Connect with us
Loading...
Loading...

ಅಂಕಣ

ಶಬರಿಮಲೈ ವಿಷಯದಲ್ಲಿ ಅಖಾಡಕ್ಕಿಳಿದು ಗರಂ ಆದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು ಗೊತ್ತಾ? ಬೆಚ್ಚಿಬಿದ್ದ ಹಿಂದೂ ವಿರೋಧಿಗಳು..!

Published

on

 • 8.4K
 •  
 •  
 •  
 •  
 •  
 •  
 •  
  8.4K
  Shares

ಹಿಂದುಗಳ ವಿರುದ್ಧ, ಹಿಂದೂ ದೇವತೆಗಳ ವಿರುದ್ಧ ಭಾರತದಲ್ಲಿ ಅಧರ್ಮೀಯರು ಸಾಕಷ್ಟು ಅವಮಾನಗಳನ್ನ ಮಾಡುತ್ತಲೇ ಬಂದರೂ ಹಿಂದುಗಳು ಮಾತ್ರ ಜಾತಿ ಜಾತಿಯೆಂದೇ ಸುಮ್ಮನಿದ್ದುಬಿಡುತ್ತಿದ್ದರು, ಧಾರ್ಮಿಕ ವಿಷಯಗಳಲ್ಲಂತೂ ಸೆಲೆಬ್ರಿಟಿಗಳು ತಾವೂ ಒಬ್ಬ ಹಿಂದುವಾದರೂ ಹಿಂದುಗಳ ವಿರುದ್ದದ ಷಡ್ಯಂತ್ರದ ಬಗ್ಗೆ ತುಟಿ ಬಿಚ್ಚುತ್ತಿರಲಿಲ್ಲ. ಇದಕ್ಕೆ ಕಾರಣ ಅವರಿಗೆ ಧರ್ಮದ ಮೇಲಿನ, ದೇವರ ಮೇಲಿನ ಪ್ರೀತಿಗಿಂತ ತಾವು ಫಿಲಂ ಮೂಲಕ ಗಳಿಸುವ ಕೋಟಿ ಕೋಟಿ ದುಡ್ಡು ಹಾಗು ತನ್ನ ಅನ್ಯ ಧರ್ಮೀಯ ಪ್ರೇಕ್ಷಕರ ಮನಸ್ಸಿಗೆ ನೋವಾಗಬಹುದೆಂದು ಸುಮ್ಮನಾಗುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಯಾವ ರೀತಿಯಲ್ಲಿ ಶಬರಿಮಲೈ ಅಯ್ಯಪ್ಪ ಮಂದಿರದ ಮೇಲೆ ವಾಮಪಂಥೀಯ ಸರ್ಕಾರವು ಕ್ರಿಶ್ಚಿಯನ್, ಮುಸ್ಲಿಂ ಮಹಿಳೆಯೆರನ್ನ ಅಯ್ಯಪ್ಪ ದೇಗುಲದೊಳಗೆ ನುಗ್ಗಿಸಲು ಪ್ರಯತ್ನಿಸುತ್ತಿದೆಯೋ ಅದನ್ನ ನೋಡಿ ಇದೀಗ ಹಿಂದುಗಳ ರಕ್ತ ಕುದಿಯಲಾರಂಭಿಸಿದೆ. ಧಾರ್ಮಿಕ ವಿಷಯದಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರಗಳ ಬಗ್ಗೆ ಮಾತನಾಡದ ಸೆಲೆಬ್ರಿಟಿಗಳಿಗೂ ಕೂಡ ಈಗಲೂ ಸುಮ್ಮನೆ ಕೂರೋದು ಸರಿಯಲ್ಲ ಎಂದಯ ಇದೀಗ ಸುಮ್ಮನೆ ಕೂರುವ ಜನರೆಲ್ಲ ತಮ್ಮ ಮೌನವನ್ನ ಮುರಿಯಲು ಮುಂದಾಗಿದ್ದಾರೆ.

ಶಬರಿಮಲೈ ಮಂದಿರದ ಕುರಿತಾಗಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿ ಆ ಮಂದಿರದಲ್ಲಿ ಎಲ್ಲ ವಯಸ್ಸಿನ ಹೆಣ್ಣುಮಕ್ಕಳೀಗೂ ಪ್ರವೇಶ ನೀಡಬೇಕೆಂದು ಒಬ್ಬ ಮುಸಲ್ಮಾನ ವಕೀಲ ದಾವೆ ಹೂಡಿದ್ದ, ಅನ್ಯ ಧರ್ಮೀಯನೊಬ್ಬನಿಗೆ ತನ್ನ ಧರ್ಮದ ಹುಳುಕನ್ನ ಸರಿಪಡಿಸುವ ಬದಲು ಇವನಿಗ್ಯಾಕೆ ಬೇಕು ಬೇರೆ ಧರ್ಮದ ಉಸಾಬರಿಯಂತ ಉಗಿದು ಉಪ್ಪಿನಕಾಯಿ ಹಾಕಿ ಕಳಿಸಬೇಕಿದ್ದ ಸುಪ್ರೀಂಕೋರ್ಟ್ ಮಾತ್ರ ಆತನ ದಾವೆಯನ್ನ ಪುರಸ್ಕರಿಸಿ ಶಬರಿಮಲೈಗೆ ಹೆಣ್ಣುಮಕ್ಕಳು ಪ್ರವೇಶಿಸಬಹುದೆಂಬ ತೀರ್ಪು ಕೊಟ್ಟು ಶಬರಿಮಲೈ ಪರಂಪರೆ, ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಟ್ಟೇ ಬಿಟ್ಟಿತ್ತು.

ಸುಪ್ರೀಂಕೋರ್ಟ್ ನ ಐವರು ಜಡ್ಜ್ ಗಳಿದ್ದ ಪೀಠದಲ್ಲಿ ಒಬ್ಬ ಮಹಿಳಾ ಜಡ್ಜ್ ಕೂಡ ಇದ್ದರು. ಶಬರಿಮಲೈಗೆ ಹೆಣ್ಣುಮಕ್ಕಳ ಪ್ರವೇಶ ತಪ್ಪು ಎಂಬುದನ್ನ ಆಕೆಯೂ ಹೇಳಿದ್ದರು ಆದರೆ ಉಳಿದ ನಾಲ್ಕು ಜಡ್ಜ್ ಗಳ 4:1 ಪ್ರಕಾರ ತೀರ್ಪು ಹಿಂದುಗಳ ವಿರುದ್ಧ ಹೊರಬಿದ್ದಿತ್ತು. ಸುಪ್ರೀಂಕೋರ್ಟ್ ನ ಈ ತೀರ್ಪಿನ ಬಳಿಕವೂ ಯಾವ ಹಿಂದೂ ಮಹಿಖೆ ಕೂಡ ಅಯ್ಯಪ್ಪನ ದೇವಸ್ಥಾನಕ್ಕೆ ಪ್ರವೇಶಿಸುತ್ತೇನಂತ ಹೇಳಲಿಲ್ಲ, ಬದಲಾಗಿ ಅವರೆಲ್ಲಾ ದೇವಸ್ಥಾನದ ನಿಯಮಗಳನ್ನ ಪಾಲಿಸುತ್ತ ಹೆಣ್ಣುಮಕ್ಕಳ ದೇವಸ್ಥಾನದ ಪ್ರವೇಶದ ವಿರುದ್ಧವೇ ತಿರುಗಿಬಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.

ಶಬರಿಮಲೈ ದೇವಸ್ಥಾನದಲ್ಲಿ ನುಗ್ಗಲು ಯತ್ನಿಸುತ್ತಿರುವ ಬಹುತೇಕ ಮಹಿಳೆಯರು ಕ್ರಿಶ್ಚಿಯನ್ ಆಗಿದ್ದಾರೆ, ಇವರ ಹೊರತಾಗಿ ಮುಸ್ಲಿಂ ಮಹಿಳೆಯರು, ದೇವರನ್ನೇ ನಂಬದ ನಾಸ್ತಿಕವಾದಿ ಕಮ್ಯುನಿಸ್ಟ್ ಮಹಿಳೆಯರೂ ಮಂದಿರಕ್ಕೆ ನುಗ್ಗೋಕೆ ಹಠಕ್ಕೆ ಬಿದ್ದು ತಮ್ಮ ಶಕ್ತಿ ಪ್ರದರ್ಶನಕ್ಕೆ, ಚೀಪ್ ಪಬ್ಲಿಸಿಟಿ ಸ್ಟಂಟ್ ಗೋಸ್ಕರ ಇಲ್ಲ ಸಲ್ಲದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇಂಥಾ ಹಲಾಲ್ಕೋರರನ್ನ ಅಯ್ಯಪ್ಪನ ಮಂದಿರದೊಳಗೆ ನುಗ್ಗಿಸಲು ಕೇರಳದ ವಾಮಪಂಥೀಯ ಕಮ್ಯುನಿಸ್ಟ್ ಸರ್ಕಾರ ಅಸಲಿ ಅಯ್ಯಪ್ಪ ಭಕ್ತರ ಮೇಲೆ ಹಿಗ್ಗಾಮುಗ್ಗಾ ಲಾಠಿ ಚಾರ್ಜ್ ಮಾಡಿಸುತ್ತಿದೆ. ಇದೆಂಥಾ ವಿಪರ್ಯಾಸ ನೋಡಿ.

ಕೇರಳದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಜೀವನ ಶುರು ಮಾಡಿರುವ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರವರು ಇದೀಗ ಶಬರಿಮಲೈ ವಿಚಾರದಲ್ಲಿ ಕೊನೆಗೂ ತಮ್ಮ ಮೌನವನ್ನ ಮುರಿದಿದ್ದಾರೆ. ರಜನಿಕಾಂತ್ ರವರು ಶಬರಿಮಲೈ ವಿಚಾರದಲ್ಲಿ ಹಿಂದೂ ಮಂದಿರದ ಪರವಾಗಿ ನಿಂತು ಹಿಂದುಗಳಿಗೆ ತಮ್ಮ ಸಮರ್ಥನೆಯನ್ನ ನೀಡಿದ್ದಾರೆ.

ರಜನಿಕಾಂತ್ ರವರು ಈ ವಿಷಯದ ಕುರಿತು ಮಾತನಾಡುತ್ತ ಹಿಂದುಗಳ ಮಂದಿರಗಳಲ್ಲು ಯಾರೂ ಕೂಡ ತಲೆ ಹಾಕಬಾರದು,‌ ದೇವಸ್ಥಾನಗಳ ನಿಯಮಗಳು ನಮ್ಮದು ಹಾಗು ಅವುಗಳನ್ನ ನಮ್ಮ ಪೂರ್ವಜರು ನಮ್ಮ ಧರ್ಮ ಬಹಳ ಯೋಚಿಸಿ ವೈಜ್ಞಾನಿಕತೆಯ ಆಧಾರದ ಮೇಲೆಯೇ ರೂಪಿಸಲಾಗಿವೆ ಎಂದಿದ್ದಾರೆ. ಇಷ್ಟೇ ಅಲ್ಲದೆ ಮುಂದೆ ಮಾತನಾಡುತ್ತ ಅವರು ಸುಪ್ರೀಂಕೋರ್ಟ್ ನ ತೀರ್ಪಿನ ವಿರುದ್ಧ ಸದ್ಯ ಬೀದಿಗಿಳಿದಿರುವವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ, ಅಯ್ಯಪ್ಪಸ್ವಾಮಿಯ ಯಾವ ಮಹಿಳಾ ಭಕ್ತೆಯೂ ಅಯ್ಯಪ್ಪನ ನಿಯಮಗಳನ್ನ ಮುರಿದು ದೇವಸ್ಥಾನಕ್ಕೆ ಪ್ರವೇಶಿಸಲು ಮುಂದಾಗಿಲ್ಲ ಎಂದಿದ್ದಾರೆ ರಜನಿಕಾಂತ್.

ಮುಂದೆ ಇನ್ನೂ ಖಾರವಾಗಿ ಉತ್ತರಿಸುತ್ತ “ದೇವಸ್ಥಾನಗಳ ಹಾಗು ಹಿಂದುಗಳನ್ನ ಟಾರ್ಗೇಟ್ ಮಾಡುವ ಟ್ರೆಂಡ್ ಬಂದ್ ಆಗಲೇಬೇಕು” ಎಂದಿದ್ದಾರೆ ಸೂಪರ್‌ಸ್ಟಾರ್ ರಜನಿಕಾಂತ್. ರಜನಿಕಾಂತ್ ರವರು ಪಕ್ಕಾ ದೇವರ ಭಕ್ತ ಹಾಗು ಮಹಾನ್ ಮಾನವತಾವಾದಿಯೂ ಹೌದು. ಸ್ವತಃ ರಜನಿಕಾಂತ್ ಕೂಡ ಅಯ್ಯಪ್ಪನ ದರ್ಶನಕ್ಕೆ ಹಲವಾರು ಹೋಗಿ ಬಂದಿದ್ದಾರೆ. ಆಧ್ಯಾತ್ಮವನ್ನ ಮೈಗೂಡಿಸಿಕೊಂಡಿರುವ ಅವರು ಇಷ್ಟು ದಿನ ಈ ವಿಷಯದ ಬಗ್ಗೆ ಮಾತನಾಡಿರಲಿಲ್ಲ ಆದರೆ ಇದೀಗ ಅಯ್ಯಪ್ಪ ವಿರೋಧಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ದೇಶಾದ್ಯಂತ ಅಯ್ಯಪ್ಪನ ಹಲವಾರು ಸೆಲೆಬ್ರಿಟಿ ಭಕ್ತಾದಿಗಳು ಇದ್ದಾರೆ, ಅವರೂ ಕೂಡ ರಜನಿಕಾಂತ್ ರಂತೆ ಮುಂದೆ ಬಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಲೇಬೇಕು ಎಂಬುದೆ ನಮ್ಮ ಆಶಯ.

– Team Nationalist Views

Nationalist Views ©2018 Copyrights Reserved

 •  
  8.4K
  Shares
 • 8.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com