Connect with us
Loading...
Loading...

ಅಂಕಣ

ಮತ್ತೆ ಗುಡುಗುದ್ದಾರೆ ರಾಜನಾಥ್ ಸಿಂಗ್!! ರಾಜನಾಥ ಸಿಂಗ್ ರ ಈ ಒಂದು ಮಾತಿನಿಂದ ಪಾಕಿಸ್ತಾನದ ಚಡ್ಡಿ ಒದ್ದೆಯಾದಂತಿದೆ

Published

on

 • 2.4K
 •  
 •  
 •  
 •  
 •  
 •  
 •  
  2.4K
  Shares

ರಾಜಕೀಯವಾಗಿ ಅದೇನೆ ಇರಲಿ ಮೋದಿಯವರು ಅಧಿಕಾರಕ್ಕೆ ಬಂದಾಗಿಂದಲೂ ಭಾರತ ಬಲಿಷ್ಠವಾಗಿದೆ ಎಂಬುದನ್ನು ವಿರೋಧ ಪಕ್ಷದವರೂ ಅಲ್ಲಗಳೆಯುವಂತೆ ಇಲ್ಲ. ಮೋದಿಯವರು ಆರಿಸಿಕೊಂಡ ತಂಡವೇ ಅಂತಹುದ್ದು. ಉದಾಹರಣೆ ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್.

ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಪಾಕಿಸ್ತಾನಕ್ಕೆ ಮತ್ತು ಚೀನಾಗೆ ಪೆಟ್ಟಿನ ಮೆಲೆ ಪೆಟ್ಟು ಬಿದ್ದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರೋದರಿಂದಲೇ ಕಳೆದ ವರ್ಷದಲ್ಲಿ ನಮ್ಮ ಹೆಮ್ಮೆಯ ಭಾರತೀಯ ಸೇನೆ 200ಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಿದೆ.

“ನಾವು ಬರೀ ನಮ್ಮ ನೆಲದಲ್ಲಿ ಅಲ್ಲ ಬದಲಿಗೆ ವಿದೇಶಿ ನೆಲಕ್ಕೂ ನಮ್ಮ ಸೇನೆಯನ್ನು ನುಗ್ಗಿಸಿ ಉಗ್ರರನ್ನು ಸಂಹರಿಸುವ ತಾಕತ್ತು ನಮ್ಮಲ್ಲಿದೆ” ಎಂದು ಗೃಹ ಸಚಿವ ರಾಜನಾಥ ಸಿಂಗ್ ಉಗ್ರರಿಕೆ ಎಚ್ಚರಿಕೆ ಕೊಟ್ಟು, ಭಾರತದ ತಾಕತ್ತಿನ ಬಗ್ಗೆ ಹೇಳಿದ್ದಾರೆ.

ಬರೀ ಇದು ಹೇಳಿಕೆ ಹೇಳಿಕೆಯಾಗಿ ಉಳಿದಿಲ್ಲ. ಇದಕ್ಕೆ ನೇರ ಉದಾಹರಣೆ ಸರ್ಜಿಕಲ್ ಸ್ಟ್ರೈಕ್. ಪಾಕ್ ನೆಲಕ್ಕೆ ನುಗ್ಗಿ ಪಾಕಿಯರನ್ನು ನಮ್ಮ ಹೆಮ್ಮೆಯ ಭಾರತೀಯ ಸೇನೆ ಸಂಹರಿಸಿತ್ತು. ಇದು ಭಾರತದ ತಾಕತ್ತು. ಇದಕ್ಕೆ ಕಾರಣ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುವುದು.

ಯಾವ ಮಾಧ್ಯಮದವರು ತೋರಿಸಿದ್ದಾರೋ ಗೊತ್ತಿಲ್ಲ. ಇತ್ತೀಚೆಗೆ ನಮ್ಮ ಸೈನಿಕರು 10 ಜನ ಪಾಕಿಸ್ತಾನಿ ರೇಂಜರ್ಸ್ ಗಳನ್ನು ಹೊಡೆದುರುಳಿಸಿದ್ದರು. ಇದರಿಂದ ಭಾರತದ ತಾಕತ್ತು ಪದೇ ಪದೇ ಸಾಬೀತಾಗುತ್ತಿದೆ. ಇದರ ಹಿನ್ನಲೆಯಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾರತಕ್ಕೆ ಅಗತ್ಯವೆನಿಸಿದರೆ ನಮ್ಮ ಸೇನೆ ಶತ್ರುಗಳ ನೆಲಕ್ಕೂ ನುಗ್ಗಿ ಅವರನ್ನು ಸಂಹರಿಸುತ್ತದೆ. ಭಾರತ ಎಂದಿಗೂ ಭದ್ರತೆಯ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲವೆಂದು ಖಡಕ್ ಆಗಿ ಹೇಳಿದ್ದಾರೆ.

ಇದರಿಂದ ಗೊತ್ತಾಗೋದೇನೆಂದರೆ ಮೋದಿಯವರು ತಮ್ಮ ತಂಡವನ್ನು ಆರಿಸುವಲ್ಲಿ ಸಫಲರಾಗಿದ್ದಾರೆ. ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜನಾಥ್ ಸಿಂಗರಂತೆ ಭಯೋತ್ಪಾದಕರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು.

ಜೊತೆಗೆ ನಮ್ಮ ಸೈನಿಕರಿಗೆ ಸಂದೇಶವನ್ನು ರವಾನಿಸಿದ್ದರು. ಅದೇನು ಗೊತ್ತಾ?

ಭಯೋತ್ಪಾದಕರೇ ಶರಣಾಗುವುದಿದ್ದರೆ ಶರಣಾಗಿ ಇಲ್ಲದಿದ್ದರೆ ಹುಡುಕಿ ಹುಡುಕಿ ಕೊಲ್ಲಲಾಗುವುದು ಎಂದು ಭಯೋತ್ಪಾದಕರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು.

ಜೊತೆಗೆ ಸೈನಿಕರಿಗೆ ಹೇಳಿದ್ದರು. ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕನ ಮೇಲೆ ಕರುಣೆ ತೋರಬೇಡಿ. ಶರಣಾಗದಿದ್ದರೆ ಅಲ್ಲೇ ಗುರುತಿಸಿ ಸಂಹಾರ ಮಾಡಿ ಎಂದಿದ್ದರು. ಈ ಸ್ಪೂರ್ತಿಯ ಮಾತುಗಳಿಂದಲೇ ಸೇನೆ ಮೊನ್ನೆ 10 ಜನ ಪಾಕಿಸ್ತಾನಿ ರೇಂಜರ್ಸ್ ಗಳನ್ನು ಹೊಡೆದು ಹಾಕಿತ್ತು. ಹೀಗಾಗಿಯೇ ನಾನು ಮೊದಲೇ ಹೇಳಿದ್ದೆ ಮೋದಿಯವರು ತಮ್ಮ ತಂಡವನ್ನು ಆರಿಸುವಲ್ಲಿ ತುಂಬಾ ಸಫಲರಾಗಿದ್ದಾರೆ ಅಂತ.

ಇಲ್ಲಿ ಇನ್ನೊಂದು ಸ್ವಾರಸ್ಯಕರವಾದ ವಿಷಯವನ್ನು ಹೇಳಲೇಬೇಕು. ದೇಶದ್ರೋಹಿಗಳನ್ನು ಹುಟ್ಟುಹಾಕುವ ಯುನಿವರ್ಸಿಟಿ ಎಂದೇ ಇತ್ತೀಚೆಗೆ ಹೆಸರಾಗಿದ್ದು ಜೆಎನ್ ಯು(ಜವಹಲಾಲ್ ನೆಹರೂ ಯುನಿವರ್ಣಿಟಿ). ಆದರೆ ಅಲ್ಲಿಯೂ ದೇಶಭಕ್ತರು ಓದಿದ್ದಾರೆನ್ನೋದಕ್ಕೆ ಸಾಕ್ಷಿ ನಿರ್ಮಲಾ ಸೀತಾರಾಮನ್.

ದೇಶವನ್ನು ತುಂಡರಿಸುವ ಬಗ್ಗೆ ಮಾತನಾಡುವ ದೇಶದ್ರೋಹಿಗಳ ಅಡ್ಡಾ ಎನಿಸಿಕೊಂಡಿರುವ ಜೆಎನ್ ಯು(JNU) ನಲ್ಲೇ ಸೀತಾರಾಮನ್ ಅವರು M.phil ಪದವಿಯನ್ನು ಪಡೆದದ್ದು. ಅವಲೋಕನ ಮಾಡಿ, ಅದೇ ವಿದ್ಯಾಲಯದಲ್ಲಿ ದೇಶವನ್ನು ತುಂಡರಿಸುವ ಕ್ರಿಮಿಗಳು ಬೆಳೆದಿದ್ದಾರೆ. ಹಾಗೆಯೇ ದೇಶವನ್ನು ಕಟ್ಟುವ ದೇಶಭಕ್ತರು ಬೆಳೆದಿದ್ದಾರೆ. ಅದಕ್ಕೆ ನೇರ ಉದಾಹರಣೆ ನಿರ್ಮಲಾ ಸೀತಾರಾಮನ್.

ನಾವು ಬರೀ ನಮ್ಮ ನೆಲದಲ್ಲಿ ಅಲ್ಲ ಬದಲಿಗೆ ವಿದೇಶಿ ನೆಲಕ್ಕೂ ನಮ್ಮ ಸೇನೆಯನ್ನು ನುಗ್ಗಿಸಿ ಉಗ್ರರನ್ನು ಸಂಹರಿಸುವ ತಾಕತ್ತು ನಮ್ಮಲ್ಲಿದೆ ಎಂದ ಗೃಹ ಸಚಿವ ರಾಜನಾಥ ಸಿಂಗ್ ರ ಹೇಳಿಕೆಯಿಂದ ಲಾಲ್ ಬಹದ್ದೂರ್ ಶಾಸ್ತ್ರಿಯವರು ನೆನಪುಗುತ್ತಿದ್ದಾರೆ.

1965ರ ಕಾಲಘಟ್ಟವದು. ಚೀನಾದ ಜೊತೆ 1962ರ ಯುದ್ಧದಲ್ಲಿ ರಾಜಕೀಯ ಪುಢಾರಿಗಳಿಂದ ಸೋತಿದ್ದೆವು. ಸೋತಿದ್ದರಿಂದ ನಾವು ಬಲಹೀನರಾಗಿದ್ದೇವೆಂದು ಪಾಕಿಸ್ತಾನ ಭಾವಿಸಿತ್ತು. ಆವಾಗಿನಿಂದ ಪಾಕಿಸ್ತಾನ ಕಾಶ್ಮೀರವನ್ನು ಕಿತ್ತುಕೊಳ್ಳಲು ಕತ್ತಿಮಸೆಯಲು ಶುರು ಮಾಡಿತು.

ಆಗ ಪಾಕಿಸ್ತಾನ ಅಮೆರಿಕಾದೊಂದಿಗೆ ಸಂಭಂದವನ್ನು ಗಟ್ಟಿಮಾಡಿಕೊಂಡು ನ್ಯಾಟೋ ಮತ್ತು ಸೆಂಟೋದ್ ಮೇಂಬರ್ ಆಗಿ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ತನ್ನ ದೇಶಕ್ಕೆ ತಂದಿಟ್ಟುಕೊಳ್ಳುವ ವ್ಯವಸ್ಥೆ ಮಾಡಿತು.

ಪಾಕಿಸ್ತಾನ ಅಮೆರಿಕಾದಿಂದ ಪೆಟನ್ ಟ್ಯಾಂಕ್ ಮತ್ತು ಸೇಬರ್ ಜೆಟ್ ಗಳನ್ನು ತಂದುಕೊಂಡಿತು. ತೀರಾ ಬಲಿಷ್ಠವಾಗಿ ಬೆಳೆದು ನಿಂತು ಭಾರತದ ಮೇಲೆ ಯುದ್ಧ ಮಾಡುವ ತಯಾರಿ ನಡೆಸಿತು. ಅಷ್ಟೊತ್ತಿಗಾಗಲೇ ನೆಹರೂ ಅವರು ತೀರಿಕೊಂಡಿದ್ದರು. ಆಗ ಪಾಕಿಸ್ತಾನ ಹೊಂಚುಹಾಕಿತು.

ಪ್ರಧಾನಿ ತೀರಿಹೋಗಿದ್ದರಿಂದ ಮುಂದಿನ ಪ್ರಧಾನಿ ಯಾರು ಎನ್ನುವ ಗೊಂದಲದಲ್ಲಿರುವಾಗಲೇ ನಾವು ಯುದ್ಧ ಮಾಡಬೇಕೆಂದು ತಯಾರಿ ನಡೆಸಿತು. ಆಗಲೇ ನಡೆದದ್ದು ಚಮತ್ಕಾರ. ಪರಮ ದೇಶಭಕ್ತ , ಪರಮ ಪ್ರಾಮಾಣಿಕ , ಅತ್ಯಂತ ಸರಳ ಜೀವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಚುಕ್ಕಾಣಿ ಹಿಡಿದರು.

ಆಗ ಪಾಕಿಸ್ತಾನ ಪ್ರಯೋಗದ ರೀತಿಯಲ್ಲಿ ಗುಜರಾತಿನ ಕಚ್ಛ ಪ್ರದೇಶದ ಮೇಲೆ ದಾಳಿ ಮಾಡಿ ನೋಡಿತು. ಆಗ ಯುರೋಪ್ ಸಂಧಾನ ಆಡಿ ಅವರನ್ನು ಅವರ ದೇಶಕ್ಕೆ ಕಳಿಸಿತು. ಪಾಕಿಸ್ತಾನಕ್ಕೆ ಆ ದಾಳಿ ಪ್ರಯೋಗದ ರೀತಿಯದ್ದಾಗಿತ್ತು.

ಕಚ್ಛ ಪ್ರದೇಶದ ತನಕ ಬಂದು ದಾಳಿ ಮಾಡಿ ಹೋದ ಪಾಕಿಸ್ತಾನಕ್ಕೆ ಈಗ ಮತ್ತಷ್ಟು ಧೈರ್ಯ ಬಂದಿತ್ತು. ಈಗ ಮತ್ತೆ ಕಾಶ್ಮೀರ ಮತ್ತು ಪಂಜಾಬಿನ ಮೇಲೆ ಕಣ್ಣು ಹಾಕಿತು. ಕಾಶ್ಮೀರ ಮತ್ತು ಪಂಜಾಬಿನ ಮೇಲೆ ದಾಳಿ ಮಾಡಿ ದೆಹಲಿಯವರೆಗೂ ವಶಪಡಿಸಿಕೊಳ್ಳುವ ಯೋಜನೆ ರೂಪಿಸಿತು. ಅಂತೂ ಇಂತೂ ತಯಾರಾಗಿಯೇ ಬಿಟ್ಟರು.

ಕಾಶ್ಮೀರಕ್ಕೆ ಭಯೋತ್ಪಾಕರನ್ನು ಕಳಿಸಿ ಅಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಆಮೇಲೆ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಕಳಿಸಿ , ಕಾಶ್ಮೀರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಯೋಜನೆ ಹಾಕಿತು. ಭಾರತೀಯ ಸೇನೆ ಹಿಂದೆ ಕಚ್ಛ ಪ್ರದೇಶದ ಮೇಲೆ ಪಾಕಿಸ್ತಾನ ದಾಳಿ ಮಾಡಿದ್ದರಿಂದ ಎಚ್ಚೆತ್ತುಕೊಂಡಿತ್ತು.

ಹೀಗಾಗಿ ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರವನ್ನು ಪ್ರವೇಶಿಸುವ ಮುನ್ನವೆ ಹೊಡೆದು ಹಾಕಿತು. ಆಗಲೇ ನೋಡಿ ಹೆಮ್ಮೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ಘರ್ಜಿಸಿದ್ದು.

ಪಾಕಿಸ್ತಾನ ಕಾ ಈಟ್ ಕಾ ಜವಾಬ್ , ಭಾರತ ಪತ್ತರ್ ಸೇ ದೇಗಾ ( ನೀವು ಇಟ್ಟಿಗೆಯಿಂದ ಹೊಡೆದರೆ , ನಾವು ಕಲ್ಲಿನಿಂದ ಹೊಡೆಯುತ್ತೇವೆ) ಎಂದು ಶಾಸ್ತ್ರೀಜಿಯವರು ಘರ್ಜಿಸಿದರು.

ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು.

ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು ’10 ಜನಪಥ್‌’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು.

ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು.

ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು.

ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.

ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು. ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು.

ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು.

ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು.

ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ.

ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. ‘ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ’ ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು!

ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ.

ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು.

ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು ‘ಅಸಲ್ ಉತ್ತರ್‌’ (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು.

ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.

ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು.

ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಅಂದು ನಮ್ಮ ಸೇನೆ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಲಾಹೋರ್ ನ್ನು ವಶಪಡಿಸಿಕೊಂಡಿತ್ತು. ಇದು ಭಾರತದ ತಾಕತ್ತು. ಆಳುವ ನಾಯಕನ ತಾಕತ್ತು.

ಈಗ ರಾಜನಾಥ ಸಿಂಗ್ ಆಗಿರಬಹದು, ಪ್ರಧಾನಿ ಮೋದಿಯವರು ಆಗಿರಬಹುದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಆಗಿರಬಹದು ಇವರೆಲ್ಲಾ ಲಾಲ್ ಬಹದ್ದೂರ್ ಶಾಸ್ತ್ರೀಯವರ ರೀತಿಯಲ್ಲೇ ಪಾಕಿಗಳಿಗೆ ಬುದ್ಧಿ ಕಲಿಸುತ್ತಿದ್ದಾರೆ.

 •  
  2.4K
  Shares
 • 2.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com