ಸಿಂಗ್.

ಆ ಯೋಧ ಹುತಾತ್ಮನಾಗಿದ್ದು 1999ರ ಕಾರ್ಗಿಲ್ ಯುದ್ಧದಲ್ಲಿ. ಯುದ್ಧ ಘೋಷಣೆ ಯಾಕಾಯ್ತು? ಪಾಕಿಸ್ತಾನ ಕಂತ್ರಿ ಬುದ್ಧಿಯ ಬಗ್ಗೆ ಸ್ವಲ್ಪ ತಿಳಿದುಕೊಂಡರೆ ಕಾರ್ಗಿಲ್ ಯುದ್ಧ ಯಾಕಾಯ್ತು ಎನ್ನುವುದರ ಬಗ್ಗೆ ಅರ್ಥವಾಗುತ್ತದೆ.

1977ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು ಬದುರು ಕುಳಿತು ಒಂದು ಒಪ್ಪಂದ ಮಾಡಿಕೊಂಡರು. ಆ ಒಪ್ಪಂದ ಇನ್ನು ಮುಂದೆ ಸೌಹಾರ್ದತೆಯಿಂದ ಇರೋಣ ಎಂಬುವಂತ ಒಪ್ಪಂದ. ಸೆಪ್ಟೆಂಬರ್ 1 ತಿಂಗಳಿನಿಂದ ಏಪ್ರಿಲ್ ವರೆಗೆ ಅಲ್ಲಿ ವಿಪರೀತ ಮಂಜು ಸುರಿಯುತ್ತದೆ. ಆ ಮಂಜಿನಿಂದ ಎರಡೂ ಕಡೆಯ ಸೈನಿಕರ ಜೀವಕ್ಕೂ ಅಪಾಯ.

ಹೀಗಾಗಿ ಸೆಪ್ಟೆಂಬರ್ 15ರಿಂದ ಏಪ್ರಿಲ್ 15ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿಗಳನ್ನು ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ ಆ ಒಪ್ಪಂದವಾಗಿತ್ತು. ಅಷ್ಟೇ ಅಲ್ಲ ಆ ಸಮಯದಲ್ಲಿ ಆ ಬೆಟ್ಟವನ್ನು ಇಳಿದು ಕೆಳ ಹೋಗಬೇಕು. ಏಪ್ರಿಲ್ 15ರ ನಂತರ ಮೇಲೆ ಏರಿ ತಮ್ಮ ತಮ್ಮ ಜಾಗಕ್ಕೆ ಬಂದು ಗಡಿ ಕಾಯಬೇಕೆಂದು ಆ ಒಪ್ಪಂದವಾಗಿತ್ತು.

1998ರಲ್ಲಿ ನವಾಜ್ ಷರೀಫ್ ಮತ್ತು ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಎದುರು ಬದುರು ಕುಂತರು , ಕೈ ಕುಲುಕಿದರು. ರೈಲು ಬಿಟ್ಟರು , ಬಸ್ಸೂ ಬಿಟ್ಟರು. ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೆಲ್ಲಾ ಭಾರತೀಯರು ಸಂಭ್ರಮ ಪಟ್ಟರು. ಆಗಲೇ ನಡೆಯಿತು ನೋಡಿ ಅಚಾತುರ್ಯ. ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನ ತೋರಿಸಲು ಮುಂದಾಯಿತು.

ಕಾರ್ಗಿಲ್ , ಬಟಾಲಿಕ್ , ದ್ರಾಸ್ ಇವೆಲ್ಲ ಲೈನ್ ಆಫ್ ಕಂಟ್ರೋಲ್ ನ ಉದ್ದಕ್ಕೂ ಇರುವ ಗಡಿ ಭಾಗದ ಪ್ರದೇಶಗಳು. ಲಡಾಖ್ ನ ಭಾಗಗಳಿವು. ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶಗಳು. ಶ್ರೀನಗರದಿಂದ ಸೋನ್ ಮಾರ್ಗ್ ಗೆ ಅಲ್ಲಿಂದ ಜೋಜಿ ಲಾ ಪಾಸ್ ನ ನಂತರ ಇರುವುದೇ ಕಾರ್ಗಿಲ್ ಪ್ರದೇಶ.

ಜೋಜಿ ಲಾ ಪಾಸ್ ಕಳೆದುಕೊಂಡರೆ ಕತೆ ಮುಗಿದಂತೆ . ಶ್ರೀನಗರದೊಂದಿಗೆ ಲಡಾಖ್ ನ ಸಂಪರ್ಕವೇ ಇಲ್ಲ‌‌. ಜೋಜಿ ಲಾ ಪಾಸ್ , 18 ಸಾವಿರ ಅಡಿ ಬೆಟ್ಟದೆತ್ತರಕ್ಕೂ ಸಾಗುವ ಮಾರ್ಗ. ಅತ್ಯಂತ ಕಡಿದಾದ ಪ್ರದೇಶ. ಮೇ ತಿಂಗಳಿನವರೆಗೂ ಅಲ್ಲಿ ಮಂಜು ಬೀಳುತ್ತಿರುತ್ತದೆ. ಒಪ್ಪಂದದ ಪ್ರಕಾರ ಭಾರತೀಯ ಸೈನಿಕರು ಬೆಟ್ಟದಿಂದ ಕೆಳಗೆ ಇಳಿದು ಹೋಗಿರುತ್ತಾರೆ. ಇದನ್ನರಿತ ಪರ್ವೇಜ್ ಮುಷರಫ್ ತನ್ನ ನರಿ ಬುದ್ದಿಯನ್ನು ತೋರಿಸಲು ಮುಂದಾದ.

1977ರಲ್ಲಿ ಆಗಿದ್ದ ಒಪ್ಪಂದವನ್ನು ಪಾಕಿಸ್ತಾನಿ ಸೇನಾ ನಾಯಕ ಪರ್ವೇಜ್ ಮುಷರಫ್ ಗಾಳಿಗೆ ತೂರಲು ರೆಡಿಯಾದ. ಒಪ್ಪಂದದ ಪ್ರಕಾರ ಮಂಜು ಬೀಳುವ ಪರಣಾಮ ನಮ್ಮ ಸೈನಿಕರು ಬೆಟ್ಟವನ್ನು ಇಳಿದು ಕೆಳ ಬಂದಿದ್ದರು. ಆಗ ಮುಷರಫ್ ಒಂದು ಯೋಜನೆ ಹಾಕಿ ತನ್ನ ಸೈನಿಕರನ್ನು ಬೆಟ್ಟ ಏರಿಸಿ ನಮ್ಮ ಬಂಕರುಗಳನ್ನು ವಶಪಡಿಕೊಳ್ಳಲು ಆದೇಶ ಮಾಡಿದ. ನಮ್ಮ ಸೈನಿಕರು 1977ರ ಒಪ್ಪಂದವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದುದರಿಂದ ಬೆಟ್ಟದ ಮೇಲೆ ಇರಲಿಲ್ಲ.

ಇದೇ ಸಮಯದಲ್ಲಿ ಪರ್ವೇಜ್ ಮುಷರ್ರಫ್ ತನ್ನ ಸೇನೆಗ ಆದೇಶ ಕೊಟ್ಟಿದ್ದ. ಪಾಕಿಸ್ತಾನದ ಸೇನೆ ಬೆಟ್ಟವನ್ನು ಏರಿ ನಮ್ಮದೇ ಬಂಕರುಗಳನ್ನು ವಶಪಡಿಸಿಕೊಂಡು ಕೂತುಬಿಟ್ಟಿತು. ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ತಲುಪಿತು. ಅದರ ಸತ್ಯಾ ಸತ್ಯತೆ ತಿಳಿದುಕೊಂಡು ಬರಲು ನಮ್ಮ ಸೇನೆ ಯೋಧ ಸೌರಬ್ ಕಾಲಿಯಾ ನೇತೃತ್ವದಲ್ಲಿ ಐದು ಜನ ಯೋಧರನ್ನು ಬೆಟ್ಟ ಹತ್ತಿಸಿತು.

ಸೌರಬ್ ಕಾಲಿಯಾ ಮತ್ತು ತಂಡ ಬೆಟ್ಟವನ್ನೇನೋ ಏರಿತು. ಹಾಗೆಯೇ ಮರಳಿ ಕೂಡಾ ಬಂದರು. ಆದರೆ ಬಂದದ್ದು ಬರೀ ಅವರ ತುಂಡು ತುಂಡಾದ ದೇಹ. ಬೆಟ್ಟವನ್ನೇರಿದ ಸೌರಬ್ ಕಾಲಿಯಾ ಮತ್ತು ತಂಡವನ್ನು ಹಿಡಿದ ಪಾಕಿಗಳು 25 ದಿನಗಳ ಕಾಲ ಹಿಂಸಿಸಿ ಕೊನೆಗೆ ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಸ್ತಾಂತರಿಸಿದ್ದರು. ಅಲ್ಲಿಗೆ ವಾಜಪೇಯಿ ಅವರ ತಾಳ್ಮೆಯ ಕಟ್ಟೆ ಒಡೆದಿತ್ತು. ಆಗಲೇ ಘೋಷಣೆಯಾಗಿದ್ದು “ಆಪರೇಷನ್ ವಿಜಯ್”.

ಯುದ್ಧ ಘೋಷಣೆಯಾಯ್ತು. ಮೇಜರ್ ರಾಜೇಶ್ ಸಿಂಗ್ ವಾಯುಸೇನೆಯ ಅಧಿಕಾರಿಯಾಗಿದ್ದರಿಂದ ಅವರಿಗೆ ಹೆಲಿಕಾಪ್ಟರ್ ಗಳನ್ನು ತೋಲೊಲಿಂಗ್ ನ ಬಳಿಗೊಯ್ದು ಶತ್ರುಗಳ ಮೇಲೆ ನೇರ ದಾಳಿ ಮಾಡುವ ಯೋಜನೆಯ ನೇತೃತ್ವವನ್ನು ವಹಿಸಲಾಗಿತ್ತು‌.

ರಾಜೇಶ್ ಮಾತನಾಡುತ್ತಾ ನನ್ನ ಪಾಲಿಗೆ ಜೂನ್ ಒಳ್ಳೆಯ ತಿಂಗಳು, ನಾವೀಗ ಮೇ ತಿಂಗಳ ಕೊನೆಯಲ್ಲಿದ್ದೇವೆ, ನಾವು ಗೆಲುವಿಗೆ ಬಹಳ ಹತ್ತಿರ ಇದ್ದೇವೆ ಎಂದರು.

ಇಷ್ಟು ಹೇಳಿ ಇನ್ನೇನು ಮುಂದೆ ಹೊರಡಬೇಕು ಅಷ್ಟರಲ್ಲಿ ಅವರಿಗೊಂದು ಪತ್ರ ಬಂತು. ಹತ್ತು ತಿಂಗಳ ಹಿಂದೆ ಕೈ ಹಿಡಿದ ಹೆಂಡತಿಯ ಪತ್ರ ಅದು. ಮದುವೆಯಾಗಿ ಹತ್ತು ತಿಂಗಳು ಕಳೆದಿರದಿದ್ದಾಗ ಹೆಂಡತಿಯ ಪತ್ರ ಬಂದರೆ ಯಾರು ತಾನೆ ಓದದೆ ಇರಲು ಸಾಧ್ಯ ಹೇಳಿ.

26ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ 16 ಸಾವಿರ ಅಡಿ ಎತ್ತರದ ಹಿಮಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. 47 ರೈಫಲ್.

ಯುದ್ಧಕ್ಕೆ ಕರೆ ಬಂದಾಗ ತುಂಬು ಗರ್ಭಿಣಿ ಪತ್ನಿಯ ಪತ್ರ ಬಂದರೂ ಓದಿದರೆ ತನ್ನ ಮನ ವಿಚಲಿತಗೊಳ್ಳಬಹುದು ಎಂದುಕೊಂಡು ಕೋಟಿನ ಜೇಬಿನಲ್ಲಿ ಇಟ್ಟುಕೊಂಡು ಹಾಗೆಯೇ ಯುದ್ಧಕ್ಕೆ ಹೋದ. ಅವರಿಗೆ ಹೆಂಡತಿಯ ಪತ್ರಕ್ಕಿಂತಲು ಸಂಕಷ್ಟದಲ್ಲಿರುವ ತಾಯಿ ಭಾರತಿಯ ಇಂಚಿಂಚು ಜಾಗವನ್ನ ಕಾಪಾಡೋದೆ ಮುಖ್ಯವಾಗಿತ್ತು. ಅವರ ಮುಂದಿದ್ದ ಗುರಿ ಪಾಕಿ ಬಂಕರನ್ನ ಛಿದ್ರ ಛಿದ್ರ ಮಾಡಬೇಕೆಂಬುದೊಂದೆ.

ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ, ಎಲ್ಲರಿಗಿಂತ ಮುಂದಿದ್ದ ಮೇಜರ್ ರಾಜೇಶ್ ಅಧಿಕಾರಿ ಪಾಕಿಗಳ ಬಂಕರ್ ಬಳಿಗೂ ಎಲ್ಲರಿಗಿಂತ ಮುಂಚೆಯೆ ತಲುಪಿದ್ದರು.

ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿಪಡೆಯ ಬಂಕರ್ ಈ ದಾಳಿಗೆ ಕುಸಿದುಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು.

ಆದರೆ ಹೃದಯ ಮಾತ್ರ ಇನ್ನು ಗಟ್ಟಿಯಾಗಿತ್ತು . ಆದರೂ ರಕ್ತ ಸೂಕ್ತವಾದ ಇದ್ದ ದೇಹ ನಿಲ್ಲಲಾಗದೆ ತೂರಾಡುತ್ತಿತ್ತು, ಆದರೂ ಧೃತಿಗೆಡದೆ ಶತ್ರುಗಳತ್ತ ಗುರಿ ಇಟ್ಟು ಗುಂಡು ಹಾರಿಸಿದರು, ಶತ್ರು ಪಡೆಯ ಅನೇಕರು ಶವವಾದರು. ಬಂಕರ್ ಛಿದ್ರವಾಯಿತು. ಹೀಗೆ ಅನೇಕ ಬಂಕರ್ ಗಳನ್ನು ಉಡಾಯಿಸಿಬಿಟ್ಟರು.

ಕೊನೆಗೂ ಭಾರತಮಾತೆಗೆ ಬೆಟ್ಟವನ್ನು ಸಮರ್ಪಿಸಿ ತಾಯಿ ಭಾರತಾಂಬೆಗೆ ಪ್ರಾಣಾರ್ಪಣೆ ಮಾಡಿದರು. ಪತ್ರ ಓದಲು ಶಾಂತಿ ಬೇಕೆಂದು ಹೆಳಿದ್ದ ಅಧಿಕಾರಿ ಈಗ ಶಾಂತ ಲೋಕಕ್ಕೆ ಪಯಣಿಸಿ ಬಿಟ್ಟಿದ್ದರು. ಆದರೂ ಆ ಬೆಟ್ಟವನ್ನು ಭಾರತದ ವಶಕ್ಕೆ ಕೊಟ್ಟು ಹೋಗಿದ್ದರು. ಅಧಿಕಾರಿಯ ಸಾವಿನ ಸುದ್ದಿ ತಿಳಿದು ಡೇರೆಯಲ್ಲಿ ಅಂದು ರಾತ್ರಿ ಒಲೆ ಹಚ್ಚಲಿಲ್ಲ, ತಮ್ಮ ಪ್ರೀತಿಯ ಮೇಜರ್ ಸಾವಿಗೆ ಸೈನಿಕರು ತೋರಿದ ಗೌರವ ಅದು.

ಅಧಿಕಾರಿಯ ಶವ ಅನೇಕ ದಿನಗಳ ಕಾಲ ಗುಡ್ಡದ ಮೇಲೆಯೇ ಇತ್ತು. ಶವ ತರಲು ಹೋದರೆ ಪಾಕಿಗಳು ಮೇಲಿನಿಂದ ಗುಂಡಿನ ಸುರಿಮಳೆಗಯ್ಯುತ್ತಿದ್ದರು. ಮುಂದೆ ಗುಡ್ಡವನ್ನು ವಶಪಡಿಸಿಕೊಂಡ ನಂತರವೇ ರಾಜೇಶ್ ಅಧಿಕಾರಿಯವರ ಶವ ಭಾರತದ ಕೈಸೇರಿದ್ದು.

ತಾನು ಯುದ್ಧಕ್ಕೆ ಹೋಗುವ ಮೊದಲೇ ರಾಜೇಶ್ ತನ್ನ ಹೆಂಡತಿಗೆ ಪತ್ರ ಬರೆದಿದ್ದರು, ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ‘ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ?’ ಅಂತ ತನ್ನ ಹೆಂಡತಿಗೆ ಪತ್ರವನ್ನ ಬರೆದಿದ್ದರು.

ಅದಕ್ಕೆ ಮೇಜರ್ ರಾಜೇಶರ ಹೆಂಡತಿ ಮರುಉತ್ತmರ ಬರೆದು ಪತ್ರ ಕಳಿಸಿದ್ದರು. ‘ನೀವು ವೀರಮರಣ ಹೊಂದಿದ ಜಾಗವನ್ನಷ್ಟೇ ಅಲ್ಲ, ನಿಮ್ಮಂತೆಯೆ ನಿಮ್ಮ ಮಗನನ್ನು ಸಹ ಸೈನಿಕನನ್ನಾಗಿ ಮಾಡುತ್ತೇನೆ’ ಅಂತ ಬರೆದಿದದ್ದರು.

ಅದರೆ ಹೆಂಡತಿಯ ಆ ಪತ್ರ ಮಾತ್ರ ಅಧಿಕಾರಿ ಮೇಜರ್ ರಾಜೇಶ್ ಓದೋಕೆ ಆಗಲೇ ಇಲ್ಲ. ಮೇಜರ್ ರಾಜೇಶ್ ಸಿಂಗ್ ಅಧಿಕಾರಿ ಭಾರತ ಮಾತೆಯ ಮಡಿಲಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಾಗ ಅವರ ವಯಸ್ಸು ಕೇವಲ 26 ಆಗಿತ್ತು.

– Nationalist Mahi

 •  
  1.2K
  Shares
 • 1.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com